Tag: air hostess

  • Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ನಗುಮೊಗದ ಗಗನಸಖಿ ಮನೀಷಾ ಥಾಪಾ (27) ದುರಂತ ಅಂತ್ಯ ಕಂಡಿದ್ದಾರೆ.

    ಮನೀಷಾ ಥಾಪಾ (Manisha Thapa), ನೇಪಾಳ ಮೂಲದವರಾದರೂ, ಹುಟ್ಟಿ ಬೆಳೆದಿದ್ದೆಲ್ಲಾ ಪಾಟ್ನಾದಲ್ಲಿ. ಮೊದಲು ಇಂಡಿಗೋದಲ್ಲಿ ಗ್ರೌಂಡ್ ಸ್ಟಾಫ್ ಆಗಿ ವೃತ್ತಿಜೀವನ ಆರಂಭಿಸಿದ ಅವರು ಬಳಿಕ ಆಕಾಶ್ ಏರ್, ನಂತರ ಏರ್ ಇಂಡಿಯಾ ಸೇರಿದಲ್ಲಿ ಗಗನಸಖಿಯಾಗಿದ್ದರು. ಏರ್ ಇಂಡಿಯಾ ಸೇರಿದ ಬಳಿಕ ಹೆಚ್ಚಾಗಿ ಲಂಡನ್, ಆಸ್ಟ್ರೇಲಿಯಾ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಏರ್ ಇಂಡಿಯಾ ಗಗನಸಖಿಯಾಗಿದ್ದ (Air Hostess) ಮನೀಷಾ ಸದಾ ಹಸನ್ಮುಖಿಯಾಗಿದ್ದರು. ಮನೀಷಾ ಕೋಪ ಮಾಡ್ಕೊಂಡಿದ್ದನ್ನು ನೋಡೇ ಇಲ್ಲ. ಎಲ್ಲದಕ್ಕೂ ನಗುವಿನ ಮೂಲಕವೇ ಉತ್ತರಿಸುತ್ತಿದ್ದಳು. ಅಲ್ಲದೇ ಕಲಿಕೆಯಲ್ಲಿಯೂ ಸದಾ ಮುಂದಿದ್ದರು ಎಂದು ಅವರ ಸ್ನೇಹಿತರು ಆಕೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಇದೀಗ ಮನೀಷಾ ಸಾವಿನ ವಿಚಾರ ಕೇಳಿ, ಆಕೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ವೈದ್ಯರ ಆರೈಕೆಯಲ್ಲಿದ್ದಾರೆ. ಸದಾ ಆಗಸದಲ್ಲಿ ಹಾರಬೇಕೆಂದು ಕನಸುಕಂಡಿದ್ದ 10 ಗಗನಸಖಿರು ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿರುವುದು ಹೃದಯವಿದ್ರಾಕ ಸಂಗತಿಯಾಗಿದೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಏನಿದು ಘಟನೆ?
    ಅಹಮದಾಬಾದ್ (Ahmedabad) ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.

  • Ahmedabad Plane Crash- ಆಕಾಶದಲ್ಲಿ ಹಾರಾಡುವ ಕನಸು ಕಂಡಿದ್ದ ಗಗನಸಖಿಯ ದುರಂತ ಅಂತ್ಯ

    Ahmedabad Plane Crash- ಆಕಾಶದಲ್ಲಿ ಹಾರಾಡುವ ಕನಸು ಕಂಡಿದ್ದ ಗಗನಸಖಿಯ ದುರಂತ ಅಂತ್ಯ

    ಗಾಂಧೀನಗರ: ಆಕಾಶದಲ್ಲೇ ಹಾರಾಡುವ ಕನಸೊತ್ತು ಗಗನಸಖಿಯಾಗಿದ್ದ ಯುವತಿಯೊಬ್ಬಳು ಅಹಮದಾಬಾದ್ (Ahmedabad) ಏರ್ ಇಂಡಿಯಾ (Air India) ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

    ಮೃತ ಯುವತಿಯನ್ನು ಮಹಾರಾಷ್ಟ್ರದ (Maharashtra) ಡೊಂಬಿವ್ಲಿಯ ಮೂಲದ ರೋಷನಿ ಸೊಂಘರೆ (28) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬೋಯಿಂಗ್‌ ನಿರ್ಮಿತ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ಕಳೆದು ಎರಡು ವರ್ಷಗಳಿಂದ ರೋಷನಿ ತಂದೆ, ತಾಯಿ ಹಾಗೂ ಸಹೋದರನೊಂದಿಗೆ ಮುಂಬೈನ ಡೊಂಬಿವ್ಲಿಯಲ್ಲಿ ವಾಸವಾಗಿದ್ದರು. ಮುಂಬೈನಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಕುಟುಂಬದಲ್ಲಿದ್ದ ಆರ್ಥಿಕ ಸಮಸ್ಯೆಗಳನ್ನು ಎದುರಿಸಿ, ಗಗನಸಖಿಯಾಗುವ ಕನಸನ್ನು ನನಸಾಗಿಸಿಕೊಂಡಿದ್ದರು. ತಮ್ಮ ಕರ್ತವ್ಯಕ್ಕಾಗಿ ಅಹಮದಾಬಾದ್‌ಗೆ ತೆರಳಲು ಒಂದು ದಿನ ಮುಂಚೆಯೇ ಮನೆಯಿಂದ ಹೊರಟಿದ್ದರು. ಆಕಾಶದಲ್ಲೇ ಹಾರಾಡುವ ಕನಸಿನೊಂದಿಗೆ ರೋಷನಿ ಗುರುವಾರ (ಜೂ.12) ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಇಂಡಿಯಾ ಎಐ171 ವಿಮಾನ ಹತ್ತಿದ್ದರು.

    ದುರಂತವೆಂದರೆ ಆಕಾಶದಲ್ಲಿ ಹಾರಾಡುವ ಕನಸು ಆಕಾಶದಲ್ಲೇ ನುಚ್ಚನೂರಾಗಿ ಹೋಯಿತು. ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ 241 ಜನರಲ್ಲಿ ಗಗನಸಖಿ ರೋಷನಿ ಕೂಡ ಸಾವನ್ನಪ್ಪಿದ್ದರು.

    ಏನಿದು ಘಟನೆ?
    ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲೆಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ.ಇದನ್ನೂ ಓದಿ: ವಿಮಾನ ದುರಂತ ಬೆನ್ನಲ್ಲೇ ಥೈಲ್ಯಾಂಡಲ್ಲಿ ಏರ್‌ ಇಂಡಿಯಾ ತುರ್ತು ಭೂಸ್ಪರ್ಶ

  • Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!

    Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!

    – ಮಗಳ ಫೋನ್‌ ಕಾಲ್‌ಗೆ ಕಾಯ್ತಿದ್ದ ಅಪ್ಪನಿಗೆ ಬಂತು ಸಾವಿನ ಸುದ್ದಿಯ ಕರೆ

    ಅಹಮದಾಬಾದ್‌: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) ಮೃತಪಟ್ಟವರ ಹಿಂದೆ ಕಣ್ಣೀರು ತರಿಸುವ ಕಥೆಗಳಿದ್ದು, ಒಂದೊಂದಾಗಿ ಬೆಳಕಿಗೆ ಬರ್ತಿವೆ. ಅದೇ ರೀತಿ ಗುರುವಾರ ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.

    ಹೌದು. ಮಹಾರಾಷ್ಟ್ರ ರಾಯಗಢ ಜಿಲ್ಲೆಯ ಪನ್ವೆಲ್‌ ಮೂಲದ ಏರ್ ಇಂಡಿಯಾ ಗಗನಸಖಿ (Air Hostess) ಮೈಥಿಲಿ ಪಾಟೀಲ್ 24 ವರ್ಷಕ್ಕೆ ದುರಂತ ಅಂತ್ಯ ಕಂಡಿದ್ದಾರೆ. ನಿನ್ನೆ ಬೆಳಗ್ಗೆ 11:30ರ ಹೊತ್ತಿಗೆ ಮೈಥಿಲಿ ಅಪ್ಪನೊಂದಿಗೆ ಕೊನೆಯದ್ದಾಗಿ ಮಾತನಾಡಿದ್ದಳು. ಲಂಡನ್‌ಗೆ ತಲುಪಿದ ಕೂಡಲೇ ಕರೆ ಮಾಡುವುದಾಗಿ ತಿಳಿಸಿದ್ದಳು. ಆದರೆ ನಡೆದಿದ್ದೇ ಬೇರೆ… ಅಹಮದಾಬಾದ್‌ ಏರ್‌ಪೋರ್ಟ್‌ನಿಂದ ಟೇಕಾಫ್‌ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಇದೇ ವಿಮಾನದಲ್ಲಿ ಗಗನ ಸಖಿಯಾಗಿದ್ದ ಮೈಥಿಲಿ ಬದುಕಿನ ದುರಂತ ಅಂತ್ಯ ಕಂಡರು. ಇದೀಗ ಮಗಳ ಕರೆಗಾಗಿ ಕಾಯುತ್ತಿದ್ದ ತಂದೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

    ಅಷ್ಟಕ್ಕೂ ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಆಗಿದ್ದೇನು?
    ಜೂನ್ 12ರಂದು (ಗುರುವಾರ) ಅಹಮಾದಾಬಾದ್‌ನ (Ahmedabad) ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಯಿತು. ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.

    ಇದರಿಂದ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ ಎಂದು ಏರ್ ಇಂಡಿಯಾ ಖಚಿತಪಡಿಸಿದೆ.

    ಮೇ ಡೇ – ಕೊನೇ ಸಂದೇಶ
    ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ `ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು.

  • ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ಲಕ್ನೋ: ಗುರುಗ್ರಾಮ್‌ನ (Gurugram) ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗಲೇ ಗಗನಸಖಿ (Air Hostess) ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಈ ಸಂಬಂಧ ಖುದ್ದು ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದೇ ತಿಂಗಳ ಏಪ್ರಿಲ್‌ 13ರಂದು 43 ವರ್ಷದ ಗಗನಸಖಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    ಏನಿದು ಪ್ರಕರಣ?
    ಮಹಿಳೆ ದೂರು ನೀಡಿದ ಪ್ರಕಾರ, ಆಕೆ ಸಂಬಂಧಪಟ್ಟ ಕಂಪನಿಯ ಪರವಾಗಿ ತರಬೇತಿಗಾಗಿ ಗುರುಗ್ರಾಮ್‌ಗೆ ಬಂದಿದ್ದಳು, ಈ ವೇಳೆ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಳು. ಈ ಸಂದರ್ಭದಲ್ಲಿ ಆಕೆ ನೀರಿನಲ್ಲಿ ಮುಳುಗಿ ಆರೋಗ್ಯ ತೀರಾ ಹದಗೆಟ್ಟಿತ್ತು. ಬಳಿಕ ಆಕೆಯನ್ನ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿತ್ತು. ಇದೇ ತಿಂಗಳ ಏಪ್ರಿಲ್ 5 ರಂದು ಪತಿ ಆಕೆಯನ್ನ ಹೆಚ್ಚುವರಿ ಚಿಕಿತ್ಸೆಗಾಗಿ ಗುರುಗ್ರಾಮ್‌ನ ಬೇರೋಂದು ಆಸ್ಪತ್ರೆಗೆ ದಾಖಲಿಸಿದರು. ಆಕೆಯನ್ನು ಏಪ್ರಿಲ್ 13 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

    ಆದ್ರೆ ಏಪ್ರಿಲ್‌ 6ರಂದು ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆಯ ಕೆಲವು ಸಿಬ್ಬಂದಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವೆಂಟಿಲೇಟರ್‌ನಲ್ಲಿದ್ದ ಕಾರಣ ನನಗೆ ಆಗ ಮಾತನಾಡಲೂ ಸಾಧ್ಯವಾಗಲಿಲ್ಲ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ. ದೌರ್ಜನ್ಯ ನಡೆಯುವಾಗ ನನ್ನ ಅಕ್ಕಪಕ್ಕ ಇಬ್ಬರು ನರ್ಸ್‌ಗಳೂ ಇದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಗುರುಗ್ರಾಮ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತಂಡವು ಆಸ್ಪತ್ರೆಗೆ ಧಾವಿಸಿ ಡ್ಯೂಟಿ ಚಾರ್ಟ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂಉದ ಗುರುಗ್ರಾಮ್ ಪೊಲೀಸ್ ಇನ್ಸ್‌ಪೆಕ್ಟರ್‌ ಸಂದೀಪ್ ಕುಮಾರ್ ತಿಳಿಸಿದ್ದಾರೆ.

  • ಆಪರೇಷನ್ ಅಜಯ್ ತಂಡದಲ್ಲಿ ಕಾರವಾರದ ಮಹಿಮಾ

    ಆಪರೇಷನ್ ಅಜಯ್ ತಂಡದಲ್ಲಿ ಕಾರವಾರದ ಮಹಿಮಾ

    ಕಾರವಾರ: ಇಸ್ರೇಲ್‌ನಿಂದ (Israel) ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ‘ಆಪರೇಷನ್ ಅಜಯ್’ (Operation Ajay) ತಂಡದಲ್ಲಿ ಕಾರವಾರ (Karwar) ತಾಲೂಕಿನ ಬಿಣಗಾದ ಮಹಿಮಾ ಶೆಟ್ಟಿಯವರು (Mahima Shetty) ಭಾಗವಹಿಸಿ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಶ್ರಮವಹಿಸುವ ಮೂಲಕ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.

    ಸದ್ಯ ಗೋವಾದ ಪರ್ವೊರಿಮ್‌ನಲ್ಲಿ ನೆಲೆಸಿರುವ ದುರ್ಗಪ್ಪ ಶೆಟ್ಟಿ ಮತ್ತು ನಯನಾ ದಂಪತಿಯ ಪುತ್ರಿ ಮಹಿಮಾ ಶೆಟ್ಟಿ ಆಪರೇಷನ್ ಅಜಯ್ ತಂಡದಲ್ಲಿ ಭಾಗಿಯಾಗಿದ್ದರು. ಏರ್ ಇಂಡಿಯಾದಲ್ಲಿ (Air India) ಗಗನಸಖಿ (Air Hostess) ಆಗಿರುವ ಅವರು ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆರು ಮಂದಿಯ ತಂಡದಲ್ಲಿ ಇವರು ಸಹ ಭಾಗಿಯಾಗಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ – ತುಟ್ಟಿ ಭತ್ಯೆ ಶೇ. 3.75 ಹೆಚ್ಚಳ

    ಮಹಿಮಾರವರು ಇಸ್ರೇಲ್‌ಗೆ ತೆರಳಿದ್ದಾಗ ಕ್ಷಿಪಣಿ ದಾಳಿ ನಡೆಯುತ್ತಿದ್ದುದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೂ ಯಾವುದೇ ಹಿಂಜರಿಕೆಯಿಲ್ಲದೇ 236 ಮಂದಿ ಭಾರತೀಯರನ್ನು ಕರೆತಂದಿದ್ದಾಗಿ ಮಹಿಮಾರವರು ಮಾಹಿತಿ ನೀಡಿದ್ದು, ಈ ಕೆಲಸಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರ್ಫ್ಯೂಮ್‌ನಲ್ಲಿ ‘ಎಣ್ಣೆ’ ಘಾಟು; ಭಾರತೀಯ ವಿಮಾನಗಳ ಪೈಲಟ್‌, ಗಗನಸಖಿಯರಿಗೆ ಪರ್ಫ್ಯೂಮ್ ಬ್ಯಾನ್?

    ಪರ್ಫ್ಯೂಮ್‌ನಲ್ಲಿ ‘ಎಣ್ಣೆ’ ಘಾಟು; ಭಾರತೀಯ ವಿಮಾನಗಳ ಪೈಲಟ್‌, ಗಗನಸಖಿಯರಿಗೆ ಪರ್ಫ್ಯೂಮ್ ಬ್ಯಾನ್?

    ಫ್ಯಾಷನ್ ಯುಗದಲ್ಲಿ ಪರ್ಫ್ಯೂಮ್ (ಸುಗಂಧ ದ್ರವ್ಯ) ಜನ ಜೀವನದ ಭಾಗವಾಗಿ ಹೋಗಿದೆ. ದಿಲ್ಲಿಯಿಂದ ಹಳ್ಳಿವರೆಗೂ ಪರ್ಫ್ಯೂಮ್ (Perfume Ban) ಹಾಕಿಕೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಪರ್ಫ್ಯೂಮ್ ಎಂದರೆ ಎಲ್ಲರಿಗೂ ಗೊತ್ತು. ಆದರೆ ಅದನ್ನು ತಯಾರಿಸಲು ಯಾವ್ಯಾವ ಪದಾರ್ಥಗಳನ್ನು ಉಪಯೋಗಿಸುತ್ತಾರೆ ಎಂಬುದು ಎಷ್ಟೋ ಮಂದಿಗೆ ತಿಳಿದಿರುವುದೇ ಇಲ್ಲ. ಪರ್ಫ್ಯೂಮ್ ತಯಾರಿಸಲು ಬಳಸುವ ಪದಾರ್ಥಗಳ ಬಗ್ಗೆ ಹೇಳಿದರೆ ಕೆಲವರಿಗೆ ಶಾಕ್ ಕೂಡ ಆಗಬಹುದು. ಶಾಕ್ ಆಗುವುದಕ್ಕೆ ಪೂರಕ ಎನ್ನುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಸ್ತಾಪವೊಂದನ್ನು ಪ್ರಕಟಿಸಿದೆ.

    ಎಷ್ಟೋ ಜನಕ್ಕೆ ಆಲ್ಕೋಹಾಲ್ ಎಂದರೆ ಸಾಕು ದೂರ ಓಡುತ್ತಾರೆ. ಅಂತಹ ಆಲ್ಕೋಹಾಲ್‌ನ್ನು ಪರ್ಫ್ಯೂಮ್ ತಯಾರಿಸಲು ಬಳಸುತ್ತಾರೆ ಎಂದರೆ ಶಾಕ್ ಆಗಿಬಿಡುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಅಂತಹ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್‌ಗಳು, ವಿಮಾನಗಳ ಸಿಬ್ಬಂದಿ ಬಳಸುವಂತಿಲ್ಲ ಎಂದು ನಿಯಮ ರೂಪಿಸಲು ಡಿಜಿಸಿಎ ಮುಂದಾಗಿದೆ. ಈಗಾಗಲೇ ಪೈಲಟ್‌ಗಳು (Pilots), ವಿಮಾನಗಳಿಗೆ ಸಿಬ್ಬಂದಿ ಪರ್ಫ್ಯೂಮ್ ಬ್ಯಾನ್ ಮಾಡಲು ಪ್ರಸ್ತಾಪ ಇಟ್ಟಿದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    ಪೈಲಟ್‌ಗಳು, ವಿಮಾನ ಸಿಬ್ಬಂದಿಗೆ ಪರ್ಫ್ಯೂಮ್ ಬ್ಯಾನ್?
    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪೈಲಟ್‌ಗಳಿಗೆ ಸುಗಂಧ ದ್ರವ್ಯಗಳ ಬಳಕೆಯನ್ನು ನಿಷೇಧಿಸುವ ಹೊಸ ಕಾನೂನನ್ನು ತರಲು ಯೋಜಿಸಿದೆ. ಕಾನೂನು ವಾಯುಯಾನ ನಿಯಂತ್ರಕರ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳಿಗೆ ಇದು ಸಂಬಂಧಿಸಿದ್ದಾಗಿದೆ. ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದಂತೆ ವಿಮಾನ ನಿಯಮ, 1937 ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ನಾಗರಿಕ ವಿಮಾನಯಾನ ಅಗತ್ಯತೆಗಳನ್ನು (ಸಿಎಆರ್) ತಿದ್ದುಪಡಿ ಮಾಡುವ ಕುರಿತು ಮಧ್ಯಸ್ಥಗಾರರು ಸಲಹೆ ನೀಡುವಂತೆ ವಾಯುಯಾನ ನಿಯಂತ್ರಕರು ಕರೆ ನೀಡಿದ್ದಾರೆ.

    ಬ್ಯಾನ್‌ಗೆ ಡಿಜಿಸಿಎ ಯೋಜಿಸಿದ್ದು ಯಾಕೆ?
    ಭಾರತದ ವಾಯುಯಾನ ನಿಯಂತ್ರಕ ಇತ್ತೀಚೆಗೆ ಮದ್ಯ ಸೇವನೆಯ ಬಗ್ಗೆ ತನ್ನ ನಿಯಮಗಳನ್ನು ನವೀಕರಿಸಲು ಪ್ರಸ್ತಾಪಿಸಿದೆ. ಡಿಜಿಸಿಎ ಈಗಾಗಲೇ ಮೌತ್‌ವಾಶ್‌ನಂತಹ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ನಿಷೇಧಿಸಿದೆ. ಅದು ಉಸಿರಾಟದ ವಿಶ್ಲೇಷಣೆಯ ಪರೀಕ್ಷೆ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ವರದಿಗಳಾಗಿವೆ.

    ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇತ್ತೀಚೆಗೆ ತನ್ನ ವೈದ್ಯಕೀಯ ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ ಪ್ರಸ್ತಾಪಿಸಿದೆ. ಇದು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಆಲ್ಕೋಹಾಲ್ ಸೇವನೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಸಿಬ್ಬಂದಿ ಅಥವಾ ಪೈಲಟ್‌ಗಳು ಆಲ್ಕೋಹಾಲ್ ಹೊಂದಿರುವ ಯಾವುದೇ ಔಷಧ, ಸುಗಂಧ ದ್ರವ್ಯ, ಡೆಂಟಲ್ ಉತ್ಪನ್ನಗಳನ್ನು ಬಳಸಬಾರದು ಎಂದು ಡಿಜಿಸಿಎ ಪ್ರಸ್ತಾವನೆಯಲ್ಲಿ ತಿಳಿಸಿದೆ. ಒಂದೊಮ್ಮೆ ಬಳಸಿದಲ್ಲಿ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಅಂತ ಬರಬಹುದು. ಮತ್ತು ಈ ವಸ್ತುಗಳ ಬಳಸುವ ಉದ್ಯೋಗಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಹೇಳಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ಯಾವುದೇ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿ ಯಾವುದೇ ಔಷಧ ಸೇವಿಸಬಾರದು, ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲ್‌ಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಒಂದು ವೇಳೆ ಬಳಸಿದ್ದಲ್ಲಿ, ಟೆಸ್ಟ್ ವೇಳೆ ನೀವು ಕುಡಿದಿದ್ದೀರಿ ಎಂದು ಸಿಗ್ನಲ್ ತಪ್ಪಾಗಿ ಬರಬಹುದು. ಅಂತಹ ಪೈಲಟ್, ಸಿಬ್ಬಂದಿ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಯಾವುದೇ ಸಿಬ್ಬಂದಿ ಸದಸ್ಯರು ಫ್ಲೈಯಿಂಗ್ ನಿಯೋಜನೆಯನ್ನು ಕೈಗೊಳ್ಳುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪ್ರಸ್ತಾವಿತ ಶಾಸನವು ಹೇಳಿದೆ.

    ಅಸ್ಪಷ್ಟ ಪ್ರಸ್ತಾವನೆ
    ಪರ್ಫ್ಯೂಮ್ ನಿಷೇಧಕ್ಕೆ ಸಂಬಂಧಿಸಿದ ಡಿಜಿಸಿಎ ಪ್ರಸ್ತಾವನೆಯು ಅಸ್ಪಷ್ಟವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಅಂಶವಿರುವ ಸುಗಂಧ ದ್ರವ್ಯವನ್ನು ಪೈಲಟ್ ಅಥವಾ ಸಿಬ್ಬಂದಿ ಬಳಸಿದರೆ, ಆಗಲೂ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಯಲ್ಲಿ ತಪ್ಪಾಗಿ ಪಾಸಿಟಿವ್ ಅಂತ ಸಿಗ್ನಲ್ ಬರುತ್ತದೆಯೇ ಎಂಬುದಕ್ಕೆ ಸ್ಪಷ್ಟನೆ ಇಲ್ಲ. ಜೊತೆಗೆ ಡಿಜಿಸಿಎ ನಿಯಮಗಳು ಭಾರತಕ್ಕೆ ಬರುವ ವಿದೇಶಿ ವಿಮಾನಗಳ ಪೈಲಟ್‌ಗಳು, ಗಗನಸಖಿಯರು, ಸಿಬ್ಬಂದಿಗೂ ಅನ್ವಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: PublicTV Explainer: ಲ್ಯಾಬ್‌ನಲ್ಲಿ DNA ಇಟ್ರೆ ಸಾಕು ನಿಮ್ಗೆ ಸಿಗುತ್ತೆ ಚಿಕನ್‌, ಮಟನ್‌, ಬೀಫ್‌, ಫೋರ್ಕ್‌ ಮಾಂಸ!

    ಪೈಲಟ್‌ಗಳಿಗೆ ಭಾರತದಲ್ಲಿರುವ ಕಾನೂನುಗಳೇನು?
    ವಿಮಾನಯಾನ ಸಿಬ್ಬಂದಿಗೆ ಭಾರತವು ತುಂಬಾ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಯಮಗಳನ್ನು ಅಳವಡಿಸಿದೆ. ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವಿಮಾನ ಸಿಬ್ಬಂದಿ ಸದಸ್ಯರು ಮತ್ತು ಕ್ಯಾಬಿನ್ ಸಿಬ್ಬಂದಿ, ಭಾರತದಿಂದ ಕಾರ್ಯಾಚರಣೆ ಆರಂಭಿಸುವ ವಿಮಾನಗಳು ಮೊದಲ ನಿರ್ಗಮನ ವಿಮಾನ ನಿಲ್ದಾಣದಲ್ಲಿ ಉಸಿರಾಟ ವಿಶ್ಲೇಷಣೆಯ ಪರೀಕ್ಷೆಗೆ ಒಳಪಡುತ್ತಾರೆ.

    ಆಲ್ಕೋಹಾಲ್ ಸೇವಿಸಿದ್ರೆ ಪರವಾನಗಿ ಅಮಾನತು
    ಆಲ್ಕೋಹಾಲ್ ಸೇವನೆಯ ಸಣ್ಣ ಕುರುಹು ಕೂಡ ಪಾಸಿಟಿವ್ ಫಲಿತಾಂಶವೆಂದು ಪರಿಗಣಿಸಲಾಗುತ್ತದೆ. ಆಗ ತಕ್ಷಣ ಮೂರು ತಿಂಗಳವರೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ. ಎಲ್ಲಾ ಆಪರೇಟರ್‌ಗಳು ಉಸಿರಾಟದ ವಿಶ್ಲೇಷಕದ ಪರೀಕ್ಷೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತವೆ. ರೆಕಾರ್ಡಿಂಗ್‌ಗಳನ್ನು ಆರು ತಿಂಗಳವರೆಗೆ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನಿಯಮಗಳು ಹೇಳುತ್ತವೆ. ಯಾವುದೇ ಸಿಬ್ಬಂದಿ ಆಲ್ಕೋಹಾಲ್ ಸೇವಿಸುವುದೇ ಆದರೆ, ಸೇವನೆಯಾದ 12 ಗಂಟೆಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಬಹುದು ಎಂಬ ನಿಯಮವಿದೆ.

    ಕಳೆದ ವರ್ಷ ಎಷ್ಟು ಲೈಸನ್ಸ್ ಅಮಾನತಾಗಿತ್ತು?
    2022 ರಲ್ಲಿ 41 ಪೈಲಟ್‌ಗಳು ಮತ್ತು 116 ಕ್ಯಾಬಿನ್ ಸಿಬ್ಬಂದಿ ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಅವರ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. 2021 ರಲ್ಲಿ 19 ಪೈಲಟ್‌ಗಳು ಮದ್ಯಪಾನ ಪರೀಕ್ಷೆಯಲ್ಲಿ ಪಾಸಿಟಿವ್‌ಗೆ ಒಳಗಾಗಿದ್ದರು. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ಮೊದಲ ಬಾರಿಗೆ ಆಲ್ಕೋಹಾಲ್ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಪೈಲಟ್‌ಗಳಿಗೆ ಮೂರು ತಿಂಗಳವರೆಗೆ ಕರ್ತವ್ಯಕ್ಕೆ ಹಾಜರಾಗುವುದನ್ನು ನಿರ್ಬಂಧಿಸಲಾಗುತ್ತದೆ. ಆದರೆ ಎರಡನೇ ಬಾರಿ ಅಪರಾಧ ಮಾಡಿದರೆ ಮೂರು ವರ್ಷಗಳ ವರೆಗೆ ನಿರ್ಬಂಧಿಸಲಾಗುತ್ತದೆ. ಪೈಲಟ್ ಮೂರನೇ ಬಾರಿ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಪರವಾನಗಿಯನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ.

    ‘ಎಣ್ಣೆ’ ಮತ್ತು ತಂದ ಕುತ್ತು
    ವಿಮಾನಯಾನ ಉದ್ಯಮದಲ್ಲಿ ಪೈಲಟ್‌ಗಳ ಕುಡಿತದ ಪ್ರಕರಣಗಳು ಆಗಾಗ ವರದಿಯಾಗುವುದುಂಟು. 2018 ರಲ್ಲಿ ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲಿ ನಡೆಸಿದ ಉಸಿರಾಟದ ಪರೀಕ್ಷೆಯಲ್ಲಿ ಜಪಾನ್ ಏರ್‌ಲೈನ್ಸ್‌ನ ಪೈಲಟ್ ಕಟ್ಸುತೋಶಿ ಜಿತ್ಸುಕಾವಾ ಅವರ ರಕ್ತದ ಆಲ್ಕೋಹಾಲ್ ಮಟ್ಟವು ಕಾನೂನು ಮಿತಿಗಿಂತ ಒಂಬತ್ತು ಪಟ್ಟು ಹೆಚ್ಚಾಗಿತ್ತು. ಈ ಕಾರಣಕ್ಕೆ ಅವರಿಗೆ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೇ ಅಮೆರಿಕದಲ್ಲಿ ಇದೇ ರೀತಿ ಗೇಬ್ರಿಯಲ್ ಲೈಲ್ ಸ್ಕ್ರೋಡರ್ ಎಂಬ ಪೈಲಟ್‌ರನ್ನು ಮದ್ಯದ ಅಮಲಿನಲ್ಲಿದ್ದಾರೆ ಎಂದು ಶಂಕಿಸಿ ಟೇಕಾಫ್‌ಗೂ ಮುನ್ನ ವಿಮಾನದಿಂದ ಕೆಳಗಿಳಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈ ಫ್ಲಾಟ್‌ನಲ್ಲಿ ಗಗನಸಖಿ ಮೃತದೇಹ ಪತ್ತೆ – ಸ್ವೀಪರ್‌ ಬಂಧನ

    ಮುಂಬೈ ಫ್ಲಾಟ್‌ನಲ್ಲಿ ಗಗನಸಖಿ ಮೃತದೇಹ ಪತ್ತೆ – ಸ್ವೀಪರ್‌ ಬಂಧನ

    ಮುಂಬೈ: ತರಬೇತಿ ನಿರತ ಗಗನಸಖಿಯೊಬ್ಬರು (Air Hostess) ನಿನ್ನೆ ಸಂಜೆ ಮುಂಬೈ (Mumbai) ಉಪನಗರದಲ್ಲಿರುವ ಅವರ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಛತ್ತೀಸ್‌ಗಢದಿಂದ ಬಂದಿದ್ದ ರೂಪಲ್ ಓಗ್ರೆ, ಏರ್ ಇಂಡಿಯಾದಿಂದ ಆಯ್ಕೆಯಾಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಇದನ್ನೂ ಓದಿ: ಮದುವೆಯ ಆಸೆ ಈಡೇರಿಸಲಿಲ್ಲವೆಂದು ಶಿವಲಿಂಗವನ್ನೇ ಕದ್ದ ಯುವಕ!

    ಗಗನಸಖಿ ಸಾವಿಗೆ ಸಂಬಂಧಿಸಿದಂತೆ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿ ವಿಕ್ರಮ್ ಅತ್ವಾಲ್‌ನನ್ನು ಬಂಧಿಸಲಾಗಿದೆ. ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿಗಳ ಪತ್ತೆಗೆ 12 ತಂಡಗಳನ್ನು ರಚಿಸಲಾಗಿದೆ. ಸ್ವೀಪರ್‌ ವಿಕ್ರಮ್ ಅತ್ವಾಲ್ ಪತ್ನಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗಗನಸಖಿ ರೂಪಾಲ್‌ಗೆ ಆಕೆಯ ಮನೆಯವರು ಫೋನ್‌ ಕರೆ ಮಾಡಿದ್ದರು. ಆದರೆ ಆಕೆ ಕಾಲ್‌ ಪಿಕ್‌ ಮಾಡಲಿಲ್ಲ. ಅನುಮಾನಗೊಂಡು ಮುಂಬೈನಲ್ಲಿದ್ದ ಆಕೆಯ ಸ್ನೇಹಿತರಿಗೆ ಪರೀಕ್ಷಿಸುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್

    ಆಕೆಯ ಸ್ನೇಹಿತರು ಅಲ್ಲಿಗೆ ಹೋಗಿ ನೋಡಿದಾಗ ಫ್ಲಾಟ್ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಫ್ಲಾಟ್‌ಗೆ ಬಂದು ನೋಡಿದ್ದಾರೆ. ಗಗನಸಖಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆ ಮೃತಪಟ್ಟಿದ್ದಾಳೆ ಎಂದು ನಂತರ ವೈದ್ಯರು ಸ್ಪಷ್ಟಪಡಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ – ಗಗನಸಖಿ ನಿರ್ಧಾರ ಸರಿಯೇ?

    ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ – ಗಗನಸಖಿ ನಿರ್ಧಾರ ಸರಿಯೇ?

    ಮುಂಬೈ: ಟೀಂ ಇಂಡಿಯಾದ (Team India) ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಕೋಟ್ಯಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅಭಿಮಾನಿಗಳು ಒಮ್ಮೆಯಾದ್ರೂ ಮಹಿಯನ್ನ ಹತ್ತಿರದಿಂದ ನೋಡ್ಬೇಕು ಅಂತಾ ಆಸೆ ಪಡ್ತಾರೆ. ಅಂತಹ ಒಂದು ಕ್ಷಣ ಸಿಕ್ಕರೂ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲಾರದೇ ಇರೋದಿಲ್ಲ. 2023 IPL ಟೂರ್ನಿಯಲ್ಲಿ ಮಹಿ ನೋಡಲೆಂದೇ ಸಾವಿರಾರು ಕಿಲೋ ಮೀಟರ್‌ಗಳಿಂದ ಅಭಿಮಾನಿಗಳು ಬಂದಿದ್ರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲು ಹೋಗಿ ಸುದ್ದಿಯಾಗಿದ್ದಾಳೆ.

    ಇತ್ತೀಚೆಗೆ ವಿಮಾನ ಪ್ರಯಾಣ ಸಮಯದಲ್ಲಿ MSD ಪಕ್ಕದಲ್ಲಿ ನಿಂತು ಗಗನ ಸಖಿಯೊಬ್ಬಳು (Air Hostess) ಫೋಟೋ ತೆಗೆದುಕೊಂಡಿದ್ದಾಳೆ. ಆದ್ರೆ ಈ ಫೋಟೋ ತೆಗೆದುಕೊಳ್ಳುವಾಗ ಧೋನಿ ಸಣ್ಣ ನಿದ್ರೆಗೆ ಜಾರಿದ್ದರು. ಹಾಗಾಗಿ ಇದು ಅವರಿಗೆ ಗೊತ್ತೇ ಇರಲಿಲ್ಲ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಗಗನಸಖಿ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 48 ರನ್‌ ಚಚ್ಚಿದ ಆಫ್ಘನ್‌ ಬ್ಯಾಟರ್‌ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್‌

    ಒಬ್ಬ ಅಭಿಮಾನಿಯಾಗಿ ನಾನು ಸಹ ಅವರನ್ನ ನೋಡಲು ಬಯಸುತ್ತೇನೆ. ಆದ್ರೆ ಅವರ ಅನುಮತಿಯಿಲ್ಲದೇ ಅವರ ಪರ್ಸನಲ್ ಸ್ಪೇಸ್‌ಗೆ ಅಡ್ಡಿಪಡಿಸಲು ಬಯಸುವುದಿಲ್ಲ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತಾ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ಯಾರಾದರೂ ಗಗನಸಖಿಯರಿಗೆ ಹೆಚ್ಚು ವೃತ್ತಿಪರರಾಗಿರಲು ಮತ್ತು ಅವರ ಗೌಪ್ಯತೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಬಹುದೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಧೋನಿ ಜಾಗದಲ್ಲಿ ಯುವತಿ, ಗಗನಸಖಿ ಜಾಗದಲ್ಲಿ ಧೋನಿ ಇದ್ದರೆ ಇಷ್ಟು ಹೊತ್ತಿಗೆ ಮಹಿಳಾ ಹೋರಾಟಗಾರರು ಕಟು ಪದಗಳಲ್ಲಿ ಟೀಕೆ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

    ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 5 ಬಾರಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿರುವ ಮಹಿ ಮುಂದಿನ ಋತುವಿನಲ್ಲೂ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ಸಂತಗೊಂಡಿದ್ದಾರೆ. ಇತ್ತೀಚೆಗೆ ತಮ್ಮದೇ ನಿರ್ಮಾಣ ಧೋನಿ ಎಂಟರ್ಟೈನ್ಮೆಂಟ್‌ ಪ್ರೈವೇಟ್ ಸಂಸ್ಥೆ ಪ್ರಾರಂಭಿಸುವ ಮೂಲಕ ಮನರಂಜನಾ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಗನಸಖಿ ಗೆಳತಿಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಆತ್ಮಹತ್ಯೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್‌

    ಗಗನಸಖಿ ಗೆಳತಿಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಆತ್ಮಹತ್ಯೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್‌

    ಬೆಂಗಳೂರು: ಗಗನಸಖಿ ಅತ್ಮಹತ್ಯೆ (Suicide) ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ತನ್ನನ್ನು ನೋಡಲು ಬಂದಿದ್ದ ಪ್ರಿಯತಮೆಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಪ್ರಿಯಕರನೇ ಹತ್ಯೆ (Murder) ಮಾಡಿರುವ ವಿಷಯ ಈಗ  ವಿಚಾರಣೆಯಿಂದ ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ (Software Engineer) ಆಗಿದ್ದ ಕೇರಳದ ಆದೇಶ್, ಗಗನಸಖಿ (Air Hostess) 28 ವರ್ಷದ ಅರ್ಚನಾ ಮಧ್ಯೆ ಮೂರು ವರ್ಷಗಳ ಹಿಂದೆ ಡೇಟಿಂಗ್ ಆಪ್‍ನಲ್ಲಿ (Dating app) ಪರಿಚಯವಾಗಿತ್ತು.

    ಪರಿಚಯ ಕಾಲ ಕಳೆದಂತೆ ಪ್ರೀತಿಯಾಗಿ ಬದಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಪ್ರಿಯಕರ ಆದೇಶ್, ಪ್ರಿಯತಮೆ ಅರ್ಚನಾಳ ಜೊತೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದ. ಆದೇಶ್‌ ಮೊದಲಿನಂತೆ ಮಾತನಾಡದ್ದಕ್ಕೆ ಬೇಸರಗೊಂಡಿದ್ದ ಹಿಮಾಚಲ ಪ್ರದೇಶದ ಮೂಲದ ಅರ್ಚನಾ ದುಬೈನಿಂದ ಗೆಳೆಯನನ್ನು ನೋಡಲು ಕೋರಮಂಗಲದ (Koramangala) ನಾಲ್ಕನೇ ಹಂತದಲ್ಲಿರುವ ಮನೆಗೆ ಬಂದಿದ್ದಳು.

    ಮಾರ್ಚ್‌ 10 ರಂದು ನಗರದ ಪ್ರತಿಷ್ಠಿತ ಪಬ್‌, ಹೋಟೆಲ್, ಸಿನಿಮಾ ಎಂದು ಸುತ್ತಾಡಿಸಿ ರಾತ್ರಿ ಮನೆಗೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಅರ್ಚನಾ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಜೋರು ಗಲಾಟೆ ನಡೆದಿದೆ. ಇದನ್ನೂ ಓದಿ: ಪತ್ನಿ, ಮೂವರು ಹೆಣ್ಣು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ

    ಈ ಗಲಾಟೆ ವಿಕೋಪಕ್ಕೆ ಹೋಗಿದ್ದರಿಂದ ರಾತ್ರಿ 12 ಗಂಟೆಯ ವೇಳೆಗೆ ಆದೇಶ್, ಅರ್ಚನಾಳನ್ನು ಜೋರಾಗಿ ಹಿಂದಕ್ಕೆ ತಳ್ಳಿದ್ದ. ಪರಿಣಾಮ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಅರ್ಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

    ಮೃತ ಯುವತಿ ತಂದೆ ದೇವರಾಜ್ ಅವರು ಬಹುಮಹಡಿ ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಆದೇಶ್‌ ವಿರುದ್ಧ ದೂರು ನೀಡಿದ್ದು ಕೋರಮಂಗಲ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಪೊಲೀಸರು ಈಗ ಆದೇಶ್‌ನನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.

  • ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಜೈಪುರ: ಮದ್ಯದ ಅಮಲಿನಲ್ಲಿ ಜೈಪುರದ ರೆಸ್ಟೋರೆಂಟ್‍ನಲ್ಲಿ ರಂಪಾಟ ನಡೆಸಿದ ಗಗನಸಖಿ ಹಾಗೂ ಆಕೆಯ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

    ಬುಧವಾರ ಪ್ರಾಚಿ ಸಿಂಗ್ ಮತ್ತು ಆಕೆಯ ಸ್ನೇಹಿತರು ರೆಸ್ಟೋರೆಂಟ್‍ನಲ್ಲಿ ಕುಟುಂಬಸ್ಥರೊಂದಿಗೆ ಜಗಳವಾಡಿದ್ದಾರೆ. ನಂತರ ರೆಸ್ಟೋರೆಂಟ್‍ನಿಂದ ಹೊರಬಂದು, ಬಿಯರ್ ಬಾಟಲಿಯಿಂದ ಕುಟುಂಬಸ್ಥರ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಿಜೆಪಿ, ಆರ್‌ಎಸ್‍ಎಸ್‍ನ ಯಾವುದೇ ಪಾತ್ರವಿಲ್ಲ: ಸತೀಶ್ ಜಾರಕಿಹೊಳಿ

    ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದು, ಇದೀಗ ಪ್ರಾಚಿ ಸಿಂಗ್ ಮತ್ತು ಅವರ ಪತಿ ಕಾರ್ತಿಕ್ ಚೌಧರಿ, ವಿಕಾಸ್ ಖಂಡೇಲ್ವಾಲ್ ಮತ್ತು ನೇಹಾ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಂತಿ ಭಂಗದ ಆರೋಪದಡಿ ಎದುರಿನ ಗುಂಪಿನ ವಿಶಾಲ್ ದುಬೆ ಮತ್ತು ಆರ್ಯ ಎಂಬವರನ್ನು ಕೂಡ ಪೊಲೀಸರು ಬಂಧಿಸಿದ್ದರು. ಆದರೆ ಅವರು ಸಹ ಜಾಮೀನಿನ ಆಧಾರದ ಮೇಲೆ ಹೊರಗಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್ ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    Live Tv
    [brid partner=56869869 player=32851 video=960834 autoplay=true]