Tag: air india

  • ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

    ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

    ಗಾಂಧಿನಗರ: ವಿಜಯ್ ರೂಪಾನಿ (Vijay Rupani) ಡಿಎನ್‌ಎ ಮ್ಯಾಚ್ ಇನ್ನು ಸಿಕ್ಕಿಲ್ಲ. ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ಸಿವಿಲ್ ಆಸ್ಪತ್ರೆ ಹೆಚ್ಚುವರಿ ಸೂಪರ್ ಇಂಟೆಂಡೆಂಟ್ ಡಾ. ರಜನೀಶ್ ಪಟೇಲ್ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 31 ಡಿಎನ್‌ಎ ಮ್ಯಾಚ್ ಆಗಿದೆ. 12 ಮೃತದೇಹಗಳ ಹಸ್ತಾಂತರ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆ ಮೂಲಕ 31 ಶವದ ಗುರುತು ಪತ್ತೆ ಹಚ್ಚಲಾಗಿದೆ. ಜನರಿಂದ ಯಾವುದೇ ಹಣ ಪಡೆಯುತ್ತಿಲ್ಲ ಎಂದರು. ಇದನ್ನೂ ಓದಿ: ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

    ಡಿಎನ್‌ಎ ಪರೀಕ್ಷೆಯ ಮೂಲಕ ಸ್ಯಾಂಪಲ್ ಮ್ಯಾಚ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಚಾಲೆಂಜಿಂಗ್ ಕೆಲಸ. ಉದಯಪುರ, ಖೇಡಾ, ಅಹಮದಾಬಾದ್ ಜಿಲ್ಲೆಯ ಜನರಿಗೆ ಮೃತ ದೇಹ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ – ಕೆನಡಾ ಸೇರಿ ಮೂರು ರಾಷ್ಟ್ರಗಳಿಗೆ ಭೇಟಿ

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಈವರೆಗೂ 31 ಮೃತ ದೇಹಗಳ ಡಿಎನ್‌ಎ ಮ್ಯಾಚ್ ಆಗಿದ್ದು, 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಾಕಿ ಮೃತದೇಹಗಳ ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನಲೆ ಆಸ್ಪತ್ರೆ ಹೊರಗೆ ಕುಟುಂಬಸ್ಥರು ಕಾಯುತ್ತಿದ್ದಾರೆ. ಇದನ್ನೂ ಓದಿ: ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

  • ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

    ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

    ಗಾಂಧಿನಗರ: ವಿಮಾನ ದುರಂತದಿಂದ (Plane Crash) 270 ಮಂದಿ ಸುಟ್ಟು ಕರಕಲು ಆಗಿದ್ದು, ವಿಮಾನ ಭಸ್ಮವಾಗಿದೆ. ಆದರೆ ಜನರು ತಂದಿದ್ದ ದುಡ್ಡು ಮಾತ್ರ ಸುಟ್ಟಿಲ್ಲ.

    ಅಹಮದಾಬಾದ್ (Ahmedabad) ವಿಮಾನ ದುರಂತದಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಜಗತ್ತು ಕಂಡ ದೊಡ್ಡ ದುರಂತ ಇದಾಗಿದೆ. 270 ಮಂದಿ ಜನ ಸಾವನ್ನಪ್ಪಿದ್ದಾರೆ. ಏರ್ ಇಂಡಿಯಾದಲ್ಲಿ (Air India) ಪ್ರಯಾಣ ಮಾಡುತ್ತಿದ್ದ 242 ಜನರಲ್ಲಿ 241 ಜನ ಬೆಂಕಿಗಾಹುತಿ ಆಗಿ ಸುಟ್ಟು ಕರಕಲು ಆಗಿದ್ದಾರೆ. ಅದರಲ್ಲಿ ರಮೇಶ್ ವಿಶ್ವಾಸ್ ಕುಮಾರ್ ಎಂಬ ವ್ಯಕ್ತಿ ಮಾತ್ರ ಬದುಕಿ ಉಳಿದಿದ್ದಾರೆ. 241 ಮಂದಿ ಸುಟ್ಟು ಕರಕಲು ಆಗಿದ್ದರೂ ಸಹ ಅವರು ತಂದಿದ್ದ ದುಡ್ಡು ಮಾತ್ರ ಏನೂ ಆಗಿಲ್ಲ. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ಮನುಷ್ಯ ಏನೇ ಸಂಪಾದನೆ ಮಾಡಿದರೂ ಏನನ್ನು ಹೊತ್ತು ಕೊಂಡು ಹೋಗಲ್ಲ ಅಂತಾರೆ, ಅದು ನಿಜ. ತನ್ನ ಇಡೀ ಜೀವನ ಹೊಟ್ಟೆಪಾಡಿಗಾಗಿ, ದುಡ್ಡಿಗಾಗಿ ದುಡಿಯೋದು. ಆದರೆ ವಿಮಾನ ದುರಂತದಲ್ಲಿ ಜನ ಸುಟ್ಟು ಕರಕಲು ಆಗಿದ್ದಾರೆ. ಆದರೆ ಜನ ತಂದಿದ್ದ ದುಡ್ಡು ಸುಟ್ಟಿಲ್ಲ. ಅವಶೇಷಗಳ ಪತ್ತೆ ವೇಳೆ ಭಗವದ್ಗೀತೆ ಪುಸ್ತಕ, ಕೃಷ್ಣನ ವಿಗ್ರಹದ ಜೊತೆಗೆ ಸೂಟ್‌ಕೇಸ್‌ನಲ್ಲಿದ್ದ ದುಡ್ಡು ಕೂಡ ಪತ್ತೆಯಾಗಿದೆ. ಸುಡದೇ ಇರುವ ದುಡ್ಡನ್ನು ಕ್ರೋಢೀಕರಿಸಲಾಗಿದೆ. ಇದನ್ನೂ ಓದಿ: ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

  • ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ಸದ್ಯ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಒಂದು ವಿಷಯವೆಂದರೆ ಅದು ಅಹಮದಾಬಾದ್‌ (Ahmedabad) ಏರ್‌ ಇಂಡಿಯಾ ವಿಮಾನ ಪತನ (Air India Plane Crash). ಭಾರತದ (India) ಇತಿಹಾಸದಲ್ಲೇ ಎರಡನೇ ಅತೀ ದೊಡ್ಡ ದುರಂತವಾಗಿರುವ ಈ ಅವಘಡದಲ್ಲಿ ಅಲ್ಲಿನ ಸ್ಥಳೀಯರು ಸೇರಿದಂತೆ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ವಿಮಾನ ಅಪಘಾತ ಸಂಭವಿಸಲು ಹಲವು ಕಾರಣಗಳಿವೆ ಎಂದು ಕೇಳೀಬರುತ್ತಿದೆ. ಆ ಪೈಕಿ ಹಕ್ಕಿ ಡಿಕ್ಕಿ ಹೊಡೆದಿರಬಹುದಾ ಎಂಬ ಸಂಶಯವೂ ಹುಟ್ಟಿಕೊಂಡಿದೆ.

    ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಎಂಜಿನ್‌ಗೆ ಪಕ್ಷಿ ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಬರಬಹುದು ಎನ್ನಲಾಗುತ್ತಿದೆ. ಈ ಕುರಿತು ತಜ್ಞರ ಮಾಹಿತಿ ಪ್ರಕಾರ, ಟೇಕಾಫ್‌ ಆಗುವಾಗ ಎಂಜಿನ್‌ಗೆ ಪಕ್ಷಿ ಬಡಿದಾಗ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ಅಟೋಮ್ಯಾಟಿಕ್‌ ಆಗಿ ತಗ್ಗುತ್ತದೆ ಹೀಗಾಗಿ ಸಂಭವಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿ ವಿಮಾನದ ಒಂದು ಎಂಜಿನ್‌ಗೆ ಪಕ್ಷಿ ಬಡಿದರೆ ಇನ್ನೊಂದು ಎಂಜಿನ್‌ ಮೂಲಕ ಚಾಲನೆ ಮಾಡಿ ಸಮೀಪದ ನಿಲ್ದಾಣದಲ್ಲಿ ಪೈಲಟ್‌ ತುರ್ತು ಲ್ಯಾಂಡ್‌ ಮಾಡುತ್ತಾರೆ. ಆದರೆ ಇಲ್ಲಿ ಎರಡು ಎಂಜಿನಿಗೆ ಪಕ್ಷಿ ಬಡಿದ ಕಾರಣ ವಿಮಾನ ವೇಗವನ್ನು ಕಳೆದುಕೊಂಡು ಪತನ ಹೊಂದಿರಬಹುದು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಎಂಜಿನಿಗೆ ಪಕ್ಷಿ ಬಡಿಯುವುದು ಅಪರೂಪದಲ್ಲಿ ಅಪರೂಪ. ಆದರೆ ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ 462 ಹಕ್ಕಿ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ. ಈ ಪೈಕಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿಯೇ (Ahmedabad Airport) ಅತಿ ಹೆಚ್ಚು ಘಟನೆಗಳು ನಡೆದಿವೆ.

    ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ (Patna) ರಾಂಚಿಗೆ ಹೊರಟಿದ್ದ ಏರ್‌ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಪ್ರಕಾರ, ವಿಮಾನಗಳು ಟೇಕ್‌ ಆಫ್‌ ಅಥವಾ ಲ್ಯಾಂಡಿಂಗ್‌ ಆಗುವಾಗ ಹಕ್ಕಿ ಡಿಕ್ಕಿಯಾಗುವ ಸಾಧ್ಯತೆಗಳಿರುತ್ತವೆ. ಈ ವೇಳೆ 92%ರಷ್ಟು ಹಾನಿಯಾಗುವ ಸಾಧ್ಯತೆಗಳಿರುವುದಿಲ್ಲ. ಆದರೆ 8%ರಷ್ಟು ತುಂಬಾ ಪರಿಣಾಮಕಾರಿಯಾಗಿ ಹಾನಿಯಾಗುವ ಸಾಧ್ಯತೆಯಿರುತ್ತದೆ. ಡಿಕ್ಕಿ ಹೊಡೆದಾಗ ಎಂಜಿನ್‌ನಲ್ಲಿರುವ ಬ್ಲೇಡ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಈ ಬ್ಲೇಡ್‌ಗಳು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಬೇಗನೇ ಮುರಿದು ಹೋಗುವ ಸಾಧ್ಯತೆಯೂ ಇರುತ್ತದೆ.

    ಏನಿದು ಹಕ್ಕಿ ಡಿಕ್ಕಿ?
    ಹಕ್ಕಿ ಮತ್ತು ವಿಮಾನದ ನಡುವಿನ ಡಿಕ್ಕಿಯೇ ಹಕ್ಕಿ ಡಿಕ್ಕಿ. ಇದು ಸಾಮಾನ್ಯವಾಗಿ ಟೇಕ್ ಆಫ್, ಲ್ಯಾಂಡಿಂಗ್ ಅಥವಾ ಕಡಿಮೆ ಎತ್ತರದ ಹಾರಾಟದ ಸಮಯದಲ್ಲಿ ಹಕ್ಕಿಗಳು ವಿಮಾನಕ್ಕೆ ಅಥವಾ ವಿಮಾನ ಹಕ್ಕಿಗೆ ಡಿಕ್ಕಿ ಹೊಡೆಯುತ್ತದೆ.

    ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತದೆ?
    ವಾಯುಯಾನದ ವೇಳೆ ಸಂಭವಿಸುವ ಸಾಮಾನ್ಯವಾದ ಅಪಾಯಗಳಲ್ಲಿ ಒಂದಾಗಿದೆ. ಜೆಟ್‌ ವಿಮಾನಕ್ಕೆ ಡಿಕ್ಕೆ ಹೊಡೆದರೆ ಫ್ಯಾನ್‌ನ ಬ್ಲೇಡ್‌ಗಳನ್ನು ಹಾನಿಗೊಳಿಸುತ್ತದೆ. ಕೆಲವೊಮ್ಮೆ ಅಪಘಾತಕ್ಕೆ ಕಾರಣವಾಗಬಹುದು. ಹಕ್ಕಿ ಡಿಕ್ಕಿ ಹೊಡೆದರೆ ಎಂಜಿನ್‌, ರೆಕ್ಕೆಗಳು, ವಿಂಡ್‌ಶೀಲ್ಡ್‌ಗಳಿಗೆ ಹಾನಿಯಾಗಬಹುದು. ಒಂದು ವೇಳೆ ವಿಂಡ್‌ಶೀಲ್ಡ್‌ಗೆ ಅತಿ ವೇಗವಾಗಿ ಹಕ್ಕಿ ಡಿಕ್ಕಿ ಹೊಡೆದರೆ ವಿಂಡ್‌ಶೀಲ್ಡ್ ಬಿರುಕು ಬಿಡಬಹುದು. ಇದರಿಂದ ಗೋಚರತೆಯನ್ನು ಕಡಿಮೆಗೊಳಿಸಬಹುದು. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ವಿಮಾನಗಳು 0–3,000 ಅಡಿ ಎತ್ತರದಲ್ಲಿರುತ್ತವೆ. ಈ ಸಮಯದಲ್ಲಿ ಹಕ್ಕಿಡಿಕ್ಕಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಮರ ನೆಡುವುದನ್ನು ಕಡಿಮೆಗೊಳಿಸುತ್ತಾರೆ. ಇದರಿಂದ ಹಕ್ಕಿಗಳು ಗೂಡು ಕಟ್ಟುವುದು ಕಡಿಮೆಯಾಗುತ್ತದೆ ಮತ್ತು ರನ್‌ವೇ ದೊಡ್ಡದಾಗಿರುವ ವಿಮಾನ ನಿಲ್ದಾಣಗಳಲ್ಲಿ ಈ ಸಮಸ್ಯೆಗಳನ್ನು ತಪ್ಪಿಸಬಹುದು.

    ಹಕ್ಕಿಡಿಕ್ಕಿ ಹೊಡೆದಾಗ ಪೈಲೆಟ್‌ ಏನು ಮಾಡುತ್ತಾರೆ?
    ಹಕ್ಕಿ ಡಿಕ್ಕಿ ಹೊಡೆದಾಗ, ಪೈಲಟ್‌ಗಳು ಮೇಡೇ (Mayday) ಅಥವಾ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ಎಂಜಿನ್‌ಗೆ ಸಮಸ್ಯೆಯಾಗಿದ್ದರೆ ಅದರ ಬಳಕೆಯನ್ನು ನಿಲ್ಲಿಸಬಹುದು. ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ ರಾಂಚಿಗೆ ಹೊರಟಿದ್ದ ಏರ್‌ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದಾಗ ಪೈಲಟ್ ಮೇಡೇ ಕರೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನಗಳನ್ನು ಅಪಾಯಕಾರಿ ಸಂದರ್ಭದಲ್ಲಿ ಮೇಡೇ ಘೋಷಿಸುತ್ತಾರೆ. ಇನ್ನೂ ಜೂನ್‌ 12ರಂದು ಸಂಭವಿಸಿದ್ದ ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ಅಪಘಾತದ ವೇಳೆ ಪೈಲಟ್‌ ಮೇಡೇ ಘೋಷಿಸಿದ್ದರು. ಆದರೆ ಹಕ್ಕಿಡಿಕ್ಕಿಯಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.

    ಈ ಕುರಿತು ಭೌತಶಾಸ್ತ್ರ ಏನು ಹೇಳುತ್ತದೆ?
    ಸಾಮಾನ್ಯವಾಗಿ ಒಂದು ವಸ್ತು ಚಲಿಸುವಾಗ ಆವೇಗವನ್ನು ಹೊಂದಿರುತ್ತದೆ. (ಒಂದು ವಸ್ತುವಿನ ಚಲನೆಯ ಪ್ರಮಾಣವೇ ಆವೇಗವಾಗಿರುತ್ತದೆ). ಉದಾಹರಣೆಗೆ ವಿಮಾನ ಹಾಗೂ ಹಕ್ಕಿಗೆ ಹೋಲಿಸಿದಾಗ ವಿಮಾನ ಭಾರವಾಗಿರುತ್ತದೆ. ಆದರೆ ಅವೆರಡು ಸಮಾನ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿರುತ್ತವೆ. ಹೀಗಾಗಿ ವಿಮಾನ ಹೆಚ್ಚಿನ ಆವೇಗವನ್ನು ಹೊಂದಿರುತ್ತದೆ. ವಿಮಾನ ಸಾಮಾನ್ಯವಾಗಿ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುವಾಗ ಕಡಿಮೆ ವೇಗದಲ್ಲಿ ಚಲಿಸುತ್ತಿರುತ್ತದೆ. ಈ ವೇಳೆ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಾಗ ಅದರ ಆವೇಗವು ವಿಮಾನಕ್ಕೆ ವರ್ಗಾಯಿಸಲ್ಪಡುತ್ತದೆ. ಇದರಿಂದಾಗಿ ವಿಮಾನಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.

    ಈ ಮೊದಲು ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದ್ದ ಕೆಲವು ಘಟನೆಗಳು;
    US ಏರ್‌ವೇಸ್ ಫ್ಲೈಟ್ 1549 – “ಮಿರಾಕಲ್ ಆನ್ ದಿ ಹಡ್ಸನ್” (2009)
    ನ್ಯೂಯಾರ್ಕ್‌ನ (Newyork) ಲಾಗಾರ್ಡಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಏರ್‌ಬಸ್ A320ಗೆ ಕೆನಡಾ ಹೆಬ್ಬಾತುಗಳ ಹಿಂಡು ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡೂ ಎಂಜಿನ್‌ಗಳಿಗೆ ಹಾನಿಯಾಗಿತ್ತು, ಆದರೆ ಪೈಲಟ್‌ ವಿಮಾನವನ್ನು ಹಡ್ಸನ್ ನದಿಯಲ್ಲಿ ಸುರಕ್ಷಿತವಾಗಿ ಇಳಿಸಿದರು. ವಿಮಾನದಲ್ಲಿದ್ದ 155 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಕೂಡ ಪ್ರಾಣಾಪಾಯದಿಂದ ಪಾರಾದರು. ಆಸ್ಟ್ರೇಲಿಯನ್ ಸಾರಿಗೆ ಸುರಕ್ಷತಾ ಮಂಡಳಿಯ ಮಾಹಿತಿ ಪ್ರಕಾರ, 2008 ಮತ್ತು 2017ರ ನಡುವೆ 16,626 ಹಕ್ಕಿ ಡಿಕ್ಕಿ ಹೊಡೆದಿರುವುದು ದಾಖಲಾಗಿದೆ. ಅಮೆರಿಕಾದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ವರದಿಯ ಪ್ರಕಾರ, 2022ರಲ್ಲಿ ಮಾತ್ರ 17,200 ಹಕ್ಕಿ ಡಿಕ್ಕಿಯಾಗಿರುವುದು ವರದಿಯಾಗಿವೆ.

    ಈಸ್ಟರ್ನ್ ಏರ್ ಲೈನ್ಸ್ ಫ್ಲೈಟ್ 375 (1972)
    ಲಾಕ್‌ಹೀಡ್ L-188 ಎಲೆಕ್ಟ್ರಾ ಬೋಸ್ಟನ್ ಲೋಗನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಈಸ್ಟರ್ನ್ ಏರ್ ಲೈನ್ಸ್ ವಿಮಾನಕ್ಕೆ ಸ್ಟಾರ್ಲಿಂಗ್‌ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆಯಿತು. ಈ ವೇಳೆ ಹಲವು ಪಕ್ಷಿಗಳು ಎಂಜಿನ್‌ ಒಳಗೆ ನುಸುಳಿದವು. ಪರಿಣಾಮ ವಿಮಾನದಲ್ಲಿದ್ದ 72 ಜನರ ಪೈಕಿ 62 ಜನರು ಸಾವನ್ನಪ್ಪಿದರು.

    ರಾಂಚಿಯಲ್ಲಿ ಇಂಡಿಗೋ ವಿಮಾನ (ಮೇ 2025)
    ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ ರಾಂಚಿಗೆ ಹೊರಟಿದ್ದ ಏರ್‌ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದ ಮುಂಭಾಗಕ್ಕೆ ಹಾನಿಯುಂಟಾಯಿತು. ಆದರೆ ವಿಮಾನದಲ್ಲಿದ್ದ 175 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರು

  • ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

    ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

    ನವದೆಹಲಿ: ಅಹಮದಾಬಾದ್ (Ahmedabad) ವಿಮಾನ ದುರಂತದಲ್ಲಿ ಬದುಕುಳಿದ ವಿಶ್ವಾಸ್ 11A ಸೀಟಿನಲ್ಲಿ ಕುಳಿತಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಲೇ ಇದೀಗ ಲಕ್ಕಿ ಸೀಟು 11A ಬೇಡಿಕೆ ಹೆಚ್ಚಾಗುತ್ತಿದೆ.

    ಹೌದು, ಜೂನ್ 12ರಂದು ಸಂಭವಿಸಿದ್ದ ಅಹಮದಾಬಾದ್ ಏರ್ ಇಂಡಿಯಾ ದುರಂತದಲ್ಲಿ (Air India Plane Crash) ವಿಮಾನದಲ್ಲಿದ್ದ 242 ಜನರ ಪೈಕಿ 241 ಜನರು ಸಾವನ್ನಪ್ಪಿದ್ದರು. ಈ ಪೈಕಿ ಓರ್ವ ಪ್ರಯಾಣಿಕ ಪವಾಡ ಸದೃಶ್ಯವೆಂಬಂತೆ ಪಾರಾಗಿದ್ದಾರೆ. ಅವರು ಕುಳಿತಿದ್ದದ್ದು 11ಎ ಸೀಟಿನಲ್ಲಿ, ಆ ಸೀಟು ಎಮರ್ಜೆನ್ಸಿ ಎಕ್ಸಿಟ್ ಪಕ್ಕದಲ್ಲಿದೆ. ಹೀಗಾಗಿ ಸದ್ಯ ವಿಮಾನದ ಟಿಕೆಟ್ ಬುಕ್ ಮಾಡುತ್ತಿರುವವರು ಅದೇ ಸೀಟನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ:ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

    ಹಣ ಹೆಚ್ಚಾದರೂ ಪರವಾಗಿಲ್ಲ, ಅದೇ ಸೀಟನ್ನೇ ಬುಕ್ ಮಾಡಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು 11ಎ ಸೀಟ್ ಬುಕ್ ಮಾಡುವ ಕುರಿತು ವಿಚಾರಿಸುತ್ತಿದ್ದಾರೆ. ಅದರಲ್ಲಿ ಕುಳಿತರೆ ಬದುಕುತ್ತೇವೆ ಎನ್ನುವ ಸೈಕಾಲಜಿ ಎಫೆಕ್ಟ್ ಪ್ರಯಾಣಿಕರ ಮೇಲೆ ಉಂಟಾಗಿದ್ದು, ಆ ಸೀಟ್‌ನಲ್ಲಿ ಕುಳಿತು ವಿಶ್ವಾಸ್ ಬದುಕಿದ್ದಾರೆ ಎಂದ ಮೇಲೆ ನಮಗೆ ಅದೇ ಸೀಟ್ ಬೇಕು ಎನ್ನುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇನ್ನೂ 1998ರಲ್ಲಿ ಬ್ಯಾಂಕಾಕ್‌ನಿಂದ ಹೊರಟ ಥಾಯ್ ಏರ್ವೇಸ್ ವಿಮಾನ ದಕ್ಷಿಣ ಥೈಲ್ಯಾಂಡ್‌ನ ನಗರವಾದ ಸೂರತ್ ಥಾನಿಯಲ್ಲಿ ಲ್ಯಾಂಡಿಂಗ್ ಆಗುವಾಗ ಅಪಘಾತಕ್ಕೀಡಾಗಿತ್ತು. ಈ ವೇಳೆ 146 ಜನರ ಪೈಕಿ 101 ಜನರು ಸಾವನ್ನಪ್ಪಿದ್ದರು. ಈ ಪೈಕಿ 11ಎ ಸೀಟಿನಲ್ಲಿ ಕುಳಿತಿದ್ದ ಥೈಲ್ಯಾಂಡ್‌ನ ಸಿಂಗರ್ ಹಾಗೂ ನಟ ರುವಾಂಗ್ಸಾಕ್ ಲೊಯ್ಚುಸಾಕ್ ಬದುಕುಳಿದಿದ್ದರು. ಹೀಗಾಗಿ ಎರಡು ದುರಂತಗಳಲ್ಲಿಯೂ 11ಎ ಸೀಟಿಗೆ ಕುಳಿತಿದ್ದವರು ಬದುಕುಳಿದಿದ್ದಾರೆ ಎಂದು ಬೇಡಿಕೆ ಹೆಚ್ಚಾಗಿದೆ.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

  • ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

    ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

    – ಗೃಹ ಸಚಿವರು ಅಪಘಾತಗಳು ನಡೆಯುತ್ತಿರುತ್ತವೆ ಎಂಬರ್ಥದಲ್ಲಿ ಮಾತನಾಡಿದ್ದಾರೆ: ಖರ್ಗೆ ಬೇಸರ

    ಅಹಮದಾಬಾದ್‌: ಜೂನ್‌ 12ರಂದು ಏರ್‌ ಇಂಡಿಯಾ ವಿಮಾನ ದುರಂತ (Air India Plane Crash) ನಡೆದ ಅಹಮದಾಬಾದ್‌ನ ಮೇಘನಿ ನಗರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಕರ್ನಾಟಕ ಡಿಸಿಎಂ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ ನಾಯಕರೊಂದಿಗೆ ಭೇಟಿ ನೀಡಿದ್ದರು. ಇಲ್ಲಿನ ಸಿವಿಲ್‌ ಆಸ್ಪತ್ರೆಗೆ ಭೇಟಿ ನೀಡಿದ ಖರ್ಗೆ ಅವರು ದುರಂತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಶೀಘ್ರ ಗುಣಮುಖರಾಗುವುದಾಗಿ ಗಾಯಾಳುಗಳಿಗೆ ಧೈರ್ಯತುಂಬಿದರು.

    ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಅಹಮದಾಬಾದ್ ಇತಿಹಾಸದಲ್ಲಿ ಮರೆಯಲಾಗದ ದುರ್ಘಟನೆ. ಹಲವಾರು ಜನ ಸಾವನ್ನಪ್ಪಿದ್ದಾರೆ. ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಆಸ್ಪತ್ರೆ ವೈದ್ಯ ಡಾ. ವಿಠ್ಠಲ್ ಜೊತೆ ಚರ್ಚಿಸಿ ಗಾಯಾಳುಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅವರ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದೇನೆ. ಈ ದುರಂತದಲ್ಲಿ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಇದನ್ನೂ ಓದಿ: Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

    ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು
    ಮೃತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ. ದುರ್ಘಟನೆಯನ್ನ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಇಂತಹದೆಲ್ಲ ನಡೆಯತ್ತವೆ ಎನ್ನುವಂತೆ ಹಗುವರಾಗಿ ಪರಿಗಣಿಸಬಾರದು. ನಮ್ಮ ಹಿರಿಯ ಮುಖಂಡರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

    ಕೇಂದ್ರ ಸರ್ಕಾರ ಯಾವುದನ್ನೂ ಲಘುವಾಗಿ ಪರಿಗಣಿಸಬಾರದು. ಗೃಹ ಸಚಿವರು ಅಪಘಾತಗಳು ನಡೆಯುತ್ತಿರುತ್ತವೆ, ತಪ್ಪಿಸಲಾಗಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ನಾವು ಈಗಲೇ ಏನು ಹೇಳಲು ಸಾಧ್ಯವಿಲ್ಲ. ಸುಮ್ಮನೆ ಆರೋಪ ಮಾಡೋದಕ್ಕೂ ಸಾಧ್ಯವಿಲ್ಲ. ಬ್ಲ್ಯಾಕ್‌ಬಾಕ್ಸ್‌ನಲ್ಲಿ ಏನಿದೆ ಅಂತ ಗೊತ್ತಾಗಬೇಕು. ಸೂಕ್ತ ತನಿಖೆ ನಂತರ ಯಾರು ಹೊಣೆಗಾರರು ಗೊತ್ತಾಗುತ್ತೆ ಎಂದು ವಿವರಿಸಿದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಆರೋಪ ಮಾಡುವ ಸಮಯವಲ್ಲ
    ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಮಾತನಾಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇವೆ. ಘಟನೆಯಿಂದ ಬಹಳ ದುಃಖ ಆಗ್ತಿದೆ. ಯಾವುದೇ ದುರಂತ ಆಗಬಾರದು. ಟೆಕ್ನಿಕಲ್ ಸಮಸ್ಯೆಯೋ.. ಏನು ಅಂತಾ ಹೇಳಕ್ಕಾಗಲ್ಲ. ಬೇರೆ ಅವರ ಮೇಲೆ ಆರೋಪ ಮಾಡುವ ಸಮಯವೂ ಇದಲ್ಲ ಎಂದು ನುಡಿದರು. ಇದನ್ನೂ ಓದಿ: Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

  • Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

    Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

    ಅಹಮದಾಬಾದ್‌: ಇಲ್ಲಿನ ಮೇಘನಿನಗರದ ಬಳಿ ನಡೆದ ವಿಮಾನ ದುರಂತದಲ್ಲಿ (Plane Crash) ಮೃತಪಟ್ಟವರ ಕುಟುಂಬಕ್ಕೆ ಏರ್‌ ಇಂಡಿಯಾ (Air India) ವಿಮಾನಯಾನ ಸಂಸ್ಥೆ ತಲಾ 25 ಲಕ್ಷ ರೂ. ಮಧ್ಯಂತರ ಪರಿಹಾರ ಘೋಷಿಸಿದೆ.

    ಈಗಾಗಲೇ ಟಾಟಾ ಸಮೂಹ (Tata Group) ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಏರ್‌ ಇಂಡಿಯಾ ಸಂಸ್ಥೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಈ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳೊಂದಿಗೆ ಏರ್‌ ಇಂಡಿಯಾ ಒಟ್ಟಾಗಿ ನಿಲ್ಲುತ್ತದೆ. ಊಹಿಸಲೂ ಸಾಧ್ಯವಾಗದ ಈ ಪರಿಸ್ಥಿತಿಯಲ್ಲಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸಂಸ್ಥೆ ಒದಗಿಸಲಿದೆ. ಹೀಗಾಗಿ ಸಂತ್ರಸ್ತ ಕುಟುಂಬಗಳು ತಕ್ಷಣದ ಆರ್ಥಿಕತೆಗಳನ್ನು ಪೂರೈಸಲು ತಲಾ 25 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

    ಏನಾಗಿತ್ತು?
    ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಪರಿಣಾಮ ವಿಮಾನ ನಿಲ್ದಾಣದ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು 12 ಸಿಬ್ಬಂದಿ ಇದ್ದರು. ಇದನ್ನೂ ಓದಿ: Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

    ವಿಮಾನದಲ್ಲಿದ್ದ 242 ಜನರಲ್ಲಿ ವಿಮಾನ ಸಿಬ್ಬಂದಿ ಸೇರಿ 241 ಮಂದಿ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದರು. ಜೊತೆಗೆ ಬಿಜೆ ಮೆಡಿಕಲ್ ಕಾಲೇಜಿನ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನೂ ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ ಅಲ್ಲಿದ್ದ 19 ಸ್ಥಳೀಯರು ಸಾವಿಗೀಡಾಗಿದ್ದರು. ಸದ್ಯ ಸಾವಿನ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು 

  • ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

    – 2022 ರಲ್ಲಿ ಮದುವೆಯಾಗಿತ್ತು ಈ ಜೋಡಿ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಗುರುವಾರ ಸಂಭವಿಸಿದ ಏರ್‌ ಇಂಡಿಯಾ (Air India) ಭೀಕರ ಅವಘಡದಲ್ಲಿ, ಮದುವೆಯಾಗಿದ್ದ ಗೇ ಜೋಡಿಯು ದುರಂತ ಸಾವು ಕಂಡಿದೆ.

    ಜಾಮಿ ಮೀಕ್ (45) ಮತ್ತು ಫಿಯಾಂಗಲ್ ಗ್ರೀನ್ ಲಾ (39) ಇಬ್ಬರೂ ಗೇ ಜೋಡಿ.‌ ಲಂಡನ್-ಬ್ರಿಟನ್‌ನ ವಾಕ್ಸ್ ಹಾಲ್‌ನವರಾಗಿದ್ದ ಸಲಿಂಗಿ ಜೋಡಿ 2022ರಲ್ಲಿ ಮದುವೆಯಾಗಿದ್ದರು (Same Sex Marriage). ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಜಾಮಿ ಮೀಕ್ ಎಂಬಾತ ವೆಲ್ನೆಸ್ ಫೌಂಡ್ರಿಯ ಸಂಸ್ಥಾಪಕ. ಇವರಿಬ್ಬರೂ ಯೋಗ ತರಬೇತಿ, ಆಧ್ಯಾತ್ಮಿಕ ತರಬೇತಿ ನೀಡುತ್ತಿದ್ದರು. ಭಾರತ ಪ್ರವಾಸಕ್ಕೆ ಬಂದಿದ್ದರು. ಘಟನೆ ಹಿಂದಿನ‌ ದಿನ ರಾತ್ರಿ ಅತ್ಯದ್ಭುತ ಎಂದು ಬಣ್ಣಿಸಿ ವೀಡಿಯೋ ಮಾಡಿದ್ದರು.

    ಭಾರತ ಪ್ರವಾಸ ಮುಗಿಸಿ ಹೊರಟಾಗ ಖುಷಿಯಲ್ಲಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದ ಗೇಟ್‌ನಲ್ಲಿ ಕುಳಿತು ಇವರು ಮಾಡಿದ್ದ ಕೊನೆಯ ವೀಡಿಯೋ ವೈರಲ್ ಆಗಿತ್ತು. ವೀಡಿಯೋದಲ್ಲಿ ಭಾರತದ ಪ್ರವಾಸದ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು. ವಿಮಾನವು ಹಾಸ್ಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತು. ಪರಿಣಾಮವಾಗಿ ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟಿದ್ದಾರೆ.

  • ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಅಹಮದಾಬಾದ್: ನಾನು ವಿಮಾನದಿಂದ ಜಂಪ್ ಮಾಡಲಿಲ್ಲ, ಬದಲಾಗಿ ಮುರಿದ ವಿಮಾನದ ಬಾಗಿಲಿನಿಂದ ನಡೆದುಕೊಂಡೇ ಬಂದೆ ಎಂದು ವಿಮಾನ ದುರಂತದಿಂದ (Air India Plane Crash) ಪಾರಾದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ಕುತೂಹಲಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಮರ್ಜೆನ್ಸಿ ಡೋರ್ ಒಡೆದು ಹೋಗಿತ್ತು, ನನ್ನ ಸೀಟ್ ಕೂಡ ಒಡೆದು ಹೋಗಿತ್ತು. ಎಮರ್ಜೆನ್ಸಿ ಡೋರ್ ಮುರಿದಿತ್ತು. ಅದರಿಂದ ನಾನು ಹೊರಬಂದೆ. ನಾನು ಹೊರಬರುವಾಗ ಅಲ್ಪಸ್ವಲ್ಪ ಬೆಂಕಿ ಹೊತ್ತಿಕೊಂಡಿತ್ತು. ನಂತರ ಇಡೀ ವಿಮಾನ ಸುಟ್ಟು ಹೋಯಿತು. ನಾನು ನೆಲಮಹಡಿಯಲ್ಲಿ ಬಿದ್ದಿದ್ದೆ, ಅಲ್ಲಿಂದ ಪಾರಾದೆ ಎಂದರು. ಇದನ್ನೂ ಓದಿ:  ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಅರ್ಧ ವಿಮಾನ ಕಟ್ಟಡದ ನೆಲಮಹಡಿಯಲ್ಲಿ ಇತ್ತು. ನಾನು ಹೊರಗಡೆ ಬಂದಾಗ ಅಲ್ಪ ಸ್ವಲ್ಪ ಬೆಂಕಿ ಹೊತ್ತಿಕೊಂಡಿತ್ತು. ತದನಂತರ ಬ್ಲಾಸ್ಟ್ ಆಯಿತು. ನೆಲಮಹಡಿಯಿಂದ ನಾನು ವಾಕ್ ಮಾಡಿಕೊಂಡೇ ಬಂದೆ. ಪ್ರಧಾನಮಂತ್ರಿ ಅವರು ಎಲ್ಲಾ ಓಕೆ ನಾ ಎಂದು ಮಾತನಾಡಿಸಿದರು. ನನ್ನ ಕುಟುಂಬ ಲಂಡನ್‌ನಲ್ಲಿ ಇದೆ. ನನ್ನ ಅಣ್ಣ ಭಾರತದಲ್ಲಿ ಇದ್ದಾನೆ ಎಂದು ಹೇಳಿದರು. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

  • ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಅಹಮದಾಬಾದ್: ಏರ್ ಇಂಡಿಯಾ ವಿಮಾನ (Air India Flight) ದುರಂತದಲ್ಲಿ ಸಾವಿನ ಸಂಖ್ಯೆ 274ಕ್ಕೇರಿದ್ದು, ಪತನವಾದ ಸ್ಥಳದಲ್ಲಿ ಅವಶೇಷಗಳ ತೆರವು ಕಾರ್ಯ ಆರಂಭಗೊಂಡಿದೆ.

    ವಿಮಾನದ ಒಳಭಾಗವನ್ನು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಳಗಡೆ ಮೃತ ದೇಹಗಳಿವೆಯೇ ಎಂದು ಪರಿಶೀಲಿಸಿ ತೆರವು ಕಾರ್ಯ ನಡೆಸಲಾಗುತ್ತಿದ್ದು, ಇಂದು ಇಡೀ ದಿನ ವಿಮಾನ ಟೇಲ್ ಭಾಗ (ವಿಮಾನದ ಹಿಂಭಾಗ) ತೆರವು ಕಾರ್ಯ ನಡೆಯಲಿದೆ.ವಿಮಾನ ತೆರವಿಗೆ ಮತ್ತೊಂದು ಕ್ರೇನ್ ಕೂಡ ಆಗಮಿಸಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಎರಡು ಕ್ರೇನ್ ಮೂಲಕ ವಿಮಾನ ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದ್ದು, ಬಳಿಕ ಅದನ್ನು ನೆಲಕ್ಕಿಳಿಸಿ ಹಾಸ್ಟೆಲ್ ಪ್ರದೇಶದಿಂದ ಸ್ಥಳಾಂತರ ಮಾಡಲಾಗುತ್ತದೆ. ಇಂದು ಸಂಜೆ ತನಕ ಕಾರ್ಯಚರಣೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ವಿಮಾನ ಪತನಗೊಂಡ ಪರಿಣಾಮ ವಿಮಾನದ ಹಿಂಭಾಗ ಟೇಲ್ ಹೊರತುಪಡಿಸಿ ಇನ್ನೇನು ಉಳಿದಿಲ್ಲ. ಇಡೀ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದ 90% ಭಾಗ ಸುಟ್ಟು ಕರಕಲಾಗಿದ್ದು, ಹಿಂಬದಿಯ ಟೇಲ್ ಅವಶೇಷಗಳು ಮಾತ್ರ ಹಾಗೇ ಉಳಿದಿದೆ. ಬಾಕಿ ಉಳಿದ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದಲ್ಲಿದ್ದ ಇಂಧನ ಒಮ್ಮೆಲೇ ದಹಿಸಿದ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶ ಎಲ್ಲವೂ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

  • Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    – ‘ವಿಮಾನ ಮೇಲಕ್ಕೆ ಏರುತ್ತಿಲ್ಲ..’; ಕೊನೆ 5 ಸೆಕೆಂಡ್‌ಗಳ ಆಡಿಯೋ

    ಗಾಂಧೀನಗರ: ಅಹಮದಾಬಾದ್‌ನಲ್ಲಿ ವಿಮಾನ ದುರಂತದ (Ahmedabad Plane Crash) ಕೊನೆ ಕ್ಷಣಗಳಲ್ಲಿ ಏರ್ ಇಂಡಿಯಾ ಪೈಲಟ್ ಸುಮಿತ್ ಸಭರ್ವಾಲ್ (Sumeet Sabharwal) ಅವರು ಎಟಿಸಿಗೆ (ATC) ನೀಡಿದ ಕೊನೆ ಸಂದೇಶದ ಆಡಿಯೋ ಲಭ್ಯವಾಗಿದೆ. ಕೇವಲ 5 ಸೆಕೆಂಡ್‌ಗಳ ಆಡಿಯೋ ಸಿಕ್ಕಿದೆ.

    ‘ಮೇಡೇ… ಒತ್ತಡವಿಲ್ಲ, ಶಕ್ತಿ ಕಳೆದುಕೊಳ್ಳುತ್ತಿದೆ, ಮೇಲೇರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಭರ್ವಾಲ್ ಅವರು ಎಟಿಸಿಗೆ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ, ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

    ವಿಮಾನವು 625 ಅಡಿ ಎತ್ತರವನ್ನು ತಲುಪಿದ ಸ್ವಲ್ಪ ಸಮಯದ ನಂತರ ನಿಮಿಷಕ್ಕೆ -475 ಅಡಿ ವೇಗದಲ್ಲಿ ಹಠಾತ್ ಇಳಿಯಲು ಪ್ರಾರಂಭಿಸಿತು. ತಕ್ಷಣವೇ ಪೈಲಟ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ‘ಮೇಡೇ’ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಎಟಿಸಿ ಮಾಡಿದ ಎಲ್ಲಾ ಕರೆಗಳಿಗೆ ಪೈಟಲ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

    ಮೇಡೇ ಎಂದರೆ ವಿಮಾನ ತುಂಬಾ ಡೇಂಜರ್‌ನಲ್ಲಿದೆ ಎಂದರ್ಥ. ಜೀವಕ್ಕೆ ಅಪಾಯವಿದೆ ಎಂದು ತುರ್ತು ಪರಿಸ್ಥಿತಿಯನ್ನು ಸೂಚಿಸಲು ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಬಳಸಲಾಗುವ ಅತ್ಯುನ್ನತ ಮಟ್ಟದ ರೇಡಿಯೋ ಸಂಕೇತವಾಗಿದೆ. ಇದು ತಕ್ಷಣದ ಸಹಾಯದ ಅಗತ್ಯವಿದೆ ಎಂದು ಸೂಚಿಸುತ್ತದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    ‘ಮೇಡೇ’ ಎಂಬ ಪದವು ಫ್ರೆಂಚ್ ಪದ ‘ಮೈಡರ್’ನಿಂದ ಬಂದಿದೆ. ‘ನನಗೆ ಸಹಾಯ ಮಾಡಿ’ ಎಂಬುದು ಇದರ ಅರ್ಥ. ತುರ್ತು ಸಂದರ್ಭಗಳಲ್ಲಿ ಸ್ಪಷ್ಟ ಸಂವಹನ ಖಚಿತಪಡಿಸಿಕೊಳ್ಳಲು ಲಂಡನ್‌ನ ಕ್ರಾಯ್ಡನ್ ವಿಮಾನ ನಿಲ್ದಾಣದಲ್ಲಿ ರೇಡಿಯೋ ಅಧಿಕಾರಿಯಾಗಿದ್ದ ಫ್ರೆಡೆರಿಕ್ ಸ್ಟಾನ್ಲಿ ಮಾಕ್‌ಫೋರ್ಡ್ 1920 ರ ದಶಕದ ಆರಂಭದಲ್ಲಿ ಇದನ್ನು ಪರಿಚಯಿಸಿದರು. ನಂತರ ಈ ಪದವು ಪೈಲಟ್‌ಗಳು ಮತ್ತು ನಾವಿಕರಿಗೆ ಅಂತರರಾಷ್ಟ್ರೀಯ ರೇಡಿಯೋ ಸಂವಹನದ ಪ್ರಮಾಣಿತ ಭಾಗವಾಯಿತು. 1927 ರಲ್ಲಿ ಮೋರ್ಸ್ ಕೋಡ್ ಸಿಗ್ನಲ್ “SOS” ಜೊತೆಗೆ ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು.