Tag: airhostess

  • ಕುಡಿದ ಮತ್ತಿನಲ್ಲಿ ಗಗನಸಖಿ ಮೇಲೆ ಒಂದು ತಿಂಗಳಿಂದ ಅತ್ಯಾಚಾರ

    ಕುಡಿದ ಮತ್ತಿನಲ್ಲಿ ಗಗನಸಖಿ ಮೇಲೆ ಒಂದು ತಿಂಗಳಿಂದ ಅತ್ಯಾಚಾರ

    ನವದೆಹಲಿ: ಪರಿಚಿತನೊಬ್ಬ ಪ್ರತಿನಿತ್ಯ ಕುಡಿದು ಬಂದು ಗಗನಸಖಿ (AirHostess) ಮೇಲೆ ಆಕೆಯ ಮನೆಯಲ್ಲಿ ಅತ್ಯಾಚಾರವೆಸಗಿದ ಘಟನೆ ದಕ್ಷಿಣ ದೆಹಲಿಯ (South Delhi) ಮೆಹ್ರೌಲಿ ಪ್ರದೇಶದಲ್ಲಿ ನಡೆದಿದೆ.

    ದೆಹಲಿಯಲ್ಲಿ 30 ವರ್ಷದ ಮಹಿಳೆಯ ಮೇಲೆ ಹರ್ಜಿತ್ ಯಾದವ್ ಖಾನ್‍ಪುರ್ ಎಂಬಾತ ಕಳೆದ ಒಂದೂವರೆ ತಿಂಗಳಿಂದ ಕುಡಿದ ಸ್ಥಿತಿಯಲ್ಲಿ ಆಕೆಯ ಮನೆಗೆ ಬಂದು ಅತ್ಯಾಚಾರ ಎಸಗುತ್ತಿದ್ದನು. ಈತ ರಾಜಕೀಯ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿದ್ದಾನೆ. ಇದನ್ನೂ ಓದಿ: ರಾಜ್ಯಾದ್ಯಂತ PFI, SDPI ಕಾರ್ಯಕರ್ತರಿಗೆ ಪೊಲೀಸ್ ಶಾಕ್‌ – 40ಕ್ಕೂ ಹೆಚ್ಚು ಮಂದಿ ವಶಕ್ಕೆ

    ಘಟನೆಗೆ ಸಂಬಂಧಿಸಿ ಗಗನ ಸಖಿಯು ಹರ್ಜೀತ್ ಯಾದವ್‍ನನ್ನು ಕೊಣೆಯಲ್ಲಿ ಕೂಡಿ ಹಾಕಿ, ನಂತರ ಪೊಲೀಸರಿಗೆ ಕರೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮೆಹ್ರೌಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಗನ ಸಖಿಯನ್ನು ರಕ್ಷಿಸಿ, ಹರ್ಜೀತ್‍ನನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    Live Tv
    [brid partner=56869869 player=32851 video=960834 autoplay=true]

  • ಗಗನಸಖಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ, ಹಲ್ಲೆ- ಎಂ.ಟೆಕ್ ವಿದ್ಯಾರ್ಥಿ ಬಂಧನ

    ಗಗನಸಖಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ, ಹಲ್ಲೆ- ಎಂ.ಟೆಕ್ ವಿದ್ಯಾರ್ಥಿ ಬಂಧನ

    ಬೆಂಗಳೂರು: ಗಗನಸಖಿಯೊಬ್ಬರಿಗೆ ಪ್ರಯಾಣಿಕನೋರ್ವ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಿದ್ದು, ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

    ಕೊಲ್ಕತ್ತಾದ ಕ್ಷಿತಿಜ್ ಗುರುಂಗ್ ಎಂಬಾತ ಗಗನಸಖಿ ಫೌಜಿಯಾ ಎಂಬಾಕೆಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಕ್ಷಿತಿಜ್ ನಗರದ ಖಾಸಗಿ ಕಾಲೇಜಿನಲ್ಲಿ ಎಂ.ಟೆಕ್ ವಿದ್ಯಾರ್ಥಿಯಾಗಿದ್ದಾನೆ.

    ಇಂಡಿಗೋ ವಿಮಾನದಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಆರೋಪಿ ಗಗನಸಖಿ ಮೈ ಮೇಲೆ ಕೈ ಹಾಕಿದ್ದಾನೆ. ಇದನ್ನು ಮತ್ತೊರ್ವ ಗಗನಸಖಿ ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಕ್ಷಿತಿಜ್ ಗಗನಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ವಿಮಾನದ ಸಹಪ್ರಯಾಣಿಕರು ಗಲಾಟೆ ಬಿಡಿಸಿದ್ದಾರೆ.

    ಬಳಿಕ ಇಬ್ಬರು ಗಗನಸಖಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಗಗನಸಖಿಯರ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿ ಬಂಧನ

    ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿ ಬಂಧನ

    ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಗಗನ ಸಖಿಯೊಬ್ಬರ ಎದೆ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    28 ವರ್ಷದ ಪ್ರೇಮ್ ಕುಮಾರ್ ಬಂಧಿತ ಆರೋಪಿ. ಬಾಣಸವಾಡಿಯ ಮಾರುತಿ ಸೇವಾನಗರದ ನಿವಾಸಿಯಾಗಿರುವ ಈತ ಪೈಂಟರ್ ಕೆಲಸ ಮಾಡುತ್ತಿದ್ದಾನೆ.

    ಏನಿದು ಪ್ರಕರಣ?: ಕಳೆದ ಫೆ. 12ರಂದು ರಾತ್ರಿ ನಗರದ ಹೆಚ್‍ಬಿಆರ್ ಲೇಔಟ್‍ನ 99 ದೋಸಾ ಹೊಟೇಲ್‍ನಿಂದ ಊಟ ಮುಗಿಸಿ ಗಗನ ಸಖಿ ತನ್ನ ಗೆಳೆಯ ಅನಿಶ್ ಜೊತೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಎರಡು ಬೈಕಿನಲ್ಲಿ ಬಂದ ಹೆಲ್ಮೆಟ್‍ಧಾರಿ ದುಷ್ಕರ್ಮಿಗಳು ಆಕೆಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದರು. ಕೂಡಲೇ ಯುವತಿ ಕಿರುಚಾಡಿದ್ದು, ಗೆಳೆಯನಿದ್ದ ಕಾರಣ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.

    ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯ ಮೇಲೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.