Tag: air strike

  • ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪಾಕಿಸ್ತಾನ – ಇಲ್ಲಿದೆ ಪ್ರೂಫ್

    ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಪಾಕಿಸ್ತಾನ – ಇಲ್ಲಿದೆ ಪ್ರೂಫ್

    ನವದೆಹಲಿ: ಪಾಕಿಸ್ತಾನ ಭಾರತದ ವಿಚಾರ ಬಂದಾಗ ಹೇಳುವುದೇ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಮತ್ತೊಂದು ಸುಳ್ಳು ಹೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ.

    ಇಂದು ಬೆಳಗ್ಗೆ ಪಾಕಿಸ್ತಾನ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ ನಮ್ಮ ಬಳಿ ಇಬ್ಬರು ಭಾರತದ ವಾಯು ಸೇನಾ ಪೈಲಟ್ ಗಳು ಇದ್ದಾರೆ ಎಂದು ಹೇಳಿದ್ದರು. ಇದನ್ನು ಓದಿ:  ಭಾರತ V/S ಪಾಕಿಸ್ತಾನ: ಭೂ, ವಾಯು, ನೌಕಾ ಸೇನೆಯ ಸಾಮರ್ಥ್ಯ ಏನು?

    ಗಫೂರ್ ಟ್ವೀಟ್ ಬೆನ್ನಲ್ಲೇ ರೇಡಿಯೋ ಪಾಕಿಸ್ತಾನದ ಇಬ್ಬರು ಭಾರತದ ಪೈಲಟ್‍ಗಳನ್ನು ನಾವು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇಬ್ಬರನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ. ಒಬ್ಬರಿಗೆ ಉತ್ತಮವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಗಫೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿತ್ತು.

    ಮಧ್ಯಾಹ್ನ ಭಾರತ ಸುದ್ದಿಗೋಷ್ಠಿ ನಡೆಸಿ, ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು. ಭಾರತದಿಂದ ಅಧಿಕೃತ ಹೇಳಿಕೆ ಬಂದಲ್ಲೇ ಪಾಕಿಸ್ತಾನ ಸಂಜೆ ಉಲ್ಟಾ ಹೊಡೆದಿದ್ದು ನಮ್ಮ ಬಳಿ ಒಬ್ಬರು ಪೈಲಟ್ ಕಸ್ಟಡಿಯಲ್ಲಿ ಇದ್ದಾರೆ ಎಂದು ಮೇಜರ್ ಜನರಲ್ ಗಫೂರ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನು ಓದಿ: ಭಾರತ ದಾಳಿಗೆ ಪಾಕ್ ಗಢ ಗಢ – ಮತ್ತೆ ಶಾಂತಿ ಮಂತ್ರ ಪಠಿಸಿದ ಇಮ್ರಾನ್ ಖಾನ್

    ಆರಂಭದ ಟ್ವೀಟ್ ನಲ್ಲಿ ಅಸಿಫ್ ಗಫೂರ್, ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಭಾರತೀಯ ವಾಯು ಪಡೆಯ ಎರಡು ಯುದ್ಧ ವಿಮಾನಗಳನ್ನು ನಾವು ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು. ಆದರೆ ಭಾರತ ಪಾಕಿಸ್ತಾನದ ವಿಮಾನ ಭಾರತದ ಗಡಿ ದಾಟಿ ಬರುವ ವೇಳೆ ನಡೆದ ದಾಳಿ ವೇಳೆ ಒಂದು ಮಿಗ್ ವಿಮಾನ ಪತನಗೊಂಡಿದೆ. ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿತ್ತು.

    ಪಾಕಿಸ್ತಾನ ಸೇನೆಯ ಜೊತೆ ಅಲ್ಲಿನ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ಹಳೆಯ ಫೋಟೋ ಮತ್ತು ವಿಡಿಯೋಗಳನ್ನು ಪ್ರಸಾರ ಮಾಡಿ ಮಿಗ್ ವಿಮಾನವನ್ನು ಹೊಡೆದಿದ್ದೇವೆ ಎಂದು ವರದಿ ಮಾಡಿವೆ. ಈ ವರದಿಯಲ್ಲಿ ಏರ್ ಶೋ ಅಭ್ಯಾಸದ ವೇಳೆ ಸೂರ್ಯ ಕಿರಣ್ ವಿಮಾನ ಪತನಗೊಂಡ ಬಳಿಕ ಬೆಂಗಳೂರಿನ ಜನತೆ ಪೈಲಟ್ ಅವರನ್ನು ರಕ್ಷಿಸುವ ವಿಡಿಯೋವನ್ನು ಸಹ ಪ್ರಸಾರ ಮಾಡಿ ನಮ್ಮ ಸೇನೆ ಹೇಗೆ ಸಾಹಸ ಮಾಡಿದೆ ಎಂದು ಹೇಳಿ ಬೊಗಳೆಯನ್ನು ಬಿಟ್ಟಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುದುರೆ ಬಿಟ್ಟು ಸಹೋದರ ಹೆಗಲು ಏರಿ ಏರ್ ಸ್ಟ್ರೈಕ್ ದಾಳಿ ಸಂಭ್ರಮಿಸಿದ ವರ

    ಕುದುರೆ ಬಿಟ್ಟು ಸಹೋದರ ಹೆಗಲು ಏರಿ ಏರ್ ಸ್ಟ್ರೈಕ್ ದಾಳಿ ಸಂಭ್ರಮಿಸಿದ ವರ

    ಭೋಪಾಲ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮೂರು ನೆಲೆಗಳ ಮೇಲೆ ಮಂಗಳವಾರ ವಾಯು ಪಡೆ ನಡೆಸಿದ ದಾಳಿಗೆ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ದೆಹಲಿಯ ಆಟೋ ಚಾಲಕರೊಬ್ಬರು ತನ್ನ ಪ್ರಯಾಣಿಕರಿಗೆ ಉಚಿತ ಆಟೋ ಸೇವೆ ನೀಡಿ ಸಂಭ್ರಮಿಸಿದ್ದರು. ಇದರಂತೆ ಏರ್ ಸ್ಟ್ರೈಕ್ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯಪ್ರದೇಶ ವರನೊಬ್ಬ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.

    ಮಧ್ಯಪ್ರದೇಶದ ಬರ್ವಾನಿಯಲ್ಲಿ ವರ ಗಣೇಶ್ ಸುಖ್‍ಲಾಲ್ ದಿಯೋರೆ ಕುದುರೆ ಮೇಲೆ ಕುಳಿತು ಮೆರವಣಿಗೆ ಮೂಲಕ ವಧುವಿನ ಮನೆಗೆ ಹೋಗುತ್ತಿದ್ದರು. ಈ ವೇಳೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ದಾಳಿ ಮಾಡಿದ್ದಕ್ಕೆ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು.

    ಏರ್ ಸ್ಟ್ರೈಕ್ ದಾಳಿಯನ್ನು ಜನರು ಸಂಭ್ರಮಿಸುತ್ತಿದ್ದಾಗ ವರ ಗಣೇಶ್ ಬರ್ವಾನಿ ಶಾಸ್ತ್ರೀ ನಗರದ ಮನೆಯಿಂದ ಆಗ ತಾನೇ ಮೆರವಣಿಗೆ ಹೊರಟಿದ್ದರು. ಜನರು ಡ್ರಮ್ ಬಾರಿಸಿ, ಭಾರತ್ ಮಾತಾಕೀ ಜೈ ಎನ್ನುತ್ತ ಸಂಭ್ರಮಿಸುತ್ತಿದ್ದನ್ನು ನೋಡಿದ ಗಣೇಶ್‍ಗೂ ಡ್ಯಾನ್ಸ್ ಮಾಡಬೇಕು, ಎಲ್ಲರೊಂದಿಗೆ ಖುಷಿ ಹಂಚಿಕೊಳ್ಳಬೇಕು ಎನ್ನುವ ಆಸೆಯಾಗಿತ್ತು. ಆದರೆ ಸಂಪ್ರದಾಯದ ಪ್ರಕಾರ ವಧುವಿನ ಮನೆ ತಲುಪುವರೆರಗೂ ವರ ನೆಲದ ಮೇಲೆ ಕಾಲು ಇಡುವಂತಿಲ್ಲ. ಹೀಗಾಗಿ ಕುದುರೆಯ ಮೇಲೆ ಕುಳಿತಿದ್ದ ಗಣೇಶ್ ಅವರನ್ನು ಸಹೋದರನೊಬ್ಬ ತನ್ನ ಭುಜದ ಮೇಲೆ ಕೂರಿಸಿಕೊಂಡು ಜನರು ಸೇರಿದ್ದ ಸ್ಥಳಕ್ಕೆ ಕರೆದುತಂದಿದ್ದಾನೆ.

    10ನೇ ಶತಮಾನದ ಶೆಂಧ್ವಾ ಕೋಟೆಯ ಗೇಟ್ ಬಳಿ ಬಂದ ಗಣೇಶ್, ತ್ರಿವರ್ಣ ಧ್ವಜವನ್ನು ಹಿಡಿದು ಸ್ಥಳದಲ್ಲಿ ಸೇರಿದ್ದ ಜನರೊಂದಿಗೆ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

    ಪುಲ್ವಾಮಾ ದಾಳಿಗೆ ಭಾರತೀಯ ವಾಯುಪಡೆ ಈ ಪ್ರಮಾಣದಲ್ಲಿ ಪ್ರತ್ಯುತ್ತರ ನೀಡುತ್ತದೆಂದು ಊಹಿಸಿರಲಿಲ್ಲ. ನಮಗೆ ಡಬಲ್ ಖುಷಿಯಾಗಿದೆ ಎಂದು ಸಂಭ್ರಮಾಚರಣೆ ಮಾಡುತ್ತಿದ್ದ ಹರೀಶ್ ಹಾಗೂ ರಾಜೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್‍ನಲ್ಲೂ ಬಿಎಸ್‍ವೈ ರಾಜಕೀಯ ಲೆಕ್ಕಾಚಾರ!

    ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್‍ನಲ್ಲೂ ಬಿಎಸ್‍ವೈ ರಾಜಕೀಯ ಲೆಕ್ಕಾಚಾರ!

    ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದರು.

    ಪಾಕ್ ಉಗ್ರರರ ಮೇಲೆ ಭಾರತ ನಡೆಸಿದ ಏರ್ ಸ್ಟ್ರೈಕ್ ನಿಂದ ಯುವಕರು ಕುಣಿದು ಕುಪ್ಪಳಿಸುತ್ತಾ, ಸಂಭ್ರಮಿಸುತ್ತಿದ್ದಾರೆ. ಹುತಾತ್ಮರಾದ ಸೈನಿಕರ ಕಣಕಣ ರಕ್ತಕ್ಕೂ ಪ್ರತಿಕಾರವನ್ನು ಭಾರತ ತೀರಿಸಿಕೊಂಡಿದೆ ಎಂದರು. ಇದೇ ವೇಳೆ ತೋಟಗಾರಿಕಾ ಸಚಿವ ಎಂಸಿ ಮನುಗೂಳಿಯವರು ಉಗ್ರರ ಮೇಲೆ ಆಗಲಿ ಹಾಗೂ ಯೋಧರ ಮೇಲಾಗಲಿ ದಾಳಿ ಮಾಡಬಾರದಿತ್ತು ಎಂಬ ಹೇಳಿಕೆಗೆ ತಿರುಗೇಟು ನೀಡಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಹೇಳಿಕೆಗಳು ಅಧಿಕಾರದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಎಸ್ ಯಡಿಯೂರಪ್ಪ ಹೇಳಿದ ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆಗೆ ಹೆದರಿದ ಬಿಜೆಪಿಯಿಂದ ಯುದ್ಧದ ಗಿಮಿಕ್: ಸಿಪಿಐಎಂ

    ಲೋಕಸಭಾ ಚುನಾವಣೆಗೆ ಹೆದರಿದ ಬಿಜೆಪಿಯಿಂದ ಯುದ್ಧದ ಗಿಮಿಕ್: ಸಿಪಿಐಎಂ

    ತಿರುವನಂತಪುರಂ: ಪುಲ್ವಾಮಾ ದಾಳಿಗೆ ಭಾರತೀಯ ವಾಯು ಪಡೆ ಹಾಗೂ ಕೇಂದ್ರ ಸರ್ಕಾರ ಪ್ರತ್ಯುತ್ತರ ನೀಡಿದ್ದಕ್ಕೆ ಸೋಮವಾರ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಕೇರಳದ ಸಿಪಿಐ(ಎಂ) ಮುಖಂಡರೊಬ್ಬರು ಲೋಕಸಭಾ ಚುನಾವಣೆಗೆ ಹೆದರಿರುವ ಬಿಜೆಪಿಯು ಯುದ್ಧದ ವಾತಾವರಣ ಸೃಷ್ಟಿಸುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಸಿಪಿಐಎಂ ಪಕ್ಷದಿಂದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯ ಬಿಜೆಪಿಯಲ್ಲಿದೆ. ಹೀಗಾಗಿ ಯುದ್ಧದ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾಶ್ಮೀರ ಜನತೆಯನ್ನು ದೇಶ ವಿರೋಧಿಗಳನ್ನಾಗಿ ಮಾಡುತ್ತಿದೆ. ಬಿಜೆಪಿಯವರು ದೇಶದ ಮುಸ್ಲಿಮರ ವಿರುದ್ಧ ದ್ವೇಷ ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಕೋಮುಗಲಭೆ ಹೆಚ್ಚಿಸುವುದು ಆರ್‍ಎಸ್‍ಎಸ್ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

    ಕೊಡಿಯೇರಿ ಬಾಲಕೃಷ್ಣನ್ ಅವರ ಹೇಳಿಕೆಯನ್ನು ದೇಶದ ಅನೇಕ ನಾಯಕರು ಖಂಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಬಾಲಕೃಷ್ಣನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನ ಭಯೋತ್ಪಾದನೆಯ ವಿರೋಧಿ ದೇಶ: ಚೀನಾ

    ಪಾಕಿಸ್ತಾನ ಭಯೋತ್ಪಾದನೆಯ ವಿರೋಧಿ ದೇಶ: ಚೀನಾ

    ಬೀಜಿಂಗ್: ಪಾಕಿಸ್ತಾನ ಯಾವತ್ತೂ ಭಯೋತ್ಪಾದನ ವಿರೋಧಿ ದೇಶವಾಗಿದೆ ಎನ್ನುವ ನಂಬಿಕೆ ನಮ್ಮಲ್ಲಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

    ಚೀನಾದ ವೂಹನ್‍ನಲ್ಲಿ ನಡೆದ 16ನೇ ರಷ್ಯಾ-ಭಾರತ-ಚೀನಾ (ಆರ್‍ಐಸಿ) ಸಭೆ ಬಳಿಕ ಮಾತನಾಡಿ ಅವರು, ಪಾಕಿಸ್ತಾನ ಹಾಗೂ ಭಾರತ ನಮಗೆ ಆತ್ಮೀಯ ದೇಶಗಳು. ಪರಸ್ಪರ ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಜೊತೆಗೆ ಪುಲ್ವಾಮಾ ದಾಳಿಯ ತನಿಖೆಗೆ ಉಭಯ ದೇಶಗಳು ಸಹಕಾರ ನೀಡುವ ಮೂಲಕ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ವಾಂಗ್ ಯಿ ತಿಳಿಸಿದ್ದಾರೆ.

    ಪಾಕಿಸ್ತಾನ ಹಾಗೂ ಭಾರತದ ನಡುವಿನ ದಾಳಿ, ಪ್ರತಿ ದಾಳಿಯಲ್ಲಿ ಚೀನಾ ಸ್ಥಿರತೆ ಕಾಯ್ದುಕೊಂಡಿದೆ. ಉಭಯ ದೇಶಗಳಲ್ಲಿ ಯಾರ ವಿರುದ್ಧವು ನಾವು ಧ್ವನಿ ಎತ್ತಿಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದರು.

    ರಷ್ಯಾ-ಚೀನಾ-ಭಾರತ ಭಯೋತ್ಪಾದನೆ ವಿರುದ್ಧ ನಿಂತಿವೆ ಎನ್ನುವುದನ್ನು ಪುನಃ ದೃಢೀಕರಿಸಲಾಗಿದೆ. ಸಂಯಮ ಕಾಯ್ದುಕೊಳ್ಳುತ್ತೇವೆ ಹಾಗೂ ಪರಿಸ್ಥಿತಿಯನ್ನು ಉಲ್ಬಣಗೊಳ್ಳಲು ಬಿಡುವುದಿಲ್ಲವೆಂದು ಭಾರತ-ಪಾಕಿಸ್ತಾನ ಹೇಳಿಕೆ ನೀಡಿರುವುದನ್ನು ಚೀನಾ ಮೆಚ್ಚಿಕೊಳ್ಳುತ್ತದೆ ಎಂದು ತಿಳಿಸಿದರು.

    ಇದಕ್ಕೂ ಮುನ್ನ ಮಾತನಾಡಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಮಂಗಳವಾರ ನಡೆದ ಏರ್ ಸ್ಟ್ರೈಕ್ ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲ. ಭಾರತದ ಮೇಲೆ ಜೈಶ್ ಉಗ್ರ ಸಂಘಟನೆ ಮತ್ತೊಂದು ದಾಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬೇಕು ಎಂದು ನಾವು ಬಯಸುವುದಿಲ್ಲ. ಜವಾಬ್ದಾರಿಯುತವಾಗಿ ಉಗ್ರರನ್ನು ಮಟ್ಟ ಹಾಕಲಾಗುತ್ತದೆ. ಉಗ್ರರ ವಿರುದ್ಧ ಹೋರಾಡಲು ನಮ್ಮ ಜೊತೆ ಅನೇಕ ರಾಷ್ಟ್ರಗಳು ನಿಂತಿವೆ. ಇದು ನನಗೆ ತುಂಬಾ ಖುಷಿ ತಂದುಕೊಟ್ಟಿದೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರಿಂದ ಮಾನವೀಯತೆ ನಿರೀಕ್ಷೆ ಸಾಧ್ಯವಿಲ್ಲ: ಸುಷ್ಮಾ ಸ್ವರಾಜ್

    ಉಗ್ರರಿಂದ ಮಾನವೀಯತೆ ನಿರೀಕ್ಷೆ ಸಾಧ್ಯವಿಲ್ಲ: ಸುಷ್ಮಾ ಸ್ವರಾಜ್

    – ಚೀನಾಕ್ಕೆ ಭಾರತದ ಸಂಬಂಧ ಮನವರಿಕೆ ಮಾಡಿಕೊಟ್ಟ ಸಚಿವೆ

    ಬೀಜಿಂಗ್: ಭಯೋತ್ಪಾದಕರಿಂದ ನಾವು ಎಂದಿಗೂ ಮಾನವೀಯತೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಉಗ್ರರನ್ನು ಸೆದೆ ಬಡಿಯಲು ವಿಶ್ವದ ರಾಷ್ಟ್ರಗಳು ಒಂದಾಗಿ ಹೋರಾಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಚೀನಾದ ವೂಹನ್‍ನಲ್ಲಿ ನಡೆದ 16ನೇ ರಷ್ಯಾ-ಭಾರತ-ಚೀನಾ (ಆರ್‌ಐಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು. ಈ ವೇಳೆ ಮಂಗಳವಾರ ನಡೆದ ಏರ್ ಸ್ಟ್ರೈಕ್ ವಿಚಾರವಾಗಿ ಚೀನಾ ಹಾಗೂ ರಷ್ಯಾ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡುತ್ತಿದ್ದು, ಭಾರತದ ಮೇಲೆ ದಾಳಿ ಮಾಡಲು ಉಗ್ರರು ಪ್ಲಾನ್ ರೂಪಿಸಿದ್ದರು. ಹೀಗಾಗಿ ಸ್ವಯಂ ರಕ್ಷಣೆಗಾಗಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕ್ಯಾಂಪ್‍ಗಳ ಮೇಲೆ ದಾಳಿ ಮಾಡಿದ್ದೇವೆ. ನಾಗರಿಕರ ಸಾವು ನೋವು ತಪ್ಪಿಸಲು ದಾಳಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಇದು ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲ. ಭಾರತದ ಮೇಲೆ ಜೈಶ್ ಉಗ್ರ ಸಂಘಟನೆ ಮತ್ತೊಂದು ದಾಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬೇಕು ಎಂದು ನಾವು ಬಯಸುವುದಿಲ್ಲ. ಜವಾಬ್ದಾರಿಯುತವಾಗಿ ಉಗ್ರರನ್ನು ಮಟ್ಟ ಹಾಕಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ತಿಳಿದರು.

    ಉಗ್ರರ ವಿರುದ್ಧ ಹೋರಾಡಲು ನಮ್ಮ ಜೊತೆ ಅನೇಕ ರಾಷ್ಟ್ರಗಳು ನಿಂತಿವೆ. ಇದು ನನಗೆ ತುಂಬಾ ಖುಷಿ ತಂದುಕೊಟ್ಟಿದೆ. ಭಾರತ ಉಗ್ರರ ವಿರುದ್ಧ ಕ್ರಮಕೈಗೊಂಡಿದೆ. ನಮ್ಮ ಗುರಿ ಭಯೋತ್ಪಾದನೆಯನ್ನ ನಿಲ್ಲಿಸುವುದು. ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ಬಿಡಬೇಕು. ಭಾರತೀಯ ವಾಯು ಪಡೆ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದೆ. ಅಲ್ಲಿನ ನಿವಾಸಿಗಳ ವಿರುದ್ಧ ಯುದ್ಧ ಸಾರಿಲ್ಲ ಎಂದು ಹೇಳಿದರು.

    ಭಾರತ-ಚೀನಾ ಸಂಬಂಧ ಉಭಯ ರಾಷ್ಟ್ರಗಳಿಗೆ ಮುಖ್ಯವಾಗಿದೆ. ವೂಹನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ರಾಷ್ಟ್ರಪತಿ ಕ್ಸಿ ಜಿನ್‍ಪಿಂಗ್ ಅವರ ನಡುವೆ 2018 ಏಪ್ರಿಲ್‍ನಲ್ಲಿ ನಡೆದ ಸಭೆಯಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ ಎಂದು ಚೀನಾಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

    ಭಯೋತ್ಪಾದನೆಯನ್ನು ಹತ್ತಿಕ್ಕಲು ನಮಗೆ ಜಗತ್ತಿನ ಸಹಾಯ ಬೇಕಿದೆ. ಪುಲ್ವಾಮಾ ದಾಳಿಯಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದಾರೆ. ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನದ ಕುಮ್ಮಕ್ಕಿನಿಂದ ದಾಳಿ ಮಾಡಿಸಿದೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ವಾರ್ನಿಂಗ್

    ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ವಾರ್ನಿಂಗ್

    ವಾಷಿಂಗ್ಟನ್: ಭಾರತೀಯ ಸೇನೆ ಉಗ್ರರ ಮೂರು ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ಮಾಡಿ ಅಡಗುತಾಣಗಳನ್ನು ನೆಲಸಮ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಪ್ರತಿಕಾರ ತೀರಿಸುವುದಾಗಿ ಹೇಳಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ.

    ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಆಗ್ರಹಿಸಿದೆ. ಏನಾದ್ರೂ ಆಗಲಿ ಉಗ್ರರನ್ನು ಶಮನ ಮಾಡಬೇಕು. ಆದ್ರೆ ಇದರ ಬದಲು ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೆ ಹುಷಾರ್ ಎಂದು ದೊಡ್ಡಣ್ಣ ಅಮೆರಿಕಾ ಪಾಕ್ ಗೆ ಎಚ್ಚರಿಕೆ ನೀಡಿದೆ.

    ಪಾಕ್ ಉಗ್ರರ ವಿರುದ್ಧ ಇಂದು ಚೀನಾದಲ್ಲಿ ವಿದೇಶಾಂಗ ಸಚಿವರ ಮಹತ್ವದ ಸಭೆ ನಡೆಯಲಿದೆ. ಭಾರತ, ಚೀನಾ, ರಷ್ಯಾ ವಿದೇಶಾಂಗ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

    ಫೆ. 14ರಂದು ಪಾಕ್ ಉಗ್ರನ ಆತ್ಮಾಹುತಿ ದಾಳಿಯಿಂದಾಗಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು ಎಂದು ಇಡೀ ದೇಶವೇ ಒಕ್ಕೊರಲಿನಿಂದ ಆಗ್ರಹಿಸಿತ್ತು. ಈ ಘಟನೆ ನಡೆದ 13ನೇ ದಿನಕ್ಕೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಮಟ್ಟ ಹಾಕಿದ್ದಾರೆ. ಈ ದಾಳಿಯಲ್ಲಿ 250-300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಆದ್ರೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಭಾರತ ಎಂಥ ದಾಳಿನೂ ಮಾಡಿಲ್ಲ. ಖಾಲಿ ಪ್ರದೇಶದಲ್ಲಿ ಕೇವಲ ಬಾಂಬ್‍ಗಳನ್ನು ಹಾಕಿ ಹೋಗಿವೆ ಅಷ್ಟೆ ಅಂತ ಪಾಕ್ ಮೇಜರ್ ಹೇಳಿದ್ದರು. ಅಲ್ಲಿನ ನಿವಾಸಿಗಳು ಮಾತ್ರ ಭಾರತ ನಡೆಸಿದ ವೈಮಾನಿಕ ದಾಳಿ ಭೂಕಂಪದಂತಿತ್ತು ಅಂತ ಹೇಳಿದ್ದಾರೆ. ಈ ಬಗ್ಗೆ ಜಮ್ಮು ಕಾಶ್ಮೀರದ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಗಡಿಗೆ ಹೊಂದಿಕೊಂಡಂತಿರುವ ಪೂಂಚ್‍ನ ಜನ ಪ್ರತಿಕ್ರಿಯಿಸಿ, ರಾತ್ರಿ ಎಲ್ಲಾ ವಿಮಾನಗಳ ಸಂಚಾರದ ಸದ್ದು ಕೇಳಿ ಭಯಭೀತರಾಗಿದ್ದೆವು. ಏನಾಗ್ತಿದ್ಯಪ್ಪ ಅಂತ ಆತಂಕದಲ್ಲಿದ್ದೆವು. ಆದ್ರೆ, ಬೆಳಗ್ಗೆ ಎದ್ದು ಟಿವಿ ನೋಡಿದಾಗ ಪಾಕಿಸ್ತಾನದ ಉಗ್ರರ ಕ್ಯಾಂಪ್‍ಗಳ ಮೇಲೆ ಸೇನೆ ಏರ್‍ಸ್ಟ್ರೈಕ್ ನಡೆಸಿದೆ ಅಂತ ಗೊತ್ತಾಯ್ತು. ಇದು ನಮ್ಮ ಹಕ್ಕು. ಅವರು ಪದೇ ಪದೇ ದಾಳಿ ಮಾಡುತ್ತಿದ್ದರೆ ನಾವೇನು ಸುಮ್ಮನೆ ಕೂರೋಕೆ ಆಗಲ್ಲ. ಪಾಕಿಸ್ತಾನದವರಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ನಮ್ಮ ಸೇನೆಯವರು ಮಾಡಿದ್ದು ಸರಿ ಅಂದ್ರು. ಇದನ್ನೂ ಓದಿ: ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    https://www.youtube.com/watch?v=SuxIDEkNIes

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಹೇಳಿ ಈಗ ಪಾಕಿಸ್ತಾನದಲ್ಲಿ ಏರ್ ಶೋ ನಡೆಸ್ತಿದ್ದಾರೆ: ನೆಟ್ಟಿಗರ ಸಂಭ್ರಮಾಚರಣೆ

    ಬೆಂಗ್ಳೂರಲ್ಲಿ ಹೇಳಿ ಈಗ ಪಾಕಿಸ್ತಾನದಲ್ಲಿ ಏರ್ ಶೋ ನಡೆಸ್ತಿದ್ದಾರೆ: ನೆಟ್ಟಿಗರ ಸಂಭ್ರಮಾಚರಣೆ

    ಕೊಪ್ಪಳ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ್ದು, ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಕೊಪ್ಪಳದಲ್ಲಿ ವಿದ್ಯಾರ್ಥಿಗಳು ವಿಭಿನ್ನವಾಗಿ ಪಾಕಿಸ್ತಾನದ ವಿರುದ್ಧ ಡೈಲಾಗ್‍ಗಳ ಸುರಿಮಳೆ ಮಾಡುತ್ತಿದ್ದಾರೆ.

    ಕೊಪ್ಪಳದ ಗಂಗಾವತಿಯ ಸಂಕಲ್ಪ ಕಾಲೇಜ್ ಮತ್ತು ಕಲ್ಮಠ ಮಹಿಳಾ ಪ್ರಥಮ ದರ್ಜೆಯ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ವಿಧ್ಯಾರ್ಥಿಗಳು ಪಾಕಿಸ್ತಾನದ ವಿರುದ್ಧ ವಿಭಿನ್ನವಾಗಿ ಡೈಲಾಗ್‍ಗಳು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಎರ್ ಸರ್ಜಿಕಲ್ ಸ್ಟ್ರೈಕ್‍ಗೆ ಮೆಚ್ಚುಗೆ ವ್ಯಕ್ತಪಡಿಸಿ ಉಗ್ರರ ವಿರುದ್ಧ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

    ವಿದ್ಯಾರ್ಥಿಗಳು ಕಣ್ಣನ್ ದೇವನ್ ಚಹಾಪುಡಿ. ಪಾಕಿಸ್ತಾನ್ ಪುಡಿಪುಡಿ ಎಂದು ಘೋಷಣೆ ಕೂಗುತ್ತಿದ್ದಾರೆ. ಇದಲ್ಲದೇ ಇದು ಜಸ್ಟ್ ಟ್ರೈಲರ್. ಪಿಕ್ಚರ್ ಅಭಿ ಬಾಕಿ ಹೇ ಎಂದು ಹೇಳಿದ್ದಾರೆ. ಅಲ್ಲದೇ ನಮ್ ತಂಟೆಗೆ ಬಂದರೆ ಸುಮ್ನೆ ಬಿಡಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲೂ ಏರ್ ಸ್ಟ್ರೈಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಾಕಿಸ್ತಾನಕ್ಕೆ ಕಾಲೆಳೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಆರಂಭವಾದ ಏರ್ ಶೋ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಮುಕ್ತಾಯವಾಗಿದೆ ಎಂದು ನೆಟ್ಟಿಗರೊಬ್ಬರು ಫೇಸ್‍ಬುಕ್‍ನಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮತ್ತೊಬ್ಬರು ಮೋದಿ ಅವರು ನಮ್ಮ ಕರ್ನಾಟಕಕ್ಕೆ ಮೋಸ ಮಾಡುತ್ತಿದ್ದಾರೆ. ಏರ್ ಶೋ ಬೆಂಗಳೂರಿನಲ್ಲಿ ಎಂದು ಹೇಳಿ, ಇವಾಗ ಏರ್ ಶೋವನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಇದೇನ್ ಗುರು ಏರ್ ಶೋ ಬೆಂಗಳೂರಿನಲ್ಲಿ ಅಂತ ಹೇಳಿ ಪಾಕಿಸ್ತಾನದತ್ತ ಹೊರಟವರೇ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಮೂಲಗಳ ಪ್ರಕಾರ ಮೊದಲು 20 ಕೆಜಿ ಟೊಮೆಟೊ ಎಸೆಯಲಾಯಿತಂತೆ. ಹೆಕ್ಕಲು ಮುಗಿಬಿದ್ದ ಉಗ್ರರ ಮೇಲೆ ಸಾವಿರ ಕೆಜೆ ಬಾಂಬ್ ಹಾಕಲಾಯಿತು ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ: ವಾಯು ದಾಳಿ ನಡೆಸಿದ್ದೇವೆ!
    ಪಾಕ್ ಪ್ರಧಾನಿ ಇಮ್ರಾನ್ ಖಾನ್: ಸಮಾಧಾನ ಆಯ್ತಾ? ಈಗಲಾದರೂ ಟೊಮೆಟೋ, ನೀರು ಬಿಡಿ ಪ್ಲೀಸ್! ಎಂದು ವ್ಯಂಗ್ಯವಾಗಿ ಗೊರಾ ನರಸಿಂಹ ಮೂರ್ತಿ ಫೆಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

    ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಇಂದು ಪಾಕ್ ನಲ್ಲಿರುವ ಉಗ್ರರ ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಗಡಿಭಾಗದ ಜನರು ರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

    ರಾತ್ರಿಯಿಡೀ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಅಲ್ಲದೇ ಒಂದು ಬಾರಿ ದೊಡ್ಡ ಶಬ್ದ ಕೇಳ್ಪಟ್ಟಿತ್ತು. ಆ ಬಳಿಕ ನಮಗೆ ಭಯವಾಗಲು ಆರಂಭವಾಯಿತು, ಯಾಕಂದ್ರೆ ನಾವು ಗಡಿಭಾಗದಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ಹೆದರಿ ನಿದೆಯಲ್ಲಿದ್ದ ನಾವು ಎದ್ದು ಕುಳಿತೆವು. ಮಧ್ಯರಾತ್ರಿ 3 ಗಂಟೆಯ ನಂತರ ನಾವು ನಿದ್ದೆಯೇ ಮಾಡಲಿಲ್ಲ. ಬಾಂಬ್ ದಾಳಿಯಾಗುತ್ತಿರುವುದು ನಮಗೆ ಕಾಣಿಸಿದ್ದು, ಶಬ್ಧವೂ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

    ನರೇಂದ್ರ ಕುಮಾರ್

    ಪೂಂಛ್ ಜಿಲ್ಲೆಯ ಮೆಂಧಾರ್ ನಿವಾಸಿ ನರೇಂದ್ರ ಕುಮಾರ್ ಮಾತನಾಡಿ, ಮುಂಜಾನೆ 3 ಗಂಟೆಯ ಸುಮಾರಿಗೆ ವಿಮಾನಗಳು ಹಾರಾಡುತ್ತಿರುವ ಶಬ್ಧ ಕೇಳಿಸಿದೆ. ಈ ಶಬ್ಧ ಬೆಳಗ್ಗೆ 7 ಗಂಟೆಯವರೆಗೂ ನಮಗೆ ಕೇಳಿಸಿದೆ. ಆದ್ರೆ 8 ಗಂಟೆ ಸುಮಾರಿಗೆ ಭಾರತ ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸಿರುವ ಕುರಿತು ಮಾಹಿತಿ ಸಿಕ್ಕಿತು ಅಂದ್ರು. ಇನ್ನೂ ಓದಿ: ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ಇದೇ ಗ್ರಾಮದ ರಾಜಾ ಮೊಹಮ್ಮದ್ ಶರೀಫ್, ಮುಂಜಾನೆ 3.30ರ ಸುಮಾರಿಗೆ ವಿಮಾನಗಳು ಹಾರಾಟ ನಡೆಸುತ್ತಿರುವ ಶಬ್ಧ ಕೇಳಲ್ಪಟ್ಟೆ. ಅಲ್ಲದೇ ಬಾಂಬ್ ದಾಳಿಯಾಗಿರುವ ಸೌಂಡ್ ಕೂಡ ಕೇಳಿಸಿದೆ. ಭಾರತೀಯ ಸೇನೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ನಮಗೆ ಖುಷಿ ಇದೆ. ಈ ಮೂಲಕ ನಮ್ಮ ಯೋಧರ ಬಲಿದಾನ ವ್ಯರ್ಥವಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರ ನಡೆಸಿದ ಆತ್ಮಾಹುತಿ ದಾಳಿ ನಡೆಸಿ 40 ಯೋಧರನ್ನು ಬಲಿತೆಗೆದುಕೊಂಡ 12ನೇ ದಿನಕ್ಕೆ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಾಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡ್ ಬಾಂಬ್ ಹಾಕಬಹುದಾದ ಸಾಮಥ್ರ್ಯ ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ `ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ಗಡಿ ಭಾಗ, ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಮೊದಲೇ ಸೇನೆಗೆ ಅಧಿಕಾರವನ್ನು ನೀಡಿದ್ದರೆ ಚೆನ್ನಾಗಿರುತಿತ್ತು: ಮಾಯಾವತಿ

    ಮೋದಿ ಮೊದಲೇ ಸೇನೆಗೆ ಅಧಿಕಾರವನ್ನು ನೀಡಿದ್ದರೆ ಚೆನ್ನಾಗಿರುತಿತ್ತು: ಮಾಯಾವತಿ

    ಲಕ್ನೋ: ಭಾರತೀಯ ಸೇನೆಗೆ ಪ್ರಧಾನಿ ಮೋದಿ ಮೊದಲೇ ಅಧಿಕಾರವನ್ನು ನೀಡಬಹುದಿತ್ತು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಜೈಷ್ ಭಯೋತ್ಪಾದಕರ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರಗೆ ಪ್ರವೇಶಿಸುವ ಮೂಲಕ ವಾಯುಪಡೆಯ ಕೆಚ್ಚೆದೆಯ ಯೋಧರ ಧೈರ್ಯವನ್ನು ನಾನು ಸನ್ಮಾನಿಸುತ್ತೇನೆ ಹಾಗೂ ಗೌರವಿಸುತ್ತೇನೆ. ಸೇನೆಗೆ ನೀಡಿದ್ದ ಅಧಿಕಾರವನ್ನು ಮೋದಿ ಮೊದಲೇ ನೀಡಿದ್ದರೆ ಚೆನ್ನಾಗಿರುತಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿದೆ. ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv