Tag: Air India Plane Crash

  • Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    – ಪ್ರಾಥಮಿಕ ತನಿಖಾ ವರದಿಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
    – ಕೇಂದ್ರ ಮತ್ತು ಡಿಜಿಸಿಎ ಪ್ರತಿಕ್ರಿಯೆ ಕೇಳಿದ ಕೋರ್ಟ್

    ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash)ದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದ ಪ್ರಾಥಮಿಕ ವರದಿಯ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

    ದುರಂತದ ಬಗ್ಗೆ ಸ್ವತಂತ್ರ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಜುಲೈ 12 ರಂದು ಬಿಡುಗಡೆಯಾದ AAIB ಪ್ರಾಥಮಿಕ ವರದಿಯು ಪೈಲಟ್‌ಗಳ (Pilots) ಕಡೆಯಿಂದ ಲೋಪಗಳನ್ನು ಸೂಚಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಗಮನಿಸಿತು. ಈ ಅಂಶಗಳು ದುರದೃಷ್ಟಕರ, ಬೇಜವಾಬ್ದಾರಿ ಎಂದ ಪೀಠ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತು.

    ಈ ವರದಿಯ ಉಲ್ಲೇಖಗಳನ್ನು ಪ್ರಶ್ನಿಸಿ ವಿಮಾನಯಾನ ಸುರಕ್ಷತೆ ಎನ್‌ಜಿಒ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿತ್ತು. ಇಂಧನ-ಸ್ವಿಚ್ ದೋಷಗಳು ಮತ್ತು ವಿದ್ಯುತ್ ದೋಷಗಳಂತಹ ವ್ಯವಸ್ಥಿತ ವೈಪರೀತ್ಯಗಳನ್ನು ಕಡಿಮೆ ಮಾಡಿ, ಪೈಲಟ್ ದೋಷದ ನಿರೂಪಣೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಟೀಕಿಸಲಾಗಿತ್ತು. ಅಂತಾರಾಷ್ಟ್ರೀಯ ಪೈಲಟ್‌ ಒಕ್ಕೂಟ ಕೂಡ ಪ್ರಾಥಮಿಕ ತನಿಖಾ ವರದಿಯನ್ನು ಪ್ರಶ್ನಿಸಿತ್ತು.

    ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ದಿನಗಳು ಕಳೆದಿದೆ. ಆದರೆ ಇದುವರೆಗೂ ಕೇವಲ ಪ್ರಾಥಮಿಕ ವರದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೇ ವರದಿಯಲ್ಲಿ ಯಾವುದೇ ಅಪಘಾತಕ್ಕೆ ನಿಖರ ಕಾರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಉಲ್ಲೇಖ ಇರದಿರುವುದರಿಂದ, ಬೋಯಿಂಗ್ ವಿಮಾನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇಂದು ಅಪಾಯದಲ್ಲಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    ಅಪಘಾತದ ತನಿಖೆಗಾಗಿ ರಚಿಸಲಾದ ಐವರು ಸದಸ್ಯರ ತಂಡವು, ವಾಯುಯಾನ ನಿಯಂತ್ರಕ ಡಿಜಿಸಿಎಯ ಮೂವರು ಸದಸ್ಯರನ್ನು ಹೊಂದಿದ್ದು, ಗಂಭೀರ ಹಿತಾಸಕ್ತಿ ಸಂಘರ್ಷವನ್ನು ಸೃಷ್ಟಿಸುತ್ತದೆ. ಅಪಘಾತಕ್ಕೆ ಯಾವ ಸಂಸ್ಥೆಯನ್ನು ಪ್ರಶ್ನಿಸಲಾಗುತ್ತಿದೆಯೋ ಅದೇ ಸಂಸ್ಥೆಯ ಸದಸ್ಯರು ಹೇಗೆ ತನಿಖೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರಲ್ಲದೇ ಅಪಘಾತದ ನಿಜವಾದ ಕಾರಣ ಸ್ಪಷ್ಟಪಡಿಸಲು ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ನಿಂದ ಡೇಟಾವನ್ನು ಪಡೆಯಲು ಭೂಷಣ್ ಕೋರಿದರು.

    ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಅರ್ಜಿದಾರರ ವಾದ ಪುರಸ್ಕರಿಸಿತಾದರೂ, ಪ್ರಾಥಮಿಕ ತನಿಖೆಯ ಎಲ್ಲಾ ವರದಿಗಳನ್ನು ಸಾರ್ವಜನಿಕಗೊಳಿಸಿವುರಿಂದ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತು. ಆದ್ರೆ ಅಪಘಾತಕ್ಕೆ ಪೈಲಟ್‌ ದೋಷ ನಿರೂಪಣೆಯನ್ನು ದ್ವಿಸದಸ್ಯ ಪೀಠ ದುರದೃಷ್ಟಕರ ಎಂದು ಬಣ್ಣಿಸಿತು.

    ಅಲ್ಲದೇ ಕೆಲವು ಮಾಹಿತಿಯನ್ನು ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗಮನಿಸಿದ ಪೀಠವು ಡಿಜಿಸಿಎ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿಗೊಳಿಸಲು ಸೂಚನೆ ನೀಡಿತು. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

  • ಏರ್‌ ಇಂಡಿಯಾ ವಿಮಾನ ಪತನವಾದ 4 ದಿನದ ಬಳಿಕ ಸಿಕ್‌ ಲೀವ್‌ ಹಾಕಿದ್ರು 100ಕ್ಕೂ ಹೆಚ್ಚು ಪೈಲಟ್‌ಗಳು

    ಏರ್‌ ಇಂಡಿಯಾ ವಿಮಾನ ಪತನವಾದ 4 ದಿನದ ಬಳಿಕ ಸಿಕ್‌ ಲೀವ್‌ ಹಾಕಿದ್ರು 100ಕ್ಕೂ ಹೆಚ್ಚು ಪೈಲಟ್‌ಗಳು

    ನವದೆಹಲಿ: ಅಹಮಾದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾವಾದ (Air India Plane Crash) 4 ದಿನದಲ್ಲಿ 100ಕ್ಕೂ ಹೆಚ್ಚು ಏರ್‌ ಇಂಡಿಯಾ ಪೈಲಟ್‌ಗಳು (Pilots) ಅನಾರೋಗ್ಯ (Sick Leave) ಕಾರಣಕ್ಕೆ ರಜೆ ತೆಗೆದುಕೊಂಡಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಆ ದಿನ 51 ಕಮಾಂಡರ್‌ಗಳು ಮತ್ತು 61 ಫ್ಲೈಟ್ ಆಫೀಸರ್‌ಗಳು ಸಿಕ್‌ ಲೀವ್‌ ಪಡೆಯಲು ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.

    ವಿಮಾನ ಹಾರಿಸುವ ಮುನ್ನ ಮಾನಸಿಕ ಆರೋಗ್ಯವನ್ನು ಪೈಲಟ್‌ಗಳು ಹೊಂದಿರಬೇಕೆಂದು ಫೆಬ್ರವರಿ 2023 ರಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ವಿಮಾನ ಸಿಬ್ಬಂದಿ ಮತ್ತು ವಾಯು ಸಂಚಾರ ನಿಯಂತ್ರಕರಿಗೆ ಸಂಭಾವ್ಯ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಆನ್‌ಲೈನ್‌ ಮೂಲಕ ತರಬೇತಿ ನೀಡುವಂತೆ  ಸೂಚಿಸಲಾಗಿದೆ.  ಇದನ್ನೂ ಓದಿ: 3,000 ಕೋಟಿ ಸಾಲ ವಂಚನೆ ಕೇಸ್‌ – ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ

    ಸಿಬ್ಬಂದಿ ಆಯಾಸ ಮತ್ತು ತರಬೇತಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಏರ್‌ ಇಂಡಿಯಾಗೆ ನಾಲ್ಕು ಶೋ-ಕಾಸ್ ನೋಟಿಸ್‌ಗಳನ್ನು ಕಳುಹಿಸಿದೆ. ಕಳೆದ ಆರು ತಿಂಗಳಲ್ಲಿ ಬಹು ಸುರಕ್ಷತಾ ಉಲ್ಲಂಘನೆ ಮತ್ತು ಘಟನೆಗಳಿಗಾಗಿ ಏರ್‌ ಇಂಡಿಯಾ 13 ನೋಟಿಸ್‌ಗಳನ್ನು ಸ್ವೀಕರಿಸಿದೆ.

    ಜೂನ್‌ 12 ರಂದು ಅಹಮದಾಬಾದ್‌ನಿಂದ ಲಂಡನ್‌ನ ಗಾಟ್ವಿಕ್‌ ವಿಮಾನ ನಿಲ್ದಾಣಕ್ಕೆ ಏರ್‌ಇಂಡಿಯಾ ಬೋಯಿಂಗ್‌ 787 ಟೇಕಾಫ್‌ ಆಗಿತ್ತು. ಟೇಕಾಫ್‌ ಆದ ಕೆಲ ನಿಮಿಷದಲ್ಲಿ ಪತನಗೊಂಡು ಏರ್‌ ಪೋರ್ಟ್‌ ಸಮಿಪದಲ್ಲಿದ್ದ ಮೆಡಿಕಲ್‌ ಕಾಲೇಜ್‌ ಹಾಸ್ಟೆಲ್‌ ಮೇಲೆ ಬಿದ್ದಿತ್ತು. ಪರಿಣಾಮ 241 ಮಂದಿ ಮೃತಪಟ್ಟರೆ ಒಬ್ಬರು ಪವಾಡಸದೃಶವಾಗಿ ಪಾರಾಗಿದ್ದರು.

  • ಏರ್‌ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? – ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ

    ಏರ್‌ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? – ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ

    ಅಹ್ಮದಾಬಾದ್: ಇಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash) ಹೇಗಾಯ್ತು ಅನ್ನೋ ಗೊಂದಲ ಮುಂದುವರಿದಿದೆ. ಈ ಮಧ್ಯೆ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್, 260 ಜನರ ಸಾವಿಗೆ ಕಾರಣವಾದ ಅಂಶ ವರದಿ ಮಾಡಿದೆ.

    ಟೇಕಾಫ್ ಆಗಿದ್ದ ವಿಮಾನದ ಇಂಧನ ಕಟ್ ಆಗಿದ್ದೇ ದುರಂತಕ್ಕೆ ಕಾರಣ ಎಂದು ವರದಿ ಮಾಡಿದೆ. ಕ್ಯಾಪ್ಟನ್ ಸುಮೀತ್ ಸಬರ್‌ವಾಲ್ ಯಡವಟ್ಟಿನಿಂದಲೇ ಈ ದುರಂತ ನಡೆದೋಗಿದೆ. 15,000 ಗಂಟೆಗಳಷ್ಟು ಹಾರಾಟದ ಅನುಭವ ಹೊಂದಿದ್ದ ಸುಮಿತ್ ಸಬರ್‌ವಾಲ್, ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಇಂಧನ ಪೂರೈಕೆ ಕಟ್ ಆಫ್ ಮಾಡಿದ್ದರು. ಇದನ್ನು ಗಮನಿಸಿದ ಕೋ ಪೈಲಟ್ ಕ್ಲೈವ್‌ ಕುಂದರ್, ಗಾಬರಿಯಿಂದಲೇ ಕ್ಯಾಪ್ಟನ್‌ಗೆ ಕೇಳಿದ್ದಾರೆ. ಇಂಧನ ಯಾಕೆ ಸ್ವಿಚ್ ಆಫ್ ಮಾಡಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕ್ಯಾಪ್ಟನ್ ಸುಮೀತ್, ನಾನೇನು ಮಾಡಿಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಕಾಕ್‌ಪಿಟ್‌ನ ಸಂಭಾಷಣೆ ಬ್ಲಾಕ್‌ ಬಾಕ್ಸ್‌ನಲ್ಲಿ ರೆಕಾರ್ಡ್ ಆಗಿದೆ ಎನ್ನುತ್ತಿದೆ ವಾಲ್‌ಸ್ಟ್ರೀಟ್‌ ಜರ್ನಲ್‌ನ ವರದಿ. ಇದನ್ನೂ ಓದಿ:  ಇಂಧನಕ್ಕೆ ಪ್ರಮುಖ ಆದ್ಯತೆ – ನ್ಯಾಟೋ ಮುಖ್ಯಸ್ಥನ ನಿರ್ಬಂಧಗಳ ಬೆದರಿಕೆಗೆ ಭಾರತ ತಿರುಗೇಟು

    ಅಮೆರಿಕದ ಜರ್ನಲ್ ಮಾಡಿರೋ ವರದಿ ಬಗ್ಗೆ ವಿದೇಶಾಂಗ ಇಲಾಖೆ ಪ್ರತಿಕ್ರಿಯೆಗೆ ನಿರಾಕರಿಸಿದೆ. ವರದಿ ನೋಡಿ ಪ್ರತಿಕ್ರಿಯಿಸೋದಾಗಿ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಇನ್ನೂ ವೈಮಾನಿಕ ತಜ್ಞರು, ಏರ್ ಇಂಡಿಯಾ ಪೈಲಟ್‌ಗಳನ್ನ ಟಾರ್ಗೆಟ್ ಮಾಡಿ ವರದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ – 238 ಮಂದಿ ಹತ್ಯೆ

    AAIB ಪ್ರಾಥಮಿಕ ವರದಿಯಲ್ಲಿ ಏನಿದೆ?
    ಇದಕ್ಕೂ ಮುನ್ನ ಬಹಿರಂಗವಾಗಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿ, ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನದಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ತಿಳಿಸಿತ್ತು. ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯಲ್ಲಿ ಪೈಲಟ್‌ಗಳ ಕಾಕ್‌ಪಿಟ್‌ (Cockpit) ಧ್ವನಿ ರೆಕಾರ್ಡಿಂಗ್‌ ಡೇಟಾವನ್ನ ಉಲ್ಲೇಖಿಸಲಾಗಿದೆ. ಇದರಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಡ್ಯುಯಲ್-ಎಂಜಿನ್ ಸ್ಥಗಿತಗೊಂಡಿರುವುದು ಅಪಘಾತಕ್ಕೆ ಕಾರಣ ಎಂದು ಸೂಚಿಸಲಾಗಿದೆ. ಅಪಘಾತಕ್ಕೆ ಕೆಲ ಸೆಕೆಂಡುಗಳಿಗೂ ಮುನ್ನ ನಡೆದ ಸಂಭಾಷಣೆಯ ಒಂದು ಭಾಗದಲ್ಲಿ ಇದು ತಿಳಿದಿದೆ. ಜೊತೆಗೆ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ ಇಂಜಿನ್‌ಗಳು ಆಫ್ ಆಗಿದ್ದವು. ಇದರಿಂದ ವಿಮಾನವು ಏರಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ.

    ಟೇಕ್ ಆಫ್ ಆದ 3 ಸೆಕೆಂಡ್‌ಗಳ ನಂತರ, ಎರಡೂ ಇಂಜಿನ್‌ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ರನ್‌ ನಿಂದ ಕಟ್‌ಆಫ್‌ಗೆ ಬದಲಾದವು. ಇದರಿಂದಾಗಿ ಥ್ರಸ್ಟ್ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಅಲ್ಲದೇ ಒಂದು ಪೈಲಟ್ ʻನೀವು ಏಕೆ ಕಟ್ ಆಫ್ ಮಾಡಿದ್ರಿ?ʼ ಎಂದು ಕೇಳುವುದು ಕೇಳಿಸುತ್ತದೆ. ಅದಕ್ಕೆ ಇನ್ನೊಬ್ಬ ಪೈಲಟ್ ʻನಾನು ಮಾಡಿಲ್ಲʼ ಎಂದು ಉತ್ತರಿಸುತ್ತಾರೆ. ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ಶಂಕಿಸಲಾಗಿದೆ. ʻWhy did you cutoff?ʼ ಮತ್ತು ʻI did not do so,ʼ ಎಂಬ ಮಾತುಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಪಕ್ಷದ ನಾಯಕನ ಬರ್ಬರ ಹತ್ಯೆ – ನಾಲ್ಕೇ ದಿನಗಳಲ್ಲಿ 2ನೇ ರಾಜಕೀಯ ಹತ್ಯೆ

    ಇನ್ನೂ ಫ್ಲೈಟ್ ಡೇಟಾ ರೆಕಾರ್ಡರ್‌ ಪ್ರಕಾರ, ಇಂಜಿನ್-1 ಅನ್ನು ಸ್ವಯಂಚಾಲಿತವಾಗಿ ಮರುಪ್ರಾರಂಭಿಸಲು ಪ್ರಯತ್ನಿಸಿ, ಅದು ಯಶಸ್ವಿಯಾಯಿತು. ಆದ್ರೆ ಇಂಜಿನ್ 2 ಅನ್ನು ಮರುಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಮ್ ಏರ್ ಟರ್ಬೈನ್ (RAT) ಅನ್ನು ತುರ್ತು ವಿದ್ಯುತ್ ಮೂಲವಾಗಿ ಬಳಸಲಾಗಿತ್ತು. ಇದು ಟೇಕ್ ಆಫ್ ಆದ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರಿಂದ ಅಗತ್ಯ ಸಿಸ್ಟಮ್‌ಗಳಿಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಎಂದು ವರದಿ ತಿಳಿಸಿದೆ. RAT ಅಂದರೆ ವಿಮಾನದಲ್ಲಿನ ಎಲೆಕ್ಟ್ರಿಕಲ್ ವ್ಯವಸ್ಥೆ ಕೈಕೊಟ್ಟಾಗ ಉಪಯೋಗಿಸುವ ಒಂದು ಸಾಧನ.

  • Ahmedabad Plane Crash | ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 2 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ AAIB

    Ahmedabad Plane Crash | ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 2 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ AAIB

    ನವದೆಹಲಿ: ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ (Ahmedabad) ನಡೆದಿದ್ದ ಏರ್ ಇಂಡಿಯಾ (Air India) ವಿಮಾನ ದುರಂತ ಸಂಬಂಧ ಇಂದು ಎಎಐಬಿ (AAIB) 2 ಪುಟಗಳ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದೆ.

    ಜೂ.12ರಂದು ಏರ್ ಇಂಡಿಯಾ ವಿಮಾನ ಪತನಗೊಂಡ ಪರಿಣಾಮ ಸ್ಥಳೀಯರು, ಪ್ರಯಾಣಿಕರು ಸೇರಿ 260ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಅವಶೇಷಗಳನ್ನು ತೆರವುಗೊಳಿಸುವ ವೇಳೆ ಬಿಜೆ ಮೆಡಿಕಲ್ ಹಾಸ್ಟೆಲಿನ ಮೇಲ್ಛಾವಣಿಯಲ್ಲಿ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು. ಇದನ್ನು ವಶಪಡಿಸಿಕೊಂಡಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಆರಂಭಿಸಿತ್ತು.ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ

    ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕ್ರ್ಯಾಶ್‌ ತನಿಖಾ ವಿಭಾಗದ ಅಡಿಯಲ್ಲಿ ಬರುವ ವಿಮಾನ ಅಪಘಾತ ತನಿಖಾ ಬ್ಯೂರೋ ಪ್ರಯೋಗಾಲಯದಲ್ಲಿ ಬ್ಲ್ಯಾಕ್ ಬಾಕ್ಸ್‌ನ ಮುಂಭಾಗದ ಕಪ್ಪು ಪೆಟ್ಟಿಗೆಯಿಂದ ಕ್ರ್ಯಾಶ್‌ ಪ್ರೊಟೆಕ್ಷನ್ ಮಾಡ್ಯೂಲ್‌ನ್ನು ರಿಕವರಿ ಮಾಡಿಕೊಂಡಿದ್ದರು. ಬಳಿಕ ಮೆಮೊರಿ ಮಾಡ್ಯೂಲ್‌ನಲ್ಲಿನ ಡೇಟಾವನ್ನು ಯಶಸ್ವಿಯಾಗಿ ಡೌನ್‌ಲೋಡ್ ಮಾಡಿದ್ದರು. ಸದ್ಯ ವಿಮಾನ ದುರಂತಕ್ಕೆ ಕಾರಣ ಏನು ಎಂಬುವುದರ ವರದಿ ಸಲ್ಲಿಸಿದೆ. ವಿಮಾನ ಅಪಘಾತಕ್ಕೆ ಕಾರಣ ಏನೆಂದು ಈ ವರದಿಯಲ್ಲಿ ಬಹಿರಂಗವಾಗುವ ಸಾಧ್ಯತೆಯಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡುವ ಸಾಧ್ಯತೆಯಿದೆ.

    ವಿಮಾನ ಅಪಘಾತವಾದ ಮರುದಿನವೇ ಅಂತಾರಾಷ್ಟ್ರೀಯ ಮಾನದಂಡ, ಶಿಷ್ಟಾಚಾರಗಳಿಗೆ ಅನುಗುಣವಾಗಿ ಜೂ.13ರಂದು ತನಿಖಾ ತಂಡ ರಚಿಸಲಾಗಿತ್ತು. ಎಎಐಬಿ ತಂಡವು ಜೂ.24ರಂದು ವಿಮಾನದ ಬ್ಲಾö್ಯಕ್ ಬಾಕ್ಸ್ ದಾಖಲೆ ಹೊರತೆಗೆಯುವ ಪ್ರಕ್ರಿಯೆ ಪ್ರಾರಂಭಿಸಿತ್ತು. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್‌ನ ವಿಶ್ಲೇಷಣೆಯನ್ನೂ ನಡೆಸಲಾಗಿತ್ತು.

    ಇನ್ನು ವಿಮಾನಯಾನ ಸಂಸ್ಥೆಯಿಂದ ನಡೆದ ಮತ್ತೊಂದು ತನಿಖೆ ಪ್ರಕಾರ, ಡಬಲ್ ಎಂಜಿನ್ ವೈಫಲ್ಯದಿಂದಾಗಿ ಬೋಯಿಂಗ್ 787 ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಿದೆ.

    ಏನಿದು ಬ್ಲ್ಯಾಕ್ ಬಾಕ್ಸ್?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ಫ್ಲೈಟ್ ಡೇಟಾ ರೆಕಾರ್ಡರ್ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ, ಸುತ್ತಲೂ ಬೆಂಕಿ ಇದ್ದರೂ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಹಾನಿಯಾಗುವುದಿಲ್ಲ.ಇದನ್ನೂ ಓದಿ: ಹರಿಯಾಣದ ರೈಲಿನಲ್ಲಿ ಗ್ಯಾಂಗ್‌ ರೇಪ್ -‌ ಅತ್ಯಾಚಾರ ಬಳಿಕ ರೈಲ್ವೆ ಹಳಿಗಳ ಮೇಲೆ ಮಹಿಳೆ ಎಸೆದ ಪಾಪಿಗಳು

    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್: ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್ ಧ್ವನಿಯನ್ನು ದಾಖಲಿಸುತ್ತದೆ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್ ಬಾಕ್ಸ್ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್ ಹೊರ ಸೂಸುತ್ತಿರುತ್ತದೆ.ಇದನ್ನೂ ಓದಿ: ರಕ್ಷಿತಾ ಪ್ರೇಮ್ ಸಹೋದರ ರಾಣಾ ನಟನೆಯ ಚಿತ್ರದ ಟೈಟಲ್ ಟೀಸರ್ ರಿಲೀಸ್

  • Ahmedabad Plane Crash | ಬ್ಲ್ಯಾಕ್‌ ಬಾಕ್ಸ್ ಡೌನ್‌ಲೋಡ್ ಪ್ರಕ್ರಿಯೆ ಪೂರ್ಣ, ವಿಶ್ಲೇಷಣೆ ಶುರು – ವಿಮಾನಯಾನ ಸಚಿವಾಲಯ

    Ahmedabad Plane Crash | ಬ್ಲ್ಯಾಕ್‌ ಬಾಕ್ಸ್ ಡೌನ್‌ಲೋಡ್ ಪ್ರಕ್ರಿಯೆ ಪೂರ್ಣ, ವಿಶ್ಲೇಷಣೆ ಶುರು – ವಿಮಾನಯಾನ ಸಚಿವಾಲಯ

    ನವದೆಹಲಿ: ಅಹಮದಾಬಾದ್ ಏರ್ ಇಂಡಿಯಾ (Ahmedabad Plane Crash) ವಿಮಾನ ದುರಂತದ ಅಂತಿಮ ಕ್ಷಣದಲ್ಲಿ ಏನಾಯಿತು ಎಂದು ತಿಳಿದುಕೊಳ್ಳಲು ನಿರ್ಣಾಯಕವಾಗಿದ್ದ ಬ್ಲ್ಯಾಕ್‌ ಬಾಕ್ಸ್ (Black Box)  ಮಾಹಿತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯವು ಸದ್ಯ ಡೌನ್‌ಲೋಡ್ ಮಾಡಿಕೊಂಡು ವಿಶ್ಲೇಷಣೆ ಪ್ರಾರಂಭಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಜೂ.12ರಂದು ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸ್ಥಳೀಯರು ಸೇರಿ 275 ಜನರ ಸಾವನ್ನಪ್ಪಿದ್ದರು. ಅವಶೇಷಗಳನ್ನು ತೆರವುಗೊಳಿಸುವ ವೇಳೆ ಬಿಜೆ ಮೆಡಿಕಲ್ ಹಾಸ್ಟೆಲಿನ ಮೇಲ್ಛಾವಣಿಯಲ್ಲಿ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು. ಇದನ್ನು ವಶಪಡಿಸಿಕೊಂಡಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಆರಂಭಿಸಿತ್ತು. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ (Union Ministry of Civil Aviation) ಕ್ರ‍್ಯಾಶ್ ತನಿಖಾ ವಿಭಾಗದ ಅಡಿಯಲ್ಲಿ ಬರುವ ವಿಮಾನ ಅಪಘಾತ ತನಿಖಾ ಬ್ಯೂರೋ (Aircraft Accident Investigation Bureau) ಪ್ರಯೋಗಾಲಯದಲ್ಲಿ ಬ್ಲ್ಯಾಕ್ ಬಾಕ್ಸ್‌ನ ಮುಂಭಾಗದ ಕಪ್ಪು ಪೆಟ್ಟಿಗೆಯಿಂದ ಕ್ರ‍್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್‌ನ್ನು ರಿಕವರಿ ಮಾಡಿಕೊಂಡಿದ್ದಾರೆ. ಬಳಿಕ ಮೆಮೊರಿ ಮಾಡ್ಯೂಲ್‌ನಲ್ಲಿನ ಡೇಟಾವನ್ನು ಯಶಸ್ವಿಯಾಗಿ ಡೌನ್‌ಲೋಡ್ ಮಾಡಿಕೊಂಡಿದೆ.

    ಅಪಘಾತದಲ್ಲಿ ತಾಪಮಾನ 1,000 ಡಿಗ್ರಿ ಸೆಲ್ಸಿಯಸ್ ತಲುಪಿದ್ದರಿಂದ ಬ್ಲ್ಯಾಕ್ ಬಾಕ್ಸ್‌ ಕೂಡ ತೀವ್ರವಾಗಿ ಹಾನಿಗೊಳಗಾಗಿತ್ತು. ಸದ್ಯ ತನಿಖೆ ಪೂರ್ಣಗೊಳಿಸಲು ವಿಮಾನ ಅಪಘಾತ ತನಿಖಾ ಬ್ಯೂರೋ ಮೂರು ತಿಂಗಳ ಕಾಲಾವಕಾಶ ಪಡೆದಿದ್ದು, ಬಳಿಕ ವಿಮಾನ ಅಪಘಾತದ ವೇಳೆ ಆಗಿದ್ದೇನು ಎನ್ನುವ ಮಾಹಿತಿ ತಿಳಿದು ಬರಲಿದೆ. ಈ ಮೂಲಕ ಅಪಘಾತಕ್ಕೆ ಕಾರಣವಾಗುವ ಅಂಶಗಳ ಪುನರ್‌ನಿರ್ಮಾಣ, ವಾಯುಯಾನ ಸುರಕ್ಷತೆ ಹೆಚ್ಚಳ ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತದೆ.

    ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಿಜೆ ಮೆಡಿಕಲ್ ಆಸ್ಪತ್ರೆಗೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಪರಿಣಾಮ ಸ್ಥಳೀಯರು ಸೇರಿದಂತೆ ಸುಮಾರು 275 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ನಟ ಸೂರ್ಯ ಚಿತ್ರವನ್ನು ನಿರ್ಮಾಣ ಮಾಡಲಿದೆ ಡ್ರೀಮ್ ವಾರಿಯರ್

    ಏನಿದು ಬ್ಲ್ಯಾಕ್ ಬಾಕ್ಸ್?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ಫ್ಲೈಟ್ ಡೇಟಾ ರೆಕಾರ್ಡರ್ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ, ಸುತ್ತಲೂ ಬೆಂಕಿ ಇದ್ದರೂ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಹಾನಿಯಾಗುವುದಿಲ್ಲ.

    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್: ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್ ಧ್ವನಿಯನ್ನು ದಾಖಲಿಸುತ್ತದೆ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್ ಬಾಕ್ಸ್ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್ ಹೊರ ಸೂಸುತ್ತಿರುತ್ತದೆ.ಇದನ್ನೂ ಓದಿ: ಡ್ರಗ್ಸ್ ಸೇವನೆ: ನಟ ಶ್ರೀಕಾಂತ್ ಬಳಿಕ ಮತ್ತೋರ್ವ ನಟನ ಬಂಧನ

  • Plane Crash | ಬ್ಲ್ಯಾಕ್‌ ಬಾಕ್ಸ್‌ಗಳನ್ನು ವಿದೇಶಕ್ಕೆ ಕಳಿಸಿಲ್ಲ: ಸುಳ್ಳು ಸುದ್ದಿ ಹರಡದಂತೆ ಕೇಂದ್ರ ಸರ್ಕಾರ ಮನವಿ

    Plane Crash | ಬ್ಲ್ಯಾಕ್‌ ಬಾಕ್ಸ್‌ಗಳನ್ನು ವಿದೇಶಕ್ಕೆ ಕಳಿಸಿಲ್ಲ: ಸುಳ್ಳು ಸುದ್ದಿ ಹರಡದಂತೆ ಕೇಂದ್ರ ಸರ್ಕಾರ ಮನವಿ

    ನವದೆಹಲಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ಗಳನ್ನು (Black Boxes) ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂಬ ವರದಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ತಳ್ಳಿಹಾಕಿದೆ.

    ಅಪಘಾತಕ್ಕೀಡಾದ ಏರ್‌ ಇಂಡಿಯಾ 171 ವಿಮಾನದ CVR/DFDR ಅನ್ನು ವಿಶ್ಲೇಷಣೆಗಾಗಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಫ್ಲೈಟ್ ರೆಕಾರ್ಡರ್‌ಗಳನ್ನು ಡಿಕೋಡ್ ಮಾಡುವ ಸ್ಥಳದ ಬಗ್ಗೆ ಸೂಕ್ತ ಮೌಲ್ಯಮಾಪನದ ನಂತರ AAIB ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವಾಲಯ ಎಕ್ಸ್‌ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಊಹಾಪೋಹಗಳನ್ನು ಹರಡದಂತೆ ಸಚಿವಾಲಯವು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್‌ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್‌

    ನಾಗರಿಕ ವಿಮಾನಯಾನ ಸಚಿವಾಲಯವು ಎಲ್ಲಾ ಪಾಲುದಾರರನ್ನು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಊಹಾಪೋಹಗಳಿಂದ ದೂರವಿರಲು ಮತ್ತು ತನಿಖಾ ಪ್ರಕ್ರಿಯೆಯು ಅದು ಖಾತರಿಪಡಿಸುವ ಗಂಭೀರತೆ ಮತ್ತು ವೃತ್ತಿಪರತೆಯೊಂದಿಗೆ ಮುಂದುವರಿಯಲು ಅನುವು ಮಾಡಿಕೊಡುವಂತೆ ಒತ್ತಾಯಿಸುತ್ತದೆ.

    ಅಹಮದಾಬಾದ್ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171 ರ ದುರಂತ ಅಪಘಾತದ ತನಿಖೆ ನಡೆಯುತ್ತಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಔಪಚಾರಿಕ ತನಿಖೆಯ ನೇತೃತ್ವ ವಹಿಸಿದೆ. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

    ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ, ಬಹು-ಶಿಸ್ತಿನ AAIB ತಂಡವು ಜೂ.12 ರಂದು ತನಿಖೆ ಪ್ರಾರಂಭಿಸಿತು. ಇದಕ್ಕೆ US ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಮತ್ತು ಮೂಲ ಸಲಕರಣೆ ತಯಾರಕರ (OEM) ತಜ್ಞರ ಬೆಂಬಲವಿದೆ.

    ಏರ್ ಇಂಡಿಯಾ ವಿಮಾನ ಅಪಘಾತ ಸ್ಥಳದಿಂದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಸಾಧನಗಳ ಬ್ಲ್ಯಾಕ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೊದಲನೆಯದು ಜೂ.13 ಮತ್ತು ಎರಡನೆಯದನ್ನು ಜೂ.16 ರಂದು ಪತ್ತೆಹಚ್ಚಲಾಯಿತು. ಇದನ್ನೂ ಓದಿ: ತಿರುಪತಿಗೆ ಹೊರಟಿದ್ದ ವಿಮಾನ ವಾಪಸ್‌ – ಹೈದರಾಬಾದ್‌ನಲ್ಲಿ ಯೂಟರ್ನ್‌ ಹೊಡೆದ ಸ್ಪೈಸ್‌ಜೆಟ್‌ ಫ್ಲೈಟ್‌

  • ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್‌ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್‌

    ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್‌ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್‌

    ನವದೆಹಲಿ: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡ (Air India Plane Crash) ಬಳಿಕ ಎಚ್ಚೆತ್ತ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ನಿಯಮ (New Aviation Rules) ತರಲು ಮುಂದಾಗಿದೆ.

    ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ವಿಮಾನ ಸುರಕ್ಷತೆಗೆ ಸಂಭಾವ್ಯ ಅಪಾಯ ತಂದೊಡ್ಡುವ ಕಟ್ಟಡ ಒಡೆಯುವ ಹಾಗೂ ಮರಗಳನ್ನು ಕತ್ತರಿಸಲು ಕರಡು ನಿಯಮಗಳನ್ನು ಸಿದ್ಧಪಡಿಸಿದೆ. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ನಂತರ ಈ ನಿಯಮ ಜಾರಿಗೆ ಬರಲಿದೆ. ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

    ಈ ನಿಯಮದಲ್ಲಿ ಪ್ರಮುಖವಾಗಿ, ಗೊತ್ತುಪಡಿಸಿದ ವಿಮಾನ ನಿಲ್ದಾಣದ ಸಮೀಪ ಎತ್ತರದ ಮಿತಿಗಳನ್ನು ಉಲ್ಲಂಘಿಸಿರುವ ಕಟ್ಟಡಗಳನ್ನು ಒಡೆಯುವ ಮತ್ತು ವಿಮಾನಗಳಿಗೆ ಅಪಾಯ ತಂದೊಡ್ಡುವ ಮರಗಳನ್ನು ಕತ್ತರಿಸುವ ಅಧಿಕಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗುತ್ತದೆ.

    ನಿಯಮದ ಪ್ರಕಾರ, ಅನುಮತಿ ನೀಡಲಾದ ಎತ್ತರವನ್ನು ಮೀರಿರುವ ಯಾವುದೇ ನಿರ್ಮಾಣ ಕಂಡುಬಂದರೆ ಸಂಬಂಧಪಟ್ಟ ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿಯಿಂದ ನೋಟಿಸ್ ನೀಡಲಾಗುತ್ತದೆ. ನೋಟಿಸ್‌ಗೆ ಮಾಲೀಕರು 60 ದಿನಗಳ ಒಳಗಾಗಿ ನಿರ್ಮಾಣ ಯೋಜನೆಯ ವಿವರವಾದ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ. ಮಾಲೀಕರು ಮಾಹಿತಿ ಸಲ್ಲಿಸಲು ವಿಫಲವಾದರೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.

    ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ಅಥವಾ ಅಧಿಕೃತ ಅಧಿಕಾರಿಗಳು ಕಟ್ಟಡದ ಎತ್ತರದ ನಿಯಮ ಉಲ್ಲಂಘನೆಯನ್ನು ದೃಢಪಡಿಸಿದರೆ, ಅವರು ಮಾಲೀಕರಿಗೆ ರಚನೆಯನ್ನು ಕೆಡವಲು ಅಥವಾ ಮರವನ್ನು ಕಡಿಯಲು ಆದೇಶವನ್ನು ಹೊರಡಿಸಬಹುದು. ಆದೇಶವನ್ನು 60 ದಿನಗಳ ಒಳಗೆ ಪಾಲಿಸಬೇಕಾಗುತ್ತದೆ. ಸೂಕ್ತ ಕಾರಣವಿದ್ದರೆ ಮಾತ್ರ ಇನ್ನೂ 60 ದಿನಗಳ ನಂತರ ವಿಸ್ತರಿಸಲಾಗುತ್ತದೆ.

    ನಿಯಮದಲ್ಲಿ ಏನಿದೆ?
    ಹಗಲು ಹೊತ್ತಿನಲ್ಲಿ ಅಧಿಕಾರಿಗಳು ನಿಯಮ ಮೀರಿರುವ ಕಟ್ಟಡಗಳ ಪರಿಶೀಲನೆ ಮಾಡಬಹುದಾಗಿದೆ. ಇದಕ್ಕೂ ಮುನ್ನ, ಅಧಿಕಾರಿಗಳು ಆಸ್ತಿ ಮಾಲೀಕರಿಗೆ ತಿಳಿಸಬೇಕು. ಮಾಲೀಕರು ಅಸಹಕಾರ ತೋರಿದರೆ ಅಧಿಕಾರಿಗಳು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಕ್ರಮಕೈಗೊಳ್ಳಬಹುದು. ಪ್ರಕರಣವನ್ನು DGCAಗೆ ವರ್ಗಾಯಿಸಬಹುದು.

    ಆದೇಶವನ್ನು ಕಾರ್ಯಗತಗೊಳಿಸದಿದ್ದರೆ ಉಸ್ತುವಾರಿ ಅಧಿಕಾರಿಯು ಜಿಲ್ಲಾಧಿಕಾರಿಗೆ ವರದಿ ನೀಡಬೇಕು. ನಂತರ ಕಟ್ಟಡ ಕೆಡವಲು ಅಥವಾ ಮರ ಕತ್ತರಿಸುವ ಹೊಣೆ ಅವರದ್ದಾಗಿರುತ್ತದೆ. ಈ ಪ್ರಕ್ರಿಯೆಗೆ ಅನಧಿಕೃತ ನಿರ್ಮಾಣಗಳ ವಿರುದ್ಧದ ಇರುವ ಕಾನೂನಿನ ಅಡಿಯೇ ಕ್ರಮ ಕೈಗೊಳ್ಳಲಾಗುತ್ತದೆ.

    ಅನಧಿಕೃತ ನಿರ್ಮಾಣ ಎಂದು ನೋಟಿಸ್‌ ನೀಡಿದ ಬಳಿಕ ಮಾಲೀಕರು ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ನಿಗದಿತ ನಮೂನೆ, ಸಂಬಂಧಿತ ದಾಖಲೆಗಳು ಮತ್ತು 1,000 ರೂ.ಗಳ ಶುಲ್ಕದೊಂದಿಗೆ ಸಂಬಂಧಪಟ್ಟ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

    ಭಾರತೀಯ ವಾಯುಯಾನ ಅಧಿನಿಯಮ 2024 ರ ಸೆಕ್ಷನ್ 22ರ ಅಡಿಯಲ್ಲಿ ಪರಿಹಾರವು ಅಧಿಕೃತ ಆದೇಶ ಪಾಲಿಸಿದವರಿಗೆ ಮಾತ್ರ ಲಭ್ಯವಿರುತ್ತದೆ. ಅಧಿಸೂಚನೆ ಪ್ರಕಟವಾದ ನಂತರ ನಿರ್ಮಿಸಲಾದ ಯಾವುದೇ ಕಟ್ಟಡ ರಚನೆಗೂ ಪರಿಹಾರ ದೊರೆಯುವುದಿಲ್ಲ.

    ಅಧಿಸೂಚನೆ ಪ್ರಕಟವಾದ 20 ದಿನಗಳ ಒಳಗೆ ಸಚಿವಾಲಯವು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಪ್ರತಿಕ್ರಿಯೆಗಳನ್ನು ನೇರವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ಕಳುಹಿಸಬಹುದಾಗಿದೆ. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

  • ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಗೆದ್ದು ಬಂದಿದ್ದ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

    ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಸಾವು ಗೆದ್ದು ಬಂದಿದ್ದ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

    – ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕಣ್ಣೀರಿಟ್ಟ ವಿಶ್ವಾಸ್‌ ಕುಮಾರ್‌

    ಗಾಂಧೀನಗರ: ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್‌ ಇಂಡಿಯಾ (Air India Plane Crash) ವಿಮಾನ ಭೀಕರ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ಪ್ರಯಾಣಿಕ ವಿಶ್ವಾಸ್‌ ಕುಮಾರ್‌ ರಮೇಶ್‌ (Vishwas Kumar Ramesh) ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

    ಹಾಸ್ಟೆಲ್‌ವೊಂದಕ್ಕೆ ವಿಮಾನ ಡಿಕ್ಕಿಯಾಗಿ ಅವಘಡ ಸಂಭವಿಸಿದಾಗ, ತುರ್ತು ನಿರ್ಗಮನ ಬಾಗಿಲು ತೆರೆದು ವಿಶ್ವಾಸ್‌ ಜಿಗಿದು ಬದುಕುಳಿದಿದ್ದರು. ಸಣ್ಣಪುಟ್ಟ ಗಾಯಗಳಿಂದ ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಅನೇಕ ಗಣ್ಯರು ಗಾಯಾಳು ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ಬೆಂಗಳೂರು – ಲಂಡನ್‌ ಸೇರಿದಂತೆ ದಿಢೀರ್‌ 7 ಏರ್‌ ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

    ಚಿಕಿತ್ಸೆ ಬಳಿಕ ವಿಶ್ವಾಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದರು. ನಂತರ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ತನ್ನ ಜೊತೆ ಪ್ರಯಾಣಿಸಿದ್ದ ಸಹೋದರ ವಿಮಾನ ಪತನದಲ್ಲಿ ಮೃತಪಟ್ಟಿದ್ದ.

    ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ 40 ವರ್ಷದ ಬ್ರಿಟಿಷ್ ಪ್ರಜೆ ವಿಶ್ವಾಸ್. ವಿಮಾನ ಅಪಘಾತದ ಸುದ್ದಿ ತಿಳಿದ ನಂತರ ವಿಶ್ವಾಸ್ ಅವರ ಕುಟುಂಬ ಯುಕೆಯಿಂದ ಆಗಮಿಸಿತು. ವಿಶ್ವಾಸ್ ಮತ್ತು ಅವರ ಸಹೋದರ ಇಬ್ಬರೂ ದಿಯು ಮೂಲದವರಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಭಾರತಕ್ಕೆ ವಿಮಾನದಲ್ಲಿ ಬಂದಿದ್ದರು.‌ ಇದನ್ನೂ ಓದಿ: ಏರ್‌ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥನಿಗೆ ಡಿಜಿಸಿಎ ಬುಲಾವ್ – ಬೋಯಿಂಗ್ 787 ವಿಮಾನಗಳ ತಾಂತ್ರಿಕ ಸಮಸ್ಯೆ ಬಗ್ಗೆ ಚರ್ಚೆ

    ಬುಧವಾರ ಬೆಳಗ್ಗೆ ಅಜಯ್ ಅವರ ಅಂತ್ಯಕ್ರಿಯೆಯನ್ನು ಕುಟುಂಬವು ದಿಯುನಲ್ಲಿ ನಡೆಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಡಿಎನ್ಎ ಮಾದರಿಯು ಅವರ ಗುರುತನ್ನು ದೃಢಪಡಿಸಿದ ನಂತರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

    ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಬೋಯಿಂಗ್ 787 ಡ್ರೀಮ್‌ಲೈನರ್ ಏರ್‌ ಇಂಡಿಯಾ ವಿಮಾನ 171 ಅಪಘಾತಕ್ಕೀಡಾಗಿದೆ. ದುರಂತದಲ್ಲಿ 270 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ಕೆಲವೇ ಕ್ಷಣಗಳ ನಂತರ ವೈರಲ್ ಆಗಿರುವ ವೀಡಿಯೊದಲ್ಲಿ, ಗಾಯಗೊಂಡಿದ್ದ ವಿಶ್ವಾಸ್ ಅಂಬುಲೆನ್ಸ್‌ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ

  • ಏರ್‌ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥನಿಗೆ ಡಿಜಿಸಿಎ ಬುಲಾವ್ – ಬೋಯಿಂಗ್ 787 ವಿಮಾನಗಳ ತಾಂತ್ರಿಕ ಸಮಸ್ಯೆ ಬಗ್ಗೆ ಚರ್ಚೆ

    ಏರ್‌ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥನಿಗೆ ಡಿಜಿಸಿಎ ಬುಲಾವ್ – ಬೋಯಿಂಗ್ 787 ವಿಮಾನಗಳ ತಾಂತ್ರಿಕ ಸಮಸ್ಯೆ ಬಗ್ಗೆ ಚರ್ಚೆ

    ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಂಗಳವಾರ ಏರ್ ಇಂಡಿಯಾ (Air India) ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಅಧಿಕಾರಿಗಳೊಂದಿಗೆ ತುರ್ತು ಸಭೆ ಕರೆದಿದೆ.

    ಏರ್‌ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥ, ಎಂಡಿ ಮತ್ತು ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ವಿಮಾನ ಕಾರ್ಯಾಚರಣೆಗಳ ನಿರ್ದೇಶಕ ಕ್ಯಾಪ್ಟನ್ ಪಂಕುಲ್ ಮಾಥುರ್, ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಸಿಇಒ ಅಲೋಕ್ ಸಿಂಗ್ ಸೇರಿದಂತೆ ಇನ್ನಿತರೆ ಅಧಿಕಾರಿಗಳ ಜೊತೆ ಸಭೆ ಕರೆಯಲಾಗಿದೆ. ಡಿಜಿಸಿಎ ಮಹಾನಿರ್ದೇಶಕ ಫಾಜಿ ಅಹ್ಮದ್ ಕಿದ್ವಾಯಿ ಈ ವರ್ಚುವಲ್ ಸಭೆಯ ಅಧ್ಯಕ್ಷತೆಯಲ್ಲಿ ವಹಿಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ

    ಅಹಮದಾಬಾದ್‌ (Ahmedabad) ನಡೆದ ಘೋರ ವಿಮಾನ ದುರಂತದಲ್ಲಿ (Plane Crash) 271 ಜನ ಸಾವಿಗೀಡಾದ ಬೆನ್ನಲ್ಲೇ ಈ ಸಭೆ ಕರೆಯಲಾಗಿದೆ. ಅದರ ಜೊತೆ ಇತ್ತೀಚೆಗೆ ಪದೇ ಪದೇ ಬೋಯಿಂಗ್ 787 ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರದ ಬಗ್ಗೆ ಅಧಿಕಾರಿಗಳು, ಏರ್ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥರು ಹಾಗೂ ಇನ್ನಿತರರ ಜೊತೆ ಚರ್ಚಿಸಲಿದ್ದಾರೆ.

    ಇತ್ತೀಚೆಗೆ ನಡೆದ ಏರ್‌ ಇಂಡಿಯಾ ವಿಮಾನ ದುರಂತದ ತನಿಖೆಯ ಭಾಗವಾಗಿ, ಅಪಘಾತಕ್ಕೀಡಾದ ವಿಮಾನದ ಪೈಲಟ್‌ಗಳು ಮತ್ತು ಸಿಬ್ಬಂದಿಯ ತರಬೇತಿ ದಾಖಲೆಗಳನ್ನು ಭಾರತದ ವಾಯುಯಾನ ಸುರಕ್ಷತಾ ಸಂಸ್ಥೆ (Aviation Safety Agency of India) ಏರ್ ಇಂಡಿಯಾವನ್ನು ಕೇಳಿತ್ತು. ಅಲ್ಲದೇ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಎಲ್ಲಾ ವಿಮಾನ ಹಾರಾಟ ತರಬೇತಿ ಸಂಸ್ಥೆಗಳಿಗೆ, ತರಬೇತಿ ಕ್ರಮಗಳ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ.

    ಜೂ.12 ರಂದು ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್‌‌ ಇಂಡಿಯಾ (Air India) ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ ವಿಮಾನದಲ್ಲಿದ್ದ 241 ಜನ ಸಾವನ್ನಪ್ಪಿ, ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕಿದ್ದರು. ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ

  • ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ

    ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ

    – ಹಜ್‌ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
    – ಸ್ವಲ್ಪ ಮಿಸ್ಸಾಗಿದ್ರೂ ಏರ್‌ ಇಂಡಿಯಾ ರೀತಿ ಮತ್ತೊಂದು ದುರಂತ

    ಲಕ್ನೋ: ಅಹಮದಾಬಾದ್‌ನಲ್ಲಿ (Ahmedabad) ವಿಮಾನ ದುರಂತ ಘಟನೆ ಸಂಭವಿಸಿದ ಬಳಿಕ ಇತರೇ ವಿಮಾನಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಅದೇ ರೀತಿ ಹಜ್‌ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್‌ (Saudia Airlines) ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ತುರ್ತು ಭೂಸ್ಪರ್ಶ ಮಾಡಿದೆ.

    ವಿಮಾನ ಚಕ್ರಗಳು ರನ್‌ವೇಗೆ (Runway) ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್‌ ಆಗಿದೆ. ಇದನ್ನೂ ಓದಿ: ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

    ಮೂಲಗಳ ಪ್ರಕಾರ, SV3112 ಸಂಖ್ಯೆಯ ವಿಮಾನ ಶನಿವಾರ ರಾತ್ರಿ 10:45ಕ್ಕೆ ಜೆಡ್ಡಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು, ಸಿಬ್ಬಂದಿಗಳೂ ಇದ್ದರು. ಹಜ್‌ಗೆ ಹೊರಟಿದ್ದ ವೇಳೆ ಬೆಳಗ್ಗೆ 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನದ ಟೈಯರ್‌ನಿಂದ (Wheel Glitch) ಬೆಂಕಿಯ ಕಿಡಿಗಳು ಚಿಮ್ಮಿದೆ ಜೊತೆಗೆ ಟೈರ್‌ನಿಂದ ದಟ್ಟ ಹೊಗೆ ಬಂದಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

    ತಾಂತ್ರಿಕ ದೋಷ ಉಂಟಾದ ಕೆಲವೇ ಕ್ಷಣಗಳಲ್ಲಿ ಪೈಲಟ್‌ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಿದ್ದರು. ಈ ವೇಳೆ ವಿಮಾನ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ತಕ್ಷಣವೇ ನೆರವಿಗೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಇದನ್ನೂ ಓದಿ: Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    ಪ್ರಾಥಮಿಕ ತನಿಖೆಯಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸೋರಿಕೆಯೇ ತಾಂತ್ರಿಕ ದೋಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಒಂದು ವೇಳೆ ವಿಮಾನ ಟೇಕ್‌ ಆಫ್‌ ಸಮಯದಲ್ಲಿ ದೋಷ ಕಾಣಿಸಿಕೊಂಡಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!