ನವದೆಹಲಿ: ಏರ್ ಇಂಡಿಯಾ (Air India) ಸಂಸ್ಥೆ 4,000 ಕೋಟಿಗೂ ಅಧಿಕ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ (Campbell Wilson) ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Attack) ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದರಿಂದ ಭಾರತ ಮತ್ತು ಪಾಕಿಸ್ತಾನ ಪರಸ್ಪರ ತಮ್ಮ ವಾಯುಪ್ರದೇಶವನ್ನು ಮುಚ್ಚಿದವು. ಇದು ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಏರ್ ಇಂಡಿಯಾ ಒಂದೇ ಸಂಸ್ಥೆ ಸುಮಾರು 4,000 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿತು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಮೋದಿ ಮತಕ್ಕಾಗಿ ಡ್ಯಾನ್ಸ್ & ಡ್ರಾಮಾ, ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ – ರಾಹುಲ್ ಗಾಂಧಿ ಲೇವಡಿ

ಸಂಘರ್ಷದ ಬಳಿಕ ಪಾಕಿಸ್ತಾನ ತನ್ನ ವಾಯುಸೀಮೆಯನ್ನು (Pakistans Airspace) ನಿರಂತರವಾಗಿ ಮುಚ್ಚಿತು. ಇದರಿಂದ ಏರ್ ಇಂಡಿಯಾ ಸಂಸ್ಥೆ ನಿರಂತರ ನಷ್ಟ ಅನುಭವಿಸಿತು. ಏಕೆಂದ್ರೆ ಪಹಲ್ಗಾಮ್ ದಾಳಿ ಬಳಿಕ ಏರ್ ಇಂಡಿಯಾ ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನ ಬದಲಾಯಿಸಬೇಕಾಯಿತು. ಇದರಿಂದ ಕಾರ್ಯಾಚರಣೆಯ ವೆಚ್ಚ ಹೆಚ್ಚಾಯಿತು. ಇದೆಲ್ಲ ಕಾರಣಗಳಿಂದ ವಿಮಾನಯಾನ ಸಂಸ್ಥೆ ನಷ್ಟ ಅನುಭವಿಸಬೇಕಾಯ್ತು ಎಂದ ತಿಳಿಸಿದ್ರು. ಇದನ್ನೂ ಓದಿ: 10 ಮುಸ್ಲಿಂ ಯುವತಿಯರನ್ನು ಕರೆತಂದು ಹಿಂದೂ ಯುವಕರು ಮದುವೆಯಾಗಿ: ಬಿಜೆಪಿ ಮಾಜಿ ಶಾಸಕ ವಿವಾದಾತ್ಮಕ ಹೇಳಿಕೆ

ಈ ಅವಧಿಯಲ್ಲಿ ಯುರೋಪ್ ಮತ್ತು ಯುನೈಟೆಡ್ ಸ್ಟೇಸ್ಟ್‌ಗೆ ಹೋಗುವ ಮಾರ್ಗಗಳು ಹೆಚ್ಚು ಪರಿಣಾಮ ಬೀರಿತು. ಈ ಮಾರ್ಗಗಳಲ್ಲಿ ಬದಲಾವಣೆ ಮಾಡಿದ್ದರಿಂದ 60 ರಿಂದ 90 ನಿಮಿಷಗಳ ಪ್ರಯಾಣ ಸಮಯ ಹೆಚ್ಚಾಯಿತು. ಜೊತೆಗೆ ಸಿಬ್ಬಂದಿ ಖರ್ಚು ಹೆಚ್ಚಾಯ್ತು ಎಂದು ವಿವರಿಸಿದ್ರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

ಪಹಲ್ಗಾಮ್‌ನಲ್ಲಿ ಹರಿಯಿತು ನೆತ್ತರು
ಏಪ್ರಿಲ್ 22ರಂದು ಶ್ರೀನಗರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹಾಜರಿದ್ದರು. ಹಠಾತ್ ಭಯೋತ್ಪಾದಕ ದಾಳಿಯ ಸಮಯದಲ್ಲಿ, 26 ಜನರು ಸಾವನ್ನಪ್ಪಿದರು ಮತ್ತು ಗುಂಡಿನ ದಾಳಿಯಲ್ಲಿ 17 ಜನರು ಗಾಯಗೊಂಡರು. 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿತ್ತು. ಟಿಆರ್‌ಎಫ್ ಸಂಘಟನೆ ಇದರ ಹೊಣೆ ಹೊತ್ತುಕೊಂಡಿತ್ತು.












