ಮೊಹಮ್ಮದ್ ಡ್ಯಾನಿಶ್ ಬಂಧಿತ ವ್ಯಕ್ತಿ. ಶ್ರೀನಗರದಿಂದ ಲಕ್ನೋಕ್ಕೆ ಅಮೃತಸರ ಮಾರ್ಗವಾಗಿ ಹೋಗುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ನಿವಾಸಿಯಾದ ಮೊಹಮ್ಮದ್ ಎಂಬಾತ ಗಗನಸಖಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಅಷ್ಟೇ ಅಲ್ಲದೇ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ಕುಡಿತ ಅಮಲಿನಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು – ವೀಡಿಯೋ ವೈರಲ್
ಘಟನೆಗೆ ಸಂಬಂಧಿಸಿದಂತೆ ಗಗನಸಖಿಯು ಕ್ಯಾಪ್ಟನ್‍ಗೆ ತಿಳಿಸಿದ್ದಾರೆ. ಅವರು ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನವು ಅಮೃತಸರದಲ್ಲಿ ಭೂಸ್ಪರ್ಶ ಮಾಡಿದ ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಈತನನ್ನು ಜಾಮೀನನ ಮೇರೆಗೆ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ಮೂರಂತಸ್ತಿನ ಕಟ್ಟಡದಲ್ಲಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕು – ಯಶಸ್ವಿ ಕಾರ್ಯಾಚರಣೆ
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ದಿನ ಅಂಗವಾಗಿ ಎಲ್ಲೆಲ್ಲೂ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಗಗನಸಖಿ ಗಗನದಿಂದಲೇ ಬೀಜ ಬಿತ್ತನೆ ಮಾಡಿ ಗಮನಸೆಳೆದಿದ್ದಾರೆ.
ಸಿಲಿಕಾನ್ ಸಿಟಿಯ ಬೆಡಗಿ, ಮಾಜಿ ಗಗನ ಸಖಿ, ಗಗನದಿಂದಲೇ ಪ್ಯಾರಾಗ್ಲೈಡಿಂಗ್ ಮೂಲಕ ಪಂಚಗಿರಿಗಳ ಸಾಲಲ್ಲಿ ಬೀಜದುಂಡೆ ಬಿತ್ತನೆ ಮಾಡಿದ್ದಾರೆ. ಈ ಮೂಲಕ ವಿಶೇಷವಾಗಿ ಪರಿಸರ ದಿನಾಚರಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹತ್ತಾರು ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ಮಾಡಿದ್ದ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಅನಿತಾ ರಾವ್ ಭಾನುವಾರ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳಲ್ಲಿ ಪ್ಯಾರಾಮೋಟರಿಂಗ್ ಮೂಲಕ ಬೀಜದುಂಡನೆ ಬಿತ್ತನೆ ಮಾಡಿದರು. ಇದನ್ನೂ ಓದಿ: ಲಂಕಾಗೆ 3.3 ಟನ್ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು
ಹೌದು, ಗಗನಸಖಿಯಾಗಿ ಕೆಲಸ ಮಾಡಿ, ಸಾಂಸಾರಿಕ ಜೀವನಕ್ಕೆ ಕಾಲಿಡುವ ಸಂದರ್ಭ ಗಗನಸಖಿ ಕೆಲಸಕ್ಕೆ ಗುಡ್‌ಬೈ ಹೇಳಿದರು. ಬಳಿಕ ಅನಿತಾ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸದ ಕಡೆ ಮುಖ ಮಾಡಿದ್ದಾರೆ. ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ನಂದಿಗಿರಿಧಾಮಗಳಲ್ಲಿ ಸುಮಾರು 70,000 ಬೀಜದ ಉಂಡೆಗಳನ್ನು ಹಾಕುವ ಮೂಲಕ ಬರದ ನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಡು ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ.
ಈ ವೇಳೆ ಮಾತನಾಡಿದ ಅನಿತಾ ರಾವ್, ನಾವು ಪರಿಸರ ಬಳಸಿಕೊಳ್ಳುವುದರ ಜೊತೆಗೆ ಪರಿಸರಕ್ಕೆ ಕೊಡುಗೆಯನ್ನೂ ನೀಡಬೇಕು. ಅತಿ ಕಷ್ಟಕರ ಜಾಗಗಳಲ್ಲಿ ಅಂದರೆ, ಬೆಟ್ಟ ಗುಡ್ಡಗಳಲ್ಲಿ ಯಾರೂ ಹೋಗಿ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಹೀಗಾಗಿ ಪ್ಯಾರಾಮೋಟರ್, ಹೆಲಿಕಾಪ್ಟರ್, ಮೂಲಕ ಸೀಡ್ ಬಾಲ್‌ಗಳನ್ನು ಹಾಕಿ, ಗಿಡ ನೆಡಲು ಸಾಧ್ಯವಿದೆ. ಇಂದು ಪುಣೆಯಿಂದ ಪ್ಯಾರಾಮೋಟರ್ ತರಿಸಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ
ಅರಣ್ಯ ಇಲಾಖೆ ಸಹಯೋಗದೊಂದಿಗೆ 7 ಬಗೆಯ ಸುಮಾರು 100 ಕೆಜಿ ಬೀಜಗಳನ್ನು ಇಂದು ಬಿತ್ತನೆ ಮಾಡಲಾಗಿದೆ. 10 ವರ್ಷ ಗಗನಸಖಿಯಾಗಿ ಕೆಲಸ ಮಾಡಿರುವ ನಾನು ಈಗ ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ವಾಷಿಂಗ್ಟನ್: ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ 2016 ರಲ್ಲಿ ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಕೇಳಿಬಂದಿದ್ದು, ಈ ವಿಷಯವನ್ನು ಎಲ್ಲಿಯೂ ಬಾಯಿ ಬಿಡದಂತೆ ಮೌನವಾಗಿರಲು ಆಕೆಗೆ ಬರೋಬ್ಬರಿ 2,50,000 ಡಾಲರ್(ಸುಮಾರು 1.94 ಕೋಟಿ ರೂ.) ನೀಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ಏನು?
ಎಲೋನ್ ಮಸ್ಕ್ 2016ರಲ್ಲಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಿರುವಾಗ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಲಾಗಿದ್ದು, ಈ ಘಟನೆಯನ್ನು ಇತ್ಯರ್ಥ ಮಾಡಿಕೊಳ್ಳಲು ಸ್ಪೇಸ್‌ಎಕ್ಸ್ ಕಂಪನಿ ಆಕೆಗೆ 2018ರಲ್ಲಿ 2,50,000 ಡಾಲರ್ ನೀಡಿರುವುದಾಗಿ ಬಿಜಿನೆಸ್ ಇನ್‌ಸೈಡರ್ ವರದಿ ಮಾಡಿತ್ತು. ವರದಿಯಲ್ಲಿ ಗಗನಸಖಿಯ ಸ್ನೇಹಿತೆ ಎಂದು ಹೇಳಿಕೊಂಡ ಅನಾಮಧೇಯ ವ್ಯಕ್ತಿಯ ಹೇಳಿಕೆ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಸಾಕು ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಸ್ಕ್, ಇದು ಶುದ್ಧ ಸುಳ್ಳು. ಇದು ರಾಜಕೀಯ ಪ್ರೇರಿತ ವರದಿ. ಒಂದು ವೇಳೆ ನಾನು ಈ ರೀತಿ ಮಾಡಿದ್ದರೆ, ನನ್ನ ಸಂಪೂರ್ಣ 30 ವರ್ಷಗಳ ವೃತ್ತಿ ಜೀವನದಲ್ಲಿ ಬೆಳಕಿಗೆ ಬರುತ್ತಿರುವ ಮೊದಲ ಆರೋಪವಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಬ್ಯಾಗ್ ತಪಾಸಣೆ ನಡೆಸಿದಾಗ ಮಗುವಿನ ಡೈಪರ್ ನಡುವೆ ಸುಮಾರು 10 ಲಕ್ಷ ಮೌಲ್ಯದ 100 ಗ್ರಾಂ ಎಂಡಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಈ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಇಂದೋರ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ, ಕಳೆದ ಕೆಲವು ದಿನಗಳ ಹಿಂದೆ ನಾರ್ಕೋ ಸಹಾಯವಾಣಿ ಸಂಖ್ಯೆಗೆ 20ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಇದರಲ್ಲಿ ಹೆಚ್ಚಿನ ದೂರುಗಳು ಡ್ರಗ್ಸ್‍ಗೆ ಸಂಬಂಧಿಸಿತ್ತು. ನಮ್ಮ ಪ್ರಕಾರ ಹೊಸ ವರ್ಷದ ಮುನ್ನ ದಿನದ ಪಾರ್ಟಿಗಳಿಗಾಗಿ ಜನರಿಗೆ ಸರಬರಾಜು ಮಾಡಲು ಅವಳು ಇಂದೋರ್‍ಗೆ ಡ್ರಗ್ಸ್ ತಂದಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ
ಗುರುಗ್ರಾಮದ ಡಿಎಲ್‍ಎಫ್ ಪೇಸ್-3ಯ ಪಿಜಿಯಲ್ಲಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ಗಗನಸಖಿ ನೇಣಿಗೆ ಶರಣಾಗಿದ್ದು, ಪಿಜಿ ಮಾಲೀಕ ಅಮರಿಂದರ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಸಂತ್ರಸ್ತೆಯನ್ನು ಮಿಸ್ತು ಸರ್ಕಾರ್ ಎಂದು ಗುರುತಿಸಲಾಗಿದೆ. ಸರ್ಕಾರ್ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ತಂದೆಯನ್ನು ಹವ್ಲು ಚಂದ್ರ ಸರ್ಕಾರ್ ಎಂದು ಗುರುತಿಸಲಾಗಿದೆ.
ಪ್ರಕರಣದ ಕುರಿತು ಹವ್ಲು ಚಂದ್ರ ಸರ್ಕಾರ್ ಪ್ರತಿಕ್ರಿಯಿಸಿ, ಮಿಸ್ತುಳಿಗೆ ಪಿಜಿ ಮಾಲೀಕ ಕಿರುಕುಳ ನೀಡಿದ್ದಾನೆ. ಅಮರಿಂದರ್ ಸಿಂಗ್ ನನ್ನ ಮಗಳ ಪೋನ್‍ನನ್ನು ಹ್ಯಾಕ್ ಮಾಡಿದ್ದ. ಡಿಸೆಂಬರ್ 17ರ ರಾತ್ರಿ ನನ್ನ ಮಗಳು ಕರೆ ಮಾಡಿದ್ದಳು, ಆಗ ಸಿಂಗ್ ನನಗೆ ಕಿರುಕುಳ ನೀಡುತ್ತಿದ್ದಾನೆ, ಅವಮಾನ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಳು ಎಂದು ತಿಳಿಸಿದ್ದಾರೆ.
ಸಿಂಗ್ ವರ್ತನೆಯಿಂದಗಿ ಮಿಸ್ತು ಬೇಸತ್ತಿದ್ದಳು. ಅಲ್ಲದೆ ಮರಳಿ ಮನೆಗೆ ತೆರಳಲು ನಿರ್ಧರಿಸಿದ್ದಳು. ಈ ಕುರಿತು ಡಿ.17 ರಂದು ತಂದೆ ಹೌವ್ಲು ಚಂದ್ರ ಸರ್ಕಾರ್ ಕರೆ ಮಾಡಿದಾಗ ಮನೆಗೆ ಬರುವಂತೆ ತಿಳಿಸಿದ್ದರು. ಆದರೆ ಮಿಸ್ತು ತಂದೆಯ ಕರೆಯನ್ನು ಕಟ್ ಮಾಡಿದ್ದಳು. ಕೆಲವೇ ಗಂಟೆಗಳ ನಂತರ ಪಿಜಿ ಮಾಲೀಕ ಸಿಂಗ್ ಹೌವ್ಲು ಚಂದ್ರ ಸರ್ಕಾರ್ ಅವರಿಗೆ ಕರೆ ಮಾಡಿ, ನಿಮ್ಮ ಮಗಳು ಏನೋ ಮಾಡುವ ಧಾವಂತದಲ್ಲಿದ್ದಾಳೆ ಎಂದು ತಿಳಿಸಿದ್ದ.
ನಂತರ ಬುಧವಾರ ಬೆಳಗ್ಗೆ ಹೌವ್ಲು ಚಂದ್ರ ಸರ್ಕಾರ್ ಅವರು ತಮ್ಮ ಮಗಳು ಸಾವನ್ನಪ್ಪಿರುವ ಕುರಿತು ತಿಳಿಸಿದ್ದಾರೆ. ಪಿಜಿ ಕೆಲಸಗಾರರು ಘಟನೆ ಕುರಿತು ಹೌವ್ಲು ಚಂದ್ರ ಸರ್ಕಾರ್ ಅವರಿಗೆ ಕರೆ ಮಾಡಿ ವಿವರಿಸಿದ್ದಾರೆ. ಮಿಸ್ತು ಒಳಗಿನಿಂದ ತನ್ನ ರೂಂ ಲಾಕ್ ಮಾಡಿಕೊಂಡು ಫ್ಯಾನ್‍ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಮಿಸ್ತು ತಂದೆ ಹೌವ್ಲು ಚಂದ್ರ ಸರ್ಕಾರ್ ಹೇಳಿಕೆ ಆಧರಿಸಿ ಪಿಜಿ ಮಾಲೀಕ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಗನಸಖಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.
ನವದೆಹಲಿ: ನಕಲಿ ಗುರುತಿನ ಚೀಟಿ ತೋರಿಸಿ ವಿಮಾನಯಾನ ಮಾಡುತ್ತಿದ್ದ ವ್ಯಕ್ತಿಯನ್ನು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ರಲ್ಲಿ ಬಂಧಿಸಲಾಗಿದೆ.
ವಸಂತ್ ಕುಂಜ್ ಸೆಕ್ಟರ್-ಸಿ ನಿವಾಸಿ ರಾಜನ್ (48) ಬಂಧಿತ ವ್ಯಕ್ತಿ. ಜರ್ಮನಿ ವಿಮಾನ ಸಂಸ್ಥೆಯ ನಕಲಿ ಐಡಿ ಬಳಸಿ ಈ ಹಿಂದೆ 15 ಬಾರಿ ಪ್ರಯಾಣ ಮಾಡಿದ್ದೇನೆ ಎಂದು ರಾಜನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಪ್ರಯಾಣಿಕರ ಸಾಲಿನಲ್ಲಿ ನಿಂತುಕೊಳ್ಳುವದನ್ನು ತಪ್ಪಿಸಿಕೊಳ್ಳಲು ಮತ್ತು ಪ್ರಯಾಣದ ಸಂದರ್ಭದಲ್ಲಿ ಗಗನಸಖಿಯರನ್ನು ತನ್ನತ್ತ ಸೆಳೆಯಲು ರಾಜನ್ ನಕಲಿ ಐಡಿ ಮತ್ತು ಪೈಲಟ್ ಡ್ರೆಸ್ ಧರಿಸುತ್ತಿದ್ದನು. ಪೈಲಟ್ ಸಮವಸ್ತ್ರ ಧರಿಸಿ ವಿಮಾನದಲ್ಲಿ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಿ, ವಿಐಪಿ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದನು ಎಂದು ವರದಿಯಾಗಿದೆ.
ಸಿಐಎಸ್‍ಎಪ್ ಅಧಿಕಾರಿಗಳು ರಾಜನ್ ನನ್ನು ಬಂಧಿಸಿ ದೆಹಲಿ ಪೊಲೀಸರ ವಶಕ್ಕೆ ನೀಡಿದ್ದಾರೆ. ವಿಮಾನಯಾನಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದರಿಂದ ಐಬಿ ಮತ್ತು ವಿಶೇಷ ತನಿಖಾ ತಂಡ ಬಂಧಿತನ ವಿಚಾರಣೆ ನಡೆಸುತ್ತಿದೆ.
ನಿವೃತ್ತ ಸೇನಾಧಿಕಾರಿಯ ಪುತ್ರನೆಂದು ಹೇಳಿಕೊಂಡಿರುವ ರಾಜನ್, ಲುಫ್ಥಾನ್ಸ ಐಡಿ ಕಾರ್ಡ್ ಬ್ಯಾಂಕಾಕ್ ನಿಂದ ಖರೀದಿ ಮಾಡಿದ್ದೇನೆ ಎಂದು ರಾಜನ್ ಹೇಳಿದ್ದಾನೆ. ಪ್ರಯಾಣದಲ್ಲಿ ವಿಶೇಷ ಸೌಲಭ್ಯ ಪಡೆದುಕೊಳ್ಳುವ ಉದ್ದೇಶದಿಂದ ನಕಲಿ ಐಡಿ ಕಾರ್ಡ್ ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತ ರಾಜನ್ ಸೋಶಿಯಲ್ ಮೀಡಿಯಾದಲ್ಲಿ ಪೈಲಟ್ ಸಮವಸ್ತ್ರ ಧರಿಸಿರುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾನೆ.
ಬಂಧಿತನಿಂದ ವಶಪಡಿಸಿಕೊಂಡಿರುವ ಮೊಬೈಲ್ ಮತ್ತು ಲ್ಯಾಪ್‍ಟಾಪ್ ಪರಿಶೀಲನೆ ನಡೆಸಲಾಗುತ್ತಿದೆ. ಲುಫ್ಥಾಂಸ್ ವಿಮಾನ ಸಂಸ್ಥೆ ನೀಡಿದ ದೂರಿನ ಅನ್ವಯ ರಾಜನ್ ನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಮುಂಬೈ: 25 ವರ್ಷದ ಗಗನ ಸಖಿಯ ಮೇಲೆ ಆಕೆಯ ಸ್ನೇಹಿತ ಮತ್ತು ಆತನ ರೂಮ್‍ಮೇಟ್ಸ್ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಉಪನಗರ ಆಂಧೇರಿಯಲ್ಲಿ ನಡೆದಿದೆ.
ಈ ಘಟನೆಯು ಮಂಗಳವಾರ ರಾತ್ರಿ ಗೋನಿ ನಗರದಲ್ಲಿರುವ ಫ್ಲಾಟ್‍ನಲ್ಲಿ ನಡೆದಿದೆ. ಗಗನ ಸಖಿಯ ಸ್ನೇಹಿತನನ್ನು ಸ್ವಪ್ನಿಲ್ ಬಡೋಡಿಯಾ(23) ಎಂದು ಗುರುತಿಸಲಾಗಿದೆ. ಆರೋಪಿ ಬಡೋಡಿಯಾ ಕೂಡ ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಆರೋಪಿಸಿ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಆರೋಪಿ ನನ್ನನ್ನು ಮಂಗಳವಾರ ಸಂಜೆ ಡಿನ್ನರ್‍ಗೆ ಕರೆದಿದ್ದನು. ಕೆಲಸ ಮುಗಿಸಿಕೊಂಡು ನನ್ನ ಲಗೇಜ್ ಅನ್ನು ಮನೆಯಲ್ಲಿ ಇಟ್ಟು ಬಳಿಕ ಒಟ್ಟಿಗೆ ಡಿನ್ನರ್ ಗೆ ಹೋಗಿ ಊಟ ಮಾಡಿದೆವು. ನಂತರ ಗೋನಿ ನಗರದಲ್ಲಿರುವ ಸ್ವಪ್ನಿಲ್ ಫ್ಲಾಟ್‍ಗೆ ಹೋಗಿ ಮದ್ಯಪಾನ ಮಾಡಿದೆವು. ಬಳಿಕ ನನಗೆ ತುಂಬ ನಿದ್ದೆ ಬಂದು ಮಲಗಿಕೊಂಡೆ. ಮುಂಜಾನೆ ನನಗೆ ಎಚ್ಚರವಾದಾಗ ನನ್ನ ಮೈ ಮೇಲೆ ಬಟ್ಟೆ ಇರಲಿಲ್ಲ. ಜೊತೆಗೆ ನನ್ನ ದೇಹದ ಮೇಲೆ ಮಾರ್ಕ್ ಗಳಾಗಿದ್ದವು. ಆರೋಪಿ ಬಡೋಡಿಯಾ ಮತ್ತು ಆತನ ಸ್ನೇಹಿತರು ಬಲವಂತವಾಗಿ ನನಗೆ ಮದ್ಯ ಕುಡಿಸಿದ್ದಾರೆ. ಹೀಗಾಗಿ ನನಗೆ ಎಚ್ಚರವಿಲ್ಲದಿದ್ದಾಗ ಬಡೋಡಿಯಾ ಸೇರಿದಂತೆ ಆತನ ರೂಮ್‍ಮೇಟ್ಸ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಗನ ಸಖಿ ನೀಡಿದ ದೂರಿನ ಅನ್ವಯ ಬಡೋಡಿಯಾ ಮತ್ತು ಆತನ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದೇವೆ. ಈಗಾಗಲೇ ಆರೋಪಿ ಬಡೋಡಿಯಾನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ನಿತಿನ್ ಅಲಕ್ನೂರ್ ಹೇಳಿದ್ದಾರೆ.
ಆರೋಪಿ ವಿಚಾರಣೆ ವೇಳೆ ಗಗನ ಸಖಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ತನ್ನ ರೂಮ್‍ಮೇಟ್ಸ್ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದನ್ನು ನಿರಾಕರಿಸಿದ್ದಾನೆ. ಸದ್ಯಕ್ಕೆ ಈ ಕುರಿತು ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದ ಮುಸ್ಲಿಂ ಪ್ರಯಾಣಿಕರೊಬ್ಬರು ಇಫ್ತಾರ್ ಸಮಯವಾದಾಗ ಗಗನಸಖಿಯೊಬ್ಬರ ಬಳಿ ನೀರು ಕೇಳಿದ್ದರು. ಆದರೆ ಪ್ರಯಾಣಿಕ ಉಪವಾಸವಿದ್ದ ಬಗ್ಗೆ ತಿಳಿದ ಗಗನಸಖಿ ಅವರಿಗೆ ಇಫ್ತಾರ್ ಆಹಾರವನ್ನು ನೀಡಿ ಎಲ್ಲರ ಮನ ಗೆದ್ದಿದ್ದಾರೆ.
ಹೌದು. ರಂಜಾನ್ ಹಬ್ಬದ ಹಿನ್ನೆಲೆ ಪತ್ರಕರ್ತ ರಿಫಾತ್ ಜಾವೈದ್ ಅವರು ಉಪವಾಸದಲ್ಲಿದ್ದರು. ಶನಿವಾರದಂದು ರಿಫಾತ್ ಜಾವೈದ್ ಗೊರಖ್‍ಪುರದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಂಜೆ ತಮ್ಮ ಉಪವಾಸ ಮುರಿಯುವ ಸಮಯವಾದಗ ಗಗನಸಖಿ ಮಂಜುಳ ಅವರ ಬಳಿ ಒಂದು ಬಾಟಲ್ ನೀರನ್ನು ಕೇಳಿದ್ದಾರೆ. ಆದರೆ ಪ್ರಯಾಣಿಕ ಉಪವಾಸವಿರುವ ಬಗ್ಗೆ ಅರಿತ ಗಗನಸಖಿ ರಿಫಾತ್ ಅವರಿಗೆ ಟ್ರೇನಲ್ಲಿ ಇಫ್ತಾರ್ ಆಹಾರವನ್ನು ನೀಡಿ ಮಾನವೀಯತೆ ಮರೆದಿದ್ದಾರೆ.
On my way back to Delhi in @airindiain Alliance from Gorakhpur: Iftar time was nearing so I walked up to cabin crew member Manjula, asked for some water. She gave me a small bottle. I asked, “can I pls have 1 more bottle since I’m fasting?” Manjula replied, “why did you… pic.twitter.com/QaMoAR5CqC
ತಮಗೆ ಇಫ್ತಾರ್ ಆಹಾರ ನೀಡಿದ ಗಗನಸಖಿಯ ಸಹಾಯಕ್ಕೆ ಸಂತೋಷಗೊಂಡ ರಿಫಾತ್ ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಗಗನಸಖಿಯ ಗುಣಕ್ಕೆ ಮನಸೋತಿದ್ದಾರೆ. ನಾನು ದೆಹಲಿಗೆ ವಿಮಾನದಲ್ಲಿ ವಾಪಾಸ್ ತೆರೆಳುತ್ತಿದ್ದೆ. ಈ ವೇಳೆ ಇಫ್ತಾರ್ ನ ಸಮಯವಾಗಿತ್ತು. ಆದರಿಂದ ನಾನು ಗಗನಸಖಿ ಮಂಜುಳ ಅವರ ಬಳಿ ಹೋಗಿ ನೀರು ಕೇಳಿದೆ. ಆಗ ಅವರು ನನಗೆ ಒಂದು ಬಾಟರ್ ನೀರು ಕೊಟ್ಟರು. ಬಳಿಕ ನಾನು ಉಪವಾಸದಲ್ಲಿದ್ದೇನೆ ಇನ್ನೊಂದು ಬಾಟಲ್ ನೀರು ಬೇಕಿತ್ತು ಎಂದೆ. ಆಗ ಗಗನಸಖಿ ನೀವು ನಿಮ್ಮ ಸೀಟ್‍ಗೆ ಹೋಗಿ ತಂದು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದರು. ನಂತರ ನನಗೆ ಟ್ರೇ ತುಂಬಾ ಇಫ್ತಾರ್ ಆಹಾರವನ್ನೂ ನೀಡಿ ಸತ್ಕರಿಸಿದರು ಎಂದು ಬರೆದು ಟ್ವೀಟ್ ಮಾಡಿದ್ದಾರೆ.
..leave your seat?You pls return to your seat.” Minutes later she arrived with two sandwiches and said, “please don’t hesitate to ask for more.” Of course I didn’t need more. They were more than adequate for me. What was the most satisfying was Manjula’s heartwarming gesture. pic.twitter.com/DeXhvMnxwJ
ನೆಟ್ಟಿಗರು ರಿಫಾತ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಧರ್ಮ ಬೇರೆಯಾಗಿದ್ದರು, ಮಾನವೀಯತೆಯಿಂದ ಒಬ್ಬರಿಗೆ ಸಹಾಯ ಮಾಡುವುದು ದೊಡ್ಡ ವಿಷಯ. ಜಾತಿ ಧರ್ಮವೆಂದು ಜಗಳವಾಡುವವರ ಮಧ್ಯೆ ಮನವೀಯತೆ ಎಲ್ಲದಕ್ಕಿಂತ ಮಿಗಿಲಾದದ್ದು ಎಂದು ಸಾರಿರುವ ಗಗನಸಖಿ ಸಹಾಯವನ್ನು ನಿಜಕ್ಕೂ ಮೆಚ್ಚಲೇಬೇಕು. ಈ ಮೂಲಕ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನ ಗಗನಸಖಿ ತೋರಿಸಿದ್ದಾರೆ. ಇದು ನಮ್ಮ ಭಾರತದ ವಿಶೇಷತೆ ಎಂದು ರೀ-ಟ್ವೀಟ್ ಮಾಡಿದ್ದಾರೆ.
Mashallah what an act of Humanity 🤗 In todays Indian World where every party is spreading Hatred People like Manjula realise us that Humanity do exists in the beautiful country like India 🇮🇳
ಬೆಂಗಳೂರು: ಪ್ರೀತಿಸಲ್ಲ ಎಂದು ಹೇಳಿದ್ದಕ್ಕೆ ರೌಡಿ ಶೀಟರ್ ಗಗನ ಸಖಿಯ ಕಿವಿಯನ್ನು ಹರಿದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ರೌಡಿ ಶೀಟರ್ ಅಜಯ್ ಅಲಿಯಾಸ್ ಜಾಕಿ ಯುವತಿಗೆ ಬೆದರಿಕೆ ಹಾಕಿ ಕಿವಿಯನ್ನು ಚಾಕುವಿನಿಂದ ಕಿವಿಯನ್ನು ಕತ್ತರಿಸಿದ್ದಾನೆ. ಗಗನ ಸಖಿ ಮೇಲೆ ಹಲ್ಲೆ ನಡೆಸಿ ಅಜಯ್ ಈಗ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ?
ಯುವತಿ ಇಂಡಿಗೊ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಜಾಕಿ ಪ್ರಪೋಸ್ ಮಾಡಿದ್ದ. ಇದಕ್ಕೆ ಒಪ್ಪದ ಯುವತಿ ಜಾಕಿ ಲವ್ ಪ್ರಪೋಸ್ ರಿಜೆಕ್ಟ್ ಮಾಡಿದ್ದಳು. ನಂತರ ಮನೆಯವರಿಗೆ ತಿಳಿಸಿ ರೌಡಿ ಅಜಯ್‍ಗೆ ಎಚ್ಚರಿಕೆ ಕೊಡಿಸಿದ್ದಳು.
ಇದಕ್ಕೆ ಬಗ್ಗದ ಜಾಕಿ ಯುವತಿಯ ಮನೆಗೆ ತೆರಳಿ ಕಾರು ಹಾಗೂ ಬೈಕ್ ಗ್ಲಾಸ್‍ಗಳನ್ನು ಪುಡಿ ಮಾಡಿದ್ದ. ಈತನ ಕಾಟದಿಂದ ಬೇಸತ್ತ ಗಗನಸಖಿಯ ಮನೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸರು ಜಾಕಿಯನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು.
ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಕ್ಕೆ ಯುವತಿಯ ಮೇಲೆ ಸೇಡು ತೀರಿಸಲು ಜಾಕಿ ಕಾದು ಕುಳಿತ್ತಿದ್ದ. ಮೇ 12ರಂದು ಸಂಜೆ ಯುವತಿ ಕೆಲಸ ಮುಗಿಸಿ ಸಂಜೆ ಮನೆಗೆ ಕ್ಯಾಬ್‍ನಲ್ಲಿ ಬರುತ್ತಿದ್ದ ವೇಳೆ ಹೆಬ್ಬಾಳ ಬಳಿ ಜಾಕಿ ಹಲ್ಲೆ ನಡೆಸಿದ್ದಾನೆ.
ಹೆಬ್ಬಾಳ ಸಿಗ್ನಲ್ ಬಳಿ ಯುವತಿ ಇದ್ದ ಕ್ಯಾಬ್ ನಿಂತಾಗ, ಹಿಂದೆ ಬೇರೊಂದು ಕಾರಿನಲ್ಲಿದ್ದ ಜಾಕಿ ಬಂದು ಕ್ಯಾಬ್ ಹತ್ತಿದ್ದಾನೆ. ಬಳಿಕ ಚಾಕು ತೋರಿಸಿ ಕ್ಯಾಬ್ ಡ್ರೈವರ್ ಗೆ ಕಾರನ್ನು ಚಲಾಯಿಸುವಂತೆ ಹೆದರಿಸಿದ್ದಾನೆ. ಈ ವೇಳೆ ಕ್ಯಾಬ್ ಡ್ರೈವರ್ ಪ್ರತಿರೋಧ ತೋರಿದಾಗ ಡ್ರೈವರ್ ಭುಜಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ನಂತರ ಯುವತಿಯ ಬಳಿ ನನ್ನ ಪ್ರೀತಿಸು, ನನ್ನ ಮೇಲಿನ ಕೇಸನ್ನು ಹಿಂದಕ್ಕೆ ಪಡೆದುಕೋ, ನಿನ್ನಿಂದಾಗಿ ನನ್ನ ಮೇಲೆ ರೌಡಿಶೀಟರ್ ಓಪನ್ ಆಗಿದೆ ಎಂದು ಹೇಳಿದ್ದಾನೆ. ಈ ಮಾತಿಗೆ ಯುವತಿ ಒಪ್ಪದೇ ಇದ್ದಾಗ ಚಾಕುವಿನಿಂದ ಯುವತಿಯ ಕಿವಿಗಳನ್ನು ರೌಡಿ ಕತ್ತರಿಸಿದ್ದಾನೆ. ಗಾಯಗೊಂಡಿರುವ ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ಜಾಕಿಯನ್ನ ಕೂಡಲೇ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಜಾಕಿಯ ಹಿಂದೆ ಬಿದ್ದಿರುವ ಕೋಡಿಗೆಹಳ್ಳಿ ಠಾಣೆ ಪೊಲೀಸರು, ನಾಲ್ಕು ದಿನದಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮನಿಲಾ: ಹಸಿವಿನಿಂದ ಅಳುತ್ತಿದ್ದ ಕಂದಮ್ಮನಿಗೆ ಗಗನಖಿಯೊಬ್ಬರು ಹಾಲುಣಿಸಿ ಮಾತೃಪ್ರೇಮ ಮೆರೆದ ಘಟನೆ ಫಿಲಿಫೈನ್ಸ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮಂಗಳವಾರ 24 ವರ್ಷದ ಪಟ್ರೀಷಾ ಒರ್ಗಾನೋ ಎನ್ನುವ ಗಗನಸಖಿ ಫ್ಲೈಟ್ ಟೇಕ್‍ಆಫ್ ಆದ ನಂತರ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಗುವೊಂದು ಹಸಿವಿನಿಂದ ಅಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ತಾಯಿಯ ಬಳಿ ಹೋಗಿ, ಮಗುವಿಗೆ ಹಾಲುಣಿಸಲೇ ಎಂದು ಕೇಳಿಕೊಂಡು, ಹಸಿವಿನಿಂದ ಬಳಲಿದ್ದ ಮಗುವಿಗೆ ಹಾಲುಣಿಸಿ ತಾಯಿ ವಾತ್ಸಲ್ಯವನ್ನು ಮರೆದಿದ್ದಾರೆ.
ಪ್ರಯಾಣಿಕರೊರ್ವರು ತಮ್ಮ ಪುಟ್ಟ ಕಂದಮ್ಮನ ಜೊತೆ ಸೋಮವಾರ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮನೆಯಿಂದ ತಂದಿದ್ದ ಫಾರ್ಮುಲಾ ಹಾಲು ನಿಲ್ದಾಣದಲ್ಲಿಯೇ ಖಾಲಿಯಾಗಿತ್ತು. ಮಂಗಳವಾರ ಬೆಳಗ್ಗೆ ವಿಮಾನ ಏರಿದಾಗ, ಮಗು ಹಸಿವಿನಿಂದ ಅಳತೊಡಗಿತ್ತು. ಆದರೆ ಮಗುವಿನ ಹಾಲುಣಿಸಲು ತಾಯಿಯ ಬಳಿ ಹಾಲಿರಲಿಲ್ಲ. ಇದನ್ನೂ ನೋಡಿದ ಪಟ್ರೀಷಾ ಕೂಡಲೇ ಮಗುವನ್ನು ಎತ್ತಿಕೊಂಡು ಎದೆಹಾಲು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ವಿಮಾನದಲ್ಲಿ ಮಗು ಅಳುವುದನ್ನ ಕೇಳಿಸಿಕೊಂಡು, ಆ ತಾಯಿಯ ಬಳಿ ಹೋದೆ. ಹಸಿದ ಮಗುವಿಗೆ ಹಾಲುಣಿಸಿಲು ಆಗದ ತಾಯಿಯ ವೇದನೆ ನನಗೆ ಅರಿವಾಗಿತ್ತು. ನಮ್ಮ ವಿಮಾನದಲ್ಲಿ ಫಾರ್ಮುಲಾ ಹಾಲು ಇರಲಿಲ್ಲ. ಹೀಗಾಗಿ ಮಗುವಿಗೆ ನಾನೇ ಹಾಲುಣಿಸಲು ಸಿದ್ಧಳಾದೆ. ಹಾಲು ಕುಡಿದ ಮಗು ತಣ್ಣನೆ ಮಲಗಿದನ್ನ ನೋಡಿ, ನನಗೆ ತುಂಬಾ ಸಂತಸವಾಯಿತೆಂದು ಹರ್ಷ ವ್ಯಕ್ತಪಡಿಸಿದ್ದಾರೆ.
Air hostess Patrisha Organo with her Own Daughter Jade
ಮಗುವಿನ ಹಸಿವನ್ನ ನೀಗಿಸಿದ ಗಗನಸಖಿಗೆ, ತಾಯಿ ನಿಲ್ದಾಣವನ್ನು ತಲುಪಿದ್ದಂತೆ ಹೃತ್ಫೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೇ ಫಿಲಿಫೈನ್ಸ್ ಏರ್‍ಲೈನ್ಸ್ ಗಗನಸಖಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅವರಿಗೆ ಪ್ರಮೋಷನ್ ನೀಡಿ ವೇತನವನ್ನೂ ಹೆಚ್ಚಿಸಿದೆ.