Tag: airavatha bus

  • 32 ಮಂದಿ ಪ್ರಯಾಣಿಕರಿದ್ದ ಐರಾವತ ಬಸ್ ನಲ್ಲಿ ಬೆಂಕಿ

    32 ಮಂದಿ ಪ್ರಯಾಣಿಕರಿದ್ದ ಐರಾವತ ಬಸ್ ನಲ್ಲಿ ಬೆಂಕಿ

    ಚಿಕ್ಕಬಳ್ಳಾಪುರ: ಐರಾವತ ಬಸ್ಸಿನ ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.

    ಈ ಅವಘಡ ದೇವನಹಳ್ಳಿ ಪಟ್ಟಣದ ಹೊರವಲಯದ ರಾಣಿಕ್ರಾಸ್ ಬಳಿ ಸಂಭವಿಸಿದೆ. ಕೆಎ 57 ಎಫ್ 212 ಸಂಖ್ಯೆಯ ಐರಾವತ ಬಸ್ಸಿನಲ್ಲಿ ಬೆಂಕಿ ಕಾಣಿಕೊಂಡಿರುವುದು. ಈ ಬಸ್ 32 ಮಂದಿ ಪ್ರಯಾಣಿಕರನ್ನ ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆದುಕೊಂಡು ಹೋಗುತ್ತಿತ್ತು.

    ಬಸ್ ರಾಣಿಕ್ರಾಸ್ ಬಳಿ ಹೋಗುತ್ತಿದ್ದಂತೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಚಾಲಕ ಗಮನಿಸಿದ್ದಾರೆ. ಕೂಡಲೇ ಬಸ್ ನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನಂತರ ಬಸ್ಸಿನ ತುಂಬಾ ದಟ್ಟ ಹೊಗೆ ಆವರಿಸಿಕೊಂಡಿದೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದೆ. ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ವಿಡಿಯೋ: ಬೆಳ್ಳಂಬೆಳಗ್ಗೆ ಚೆನ್ನೈನಲ್ಲಿ ಹೊತ್ತಿ ಉರಿದ ಕರ್ನಾಟಕದ ಐರಾವತ ಬಸ್

    ವಿಡಿಯೋ: ಬೆಳ್ಳಂಬೆಳಗ್ಗೆ ಚೆನ್ನೈನಲ್ಲಿ ಹೊತ್ತಿ ಉರಿದ ಕರ್ನಾಟಕದ ಐರಾವತ ಬಸ್

    ಚೆನ್ನೈ: ತಮಿಳುನಾಡಿನ ಪೂನಾ ಮಲಾಯ್ ಬೈಪಾಸ್ ಬಳಿ ಕೆಎಸ್‍ಆರ್‍ಟಿಸಿ ಐರಾವತ ಬಸ್ ಧಗಧಗನೇ ಹೊತ್ತಿ ಉರಿದಿದೆ. ಬೆಳಗ್ಗೆ 8.15ಕ್ಕೆ ಈ ಘಟನೆ ಸಂಭವಿಸಿದೆ.

    ಚೆನ್ನೈ ನಿಂದ 5 ಕಿ.ಮಿ ದೂರದಲ್ಲಿ ಬಸ್‍ನ ಎಂಜಿನ್‍ನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಸ್ವಲ್ಪ ಹೊತ್ತಿನ ನಂತರ ಧಗಧಗನೆ ಹೊತ್ತಿ ಉರಿಯಿತು. ಘಟನೆಯಿಂದ ಬಸ್ಸಿನ ಸೀಟ್ ಹಾಗೂ ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಎಸ್‍ಆರ್‍ಟಿಸಿ ಟೆಕ್ನಿಕಲ್ ಟೀಂ ಚೆನ್ನೈಗೆ ಹೊರಟಿದೆ. ಬೆಂಗಳೂರು-ಚೆನ್ನೈ ಮಾರ್ಗದ ಬಸ್ ಇದಾಗಿದೆ.

    https://www.youtube.com/watch?v=O8Zd1xm1_D0&feature=youtu.be