Tag: Air India express

  • ಬೆಂಗಳೂರು – ವಾರಣಾಸಿ ವಿಮಾನದಲ್ಲಿ ಟಾಯ್ಲೆಟ್ ಹುಡುಕುತ್ತಾ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕ!

    ಬೆಂಗಳೂರು – ವಾರಣಾಸಿ ವಿಮಾನದಲ್ಲಿ ಟಾಯ್ಲೆಟ್ ಹುಡುಕುತ್ತಾ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕ!

    ಬೆಂಗಳೂರು/ಲಕ್ನೋ: ನಗರದಿಂದ (Bengaluru) ವಾರಣಾಸಿಗೆ (Varanasi) ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) IX-1086 ವಿಮಾನದಲ್ಲಿ ಪ್ರಯಾಣಿಕನೊಬ್ಬ ಆಕಸ್ಮಿಕವಾಗಿ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಈ ಬಗ್ಗೆ ವಿಮಾನದ ಪೈಲಟ್ ಸಿದ್ಧಾರ್ಥ್ ಶರ್ಮಾ ಅವರು ‌ಎಟಿಸಿಗೆ (ATC) ಸಂದೇಶ ನೀಡಿದ್ದು, ತನಿಖೆ ನಡೆಯುತ್ತಿದೆ.

    9 ಪ್ರಯಾಣಿಕರ ಗುಂಪಿನಲ್ಲಿ ಮಣಿ ಎಂಬ ಪ್ರಯಾಣಿಕ ಕಾಕ್‌ಪಿಟ್ ಬಾಗಿಲಿನ ಬಳಿ ಬಟನ್ ಒತ್ತಿ, ವಿಮಾನದಲ್ಲಿದ್ದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಆತನಿಗೆ ವಿಚಾರಿಸಿದಾಗ ತಾನು ಮೊದಲನೇ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾನೆ. CISF ಸಿಬ್ಬಂದಿ ವಿಚಾರಣೆಗಾಗಿ ಎಲ್ಲಾ 9 ಪ್ರಯಾಣಿಕರನ್ನು ವಶಕ್ಕೆ ಪಡೆದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Air India Plane Crash | ಪೈಲಟ್ ಕಡೆಯಿಂದ ಲೋಪ ಎಂಬ ಆರೋಪ ಬೇಜವಾಬ್ದಾರಿ ಎಂದ ಸುಪ್ರೀಂ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, ಶೌಚಾಲಯವನ್ನು ಹುಡುಕುತ್ತಾ ಪ್ರಯಾಣಿಕ ಆಕಸ್ಮಿಕವಾಗಿ ಕಾಕ್‌ಪಿಟ್ ಬಳಿ ಬಂದು ಬಟನ್‌ ಒತ್ತಿರುವ ಬಗ್ಗೆ ವರದಿಯಾಗಿದೆ. ಈ ವರದಿ ನಮ್ಮ ಗಮನಕ್ಕೆ ಬಂದಿದೆ. ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ನಾವು ಮಾಹಿತಿ ನೀಡಿದ್ದೇವೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

  • ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಮೂತಿಗೆ ಹಕ್ಕಿ ಡಿಕ್ಕಿ

    ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಮೂತಿಗೆ ಹಕ್ಕಿ ಡಿಕ್ಕಿ

    ಅಮರಾವತಿ: ವಿಜಯವಾಡದಿಂದ (Vijayawada) ಬೆಂಗಳೂರಿಗೆ (Bengaluru) ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ.

    ಟೇಕಾಫ್‌ಗಾಗಿ AI 9841 ವಿಮಾನವನ್ನು ರನ್‌ವೇಗೆ ತರುತ್ತಿದ್ದಾಗ ಹದ್ದು ವಿಮಾನದ ಮೂತಿಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ 90 ಜನ ಪ್ರಯಾಣಿಕರಿದ್ದರು. ಬಳಿಕ ವಿಮಾನ ಹಾರಾಟವನ್ನು ರದ್ದುಗೊಳಿಸಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಇನ್ನೂ, ಈ ವಿಮಾನ ಇಂದು (ಸೆ.4) ಬೆಳಗ್ಗೆ 8:15ಕ್ಕೆ ವಿಜಯವಾಡದಿಂದ ಹೊರಟು 9:40ಕ್ಕೆ ಬೆಂಗಳೂರು ತಲುಪಬೇಕಿತ್ತು. ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ವಿಮಾನದ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ಇತ್ತೀಚೆಗೆ ನಾಗ್ಪುರದಿಂದ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿತ್ತು. ಬಳಿಕ ನಾಗ್ಪುರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಗಿತ್ತು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 2020 ರಿಂದ ಇಲ್ಲಿಯವರೆಗೆ 343 ಬಾರಿ ಪಕ್ಷಿಗಳು ಡಿಕ್ಕಿ

  • ಕೋಲ್ಕತ್ತಾಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ಬೆಂಗಳೂರಿಗೆ ಮರಳಿದ ಏರ್‌ ಇಂಡಿಯಾ

    ಕೋಲ್ಕತ್ತಾಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ಬೆಂಗಳೂರಿಗೆ ಮರಳಿದ ಏರ್‌ ಇಂಡಿಯಾ

    ಬೆಂಗಳೂರು: ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಭಾನುವಾರ ರಾತ್ರಿ ಹೈಡ್ರಾಲಿಕ್ ವೈಫಲ್ಯದಿಂದಾಗಿ ಮಧ್ಯದಲ್ಲೇ ಹಿಂತಿರುಗಬೇಕಾಯಿತು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

    ಬೆಂಗಳೂರು-ಕೋಲ್ಕತ್ತಾ ಮಾರ್ಗದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ವಿಮಾನ IX 2718)ದಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಈ ಬಗ್ಗೆ ವರದಿ ಮಾಡಿ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ.

    ಕೆಐಎಯಿಂದ ಸಂಜೆ 7:05 ಕ್ಕೆ ಹೊರಡಬೇಕಿದ್ದ ವಿಮಾನವು ಸಂಜೆ 7:16 ಕ್ಕೆ ಹೊರಟು 9:19 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.

  • ತಾಂತ್ರಿಕ ಸಮಸ್ಯೆಯಿಂದ ದೋಹಾಗೆ ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕ್ಯಾಲಿಕಟ್‌ಗೆ ವಾಪಸ್

    ತಾಂತ್ರಿಕ ಸಮಸ್ಯೆಯಿಂದ ದೋಹಾಗೆ ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕ್ಯಾಲಿಕಟ್‌ಗೆ ವಾಪಸ್

    ತಿರುವನಂತಪುರಂ: ದೋಹಾಗೆ (Doha) ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನವೊಂದರಲ್ಲಿ ತಾಂತ್ರಿಕ ಸಮಸ್ಯೆ (Technical Issue) ಉಂಟಾಗಿ ಟೇಕ್ ಆಫ್ ಆದ 2 ಗಂಟೆಗಳ ನಂತರ ಸುರಕ್ಷಿತವಾಗಿ ಮತ್ತೆ ಕ್ಯಾಲಿಕಟ್‌ಗೆ (Calicut) ವಾಪಸ್ಸಾಗಿದೆ.

    ಬುಧವಾರ ಬೆಳಿಗ್ಗೆ 9:05ರ ಸುಮಾರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ  IX 375 ಕ್ಯಾಲಿಕಟ್‌ನಿಂದ ಟೇಕ್ ಆಫ್ ಆಗಿ ದೋಹಾಗೆ ತೆರಳಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಟೇಕ್ ಆಫ್ ಆದ 2 ಗಂಟೆಗಳ ನಂತರ 11:15 ಸುಮಾರಿಗೆ ಕ್ಯಾಲಿಕಟ್‌ಗೆ ಸುರಕ್ಷಿತವಾಗಿ ಮರಳಿದೆ.ಇದನ್ನೂ ಓದಿ: ಜಗದೀಪ್‌ ಧನಕರ್‌ ರಾಜೀನಾಮೆ – ಉಪ ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ

    ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ವಿಮಾನದ ಕ್ಯಾಬಿನ್ ಎಸಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ವಿಮಾನವನ್ನು ಕ್ಯಾಲಿಕಟ್‌ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಇದು ತುರ್ತು ಲ್ಯಾಂಡಿಂಗ್ ಅಲ್ಲ. ಇನ್ನೂ ವಿಮಾನದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ಒಟ್ಟು 188 ಜನರಿದ್ದರು. ವಿಮಾನ ಲ್ಯಾಂಡಿಂಗ್ ಆದ ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಏರ್ ಇಂಡಿಯಾ ಹೇಳಿಕೆ ಬಿಡುಗಡೆಗೊಳಿಸಿದ್ದು, ವಿಮಾನಯಾನದ ವೇಳೆ ಸುರಕ್ಷತೆ ನಮ್ಮ ಮುಖ್ಯ ಆದ್ಯತೆಯಾಗಿದೆ. ಹೀಗಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಇನ್ನೂ ವಿಮಾನ ವಿಳಂಬವಾಗಿದ್ದರಿಂದ ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಬಳಿಕ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.

    ಇದಕ್ಕೂ ಮುನ್ನ ಮಂಗಳವಾರ ಹಾಂಗ್ ಕಾಂಗ್‌ನಿಂದ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಆದ ಕೆಲವೇ ಸಮಯದಲ್ಲಿ ವಿಮಾನದ ಎಪಿಯುನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ – ರಾಮನಗರದಲ್ಲಿ ವಾಟಾಳ್ ಪ್ರತಿಭಟನೆ

  • ಅನಾರೋಗ್ಯ ಕಾರಣ ನೀಡಿ ಸಾಮೂಹಿಕ ರಜೆ – 25 ಸಿಬ್ಬಂದಿ ವಜಾಗೊಳಿಸಿದ ಏರ್‌ ಇಂಡಿಯಾ

    ಅನಾರೋಗ್ಯ ಕಾರಣ ನೀಡಿ ಸಾಮೂಹಿಕ ರಜೆ – 25 ಸಿಬ್ಬಂದಿ ವಜಾಗೊಳಿಸಿದ ಏರ್‌ ಇಂಡಿಯಾ

    ನವದೆಹಲಿ: ಅನಾರೋಗ್ಯದ ಕಾರಣ ನೀಡಿ ಸಾಮೂಹಿಕ ರಜೆ ಹಾಕಿದ್ದ ಕನಿಷ್ಠ 25 ಸಿಬ್ಬಂದಿಯನ್ನು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಜಾಗೊಳಿಸಿದೆ.

    ಏರ್‌ಲೈನ್‌ನ ಸುಮಾರು 300 ಉದ್ಯೋಗಿಗಳು ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಗೈರಾಗಿದ್ದರು. ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದು ದೊಡ್ಡ ಪ್ರಮಾಣದ ವಿಮಾನಯಾನ ಅಡೆತಡೆಗಳಿಗೆ ಕಾರಣವಾಯಿತು. ಇದನ್ನೂ ಓದಿ: ಭಾರತಕ್ಕೆ ಭೇಟಿ ನೀಡಿದ ಮಾಲ್ಡೀವ್ಸ್‌ ವಿದೇಶಾಂಗ ಸಚಿವ

    ಸಿಬ್ಬಂದಿ ಸಾಮೂಹಿಕ ರಜೆಯಿಂದ 76 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇದರಿಂದ ಸಾಕಷ್ಟು ಸಮಸ್ಯೆಯಾಗಿತ್ತು. ವಜಾಗೊಳ್ಳುವ ಸಿಬ್ಬಂದಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮ್ಯಾನೇಜ್‌ಮೆಂಟ್ ಇಂದು ಕ್ಯಾಬಿನ್ ಸಿಬ್ಬಂದಿ ಸದಸ್ಯರೊಂದಿಗೆ ಟೌನ್‌ಹಾಲ್ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

    ‘ಯಾವುದೇ ಸಮರ್ಥನೀಯ ಕಾರಣವಿಲ್ಲದೆ ರಜೆ ಹಾಕಿರುವುದು ತಿಳಿದುಬಂದಿದೆ’ ಎಂದು 25 ಸಿಬ್ಬಂದಿಯನ್ನು ವಜಾಗೊಳಿಸಿರುವ ಬಗ್ಗೆ ಏರ್‌ಲೈನ್‌ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಅಂಬಾನಿ, ಅದಾನಿ ಟೆಂಪೋದಲ್ಲಿ ಹಣ ಕಳುಹಿಸುತ್ತಾರೆ- ಮೋದಿಗೆ ರಾಗಾ ತಿರುಗೇಟು

    ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ರದ್ದುಗೊಳಿಸಬೇಕಾಗಿತ್ತು. ಇದರಿಂದಾಗಿ ಸಂಪೂರ್ಣ ವೇಳಾಪಟ್ಟಿ ಬದಲಾಯಿತು. ಇದು ಕಂಪನಿಯ ಗೌರವಾನ್ವಿತ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡಿತು. ನಿಮ್ಮ ಕಾರ್ಯವು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಂಪನಿಗೆ ತೀವ್ರ ಮುಜುಗರವಾಗಿದ್ದಲ್ಲದೇ ಹಣಕಾಸು ನಷ್ಟ ಕೂಡ ಆಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

  • ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ವಿಶ್ವದರ್ಜೆಯ ವಿಮಾನ, ರೈಲು ನಿಲ್ದಾಣದ ವಿಶೇಷತೆಗಳು ಏನು?

    ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ವಿಶ್ವದರ್ಜೆಯ ವಿಮಾನ, ರೈಲು ನಿಲ್ದಾಣದ ವಿಶೇಷತೆಗಳು ಏನು?

    ಅಯೋಧ್ಯೆ: ಜನವರಿ 22ಕ್ಕೆ ಅಯೋಧ್ಯೆ (Ayodhya) ಶ್ರೀರಾಮ ಮಂದಿರ (Ram Mandira) ಲೋಕಾರ್ಪಣೆಯಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.

    ಅಯೋಧ್ಯೆ, ಉತ್ತರ ಪ್ರದೇಶಕ್ಕೆ ಸಂಬಂಧಿಸಿದ 15,700 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ, ರಸ್ತೆ, ಹೆದ್ದಾರಿ, ವಿಮಾನ, ರೈಲ್ವೇ ಸೇರಿದಂತೆ ಮೂಲಭೂತ ಸೌಕರ್ಯಗಳ ಯೋಜನೆಗಳು ಒಳಗೊಂಡಿವೆ. ಇದನ್ನೂ ಓದಿ: Ram Mandir- ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

    ಶನಿವಾರ ಉದ್ಘಾಟನೆಯಾಗಲಿರುವ ವಿಮಾನ ನಿಲ್ದಾಣಕ್ಕೆ ಮೊದಲು ಶ್ರೀರಾಮ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (Maharishi Valmiki International Airport) ಎಂದು ಹೆಸರು ಇಡಲಾಗಿತ್ತು. ಆದರೆ ಈಗ ಮಹಾಕಾವ್ಯ ರಾಮಾಯಣದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣ ಎಂದು ಹೆಸರನ್ನು ಇಡಲಾಗಿದೆ.

    ವಿಮಾನ ನಿಲ್ದಾಣದ ವಿಶೇಷತೆ ಏನು?
    ಅಯೋಧ್ಯೆ ನಗರದಿಂದ 15 ಕಿ.ಮೀ. ದೂರದಲ್ಲಿರುವ ವಿಮಾನ ನಿಲ್ದಾಣ 6,500 ಚದರ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ವಾರ್ಷಿಕ 10 ಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದು ಏರ್‌ಬಸ್-ಬೋಯಿಂಗ್‌ನಂತಹ ದೈತ್ಯ ವಿಮಾನಗಳು ಸಂಚರಿಸಬಹುದಾದ ರನ್‌ವೇ ನಿರ್ಮಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ಏರ್‌ ಇಂಡಿಯಾ ವಿಮಾನ

     

    ಉದ್ಘಾಟನೆಯಂದು 2 ವಿಮಾನ ಹಾರಾಟ ನಡೆಸುವ ಸಾಧ್ಯತೆಯಿದ್ದು, ಜ.6ರಿಂದ ವಿಮಾನಗಳ ಸಂಚಾರ ಆರಂಭವಾಗಲಿದೆ. ಎಲ್‌ಇಡಿ, ಮಳೆನೀರು ಸಂಗ್ರಹ, ಕಾರಂಜಿಗಳು, ಜಲಸಂಸ್ಕರಣ ಘಟಕ, ಕೊಳಚೆನೀರು ಸಂಸ್ಕರಣ ಘಟಕ, ಸೋಲಾರ್ ಪವರ್ ಪ್ಲಾಂಟ್ ಸೇರಿದಂತೆ 5 ಸ್ಟಾರ್ ದರ್ಜೆ ಸೌಲಭ್ಯವನ್ನು ಹೊಂದಿದೆ.

    ರೈಲು ನಿಲ್ದಾಣದ ವಿಶೇಷತೆ ಏನು?
    ಏರ್‌ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದೆ. ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದ್ದು, 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.

    3 ಪ್ಲಾಟ್‌ ಫಾರಂನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.

     

  • ಬೆಂಗಳೂರಿನಿಂದ ಅಯೋಧ್ಯೆಗೆ ನೇರ ಏರ್‌ ಇಂಡಿಯಾ ವಿಮಾನ

    ಬೆಂಗಳೂರಿನಿಂದ ಅಯೋಧ್ಯೆಗೆ ನೇರ ಏರ್‌ ಇಂಡಿಯಾ ವಿಮಾನ

    ನವದೆಹಲಿ: ಬೆಂಗಳೂರಿನಿಂದ (Bengaluru) ಅಯೋಧ್ಯೆಗೆ (Ayodhya) ತೆರಳುವ ಮಂದಿಗೆ ಸಿಹಿ ಸುದ್ದಿ. ಬೆಂಗಳೂರಿನಿಂದ ಅಯೋಧ್ಯೆ ನೇರ ವಿಮಾನ ಸೇವೆ ನೀಡುವುದಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ಪ್ರಕಟಿಸಿದೆ.

    ದೇಶದ ಮೂರು ಮಹಾನಗರಗಳಿಂದ ಅಯೋಧ್ಯೆಯಲ್ಲಿರುವ ಮಹರ್ಷಿ ವಾಲ್ಮಿಕಿ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಕ್ಕೆ (Maharishi Valmiki International Airport) ವಿಮಾನ ಸಂಪರ್ಕ ಕಲ್ಪಿಸುವುದಾಗಿ ಏರ್‌ ಇಂಡಿಯಾ ಹೇಳಿದೆ.  ಇದನ್ನೂ ಓದಿ: Ram Mandir- ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

     

    ಮೊದಲ ವಿಮಾನ ಡಿ.30 ರಂದು ದೆಹಲಿ ಮತ್ತು ಅಯೋಧ್ಯೆ ಮಧ್ಯೆ ಹಾರಲಿದ್ದರೆ ಜ.17 ರಿಂದ ಬೆಂಗಳೂರು- ಅಯೋಧ್ಯೆ, ಕೋಲ್ಕತ್ತಾ – ಅಯೋಧ್ಯೆ ಮಧ್ಯೆ ಹಾರಾಟ ನಡೆಸಲಿದೆ.

    ಬೆಂಗಳೂರಿನಿಂದ ಬೆಳಗ್ಗೆ 8:05ಕ್ಕೆ ಟೇಕಾಫ್‌ ಆದರೆ ಅಯೋಧ್ಯೆಯಲ್ಲಿ ಬೆಳಗ್ಗೆ 10:35ಕ್ಕೆ ಲ್ಯಾಂಡ್‌ ಆಗಲಿದೆ. ಮಧ್ಯಾಹ್ನ 03:40ಕ್ಕೆ ಅಯೋಧ್ಯೆಯಿಂದ ಟೇಕಾಫ್‌ ಆಗುವ ವಿಮಾನ ಸಂಜೆ 06:10ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಲಿದೆ.  ಇದನ್ನೂ ಓದಿ: Ram Mandir Inauguration: ಈ ಐವರಿಗೆ ಮಾತ್ರ ರಾಮಮಂದಿರದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ

     

    ಅಯೋಧ್ಯೆಯಿಂದ ಬೆಳಗ್ಗೆ 11:05ಕ್ಕೆ ಟೇಕಾಫ್‌ ಆಗುವ ವಿಮಾನ ಮಧ್ಯಾಹ್ನ 12:50ಕ್ಕೆ ಕೋಲ್ಕತ್ತಾದಲ್ಲಿ ಲ್ಯಾಂಡ್‌ ಆಗಲಿದೆ. ಮಧ್ಯಾಹ್ನ 01:25ಕ್ಕೆ ಟೇಕಾಫ್‌ ಆಗುವ ವಿಮಾನ ಮಧ್ಯಾಹ್ನ 03:10ಕ್ಕೆ ಅಯೋಧ್ಯೆ ತಲುಪಲಿದೆ.

    ನಮ್ಮ ನೆಟ್‌ವರ್ಕ್‌ನ ಪ್ರಮುಖ ಕೇಂದ್ರಗಳಾಗಿರುವ ಬೆಂಗಳೂರು ಮತ್ತು ಕೋಲ್ಕತ್ತಾಗಳು ಅಯೋಧ್ಯೆಗೆ ಗೇಟ್‌ವೇಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ದಕ್ಷಿಣ ಭಾರತ ಮತ್ತು ಪೂರ್ವ ಭಾರತದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಏರ್‌ಇಂಡಿಯಾ ತಿಳಿಸಿದೆ.

  • ಪಾಸ್‍ಪೋರ್ಟ್‍ನಲ್ಲಿ ಏಕನಾಮ ಹೊಂದಿದ್ದರೆ UAE ವೀಸಾ ಸಿಗಲ್ಲ

    ಪಾಸ್‍ಪೋರ್ಟ್‍ನಲ್ಲಿ ಏಕನಾಮ ಹೊಂದಿದ್ದರೆ UAE ವೀಸಾ ಸಿಗಲ್ಲ

    ನವದೆಹಲಿ: ಪಾಸ್‍ಪೋರ್ಟ್‍ನಲ್ಲಿ (Passport) ಯಾವುದೇ ಉಪನಾಮ ಇಲ್ಲದೇ (ಸರ್ ನೇಮ್) ಏಕನಾಮ (Single Name) ಹೊಂದಿದ್ದರೆ ಅಂತಹ ಪ್ರಯಾಣಿಕರಿಗೆ ವೀಸಾ ನೀಡುವುದಿಲ್ಲ ಎಂದು ಯುಎಇ (UAE ) ಹೇಳಿದೆ.

    2022ರ ನವೆಂಬರ್ 21 ರಿಂದ ಈ ನಿಯಮ ಜಾರಿಗೆ ಬರಲಿದೆ. ವಿದೇಶ ಪ್ರವಾಸ ಅಥವಾ ಯಾವುದೇ ರೀತಿಯ ಪ್ರವಾಸಕ್ಕೆ ತೆರಳುವವರು ಪಾಸ್‍ಪೋರ್ಟ್‍ನಲ್ಲಿ ಏಕನಾಮ ಹೊಂದಿದ್ದರೆ, ಅವರಿಗೆ ಯುಎಇಗೆ/ವಿನಿಂದ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಏರ್‌ಇಂಡಿಯಾ, ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆ­ಯನ್ನು ಹೊರಡಿಸಿವೆ. ಇದನ್ನೂ ಓದಿ: ಆಪರೇಷನ್‍ಗೂ ಮುನ್ನ ರೋಗಿಗೆ ವೈದ್ಯನಿಂದಲೇ ರಕ್ತದಾನ – ಡಾಕ್ಟರ್ ಕಾರ್ಯಕ್ಕೆ ನೆಟ್ಟಿಗರಿಂದ ಸಲಾಂ

    ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ. ಉದಾಹರಣೆಗೆ ನಿಮ್ಮ ಹೆಸರು ನವೀನ್ ಎಂದಷ್ಟೇ ಇದ್ದರೆ, ನಿಮಗೆ ಪ್ರವೇಶ ಸಿಗುವುದಿಲ್ಲ. ನಿಮ್ಮ ಹೆಸರಿನ ಜೊತೆಗೆ ಉಪನಾಮಗಳಿದ್ದರೆ (ನವೀನ್ ರಾಮಪ್ಪ, ಬೆಂಗಳೂರು) ನೀವು ಯಾವುದೇ ಸಮಸ್ಯೆಯಿಲ್ಲದೇ ಯುಎಇಗೆ ಪ್ರವೇಶಿಸಬಹುದು. ಇದನ್ನೂ ಓದಿ: ಊಟಿಯಂತಾದ ಬೆಂಗಳೂರು- ರಾಜಧಾನಿಯಲ್ಲಿ ತುಂತುರು ಮಳೆಯ ಸಿಂಚನ

    ಈ ನಿಯಮವು ವಿಸಿಟಿಂಗ್ ವೀಸಾ, ವೀಸಾ ಆನ್ ಅರೈವಲ್, ಉದ್ಯೋಗ ವೀಸಾ ಮತ್ತು ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಅನ್ವಯವಾಗುತ್ತದೆ. ಯುಎಇ ರೆಸಿಡೆಂಟ್ ಕಾರ್ಡ್ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

    ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

    ಮಸ್ಕತ್: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ(Flight) ಟೇಕ್ ಆಫ್ ಆಗುವ ಮೊದಲೇ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಒಮಾನ್‌ನ ಮಸ್ಕತ್‌ನಲ್ಲಿ ನಡೆದಿದೆ.

    ಮಸ್ಕತ್(Muscat) ವಿಮಾನ ನಿಲ್ದಾಣದಲ್ಲಿ ವಿಮಾನವು ಟೇಕ್ ಆಫ್ ಮಾಡುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಏರ್ ಇಂಡಿಯಾ ಎಕ್ಸ್‌ಪ್ರೆಸ್(Air India Express) ವಿಮಾನವು ಕೊಚ್ಚಿಗೆ(Kochi) ಹೊರಟಿತ್ತು.

    ವಿಮಾನದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 145 ಪ್ರಯಾಣಿಕರಿದ್ದರು(Passenger). ಅವರೆಲ್ಲರನ್ನು ವಿಮಾನದಿಂದ ಟರ್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ: ಕುಮಾರಸ್ವಾಮಿ

    ಎರಡು ತಿಂಗಳ ಹಿಂದೆ ಕ್ಯಾಲಿಕಟ್‍ನಿಂದ ದುಬೈಗೆ ಕಾರ್ಯಾಚರಣೆ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸುಟ್ಟ ವಾಸನೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮಸ್ಕತ್‍ಗೆ ತಿರುಗಿಸಲಾಗುತ್ತು. ಆಗಲೂ ಯಾವುದೇ ಗಂಭೀರ ತೊಂದರೆ ಕಂಡು ಬಂದಿರಲಿಲ್ಲ. ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿತ – 7 ಸಾವು, ಒಬ್ಬರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಿಮಾನ- 64 ಪ್ರಯಾಣಿಕರು ಅಪಾಯದಿಂದ ಪಾರು

    ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಿಮಾನ- 64 ಪ್ರಯಾಣಿಕರು ಅಪಾಯದಿಂದ ಪಾರು

    ವಿಜಯವಾಡ : ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ವೇಳೆ ಫೈಲಟ್‍ನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ವಿಜಯವಾಡದ ಗನ್ನವರಂನಲ್ಲಿರುವ ಅಂತರಾಷ್ಟ್ರೀಯಾ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಆಗುತ್ತಿದ್ದಂತೆ ಅಪಘಾತವಾಗಿದ್ದು, ವಿಮಾನದಲ್ಲಿದ್ದ 64 ಜನ ಪ್ರಯಾಣಿಕರು ದೊಡ್ಡ ಅನಾಹುತದಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾರೆ.

    ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಾನ್ನವರಂನಲ್ಲಿ ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಆಗುವ ವೇಳೆ ರನ್ ವೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆದರೂ ವಿಮಾನದಲ್ಲಿದ್ದ ಎಲ್ಲ 64 ಜನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ವಿಮಾನ ನಿಲ್ದಾಣದ ಡೈರೆಕ್ಟರ್ ಮಧುಸೂಧನ್ ರಾವ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.