Tag: air india

  • 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    – ಬೋಯಿಂಗ್ ಮಾರುಕಟ್ಟೆಗೆ ಬಹುದೊಡ್ಡ ಆರ್ಥಿಕ ಹೊಡೆತ ಸಾಧ್ಯತೆ!

    ಅಹಮದಾಬಾದ್: ಬೋಯಿಂಗ್‌ನ 787-ಡ್ರೀಮ್ ಲೈನರ್ (Dreamliner 787) ಮಾಡೆಲ್ ಅತ್ಯಂತ ವಿಶ್ವಾಸಾರ್ಹದ ಜೊತೆಗೆ ಇಂಧನ ದಕ್ಷತೆ, ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. 14 ವರ್ಷಗಳಲ್ಲಿ ಸುಮಾರು 1 ಸಾವಿರ ಡ್ರೀಮ್ ಲೈನರ್ ವಿಮಾನಗಳನ್ನ ಮಾರಾಟ ಮಾಡುವ ಮೂಲಕ ಬೋಯಿಂಗ್ ದಾಖಲೆ ಬರೆದಿದೆ.

    ಸಾರ್ವಕಾಲಿಕ ಅತ್ಯುತ್ತಮ ಮಾರಾಟ ಕಂಡ ವೈಡ್-ಬಾಡಿ ಪ್ಯಾಸೆಂಜರ್ ವಿಮಾನ ಡ್ರೀಮ್ ಲೈನರ್ 100 ಕೋಟಿಗೂ ಹೆಚ್ಚು ಪ್ರಯಾಣಿಕರನ್ನ ಸಾಗಿಸಿದ ವಿಮಾನ ಎಂಬ ಬ್ರ‍್ಯಾಂಡ್ ಅನ್ನು ಅಲ್ಪಾವಧಿಯಲ್ಲಿಯೇ ಪಡೆದಿತ್ತು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಈ ಹಿಂದೆ ಸುರಕ್ಷತೆಯ ಕುರಿತು ಬೋಯಿಂಗ್ (Boeing) ಕಂಪನಿಗೆ ಹಲವು ಸವಾಲುಗಳು ಎದುರಾಗಿದ್ದವು. ಹಲವು ಆರೋಪಗಳನ್ನ ಎದುರಿಸಿದ್ದ ಬೋಯಿಂಗ್‌ನ ಡ್ರೀಮ್ ಲೈನರ್ ಹಾರಾಟವನ್ನ 3 ತಿಂಗಳ ಕಾಲ ವಿಶ್ವದಾದ್ಯಂತ ನಿಷೇಧಿಸಲಾಗಿತ್ತು. ಆರೋಪ, ಸವಾಲುಗಳನ್ನ ಎದುರಿಸಿ ಮತ್ತೆ ವಿಶ್ವಾಸಾರ್ಹತೆ ಗಳಿಸಿದ್ದ ಬೋಯಿಂಗ್ ಪುನಃ ಆಕಾಶಕ್ಕೆ ಚಿಮ್ಮಿತ್ತು. ಆದ್ರೆ ಈಗ ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    ಡ್ರೀಮ್ ಲೈನರ್ ವಿಮಾನದ ಆಯಸ್ಸು 30 ರಿಂದ 50 ವರ್ಷ ಎನ್ನಲಾಗಿದೆ. 210-250 ಸೀಟ್‌ಗಳೊಂದಿಗೆ 9,800 ಮೈಲುಗಳು ಪ್ರಯಾಣಿಸಬಲ್ಲವು. ಆದ್ರೆ ಅಹಮದಾಬಾದ್‌ನಲ್ಲಿ ಉರುಳಿದ ವಿಮಾನ ಆಯಸ್ಸು ಕೇವಲ 11 ವರ್ಷ. ಈ ಹಿಂದೆ ಸುರಕ್ಷತೆ ವಿಚಾರದಲ್ಲಿ ಎದ್ದ ಆರೋಪ, ಸವಾಲುಗಳನ್ನ ಮೆಟ್ಟಿ ನಿಂತು ವ್ಯಾಪಾರವನ್ನ ವಿಸ್ತರಿಸಿಕೊಳ್ತಿದ್ದ ವೇಳೆಯೇ ಬೋಯಿಂಗ್ ಕಂಪನಿಗೆ ಈ ದುರಂತ ದೊಡ್ಡ ಆರ್ಥಿಕ ಹೊಡೆತ ಕೊಡುವ ಭೀತಿ ಶುರುವಾಗಿದೆ. ಅದೇನೇ ಇರಲಿ ಅತಿ ಸುರಕ್ಷತೆಯ ವಿಮಾನ ಎಂದು ಹೇಳಿಕೊಂಡಿದ್ದ ವಿಮಾನ ಪತನಕ್ಕೆ (Plane Crash) ಸಾಕ್ಷಿಯಾಗಿರೋದು ನಿಜಕ್ಕೂ ದುರಂತವೇ ಸರಿ.

  • Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ನಗುಮೊಗದ ಗಗನಸಖಿ ಮನೀಷಾ ಥಾಪಾ (27) ದುರಂತ ಅಂತ್ಯ ಕಂಡಿದ್ದಾರೆ.

    ಮನೀಷಾ ಥಾಪಾ (Manisha Thapa), ನೇಪಾಳ ಮೂಲದವರಾದರೂ, ಹುಟ್ಟಿ ಬೆಳೆದಿದ್ದೆಲ್ಲಾ ಪಾಟ್ನಾದಲ್ಲಿ. ಮೊದಲು ಇಂಡಿಗೋದಲ್ಲಿ ಗ್ರೌಂಡ್ ಸ್ಟಾಫ್ ಆಗಿ ವೃತ್ತಿಜೀವನ ಆರಂಭಿಸಿದ ಅವರು ಬಳಿಕ ಆಕಾಶ್ ಏರ್, ನಂತರ ಏರ್ ಇಂಡಿಯಾ ಸೇರಿದಲ್ಲಿ ಗಗನಸಖಿಯಾಗಿದ್ದರು. ಏರ್ ಇಂಡಿಯಾ ಸೇರಿದ ಬಳಿಕ ಹೆಚ್ಚಾಗಿ ಲಂಡನ್, ಆಸ್ಟ್ರೇಲಿಯಾ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಏರ್ ಇಂಡಿಯಾ ಗಗನಸಖಿಯಾಗಿದ್ದ (Air Hostess) ಮನೀಷಾ ಸದಾ ಹಸನ್ಮುಖಿಯಾಗಿದ್ದರು. ಮನೀಷಾ ಕೋಪ ಮಾಡ್ಕೊಂಡಿದ್ದನ್ನು ನೋಡೇ ಇಲ್ಲ. ಎಲ್ಲದಕ್ಕೂ ನಗುವಿನ ಮೂಲಕವೇ ಉತ್ತರಿಸುತ್ತಿದ್ದಳು. ಅಲ್ಲದೇ ಕಲಿಕೆಯಲ್ಲಿಯೂ ಸದಾ ಮುಂದಿದ್ದರು ಎಂದು ಅವರ ಸ್ನೇಹಿತರು ಆಕೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಇದೀಗ ಮನೀಷಾ ಸಾವಿನ ವಿಚಾರ ಕೇಳಿ, ಆಕೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ವೈದ್ಯರ ಆರೈಕೆಯಲ್ಲಿದ್ದಾರೆ. ಸದಾ ಆಗಸದಲ್ಲಿ ಹಾರಬೇಕೆಂದು ಕನಸುಕಂಡಿದ್ದ 10 ಗಗನಸಖಿರು ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿರುವುದು ಹೃದಯವಿದ್ರಾಕ ಸಂಗತಿಯಾಗಿದೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಏನಿದು ಘಟನೆ?
    ಅಹಮದಾಬಾದ್ (Ahmedabad) ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.

  • ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಅಹಮದಾಬಾದ್: ತಾಂತ್ರಿಕ ದೋಷದಿಂದ ಅಹಮದಾಬಾದ್‌ನ (Ahmedabad) ಮೇಘಾನಿಯಲ್ಲಿ ಏರ್ ಇಂಡಿಯಾ ವಿಮಾನ (Air India Flight) ಪತನಗೊಂಡ ಪರಿಣಾಮ 12 ಸಿಬ್ಬಂದಿ ಹಾಗೂ 230 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತಪಟ್ಟ 12 ಸಿಬ್ಬಂದಿ ಪೈಕಿ 9 ಮಂದಿ ಸಿಬ್ಬಂದಿ ಮುಂಬೈ (Mumbai) ವಾಸಿಗಳಾಗಿದ್ದಾರೆ.

    ಮೃತಪಟ್ಟ 12 ಸಿಬ್ಬಂದಿ ಪೈಕಿ 9 ಸಿಬ್ಬಂದಿ ಮುಂಬೈವಾಸಿಗಳಾಗಿದ್ದು, ಮುಂಬೈನಲ್ಲೇ ನೆಲೆಸಿದ್ದರು. ಇನ್ನುಳಿದ ಮೂವರು ಮಹಾರಾಷ್ಟ್ರ, ಬಿಹಾರ ಹಾಗೂ ಮಣಿಪುರದವರಾಗಿದ್ದಾರೆ. ಘಟನೆಯಲ್ಲಿ ಬಿಜೆ ಮೆಡಿಕಲ್ ಹಾಸ್ಪಿಟಲ್ ಎಂಬಿಬಿಎಸ್‌ನ 10 ವಿದ್ಯಾರ್ಥಿಗಳು ಸೇರಿದಂತೆ 274 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇದನ್ನೂ ಓದಿ: 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

    ಮುಂಬೈನ 9 ಸಿಬ್ಬಂದಿ ಯಾರು?
    ಕ್ಯಾಪ್ಟನ್ ಸುಮೀತ್ ಸಭರ್ವಾಲ್, ಜಲವಾಯು ವಿಹಾರ್, ಪೋವೈ
    ಕ್ಲೈವ್ ಕುಂದರ್, ಮಂಗಳೂರು ಮೂಲದವರಾದರೂ ಬೊರಿವಲಿಯಲ್ಲಿ ವಾಸ
    ಅಪರ್ಣಾ ಮಹಾಡಿಕ್, ಗೋರೆಗಾಂವ್ ಈಸ್ಟ್
    ಸೈನೀತಾ ಚಕ್ರವರ್ತಿ, ಜುಹು ಕೋಲಿವಾಡ
    ದೀಪಕ್ ಪಾಠಕ್, ಬದ್ಲಾಪುರ್
    ರೋಷನಿ ಸೋಂಘಾರೆ, ಡೊಂಬಿವಿಲಿ
    ಶ್ರದ್ಧಾ ಧವನ್, ಮುಲುಂದ್
    ಮೈಥಿಲಿ ಪಾಟೀಲ್, ಪನ್ವೇಲ್
    ಎಂಗಂಥೋಯ್ ಶರ್ಮಾ, ಮಣಿಪುರದವರಾದರೂ ಮುಂಬೈನಲ್ಲಿ ವಾಸ

    ಉಳಿದ ಮೂವರು ಸಿಬ್ಬಂದಿ ಎಲ್ಲಿಯವರು?
    ಇರ್ಫಾನ್ ಶೇಖ್, ಸಂತ ತುಕಾರಾಂ ನಗರ, ಪಿಂಪ್ರಿ ಚಿಂಚ್ವಾಡ, ಮಹಾರಾಷ್ಟ್ರ
    ಮನೀಷಾ ಥಾಪಾ, ಪಾಟ್ನಾ, ಬಿಹಾರ
    ಲಮ್ನುಂಥೆಮ್ ಸಿಂಗ್ಸನ್, ಮಣಿಪುರ

  • ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ ಏರ್‌ ಇಂಡಿಯಾ (Air India) ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.

    ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್‌ ಹಾಗೂ ಸಿಬ್ಬಂದಿ, ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಜನರು ಸೇರಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು.

    ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನದಲ್ಲಿದ್ದ ಎರಡು ಬ್ಲ್ಯಾಕ್‌ಬಾಕ್ಸ್‌ಗಳ ಪೈಕಿ ಒಂದು ಪತ್ತೆಯಾಗಿದೆ. ಅದನ್ನು ಅಧಿಕಾರಿಗಳ ತಂಡ ಕೊಂಡೊಯ್ದಿದೆ. ಮತ್ತೊಂದು ಬ್ಲ್ಯಾಕ್‌ಬಾಕ್ಸ್‌ಗಾಗಿ ಹುಡುಕಾಟ ನಡೆದಿದೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಅಪಘಾತ ಸಂಭವಿಸಿದ ಮಾರನೇ ದಿನ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

  • ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಅಹಮದಾಬಾದ್: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಅಹಮದಾಬಾದ್‌ನ (Ahmedabad) ವಿಮಾನ ನಿಲ್ದಾಣದ ಬಳಿಯ ಮೇಘಾನಿ ಜನವಸತಿ ಪ್ರದೇಶದಲ್ಲಿ ಏರ್ ಇಂಡಿಯಾ (Air India) ವಿಮಾನ ಪತನಗೊಂಡ (Plane Crash) ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 274 ಮಂದಿ ಮೃತಪಟ್ಟಿದ್ದಾರೆ. 100 ಕೋಟಿ ಪ್ರಯಾಣಿಕರನ್ನು ಸೇಫ್ ಲ್ಯಾಂಡ್ ಮಾಡಿ ಬ್ರ‍್ಯಾಂಡ್ ಸೃಷ್ಟಿಸಿದ್ದ ಏರ್ ಲೈನ್ಸ್‌ನಲ್ಲಿ ಏನು ತಾಂತ್ರಿಕದೋಷ ಉಂಟಾಯಿತು ಎಂಬ ಕುರಿತು ತನಿಖೆ ಆರಂಭಗೊಂಅಡಿದೆ.

    ಸುರಕ್ಷತೆ, ದಕ್ಷತೆ, ಆರಾಮದಾಯಕ ಬೋಯಿಂಗ್ 787 ವಿಮಾನಕ್ಕೆ ಏನಾಯಿತು? ಸೇಫ್ ಲ್ಯಾಂಡ್‌ಗೆ ಹೆಸರುವಾಸಿಯಾಗಿದ್ದ ವಿಮಾನ ಪತನ ಆಗಿದ್ದು ಹೇಗೆ ಎಂಬ ಕುರಿತು ತನಿಖೆ ತೀವ್ರಗೊಂಡಿದೆ. ವಿಮಾನ ಪತನಕ್ಕೆ ಕಾರಣ ಏನು ಎಂಬ ಕುರಿತು ಐದು ತಂಡಗಳು ತನಿಖೆ ಆರಂಭಿಸಿವೆ.

    ಎಎಐಬಿ (ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ):
    ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಎಐಬಿ ದೇಶದಲ್ಲಿ ನಡೆಯುವ ವಿಮಾನ ದುರಂತಗಳ ಅಧಿಕೃತ ತನಿಖಾ ಸಂಸ್ಥೆಯಾಗಿದೆ.

    ಉನ್ನತ ಮಟ್ಟದ ಸಮಿತಿ:
    ಅಪಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ವಿಮಾನಯಾನ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ತಂಡ ತನಿಖಾ ತಂಡಗಳ ಸಹಯೋಗದೊಂದಿದೆ ಕಾರ್ಯ ನಿರ್ವಹಿಸಲಿದೆ.

    ಅಮೆರಿಕ ಮತ್ತು ಬ್ರಿಟನ್ ತಂಡಗಳು:
    ಅಮೆರಿಕ ಮತ್ತು ಬ್ರಿಟನ್ ತಂಡಗಳನ್ನು ಏರ್ ಇಂಡಿಯಾ ವಿಮಾನ ಪತನದ ತನಿಖೆಗೆ ನಿಯೋಜಿಸಲಾಗಿದೆ. ಅಮೆರಿಕ ಮೂಲದ ಬೋಯಿಂಗ್ ತಜ್ಞರು ಈ ತಂಡದಲ್ಲಿ ಇರಲಿದ್ದಾರೆ.

    ಎನ್‌ಐಎ:
    ಮತ್ತೊಂದಡೆ ರಾಷ್ಟ್ರೀಯ ತನಿಖಾ ದಳ ಕೂಡ ತನಿಖೆಗೆ ಇಳಿದಿದೆ. ವಿದ್ವಾಂಸಕ ಕೃತ್ಯ ದೃಷ್ಟಿಕೋನದಿಂದಲೂ ತನಿಖೆ ಆರಂಭಿಸಿದೆ.

    ಗುಜರಾತ್ ಪೊಲೀಸ್:
    ಗುಜರಾತ್ ಸರ್ಕಾರ 40 ಸದಸ್ಯರ ವಿಶೇಷ ತಂಡ ರಚಿಸಿದೆ. ಈ ತಂಡವು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ತಂಡಕ್ಕೆ ನೆರವು ನೀಡಲಿದೆ.

  • ವಿಮಾನ ದುರಂತ – ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿಯ ದಾರುಣ ಅಂತ್ಯ

    ವಿಮಾನ ದುರಂತ – ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿಯ ದಾರುಣ ಅಂತ್ಯ

    ಅಹಮದಾಬಾದ್‌: ಸೂರತ್‌ನಲ್ಲಿ (Surat) ನಿಶ್ಚಿತಾರ್ಥ (Engagement) ಮುಗಿಸಿಕೊಂಡು ಲಂಡನ್‌ಗೆ ಹೊರಟಿದ್ದ ಜೋಡಿಯೊಂದು ವಿಮಾನ ದುರಂತದಲ್ಲಿ (Plane Crash) ಸಾವನ್ನಪ್ಪಿದ್ದಾರೆ.

    ಮೃತರನ್ನು ಹಾರ್ದಿಕ್‌ ಹಾಗೂ ವಿಭೂತಿ ಎಂದು ಗುರುತಿಸಲಾಗಿದೆ. ವಿಭೂತಿ ಲಂಡನ್‌ನಲ್ಲಿ ಫಿಸಿಯೋಥೆರಪಿ ಮಾಸ್ಟರ್ಸ್ ಮಾಡುತ್ತಿದ್ದರು. ಹಾರ್ದಿಕ್ ಲಂಡನ್‌ನಲ್ಲಿ ಅಮೆಜಾನ್ ಉದ್ಯೋಗಿಯಾಗಿದ್ದರು. ಅಲ್ಲಿಯೇ ಭೇಟಿಯಾಗಿ, ಇಬ್ಬರ ನಡುವೆ ಲವ್‌ ಶುರುವಾಗಿತ್ತು. 10 ದಿನ ರಜೆ ಹಾಕಿ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲು ಊರಿಗೆ ಬಂದಿದ್ದರು. ಎಂಗೇಜ್‌ಮೆಂಟ್‌ ಮುಗಿಸಿ ಮದುವೆಯ ಕನಸು ಕಂಡಿದ್ದ ಜೋಡಿ ಲಂಡನ್‌ಗೆ ವಾಪಸ್‌ ಆಗುವಾಗ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಸಾವಿನ ಸಂಖ್ಯೆ 265ಕ್ಕೆ ಏರಿಕೆ

    ಗುರುವಾರ ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ  (Air India) ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ

  • ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿಯ ವಿದ್ಯಾರ್ಥಿ – ಕಣ್ಣೀರಿಟ್ಟ ಸಹಪಾಠಿಗಳು

    ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿಯ ವಿದ್ಯಾರ್ಥಿ – ಕಣ್ಣೀರಿಟ್ಟ ಸಹಪಾಠಿಗಳು

    ಬೆಳಗಾವಿ: ವಿಮಾನ ದುರಂತದಲ್ಲಿ ಬೆಳಗಾವಿಯಲ್ಲೇ (Belagavi) ಓದಿದ್ದ ವೈದ್ಯನ ಕುಟುಂಬವೇ ಬಲಿಯಾಗಿದೆ. ಮೂರು ಮುದ್ದಾದ ಮಕ್ಕಳು, ಪತ್ನಿ ಜೊತೆ ರಾಜಸ್ಥಾನದ ಡಾ.ಪ್ರತೀಕ್ ಜೋಶಿ (Dr Prateek Joshi) ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

    ಬೆಳಗಾವಿಯ ಕೆಎಲ್‌ಇ ಕಾಲೇಜಿನಲ್ಲಿ (KLE College) ಪ್ರತೀಕ್ ವ್ಯಾಸಂಗ ಮಾಡಿದ್ದರು. ಪ್ರತೀಕ್ ಕುಟುಂಬದ ಸಾವಿಗೆ ಸ್ನೇಹಿತರು, ಕೆಎಲ್‌ಇ ಕಾಲೇಜು (KLE College) ಪ್ರಿನ್ಸಿಪಾಲ್ ಕಂಬನಿ ಮಿಡಿದಿದ್ದಾರೆ.

    ಲಂಡನ್‌ನಲ್ಲಿ (London) ಸೆಟ್ಲ್ ಆಗಬೇಕು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಪ್ಲ್ಯಾನ್ ಮಾಡಿಕೊಂಡು ತಿಂಗಳ ಹಿಂದೆ ತನ್ನೂರು ರಾಜಸ್ಥಾನಕ್ಕೆ ಬಂದಿದ್ದ ಪ್ರತೀಕ್ ಅವರು ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

     

    ಪ್ರತೀಕ್ ಜೋಷಿ 2000ರಲ್ಲಿ ಬೆಳಗಾವಿಯ ಕೆಎಲ್‌ಇ ಕಾಲೇಜಿನಲ್ಲಿ ಮೆಡಿಕಲ್ ಓದಲು ಬಂದಿದ್ದರು. 2005ರ ವರೆಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಪ್ರತೀಕ್ ಕೋಲಾರದಲ್ಲಿ ರೇಡಿಯೋಲಾಜಿ ಮೇಲೆ ಪಿಜಿ ಮಾಡಿದ್ದರು. ಇದಾದ ಬಳಿಕ ತನ್ನೂರಿನಲ್ಲೇ ಕೆಲ ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ 2001ರಲ್ಲಿ ಲಂಡನ್‌ಗೆ ತೆರಳಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಪ್ರತೀಕ್ ಅವರ ಪತ್ನಿ ಕೂಡ ವೈದ್ಯೆಯಾಗಿದ್ದು ಮಕ್ಕಳಾದ ಮೇಲೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಕೆಲಸಕ್ಕೆ ರಾಜೀನಾಮೆ ಕೊಡಿಸಿ ಲಂಡನ್‌ಗೆ ತೆರಳುತ್ತಿದ್ದರು.

    ಇದೊಂದು ದೊಡ್ಡ ದುರಂತ. ಪ್ರತೀಕ್ ಜೋಶಿ 2005ರಲ್ಲಿ ರೇಡಿಯಾಲಜಿ ಪಿಜಿ ಕೋರ್ಸ್ ಮುಗಿಸಿದ್ದರು. 2021ರಲ್ಲಿ ಲಂಡನ್‌ಗೆ ಪ್ರಾಕ್ಟಿಸ್ ಮಾಡಲು ಹೋಗಿದ್ದರು. ಜೀವನ ಶುರು ಮಾಡಬೇಕು ಎನ್ನುವಾಗಲೇ ಅನ್ಯಾಯ ಆಗಿದೆ. ಎಲ್ಲರೂ ಶಾಕ್‌ನಲ್ಲೇ ಇದ್ದೇವೆ ಎಂದು ಪ್ರಿನ್ಸಿಪಾಲ್ ಡಾ.ನಿರಂಜನಾ ಮಹಾಂತಶೆಟ್ಟಿ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

    ಆತ ಸದಾ ಹಸನ್ಮುಖಿಯಾಗಿದ್ದ. ನಾವೆಲ್ಲರೂ ಸೇರಿ 25 ವರ್ಷದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ನಿರ್ಧರಿಸಿದ್ದೆವು. ವಿಧಿಯಾಟದಲ್ಲಿ ನಾವು ಡಾ.ಪ್ರತೀಕ್ ಹಾಗೂ ಕುಟುಂಬವನ್ನು ಕಳೆದುಕೊಂಡಿದ್ದೇವೆ ಎಂದು ಪ್ರತೀಕ್ ಜೊತೆ ವ್ಯಾಸಂಗ ಮಾಡಿದ್ದ ಸಹಪಾಠಿಗಳು ಕಣ್ಣೀರಿಟ್ಟಿದ್ದಾರೆ.

  • Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ

    Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ

    ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಘೋರ ವಿಮಾನ ದುರಂತ (Ahmedabad Plane Crash), ಟಾಟಾ ಗ್ರೂಪ್‌ (Tata Group) ಇತಿಹಾಸದ ಕರಾಳ ದಿನಗಳಲ್ಲಿ ಇದು ಸಹ ಒಂದು ಎಂದು ಸಂಸ್ಥೆಯ ಅಧ್ಯಕ್ಷ ಎನ್.ಚಂದ್ರಶೇಖರನ್ ತಮ್ಮ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ವಿಮಾನ ದುರಂತ ಸಂಭವಿಸಿದೆ. ಈಗ ಮೃತಪಟ್ಟವರ ಕುಟುಂಬಸ್ಥರಿಗೆ ನಮ್ಮ ಮಾತುಗಳು ಸಮಾಧಾನ ನೀಡುವುದಿಲ್ಲ. ಆದರೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಜನರ ಜೊತೆ ಹಾಗೂ ಅವರ ಕುಟುಂಬದವರೊಂದಿಗೆ ನಾವು ಇರುತ್ತೇವೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

    ವಿಮಾನ ಅಪಘಾತದ ತನಿಖೆಗೆ ನಮ್ಮ ದೇಶದ ತನಿಖಾ ತಂಡಗಳು ಸೇರಿದಂತೆ, ಬ್ರಿಟನ್ ಮತ್ತು ಅಮೆರಿಕದ ತನಿಖಾ ತಂಡಗಳು ಅಹಮದಾಬಾದ್‌ಗೆ ಬಂದಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಂತೆ, ನಾವು ಸಹ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಕಾಯುತ್ತಿದ್ದೇವೆ. ತನಿಖಾ ತಂಡಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ನೊಂದ ಕುಟುಂಬಗಳು ಮತ್ತು ಪೈಲಟ್‌ ಮತ್ತು ಸಿಬ್ಬಂದಿಗೆ ನಮ್ಮ ಸಂಸ್ಥೆ ಋಣಿಯಾಗಿದೆ. ಟಾಟಾ ಗ್ರೂಪ್ ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ.

    ಅಪಘಾತಕ್ಕೆ ಕಾರಣ ಹುಡುಕುವುದು ಮಾನವನ ಪ್ರವೃತ್ತಿಯಾಗಿದೆ. ನಮ್ಮ ಸುತ್ತಲೂ ಸಾಕಷ್ಟು ಊಹಾಪೋಹಗಳಿವೆ. ಅದರಲ್ಲಿ ಕೆಲವು ಸರಿಯಾಗಿರಬಹುದು, ಕೆಲವು ತಪ್ಪಾಗಿರಲೂಬಹುದು. ತನಿಖೆಯ ಬಳಿಕ ನಿಜಾಂಶ ತಿಳಿಯಲಿದೆ.

    ಟಾಟಾ ಗ್ರೂಪ್ ಜನವರಿ 2022 ರಲ್ಲಿ 2.2 ಬಿಲಿಯನ್ ಡಾಲರ್‌ ಒಪ್ಪಂದದ ಮೂಲಕ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು (Air India) ಖರೀದಿಸಿತ್ತು. ಇದಾದ ಬಳಿಕ ಅದರಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ. ಅದರಲ್ಲಿ ಯಾವುದೇ ರಾಜಿ ಇಲ್ಲ. ನಾವು ನಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಈ ನಷ್ಟವನ್ನು ನಾವು ಭರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

    ಗುರುವಾರ ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ ವಿಮಾನದಲ್ಲಿ 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

  • ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

    ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

    ಅಹಮದಾಬಾದ್: ಬಿಜೆ ಮೆಡಿಕಲ್‌ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್‌ ಇಂಡಿಯಾ (Air India) ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿದೆ.

    ಕಪ್ಪು ಪೆಟ್ಟಿಗೆ ಎಂದು ಕರೆಯಲ್ಪಡುವ ಡಿಜಿಟಲ್ ವಿಮಾನ ದತ್ತಾಂಶ ರೆಕಾರ್ಡರ್ (DFDR) ಅನ್ನು ಮೇಲ್ಛಾವಣಿಯಿಂದ ವಶಪಡಿಸಲಾಗಿದೆ ಎಂದು AAIB ದೃಢಪಡಿಸಿದೆ.

    ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬಿಜೆ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಮೃತಪಟ್ಟಿದ್ದಾರೆ. ವಿಮಾನದ ಅಂತಿಮ ಕ್ಷಣದಲ್ಲಿ ಏನಾಯ್ತು ಎಂಬುದನ್ನು ತಿಳಿದುಕೊಳ್ಳಲು DFDR ನಿರ್ಣಾಯಕವಾಗಿದೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ, ಸುತ್ತಲೂ ಬೆಂಕಿ ಇದ್ದರೂ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.

    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ. ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

    ಬಳಕೆ ಆಗಿದ್ದು ಯಾವಾಗ?
    1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್‌ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್‌ ಬಾಕ್ಸ್‌ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.

  • ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

    ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

    ಅಹಮದಾಬಾದ್: ಲಂಡನ್‌ನಲ್ಲಿರುವ (London) ಮಗಳನ್ನು ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ ಸೇರಿರುವ ದುರಂತ ಕಥೆ ಅಹಮದಾಬಾದ್ ವಿಮಾನ ಅಪಘಾತದಲ್ಲಿ (Ahmedabad Plane Crash) ನಡೆದಿದೆ.

    ಗುಜರಾತ್‌ನ (Gujarat) ವಡೋದರಾದ ಅಂಜು ಶರ್ಮಾ (55) ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅಂಜು ಶರ್ಮಾ, ವಡೋದರಾದಲ್ಲಿರುವ ಮಗ ಮಿಲನ್ ಶರ್ಮಾ ಜೊತೆ ವಾಸವಿದ್ದರು. ಜೂ.12ರಂದು ಅಂಜು ಶರ್ಮಾ ಲಂಡನ್‌ನಲ್ಲಿ ನೆಲೆಸಿದ್ದ ಹಿರಿಯ ಪುತ್ರಿ ನಿಮ್ಮಿ ಶರ್ಮಾಳ ಭೇಟಿ ಹೊರಟ್ಟಿದ್ದರು. 6 ತಿಂಗಳು ಮಗಳೊಂದಿಗೆ ಕಾಲ ಕಳೆಯಲು ಅಂಜು ಶರ್ಮಾ ತುದಿಗಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

    ಮಗಳ ಸೇರುವ ತವಕದಲ್ಲಿದ್ದ ತಾಯಿ ಅಂಜು ಶರ್ಮಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಮ್ಮನ ಮುಖ ನೋಡುವ ತವಕದಲ್ಲಿದ್ದ ಮಗಳಿಗೆ ತಾಯಿಯ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ತಾಯಿಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಮಗಳು ನಿಮ್ಮಿ ಶರ್ಮಾ ಶಾಕ್‌ಗೆ ಒಳಗಾಗಿದ್ದಾರೆ. ಮಗಳ ಸಾವಿನ ವಿಚಾರ ತಿಳಿಯದ ವೃದ್ಧ ದಂಪತಿಯು ಅಂಜು ಶರ್ಮಾ ಅವರ ಬರುವಿಕೆಗೆ ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    ಏನಿದು ಘಟನೆ?
    ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.