Tag: air pistol

  • Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

    Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

    ಪ್ಯಾರಿಸ್‌: ಪ್ರಸ್ತುತ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ (Paris Paralympics 2024) ಕ್ರೀಡಾಕೂಟದಲ್ಲಿ 3ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ.

    ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (Air Pistol) ಸ್ಪರ್ಧೆಯಲ್ಲಿ ಶೂಟರ್ ರುಬಿನಾ ಫ್ರಾನ್ಸಿಸ್‌ (Rubina Francis) ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ 5ನೇ ಪದಕವಾಗಿದೆ. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಅಖಾಡಕ್ಕಿಳಿಯೋದು ಫಿಕ್ಸ್‌ – ಸುಳಿವು ಕೊಟ್ಟ ರೈನಾ

    22 ಶಾಟ್‌ಗಳ ಬಳಿಕ 211.1 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದ ರುಬಿನಾ ಬೆಳ್ಳಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದ್ರೆ, ಟರ್ಕಿಯ ಐಸೆಲ್ ಓಜ್ಗಾನ್, ರುಬಿನಾರನ್ನು ಹಿಂದಿಕ್ಕಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಂತಿಮವಾಗಿ ರುಬಿನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇರಾನ್‌ನ ಸರೆಹ್ ಜವನ್‌ಮಾರ್ಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದನ್ನೂ ಓದಿ: Paris 2024 Paralympics | ಭಾರತಕ್ಕೆ ಡಬಲ್‌ ಧಮಾಕ – ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ ಶೂಟರ್ಸ್‌

    ಇನ್ನೂ ಭಾರತೀಯ ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi) ಕೂಡ ಆಕ್ಷನ್‌ನಲ್ಲಿದ್ದಾರೆ. ಗುರುವಾರ ನಡೆದ ಆರ್ಮ್‌ಲೆಸ್ ಬಿಲ್ಲುಗಾರ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ 2ನೇ ಸ್ಥಾನ ಗಳಿಸಿರುವ ಶೀತಲ್‌ ದೇವಿ ನೇರವಾಗಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

  • ಒಲಿಂಪಿಕ್ಸ್‌ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್‌ – ಬ್ರ್ಯಾಂಡ್‌ ಮೌಲ್ಯ 6 ಪಟ್ಟು ಹೆಚ್ಚಳ

    ಒಲಿಂಪಿಕ್ಸ್‌ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್‌ – ಬ್ರ್ಯಾಂಡ್‌ ಮೌಲ್ಯ 6 ಪಟ್ಟು ಹೆಚ್ಚಳ

    ಪ್ಯಾರಿಸ್‌: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympic 2024) ಎರಡು ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಮನು ಭಾಕರ್‌ಗೆ (Manu Bhaker) ಈಗ ಜಾಹೀರಾತು ಸಂಸ್ಥೆಗಳಿಂದ ಭರ್ಜರಿ ಆಫರ್‌ಗಳು ಬರುತ್ತಿವೆ ಎಂದು ವರದಿಯಾಗಿದೆ.

    ಮನು ಭಾಕರ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿರುವಾಗಲೇ ಸುಮಾರು 40 ಜಾಹೀರಾತು ಕಂಪನಿಗಳು (Advertising Companies) ಅವರನ್ನು ಸಂಪರ್ಕಿಸಿವೆ ಕೋಟಿ ಕೋಟಿ ರೂ. ಮೌಲ್ಯದ ಒಂದೆರಡು ಒಪ್ಪಂದಗಳು ಸಹ ಮುಗಿದಿವೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಮನು ಭಾಕರ್‌ ಅವರ ಬ್ರ್ಯಾಂಡ್‌ ಮೌಲ್ಯವು 20-25 ಲಕ್ಷ ರೂ.ನಷ್ಟಿತ್ತು. ಆದರೀಗ 6-7 ಪಟ್ಟು ಮೌಲ್ಯ ಹೆಚ್ಚಾಗಿದೆ ಎಂದು ಹೇಳಲಾಗಿದೆ.

    22 ವರ್ಷ ವಯಸ್ಸಿನಲ್ಲಿ ಮನು ಭಾಕರ್‌ ಅವರಿಗೆ ಸದ್ಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಒಲಿದಿದ್ದು, 3ನೇ ಪದಕ ಕೊಂಚದಲ್ಲೇ ಕೈತಪ್ಪಿದೆ. ಹೀಗಿರುವಾಗಲೇ ಕಳೆದ 2-3 ದಿನಗಳಲ್ಲಿ ಸುಮಾರು 40 ಬ್ರ್ಯಾಂಡ್‌ ಕಂಪನಿಗಳು ಅವರನ್ನ ಸಂಪರ್ಕಿಸಿ ಅನುಮೋದನೆ ಕೇಳಿವೆ. ಒಂದೆರಡು ಕಂಪನಿಗಳ ಒಪ್ಪಂದಗಳು ಮುಕ್ತಾಯಗೊಂಡಿದ್ದು, ಉಳಿದ ಕಂಪನಿಗಳು ಅವರ ದೀರ್ಘಾವಧಿ ಹಾಗೂ ಅಲ್ಪಾವಧಿ ಕಾಂಟ್ರ್ಯಾಕ್ಟ್‌ಗೆ ಅನುಮೋದನೆ ಪಡೆಯಲು ಕಾಯುತ್ತಿವೆ ಎಂದು ಸ್ಫೋರ್ಟ್ಸ್‌ & ಎಂಟರ್‌ಟೈನ್‌ಮೆಂಟ್ ಕಂಪನಿ ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: Paris Olympics | ಭಾರತಕ್ಕೆ ಮೂರನೇ ಪದಕ- ಕಂಚು ಗೆದ್ದ ಸ್ವಪ್ನಿಲ್

    ಈ ಹಿಂದೆಯು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ನೀರಜ್‌ ಚೋಪ್ರಾ ಅವರ ಬ್ರ್ಯಾಂಡ್‌ ಮೌಲ್ಯ ಹೆಚ್ಚಾಗಿತ್ತು. ಅದೇ ರೀತಿ ಮನು ಭಾಕರ್‌ ಪ್ರಸಕ್ತ ವರ್ಷದಲ್ಲಿ ದೇಶದ ಬ್ರ್ಯಾಂಡ್‌ ಆಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮನು ಭಾಕರ್‌ಗೆ ಮೋದಿ ಕರೆ – ಗಣ್ಯರಿಂದ ಅಭಿನಂದನೆಗಳ ಮಹಾಪೂರ

    ಕೈ ತಪ್ಪಿದ ಹ್ಯಾಟ್ರಿಕ್‌ ಸಾಧನೆ:
    ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ದಾಖಲೆ ಬರೆದಿದ್ದ ಭಾರತದ ಮನು ಭಾಕರ್ ಅವರಿಗೆ ಮೂರನೇ ಪದಕ ಜಸ್ಟ್‌ ಮಿಸ್‌ ಆಯಿತು. 25 ಮೀ ಸ್ಫೋರ್ಟ್ಸ್‌ ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ 8 ಸ್ಪರ್ಧಿಗಳಿದ್ದರು. ಉತ್ತಮ ಪ್ರದರ್ಶನ ನೀಡಿದ ಮನು ಭಾಕರ್‌ ಅಂತಿಮವಾಗಿ 4ನೇ ಸ್ಥಾನ ಪಡೆದರು. 3ನೇ ಸ್ಪರ್ಧಿಯೊಂದಿಗೆ ಜಂಟಿಯಾಗಿ 28 ಅಂಕ ಪಡೆದರೂ ಹಂಗೇರಿ ಸ್ಪರ್ಧಿ ಈ ಹಿಂದಿನ ಸುತ್ತಿನಲ್ಲಿ ಮುನ್ನಡೆಯಲ್ಲಿದ್ದ ಕಾರಣ ಮನು ಭಾಕರ್‌ ಅವರ 3ನೇ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. 22 ವರ್ಷದ ಮನು ಭಾಕರ್‌ ಈ ಒಲಿಂಪಿಕ್ಸ್‌ನಲ್ಲಿ ಮನು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್‌ ಮಿಶ್ರ (ಸರಬ್ಜೋತ್‌ಸಿಂಗ್‌ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು.  ಇದನ್ನೂ ಓದಿ: IPL 2025: ಮುಂದಿನ ಐಪಿಎಲ್‌ನಲ್ಲೂ ಮಹಿ ಕಣಕ್ಕಿಳಿಯೋದು ಫಿಕ್ಸ್‌?

  • ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ – ಶೂಟಿಂಗ್‌ನಲ್ಲಿ ಭಾರತಕ್ಕೆ ಕಂಚು

    ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ – ಶೂಟಿಂಗ್‌ನಲ್ಲಿ ಭಾರತಕ್ಕೆ ಕಂಚು

    ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಭಾರತ ಎರಡನೇ ಪದಕವನ್ನು ಪಡೆದುಕೊಂಡಿದೆ. 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಮನು ಭಾಕರ್‌ (Manu Bhaker) ಮತ್ತು ಸರಬ್ಜೋತ್ ಸಿಂಗ್‌ (Sarabjot Singh)  ಕಂಚಿನ ಪದಕ ಗೆದ್ದಿದ್ದಾರೆ.

    ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮನು ಭಾಕರ್‌ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು. ಈಗ ಮಿಶ್ರ ವಿಭಾಗದಲ್ಲೂ ಮನುಭಾಕರ್‌ ಪದಕಕ್ಕೆ ಮುತ್ತಿಟ್ಟಿದ್ದಾರೆ.  ಈ ಮೂಲಕ ಒಂದೇ ಒಲಿಂಪಿಕ್ಸ್‌ (Olympics Games)  ಕ್ರೀಡಾಕೂಟದಲ್ಲಿ ಎರಡು ಪದಕ ಪಡೆದ  ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ದಕ್ಷಿಣ ಕೊರಿಯಾದ ಜೋಡಿಯನ್ನು ಸೋಲಿಸಿ ಭಾರತಕ್ಕೆ 2 ನೇ ಪದಕವನ್ನು ಗೆದ್ದುಕೊಟ್ಟಿದ್ದಾರೆ.

  • Asian Games 2023 – 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ

    Asian Games 2023 – 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ

    ಹ್ಯಾಂಗ್‌ಝೌ: ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಪುರುಷರ 10 ಮೀಟರ್ ಏರ್ ಪಿಸ್ತೂಲ್ (Men’s 10m Air Pistol Team) ಸ್ಪರ್ಧೆಯಲ್ಲಿ ಭಾರತ (India) ತಂಡ ಚಿನ್ನದ ಪದಕ (Gold Medal) ಗೆದ್ದಿದೆ.

    ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ತಂಡ 1734 ಅಂಕಗಳಿಸಿ ಮೊದಲ ಸ್ಥಾನ ಪಡೆಯಿತು.  ಚೀನಾದ 1733 ಅಂಕ ಪಡೆದರೆ ವಿಯೆಟ್ನಾಂನ 1730 ಅಂಕಗಳಿಸಿತು.

    ಮಹಿಳೆಯರ 60 ಕೆಜಿ ವಿಭಾಗದ ವುಶು ಸ್ಪರ್ಧೆಯಲ್ಲಿ ರೋಶಿಬಿನಾ ದೇವಿ ಬೆಳ್ಳಿ ಪದಕ (Silver Medal) ಗೆದ್ದಿದ್ದಾರೆ. ಇದನ್ನೂ ಓದಿ: ಏಕದಿನ ವಿಶ್ವಕಪ್ 2023: ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಪಾಕ್ ನಾಯಕ

    ಭಾರತ 6 ಚಿನ್ನ, 8 ಬೆಳ್ಳಿ, 10 ಕಂಚಿನ ಪದಕವನ್ನು ಗೆಲ್ಲುವುದರೊಂದಿಗೆ ಒಟ್ಟು 24 ಪದಕವನ್ನು ಪಡೆಯುವುದರ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 80 ಚಿನ್ನದ ಪದಕ ಸೇರಿ ಒಟ್ಟು145 ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದ್ದರೆ 19 ಚಿನ್ನ ಸೇರಿ ಒಟ್ಟು 70 ಪದಕ ಗೆದ್ದಿರುವ ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಮನ್ ವೆಲ್ತ್ ನಲ್ಲಿ ಐದರಿಂದ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

    ಕಾಮನ್ ವೆಲ್ತ್ ನಲ್ಲಿ ಐದರಿಂದ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

    ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 8 ಚಿನ್ನ, 4 ಬೆಳ್ಳಿ, 5 ಕಂಚನ್ನು ಪಡೆಯುವ ಮೂಲಕ ಒಟ್ಟು 17 ಪದಕಗಳನ್ನು ಪಡೆದಿದೆ. ಹೀಗಾಗಿ ಇದೀಗ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದೆ. 85 ಪದಕಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

    ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಜೀತುರಾಯ್ 235.1 ಅಂಕಗಳನ್ನು ಗಳಿಸುವುದರ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದೇ ಸ್ಪರ್ಧೆಯಲ್ಲಿ 214.3 ಅಂಕಗಳನ್ನು ಪಡೆಯುವ ಮೂಲಕ ಭಾರತದ ಮತ್ತೋರ್ವ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆಸ್ಟ್ರೇಲಿಯಾದ ಕೆರ್ರಿ ಬೆಲ್ 233.5 ಅಂಕಗಳನ್ನು ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಮತ್ತು ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೋ ಅವರ ನಡುವೆ ತೀವ್ರ ಪೈಪೋಟಿ ನಡೆಯಿತು.

    ಇಬ್ಬರು 247.2 ಅಂಕಗಳನ್ನು ಗಳಿಸಿದರು. ಮಾರ್ಟಿನಾ 10.3 ಮೀಟರ್ ಅಂತರದಲ್ಲಿ ಗುರಿ ಛೇದಿಸಿದರೆ ಮೆಹುಲಿ 9.9 ಮೀಟರ್ ಅಂತರದ ಗುರಿಯನ್ನು ಛೇದಿಸಿದರು. ಹಾಗಾಗಿ ಮೆಹುಲಿ ಘೋಷ್ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

    ಇದೇ ಸ್ಪರ್ಧೆಯಲ್ಲಿ 9.9 ಮೀಟರ್ ಅಂತರದಿಂದ ಗುರಿ ಛೇದಿಸಿದ ಭಾರತದ ಅಪೂರ್ವಿ ಚಂಡೇಲಾ ಅವರು 225.3 ಅಂಕಗಳನ್ನು ಗಳಿಸುವುದರ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.