Tag: Air India Flight Crash

  • ವಿಮಾನ ದುರಂತ – ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿದ ಭವಿಕ್

    ವಿಮಾನ ದುರಂತ – ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿದ ಭವಿಕ್

    – ಏರ್‌ಪೋರ್ಟ್‌ಗೆ ಬಂದು ಪತಿಯನ್ನು ಬೀಳ್ಕೊಟ್ಟಿದ್ದ ಪತ್ನಿ

    ಗಾಂಧಿನಗರ: ಏರ್ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) ನವವರವೊಬ್ಬ ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಗುಜರಾತ್‌ನ (Gujarat) ವಡೋದರಾದ ಭವಿಕ್ ಮಹೇಶ್ವರಿ (26) ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಕೆಲ ವರ್ಷಗಳಿಂದ ಲಂಡನ್‌ನಲ್ಲಿಯೇ ವಾಸವಾಗಿದ್ದ ಭವಿಕ್ ಮಹೇಶ್ವರಿ (Bhavik Maheshwari) ಜೂನ್ 10ರಂದು ರಿಜಿಸ್ಟರ್ ಮದುವೆ ಆಗಿದ್ದರು. ಮುಂದಿನ ಬಾರಿ ಲಂಡನ್‌ನಿಂದ (London) ವಾಪಸ್ ಬಂದಾಗ ಸಂಭ್ರಮಾಚರಣೆಗೆ ನಿರ್ಧರಿಸಿದ್ದರು. ಭವಿಕ್, ಪ್ರತಿ ವರ್ಷ 15 ದಿನ ರಜೆ ಹಾಕಿ ಊರಿಗೆ ಬರುತ್ತಿದ್ದರು. ಈ ಬಾರಿಯೂ ಭವಿಕ್ ಊರಿಗೆ ಬಂದಿದ್ದರು. ಈ ವೇಳೆ ಮನೆಯವರು ಮದುವೆಯಾಗಿಯೇ ಹೋಗು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಮನೆಯವರ ಒತ್ತಾಯಕ್ಕೆ ಮಣಿದು ಭವಿಕ್, 2 ದಿನ ಮುನ್ನ ಸರಳವಾಗಿ ಮದುವೆಯಾಗಿದ್ದರು. ಭವಿಕ್, ಲಂಡನ್‌ಗೆ ತೆರಳಿದ ಮೇಲೆ ಪತ್ನಿಗೆ ವೀಸಾ ರೆಡಿ ಮಾಡಿ ಪತ್ನಿಯನ್ನು ಕರೆಸಿಕೊಳ್ಳಲು ಸಿದ್ಧರಾಗಿದ್ದರು. ಏರ್‌ಪೋರ್ಟ್ಗೆ ಬಂದು ಭವಿಕ್‌ರನ್ನು ಪತ್ನಿ ಬೀಳ್ಕೊಟ್ಟಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಪತ್ನಿ ವಾಪಸ್ ಮನೆ ತಲುಪುವ ಮುನ್ನವೇ ಪತಿಯ ಸಾವಿನ ಸುದ್ದಿ ಕೇಳಿಬಂದಿದ್ದು, ಭವಿಕ್ ಪತ್ನಿ ಹಾಗೂ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ವಿಧಿಯ ಕ್ರೂರ ಆಟಕ್ಕೆ ಆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭವಿಕ್ ದುರಂತ ಅಂತ್ಯಕಂಡಿದ್ದಾರೆ.

  • ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

    ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

    ಬೆಂಗಳೂರು: ಅಹಮದಾಬಾದ್ ವಿಮಾನ ಪತನ (Air India Flight Crash) ದುರಾದೃಷ್ಟಕರ ಘಟನೆಯಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈ ಬಗ್ಗೆ ಮಾತನಾಡಿದ ಅವರು, ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ ವಿಮಾನ ಪತನ ಆಗಿದೆ. ಈ ಘಟನೆ ನಡೆದಿರುವುದು ನನಗೆ ಆಶ್ಚರ್ಯ ತರಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಿಮಾನಗಳು ಉತ್ತಮವಾಗಿ ಸಂಚಾರ ಆಗ್ತಿತ್ತು. ನಾನು ಕೆಲ ದೃಶ್ಯಗಳನ್ನ ನೋಡಿದ್ದೇನೆ. ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

    ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ದೇಶದಲ್ಲಿ ಹೆಚ್ಚು ಸಾವು ಆಗಬಾರದು. ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

    ವಿಮಾನ ಪತನ ಯಾಕೆ ಆಗಿದೆ ಅನ್ನೋದನ್ನ ಸಿವಿಲ್ ಏವಿಯೇಷನ್ ಅವರು ಕಂಡುಹಿಡಿಯುತ್ತಾರೆ. ಇದು ಬಹಳ ದುರಾದೃಷ್ಟಕರ ಘಟನೆ. ನಮ್ಮೆಲ್ಲಾ ಕರ್ನಾಟಕ ಸರ್ಕಾರದ ಹಾಗೂ ನಮ್ಮ ಪಕ್ಷದ ಪ್ರಾರ್ಥನೆ ಅವರ ಮೇಲೆ ಇದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.