Tag: Airasia

  • DGCA ನಿಮಯಗಳ ಉಲ್ಲಂಘನೆ – ಏರ್‌ಏಷ್ಯಾ ಇಂಡಿಯಾಗೆ 44 ಲಕ್ಷ ದಂಡ

    DGCA ನಿಮಯಗಳ ಉಲ್ಲಂಘನೆ – ಏರ್‌ಏಷ್ಯಾ ಇಂಡಿಯಾಗೆ 44 ಲಕ್ಷ ದಂಡ

    ನವದೆಹಲಿ: ನಾಗರಿಕ ವಿಮಾನಯಾನ ಸಂಸ್ಥೆಯ ಅಗತ್ಯ ನಿಯಮಗಳ ಉಲ್ಲಂಘನೆ ಹಿನ್ನೆಲೆ ಏರ್‌ಏಷ್ಯಾ (AirAsia) ವಿಮಾನಯಾನ ಸಂಸ್ಥೆಗೆ DGCA 44 ಲಕ್ಷ ರೂ. ಆರ್ಥಿಕ ದಂಡ ವಿಧಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 20 ಮತ್ತು 24 ಲಕ್ಷ ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಧಿಸಿದೆ.

    ಕಳೆದ ವರ್ಷದ ನವೆಂಬರ್ 22 -25 ವರೆಗೂ ಏರ್‌ಏಷ್ಯಾ ಲಿಮಿಟೆಡ್ ಮೇಲೆ ಕಣ್ಗಾವಲು ತಪಾಸಣೆ ನಡೆಸಿತ್ತು. ತಪಾಸಣೆ ವೇಳೆ ಏರ್ ಏಷ್ಯಾ ಪೈಲಟ್‌ಗಳು ಕಡ್ಡಾಯ ನಿಯಮಗಳನ್ನು ಪಾಲಿಸಿಲ್ಲ. ನಿಗದಿತ ವೇಳಾಪಟ್ಟಿಯಂತೆ ಪೈಲಟ್ ಪ್ರೊಫಿಷಿಯನ್ಸಿ ಚೆಕ್/ಇನ್‌ಸ್ಟ್ರುಮೆಂಟ್ ರೇಟಿಂಗ್ ಚೆಕ್ ಮಾಡಿಲ್ಲ. ಇದು ಅಂತಾರಾಷ್ಟ್ರೀಯ ಸಿವಿಲ್ ಏವಿಯೇಷನ್ ​​ಆರ್ಗನೈಸೇಶನ್ ಕಡ್ಡಾಯ ನಿಯಮವಾಗಿರುವ ಹಿನ್ನೆಲೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಸಂಸದನ ಪುತ್ರ ಅರೆಸ್ಟ್

    ನಿಯಮಗಳ ಉಲ್ಲಂಘನೆ ಹಿನ್ನೆಲೆ ಸ್ಪಷ್ಟೀಕರಣ ನೀಡುವಂತೆ ಏರ್‌ಏಷ್ಯಾ ಲಿಮಿಟೆಡ್‌ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ನೀಡಿದ ಉತ್ತರ ಸಮರ್ಪಕವಲ್ಲದ ಕಾರಣಕ್ಕಾಗಿ 20 ಲಕ್ಷ ಆರ್ಥಿಕ ದಂಡವನ್ನು ವಿಧಿಸಿದೆ. ಅಲ್ಲದೇ ಶಿಸ್ತು ಉಲ್ಲಂಘನೆಗಾಗಿ ತರಬೇತಿ ವಿಭಾಗದ ಮುಖ್ಯಸ್ಥರನ್ನು ಮೂರು ತಿಂಗಳು ಅಮಾನತು ಮಾಡಲು ಸೂಚಿಸಿದೆ.

    ಇದರ ಜೊತೆಗೆ DGCA ಸಿವಿಲ್ ಏವಿಯೇಷನ್ ​​ಅವಶ್ಯಕತೆಗಳ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾದ ಏರ್ ಏಷ್ಯಾ (ಇಂಡಿಯಾ) ಲಿಮಿಟೆಡ್‌ನ ಎಂಟು ಗೊತ್ತುಪಡಿಸಿದ ಪರೀಕ್ಷಕರಿಗೆ ತಲಾ 3 ಆರ್ಥಿಕ ದಂಡವನ್ನು ವಿಧಿಸಿದ್ದು, ಒಟ್ಟು 44 ಲಕ್ಷವನ್ನು ದಂಡವನ್ನು ಏರ್ ಏಷ್ಯಾ ಇಂಡಿಯಾ ಮೇಲೆ ಹಾಕಲಾಗಿದೆ. ಇದನ್ನೂ ಓದಿ: ಟರ್ಕಿ ಭೂಕಂಪ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

    ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

    ನವದೆಹಲಿ: ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿ ಪ್ರಯಾಣಿಕರಿಗೆ ನಾನ್-ವೆಜ್ ಊಟ ನೀಡಿದ್ದಕ್ಕೆ ಏರ್ ಏಷ್ಯಾ ವಿಮಾನ ಕಂಪನಿಗೆ ಗ್ರಾಹಕರ ನ್ಯಾಯಾಲಯ 1.54 ಲಕ್ಷ ರೂ. ರೂಪಾಯಿ ದಂಡ ವಿಧಿಸಿದೆ.

    ನಾನ್ ವೆಜ್ ಊಟ ನೀಡಿ ನಮ್ಮನ್ನು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕ ವಿಜಯ್ ಕುಮಾರ್ ಟ್ರೆಹನ್ ಏರ್ ಏಷ್ಯಾ ವಿರುದ್ಧ ಹರ್ಯಾಣದ ಪಂಚಕುಲ ನ್ಯಾಯಾಲಯಲ್ಲಿ ದೂರು ನೀಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಏರ್ ಏಷ್ಯಾ ಕಂಪನಿಗೆ 1.54 ಲಕ್ಷ ರೂ. ದಂಡ ಕಟ್ಟುವಂತೆ ಆದೇಶಿಸಿದೆ.

    ಏನಿದು ಪ್ರಕರಣ?
    ಅಕ್ಟೋಬರ್ 2018ರಲ್ಲಿ ವಿಜಯ್ ಕುಮಾರ್ ಕುಟುಂಬ ಮಲೇಷ್ಯಾದ ಕೌಲಾಲಂಪುರ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆಗಮಿಸುವ ಮೊದಲ ದಿನವೂ ಕೂಡ ಸಿಬ್ಬಂದಿಯ ಅಸಹಕಾರದಿಂದ ವಿಮಾನ ಮಿಸ್ ಆಗಿತ್ತು. ಆ ಬಳಿಕ ಎರಡನೇ ದಿನ ನಾನ್ ವೆಜ್ ಊಟ ನೀಡಿ ನಮ್ಮನ್ನು ಏರ್ ಏಷ್ಯಾ ಸಿಬ್ಬಂದಿ ಹಿಂಸಿಸಿದ್ದಾರೆ. ನಾವು ಹಿಂದೂ ಕುಟುಂಬದವರಾಗಿದ್ದು, ಆದರಲೂ ಇಸ್ಕಾನ್ ಭಕ್ತರಾಗಿದ್ದು, ನವರಾತ್ರಿಯ ವೇಳೆ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ವಿಜಯ್ ಕುಮಾರ್ ಹಾಗೂ ಕುಟುಂಬದ ಐವರು ಕೌಲಾಲಂಪುರ್ ನಿಂದ ಅಮೃತಸರಕ್ಕೆ ಮರಳುತ್ತಿದ್ದರು. ಈ ವೇಳೆ ಸಂಜೆ 5:15 ಗಂಟೆಗೆ ತಮ್ಮ ಕುಟುಂಬದವರ ಜೊತೆ ವಿಜಯ್ ಕುಮಾರ್ ಕೌಲಾಲಂಪುರ್ ವಿಮಾನ ನಿಲ್ದಾಣಕ್ಕೆ ತಲುಪಿ, ಲಗೇಜ್ ತೆರವು ಮತ್ತು ಬೋರ್ಡಿಂಗ್ ಪಾಸುಗಳನ್ನು ಪಡೆದಿದ್ದರು. ಸುಮಾರು 7:20ರ ಹೊತ್ತಿಗೆ ವಿಮಾನದ ಸಮಯ ನಿಗದಿಯಾಗಿತ್ತು.

    ವಲಸೆ ಕೌಂಟರ್ ನಲ್ಲಿ ಬಹಳ ಪ್ರಯಾಣಿಕರು ಇದ್ದ ಕಾರಣಕ್ಕೆ ವಿಜಯ್ ಅವರ ಕುಟುಂಬದ ಲಗೇಜ್ ಪರಿಶೀಲನೆ ಮಾಡುವುದು ತಡವಾಗಿತ್ತು. ಇದರಿಂದ ಅವರು ತಮ್ಮ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಅವರು ಮಾರನೇ ದಿನಕ್ಕೆ ಹೊಸ ಟಿಕೆಟ್ ಬುಕ್ ಮಾಡಿಕೊಂಡು 1 ದಿನ ಹೋಟೆಲ್‍ನಲ್ಲಿ ಇರಬೇಕಾಯ್ತು.

    ಮರು ದಿವಸ ಕುಟುಂಬದೊಡನೆ ವಿಜಯ್ ಕುಮಾರ್ ಅದೇ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದರು. ಪ್ರಯಾಣದ ಮಧ್ಯೆ ಸಿಬ್ಬಂದಿ ಬಳಿ ಸಸ್ಯಾಹಾರ ಊಟ ನೀಡುವಂತೆ ವಿಜಯ್ ಹಾಗೂ ಅವರ ಕುಟುಂಬ ತಿಳಿಸಿತ್ತು. ಆದರೆ ಸಿಬ್ಬಂದಿ ಮಾಂಸಾಹಾರ ಊಟವನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ವಿಜಯ್ ಕುಮಾರ್ ವಿಮಾನ ಕಂಪನಿ ವಿರುದ್ಧ ದೂರು ನೀಡಿದ್ದರು.

    ದೂರು ಆಧರಿಸಿ ವಿಚಾರಣೆ ಮಾಡಿದ ಗ್ರಾಹಕ ವೇದಿಕೆ ಏರ್ ಏಷ್ಯಾಕ್ಕೆ ಮೊದಲು ಸೂಚನೆ ನೀಡಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಹೊಸ ಟಿಕೆಟ್, ಹೋಟೆಲ್ ಕೊಠಡಿ ಬಾಡಿಗೆಗಳು, 9% ರಷ್ಟು ಆಹಾರದ ಬಿಲ್ ಸೇರಿಸಿ 1.54 ಲಕ್ಷವನ್ನು ಪ್ರಯಾಣಿಕ ಕುಟುಂಬಕ್ಕೆ ನೀಡುವಂತೆ ಸೂಚಿಸಿದೆ. ಕಿರುಕುಳ, ನೋವು ಮತ್ತು ಮಾನಸಿಕ ಸಂಕಟಕ್ಕೆ 30,000 ರೂ. ಹಣವನ್ನು ನೀಡುವಂತೆ ಆದೇಶಿಸಲಾಯಿತು. ಅಲ್ಲದೆ ನ್ಯಾಯಾಲಯ ಶುಲ್ಕವಾಗಿ 5,500 ರೂ. ದಂಡ ಕಟ್ಟುವಂತೆ ಸೂಚಿಸಿದೆ.