Tag: Air Quality

  • ತೀವ್ರ ಕಳಪೆ ಮಟ್ಟಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ – ಅ.29, 30ರಂದು ಕೃತಕ ಮಳೆ ಸಾಧ್ಯತೆ

    ತೀವ್ರ ಕಳಪೆ ಮಟ್ಟಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ – ಅ.29, 30ರಂದು ಕೃತಕ ಮಳೆ ಸಾಧ್ಯತೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಸೋಮವಾರದಿಂದ ಪಶ್ಚಿಮದ ಅಡಚಣೆಯಿಂದಾಗಿ ಕನಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಪಶ್ಚಿಮದ ಅಡಚಣೆಯಿಂದಾಗಿ ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ, ದೆಹಲಿ ಸರ್ಕಾರ (Delhi Government) ಅ.29 ರಿಂದ 2 ದಿನಗಳ ಕಾಲ ಕೃತಕ ಮಳೆ ಸುರಿಸುವ ಯೋಜನೆ ಪ್ರಕಟಿಸಿದೆ.

    ಹೌದು. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಆನಂದ್‌ ವಿಹಾರ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ (AQI) 420 ನಷ್ಟಿದೆ. ಇಂದು ಬೆಳಗ್ಗೆ ಕೂಡ ವಾಯುಗುಣಮಟ್ಟ ತೀವ್ರ ಕಳಪೆ ಮಟ್ಟದಲ್ಲಿ ಕಂಡುಬಂದಿದೆ. ಪರಿಸ್ಥಿತಿ ಹದಗೆಡುತ್ತಿರುವುದರಿಂದ ದೆಹಲಿ ಸರ್ಕಾರ ಮುಂದಿನ ವಾರದಲ್ಲಿ 2 ದಿನಗಳ ಕಾಲ ಕೃತಕ ಮಳೆಗೆ (Artificial Rain) ಸುರಿಸುವ ಯೋಜನೆ ಹಾಕಿಕೊಂಡಿದೆ.

    ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಅಕ್ಟೋಬರ್ 28 ಎಂದು ಮೋಡಬಿತ್ತನೆ ನಡೆಯಲಿದೆ. ಪರಿಸ್ಥಿತಿ ಅನುಕೂಲಕರವಾಗಿದ್ದರೆ, ಅ.29 ಮತ್ತು 30 ರಂದು ದೆಹಲಿಯಲ್ಲಿ ಮೊದಲ ಕೃತಕ ಮಳೆ ಸುರಿಯಲಿದೆ.

    ಆನಂದ್‌ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 420 ದಾಖಲಾಗಿದ್ದರೆ, ಇತರ ಪ್ರದೇಶಗಳು ಮಾಲಿನ್ಯ ಮಟ್ಟದಲ್ಲಿ ಸ್ವಲ್ಪ ಚೇತರಿಕೆ ಕಂಡಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಲೋಧಿ ರಸ್ತೆಯಲ್ಲಿ ತುಂಬಾ ಕಳಪೆ’ ವರ್ಗದಲ್ಲಿ 287 ದಾಖಲಾಗಿದ್ದರೆ, ಇಂಡಿಯಾ ಗೇಟ್‌ನಲ್ಲಿ 325, ವಿವೇಕ್ ವಿಹಾರದಲ್ಲಿ 205 ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಹೀಗಾಗಿ ಹಲವು ಪ್ರದೇಶಗಳಲ್ಲಿ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

    ಗುರುವಾರ ಬುರಾರಿ ಪ್ರದೇಶದಲ್ಲಿ ಕೃತಕ ಮಳೆ ಪರೀಕ್ಷೆ ನಡೆಸಲಾಗಿತ್ತು. ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ಡ್‌ ಅನ್ನು ವಿಮಾನದಿಂದ ಸಣ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿತ್ತು.

  • ಮಳೆಯಿಂದ ಸುಧಾರಿಸಿದ ವಾಯು ಗುಣಮಟ್ಟ – ದೆಹಲಿಯಲ್ಲಿ ಸದ್ಯಕ್ಕಿಲ್ಲ ಸಮ ಬೆಸ ಯೋಜನೆ

    ಮಳೆಯಿಂದ ಸುಧಾರಿಸಿದ ವಾಯು ಗುಣಮಟ್ಟ – ದೆಹಲಿಯಲ್ಲಿ ಸದ್ಯಕ್ಕಿಲ್ಲ ಸಮ ಬೆಸ ಯೋಜನೆ

    ನವದೆಹಲಿ: ಗುರುವಾರ ರಾತ್ರಿ ಸುರಿದ‌ ಮಳೆಯಿಂದಾಗಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ (Air Quality) ಪ್ರಮಾಣ ಸುಧಾರಿಸಿದ್ದು, ಸದ್ಯಕ್ಕೆ ಸಮ-ಬೆಸ (Odd-Even) ಯೋಜನೆ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರೈ (Gopal Rai) ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಯು ಗುಣಮಟ್ಟ ವೃದ್ದಿಯಾಗಿದೆ ಎಂದರು.

    ಈ ಮೊದಲು ನವೆಂಬರ್ 13 ರಿಂದ ಸಮ ಬೆಸ ಜಾರಿಗೆ ತರಲು ನಿರ್ಧರಿಸಲಾಗಿತ್ತು, ಮಳೆಯಿಂದ ಈ ಪ್ರಸ್ತಾಪ ಕೈಬಿಟ್ಟಿದೆ. ದೀಪಾವಳಿಯ (Deepavali) ನಂತರ ಗಾಳಿಯ ಗುಣಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಗಾಳಿಯ ಗುಣಮಟ್ಟ ಮತ್ತೆ ಹದಗೆಟ್ಟರೆ ಬೆಸ-ಸಮ ಯೋಜನೆಗೆ ಜಾರಿಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.  ಇದನ್ನೂ ಓದಿ: ಒಂದು ಮೀನಿಗೆ 70 ಲಕ್ಷ! ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ

    ಇದಕ್ಕೂ ಮುನ್ನ ಸೋಮವಾರ, ಸಚಿವರು ಬೆಸ-ಸಮ ಯೋಜನೆಯನ್ನು ನವೆಂಬರ್ 13 ಮತ್ತು ನವೆಂಬರ್ 20ರ ನಡುವೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ಈ ಯೋಜನೆಯು ಕಾರುಗಳು ತಮ್ಮ ನೋಂದಣಿ ಸಂಖ್ಯೆಗಳ ಬೆಸ ಅಥವಾ ಕೊನೆಯ ಅಂಕಿಗಳ ಆಧಾರದ ಮೇಲೆ ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

  • ರಾತ್ರೋರಾತ್ರಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ

    ರಾತ್ರೋರಾತ್ರಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಹಲವು ಭಾಗಗಳಾದ ನೋಯ್ಡಾ, ಗುರುಗ್ರಾಮ, ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ತಡರಾತ್ರಿ ಲಘುವಾದ ಮಳೆ (Rain) ಸುರಿದಿದೆ. ಇದರಿಂದ ದೆಹಲಿಯಾದ್ಯಂತ ವಿಷಕಾರಿ ಎನಿಸಿಕೊಂಡಿದ್ದ ಗಾಳಿಯ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ.

    ಕರ್ತವ್ಯ ಪಥ, ಐಟಿಒ ಮತ್ತು ದೆಹಲಿ-ನೋಯ್ಡಾ ಗಡಿಯ ಪ್ರದೇಶದಲ್ಲಿ ಲಘುವಾಗಿ ಮಧ್ಯಮ ತೀವ್ರತೆಯ ಮಳೆ ಸುರಿದಿರುವುದು ವರದಿಯಾಗಿದೆ. ಇದು ಹವಾಮಾನದಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಿದೆ. ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 85 ದಾಖಲಾಗಿದೆ. ಇದು ಗಾಳಿ ಗುಣಮಟ್ಟದ ಸುಧಾರಣೆಯಾಗಿದ್ದು, ಉತ್ತಮ ವಿಭಾಗದಲ್ಲಿ ಬರುತ್ತದೆ.

    ನಗರದಲ್ಲಿ ಉಂಟಾಗಿದ್ದ ತೀವ್ರ ವಾಯುಮಾಲಿನ್ಯವನ್ನು ತಗ್ಗಿಸಲು ನವೆಂಬರ್ 20-21 ರಂದು ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರದ ಯೋಜಿಸಿತ್ತು. ಇದೀಗ ಸುರಿದಿರುವ ಮಳೆ ತಾತ್ಕಾಲಿಕ ಪರಿಹಾರ ನೀಡಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ. ಇದನ್ನೂ ಓದಿ: ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಎಲ್‌ಇಟಿ ಕಮಾಂಡರ್‌ಗೆ ಗುಂಡಿಕ್ಕಿ ಹತ್ಯೆ

    ದೆಹಲಿ-ಎನ್‌ಸಿಆರ್ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆ ಭಾಗಶಃ ಮೋಡ ಕವಿದ ವಾತಾವರಣ, ಕೊಂಚ ಮಂಜು ಮುಸುಕಿದ ವಾತಾವರಣವಿರಲಿದೆ. ಒಂದೆರಡು ಪ್ರದೇಶಗಳಲ್ಲಿ ಹಗುರ ಇಲ್ಲವೇ ತುಂತುರು ಮಳೆಯ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ 30 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ದೆಹಲಿಯ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ವ್ಯಕ್ತಿ ಬಲಿ

  • ತೀವ್ರ ಸ್ಥಿತಿಯಲ್ಲಿ ಗಾಳಿ ಗುಣಮಟ್ಟ – ನ.10 ರವರೆಗೆ ದೆಹಲಿಯ ಪ್ರಾಥಮಿಕ ಶಾಲೆಗಳು ಕ್ಲೋಸ್

    ತೀವ್ರ ಸ್ಥಿತಿಯಲ್ಲಿ ಗಾಳಿ ಗುಣಮಟ್ಟ – ನ.10 ರವರೆಗೆ ದೆಹಲಿಯ ಪ್ರಾಥಮಿಕ ಶಾಲೆಗಳು ಕ್ಲೋಸ್

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಗಾಳಿ ಗುಣಮಟ್ಟ (Air Quality) ಕಳವಳಕಾರಿ ರೀತಿಯಲ್ಲಿ ಹದಗೆಟ್ಟಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು (Primary Schools) ನವೆಂಬರ್ 10 ರವರೆಗೆ ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ.

    ಈ ಬಗ್ಗೆ ದೆಹಲಿ ಶಿಕ್ಷಣ ಸಚಿವೆ ಹಾಗೂ ಆಪ್ ನಾಯಕಿ ಅತಿಶಿ ಭಾನುವಾರ ಎಕ್ಸ್‌ನಲ್ಲಿ ಘೋಷಿಸಿದ್ದಾರೆ. 6 ರಿಂದ 12 ಗ್ರೇಡ್‌ನ ಶಾಲೆಗಳಿಗೆ ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತಿದೆ ಎಂದು ಅತಿಶಿ ತಿಳಿಸಿದ್ದಾರೆ.

    ಇದಕ್ಕೂ ಮೊದಲು ದೆಹಲಿ ಸರ್ಕಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 2 ರವರೆಗೆ ಮುಚ್ಚಲು ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ್ ಎಕ್ಸ್‌ನಲ್ಲಿ ಬರೆದಿದ್ದು, ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದರು. ಇದನ್ನೂ ಓದಿ: ನಾಪತ್ತೆಯಾಗಿರೋ 3 ಬೀದಿ ನಾಯಿಗಳಿಗಾಗಿ ತೀವ್ರ ಹುಡುಕಾಟ – ಹುಡುಕಿ ಕೊಟ್ಟವರಿಗೆ 35 ಸಾವಿರ ಬಹುಮಾನ!

    ಶುಕ್ರವಾರದಂದು ದೆಹಲಿಯ ಗಾಳಿಯ ಗುಣಮಟ್ಟ ‘ತೀವ್ರ’ ವರ್ಗಕ್ಕೆ ಕುಸಿದಿದೆ. ಅಂದಿನಿಂದ ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳು ಕಾಣಿಸಿಲ್ಲ. ಭಾನುವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರ ರಾಜಧಾನಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 460 ದಾಖಲಿಸಿದೆ. ಇದು ‘ತೀವ್ರ’ ವಿಭಾಗಕ್ಕೆ ಸೇರುತ್ತದೆ. ಶನಿವಾರ ದೆಹಲಿಯ ಸರಾಸರಿ ಎಕ್ಯುಐ 415 ಇತ್ತು.

    ರಾಷ್ಟ್ರ ರಾಜಧಾನಿ ಪ್ರದೇಶದ (NCR) ಭಾಗವಾಗಿರುವ ದೆಹಲಿಯ ನೆರೆಯ ನಗರಗಳಾದ ನೋಯ್ಡಾ ಮತ್ತು ಗುರುಗ್ರಾಮದಲ್ಲಿಯೂ ಕೂಡ ಶುಕ್ರವಾರದಿಂದ ಗಾಳಿಯ ಗುಣಮಟ್ಟ ‘ತೀವ್ರ’ ವರ್ಗಗೆ ಸೇರಿದೆ. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು

  • ಮುಂದಿನ ಪೀಳಿಗೆ ಬಗ್ಗೆ ಯೋಚಿಸಿ – ವಾಯು ಗುಣಮಟ್ಟ ಕುಸಿತದ ಬಗ್ಗೆ ರೋಹಿತ್‌ ಶರ್ಮಾ ಬೇಸರ

    ಮುಂದಿನ ಪೀಳಿಗೆ ಬಗ್ಗೆ ಯೋಚಿಸಿ – ವಾಯು ಗುಣಮಟ್ಟ ಕುಸಿತದ ಬಗ್ಗೆ ರೋಹಿತ್‌ ಶರ್ಮಾ ಬೇಸರ

    ಮುಂಬೈ: ವಾಣಿಜ್ಯ ನಗರಿಯಾದ ಮುಂಬೈ ಮತ್ತು ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿತದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

    ಬಾಂಬೆ ಹೈಕೋರ್ಟ್ ಮುಂಬೈನ (Mumbai) ವಾಯು ಗುಣಮಟ್ಟವನ್ನು (Air Quality) ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಾರಂಭಿಸಿದೆ. ಈ ಬೆನ್ನಲ್ಲೇ ಮುಂಬೈನ ವಾಂಖೆಡೆ (Mumbai Wankhede Stadium) ಮತ್ತು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ (ನ.2) ಮತ್ತು ಸೋಮವಾರ (ನ.6) ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಪಟಾಕಿ ಬಳಸುವುದನ್ನು ಬಿಸಿಸಿಐ (BCCI) ನಿಷೇಧಿಸಿದೆ.

    ಈ ನಡುವೆ ಇಲ್ಲಿನ ವಾಯು ಗುಣಮಟ್ಟ ಕುಸಿದ ಬಗ್ಗೆ ಮಾತನಾಡಿರುವ ರೋಹಿತ್‌ ಶರ್ಮಾ, ನಾನು ಯಾವಾಗಲೂ ವಾಯು ಮಾಲಿನ್ಯದ ಬಗ್ಗೆ ಮಾತನಾಡ್ತೇನೆ, ಜನರನ್ನ ಎಜುಕೇಟ್‌ ಮಾಡ್ತೇನೆ. ಏಕೆಂದರೆ ನಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

    ಮುಂಬೈ ಮತ್ತು ದೆಹಲಿಯಲ್ಲಿ (New Delhi) ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ನಗರಗಳಲ್ಲಿ ನಡೆಯಲಿರುವ ಪಂದ್ಯಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೂರವುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ಕಾರ್ಯದರ್ಶಿ ಜಯ್‌ ಶಾ ಬುಧವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India), ಶ್ರೀಲಂಕಾ ವಿರುದ್ಧ, ಸೋಮವಾರ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ (Sri Lanka) ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನಲ್ಲಿ ನವೆಂಬರ್‌ 7 ರಂದು ಆಸೀಸ್‌ ಮತ್ತು ಅಫ್ಘಾನಿಸ್ತಾನ ನಡುವೆ ಮತ್ತು ನವೆಂಬರ್‌ 15ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದೆ.

    ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ತಿಳಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ. ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಂಡಳಿಯು ಪರಿಸರ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದೆ ಎಂದು ಜಯ್‌ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂದು ಸಿಂಹಳಿಯರ ಸವಾಲ್‌ – ಸೆಮೀಸ್‌ಗೆ ಲಗ್ಗೆಯಿಡಲು ತವಕ; ಲಂಕಾ ಪಂದ್ಯಕ್ಕೂ ಪಾಂಡ್ಯ ಔಟ್‌? 

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಮಂಗಳವಾರ ಮುಂಬೈನಲ್ಲಿ ಗಾಳಿಯ ಗುಣಮಟ್ಟದ ಎಕ್ಯೂಐ (AQI) ರೀಡಿಂಗ್ 172 (ಮಧ್ಯಮ) ಆಗಿದ್ದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 260ರ ಆತಂಕಕಾರಿ ಮಟ್ಟವನ್ನು ಮುಟ್ಟಿತ್ತು. ದೆಹಲಿಯಲ್ಲಿ, ಈ ಅಕ್ಟೋಬರ್‌ನಲ್ಲಿ ವಾಯು ಗುಣಮಟ್ಟವು 2020ರಿಂದ ಅತ್ಯಂತ ಕೆಟ್ಟ ಹಂತಕ್ಕೆ ತಲುಪಿದೆ ಎಂದು ಹೇಳಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

    ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್‌ ಮಾಡಿದ್ದೇಕೆ?

    ನವದೆಹಲಿ: ಮುಂಬೈನ ವಾಂಖೆಡೆ (Mumbai Wankhede Stadium) ಮತ್ತು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ (ನ.2) ಮತ್ತು ಸೋಮವಾರ (ನ.6) ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಪಟಾಕಿ ಬಳಸುವುದನ್ನು ಬಿಸಿಸಿಐ (BCCI) ನಿಷೇಧಿಸಿದೆ.

    ಬಾಂಬೆ ಹೈಕೋರ್ಟ್ ಮುಂಬೈನ (Mumbai) ವಾಯು ಗುಣಮಟ್ಟವನ್ನು (Air Quality) ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಾರಂಭಿಸಿದ ಬಳಿಕ ಬಿಸಿಸಿಐ (BCCI) ಈ ನಿರ್ಧಾರ ಪ್ರಕಟಿಸಿದೆ. ಮುಂಬೈ ಮತ್ತು ದೆಹಲಿಯಲ್ಲಿ (New Delhi) ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಈ ನಗರಗಳಲ್ಲಿ ನಡೆಯಲಿರುವ ಪಂದ್ಯಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ದೂರವುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ಕಾರ್ಯದರ್ಶಿ ಜಯ್‌ ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India), ಶ್ರೀಲಂಕಾ ವಿರುದ್ಧ, ಸೋಮವಾರ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ (Sri Lanka) ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನಲ್ಲಿ ನವೆಂಬರ್‌ 7 ರಂದು ಆಸೀಸ್‌ ಮತ್ತು ಅಫ್ಘಾನಿಸ್ತಾನ ನಡುವೆ ಮತ್ತು ನವೆಂಬರ್‌ 15ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದೆ.

    ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ತಿಳಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರುವುದಿಲ್ಲ. ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಂಡಳಿಯು ಪರಿಸರ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದೆ ಎಂದು ಜಯ್‌ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ಪಿಸಿಬಿಗೆ ಪಾಕಿಸ್ತಾನ ವಿಶ್ವಕಪ್ ಗೆಲ್ಲುವುದು ಬೇಕಿಲ್ಲ: ಪಾಕ್ ಆಟಗಾರನ ಆರೋಪ

    ಮುಂಬೈ ಮತ್ತು ನವದೆಹಲಿ ಎರಡೂ ಕಡೆ ಗಾಳಿಯ ಗುಣಮಟ್ಟದ ಬಗೆಗೆ ಬಿಸಿಸಿಐ ಕಾಳಜಿ ವ್ಯಕ್ತಪಡಿಸಿದೆ. ಕ್ರಿಕೆಟ್‌ನ ಸಂಭ್ರಮಾಚರಣೆಗೆ ಸೂಕ್ತವಾದ ರೀತಿಯಲ್ಲಿ ಐಸಿಸಿ ವಿಶ್ವಕಪ್ (ICC World) ಆಯೋಜಿಸಲು ನಾವು ಶ್ರಮಿಸುತ್ತೇವೆ. ಹಾಗೆಯೇ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಫೇವ್ರೆಟ್‌ ಕ್ರಿಕೆಟರ್‌ ಕೆ.ಎಲ್‌ ರಾಹುಲ್‌ ಅಲ್ಲ ಎಂದ ಸುನೀಲ್‌ ಶೆಟ್ಟಿ

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಮಂಗಳವಾರ ಮುಂಬೈನಲ್ಲಿ ಗಾಳಿಯ ಗುಣಮಟ್ಟದ ಎಕ್ಯೂಐ (AQI) ರೀಡಿಂಗ್ 172 (ಮಧ್ಯಮ) ಆಗಿದ್ದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 260ರ ಆತಂಕಕಾರಿ ಮಟ್ಟವನ್ನು ಮುಟ್ಟಿದೆ. ದೆಹಲಿಯಲ್ಲಿ, ಈ ಅಕ್ಟೋಬರ್‌ನ ಗಾಳಿಯ ಗುಣಮಟ್ಟವು 2020ರಿಂದ ಕೆಟ್ಟದ್ದಾಗಿದೆ. ಮುಂಬೈ ಮತ್ತು ದೆಹಲಿಯನ್ನು ಪಟಾಕಿ ಮುಕ್ತ ಮಾಡುವ ಮೂಲಕ ಕ್ರಿಕೆಟ್ ಮಂಡಳಿಯು ಉತ್ತಮ ಸಂದೇಶ ನೀಡುತ್ತಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಏಕದಿನ ವಿಶ್ವಕಪ್ ಪಂದ್ಯಗಳ ವೇಳೆ ಪಟಾಕಿ ಸಿಡಿಸುವುದು ಸಂಭ್ರಮದ ಒಂದು ಭಾಗವಾಗಿದೆ. ಲೈಟ್‌ ಶೋ, ಸಿಡಿಮದ್ದಿನ ಪ್ರದರ್ಶನ ಸಾಕಷ್ಟು ಗಮನ ಸೆಳೆಯುತ್ತದೆ. ಆದ್ರೆ ಬಾಂಬೆ ಹೈಕೋರ್ಟ್ ಮಂಗಳವಾರ ಮುಂಬೈನಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯ ಬಗ್ಗೆ ಸ್ವಯಂಪ್ರೇರಿತವಾಗಿ (ಸ್ವತಃ) ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ಬೆನ್ನಲ್ಲೇ ಬಿಸಿಸಿಐ ಪಟಾಕಿ ಸಿಡಿಸುವುದನ್ನು ಬ್ಯಾನ್‌ ಮಾಡಿದೆ. ಇದನ್ನೂ ಓದಿ: ಕಿಂಗ್‌ ಕೊಹ್ಲಿ, ರೋಹಿತ್‌ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಳಿಗಾಲಕ್ಕೂ ಮುನ್ನ ದೆಹಲಿಯ ಗಾಳಿ ಗುಣಮಟ್ಟ ಕುಸಿತ

    ಚಳಿಗಾಲಕ್ಕೂ ಮುನ್ನ ದೆಹಲಿಯ ಗಾಳಿ ಗುಣಮಟ್ಟ ಕುಸಿತ

    ನವದೆಹಲಿ: ಚಳಿಗಾಲ ಆರಂಭಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಗಾಳಿಯ ಗುಣಮಟ್ಟ (Air Quality) ತೀವ್ರ ಪ್ರಮಾಣದಲ್ಲಿ ಕುಸಿಯಲು ಆರಂಭಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (Air Quality Index) 224 ದಾಖಲಾಗಿದೆ.

    ಕಳೆದ ಗುರುವಾರದಿಂದ ವಾತಾವರಣದಲ್ಲಿ ತಾಪಮಾನ ಕುಸಿತ ಕಂಡು ಬಂದಿದೆ. ತಾಪಮಾನ 15.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದಾಂಡಿಯಾ ಹೆಸರಲ್ಲಿ ಡ್ರಗ್ಸ್ ಪಾರ್ಟಿನಾ? – ಮಂಗಳೂರಿನಲ್ಲಿ VHP ವಿರೋಧ

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರದೊಂದಿಗೆ ರಾಜ್ಯಗಳ ಜಂಟಿ ಸಭೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯಲ್ಲಿ ಪಟಾಕಿ ಹಾಗೂ ಎನ್‍ಸಿಆರ್ ಭಾಗದಲ್ಲಿ ಡಿಸೆಲ್ ಬಸ್‍ಗಳ ಸಂಚಾರ ರದ್ದು ಮಾಡಲು ಕೇಂದ್ರ ಪರಿಸರ ಸಚಿವಾಲಯವನ್ನು ಒತ್ತಾಯಿಲಾಗಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‍ಮೆಂಟ್ ವರದಿಯಲ್ಲಿ, ದೆಹಲಿಯ ಮಾಲಿನ್ಯದ 31% ರಾಷ್ಟ್ರ ರಾಜಧಾನಿಯೊಳಗಿನ ಮೂಲಗಳಿಂದ ಹುಟ್ಟಿಕೊಂಡರೆ, 69% ಎನ್‍ಸಿಆರ್ ರಾಜ್ಯಗಳ ಮೂಲಗಳಿಂದ ಬರುತ್ತಿದೆ ಎಂದು ಉಲ್ಲೇಖಿಸಲಾಗಿದೆ.

    ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನವು ಟಾಪ್ 10 ಅತ್ಯಂತ ಕಲುಷಿತ ನಗರಗಳನ್ನು ಬಹಿರಂಗಪಡಿಸಿತ್ತು. ದೆಹಲಿಯು ಭಾರತದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ಎನ್‍ಸಿಆರ್‍ನ ದೆಹಲಿ, ಫರಿದಾಬಾದ್, ಗಾಜಿಯಾಬಾದ್, ನೊಯ್ಡಾ ಮತ್ತು ಮೀರತ್ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ನಂತರದ ಸ್ಥಾನಗಳನ್ನು ಬಿಹಾರದ ಪಾಟ್ನಾ ಮತ್ತು ಮುಜಾಫರ್‍ಪುರವು ಪಡೆದುಕೊಂಡಿವೆ.

    ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 0 ಮತ್ತು 50ರ ನಡುವಿನ ಗಾಳಿಯ ಗುಣಮಟ್ಟ ಪರಿಶೀಲನೆಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ ಮತ್ತು 401 ಮತ್ತು 450 ಮೀರಿದಾಗ ತೀವ್ರ ಕಳಪೆ ಎಂದು ಗುರುತಿಸಲಾಗುತ್ತದೆ. ಇದನ್ನೂ ಓದಿ: ನಟಿ ಜಯಪ್ರದಾ ಶಿಕ್ಷೆ ರದ್ದು ಮಾಡಲು ಹೈಕೋರ್ಟ್ ನಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿಯಲ್ಲಿ ಸೀಸನ್‌ನಲ್ಲೇ ಇಂದು ಕಡಿಮೆ ಉಷ್ಣಾಂಶ, ಕಳಪೆ ಗುಣಮಟ್ಟದ ಗಾಳಿ

    ದೆಹಲಿಯಲ್ಲಿ ಸೀಸನ್‌ನಲ್ಲೇ ಇಂದು ಕಡಿಮೆ ಉಷ್ಣಾಂಶ, ಕಳಪೆ ಗುಣಮಟ್ಟದ ಗಾಳಿ

    ನವದೆಹಲಿ: ಭಾರತದ ಹವಾಮಾನ ಇಲಾಖೆ ಶನಿವಾರ ಬೆಳಗ್ಗಿನ ಹವಾಮಾನ ವರದಿಯನ್ನು ಪ್ರಕಟಿಸಿದ್ದು, ಇದು ಈ ಬಾರಿಯ ಸೀಸನ್‌ನಲ್ಲೇ ಅತೀ ಕಡಿಮೆ ಉಷ್ಣಾಂಶವನ್ನು ದಾಖಲು ಮಾಡಿದೆ ಎಂಬುದು ತಿಳಿದು ಬಂದಿದೆ. ಇಂದು ಬೆಳಗ್ಗೆ 8.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

    ದೆಹಲಿಯಲ್ಲಿ ಮುಂಜಾನೆ 8 ಗಂಟೆಯ ಸುಮಾರಿಗೆ ಗಾಳಿಯ ಗುಣಮಟ್ಟ (ಎಕ್ಯುಐ) 302 ಇದ್ದು, ಇದು ಅತ್ಯಂತ ಕಳಪೆ ಅಥವಾ ಉಸಿರಾಡಲು ಯೋಗ್ಯವಲ್ಲದ ವಿಭಾಗಕ್ಕೆ ಸೇರುತ್ತದೆ. ನೆರೆಯ ಫರಿದಾಬಾದ್ 266, ಗಾಜಿಯಾಬಾದ್ 262, ಗ್ರೇಟರ್ ನೋಯ್ಡಾ 224, ಗುರುಗ್ರಾಮ 288 ಮತ್ತು ನೋಯ್ಡಾ 254 ಹೀಗೆ ಕಳಪೆ ವಿಭಾಗಕ್ಕೆ ಸೇರುವ ಗಾಳಿಯ ಗುಣಮಟ್ಟವನ್ನು ಹೊಂದಿದೆ. ಇದನ್ನೂ ಓದಿ: ಯೂಟ್ಯೂಬ್‍ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಬಾಲಿವುಡ್ ನಟಿ

    ಎಕ್ಯುಐ ಪ್ರಕಾರ 0 ಇಂದ 50ರ ವರೆಗಿನ ಗಾಳಿಯ ಗುಣಮಟ್ಟವನ್ನು ಉತ್ತಮ ವಿಭಾಗಕ್ಕೆ ಸೇರಿಸಲಾಗುತ್ತದೆ. 51 ರಿಂದ 100 ವರೆಗಿನದ್ದನ್ನು ತೃಪ್ತಿದಾಯಕ ಎನ್ನಲಾಗುತ್ತದೆ. 101 ರಿಂದ 200 ವರೆಗಿನ ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ ಹಾಗೂ ನಂತರ ಬರುವ 401 ರಿಂದ 500 ಗಾಳಿಯ ಗುಣಮಟ್ಟವನ್ನು ತೀವ್ರ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ದಿಶಾ ಪಟಾನಿ ಹಾಟ್ ಅವತಾರಕ್ಕೆ ಟೈಗರ್ ಶ್ರಾಫ್ ಹೇಳಿದ್ದೇನು ಗೊತ್ತಾ?

    ಶುಕ್ರವಾರ ದೆಹಲಿಯ 24 ಗಂಟೆಗಳ ಎಕ್ಯುಐ ಸರಾಸರಿ 314 ಆಗಿತ್ತು. ಇದೇ ರೀತಿಯಾಗಿ ಈ ಸೀಸನ್‌ನಲ್ಲಿ ದೆಹಲಿಯ ಅತ್ಯಂತ ಕನಿಷ್ಟ ತಾಪಮಾನ ಗುರುವಾರ ದಾಖಲಾಗಿತ್ತು. 8.4 ಡಿಗ್ರಿ ಸೆಲ್ಸಿಯಸ್ ಇತ್ತು.