Tag: air raids

  • ಎಲ್‍ಓಸಿ ಕ್ರಾಸ್ ಮಾಡಿದ್ದಕ್ಕೆ ಎರಡು ಯುದ್ಧ ವಿಮಾನ ಹೊಡೆದು ಉರುಳಿಸಿದ್ದೇವೆ: ಪಾಕ್

    ಎಲ್‍ಓಸಿ ಕ್ರಾಸ್ ಮಾಡಿದ್ದಕ್ಕೆ ಎರಡು ಯುದ್ಧ ವಿಮಾನ ಹೊಡೆದು ಉರುಳಿಸಿದ್ದೇವೆ: ಪಾಕ್

    ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯನ್ನು ಕ್ರಾಸ್ ಮಾಡಿದ್ದರಿಂದ ಭಾರತದ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯುಸೇನೆ ಹೊಡೆದುರಳಿಸಿದೆ ಎಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ ಹೇಳಿದ್ದಾರೆ.

    ಒಂದು ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದು, ಇನ್ನೊಂದು ಭಾರತದ ಕಾಶ್ಮೀರದ ಭಾಗದಲ್ಲಿ ಪತನಗೊಂಡಿದೆ. ಓರ್ವ ಭಾರತೀಯ ಪೈಲಟ್ ನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಭಾರತದ ಗಡಿಯೊಳಗೆ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

    ಜಮ್ಮು- ಕಾಶ್ಮೀರದ ನೌಶೇರಾ ವಲಯದಲ್ಲಿ ಪಾಕಿಸ್ತಾನದ ಮೂರು ಯುದ್ಧ ವಿಮಾನ ಗಡಿ ಉಲ್ಲಂಘನೆ ಮಾಡಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ದಾಳಿ ನಡೆಸುವ ಉದ್ದೇಶದಿಂದ ಭಾರತಕ್ಕೆ ಪ್ರವೇಶಿಸಿತ್ತು. ಪಾಕಿಸ್ತಾನದ ಯುದ್ಧ ವಿಮಾನಗಳು ಪೂಂಚ್ ಹಾಗೂ ರಜೌರಿಯಲ್ಲಿ ಭಾರತೀಯ ಸೇನೆಯ ಪೋಸ್ಟ್ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದ ದಾಳಿಗೆ ಪಾಕಿಸ್ತಾನದ ಎಫ್ -16 ವಿಮಾನ ಉಡೀಸ್

    ಪಾಕಿಸ್ತಾನ ಯುದ್ಧ ವಿಮಾನ ಪೂಂಚ್ ಹಾಗೂ ರಜೌರಿಯಲ್ಲಿ ಬಾಂಬ್ ದಾಳಿ ಮಾಡಿದ್ದು, ಯಾವ ಪ್ರದೇಶ ಹಾನಿಯಾಗಿದೆ ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಪಾಕಿಸ್ತಾನ ಬಾಂಬ್ ದಾಳಿ ಮಾಡಿದ ಬಳಿಕ ಭಾರತ ಪ್ರತಿ ದಾಳಿ ನಡೆಸಿದೆ. ಭಾರತ ಪ್ರತಿ ದಾಳಿ ನಡೆಸುತ್ತಿದ್ದಂತೆ ಪಾಕಿಸ್ತಾನದ ಯುದ್ಧ ವಿಮಾನ ಅಲ್ಲಿಂದ ಕಾಲ್ಕಿತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿಜಮ್ಮು ಕಾಶ್ಮೀರದಲ್ಲಿ ಮಿಗ್ ವಿಮಾನ ಪತನ – ಇತ್ತ ಪಾಕಿಸ್ತಾನದ ಯುದ್ಧ ವಿಮಾನ ಭಾರತಕ್ಕೆ ಪ್ರವೇಶ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv