ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ತಾಂತ್ರಿಕ ಅಡಚಣೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಮಂಗಳೂರು-ದಮಾಮ್ ನಡುವಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂತು. ಪರಿಣಾಮವಾಗಿ, ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದಲ್ಲಿ ಲೈಟ್ ಆಫ್ ಆಯಿತು. ಲೈಟ್ ಆಫ್ ಆಗಿ ಕತ್ತಲೆಯಲ್ಲಿ ಕುಳಿತ ಪ್ರಯಾಣಿಕರಿಗೆ ಆತಂಕವಾಗಿತ್ತು.
ವಿಮಾನವೇರಿ ಕೂತಿದ್ದ ಪ್ರಯಾಣಿಕರನ್ನು ಮತ್ತೆ ಏರ್ಪೋರ್ಟ್ ಲಾಂಜ್‌ಗೆ ಸಿಬ್ಬಂದಿ ಕಳುಹಿಸಿದರು. ಟೇಕಾಫ್ ರದ್ದುಗೊಳಿಸಿ ಪ್ರಯಾಣಿಕರನ್ನು ಮತ್ತೆ ಲಾಂಚ್‌ಗೆ ಏರ್ ಇಂಡಿಯಾ ಕಳುಹಿಸಿತು.
– ನಾನ್‌ವೆಜ್ ಸೇವನೆ ಬಿಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಪ್ರಿಯಕರ
ಮುಂಬೈ: ಒಂದು ತಿಂಗಳ ಹಿಂದೆಯಷ್ಟೇ ಏರ್ ಇಂಡಿಯಾ ಪೈಲಟ್ (Air India Pilot) ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆಕೆಯ ಪ್ರಿಯಕರನಿಗೆ ಮುಂಬೈ ಕೋರ್ಟ್ (Mumbai Court) ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಆಹಾರ ಪದ್ಧತಿ ಬದಲಾಯಿಸುವಂತೆ ಮತ್ತು ಮಾಂಸಾಹಾರ (Nonveg Food) ಸೇವಿಸುವುದನ್ನು ನಿಲ್ಲಿಸುವಂತೆ ಪ್ರಿಯಕರ ಒತ್ತಡ ಹೇರಿದ ಪರಿಣಾಮ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ (25) ಅಂಧೇರಿಯ ಮರೋಲ್ ಪ್ರದೇಶದಲ್ಲಿರುವ ‘ಕನಕಿಯಾ ರೈನ್ ಫಾರೆಸ್ಟ್’ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಳೆದ ನವೆಂಬರ್ 25ರಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಳು. ಘಟನೆ ಬೆಳಕಿಗೆ ಬಂದ ಮರುದಿನವೇ ಆಕೆಯ ಗೆಳೆಯನನ್ನ ಪೊಲೀಸರು ಬಂಧಿಸಿದ್ದರು. ಬಿಎನ್‌ಎಸ್ ಸೆಕ್ಷನ್ 108 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆಗಾಗಿ ಇಂದು ಆರೋಪಿಯನ್ನ ಮುಂಬೈನ ಸೆಷನ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ ನ್ಯಾಯಾಲಯ) ಟಿ.ಟಿ ಅಗ್ಲಾವ್ ಜಾಮೀನು ನೀಡಿ ಆದೇಶಿಸಿದ್ದಾರೆ. ಆದ್ರೆ ಪೊಲೀಸರಿಗೆ ಇನ್ನೂ ಕೋರ್ಟ್ ಆದೇಶದ ಪ್ರತಿ ಲಭ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿ, ಉತ್ತರಾಖಂಡ್‌ನಲ್ಲಿ ಮಳೆ; ಪಶ್ಚಿಮ ಹಿಮಾಲಯದಲ್ಲಿ ಹಿಮಪಾತ – ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಏನಿದು ಪ್ರಕರಣ?
ಆರೋಪಿ ಆದಿತ್ಯ ಸೃಷ್ಟಿಯನ್ನು ಪದೇಪದೇ ಸಾರ್ವಜನಿಕವಾಗಿ ಅವಮಾನಿಸುವುದಲ್ಲದೇ ಆಕೆಯ ಆಹಾರ ಪದ್ಧತಿ ಬದಲಾಯಿಸುವಂತೆ ಹೇಳುತ್ತಿದ್ದ. ಅಲ್ಲದೇ ಮಾಂಸಾಹಾರ ಸೇವನೆ ಬಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದ ಎಂದು ಸೃಷ್ಟಿ ಚಿಕ್ಕಪ್ಪ ಆರೋಪಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿತ್ತು.
ನಂತರ ದೆಹಲಿಗೆ ತೆರಳುತ್ತಿದ್ದ ಪ್ರಿಯಕರ ಆದಿತ್ಯನಿಗೆ ಸೃಷ್ಟಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಳು. ಇದನ್ನು ತಿಳಿದ ಆದಿತ್ಯ ತಕ್ಷಣವೇ ಆಕೆ ಇದ್ದ ಫ್ಲ್ಯಾಟ್‌ಗೆ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಈ ವೇಳೆ ನಕಲಿ ಕೀ ತಯಾರಕರನ್ನು ಕರೆಸಿ ಬಾಗಿಲು ತೆಗೆದು ನೋಡಿದಾಗ ಸೃಷ್ಟಿ ಡೇಟಾ ಕೇಬಲ್ ಸಹಾಯದಿಂದ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಸೃಷ್ಟಿ ಉತ್ತರ ಪ್ರದೇಶ ಮೂಲದವಳಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದಳು. 2 ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿರುವಾಗ ಆದಿತ್ಯನನ್ನ ಭೇಟಿಯಾಗಿದ್ದಳು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ಬದಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮನಮೋಹನ್ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ರಾಹುಲ್, ಸೋನಿಯಾ ಗಾಂಧಿ
ನವದೆಹಲಿ: ಏರ್ ಇಂಡಿಯಾ (Air India) ಹಾಗೂ ವಿಸ್ತಾರ (Vistara) ವಿಮಾನಯಾನ ಸಂಸ್ಥೆಗಳ ವಿಲೀನದ ಬಳಿಕ ಮೊದಲ ವಿಮಾನ ಹಾರಾಟಗೊಂಡಿದೆ.
ಎ12286 ಕೋಡ್‌ನೊಂದಿಗೆ ಕಾರ್ಯನಿರ್ವಹಿಸುವ ವಿಮಾನವು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 10:07ಕ್ಕೆ ಕತಾರ್‌ನ ದೋಹಾದಿಂದ ಮುಂಬೈಗೆ ಹೊರಟಿದ್ದು, ಮಂಗಳವಾರ ಬೆಳಿಗ್ಗೆ ಮುಂಬೈಗೆ ತಲುಪಲಿದೆ. ಟಾಟಾ ಗ್ರೂಪ್ಸ್‌ನ (TATA Groups) ಭಾಗವಾಗಿರುವ ಎರಡು ಸಂಸ್ಥೆಗಳು ವಿಲೀನಗೊಂಡಿದ್ದು, ವಿಲೀನವಾದ ಬಳಿಕ ಮೊದಲ ಅಂತರರಾಷ್ಟ್ರೀಯ ವಿಮಾನ ಹಾರಾಟಗೊಂಡಿದೆ. ಇನ್ನೂ ಭಾರತದಲ್ಲಿ ಮಂಗಳವಾರ ನಸುಕಿನ ಜಾವ 01:30 ಗಂಟೆಗೆ ಮುಂಬೈನಿಂದ (Mumbai) ದೆಹಲಿಗೆ (Delhi) ಮೊದಲ ವಿಮಾನ ಹಾರಾಟಗೊಂಡಿದೆ.ಇದನ್ನೂ ಓದಿ: ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ – ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ
ವಿಲೀನದ ನಂತರ ಏರ್ ಇಂಡಿಯಾ ನಿರ್ವಹಿಸುತ್ತಿರುವ ವಿಸ್ತಾರ ವಿಮಾನಗಳಿಗಾಗಿ ‘ಎ12ಎಕ್ಸ್ಎಕ್ಸ್ಎಕ್ಸ್’ ಕೋಡ್‌ನ್ನು ಬಳಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಬುಕ್ಕಿಂಗ್ ಸಮಯದಲ್ಲಿ ವಿಸ್ತಾರ ವಿಮಾನವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಟಾಟಾ ಗ್ರೂಪ್‌ನ ಭಾಗವಾಗಿರುವ ಎರಡೂ ವಿಮಾಯಾನ ಸಂಸ್ಥೆಗಳ ವಿಲೀನವು ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಮುಖ ಬಲವರ್ಧನೆಯನ್ನು ಸೂಚಿಸುತ್ತದೆ. ವಿಸ್ತಾರ ಇದು ಟಾಟಾಸ್ ಮತ್ತು ಸಿಂಗಾಪುರ್ ಏರಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದ್ದು, ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರಲೈನ್ಸ್ (Singapore Airlines) ಏರ್ ಇಂಡಿಯಾದ 25.1 ಶೇಕಡಾ ಪಾಲನ್ನು ಪಡೆಯುತ್ತದೆ.ಇದನ್ನೂ ಓದಿ: ಪಿಜಿ ಆಯುಷ್ ತಾತ್ಕಾಲಿಕ ಫಲಿತಾಂಶ ಪ್ರಕಟ – ಕೆಇಎ
ನವದೆಹಲಿ: ವಿಮಾನಗಳಿಗೆ ಬಾಂಬ್ ಬೆದರಿಕೆ (Flight Bomb Threat) ಕರೆಗಳ ತಲೆನೋವು ಹೆಚ್ಚಾಗಿದೆ. ಇಂದು ಒಂದೇ ದಿನ ಮತ್ತೆ 95 ಫ್ಲೈಟ್‌ಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
25 ಆಕಾಶ ಏರ್ ವಿಮಾನಗಳು, ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್ ಮತ್ತು ವಿಸ್ತಾರದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಕಳೆದ 10 ದಿನಗಳಲ್ಲಿ 250 ಕ್ಕೂ ಅಧಿಕ ವಿಮಾನಗಳಿಗೆ ಹೀಗೆ ಬೆದರಿಕೆ ಕರೆಗಳು ಬಂದಿವೆ. ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತಿಸುತ್ತಿರುವ ಹೊತ್ತಲ್ಲೂ ಬೆದರಿಕೆ ಕರೆಗಳು ನಿಂತಿಲ್ಲ. ಇದನ್ನೂ ಓದಿ: ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾವು
ಈ ಮೊದಲು ದಿನ ಬಿಟ್ಟು ದಿನ 170 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬಂದಿವೆ. ಅವು ವಂಚನೆ ಕರೆಗಳು ಎಂದು ನಂತರ ಸ್ಪಷ್ಟವಾಯಿತು. ಬೆದರಿಕೆ ಕರೆ ಹಿನ್ನೆಲೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿ ನೂರಾರು ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು. ಅರೆಸೇನಾ ಸಿಬ್ಬಂದಿ ಮತ್ತು ವಾಯುಯಾನ ಅಧಿಕಾರಿಗಳಿಗೆ ಭದ್ರತೆಯು ತಲೆನೋವಾಗಿ ಪರಿಣಮಿಸಿದೆ.
ಬಾಂಬ್ ಬೆದರಿಕೆಯ ಸುಳ್ಳು ಕರೆಗಳಲ್ಲಿ ಭಾಗಿಯಾಗಿರುವವರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲು ಸರ್ಕಾರ ಯೋಜಿಸಿದೆ. ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳನ್ನು ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್
ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಕ್ಸ್ ಖಾತೆಗಳಲ್ಲಿ ಅನಾಮಧೇಯ ಪೋಸ್ಟ್‌ಗಳ ಮೂಲಕ ಬೆದರಿಕೆ ಸಂದೇಶಗಳು ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಒಟ್ಟಾವಾ: ಬಾಂಬ್ ಇಟ್ಟಿರುವುದಾಗಿ ಭಾರತದ ವಿವಿಧ ವಿಮಾನಗಳಿಗೆ ಬೆದರಿಕೆ ಕರೆ ಬರುತ್ತಿರುವ ಸಂದರ್ಭದಲ್ಲೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹೊಸ ಬೆದರಿಕೆಯೊಂದನ್ನ ಹಾಕಿದ್ದಾರೆ. ನವೆಂಬರ್ 1ರಿಂದ 19ರ ವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಯೋಗೇಶ್ವರ್ ಗುಡ್‌ಬೈ – ಕಾಂಗ್ರೆಸ್‌ನಿಂದ ಕೊನೆ ಕ್ಷಣದ ಕಸರತ್ತು ಆರಂಭ
ಸಿಖ್ ಹತ್ಯಾಕಾಂಡಕ್ಕೆ 40 ವರ್ಷ ಪೂರ್ಣಗೊಳ್ಳುವ ನಿರ್ದಿಷ್ಟ ದಿನಾಂಕದಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಕನಡಾ ಮತ್ತು ಅಮೆರಿಕದ ದ್ವೀಪೌರತ್ವ ಹೊಂದಿರುವ ಸಿಖ್ ಫಾರ್ ಜಸ್ಟೀಸ್ (SFJ) ಸಂಸ್ಥಾಪಕ ಪನ್ನು, ಕಳೆದ ವರ್ಷ ಸಹ ಇದೇ ಅವಧಿಯಲ್ಲಿ ಬೆದರಿಕೆ ಒಡ್ಡಿದರು.
ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿರುವ ಖಲಿಸ್ತಾನ ಹೋರಾಟಗಾರರನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಕೆನಡಾ ಆರೋಪಿಸುತ್ತಿದ್ದು, ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿದೆ. 2023ರ ನವೆಂಬರ್‌ನಲ್ಲೂ ಇದೇ ರೀತಿಯ ಬೆದರಿಕೆ ಒಡ್ಡಿದ್ದ ಪನ್ನು, ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹೆಸರು ಬದಲಿಸಲಾಗುವುದು. ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈತನ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ. ಡಿಸೆಂಬರ್ 13ರಂದು ಅಥವಾ ಅದಕ್ಕೂ ಮುನ್ನ ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಕಳೆದ ವರ್ಷ ಬೆದರಿಕೆ ಹಾಕಿದ್ದರು.ಇದನ್ನೂ ಓದಿ: ವಿಪತ್ತು ತಡೆಯಲು ವಯನಾಡಿನಲ್ಲಿ X ಬ್ಯಾಂಡ್ ರೇಡಾರ್ ಅಳವಡಿಕೆ – ರೇಡಾರ್ ವಿಶೇಷತೆಯೇನು?
ಬೆಂಗಳೂರು: ಕಳೆದ ಒಂದು ವಾರದಿಂದಲೂ ಭಾರತೀಯ ವಿಮಾನಗಳು (Flights) ಮಾತ್ರವಲ್ಲದೇ ವಿದೇಶಿ ವಿಮಾನಗಳಿಗೂ ಬಾಂಬ್ ಬೆದರಿಕೆ ಹೆಚ್ಚಾಗಿ ಕೇಳಿಬರುತ್ತಿದೆ. ಭಾನುವಾರವೂ ಇಂಡಿಗೋ, ವಿಸ್ತಾರ ಮತ್ತು ಏರ್ ಇಂಡಿಯಾದ (Air India) ತಲಾ 6 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
6 ಇಂಡಿಗೋ ವಿಮಾನಗಳಲ್ಲಿ (IndiGo Flights) ತಲಾ 2 ಬಾಂಬ್‌ಗಳಿವೆ ಎಂಬ ಬೆದರಿಕೆ ಸಂದೇಶ ಬೆಂಗಳೂರು ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್‌ಗೆ ಬಂದಿರುವುದಾಗಿ ಎಂದು ಮೂಲಗಳು ತಿಳಿಸಿವೆ. ಕಳೆದ ಒಂದು ವಾರದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ 2ನೇ ಬೆದರಿಕೆ (Bomb Threat) ಇದಾಗಿದೆ. ಇದನ್ನೂ ಓದಿ: ತಾಯಿಯನ್ನು ಇಷ್ಟೊಂದು ಪ್ರೀತಿಸುವ ವ್ಯಕ್ತಿಯನ್ನ ನಾನು ನೋಡಿಲ್ಲ: ಜಯಮಾಲ
ಇಂಡಿಗೋ 6E58 ವಿಮಾನ (ಜೆಡ್ಡಾ ಮುಂಬೈ), 6E87 (ಕೋಯಿಕೋಡ್- ದಮಾಮ್), 6E11 (ದೆಹಲಿ- ಇಸ್ತಾನ್‌ಬುಲ್), 6E17 (ಮುಂಬೈ-ಇಸ್ತಾನ್‌ಬುಲ್), 6E133 (ಪುಣೆಯಿಂದ ಜೋಧಪುರ), ಮತ್ತು 6E112 (ಗೋವಾ ಅಹಮದಾಬಾದ್) ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಇಂಡಿಗೋದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!
ವಿಸ್ತಾರದ UK25 (ದೆಹಲಿ-ಫ್ರಾಂಕ್ ಫರ್ಟ್), UK106 (ಸಿಂಗಪುರ-ಮುಂಬೈ), UK146 (ಬಾಲಿ-ದೆಹಲಿ), UK116 (ಸಿಂಗಪುರ-ದೆಹಲಿ), UK110 (ಸಿಂಗಪುರ-ಪುಣೆ) ಮತ್ತು UK107 (ಮುಂಬೈ-ಸಿಂಗಪುರ) ಈ ಆರು ವಿಮಾನಗಳಿಗೆ ಬೆದರಿಕೆ ಬಂದಿದೆ ಎಂದು ವಿಸ್ತಾರ ಹೇಳಿದೆ.
ಪ್ರೋಟೋಕಾಲ್ ಪ್ರಕಾರ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಿದೆ. ಅವರು ತಪಾಸಣೆ ನಡೆಸಿದ್ದಾರೆ ಎಂದು ವಿಸ್ತಾರ ಪ್ರಕಟಣೆಯಲ್ಲಿ ತಿಳಿಸಿದೆ. ಆಕಾಶ ಏರ್‌ನ ಕೆಲವು ವಿಮಾನಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ತುರ್ತು ಪ್ರತಿಕ್ರಿಯೆ ತಂಡಗಳು ಪರಿಶೀಲನೆ ನಡೆಸುತ್ತಿವೆ. ಭದ್ರತಾ ಮತ್ತು ನಿಯಂತ್ರಣ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಆಕಾಶ ಏರ್ ಹೇಳಿದೆ.
ಚೆನ್ನೈ: ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ (Air India Flight) ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ತಮಿಳುನಾಡಿನ (Tamil Nadu) ತಿರುಚ್ಚಿ ನಗರದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಆಕಾಶದಲ್ಲೇ ಗಿರಕಿ ಹೊಡೆದಿರುವ ಘಟನೆ ನಡೆದಿದೆ.
ಶಾರ್ಜಾಕ್ಕೆ ಹೊರಟಿದ್ದ AXB 613 ವಿಮಾನವು ತಿರುಚಿರಾಪಳ್ಳಿಯಿಂದ ಟೇಕ್ ಆಫ್ ಆದ ಕೂಡಲೇ ಹೈಡ್ರಾಲಿಕ್ ವೈಫಲ್ಯವನ್ನು ವರದಿ ಮಾಡಿತ್ತು. ವಿಮಾನದಲ್ಲಿ 144 ಪ್ರಯಾಣಿಕರಿದ್ದರು.
ವಿಮಾನವು ಇಂಧನವನ್ನು ಬರ್ನ್ ಮಾಡಲು ಇನ್ನೂ ತಿರುಚಿರಾಪಳ್ಳಿಯ ಸುತ್ತಲೂ ಸುತ್ತುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್ ಪ್ರಕಾರ, ವಿಮಾನವು ಸುಮಾರು ಎರಡು ಗಂಟೆಗಳ ಕಾಲ ಒಂದೇ ಪ್ರದೇಶದಲ್ಲಿ ಸುತ್ತಾಡಿದೆ. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಕಾಶ್ಮೀರದಲ್ಲಿ ಎನ್‌ಸಿ ಕೈ ಹಿಡಿದ ಆಪ್!
ಕೋಲಾರ: ಭಾರತೀಯ ವಾಯಸೇನೆಗೆ (Indian Air Force) ಸೇರಿದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ (Technical Fault) ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊಲಾರದಲ್ಲಿ ತುರ್ತು ಭೂಸ್ಪರ್ಶವಾಗಿದೆ.
ಕೋಲಾರ (Kolara) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ ಕೆರೆಯಲ್ಲಿ ತುರ್ತು ಭೂಸ್ಪರ್ಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರು ವಾಯುಸೇನೆಯ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಒರ್ವ ಮಹಿಳಾ ಪೈಲಟ್ ಸೇರಿದಂತೆ ಮೂವರು ಸೇಫ್ ಆಗಿದ್ದಾರೆ. ಇದನ್ನೂ ಓದಿ: ತೆಲಂಗಾಣ| 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಸಂತ್ರಸ್ತೆ ಕುಟುಂಬಸ್ಥರಿಂದ ಆರೋಪಿ ಮನೆ, ಕಾರಿಗೆ ಬೆಂಕಿ
ಕರಪನಹಳ್ಳಿ ಗ್ರಾಮದ ಬಳಿ ಇರುವ ಕೆರೆ ಅಂಗಳದಲ್ಲಿ ಸುರಕ್ಷಿತವಾಗಿ ಇಳಿದ ಹೆಲಿಕಾಪ್ಟರ್ ನೋಡಲು ಜನರು ನಾ ಮುಂದು ತಾ ಮುಂದು ಎಂದು ಮುಂದಾಗಿದ್ದು, ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಂಗಾರಪೇಟೆ ಪೊಲೀಸರ ಜಮಾವಣೆಯಾಗಿದ್ದಾರೆ. ಸದ್ಯ ವಾಯು ಪಡೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಂಪುಟ ಪುನರ್‌ರಚನೆ – ಮತ್ತೆ ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ
ಬೆಂಗಳೂರಿನ ಯಲಹಂಕ ಏರ್ ಇಂಡಿಯಾಗೆ ಸೇರಿದ ಈ ಹೆಲಿಕಾಪ್ಟರ್ ತರಬೇತಿ ನಿಮಿತ್ತ ಕೋಲಾರದ ಕೆಜಿಎಫ್ ಹಾಗೂ ಬಂಗಾರಪೇಟೆ ಸುತ್ತಮುತ್ತ ಹಾರಾಟ ನಡೆಸುತಿತ್ತು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ತಂತ್ರಜ್ಞರ ತಂಡ ಬಂದ ಬಳಿಕ ತಾಂತ್ರಿಕ ದೋಷ ಸರಿಪಡಿಸಲಿದ್ದಾರೆ. ಬಳಿಕ ಇಲ್ಲಿಂದ ಹೆಲಿಕಾಪ್ಟರ್ ವಾಪಸ್ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್
ಇನ್ನೂ ಸ್ಥಳದಲ್ಲಿ ಹೆಲಿಕಾಪ್ಟರ್ ನೋಡಲು ನೂರಾರು ಸಂಖ್ಯೆಯ ಜನರು ಜಮಾಯಿಸಿದ್ದು, ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸೇನಾ ಹೆಲಿಕಾಪ್ಟರ್ ಆಗಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ನವದೆಹಲಿ: ವಿಸ್ತಾರಾ (Vistara) ಮತ್ತು ಏರ್ ಇಂಡಿಯಾ (Air India) ನಡುವಿನ ಬಹು ನಿರೀಕ್ಷಿತ ವಿಲೀನವು ನವೆಂಬರ್ 11 ಮಧ್ಯರಾತ್ರಿ 12ರ ವೇಳೆಗೆ ಅಂತಿಮಗೊಳ್ಳಲಿದೆ. ಸಿಂಗಾಪುರ್ ಏರ್‌ಲೈನ್ಸ್ (Singapore Airlines) ವಿದೇಶಿ ನೇರ ಹೂಡಿಕೆಗೆ ಭಾರತ ಸರ್ಕಾರದಿಂದ ಅನುಮೋದನೆ ಪಡೆದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆಯುತ್ತಿದೆ.
ನ.11ರ ಬಳಿಕ ವಿಸ್ತಾರಾ ವಿಮಾನಗಳು ಏರ್ ಇಂಡಿಯಾ ಬ್ರ‍್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸೆ.3ರಿಂದ ವಿಸ್ತಾರಾ ಫ್ಲೈಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ವಿಸ್ತಾರಾ ಫ್ಲೈಟ್‌ಗಳ ಬುಕಿಂಗ್ ಅನ್ನು ಏರ್ ಇಂಡಿಯಾದ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ನ.11ರವರೆಗೆ ಮಾತ್ರ ವಿಸ್ತಾರ ಸಾಮಾನ್ಯ ವಿಮಾನಗಳು ಕಾರ್ಯಾನಿರ್ವಹಿಸಲಿವೆ.ಇದನ್ನೂ ಓದಿ: ನಿವಿ ಈಗ ಚಂದನ್‌ನ ಮುದ್ದು ರಾಕ್ಷಸಿ
We are merging with Air India for you to fly #ToLimitlessPossibilities! Vistara flights, starting 3-Sep-24, will progressively not be available for bookings for travel after 11-Nov-24. 12-Nov-24 onwards, you will be required to book with Air India. Stay tuned for further updates. pic.twitter.com/fDX3fOMTc5
ಈ ವಿಲೀನದ ಕುರಿತು ಮಾತನಾಡಿದ ವಿಸ್ತಾರಾ ಸಿಇಒ ವಿನೋದ್ ಕಣ್ಣನ್ (Vinod Kannan) ಅವರು, ಈ ಸಮಯದಲ್ಲಿ ಗ್ರಾಹಕರಿಗೆ ಸುಗಮ ಸಂವಹನ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಎರಡೂ ಏರ್‌ಲೈನ್‌ಗಳು ಬದ್ಧವಾಗಿರುತ್ತವೆ. ನಮ್ಮ ಗ್ರಾಹಕರಿಗೆ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ತಿಳಿಯಲು ನಮ್ಮ ತಂಡಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಮೊದಲ ಬಾರಿಗೆ ನವೆಂಬರ್ 2022ರಲ್ಲಿ ಘೋಷಿಸಲಾದ ವಿಲೀನವು ಏರ್ ಇಂಡಿಯಾವನ್ನು ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದನ್ನಾಗಿಸಲಿದೆ. ಹೆಚ್ಚು ವ್ಯಾಪಕವಾದ ನೆಟ್‌ವರ್ಕ್ ಮತ್ತು ವರ್ಧಿತ ಸೇವಾ ಕೊಡುಗೆಗಳನ್ನು ನೀಡುವ ಕಾರ್ಯತಂತ್ರದ ಕಾರಣದಿಂದಾಗಿ ಈ ವಿಲೀನ ಮಾಡಲಾಗಿದೆ.ಇದನ್ನೂ ಓದಿ: ಇಂದು ದರ್ಶನ್‌ಗೆ ಸಿಗಲಿದೆ 90 ಗ್ರಾಂ ಮಟನ್
ಪ್ರಸ್ತುತ ಟಾಟಾ ಗ್ರೂಪ್‌ನ ವಿಸ್ತಾರ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ 51:49 ಜಂಟಿ ಉದ್ಯಮವಾಗಿದೆ. ಭಾರತ ಸರ್ಕಾರದ ಅನುಮತಿಯೊಂದಿಗೆ ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ವಿಸ್ತರಿಸಿದ ಏರ್ ಇಂಡಿಯಾದಲ್ಲಿ ಶೇ.25.1 ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಏರ್ ಇಂಡಿಯಾ ಜೊತೆ ಸಿಂಗಾಪೂರ್ ಏರ್‌ಲೈನ್ಸ್ ಹೂಡಿಕೆ ಮಾಡುವುದರಿಂದ ಏರ್ ಇಂಡಿಯಾವನ್ನು ದೇಶಿಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಮಾನಯಾನ ಕಂಪನಿಯನ್ನಾಗಿ ಬೆಳೆಸಲಿದೆ.
ನವದೆಹಲಿ: ಅರ್ಹತೆ ಇಲ್ಲದ ಸಿಬ್ಬಂದಿಯನ್ನು ವಿಮಾನ ಯಾನಕ್ಕೆ ಬಳಕೆ ಮಾಡಿದ್ದಕ್ಕೆ ಏರ್ ಇಂಡಿಯಾಗೆ (Air India) ಡಿಜಿಸಿಎ (DGCA) 90 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೇ ಏರ್ ಇಂಡಿಯಾದ ಕಾರ್ಯಾಚರಣೆಯ ನಿರ್ದೇಶಕರಿಗೆ 6 ಲಕ್ಷ ರೂ. ಮತ್ತು ತರಬೇತಿ ನಿರ್ದೇಶಕರಿಗೆ 3 ಲಕ್ಷ ರೂ. ದಂಡ ವಿಧಿಸಿದೆ.
ಏರ್ ಇಂಡಿಯಾ ಅನುಭವ ಇಲ್ಲದ ಲೈನ್ ಕ್ಯಾಪ್ಟನ್‍ಗಳನ್ನು ಬಳಸಿಕೊಂಡು ವಿಮಾನ ಹಾರಾಟ ನಡೆಸಿದೆ. ಇದು ಸುರಕ್ಷತಾ ನೀತಿ ಉಲ್ಲಂಘನೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಡಿಜಿಸಿಎ ಏರ್ ಇಂಡಿಯಾಗೆ ಎಚ್ಚರಿಕೆ ನೀಡಿದೆ.
ಜು.10 ರಂದು ಏರ್‌ಲೈನ್ ಸಲ್ಲಿಸಿದ ವರದಿಯ ಬಳಿಕ ಡಿಜಿಸಿಎ ದಾಖಲಾತಿಗಳ ಪರಿಶೀಲನೆ, ವೇಳಾಪಟ್ಟಿ ಸೇರಿದಂತೆ ವಿಮಾನದ ಕಾರ್ಯಾಚರಣೆಗಳನ್ನು ಪರಿಶೀಲಿಸಿ ತನಿಖೆ ನಡೆಸಿತ್ತು. ತನಿಖೆ ವೇಳೆ ಹಲವಾರು ನಿಯಮ ಉಲ್ಲಂಘನೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ನೋಟಿಸ್‍ಗೆ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ. ಈ ಕಾರಣಕ್ಕೆ ನಿಯಮದ ಪ್ರಕಾರ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ