Tag: aircraft

  • ಟ್ರಂಪ್‌ ಸುಂಕ ಸಮರಕ್ಕೆ ಭಾರತ ತಿರುಗೇಟು – ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತ

    ಟ್ರಂಪ್‌ ಸುಂಕ ಸಮರಕ್ಕೆ ಭಾರತ ತಿರುಗೇಟು – ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತ

    ನವದೆಹಲಿ: ಭಾರತದ ಆಮದುಗಳ ಮೇಲೆ 50% ಸುಂಕ (Tariff) ವಿಧಿಸಿದ ಬೆನ್ನಲ್ಲೇ ಭಾರತ ತಿರುಗೇಟು ನೀಡಿದೆ. ಅಮೆರಿಕದಿಂದ ಹೊಸ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳನ್ನು ಖರೀದಿಸುವ ಯೋಜನೆಯನ್ನ (US Weapon Deal Plan) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲ ಶಸ್ತ್ರಾಸ್ತ್ರಗಳನ್ನು ಖರೀಸುವ ಒಪ್ಪಂದಗಳಿಗಾಗಿ ಮುಂದಿನ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರನ್ನು ವಾಷಿಂಗ್ಟನ್‌ಗೆ ಕಳುಹಿಸುವ ಯೋಜನೆ ಇತ್ತು. ಆದ್ರೆ ಟ್ರಂಪ್‌ (Donald Trump) ಸುಂಕ ಏರಿಕೆ ಬೆನ್ನಲ್ಲೇ ಪ್ರವಾಸವನ್ನ ಮೊಟಕುಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದ್ರೆ ಕೆಲ ಉನ್ನತ ಮೂಲಗಳು ರಕ್ಷಣಾ ಒಪ್ಪಂದಗಳನ್ನ ರದ್ದುಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಒಪ್ಪಂದಗಳು, ಶಸ್ತ್ರಾಸ್ತ್ರ ಸರಬರಾಜು ಮುಂದುವರಿಯುತ್ತದೆ ಎಂದು ತಿಳಿಸಿವೆ. ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ

    trade war India Halts Procurement of Six usa Boeing P 8I Aircraft

    ಜನರಲ್ ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ತಯಾರಿಸಿದ ಸ್ಟ್ರೈಕರ್ ಯುದ್ಧ ಟ್ಯಾಂಕರ್‌ ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಭಾರತ ಆಸಕ್ತಿ ತೋರಿತ್ತು. ಇದನ್ನೂ ಓದಿ: ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    P-8I ವಿಮಾನ ಖರೀದಿಸಲ್ಲ
    ಇದಕ್ಕೂ ಮುನ್ನವೇ ಬೋಯಿಂಗ್‌ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. 6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ

    ಆಮದು ಸುಂಕ 50% ಏರಿಕೆ
    ಇದೇ ತಿಂಗಳ ಆಗಸ್ಟ್‌ 6ರಂದು ರಷ್ಯಾದ ತೈಲ ಖರೀದಿಗೆ ಶಿಕ್ಷೆಯಾಗಿ ಭಾರತದ ಆಮದು ಸರಕುಗಳ ಮೇಲೆ 25% ಸುಂಕ ವಿಧಿಸಿ ಟ್ರಂಪ್‌ ಆದೇಶ ಹೊರಡಿಸಿದ್ದರು. ಆದ್ರೆ ಭಾರತ ರಷ್ಯಾದ ತೈಲ ಖರೀದಿಯಿಂದ ಹಿಂದೆ ಸರಿಯದ ಹಿನ್ನೆಲೆ ಸುಂಕದ ಪ್ರಮಾಣವನ್ನು 50%ಗೆ ಏರಿಕೆ ಮಾಡಿದ್ದಾರೆ. ಇದು ಶೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.  ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್

  • ಪ್ರಧಾನಿ ಮೋದಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ!

    ಪ್ರಧಾನಿ ಮೋದಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ!

    ರಾಂಚಿ: ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊತ್ತೊಯ್ಯಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷವನ್ನು (Technical Fault) ಕಂಡುಬಂದಿತು, ಪರಿಣಾಮ ಪ್ರಧಾನಿ ಮೋದಿ (Narendra Modi) ದೆಹಲಿಗೆ ಮರಳಲು ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಧಾನಿ ಮೋದಿಯವರು ಚುನಾವಣಾ ರಾಜ್ಯವಾದ ಜಾರ್ಖಂಡ್‌ನಲ್ಲಿ (Jharkhand) ತಮ್ಮ ಕಾರ್ಯಕ್ರಮಗಳನ್ನು ಮುಗಿಸಿ ದೆಹಲಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದ ನಂತರ ಈ ಘಟನೆ ನಡೆದಿದೆ. ಸುರಕ್ಷತಾ ಕ್ರಮವಾಗಿ ತಾಂತ್ರಿಕ ತಂಡಗಳು ಸಮಸ್ಯೆಯನ್ನು ಗುರುತಿಸಿ, ಸರಿಪಡಿಸಿದ ನಂತರ ವಿಮಾನ ಟೇಕ್ ಆಫ್ ಆಗಿದೆ.

    ಇದಕ್ಕೂ ಮುನ್ನ ಅವರು ಬುಡಕಟ್ಟು ವೀರ ಬಿರ್ಸಾ (Birsa Munda anniversary) ಮುಂಡಾ ಅವರನ್ನು ಗೌರವಿಸುವ ಜಂಜಾಟಿಯಾ ಗೌರವ್ ದಿವಸ್ ಆಚರಣೆಯ ಅಂಗವಾಗಿ ಜಾರ್ಖಂಡ್‌ನಲ್ಲಿ ಎರಡು ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

    ಪ್ರತ್ಯೇಕ ಬೆಳವಣಿಗೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜಾರ್ಖಂಡ್‌ಗೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ಕೆಲ ಕಾಲ ಏರ್ ಟ್ರಾಫಿಕ್ ಕಂಟ್ರೋಲ್ ತಡೆ ಹಿಡಿಯಿತು. ಉದ್ದೇಶ ಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದರು. ಆರೋಪದ ಒಂದು ಗಂಟೆಯ ಬಳಿಕ ಹಾರಾಟಕ್ಕೆ ಅನುಮತಿ ನೀಡಲಾಯಿತು.

    ಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಖುದ್ದು ಮಾಹಿತಿ ಹಂಚಿಕೊಂಡ ಅಮಿತ್ ಶಾ, ಬಿಜೆಪಿ ನ್ಯಾಯಯುತ ಚುನಾವಣೆ ಮತ್ತು ಆರೋಗ್ಯಕರ ಚುನಾವಣಾ ವ್ಯವಸ್ಥೆಯನ್ನು ನಂಬುತ್ತದೆ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ ನಾವೆಲ್ಲರೂ ಆರೋಗ್ಯಕರ ಚುನಾವಣಾ ವ್ಯವಸ್ಥೆಗೆ ಕೊಡುಗೆ ನೀಡಬೇಕು ಭಾರತವನ್ನು ವಿಶ್ವದ ಪ್ರಬಲ ಪ್ರಜಾಪ್ರಭುತ್ವವಾಗಿ ಇರಿಸುವಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.

    ಬಿಜೆಪಿ ನಾಯಕರ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗ ತಪಾಸಣೆಗೆ ಒಳಪಡಿಸುವುದಿಲ್ಲ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದರು. ವಿಪಕ್ಷ ನಾಯಕರ ಹೆಲಿಕ್ಯಾಪ್ಟರ್ ತಪಾಸಣೆ ಮಾಡಲಾಗುತ್ತದೆ, ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ಹೆಲಿಕ್ಯಾಪ್ಟರ್ ಶೋಧ ನಡೆಸುವುದಿಲ್ಲ, ಪ್ರಧಾನಿ ಮೋದಿಗಾಗಿ ವಿಪಕ್ಷ ನಾಯಕ ಹೆಲಿಕ್ಯಾಪ್ಟರ್ ಹಾರಾಟ ತಡೆ ಹಿಡಿಯಲಾಗುತ್ತಿದೆ ಎಂದು ಆರೋಪಿಸಿದ್ದರು, ಉದ್ಧವ್ ಠಾಕ್ರೆ ಆರೋಪದ ಬೆನ್ನಲೆ ಅಮಿತ್ ಶಾ ಪ್ರಯಾಣಿಸಿದ ಹೆಲಿಕಾಪ್ಟರ್ ತಪಾಸಣೆ ನಡೆದಿದೆ.

    ಅಲ್ಲದೇ ಜಾರ್ಖಂಡ್‌ನ ಗೊಡ್ಡಾದಲ್ಲಿ ದಿಯೋಘರ್‌ನಿಂದ ಕೇವಲ 80 ಕಿ.ಮೀ ದೂರದಲ್ಲಿ, ರಾಹುಲ್ ಗಾಂಧಿ ಅವರ ಚಾಪರ್‌ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ (ಎಟಿಸಿ) ಅನುಮತಿ ಪಡೆಯಲು 45 ನಿಮಿಷಗಳ ವಿಳಂಬ ಎದುರಿಸಿದರು. ಇದು ವಿಪಕ್ಷ ನಾಯಕರ ಪ್ರಚಾರಕ್ಕೆ ಅಡ್ಡಿಪಡಿಸಲು ಉದ್ದೇಶಪೂರ್ವಕವಾಗಿ ಮಾಡಿರುವ ಪ್ಲ್ಯಾನ್‌ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

    ಇದನ್ನೂ ಓದಿ: ಅಪ್ರಾಪ್ತೆ ಪತ್ನಿಯ ಜೊತೆಗಿನ ಸಮ್ಮತಿಯ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ – ಬಾಂಬೆ ಹೈಕೋರ್ಟ್

    ಅಲ್ಲದೇ ಜಾರ್ಖಂಡ್‌ನ ಗೊಡ್ಡಾದಲ್ಲಿ ದಿಯೋಘರ್‌ನಿಂದ ಕೇವಲ 80 ಕಿ.ಮೀ ದೂರದಲ್ಲಿ, ರಾಹುಲ್ ಗಾಂಧಿ ಅವರ ಚಾಪರ್‌ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ (ATC) ಅನುಮತಿ ಪಡೆಯಲು 45 ನಿಮಿಷಗಳ ವಿಳಂಬ ಎದುರಿಸಿದರು. ಇದು ವಿಪಕ್ಷ ನಾಯಕರ ಪ್ರಚಾರಕ್ಕೆ ಅಡ್ಡಿಪಡಿಸಲು ಉದ್ದೇಶಪೂರ್ವಕವಾಗಿ ಮಾಡಿರುವ ಪ್ಲ್ಯಾನ್‌ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಇದನ್ನೂ ಓದಿ: ಬಿಷ್ಣೋಯ್‌ ಗ್ಯಾಂಗ್‌ ಹಿಟ್‌ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್‌ ದೇಹವನ್ನು 35 ಪೀಸ್‌ ಮಾಡಿದ್ದ ಆರೋಪಿ ಅಫ್ತಾಬ್‌

  • ತರಬೇತಿ ವಿಮಾನ ಪತನ – ಇಬ್ಬರೂ ಪೈಲಟ್ ಗಂಭೀರ

    ತರಬೇತಿ ವಿಮಾನ ಪತನ – ಇಬ್ಬರೂ ಪೈಲಟ್ ಗಂಭೀರ

    ಮುಂಬೈ: ತರಬೇತಿ ವೇಳೆ ವಿಮಾನವೊಂದು (Aircraft) ಪತನಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಪುಣೆಯ (Pune) ಗೊಜುಬಾವಿ ಎಂಬಲ್ಲಿ ನಡೆದಿದೆ.

    ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ತರಬೇತಿಯಲ್ಲಿದ್ದ ಪೈಲಟ್ ಮತ್ತು ತರಬೇತಿ ನೀಡುತ್ತಿದ್ದ ಶಿಕ್ಷಕ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿಂದು ದಸರಾ ಏರ್‌ಶೋ ರಿಹರ್ಸಲ್‌ – ಸಾರ್ವಜನಿಕರಿಗೆ ಇಂದು ಉಚಿತ, ನಾಳೆ ಪಾಸ್‌ ಖಚಿತ

    ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಭಾರತ ರಕ್ಷಣಾ ವಲಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅದರಂತೆ ಶತ್ರು ಸೇನೆಗಳ ವಿರುದ್ಧ ಸಮರ ಸಾರಲು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಕ್ತಿಶಾಲಿ ಅಸ್ತ್ರವೊಂದನ್ನ ಭಾರತೀಯ ನೌಕಾಪಡೆ ನಿಯೋಜಿದೆ. ಇದು ಶತ್ರು ಸೇನೆ ಜಲಾಂತರ್ಗಾಮಿಯಿಂದ ನುಸುಳಿದರೂ ಅಥವಾ ಆಗಸದಲ್ಲಿ ದಾಳಿ ನಡೆಸಿದರೂ ಸಮರ್ಥವಾಗಿ ಎದುರಿಸಿ ದೇಶವನ್ನು ರಕ್ಷಣೆ ಮಾಡಲಿದೆ. ಅದೇ ಹಿಂದೂ ಮಹಾಸಾಗರದ ಕಾವಲುಗಾರ ಬೋಯಿಂಗ್ P-8I ಪೋಸೈಡನ್ (P-8I Poseidon) ವಿಮಾನ. 

    ಹೌದು. ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ (IOR) ಕಣ್ಗಾವಲು ಚಟುವಟಿಕೆಗಳಿಗೆ ನಿಯೋಜನೆ ಮಾಡಿರುವ ಬೋಯಿಂಗ್ P-8I ಪೋಸೈಡನ್ ವಿಮಾನ ಅತ್ಯಂತ ಮಹತ್ವದ್ದಾಗಿದೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾವಲು ಕಾಯುವ ಈ P-8I ತನಗೆ ಸರಿಸಾಟಿಯೇ ಇಲ್ಲವೆಂಬುದನ್ನು ಸಾಬೀತು ಮಾಡಿದೆ. ಆದ್ದರಿಂದಲೇ ಭಾರತೀಯ ನೌಕಾಪಡೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.  ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

    ಇನ್ನೂ ಸ್ಕ್ವಾಡ್ರನ್ 312 ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನ ಕಾಪಾಡುವ ಉದ್ದೇಶ ಹೊಂದಿದೆ. ಭಾರತೀಯ ನೌಕಾ ಶಸ್ತ್ರಾಸ್ತ್ರ ಸೇವೆಯ (INAS) 312 ಕಡಲ ವಿಚಕ್ಷಣಾ ಸ್ಕ್ವಾಡ್ರನ್ ಪ್ರಸ್ತುತ 12 P-8I ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. 

    ಬೋಯಿಂಗ್ P-8 ವಿಮಾನದ ಭಾರತೀಯ ಆವೃತ್ತಿಯನ್ನು P-8I ಎಂದು ಕರೆಯಲಾಗುತ್ತದೆ. ಅಮೆರಿಕದ ನೌಕಾಪಡೆ ಮತ್ತು ಇತರ ಸೇನಾಪಡೆಗಳು ಬಳಸುವ ಆವೃತ್ತಿಯನ್ನು P-8A ಎಂದು ಕರೆಯಲಾಗುತ್ತದೆ. ಭಾರತ ಸೇನೆ ಒಳಗೊಂಡಿರುವ ಈ 12 ವಿಮಾನಗಳಲ್ಲಿ, 8 ವಿಮಾನಗಳು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 312 ಎಂದು ಕರೆಯಲಾಗುವ INS ರಾಜಾಲಿಯಲ್ಲಿರುತ್ತವೆ. ರಾಜಾಲಿ ಏರ್‌ಸ್ಟೇಷನ್‌ ಭಾರತದ ಪೂರ್ವ ಕರಾವಳಿಯಲ್ಲಿ, ತಮಿಳುನಾಡಿನ ಅರಕ್ಕೋಣಮ್‌ನಲ್ಲಿದೆ. ಇನ್ನುಳಿದ 4 ವಿಮಾನಗಳು ಗೋವಾದಲ್ಲಿ ನಿಲುಗಡೆಯಾಗಿರುವ INS (ಭಾರತೀಯ ನೌಕಾಪಡೆಯ ಹಡಗು) ಹನ್ಸಾ ಮೇಲಿದ್ದು, ಇದನ್ನು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 316 ಎನ್ನಲಾಗುತ್ತದೆ. ಈ ವಿಮಾನವನ್ನು ಕಾಂಡಾರ್‌ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 

    ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್‌ ಲೀಡರ್ ಕಣ್ಣಿಗೆ ಬೀಳದಂತೆ ಯಾವುದೇ ಹಡಗಾಗಲಿ, ಸಬ್‌ಮರೀನ್ (ಜಲಾಂತರ್ಗಾಮಿ) ಆಗಲಿ ಹಿಂದೂ ಮಹಾಸಾಗರ ಪ್ರಾಂತ್ಯವನ್ನು ದಾಟಿ ಹೋಗಲು ಸಾಧ್ಯವಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ, P-8I ವಿಮಾನ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸಕ್ರೀಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಗಮನಾರ್ಹವಾದ 44,000 ಹಾರಾಟ ಗಂಟೆಗಳನ್ನು ದಾಖಲಿಸಿದೆ. ಆ ಮೂಲಕ ಇದು ‘ಹಿಂದೂ ಮಹಾಸಾಗರದ ಕಾವಲುಗಾರ’ ಎಂದೇ ಖ್ಯಾತಿ ಗಳಿಸಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ

    P-8I ವಿಮಾನದ ವಿಶೇಷತೆಗಳೇನು?
    ಪಿ-8ಐ ಒಂದು ಸಮರ್ಥ ವಿಮಾನವಾಗಿದ್ದು, ಕಡಿಮೆ ಎತ್ತರದಲ್ಲೂ ಹಾರಾಟ ನಡೆಸಿ ರಕ್ಷಣಾ ಕಾರ್ಯಾಚರಣೆಗಳನ್ನ ನಡೆಸಲಿದೆ. ಇದು 41,000 ಅಡಿಗಳಷ್ಟು ಎತ್ತರದಲ್ಲಿಯೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಕ್ವಿಕ್ ಟ್ರಾನ್ಸಿಟ್ ಕೈಗೊಳ್ಳಲಿದೆ. ಕ್ವಿಕ್ ಟ್ರಾನ್ಸಿಟ್ ಎಂದರೆ, ಪಿ-8ಐ ವಿಮಾನ ಸಾಕಷ್ಟು ದೂರದ ಪ್ರದೇಶಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇದರೊಂದಿಗೆ ಸಬ್‌ಮರೀನ್‌ಗಳು (ಜಲಾಂತರ್ಗಾಮಿ) (Submarine), ನೀರಿನ ಮೇಲೆ ಚಲಿಸುವ ನೌಕೆಗಳನ್ನು ಹುಡುಕುವ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ? 

     

    ಪಿ-8I ವಿಮಾನ ಎರಡು ಇಂಜಿನ್‌ಗಳನ್ನು ಹೊಂದಿದೆ. ಅಂದಾಜು 40 ಮೀಟರ್‌ಗಳಷ್ಟು ಉದ್ದವಿದೆ. ಇದರ ವಿಂಗ್‌ಸ್ಪ್ಯಾನ್‌ (ರೆಕ್ಕೆಗಳು) ಉದ್ದ 37.64 ಮೀಟರ್‌ಗಳಾಗಿದೆ. ಪ್ರತಿಯೊಂದು ಪಿ-8ಐ ವಿಮಾನವೂ 85,000 ಕೆಜಿ ತೂಕ ಹೊಂದಿದ್ದು, 490 ನಾಟ್ (ಪ್ರತಿ ಗಂಟೆಗೆ 789 ಕಿಲೋಮೀಟರ್) ಗರಿಷ್ಠ ವೇಗದಲ್ಲಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. ಇದು 9 ಸಿಬ್ಬಂದಿ  ವಿಮಾನದಲ್ಲಿ ಪ್ರಯಾಣಿಸಬಹುದು.  1,200 ನಾಟಿಕಲ್ ಮೈಲಿ (2,222 ಕಿ.ಮೀ.) ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಿ ಶತ್ರುಗಳನ್ನು ಹಿಮ್ಮೆಟಿಸಲಿದೆ.  ಆ ಮ‌ೂಲಕ ಇದು ಗರಿಷ್ಠ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬಲ್ಲದು. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?

    ಪಿ-8ಐ ವಿಮಾನ ಜಗತ್ತಿನ ಅತ್ಯಾಧುನಿಕ ಆಯುಧಗಳ ವ್ಯವಸ್ಥೆ ಹೊಂದಿದೆ. ಅಂದಾಜು 25 ವರ್ಷಗಳ ಕಾರ್ಯಾಚರಣೆ ಆಯಸ್ಸು ಹೊಂದಿದೆ. ಅಂದ್ರೆ ಇದು ಕಡಲತೀರ ಪ್ರದೇಶದ ಸವಾಲಿನ ವಾತಾವರಣದಲ್ಲೂ 25,000 ಗಂಟೆಗಳ ಹಾರಾಟ ನಡೆಸಲಿದೆ. ಮಂಜುಗಡ್ಡೆಯ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಲಿದ್ದು, ಶೋಧ, ರಕ್ಷಣೆ, ಕಳ್ಳ ಸಾಗಾಣಿಕಾ ವಿರೋಧಿ ಕಾರ್ಯಾಚರಣೆ ಮತ್ತು ಸೇನೆಯ ಇತರ ವಿಭಾಗಗಳಿಗೆ ಬೆಂಬಲ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. 

    ಭಾರತದ ಸಾಗರ ಶಕ್ತಿಯ ಹಿಂದಿನ ತಂತ್ರಜ್ಞಾನ:

    ನೌಕಾಪಡೆಯ ವ್ಯವಹಾರಗಳಲ್ಲಿ ಕ್ರಾಂತಿ ನಡೆಯುತ್ತಿರುವ (ರೆವಲ್ಯೂಷನ್ ಇನ್ ನೇವಲ್ ಅಫೇರ್ಸ್ – RNA) ಈ ಕಾಲದಲ್ಲಿ, ತಂತ್ರಜ್ಞಾನ ಯುದ್ಧ ಸಂಬಂಧಿ ಆಯುಧಗಳ ಹಿಂದಿನ ಚಾಲಕಶಕ್ತಿಯಾಗಿದೆ. ಈ ಆಯಾಮದಲ್ಲಿ, ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಭಾರತದ ಮಹತ್ತರ ಪಾತ್ರ ಮತ್ತು ಹಿಂದೂ ಮಹಾಸಾಗರದ ಪ್ರಾಮುಖ್ಯತೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮುದ್ರದ ಮೂಲಕ ಬರುವ ಅಪಾಯಗಳನ್ನು ಎದುರಿಸುವ ಸಲುವಾಗಿ, ಭಾರತ ಸರ್ಕಾರ ಆಧುನಿಕ ವಿಚಕ್ಷಣೆ ಮತ್ತು ಸೆನ್ಸರ್‌ ವ್ಯವಸ್ಥೆಗಳಿಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಈ ಎಲ್ಲ ಪ್ರಯತ್ನಗಳೂ ಕರಾವಳಿ ವಿಚಕ್ಷಣೆ ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ. 

    P-8I ಹೇಗೆ ಕಾರ್ಯಾಚರಣೆಗೆ ಸನ್ನದ್ಧವಾಗಿದೆ? 

    ಜನವರಿ 2009ರಲ್ಲಿ, ಭಾರತವು ಬೋಯಿಂಗ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಪಿ-8ಐ ಖರೀದಿಸಿತು. ನಂತರ ಇದನ್ನು ಕಡಲ ಗಸ್ತು ವಿಮಾನವಾಗಿ ನಿಯೋಜನೆ ಮಾಡಲಾಯಿತು. ಪಿ-8ಐ ವಿಮಾನ ಹಲವು ರೀತಿಯ ಕಾರ್ಯಾಚರಣೆಗಳಿಗೆ ಪೂರಕವಾಗಿದ್ದು, ಆ್ಯಂಟಿ ಸಬ್‌ಮರೀನ್ ಮತ್ತು ಆ್ಯಂಟಿ ಸರ್ಫೇಸ್ ಯುದ್ಧ ಸಾಮರ್ಥ್ಯ ಹೊಂದಿದೆ. ಅದರೊಡನೆ, ಗುಪ್ತಚರ ಮತ್ತು ಕಣ್ಗಾವಲು (ISR) ಕಾರ್ಯಾಚರಣೆಗಳನ್ನ ನಡೆಸಲಿದೆ. ಭಾರತದ ವಿಶಾಲ ಸಾಗರ ಪ್ರದೇಶಗಳಲ್ಲಿ ಗಸ್ತು ತಿರುಗುತ್ತದೆ. ವಿಮಾನದ ವೇಗ, ನಂಬಿಕಾರ್ಹತೆ, ದೀರ್ಘ ಬಾಳಿಕೆ ಮತ್ತು ಹೊಂದಿಕೊಳ್ಳುವಿಕೆಯ ಕಾರಣದಿಂದ ಇದು ಭಾರತೀಯ ನೌಕಾಪಡೆಯು ಭವಿಷ್ಯದ ಅವಶ್ಯಕತೆಗಳನ್ನೂ ಪೂರೈಸುವ ವಿಶ್ವಾಸ ಗಳಿಸಿದೆ. 

    ವಿಮಾನ ಜಗತ್ತಿನಾದ್ಯಂತ ಬಿಡಿಭಾಗಗಳು ಮತ್ತು ಸೇವಾ ಜಾಲದ ವ್ಯವಸ್ಥೆಯನ್ನ ಹೊಂದಿದೆ. ಅತ್ಯಾಧುನಿಕ ಸೆನ್ಸಾರ್‌ಗಳು ಮತ್ತು ಡಿಸ್‌ಪ್ಲೇ ತಂತ್ರಜ್ಞಾನವನ್ನ ಒಳಗೊಂಡಿರುವ ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ಗಳನ್ನು ಒಳಗೊಂಡಿದೆ. ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ ಎಂದರೆ, ವಿಮಾನವನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳುವ ತಂತ್ರಜ್ಞಾನಗಳು ಮತ್ತು ಬಿಡಿಭಾಗಗಳೊಡನೆ ಸುಲಭವಾಗಿ ಕಾರ್ಯಾಚರಿಸುವಂತೆ ನಿರ್ಮಿಸುವುದಾಗಿದೆ. ಆ ಮೂಲಕ ವಿಮಾನವನ್ನು ಭವಿಷ್ಯದಲ್ಲಿ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತದೆ. 

    ಭಾರತೀಯ ನೌಕಾಪಡೆಯು ಪಿ-8I ವಿಮಾನವನ್ನು ಸಾಗರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. 2020 ಮತ್ತು 2021ರಲ್ಲಿ ಚೀನಾದೊಡನೆ ಗಡಿ ಉದ್ವಿಗ್ನತೆ ತಲೆದೋರಿದ್ದಾಗ ಇದನ್ನು ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಚೀನೀ ಪಡೆಗಳ ಚಲನವಲನಗಳನ್ನು ಗಮನಿಸಲು ಬಳಸಲಾಗಿತ್ತು.

    ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    ನವದೆಹಲಿ/ಪ್ಯಾರಿಸ್‌: ಈ ಹಿಂದೆ ಫ್ರಾನ್ಸ್‌ನಿಂದ (France) 36 ರಫೇಲ್‌ ಯುದ್ಧ ವಿಮಾನಗಳನ್ನ (Rafale Fighter Jet) ಖರೀದಿ ಮಾಡಿದ್ದ ಭಾರತ ಸರ್ಕಾರ ಇದೀಗ, ಇನ್ನೂ 26 ಯುದ್ಧ ವಿಮಾನಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

    ಭಾರತೀಯ ರಕ್ಷಣಾ ಪಡೆಗಳು ಸಚಿವಾಲಯದ ಮುಂದೆ ರಫೇಲ್‌ ಖರೀದಿಸುವ ಪ್ರಸ್ತಾವನೆಯನ್ನಿಟ್ಟಿವೆ. ಈ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತ ಸರ್ಕಾರವು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ರಫೇಲ್ ಯುದ್ಧ ವಿಮಾನಗಳ ಜೊತೆಗೆ ಭಾರತವು ಫ್ರಾನ್ಸ್‌ನಿಂದ 3 ಸ್ಕಾರ್ಪೀನ್ ವರ್ಗದ ಸಾಂಪ್ರದಾಯಿಕ ಜಲಾಂತರ್ಗಾಮಿ (Submarines) ನೌಕೆಗಳನ್ನೂ ಖರೀದಿಸಲಿದೆ. 26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ 3 ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ ಮೇಲೆ ಲಂಚ ಸ್ವೀಕಾರ ಆರೋಪ

    ಮೂಲಗಳ ಪ್ರಕಾರ, ಭಾರತೀಯ ನೌಕಾ ಪಡೆಯು ನಾಲ್ಕು ಟ್ರೈನರ್ ಏರ್‌ಕ್ರಾಫ್ಟ್‌ಗಳ ಸಹಿತ 22 ಸಿಂಗಲ್ ಸೀಟೆಡ್ (ಏಕ ಆಸನಗಳನ್ನು ಒಳಗೊಂಡ) ರಫೇಲ್ ಯುದ್ಧ ವಿಮಾನಗಳನ್ನು ಹೊಂದಲಿದೆ. ದೇಶಾದ್ಯಂತ ಭದ್ರತಾ ಸವಾಲುಗಳ ದೃಷ್ಟಿಯಿಂದ ಭಾರತೀಯ ನೌಕಾಪಡೆಯು ಕೊರತೆ ಎದುರಿಸುತ್ತಿರುವ ಕಾರಣ ಈ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಸರ್ಕಾರದ ಮೇಲೆ ರಕ್ಷಣಾಪಡೆಗಳು ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ.

    ವಿಮಾನಗಳನ್ನು ಹೊತ್ತೊಯ್ಯುವ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ (INS Vikrant), ಮಿಗ್-19 ಫೈಟರ್‌ಜೆಟ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಎರಡೂ ಯುದ್ಧ ಹಡಗುಗಗಳಿಗೆ ರಫೇಲ್ ಯುದ್ಧವಿಮಾನಗಳ ಅಗತ್ಯವಿದೆ. ಈ ಮಧ್ಯೆ, ಸ್ಕಾರ್ಪೀನ್ ಕ್ಲಾಸ್ ಸಬ್‌ಮರೀನ್‌ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಾಜೆಕ್ಟ್-75ರ ಭಾಗವಾಗಿ ನೌಕಾಪಡೆಯು ಈ ಜಲಾಂತರ್ಗಾಮಿಗಳನ್ನ ಮುಂಬೈನ ಮಜಗಾಂವ್ ಡಾಕ್‌ಯಾರ್ಡ್‌ನಲ್ಲಿ ನಿರ್ಮಾಣಗೊಳ್ಳಲಿವೆ.

    26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ 3 ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಪೂರ್ಣ ಮಾತುಕತೆ ಒಪ್ಪಂದ ಮುಕ್ತಾಯಗೊಂಡ ನಂತರ ಅಂತಿಮ ವೆಚ್ಚ ಸ್ಪಷ್ಟವಾಗಲಿದೆ. ಈ ನಡುವೆ ಭಾರತವು ಈ ಒಪ್ಪಂದಲ್ಲಿ ರಿಯಾಯಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಕ್ಕೆ ಮತ್ತೆ 12 ಚೀತಾಗಳ ಆಗಮನ

    ಭಾರತಕ್ಕೆ ಮತ್ತೆ 12 ಚೀತಾಗಳ ಆಗಮನ

    ಭೋಪಾಲ್: ನಮೀಬಿಯಾದಿಂದ (Namibia) 8 ಚೀತಾಗಳು (Cheetahs) ಬಂದಿಳಿದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಭಾರತಕ್ಕೆ ಬಂದಿಳಿದಿವೆ.

    ವಾಯು ಸೇನೆಯ C-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ದಕ್ಷಿಣ ಆಫ್ರಿಕಾದ 12 ಚೀತಾಗಳು ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ ತಲುಪಿವೆ. ಕಸ್ಟಮ್ಸ್ ಹಾಗೂ ಇತರ ಅನುಮತಿಗಳ ನಂತರ ಅವುಗಳನ್ನು ಎಂ-17 ಚಾಪರ್‌ಗಳಲ್ಲಿ ಸುಮಾರು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ಸಾಗಿಸಲಾಗುತ್ತದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗುಡ್‌ನ್ಯೂಸ್- ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಸಾಧ್ಯತೆ

    ಒಟ್ಟು 7 ಗಂಡು ಮತ್ತು 5 ಹೆಣ್ಣು ಚೀತಾಗಳು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ ಆವರಣಗಳಿಗೆ ಬಿಡುಗಡೆ ಮಾಡಲಿದ್ದಾರೆ.

    ವನ್ಯಜೀವಿ ಕಾನೂನಿನ ಪ್ರಕಾರ 30 ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಅದಕ್ಕಾಗಿ ಚೀತಾಗಳಿಗೆ ಮಧ್ಯಪ್ರದೇಶದಲ್ಲಿ 10 ಕ್ವಾರಂಟೈನ್ ಆವರಣಗಳನ್ನ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    ಕಳೆದ ವರ್ಷವೂ ಸಹ ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ವಾತಾವರಣಕ್ಕೆ ಹೊಂದಿಕೊAಡ ನಂತರ ಅವುಗಳನ್ನು ಮುಕ್ತವಾತಾವರಣಕ್ಕೆ ಬಿಡಲಾಗಿತ್ತು. ನಮೀಬಿಯಾದಿಂದ ಬಂದ ಚೀತಾಗಳು ಇದೀಗ ಬೇಟೆಯಾಡಲು ಆರಂಭಿಸಿದ್ದು ಶೀಘ್ರದಲ್ಲೇ ಚೀತಾ ಪ್ರವಾಸೋದ್ಯಮ ಆರಂಭಿಸುವ ಮುನ್ಸೂಚನೆಯನ್ನು ಅರಣ್ಯ ಇಲಾಖೆ ನೀಡಿದೆ.

    ಭಾರತದಲ್ಲಿ 1947ರಲ್ಲಿ ಕೊನೆಯ ಚೀತಾ ಮೃತಪಟ್ಟಿತ್ತು. ಆನಂತರ 1952ರಲ್ಲಿ ಅಳಿದುಹೋದ ಸಂತತಿ ಎಂದು ಘೋಷಿಸಲಾಯಿತು. 2020ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮಗಳು ಚುರುಕುಗೊಂಡವು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್

    ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್

    ಮುಂಬೈ: ತನ್ನ ವ್ಯಾಪ್ತಿಯನ್ನು ಯುರೋಪ್‌ಗೆ ವಿಸ್ತರಿಸಲು ಟರ್ಕಿಶ್ ಏರ್‌ಲೈನ್ಸ್ (Turkish Airlines) ಸಹಭಾಗಿತ್ವದಲ್ಲಿ 500 ವಿಮಾನಗಳನ್ನ ಖರೀದಿಸಲು ಇಂಡಿಗೋ ಏರ್‌ಲೈನ್ಸ್ (IndiGo Airlines) ಆರ್ಡರ್ ಮಾಡಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.

    ಇದು ಭಾರತ-ಇಸ್ತಾಂಬುಲ್ (India-Istanbul) ಮತ್ತು ಯುರೋಪ್ (Europe) ನಡುವೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಬಿಸಿ ತೆರಿಗೆ ಪಾವತಿಯಲ್ಲಿ ಅಕ್ರಮ,  ಸಾಕ್ಷ್ಯ ಲಭ್ಯ: CBDT

    ಏರ್‌ಲೈನ್ಸ್ ಅಧಿಕಾರಿಗಳ ಪ್ರಕಾರ, ಇಂಡಿಗೋ ಯುರೋಪಿಯನ್ ದೈತ್ಯ ಏರ್‌ಬಸ್ ಹಾಗೂ ಯುಎಸ್ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಗೆ ಮುಂದಾಗಿದೆ. ಇದನ್ನೂ ಓದಿ: ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ

    ಈ ಕುರಿತು ಮಾತನಾಡಿರುವ ಮಲ್ಹೋತ್ರಾ, ಇಂಡಿಗೋ ಪ್ರಸ್ತುತ 1,800 ವಿಮಾನಗಳನ್ನು ಹಾರಿಸುತ್ತಿದೆ. ಅವುಗಳಲ್ಲಿ 10 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿವೆ. ವಿಸ್ತರಣಾ ಯೋಜನೆಗಾಗಿ ಇಂಡಿಗೋ ಇನ್ನೂ 500 ವಿಮಾನಗಳ ಖರೀದಿಗೆ ಆರ್ಡರ್ ಮಾಡಿದೆ. ಅದಕ್ಕಾಗಿ ಟರ್ಕಿಏರ್‌ಲೈನ್‌ನೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಇತ್ತೀಚೆಗೆ 470 ವಿಮಾನಗಳನ್ನು ಖರೀದಿಸಿದ ಏರ್ ಇಂಡಿಯಾ ಹೆಸರನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ಸ್ಪರ್ಧೆಯನ್ನು ಯಾವಾಗಲೂ ಸ್ವಾಗತಿಸುತ್ತೇವೆ. ಭಾರತದಲ್ಲಿ ಪಾಸ್‌ಪೋರ್ಟ್ ಹೊಂದಿದವರು ವಿದೇಶಕ್ಕೆ ಹಾರಲು ಬಯಸುತ್ತಾರೆ. ಏಕೆಂದರೆ ಅವರಿಗೆ ದೊಡ್ಡ ಸಾಮರ್ಥ್ಯವಿದೆ. ಆದ್ದರಿಂದ ನಾವು ಭಾರತೀಯರನ್ನ ಗಡಿಯಾಚೆಗೆ ಕರೆದೊಯ್ಯಲು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ

    AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ

    ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಾಲೀಮು ನಡೆಸುತ್ತಿದ್ದ ಭಾರತದ ವಾಯು ಸೇನೆಯ ವಿಮಾನಗಳಾದ ಸುಖೋಯ್-30 (Sukhoi-30) ಮತ್ತು ಮಿರಾಜ್ 2000 (Mirage 2000) ವಿಮಾನಗಳು ಪತನಗೊಂಡಿದೆ.

    ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಡಿಕ್ಕಿ ಹೊಡೆದುಕೊಂಡು ಮಧ್ಯಪ್ರದೇಶದ ಮೊರೆನಾ (Madhya Pradeshs Morena) ಬಳಿ ಪತನಗೊಂಡಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ, 10 ಮಂದಿಗೆ ಗಾಯ

    ಯುದ್ದ ವಿಮಾನಗಳು ಪತನಗೊಂಡಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಸುಖೋಯ್ ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಮೀರಾಜ್‍ನಲ್ಲಿ ಓರ್ವ ಪೈಲಟ್ ಇದ್ದ ಬಗ್ಗೆ ಮಾಹಿತಿ ಹೊರಬಂದಿದ್ದು, ಸದ್ಯ ಇಬ್ಬರು ಪೈಲಟ್ ಸುರಕ್ಷಿತವಾಗಿರುವ ಬಗ್ಗೆ ವರದಿಯಾಗಿದೆ. ಘಟನೆಯ ತನಿಖೆಗೆ ಐಎಎಫ್ ಸೂಚಿಸಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯದಿಂದ ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಇದನ್ನೂ ಓದಿ: ಕಚೇರಿಗೆ ನಡೆದುಕೊಂಡು ಹೋಗ್ತಿದ್ದಾಗ ಕಟ್ಟಡ ಉರುಳಿ ಬಿದ್ದು ಮಹಿಳಾ ಟೆಕ್ಕಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • INS ವಿಕ್ರಮಾದಿತ್ಯ ನೌಕಾ ಸಾಮರ್ಥ್ಯ ಪರೀಕ್ಷೆಗೆ ಸಿದ್ಧ – ನೌಕಾಯಾನಕ್ಕೆ ಅಣಿಯಾದ ವಿಮಾನ ವಾಹಕ ನೌಕೆಗಳು

    INS ವಿಕ್ರಮಾದಿತ್ಯ ನೌಕಾ ಸಾಮರ್ಥ್ಯ ಪರೀಕ್ಷೆಗೆ ಸಿದ್ಧ – ನೌಕಾಯಾನಕ್ಕೆ ಅಣಿಯಾದ ವಿಮಾನ ವಾಹಕ ನೌಕೆಗಳು

    ಕಾರವಾರ: ದೇಶದ ವಿಮಾನ ವಾಹಕ ನೌಕೆಯಾಗಿರುವ INS ವಿಕ್ರಮಾದಿತ್ಯ (INS Vikramaditya) ಯುದ್ಧ ಹಡಗು ಈ ತಿಂಗಳ ಕೊನೆಯಲ್ಲಿ ಕಾರವಾರದ (Karwar) ಕದಂಬ ನೌಕಾ ನೆಲೆಯಿಂದ ಯುದ್ಧ ಸಾಮರ್ಥ್ಯ ಪರೀಕ್ಷೆಗಾಗಿ ಯಾನ ಪ್ರಾರಂಭಿಸಲಿದೆ. ಮಳೆಗಾಲಕ್ಕೂ ಮೊದಲು ಐಎನ್‌ಎಸ್‌ ವಿಕ್ರಮಾದಿತ್ಯ ಹಡಗು ಹಾಗೂ ಐಎನ್‍ಎಸ್ ವಿಕ್ರಾಂತ್ ಹಡಗಿನ ಯುದ್ಧ ಸಾಮರ್ಥ್ಯವನ್ನು ಭಾರತೀಯ ನೌಕಾಪಡೆ ಪರೀಕ್ಷಿಸಲಿದೆ.

    ಈ ಹಿಂದೆ ವಿಕ್ರಮಾದಿತ್ಯ ಹಡಗನ್ನು ದುರಸ್ತಿ ಕಾರ್ಯಕ್ಕಾಗಿ ಕಾರವಾರದ ಕದಂಬ ನೌಕಾನೆಲೆಗೆ ತರಲಾಗಿತ್ತು. ಕಳೆದ ವರ್ಷ ದುರಸ್ತಿ ಕಾರ್ಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಹೀಗಾಗಿ ಇದರ ದಕ್ಷತೆ, ಕ್ಷಮತೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಇದರ ಪರೀಕ್ಷಾರ್ಥ ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಈ ವರದಿ ಆಧರಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಹಡಗಿನಲ್ಲಿ ರಷ್ಯಾದ ಮಿಗ್ 29ಕೆ (MiG-29K) ವಿಮಾನಗಳನ್ನು ಸಹ ಹೊಂದಿದ್ದು ಈ ವರ್ಷದ ಅಂತ್ಯದ ವೇಳೆಗೆ ಈ ವಿಮಾನ ವಾಹಕ ನೌಕೆಗಳನ್ನು ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಆಚೆ ಭದ್ರತೆಗೆ ನಿಯೋಜನೆಗೊಳ್ಳಲಿದೆ. ಇದನ್ನೂ ಓದಿ: ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಯುದ್ಧ ನೌಕೆ ನಿಲುಗಡೆಗೆ ಜಟ್ಟಿ ಸಮಸ್ಯೆ:
    ಐಎನ್‍ಎಸ್ ವಿಕ್ರಮಾದಿತ್ಯ ಹಾಗೂ ಐಎನ್‍ಎಸ್ ವಿಕ್ರಾಂತ್ ವಿಮಾನ ವಾಹಕ ನೌಕೆಯನ್ನು ಪೂರ್ವ ಸಮುದ್ರ ಭಾಗದಲ್ಲಿ ನಿಲ್ಲಿಸಲು ಜಟ್ಟಿ (ಹಡಗು ನಿಲ್ಲಿಸುವ ಸ್ಥಳ) ಸಮಸ್ಯೆಗಳಿದ್ದು ಈ ಕಾರಣದಿಂದ ಈ ಎರಡು ನೌಕೆಗಳನ್ನು ನಿಲ್ಲಿಸಲು ಪಶ್ಚಿಮ ಕರಾವಳಿಯ ನೌಕಾನೆಲೆಯನ್ನು ಅವಲಂಭಿಸಿದೆ. ಈ ಕಾರಣದಿಂದ ಪೂರ್ವ ಸಮುದ್ರ ಭಾಗದ ನೌಕಾ ನೆಲೆಯಾದ ವಿಶಾಖಪಟ್ಟಣಂನಲ್ಲಿ ಬೃಹತ್ ಯುದ್ಧ ಯಂತ್ರಗಳನ್ನು ನಿಲ್ಲಿಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಭಾರತೀಯ ನೌಕಾಪಡೆಯು ಅಂಡಮಾನ್, ನಿಕೋಬಾರ್ ದ್ವೀಪಗಳ ಪ್ರದೇಶವಾದ ಕ್ಯಾಂಪ್ ಬೆಲ್ ಕೊಲ್ಲಿ ಹಾಗೂ ಉತ್ತರ ಭಾಗದ ಚೆನ್ನೈನ ಕಟ್ಟುಪಲ್ಲಿಯಲ್ಲಿನ ಬಂದರಿನಲ್ಲಿ ವಿಮಾನ ವಾಹಕ ಹಡಗನ್ನು ನಿಲ್ಲಿಸಲು ಅನುವಾಗುವಂತೆ ಜಟ್ಟಿಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನೌಕಾದಳ ನಿರ್ಧರಿಸಿದೆ. ಇದನ್ನೂ ಓದಿ: 35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕೂ ಮೊದಲೇ ಹಾರಿತು ವಿಮಾನ

    ಜನವರಿ ಅಂತ್ಯದ ವೇಳೆಗೆ ಈ ವಿಮಾನ ವಾಹಕ ಯುದ್ಧ ಹಡಗುಗಳು ಕದಂಬ ನೌಕಾನೆಲೆಯಿಂದ ಸಮುದ್ರ ಭಾಗದಲ್ಲಿ ಭದ್ರತೆಗೆ ತೆರಳುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    ಕಠ್ಮಂಡು: 16 ವರ್ಷಗಳ ಹಿಂದೆ ನಡೆದ ಯೇತಿ ಏರ್‌ಲೈನ್ಸ್‌ನ (Yeti Airlines) ವಿಮಾನ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಪತ್ನಿ, ತಾನೂ ಅಂತಹದ್ದೇ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.

    ಹೌದು. ಯೇತಿ ಏರ್‌ಲೈನ್ಸ್ (Airlines) ಸಹ ಪೈಲಟ್ ಅಂಜು ಖತಿವಾಡ ಭಾನುವಾರ ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pokhara International Airport) ನಡೆದ ದುರಂತದಲ್ಲಿ ಮೃತಪಟ್ಟಿದ್ದಾರೆ.

    ಮೃತ ಅಂಜು ಖತಿವಾಡ, ಆಕೆಯ ಪತಿ ಯೇತಿ ಏರ್‌ಲೈನ್ಸ್ ಸಹ ಪೈಲಟ್ ಆಗಿದ್ದರು. ಪತಿ 16 ವರ್ಷಗಳ ಹಿಂದೆ, ಅಂದ್ರೆ 2016ರ ಜೂನ್ 21 ರಂದು ಮೃತಪಟ್ಟಿದ್ದರು. ನೇಪಾಲಗಂಜ್‌ನಿಂದ ಸುರ್ಖೇತ್ ಮೂಲಕ ಜುಮ್ಲಾಗೆ ತೆರಳುತ್ತಿದ್ದ 9-N AEQ ವಿಮಾನ ಅಪಘಾತಕ್ಕೀಡಾಗಿ 6 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸಾವನ್ನಪಿದ್ದರು. ಅದರಲ್ಲಿ ಅಂಜು ಪತಿಯೂ ಒಬ್ಬರಾಗಿದ್ದರು. ಇದೀಗ ಭಾನುವಾರ (ಜ.15) ನಡೆದ ವಿಮಾನ ಅಪಘಾತದಲ್ಲಿ ಅಂಜು ಸಹ ಮೃತಪಟ್ಟಿದ್ದಾರೆ.

    ಮೂಲಗಳ ಪ್ರಕಾರ, ಅಂಜು ಖತಿವಾಡ ಪೈಲಟ್ ಆಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನೂ ಕೆಲವೇ ಗಂಟೆಗಳು ಬಾಕಿಯಿತ್ತು. ಸದ್ಯ ಹಿರಿಯ ಕ್ಯಾಪ್ಟನ್ ಕೆ.ಸಿ ಕಮಲ್ ಪೈಲಟ್ ಆಗಿ, ಅಂಜು ಸಹ ಪೈಲಟ್ ಆಗಿದ್ದರು. ದುರಾದೃಷ್ಟ ಅದುವೇ ಅವರ ಕೊನೆಯ ಹಾರಾಟವಾಗಿದೆ. ಪೈಲಟ್ ಆಗುವ ಕನಸು ಕನಸಾಗಿಯೇ ಉಳಿದು – ಜೀವ ಅಳಿದು ಹೋಗಿದೆ. ಇದನ್ನೂ ಓದಿ: 9ರ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್- ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್

    ಈ ಹಿಂದೆ ಅಂಜು ಕೆಲಸ ನಿವರ್ಹಿಸಿದ ನೇಪಾಳದ ಎಲ್ಲ ವಿಮಾನಗಳೂ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿದಿದ್ದವು. 100 ಗಂಟೆ ಯಶಸ್ವಿ ಪ್ರಯಾಣ ಬೆಳೆಸಿ ಪೈಲಟ್‌ ಆಗೋದ್ರಲ್ಲಿದ್ದರು. ಅವರು ಪೈಲಟ್ ಆಗೋದಕ್ಕೆ ಕೆಲವೇ ಸೆಕೆಂಡುಗಳು ಬಾಕಿಯಿತ್ತು. ಆಗಲಿದ್ದರು. ಆದ್ರೆ ವಿಧಿ ಆಟ ಬೇರೆಯಾಗಿತ್ತು. ಲ್ಯಾಂಡಿಂಗ್‌ಗೇ ಕೆಲವೇ ಕ್ಷಣಗಳಿಗೂ ಮುನ್ನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ

    ಏನಿದು ಘಟನೆ?
    ಇದೇ ಜನವರಿ 15ರಂದು ನೇಪಾಳದ ಪೋಖ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ನಿಲ್ದಾಣ ಅಪಘಾತದಲ್ಲಿ 68 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರು ಸೇರಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ ಶೋಧ ಮುಂದುವರಿದಿದ್ದು, ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ. ಒಟ್ಟು 4 ಸಿಬ್ಬಂದಿ 68 ಪ್ರಯಾಣಿಕರು ಸೇರಿ 72 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k