Tag: Airgun

  • ಸಿಟಿ ರೈಲ್ವೆ ಸ್ಟೇಷನ್‍ನಲ್ಲಿ ಏರ್ ಗನ್ ತಂದ ಅವಾಂತರ!

    ಸಿಟಿ ರೈಲ್ವೆ ಸ್ಟೇಷನ್‍ನಲ್ಲಿ ಏರ್ ಗನ್ ತಂದ ಅವಾಂತರ!

    ಬೆಂಗಳೂರು: ಸದಾ ಜನರು ಗಿಜಿ ಗುಡುವ ಸ್ಥಾನ ಅದು. ಬೆಂಗಳೂರಿನ ಹೃದಯಭಾಗದಲ್ಲಿರೊ ಕೇಂದ್ರಸ್ಥಾನ. ಯಾವುದು ಅಂತೀರಾ? ಸಿಟಿ ರೈಲ್ವೆ ಸ್ಟೇಷನ್ ನೋಡಿ, ಯಾಕಂದ್ರೆ ಒಂದು ದಿನಕ್ಕೆ ಲಕ್ಷಾಂತರ ಜನ ಹೋಗೋದು ಬರೋದು ಮಾಡೊ ಸ್ಥಳ ಅದು.

    ಇಂಥ ಕಡೆ ಅನಾಮಧೇಯವಾಗಿ ಗನ್ ಬಿದ್ದಿದ್ದೆ ಅಂದರೆ ಏನಾಗಬೇಡ. ಬೆಳಗ್ಗೆ ಸಿಟಿ ರೈಲ್ವೆ ಸ್ಟೇಷನ್ ನ ಪಾರ್ಕಿಂಗ್ ಲಾಟ್‍ನಲ್ಲಿ ಗನ್ ಬಿದ್ದಿದೆ ಎನ್ನುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಇದೇನಪ್ಪ ಎಂದು ಗನ್ ಬಿದ್ದಿರೊ ಜಾಗಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಆಗ ಸೂಕ್ಷ್ಮವಾಗಿ ಗನ್ ಪರಿಶೀಲನೆ ನಡೆಸಿದ ಪೊಲೀಸರಿಗೆ ಇದೊಂದು ಏರ್ ಗನ್ ಎಂದು ಗೊತ್ತಾಗಿದೆ.

    ಯಾರೊ ಏರ್ ಗನ್ ತಂದು ಇಲ್ಲಿ ಬಿಸಾಕಿದ್ದು, ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಆತಂಕವನ್ನುಂಟು ಮಾಡೊ ಕೆಲಸ ಮಾಡಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೊ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅಸಲಿ ಗನ್ ಅಲ್ಲ ಅನ್ನೋದೆ ಸಮಾಧಾನದ ವಿಚಾರ.