Tag: air india

  • ವೆಜ್ ಬದಲಾಗಿ ನಾನ್-ವೆಜ್ ಊಟ ನೀಡಿದ ಸಿಬ್ಬಂದಿ- ಅಮಾನತುಗೊಳಿಸಿದ ಏರ್ ಇಂಡಿಯಾ

    ವೆಜ್ ಬದಲಾಗಿ ನಾನ್-ವೆಜ್ ಊಟ ನೀಡಿದ ಸಿಬ್ಬಂದಿ- ಅಮಾನತುಗೊಳಿಸಿದ ಏರ್ ಇಂಡಿಯಾ

    ನವದೆಹಲಿ: ವೆಜ್ ಸೇವಿಸುವ ಪ್ರಯಾಣಿಕರಿಗೆ, ನಾನ್-ವೆಜ್ ಊಟ ನೀಡಿದ ಇಬ್ಬರು ಸಿಬ್ಬಂದಿಯನ್ನು ಏರ್ ಇಂಡಿಯಾ ಅಮಾನತುಗೊಳಿಸಿದೆ.

    ಸಸ್ಯಾಹಾರಿ ಪ್ರಯಾಣಿಕರಿಗೆ ತಪ್ಪಾಗಿ ಮಾಂಸಾಹಾರದ ಊಟ ನೀಡಿದ ಕಾರಣಕ್ಕಾಗಿ ಏರ್ ಇಂಡಿಯಾ ಮಾರ್ಚ್ 25 ರ ಟೋಕಿಯೊ-ದೆಹಲಿ ವಿಮಾನದ ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್

    ಪ್ರಯಾಣಿಕರು ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ತಪ್ಪಾಗಿ ಮಾಂಸಹಾರದ ಊಟ ನೀಡಲಾಗಿದೆ. ಮಾಂಸದ ಊಟ ಬಡಿಸಲಾಗಿದೆ ಎಂದು ಪ್ರಯಾಣಿಕರ ಗಮನಕ್ಕೆ ಬಂದ ನಂತರ ಅವರು ಸಿಬ್ಬಂದಿಗೆ ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನಯಾನ ಸಂಸ್ಥೆಯು ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, ಈ ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿ ಅವರನ್ನು ಏರ್ ಇಂಡಿಯಾ ಅಮಾನತುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಏರ್‌ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್‌ ಮುಖ್ಯಸ್ಥ ಎನ್.ಚಂದ್ರಶೇಖರನ್‌ ನೇಮಕ

    ಏರ್‌ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್‌ ಮುಖ್ಯಸ್ಥ ಎನ್.ಚಂದ್ರಶೇಖರನ್‌ ನೇಮಕ

    ನವದೆಹಲಿ: ಏರ್‌ ಇಂಡಿಯಾ (Air India) ಅಧ್ಯಕ್ಷರಾಗಿ ಟಾಟಾ ಸನ್ಸ್‌ ಗ್ರೂಪ್‌ನ (Tata Group) ಮುಖ್ಯಸ್ಥ ನಟರಾಜನ್‌ ಚಂದ್ರಶೇಖರನ್‌ ಅವರನ್ನು ಆಯ್ಕೆ ಮಾಡಲಾಗಿದೆ.

    ಟಾಟಾ ಗ್ರೂಪ್, ಟರ್ಕಿಯ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಎಂದು ತಿಂಗಳ ಆರಂಭದಲ್ಲಿ ಘೋಷಿಸಿತ್ತು. ಆದರೆ ಆ ನೇಮಕಾತಿಯು ಭಾರತದಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಿತು. ಬಳಿಕ ಟರ್ಕಿಯ ಇಲ್ಕರ್ ಐಸಿ ಅವರು ಟಾಟಾದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕರಾಗಲು ನಿರಾಕರಿಸಿದ್ದರು. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    ಚಂದ್ರಶೇಖರನ್ ಅವರು ಟಾಟಾ ಸನ್ಸ್‌ನ ಮುಖ್ಯಸ್ಥರಾಗಿದ್ದಾರೆ. ಹಿಡುವಳಿ ಕಂಪನಿ ಮತ್ತು 100 ಕ್ಕೂ ಹೆಚ್ಚು ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದಾರೆ. ಅವರು ಅಕ್ಟೋಬರ್ 2016 ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದರು. ಜನವರಿ 2017 ರಲ್ಲಿ ಮುಖ್ಯಸ್ಥರಾಗಿ ನೇಮಕಗೊಂಡರು.

    ಚಂದ್ರಶೇಖರನ್‌ ಅವರು ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪನಿಗಳ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದಾರೆ. ಅವರು 2009-17 ರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಚಂದ್ರಶೇಖರನ್ ಅವರು ಟಾಟಾ ಗ್ರೂಪ್‌ನ ಮುಖ್ಯಸ್ಥರಾದ ಮೊದಲ ಪಾರ್ಸಿಯೇತರ ಮತ್ತು ವೃತ್ತಿಪರ ಕಾರ್ಯನಿರ್ವಾಹಕರಾಗಿದ್ದರು.

  • ಏರ್ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಟರ್ಕಿಶ್ ಏರ್‌ಲೈನ್ಸ್‌ ಮಾಜಿ ಅಧ್ಯಕ್ಷ

    ನವದೆಹಲಿ: ಏರ್ ಇಂಡಿಯಾ ತನ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಲು ಟರ್ಕಿಶ್ ಏರ್‍ಲೈನ್ಸ್‍ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರಿಗೆ ಅವಕಾಶ ನೀಡಿತ್ತು. ಆದರೆ ಟಾಟಾ ಗ್ರೂಪ್‍ನ ಪ್ರಸ್ತಾಪವನ್ನು ಐಸಿ ನಿರಾಕರಿಸಿದ್ದಾರೆ.

    ಫೆಬ್ರವರಿ 14ರಂದು ಟಾಟಾ ಸನ್ಸ್ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವುದಾಗಿ ಘೋಷಿಸಿತ್ತು. ಆದರೆ ಈ ಅವಕಾಶವನ್ನು ಐಸಿ ನಿರಾಕರಿಸಿದ್ದಾರೆ ಎಂದು ಏರ್ ಇಂಡಿಯಾ ಮಂಗಳವಾರ ತಿಳಿಸಿದೆ. ಇದನ್ನೂ ಓದಿ: Microsoft ಸಿಇಒ ಸತ್ಯ ನಾಡೆಲ್ಲಾ ಪುತ್ರ ನಿಧನ!

    ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕನಾಗಿ ಇಲ್ಕರ್ ಐಸಿ ಅವರನ್ನು ನೇಮಕ ಮಾಡಲು ಸರ್ಕಾರ ಅನುಮತಿ ನೀಡಬಾರದು ಎಂದು ಆರ್‍ಎಸ್‍ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣಾ ವೇದಿಕೆ ಕಳೆದ ಶುಕ್ರವಾರ ಹೇಳಿತ್ತು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

    ಇದೀಗ ಟಾಟಾ ಸನ್ಸ್‍ನಿಂದ ನೇಮಕಗೊಂಡ ಕೇವಲ 2 ವಾರಗಳ ಬಳಿಕ ಐಸಿ ಏರ್ ಇಂಡಿಯಾದ ಸಿಇಒ ಹುದ್ದೆಯನ್ನು ನಿರಾಕರಿಸಿದ್ದಾರೆ.

  • ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ

    ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ

    ನವದೆಹಲಿ: ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಶುಕ್ರವಾರ ರೋಮೇನಿಯಾ ರಾಜಧಾನಿ ಬುಕಾರೆಸ್ಟ್‍ಗೆ 2 ವಿಮಾನಗಳನ್ನು ಕಳುಹಿಸಲು ಯೋಜಿಸಿದೆ.

    ಉಕ್ರೇನ್‍ನ ವಾಯುಪ್ರದೇಶವನ್ನು ಗುರುವಾರ ಮುಚ್ಚಲಾಗಿದೆ. ಹೀಗಾಗಿ ಉಕ್ರೇನ್‍ನಲ್ಲಿ ಭಾರತಿಯ ಪ್ರಯಾಣಿಕರು ಮಾತ್ರವಲ್ಲದೇ ಇತರ ದೇಶದ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!

    ಪ್ರಯಾಣಿಕರು ರಸ್ತೆಯ ಮೂಲಕ ಉಕ್ರೇನ್-ರೊಮೇನಿಯಾ ಗಡಿ ತಲುಪಿದರೆ, ಅಲ್ಲಿಂದ ಭಾರತ ಸರ್ಕಾರ ಅಧಿಕಾರಿಗಳು ಅವರನ್ನು ಬುಕಾರೆಸ್ಟ್‍ಗೆ ಕರೆದೊಯ್ಯಲಿದ್ದಾರೆ. ಬಳಿಕ ವಿಮಾನದ ಮೂಲಕ ಭಾರತಕ್ಕೆ ಹಿಂದಿರುಗಿಸುವಂತೆ ಏರ್ ಇಂಡಿಯಾ ಯೋಜಿಸಿದೆ. ಶನಿವಾರ 2 ಏರ್ ಇಂಡಿಯಾ ವಿಮಾನಗಳು ಬುಕಾರೆಸ್ಟ್‍ನಿಂದ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 20 ಸಾವಿರ ಭಾರತೀಯರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ.

    ಉಕ್ರೇನ್ ರಾಜಧಾನಿ ಕೀವ್‍ನಿಂದ ರೊಮೇನಿಯಾ ಗಡಿಗೆ ಸುಮಾರು 600 ಕಿ.ಮೀ ದೂರ ಇದೆ. ರಸ್ತೆ ಮಾರ್ಗವಾಗಿ ಕೀವ್‍ನಿಂದ ರೊಮೇನಿಯಾ ಗಡಿ ತಲುಪಲು 8 ರಿಂದ 11 ಗಂಟೆ ತಗುಲಬಹುದು. ಉಕ್ರೇನ್-ರೊಮೇನಿಯಾ ಗಡಿಯಿಂದ ಬುಕಾರೆಸ್ಟ್ 500 ಕಿ.ಮೀ ಅಂತರದಲ್ಲಿದೆ. ಇದರ ಪ್ರಯಾಣಕ್ಕೆ ಸುಮಾರು 7 ರಿಂದ 9 ಗಂಟೆ ತಗುಲಬಹುದು. ಇದನ್ನೂ ಓದಿ: Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ

    ಈಗಾಗಲೇ ಉಕ್ರೇನ್‍ನಲ್ಲಿ ರಷ್ಯಾ ಬಾಂಬುಗಳ ಸುರಿಮಳೆ ಹರಿಸಿದ್ದು, ನೂರಾರು ಸೈನಿಕರು ಸಾವನ್ನಪ್ಪಿದ್ದಾರೆ. ಹಲವು ದೇಶಗಳು ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರೂ ದಾಳಿ ನಿಲ್ಲುವಂತೆ ಕಾಣಿಸುತ್ತಿಲ್ಲ.

  • ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್

    ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್

    ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ವಾಸವಾಗಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯೆಯೇ ದೆಹಲಿಗೆ ವಾಪಸ್ ಆಗಿದೆ.

    ಈಗಾಗಲೇ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಚರಣೆ ನಡೆಸುತ್ತಿದೆ. ಇದರ ಮಧ್ಯೆ ಉಕ್ರೇನ್ ತನ್ನ ಭದ್ರತೆಗಾಗಿ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಸಾವಿರಾರು ಭಾರತೀಯರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ಬರಲು ಕಾಯುತ್ತಿದ್ದಾರೆ.

    ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಗ್ಗೆ ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವಂತೆ ತನ್ನ ಸೇನೆಗೆ ಪುಟಿನ್ ಸೂಚನೆ ನೀಡಿದ್ದಾರೆ. ಸೂಚನೆ ಬೆನ್ನಲ್ಲೇ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಚರಣೆ ನಡೆಯುತ್ತಿರುವುದರಿಂದ, ಎಲ್ಲಾ ವಾಣಿಜ್ಯ ವಿಮಾನಗಳು ಹೆಚ್ಚಿನ ಅಪಾಯದಲ್ಲಿವೆ. ಈ ಹಿನ್ನೆಲೆಯಲ್ಲಿ ಆದರೆ ಉಕ್ರೇನ್‍ಗೆ ಹೋಗುವ ಎಲ್ಲಾ ವಿಮಾನಗಳಿಗೆ ಏರ್‌ಮೆನ್‍ಗಳಿಗೆ ಸರ್ಕಾರ ಸೂಚನೆಯನ್ನು ನೀಡಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ವಾಪಾಸಾಗಲು ನಿರ್ಧರಿಸಿತು. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್

    ಈಗಾಗಲೇ ಉಕ್ರೇನ್‍ನಲ್ಲಿರುವ ಪ್ರಜೆಗಳಿಗೆ ಭಾರತವು 24 ಗಂಟೆಗಳ ಕಾಲ ಸಹಾಯವಾಣಿಯನ್ನು ತೆರೆದಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    ಜುಲೈ 2014ರಲ್ಲಿ ಮಲೇಷ್ಯಾ ಏರ್‍ಲೈನ್ಸ್ ವಿಮಾನವನ್ನು ಹೊಡೆದುರುಳಿಸಲಾಯಿತು. ಉಕ್ರೇನ್‍ನ ಸಶಸ್ತ್ರ ಪಡೆಗಳು ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳ ನಡುವಿನ ಯುದ್ಧದಲ್ಲಿ ವಿಮಾನದಲ್ಲಿದ್ದ ಎಲ್ಲಾ 298 ಜನರು ಸಾವನ್ನಪ್ಪಿದರು.

  • ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

    ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

    ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದ ಭೀತಿ ಹೆಚ್ಚಿದೆ. ಹೀಗಾಗಿ ಆತಂಕವಿರುವ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಟಾಟಾ ಒಡೆತನದ ಏರ್‌ ಇಂಡಿಯಾ ಇಂದು ರಾತ್ರಿ ಉಕ್ರೇನ್‌ ತಲುಪಲಿದೆ.

    ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯರು ಸುರಕ್ಷಿತವಾಗಿ ಹಿಂದಿರುಗಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು ಜಗ್ಗಿ ವಾಸುದೇವ್

    ಏರ್‌ ಇಂಡಿಯಾದ ಎಐ-1946 ಮೊದಲ ವಿಶೇಷ ವಿಮಾನದಲ್ಲಿ ಭಾರತೀಯ ಪ್ರಜೆಗಳು ಇಂದು ರಾತ್ರಿ ತವರು ದೇಶಕ್ಕೆ ಮರಳಲಿದ್ದಾರೆ ಎಂದು ಏರ್‌ಲೈನ್‌ ಮೂಲಗಳು ತಿಳಿಸಿವೆ. ಏರ್‌ ಇಂಡಿಯಾ ಫೆರ್ರಿ ವಿಮಾನವು ಸೋಮವಾರ ಉಕ್ರೇನ್‌ನಿಂದ ಭಾರತೀಯರನ್ನು ವಾಪಸ್‌ ಕರೆತಂದಿತ್ತು. ಏರ್‌ ಇಂಡಿಯಾದ ಮೂರು ವಿಮಾನಗಳು ಈ ಕಾರ್ಯಾಚರಣೆಯಲ್ಲಿವೆ.

    ಏರ್‌ ಇಂಡಿಯಾದ ಮೂರು ವಿಮಾನಗಳು ಫೆ.22, 24 ಮತ್ತು 26ರಂದು ಭಾರತ ಮತ್ತು ಉಕ್ರೇನ್‌ ನಡುವೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಲಾಗಿದೆ. ಉಕ್ರೇನ್‌ಗೆ ವಿಶೇಷ ಕಾರ್ಯಾಚರಣೆಯ ಭಾಗವಾಗಿ ದೆಹಲಿಯಿಂದ ಬೋಯಿಂಗ್‌ ಡ್ರೀಮ್‌ಲೈನರ್‌ ಎಐ-1947 ವಿಮಾನವು ಟೇಕ್‌ ಆಫ್‌ ಆಗಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

    ರಷ್ಯಾದೊಂದಿಗೆ ಉಕ್ರೇನ್ ಗಡಿಯಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಪರಸ್ಪರ ಸೌಹಾರ್ದಯುತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಡೆಯವರು ಅತ್ಯಂತ ಸಂಯಮ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿತ್ತು.

  • ಉಕ್ರೇನ್‍ನಲ್ಲಿರುವ ಭಾರತೀಯರಿಗೆ ನೆರವಾಗಲು ಮುಂದಾದ ಏರ್ ಇಂಡಿಯಾ ವಿಮಾನ

    ಉಕ್ರೇನ್‍ನಲ್ಲಿರುವ ಭಾರತೀಯರಿಗೆ ನೆರವಾಗಲು ಮುಂದಾದ ಏರ್ ಇಂಡಿಯಾ ವಿಮಾನ

    ನವದೆಹಲಿ: ರಷ್ಯಾ-ಉಕ್ರೇನ್ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿದ್ದಂತೆ, ಉಕ್ರೇನ್‍ನಲ್ಲಿರುವ ಭಾರತೀಯರು ಭಾರತಕ್ಕೆ ಬರಲು ಏರ್ ಇಂಡಿಯಾದ ಮೂರು ವಿಮಾನಗಳು ನೆರವಾಗಲು ಮುಂದಾಗಿದೆ.

    ಉಕ್ರೇನ್‍ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಆದ್ಯತೆ ಮೇರೆಗೆ ದೇಶ ತೊರೆಯುವಂತೆ ಉಕ್ರೇನ್‍ನ ರಾಜಧಾನಿ ಕೀವ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಕೆಲ ದಿನಗಳ ಹಿಂದೆ ಮಾಹಿತಿ ರವಾನಿಸತ್ತು. ಈ ಬೆನ್ನಲ್ಲೇ ಏರ್ ಇಂಡಿಯಾ ಮೂರು ವಿಮಾನಗಳ ಹಾರಾಟಕ್ಕೆ ನಿರ್ಧರಿಸಿದ್ದು ಇದೀಗ ಅಧಿಕೃತ ವೆಬ್‍ಸೈಟ್‍ನಲ್ಲಿ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯರು ಭಾರತಕ್ಕೆ ಬನ್ನಿ – ವಿದೇಶಾಂಗ ಇಲಾಖೆ

    ಉಕ್ರೇನ್‍ನ ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ ಮೂರು ವಿಮಾನಗಳು ಟೇಕ್ ಆಫ್ ಆಗಲಿದ್ದು, ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‍ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‍ಗಳ ಮೂಲಕ ಬುಕಿಂಗ್ ಮಾಡಬಹುದು ಎಂದು ಏರ್ ಇಂಡಿಯಾ ಶುಕ್ರವಾರ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಇತ್ತ ರಷ್ಯಾ ಉಕ್ರೇನ್ ಗಡಿ ವಿವಾದ ತಾರಕಕ್ಕೇರಿದ್ದು ಎರಡು ಕಡೆಯ ಸೇನೆಗಳು ಜಮಾವಣೆಗೊಂಡಿವೆ. ರಷ್ಯಾ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದ್ದು ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ. ಈ ನಡುವೆ ರಷ್ಯಾ-ಉಕ್ರೇನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಮುಂದಾಬೇಕು ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.

  • ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಿ – ಉದ್ಯೋಗಿಗಳ ಜೊತೆ ಚಂದ್ರಶೇಖರ್ ಮಾತು

    ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಿ – ಉದ್ಯೋಗಿಗಳ ಜೊತೆ ಚಂದ್ರಶೇಖರ್ ಮಾತು

    ನವದೆಹಲಿ: ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಬೇಕು. ನಾವು ಯಶಸ್ವಿಯಾಗಬೇಕೆಂದು ಇಡೀ ರಾಷ್ಟ್ರ ಬಯಸುತ್ತಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಬುಧವಾರ ಏರ್ ಇಂಡಿಯಾ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದರು.

    ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾವನ್ನು ಬಿಡ್ ಮೂಲಕ ಗೆದ್ದು ಸ್ವಾಧೀನಪಡಿಸಿಕೊಂಡಿರುವ ಟಾಟಾ ಗ್ರೂಪ್ಸ್ ಇದೀಗ ತಂತ್ರಜ್ಞಾನ ಹಾಗೂ ಸೇವೆಯಲ್ಲಿ ಅತ್ಯುತ್ತಮವಾಗಿಸುವ ಬಗ್ಗೆ ಭವಿಷ್ಯದ ನೀಲನಕ್ಷೆ ಸಿದ್ಧಪಡಿಸುತ್ತಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಏರ್ ಇಂಡಿಯಾ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಒಪ್ಪಂದದ ಪ್ರಕಾರ ಕಂಪನಿ ಅವರನ್ನು 1 ವರ್ಷದ ವರೆಗೆ ಉಳಿಸಿಕೊಳ್ಳಬೇಕಾಗಿದೆ. ಏರ್ ಇಂಡಿಯಾ ಟಾಟಾ ಗ್ರೂಪ್‌ಗೆ ಸೇರ್ಪಡೆಗೊಳ್ಳುವುದರೊಂದಿಗೆ 130 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಬ್ರಾಂಡ್ ಆಗಲು ನಮಗೆ ಈಗ ಅವಕಾಶವಿದೆ ಎಂದು ಹೇಳಿದರು.

    ಏರ್ ಇಂಡಿಯಾ ಆನ್-ಟೈಮ್ ಕಾರ್ಯಕ್ಷಮತೆಯಲ್ಲಿ ಬುಕ್ಕಿಂಗ್, ಬೋರ್ಡಿಂಗ್, ಲಾಂಜ್, ಗ್ರಾಹಕರ ಕುಂದು ಕೊರತೆ ನಿರ್ವಹಣೆಗೆ ತಡೆ ರಹಿತ ಅನುಭವ ನೀಡುತ್ತದೆ. ಪ್ರಯಾಣಿಕರು, ಸಿಬ್ಬಂದಿ, ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿ ಸೇರಿದಂತೆ ಎಲ್ಲರ ಸುರಕ್ಷತೆ ಅತಿ ಮುಖ್ಯವಾಗಿರುತ್ತದೆ ಎಂದು ಚಂದ್ರಶೇಖರನ್ ತಿಳಿಸಿದರು. ಇದನ್ನೂ ಓದಿ: ಫೇಸ್‌ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್‌ಬರ್ಗ್

    ನಾವು ಆರ್ಥಿಕವಾಗಿ ಸದೃಢರಾಗಿರುವಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಮಾಡುವ ಕಾರ್ಯ ಬಹಳ ದೊಡ್ಡದಾಗಿದೆ. ಇದು ಅತ್ಯಂತ ರೋಮಾಂಚನಕಾರಿ ಪ್ರಯಾಣವಾಗಲಿದೆ. ಈ ಯಶಸ್ಸನ್ನು ಇಡೀ ರಾಷ್ಟ್ರ ಬಯಸುತ್ತಿದೆ ಎಂದು ಹೇಳಿದರು.

  • ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ನವದೆಹಲಿ: ಗ್ರಾಹಕರ ಸೇವೆಯಲ್ಲಿ ಏರ್ ಇಂಡಿಯಾ ಅತ್ಯುತ್ತಮವಾಗಬೇಕೆಂದು ನಾವು ಬಯಸುತ್ತೇವೆ. ಏರ್ ಇಂಡಿಯಾ ವಿಶ್ವದಲ್ಲೇ ತಾಂತ್ರಿಕವಾಗಿ ಮುಂದುವರಿದ ಸಂಸ್ಥೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಕರನ್ ತಿಳಿಸಿದ್ದಾರೆ.

    ಚಂದ್ರಶೇಖರನ್ ಇತ್ತೀಚೆಗೆ ಸಂದೇಶವನ್ನು ನೀಡಿದ್ದು, ಏರ್ ಇಂಡಿಯಾವನ್ನು ವಿಶ್ವ ದರ್ಜೆಗೆ ತರಲು ಟಾಟಾ ಗ್ರೂಪ್ ಬದ್ಧವಾಗಿದೆ. ಗ್ರಾಹಕರ ಸೇವೆಯಲ್ಲಿ ಏರ್ ಇಂಡಿಯಾವನ್ನು ಅತ್ಯುತ್ತಮವಾಗಿಸಲು ಕಂಪನಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀನೀ ಟೆಲಿಕಾಂ ಕಂಪನಿ ಹುವಾವೇ ಮೇಲೆ ಐಟಿ ರೇಡ್

    ಏರ್ ಇಂಡಿಯಾವನ್ನು ಜನವರಿ 27ರಂದು ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲಾಯಿತು. ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಟಾಟಾ ಕಂಪನಿ 69 ವರ್ಷಗಳ ಬಳಿಕ ಏರ್ ಇಂಡಿಯಾವನ್ನು 18,000 ಕೋಟಿ ರೂ.ಗೆ ಕೊಂಡುಕೊಂಡಿತು. ಇದನ್ನೂ ಓದಿ: ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

    ಇದಕ್ಕೂ ಮೊದಲು ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ, ಟಾಟಾ ಗ್ರೂಪ್ ಏರ್ ಇಂಡಿಯಾದ ಹೊಸ ಗ್ರಾಹಕರನ್ನು ಸ್ವಾಗತಿಸುತ್ತದೆ. ಪ್ರಯಾಣಿಕರ ಸೌಕರ್ಯ ಹಾಗೂ ಸೇವೆಯ ವಿಷಯದಲ್ಲಿ ಏರ್ ಇಂಡಿಯಾವನ್ನು ಆಯ್ಕೆಯ ಏರ್‌ಲೈನ್ ಮಾಡಲು ಒಟ್ಟಾಗಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದಿದ್ದರು.

  • 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾದಲ್ಲಿ ಮಾರ್ದನಿಸಿದ ಟಾಟಾ ವೈಭವ

    67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾದಲ್ಲಿ ಮಾರ್ದನಿಸಿದ ಟಾಟಾ ವೈಭವ

    ನವದೆಹಲಿ: 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದುಕೊಂಡ ಬಳಿಕ ಇಂದು ವಿಮಾನ ಹೊರಡುವ ಮುನ್ನ ವಿಶೇಷ ಪ್ರಕಟನೆಯನ್ನು ಪೈಲಟ್ ಹೊರಡಿಸುವ ಮೂಲಕ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

    ಭಾರತ ಸರ್ಕಾರದ ಕೈಯಲ್ಲಿದ್ದ ಏರ್ ಇಂಡಿಯಾದ ನಿಯಂತ್ರಣವನ್ನು ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್ ಪಡೆದುಕೊಂಡಿತ್ತು. ಇಂದು ವಿಮಾನ ಹೊರಡುವ ಮುನ್ನ ಪ್ರಯಾಣಿಕರಲ್ಲಿ, ಆತ್ಮೀಯ ಅತಿಥಿಗಳೇ, ನಾನು ನಿಮ್ಮ ಕ್ಯಾಪ್ಟನ್… ಎಲ್ಲರಿಗೂ ಇತಿಹಾಸ ಪ್ರಸಿದ್ಧ ವಿಮಾನಕ್ಕೆ ಆಧಾರದ ಸ್ವಾಗತ ಇದು ತುಂಬಾ ವಿಶೇಷವಾದ ಪ್ರಯಾಣ. ಇದೀಗ ಏರ್ ಇಂಡಿಯಾ ಟಾಟಾ ಗ್ರೊಪ್‍ಗೆ 7 ದಶಕಗಳ ಬಳಿಕ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ನೀವೆಲ್ಲರೂ ಈ ಪ್ರಯಾಣವನ್ನು ಎಂಜಾಯ್ ಮಾಡುತ್ತೀರಿ ಅಂದುಕೊಂಡಿದ್ದೇವೆ ಥ್ಯಾಂಕ್ಯೂ ಎಂದು ಎಲ್ಲಾ ಏರ್ ಇಂಡಿಯಾ ವಿಮಾನ ಹೊರಡುವ ಮುನ್ನ ಪೈಲಟ್‍ಗಳು ಪ್ರಕಟನೆ ಹೊರಡಿಸಿದ್ದಾರೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದಕ್ಕೆ 1946ರಲ್ಲಿ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಸರ್ಕಾರವು 1,953 ರಲ್ಲಿ ಏರ್‌ಲೈನ್ಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಜೆಆರ್‌ಡಿ ಟಾಟಾ 1977ರವರೆಗೆ ಅದರ ಅಧ್ಯಕ್ಷರಾಗಿ ಮುಂದುವರಿದರು. ಸುಮಾರು 67 ವರ್ಷಗಳ ನಂತರ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ಪಡೆದುಕೊಂಡಿದೆ. ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರವು ಟಾಟಾ ಸನ್ಸ್‌ಗೆ ಮಾರಾಟ ಮಾಡಿದೆ. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು 18,000 ಕೋಟಿಗೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಿತ್ತು. ಅದಾದ ನಂತರ ವಿಮಾನಯಾನ ಸಂಸ್ಥೆಯಲ್ಲಿನ ತನ್ನ ಶೇ.100 ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಲು ಟಾಟಾ ಗ್ರೂಪ್ಸ್‌ಗೆ ಲೆಟರ್ ಆಫ್ ಇಂಟೆಂಟ್ (ಎನ್‍ಒಐ) ನೀಡಲಾಯಿತು. ನಂತರ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್‍ಗೆ ಸರ್ಕಾರ ಏರ್ ಇಂಡಿಯಾವನ್ನು ಒಪ್ಪಿಸಿದೆ. ಇದನ್ನೂ ಓದಿ: ಸೇನಾ ವಿಮಾನ ಪತನ – ಅಪಾಯದಿಂದ ಪಾರಾದ ಪೈಲಟ್‌ಗಳು