Tag: air india

  • ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆಗಳು

    ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆಗಳು

    ನವದೆಹಲಿ: ನ್ಯೂಯಾರ್ಕ್‍ನ ಜೆಎಫ್‍ಕೆ ವಿಮಾನ ನಿಲ್ದಾಣದಿಂದ ದೆಹಲಿಗೆ (Delhi) ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಜಿರಳೆಗಳು (Cockroaches) ಕಾಣಿಸಿಕೊಂಡಿದ್ದು, ಈ ಫೋಟೋವನ್ನು ಪ್ರಯಾಣಿಕನೊಬ್ಬರು ಹಂಚಿಕೊಂಡು ಕಿಡಿಕಾರಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕನೊಬ್ಬ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆ ಫೋಟೋವನ್ನು ಶೇರ್ ಮಾಡಿಕೊಂಡು ಕೆಟ್ಟ ಅನುಭವ ಎಂದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ವಿಶ್ವಸಂಸ್ಥೆಯ ರಾಜತಾಂತ್ರಿಕನಾದ್ದರಿಂದ ನಾನು ವಿಶ್ವಾದ್ಯಂತ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಆದರೆ ಏರ್‍ಇಂಡಿಯಾದಲ್ಲಿ ದೆಹಲಿಗೆ ಬರುವಾಗ ಕೆಟ್ಟ ಅನುಭವವಾಗಿದ್ದು, ಸೀಟುಗಳು ಮುರಿದಿದ್ದು, ಯಾವುದೇ ಮನೋರಂಜನೆಯಿರಲಿಲ್ಲ, ಜೊತೆಗೆ ಜಿರಳೆಗಳು ಕಾಣಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುಗಾದಿ ಮುನ್ನಾ ದಿನವೇ 2 ಜೀವ ಬಲಿ – ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ಸಾವು

    ಈ ಪೋಸ್ಟ್‌ಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಟ್ಟ ಅನುಭವಕ್ಕೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಬುಕಿಂಗ್ ವಿವರಗಳನ್ನು ನೀಡುವಂತೆ ಮನವಿ ಮಾಡಿದ್ದು, ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದೆ.

    ಈ ಪೋಸ್ಟ್‌ಗೆ ಓರ್ವ ಕಾಮೆಂಟ್ ಮಾಡಿದ್ದು, ಹೆಚ್ಚಾಗಿ ಪ್ರಯಾಣಿಕರು ತರುವ ಕ್ಯಾರಿ ಆನ್ ಬ್ಯಾಗ್‍ಗಳ ಮೂಲಕ ಜಿರಳೆಗಳನ್ನು ಬರುತ್ತದೆ. ಇದರ ಬಗ್ಗೆ ಏರ್ ಇಂಡಿಯಾ ಏನು ಮಾಡಬಹುದು? ಏರ್ ಇಂಡಿಯಾ ಇದನ್ನು ಹೇಗೆ ತಡೆಯಬಹುದು? ಎನ್ನುವುದನ್ನು ಯೋಚಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಚಿಂಚನಸೂರ್‌ ರಾಜೀನಾಮೆ ನೀಡಿದ್ಯಾಕೆ?

  • 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ಕೊಚ್ಚಿ: ಚಿನ್ನ (Gold) ಕಳ್ಳ ಸಾಗಾಣಿಕೆ (Smuggling) ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು (Cabin crew) ಕೊಚ್ಚಿ (Kochi) ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ (Customs Preventive Commissionerate) ತಿಳಿಸಿದೆ.

    ಆರೋಪಿಯನ್ನು ವಯನಾಡು ಮೂಲದ ಶಫಿ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 1487 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

    ಬಹ್ರೇನ್ (Bahrain), ಕೋಯಿಕ್ಕೋಡ್ (Kozhikode) ಹಾಗೂ ಕೊಚ್ಚಿ ನಡುವಿನ ಏರ್ ಇಂಡಿಯಾ (Air India) ವಿಮಾನದ ಕ್ಯಾಬಿನ್ ಸಿಬ್ಬಂದಿ ಚಿನ್ನ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಕೈಗಳಿಗೆ ಚಿನ್ನವನ್ನು ಸುತ್ತಿಕೊಂಡು, ಅಂಗಿಯ ತೋಳುಗಳಿಂದ ಮುಚ್ಚಿ ಗ್ರೀನ್ ಚಾನೆಲ್ ಮೂಲಕ ಆರೋಪಿ ಹಾದುಹೋಗುವ ಪ್ಲಾನ್ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಿಂಗಾಪುರದಿಂದ (Singapore) ಚೆನೈಗೆ (Chennai) ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 3.32 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

  • ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್

    ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್

    ಮುಂಬೈ: ತನ್ನ ವ್ಯಾಪ್ತಿಯನ್ನು ಯುರೋಪ್‌ಗೆ ವಿಸ್ತರಿಸಲು ಟರ್ಕಿಶ್ ಏರ್‌ಲೈನ್ಸ್ (Turkish Airlines) ಸಹಭಾಗಿತ್ವದಲ್ಲಿ 500 ವಿಮಾನಗಳನ್ನ ಖರೀದಿಸಲು ಇಂಡಿಗೋ ಏರ್‌ಲೈನ್ಸ್ (IndiGo Airlines) ಆರ್ಡರ್ ಮಾಡಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.

    ಇದು ಭಾರತ-ಇಸ್ತಾಂಬುಲ್ (India-Istanbul) ಮತ್ತು ಯುರೋಪ್ (Europe) ನಡುವೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಬಿಸಿ ತೆರಿಗೆ ಪಾವತಿಯಲ್ಲಿ ಅಕ್ರಮ,  ಸಾಕ್ಷ್ಯ ಲಭ್ಯ: CBDT

    ಏರ್‌ಲೈನ್ಸ್ ಅಧಿಕಾರಿಗಳ ಪ್ರಕಾರ, ಇಂಡಿಗೋ ಯುರೋಪಿಯನ್ ದೈತ್ಯ ಏರ್‌ಬಸ್ ಹಾಗೂ ಯುಎಸ್ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಗೆ ಮುಂದಾಗಿದೆ. ಇದನ್ನೂ ಓದಿ: ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ

    ಈ ಕುರಿತು ಮಾತನಾಡಿರುವ ಮಲ್ಹೋತ್ರಾ, ಇಂಡಿಗೋ ಪ್ರಸ್ತುತ 1,800 ವಿಮಾನಗಳನ್ನು ಹಾರಿಸುತ್ತಿದೆ. ಅವುಗಳಲ್ಲಿ 10 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿವೆ. ವಿಸ್ತರಣಾ ಯೋಜನೆಗಾಗಿ ಇಂಡಿಗೋ ಇನ್ನೂ 500 ವಿಮಾನಗಳ ಖರೀದಿಗೆ ಆರ್ಡರ್ ಮಾಡಿದೆ. ಅದಕ್ಕಾಗಿ ಟರ್ಕಿಏರ್‌ಲೈನ್‌ನೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಇತ್ತೀಚೆಗೆ 470 ವಿಮಾನಗಳನ್ನು ಖರೀದಿಸಿದ ಏರ್ ಇಂಡಿಯಾ ಹೆಸರನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ಸ್ಪರ್ಧೆಯನ್ನು ಯಾವಾಗಲೂ ಸ್ವಾಗತಿಸುತ್ತೇವೆ. ಭಾರತದಲ್ಲಿ ಪಾಸ್‌ಪೋರ್ಟ್ ಹೊಂದಿದವರು ವಿದೇಶಕ್ಕೆ ಹಾರಲು ಬಯಸುತ್ತಾರೆ. ಏಕೆಂದರೆ ಅವರಿಗೆ ದೊಡ್ಡ ಸಾಮರ್ಥ್ಯವಿದೆ. ಆದ್ದರಿಂದ ನಾವು ಭಾರತೀಯರನ್ನ ಗಡಿಯಾಚೆಗೆ ಕರೆದೊಯ್ಯಲು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್‌ಬಸ್‌-ಬೋಯಿಂಗ್‌ ಜೊತೆ ಮೆಗಾ ಡೀಲ್‌: ವಿಶ್ವದಾಖಲೆ ನಿರ್ಮಿಸಿದ ಏರ್‌ ಇಂಡಿಯಾ

    ಏರ್‌ಬಸ್‌-ಬೋಯಿಂಗ್‌ ಜೊತೆ ಮೆಗಾ ಡೀಲ್‌: ವಿಶ್ವದಾಖಲೆ ನಿರ್ಮಿಸಿದ ಏರ್‌ ಇಂಡಿಯಾ

    ನವದೆಹಲಿ: ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 470 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿದೆ.

    ಫ್ರಾನ್ಸಿನ ಏರ್‌ಬಸ್‌ನಿಂದ (Air Bus) 250 ಮತ್ತು ಅಮೆರಿಕದ ಬೋಯಿಂಗ್‌ನಿಂದ (Boeing) 220 ವಿಮಾನಗಳನ್ನು ಏರ್‌ ಇಂಡಿಯಾದಿಂದ ಖರೀದಿಸಲಿದೆ. ಒಟ್ಟು 420 ಸಣ್ಣ, ಮಧ್ಯಮ ಗಾತ್ರ ಮತ್ತು 40 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ (Air India) ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್‌ ಇಂಡಿಯಾವನ್ನು ಸೇರಲಿದೆ.

    ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್‌ (American Airlines) 460 ವಿಮಾನಗಳನ್ನು ಆರ್ಡರ್‌ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ (Indigo) 300 ವಿಮಾನ ಖರೀದಿಗೆ ಆರ್ಡರ್‌ ಮಾಡಿತ್ತು.

    ಫ್ರಾನ್ಸ್‌ನ ಏರ್‌ಬಸ್‌ ಸಂಸ್ಥೆಯಿಂದ 40 ಭಾರೀಗಾತ್ರದ ಎ350 ವಿಮಾನಗಳನ್ನು, 20 ಬೋಯಿಂಗ್‌ 787 ಎಸ್‌, 10 ಬೋಯಿಂಗ್‌ 777-9ಎಸ್‌, 210 ಎರ್‌ಬಸ್‌ ಎ320/321 ನಿಯೋ, 190 ಬೋಯಿಂಗ್‌ ಮ್ಯಾಕ್ಸ್‌ ವಿಮಾನಗಳನ್ನು ವಿಮಾನಗಳನ್ನು ಖರೀದಿಸಲು ಟಾಟಾ ಮಾಲಿಕತ್ವದ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ.  ಇದನ್ನೂ ಓದಿ: ಅದಾನಿ ಎಂಟರ್‌ಪ್ರೈಸಸ್‌ಗೆ 820 ಕೋಟಿ ನಿವ್ವಳ ಲಾಭ – ಷೇರು ಬೆಲೆ ಜಿಗಿತ

    ಏರ್‌ಬಸ್‌ ಜೊತೆ ಒಪ್ಪಂದ
    ಏರ್‌ಬಸ್‌ ಜೊತೆ ಒಪ್ಪಂದ ಈ ಕ್ಷಣಕ್ಕೆ ಪ್ರಧಾನಿ ಮೋದಿ, ಟಾಟಾ ಸಂಸ್ಥೆ ಮುಖ್ಯಸ್ಥ ರತನ್ ಟಾಟಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರಾನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷಿಯಾದರು.

    ಏರ್ ಇಂಡಿಯಾದ ಪುನಶ್ಚೇತನಕ್ಕಾಗಿ ಏರ್ ಬಸ್ ಸಂಸ್ಥೆ ಸಹಾಯ ಮಾಡಲಿದೆ. ಇದು ಐತಿಹಾಸಿಕ ಕ್ಷಣ ಎಂದು ಏರ್‌ಬಸ್‌ ಚೀಫ್ ಎಕ್ಸಿಕ್ಯೂಟೀವ್ ಗೀಲಮ್ ಫೌರಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ವೈಮಾನಿಕ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ದೇಶವಾಗಿ ಭಾರತ ಹೊರಹೊಮ್ಮಲಿದೆ. ಮುಂದಿನ 15 ವರ್ಷದಲ್ಲಿ ಭಾರತಕ್ಕೆ 2500 ಏರ್‌ಕ್ರಾಫ್ಟ್‌ ಬೇಕಾಗುತ್ತವೆ ಎಂದು ಮೋದಿ ಹೇಳಿದ್ದಾರೆ.

    ಬೋಯಿಂಗ್‌ ಜೊತೆ ಡೀಲ್‌:
    ಏರ್‌ಬಸ್‌ ಡೀಲ್‌ ಅಧಿಕೃತವಾದ ಬೆನ್ನಲ್ಲೇ ಟಾಟಾ ಕಂಪನಿ ಅಮೆರಿಕದ ಬೋಯಿಂಗ್‌ ಜೊತೆ 200 ವಿಮಾನ ಖರೀದಿಗೆ ಒಪ್ಪಂದ ಮಾಡಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಈ ಡೀಲ್‌ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

    ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಐತಿಹಾಸಿಕ ಒಪ್ಪಂದದ ಮೂಲಕ 220 ಅಮೆರಿಕನ್ ನಿರ್ಮಿತ ವಿಮಾನಗಳ ಖರೀದಿಸಲಿದೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಖರೀದಿ ಒಪ್ಪಂದಿಂದ ಅಮೆರಿಕದ 44 ರಾಜ್ಯಗಳಲ್ಲಿ ಒಟ್ಟು 10 ಲಕ್ಷ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ. ಈ ಘೋಷಣೆ ಅಮೆರಿಕ -ಭಾರತದ ಆರ್ಥಿಕ ಪಾಲುದಾರಿಕೆಯ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಘೋಷಿಸಿದ್ದಾರೆ.

     

    ಎ350 ವಿಮಾನ ವಿಶೇಷವೇನು?
    ಏಕಕಾಲದಲ್ಲಿ 17,000 ಕಿ.ಮೀ ಹಾರುವ ಸಾಮರ್ಥ್ಯ ಹೊಂದಿರುವ ಈ ವಿಮಾನವನ್ನು 3 ಕ್ಲಾಸ್ ಆಗಿ ವಿಭಜಿಸಿದರೆ 410 ಪ್ರಯಾಣಿಕರು ಪ್ರಯಾಣಿಸಬಹುದು. ಸಿಂಗಲ್ ಕ್ಲಾಸ್ ವಿಮಾನವಾದರೆ 480 ಪ್ರಯಾಣಿಕರನ್ನು ಕರೆದೊಯ್ಯಬಹುದು.

    ಕೋವಿಡ್‌ ಬಳಿಕ ಭಾರತದಲ್ಲಿ ವಿಮಾನಯಾನ ಕ್ಷೇತ್ರ ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಏರ್‌ ಇಂಡಿಯಾ ಮೊದಲೇ ಆರ್ಡರ್‌ ಬುಕ್ಕಿಂಗ್‌ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು 30% ಗೆ ಹೆಚ್ಚಿಸುವ ಗುರಿಯನ್ನು ಏರ್‌ ಇಂಡಿಯಾ ಹಾಕಿಕೊಂಡಿದೆ. 2024ರ ಅಂತ್ಯದ ವೇಳೆಗೆ ಏರ್ ಇಂಡಿಯಾಗೆ 50 ಹೊಸ ವಿಮಾನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಇಂಡಿಗೋಗೆ ಸ್ಪರ್ಧೆ ನೀಡಲು 5-6 ಗಂಟೆಯ ಒಳಗಡೆ ದೇಶದ ವಿವಿಧ ಸ್ಥಳಗಳನ್ನು ತಲುಪಲು ಸಣ್ಣ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ ಮುಂದಾಗಿದೆ. ಅಮೆರಿಕ, ಯುರೋಪ್ ದೇಶಗಳಿಗೆ ಸೇವೆ ನೀಡಲು ದೊಡ್ಡ ಗಾತ್ರ ವಿಮಾನಗಳನ್ನು ಖರೀದಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 500 ವಿಮಾನ ಖರೀದಿಗೆ ಆರ್ಡರ್‌ – ವಿಶ್ವ ದಾಖಲೆ ಬರೆದ ಏರ್‌ ಇಂಡಿಯಾ

    500 ವಿಮಾನ ಖರೀದಿಗೆ ಆರ್ಡರ್‌ – ವಿಶ್ವ ದಾಖಲೆ ಬರೆದ ಏರ್‌ ಇಂಡಿಯಾ

    ಮುಂಬೈ: ಟಾಟಾ ಸನ್ಸ್ (Tata Sons) ಒಡೆತನದ ಏರ್ ಇಂಡಿಯಾ 500 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ದಾಖಲೆ ಬರೆದಿದೆ. ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿದೆ.

    430 ಸಣ್ಣ ಮತ್ತು 30 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ (Air India) ಮುಂದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ವಿಮಾನಗಳು ಏರ್‌ ಇಂಡಿಯಾವನ್ನು ಸೇರಲಿದೆ.

    ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್‌ (American Airlines) 460 ವಿಮಾನಗಳನ್ನು ಆರ್ಡರ್‌ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ (Indigo) 300 ವಿಮಾನ ಖರೀದಿಗೆ ಆರ್ಡರ್‌ ಮಾಡಿತ್ತು.

    ಯಾವ ವಿಮಾನಗಳು?
    ಯುರೋಪ್‌ ಮೂಲದ ಏರ್‌ಬಸ್ (Airbus) ಕಂಪನಿ ಜೊತೆ A320 ನಿಯೋ 240 ವಿಮಾನಗಳು ಮತ್ತು A350 40 ವಿಮಾನ ಖರೀದಿಗೆ ಆರ್ಡರ್‌ ನೀಡಿದೆ. ಅಮೆರಿಕದ ಬೋಯಿಂಗ್ (Boeing) ಬಳಿ 737 ಮ್ಯಾಕ್ಸ್ 190 ವಿಮಾನಗಳು, 787 ಡ್ರೀಮ್‌ಲೈನರ್‌ 20 ಮತ್ತು 777x 10 ವಿಮಾನಗಳನ್ನು ಖರೀದಿ ಮಾಡಲಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

    ಮುಂದಿನ ವಾರ ಅಧಿಕೃತ ಪ್ರಕಟಣೆ ಘೋಷಣೆಯಾಗುವ ಸಾಧ್ಯತೆ ಇದೆ. 150 ಶತಕೋಟಿ ಡಾಲರ್‌ ಮೌಲ್ಯದ ಖರೀದಿ ಒಪ್ಪಂದ ನಡೆದಿದ್ದರೂ ಏರ್‌ ಇಂಡಿಯಾ ಹಲವು ರಿಯಾಯಿತಿಗಳನ್ನು ಪಡೆಯಲಿದೆ ಎಂದು ವರದಿಯಾಗಿದೆ.

    ಇಂದು ಏರ್‌ಬಸ್ ಮತ್ತು ಏರ್ ಇಂಡಿಯಾ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಏರ್‌ಬಸ್ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಶ್ಚಿಯನ್ ಸ್ಕೆರೆರ್ ಭಾಗಿಯಾಗಿ ಆರ್ಡರ್‌ ಅಂತಿಮಗೊಳಿಸಿದ್ದಾರೆ. ಜನವರಿ 29 ರಂದು ಟಾಟಾ ಸನ್ಸ್‌ನ ಪ್ರಧಾನ ಕಛೇರಿಯಾದ ಬಾಂಬೆ ಹೌಸ್‌ನಲ್ಲಿ ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

    ಕೋವಿಡ್‌ ಬಳಿಕ ವಿಮಾನಯಾನ ಕ್ಷೇತ್ರ ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಏರ್‌ ಇಂಡಿಯಾ ಮೊದಲೇ ಆರ್ಡರ್‌ ಬುಕ್ಕಿಂಗ್‌ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು 30% ಗೆ ಹೆಚ್ಚಿಸುವ ಗುರಿಯನ್ನು ಏರ್‌ ಇಂಡಿಯಾ ಹಾಕಿಕೊಂಡಿದೆ. 2024ರ ಅಂತ್ಯದ ವೇಳೆಗೆ ಏರ್ ಇಂಡಿಯಾಗೆ 50 ಹೊಸ ವಿಮಾನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಇಂಡಿಗೋಗೆ ಸ್ಪರ್ಧೆ ನೀಡಲು 5-6 ಗಂಟೆಯ ಒಳಗಡೆ ದೇಶದ ವಿವಿಧ ಸ್ಥಳಗಳನ್ನು ತಲುಪಲು ಸಣ್ಣ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ ಮುಂದಾಗಿದೆ. ಅಮೆರಿಕ, ಯುರೋಪ್ ದೇಶಗಳಿಗೆ ಸೇವೆ ನೀಡಲು ದೊಡ್ಡ ಗಾತ್ರ ವಿಮಾನಗಳನ್ನು ಖರೀದಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Air India Caseː ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ ಬೇಲ್

    Air India Caseː ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ ಬೇಲ್

    ನವದೆಹಲಿ: 2022ರ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ತನ್ನ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಂಕರ್ ಮಿಶ್ರಾಗೆ (Shankar Mishra) ದೆಹಲಿ ನ್ಯಾಯಾಲಯವು (Delhi Court) ಜಾಮೀನು ಮಂಜೂರು ಮಾಡಿದೆ.

    ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (Sessions Judge) ಹರ್ಜ್ಯೋತ್ ಸಿಂಗ್ ಭಲ್ಲಾ ಅವರು ಮಿಶ್ರಾಗೆ 1 ಲಕ್ಷ ರೂ. ಜಾಮೀನು ಬಾಂಡ್ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: 2013ರ ರೇಪ್‌ಕೇಸ್‌: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

    ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಈ ತಿಂಗಳ ಆರಂಭದಲ್ಲಿ ಎಂಎಂ ನ್ಯಾಯಾಲಯ (MM Court), ಆರೋಪಿ ಮಿಶ್ರಾಗೆ ಜಾಮೀನು ನಿರಾಕರಿಸಿತ್ತು. ಮಹಿಳೆಯ ದೂರಿನ ಹೊರತಾಗಿ ಆರೋಪಿ ಮಿಶ್ರಾ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಕ್ರಮವು ಅತ್ಯಂತ ಅಸಹ್ಯಕರ ಎಂದು ಜಾಮೀನು ನಿರಾಕರಿಸಿತ್ತು. ಇದೀಗ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಇತ್ತೀಚೆಗಷ್ಟೇ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿಜಿಸಿಎ (DGCA), ಏರ್ ಇಂಡಿಯಾ ಕಂಪನಿಗೆ 30 ಲಕ್ಷ ರೂ. ದಂಡ ವಿಧಿಸಿತ್ತು. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್‌ ಸೇವೆಗಳ ನಿರ್ದೇಶಕರ ಮೇಲೂ 3 ಲಕ್ಷ ರೂ. ದಂಡ ವಿಧಿಸಿತ್ತು.

    ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಏನಿದು ಘಟನೆ?
    ನ್ಯೂಯಾರ್ಕ್ ನಿಂದ ದೆಹಲಿಗೆ ನ.26 ರಂದು ಏರ್ ಇಂಡಿಯಾ ವಿಮಾನ AI-102 ಸಂಚರಿಸುತ್ತಿತ್ತು. ಈ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಸಂಚರಿಸುತ್ತಿದ್ದ ಪುರುಷ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ, ಸಹಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದರು. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಮೂತ್ರದಿಂದ ಮಹಿಳೆಯ ಬಟ್ಟೆ, ಶೂ, ಬ್ಯಾಗ್ ಒದ್ದೆಯಾಗಿತ್ತು. ಬ್ಯಾಗ್‌ನಲ್ಲಿ ಅಮೆರಿಕನ್ ಕರೆನ್ಸಿ, ಪಾಸ್‌ಪೋರ್ಟ್ ಸೇರಿ ಮುಖ್ಯವಾದ ದಾಖಲೆಗಳಿದ್ದವು. ಏರ್ ಹೋಸ್ಟೆಸ್ ಕೂಡಾ ಇದನ್ನು ಮುಟ್ಟಲು ನಿರಾಕರಿಸಿದ್ರು. ಬಳಿಕ ಮಹಿಳೆಯನ್ನು ಬಾತ್‌ರೂಂಗೆ ಕರೆದುಕೊಂಡು ಹೋಗಿ ಬೇರೆ ಬಟ್ಟೆ ನೀಡಿದ್ರು. ನಂತರ ಬೇರೆ ಸೀಟ್ ಕೊಡುವಂತೆ ಮಹಿಳೆ ಕೇಳಿಕೊಂಡಿದ್ದರು. ಈ ವೇಳೆ ಸೀಟ್‌ಗಳೆಲ್ಲಾ ಭರ್ತಿಯಾಗಿದೆ ಎಂದು ಸಿಬ್ಬಂದಿ, ಏರ್ ಹೋಸ್ಟೆಸ್ ಪ್ರಯಾಣ ಮಾಡುವ ಸೀಟ್ ನೀಡಿ ದೆಹಲಿಗೆ ಕರೆದುಕೊಂಡು ಬಂದಿದ್ದರು. ನಂತರ ಏರ್ ಇಂಡಿಯಾ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

    ಈ ಪ್ರಕರಣದ ತನಿಖೆ ವೇಳೆ ಆಕೆಯೇ ತನ್ನ ಮೇಲೆ ಮೂತ್ರ ಮಾಡಿಕೊಂಡಿದ್ದಳು ಎಂದು ಶಂಕರ್ ಮಿಶ್ರಾ ಪರ ವಕೀಲರು ವಾದಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ನವದೆಹಲಿ: ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಪೈಲಟ್‌ (Pilot) ಅವರನ್ನು ಬಲಿಪಶು ಮಾಡಲಾಗಿದೆ ಎಂದು ಏರ್‌ ಇಂಡಿಯಾ (Air India) ಪೈಲಟ್‌ ಒಕ್ಕೂಟ ಹೇಳಿದೆ.

    ಕುಡಿದ ಅಮಲಿನಲ್ಲಿ ವೃದ್ಧ ಪ್ರಯಾಣಿಕರೊಬ್ಬರ ಮೇಲೆ ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ (Shankar Mishra case) ಸಂಬಂಧಿಸಿದಂತೆ ನ್ಯೂಯಾರ್ಕ್-ನವದೆಹಲಿ ವಿಮಾನದ ಪೈಲಟ್ ಅವರ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) 3 ತಿಂಗಳ ಕಾಲ ಅಮಾನತುಗೊಳಿಸಿದೆ. ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಪೈಲಟ್‌ ಒಕ್ಕೂಟ ಕಾನೂನು ಸಮರ ಆರಂಭಿಸಲು ಮುಂದಾಗಿದೆ.

    ಈ ಬಗ್ಗೆ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ಪೈಲಟ್ ತ್ವರಿತವಾಗಿ ಮತ್ತು ಪ್ರಬುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಘಟನೆಯ ಬಗ್ಗೆ ಅಂದೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಇದ್ದರೂ ಪೈಲಟ್‌ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್‌ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ

    ಈ ಘಟನೆ 2022ರ ನವೆಂಬರ್ 26ರಂದು ನಡೆದಿತ್ತು. ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಏರ್ ಇಂಡಿಯಾ ಕಂಪನಿಗೆ 30 ಲಕ್ಷ ರೂ. ದಂಡ ವಿಧಿಸಿದೆ. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿದೆ.

    ಘಟನೆ ನಡೆದ ತಿಂಗಳ ಬಳಿಕ ಸಂತ್ರಸ್ತ ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಘಟನೆ ಬಗ್ಗೆ ಪತ್ರ ಬರೆದಿದ್ದರು. ಬಳಿಕ ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿತ್ತು. ಆರೋಪಿ ಶಂಕರ್ ಮಿಶ್ರಾನನ್ನು 2 ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದರು. ಆರೋಪಿಗೆ 4 ತಿಂಗಳ ಕಾಲ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್ ಇಂಡಿಯಾಗೆ 30 ಲಕ್ಷ ದಂಡ – ಪೈಲಟ್ ಪರವಾನಗಿ 3 ತಿಂಗಳು ಅಮಾನತು

    ಏರ್ ಇಂಡಿಯಾಗೆ 30 ಲಕ್ಷ ದಂಡ – ಪೈಲಟ್ ಪರವಾನಗಿ 3 ತಿಂಗಳು ಅಮಾನತು

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ (Air India Flight) ಮಹಿಳೆಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಮೂತ್ರವಿಸರ್ಜನೆ (Pee) ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್ ಇಂಡಿಯಾಗೆ 30 ಲಕ್ಷ ರೂ. ದಂಡವನ್ನು (Fine) ವಿಧಿಸಿದೆ.

    ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಏರ್ ಇಂಡಿಯಾ ವಿಮಾನಕ್ಕೆ 30 ಲಕ್ಷ ರೂ. ದಂಡ ವಿಧಿಸಿದ್ದಲ್ಲದೇ ಅಂದು ಘಟನೆ ನಡೆದ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಕೂಡಾ 3 ತಿಂಗಳುಗಳ ಕಾಲ ಅಮಾನತುಗೊಳಿಸಿದೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

    ಈ ಘಟನೆ 2022ರ ನವೆಂಬರ್ 26ರಂದು ನಡೆದಿದೆ. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿರುವುದಾಗಿ ತಿಳಿಸಿದೆ.

    ಘಟನೆ ನಡೆದ ತಿಂಗಳ ಬಳಿಕ ಸಂತ್ರಸ್ತ ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಘಟನೆ ಬಗ್ಗೆ ಪತ್ರ ಬರೆದಿದ್ದರು. ಬಳಿಕ ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ. ಘಟನೆಯ ಆರೋಪಿ ಶಂಕರ್ ಮಿಶ್ರಾನನ್ನು 2 ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ 4 ತಿಂಗಳ ಕಾಲ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಕಿರಿಯ ಪುತ್ರನ ನಿಶ್ಚಿತಾರ್ಥ ಸಡಗರ – ಸ್ಟೇಜ್ ಮೇಲೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನಲ್ಲ, ಅವರೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು – ನ್ಯಾಯಾಲಯಕ್ಕೆ ಶಂಕರ್ ಮಿಶ್ರಾ ಹೇಳಿಕೆ

    ನಾನಲ್ಲ, ಅವರೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು – ನ್ಯಾಯಾಲಯಕ್ಕೆ ಶಂಕರ್ ಮಿಶ್ರಾ ಹೇಳಿಕೆ

    ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ (Shankar Mishra) ದೆಹಲಿ ನ್ಯಾಯಾಲಯದ (Delhi Sessions Court) ಮುಂದೆ ಹಾಜರಾಗಿದ್ದು, ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದಾರೆ.

    `ನಾನಲ್ಲ ಬದಲಿಗೆ ಮಹಿಳೆಯೇ (Women Passenger) ತನ್ನ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾಳೆ’ ಎಂದು ಶಂಕರ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವ ಶಂಕರ್ ಮಿಶ್ರಾ, ದೂರುದಾರರ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿಲ್ಲ, ಮಹಿಳೆಯೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾಳೆ. ದೂರುದಾರ ಮಹಿಳೆಯ ಸೀಟು ನಿರ್ಬಂಧಿಸಲಾಗಿತ್ತು ನಾನು ಅಲ್ಲಿಗೆ ತೆರಳಲು ಸಾಧ್ಯವಿರಲಿಲ್ಲ. ಮೂತ್ರ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾಳೆ ಎಂದು ದೂರಿದ್ದಾರೆ.

    ದೂರುದಾರ ಮಹಿಳೆ ಕಥಕ್ ನೃತ್ಯಗಾರ್ತಿ, ಶೇ.80 ಕಥಕ್ ನೃತ್ಯಗಾರರಿಗೆ ಈ ಸಮಸ್ಯೆ ಇದೆ ಎಂದು ಶಂಕರ್ ಮಿಶ್ರಾ ಅವರ ವಕೀಲರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ತುಳು ಹಾಡಿಗೆ ದನಿಯಾದ ಗಾಯಕಿ ಮಂಗ್ಲಿ

    ಮಹಿಳೆಯ ಆಸನವನ್ನ ಹಿಂದಿನಿಂದ ಮಾತ್ರ ಸಂಪರ್ಕಿಸಬಹುದು, ಮುಂದಿನ ಸೀಟಿನಿಂದ ಸಂಪರ್ಕಿಸಲು ಸಾಧ್ಯವಿಲ್ಲ. ಹಿಂದಿನಿಂದ ಮೂತ್ರ ಮಾಡಿದರು ಅದು ಸೀಟಿನ ಮುಂಭಾಗದ ಪ್ರದೇಶಕ್ಕೆ ತಲುಪಲು ಸಾಧ್ಯವಿಲ್ಲ ಎಂದು ವಕೀಲರು ವಾದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಪಣಜಿ: ಏರ್ ಇಂಡಿಯಾ (Air India) ವಿಮಾನದಲ್ಲಿ (Flight) ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಗೋ ಫಸ್ಟ್ (Go First) ವಿಮಾನದಲ್ಲಿ ಕಿರುಕುಳದ (Harassment) ಇನ್ನೊಂದು ಪ್ರಕರಣ ವರದಿಯಾಗಿದೆ.

    ಜನವರಿ 5 ರಂದು ನವದೆಹಲಿಯಿಂದ ಗೋವಾಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಮಹಿಳಾ ಗಗನಸಖಿಗೆ (Flight Attendant) ವಿದೇಶಿ ಪ್ರಯಾಣಿಕನೊಬ್ಬ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಪ್ರಯಾಣಿಕ ಆಕೆಗೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

    ವರದಿಗಳ ಪ್ರಕಾರ ವ್ಯಕ್ತಿ ಪದೇ ಪದೇ ತನ್ನೊಂದಿಗೆ ಕುಳಿತುಕೊಳ್ಳುವಂತೆ ಪೀಡಿಸಿದ್ದಾನೆ. ಆತ ಈ ವೇಳೆ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ವಿಮಾನ ಗೋವಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಿಮಾನ ಭದ್ರತಾ ಸಂಸ್ಥೆ ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಆದರೆ ಇದು ಬೆಳಕಿಗೆ ಬಂದಿರುವುದು ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬಳಿಕ.

    ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಆರೋಪಿ ಶಂಕರ್ ಮಿಶ್ರಾ ತನ್ನ ಪ್ಯಾಂಟ್ ಬಿಚ್ಚಿ ವಯಸ್ಸಾದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಏರ್ ಇಂಡಿಯಾ ಆತನನ್ನು ಹೋಗಲು ಬಿಟ್ಟಿತ್ತು. ಆದರೆ ಘಟನೆ ಬಗ್ಗೆ ಮಹಿಳೆ ಜನವರಿ 5 ರಂದು ವಿಮಾನಯಾನ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಗ್ಗಿ ಹೇಳಿ ವಿಶ್ವ ದಾಖಲೆ ಬರೆದ ಚೈತನ್ಯ ಶಾಲೆ

    ಘಟನೆ ಬೆಳಕಿಗೆ ಬರುತ್ತಲೇ ಶಂಕರ್ ಮಿಶ್ರಾ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ. ಶುಕ್ರವಾರ ದೆಹಲಿ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಶನಿವಾರ ಬೆಳಗ್ಗೆ ಆತನನ್ನು ದೆಹಲಿಗೆ ಒಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k