Tag: air force

  • ಅಭಿನಂದನ್ ಪಕ್ಕೆಲುಬು ಮುರಿತ – ಮತ್ತೆ ಆಕಾಶದಲ್ಲಿ ಘರ್ಜಿಸುತ್ತಾರ ವಿಂಗ್ ಕಮಾಂಡರ್?

    ಅಭಿನಂದನ್ ಪಕ್ಕೆಲುಬು ಮುರಿತ – ಮತ್ತೆ ಆಕಾಶದಲ್ಲಿ ಘರ್ಜಿಸುತ್ತಾರ ವಿಂಗ್ ಕಮಾಂಡರ್?

    ಪವಿತ್ರ ಕಡ್ತಲ
    ಬೆಂಗಳೂರಿಗೆ: ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಭಾರತಕ್ಕೆ ಹಸ್ತಾಂತರವಾದ ಬಳಿಕ ದೆಹಲಿಯ ಅರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಪ್ಯಾರಾಚೂಟ್‍ನಿಂದ ಬಿದ್ದ ಪರಿಣಾಮ ಅವರ ಪಕ್ಕೆಲುಬು ಮುರಿದಿದೆ ಎಂಬ ಮಾಹಿತಿ ಲಭಿಸಿದೆ.

    ಭಾರತಕ್ಕೆ ಮರಳಿದ ಬಳಿಕ ಅಭಿನಂದನ್ ಅವರಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು, ಈ ವೇಳೆ ಅವರ ಬೆನ್ನುಹುರಿ ಹಾಗೂ ಮೆದುಳಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಪರಿಣಾಮ ಮತ್ತೆ ಅಭಿನಂದನ್ ಯುದ್ಧ ವಿಮಾನ ಹಾರಾಟ ನಡೆಸುವುದು ಖಚಿತವಾಗಿದೆ. ಒಂದೊಮ್ಮೆ ಅವರ ಬೆನ್ನುಹುರಿ, ಮೆದುಳಿಗೆ ಪೆಟ್ಟಾಗಿದ್ದರೆ, ಮತ್ತೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವುದು ಕಷ್ಟಸಾಧ್ಯವಾಗುತ್ತಿತ್ತು.

    ವಿಂಗ್ ಕಮಾಂಡರ್ ಅಭಿನಂದನ್‍ರ ಪಕ್ಕೆಲುಬು ಮುರಿತವಾಗಿರುವ ಕಾರಣ ಅವರಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ. ಆ ಬಳಿಕ ಅವರು ದೈಹಿಕವಾಗಿ ಫಿಟ್ ಆದ ಆಗಿ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ. ದೆಹಲಿಯ ಆರ್ಮಿ ಆಸ್ಪತ್ರೆಯಿಂದ ಮಂಗಳವಾರ ಅಭಿನಂದನ್ ಅವರು ಬಿಡುಗಡೆ ಆಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಆಸ್ಪತ್ರೆಯಿಂದ ಬಂದ ಬಳಿಕ ಅಭಿನಂದನ್ ಅವರಿಗೆ ಸೇನಾ ಮುಖ್ಯ ಅಧಿಕಾರಿಗಳು ಡಿ ಬ್ರೀಫಿಂಗ್ ನಡೆಸುತ್ತಾರೆ. ಪಾಕ್ ವಿಮಾನವನದ ಮೇಲೆ ದಾಳಿ ನಡೆಸಿದ ಸಂದರ್ಭದಿಂದ ಬಿಡುಗಡೆಯಾಗವ ತನಕ ಸಂಭವಿಸಿದ ಘಟನೆಗಳ ಬಗ್ಗೆ ವಾಯುಪಡೆಯ ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ. ಅಭಿನಂದನ್ ಅವರು ಚೇತರಿಕೆಯಾದ ಬಳಿಕ ಕರ್ತವ್ಯಕ್ಕೆ ಹಾಜರಾಗಲು ಫಿಟ್ನೆಸ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

    ಅಭಿನಂದನ್ ತಮ್ಮ ಫ್ಲೈಯಿಂಗ್ ಫಿಟ್ನೆಸ್ ಪ್ರಮಾಣ ಪತ್ರ ಪಡೆಯಲು ಬೆಂಗಳೂರಿಗೆ ಆಗಮಿಸಬೇಕಾಗಿದ್ದು, ಕೆಲವೇ ದಿನದಲ್ಲಿ ಬೆಂಗಳೂರಿಗೆ ಬಂದು ಹೆಚ್‍ಎಎಲ್ ನಲ್ಲಿರುವ ಇನ್ಸಿಟ್ಯೂಟ್ ಆಫ್ ಏರೋಸ್ಪೇಸ್ ನಲ್ಲಿ ಅಭಿನಂದನ್ ಫ್ಲೈಯಿಂಗ್ ಫಿಟ್ನೆಸ್ ಪ್ರಮಾಣ ಪತ್ರ ಪಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುದ್ಧ ಕೈದಿಯಾಗಿದ್ದ ಅನುಭವವನ್ನು ಹಂಚಿಕೊಂಡ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ

    ಯುದ್ಧ ಕೈದಿಯಾಗಿದ್ದ ಅನುಭವವನ್ನು ಹಂಚಿಕೊಂಡ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ

    ಮಡಿಕೇರಿ: 1965ರಲ್ಲಿ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿ ಬರುವಾಗ ತಾವಿದ್ದ ವಿಮಾನಕ್ಕೆ ಪಾಕ್ ಅಟ್ಯಾಕ್ ಮಾಡಿತ್ತು. ಈ ದಾಳಿಯಲ್ಲಿ ತಮ್ಮ ಜೆಟ್‍ಗೆ ಬೆಂಕಿ ಹೊತ್ತಿಕೊಂಡಾಗ ಪಾಕ್ ನೆಲಕ್ಕೆ ಜಿಗಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಯುದ್ಧ ಕೈದಿಯಾಗಿದ್ದರು. ಅಂದು ಅಲ್ಲಿನ ಪರಿಸ್ಥಿತಿ ಹೇಗಿತ್ತು? ಪಾಕ್ ಅವರನ್ನು ಹೇಗೆ ನಡೆಸಿಕೊಂಡಿತ್ತು ಅನ್ನೋದ್ರ ಬಗ್ಗೆ ಖುದ್ದು ಏರ್ ಮಾರ್ಷಲ್ ಕಾರ್ಯಪ್ಪನವರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ

    1965ರ ಇಂಡೋ-ಪಾಕ್ ಕದನ. ಆಗ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ನಾಲ್ಕು ತಿಂಗಳು ಸೆರೆವಾಸದಲ್ಲಿದ್ದವರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕೂಡ ಒಬ್ಬರು. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಅವರ ನಿವಾಸಕ್ಕೆ ಪಬ್ಲಿಕ್ ಟಿವಿ ಭೇಟಿ ನೀಡಿದಾಗ ಅಂದಿನ ಅನುಭವ ಹಂಚಿಕೊಂಡರು. ಯುದ್ಧ ಕೈದಿಗಳಿಗೆ ಭಯವೆಂಬುದೇ ತಿಳಿದಿರುವುದಿಲ್ಲ ಎಂಬುವುದು ನಿವೃತ್ತ ಏರ್ ಮಾರ್ಷಲ್ ಕಾರ್ಯಪ್ಪರ ಮೊದಲ ಮಾತು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸಿ ವಾಪಸ್ಸಾಗುವಾಗ ಪಾಕ್‍ನ ಯುದ್ಧ ವಿಮಾನಗಳ ದಾಳಿಗೆ ಅವರು ಚಾಲನೆ ಮಾಡುತ್ತಿದ್ದ ಹಾಕರ್ ಹಂಟರ್ ಏರ್ ಕ್ರಾಫ್ಟ್ ಧರೆಗುರುಳಿತ್ತು.

    ಕಾರ್ಯಪ್ಪ ಹೇಳಿದ್ದು ಹೀಗೆ:
    ನನಗೆ ಇನ್ನೂ ಅಂದಿನ ದಿನಗಳು ಚೆನ್ನಾಗಿ ನೆನಪಿದೆ. 1965ರ ಸೆಪ್ಟೆಂಬರ್ 22 ನನಗೆ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸುವ ಹೊಣೆ ವಹಿಸಲಾಗಿತ್ತು. ಅದರಂತೆ ಹಲ್ವಾರಾ ವಾಯುಕೇಂದ್ರದಿಂದ ನನ್ನ ಗುರಿಯತ್ತ ಹೊರಟೆ. ಕೆಲವೇ ಸಮಯದಲ್ಲಿ ನಿಯೋಜಿತ ಕಾರ್ಯ ಮುಗಿಸಿ ನಮ್ಮ ಏರ್ ಬೇಸ್‍ಗೆ ವಾಪಸ್ ಹೊರಟೆ. ಅಷ್ಟರಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ನನ್ನತ್ತ ನಿರಂತರ ದಾಳಿ ನಡೆಸಿದವು. ಅದರ ಪರಿಣಾಮ ನಾನು ಚಾಲನೆ ಮಾಡುತ್ತಿದ್ದ ವಿಮಾನ ಧರೆಗೆ ಉರುಳಿತು. 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಕೆಳಗಡೆಬಿದ್ದೆ. ನನ್ನ ಸೊಂಟ ಮತ್ತು ಕೈಗೆ ಹಾನಿಯಾಯಿತು. ಅಷ್ಟರಲ್ಲಿ ನನ್ನನ್ನು ಪಾಕಿಸ್ತಾನದ ಸೈನಿಕರು ಸುತ್ತುವರಿದರು. ನನ್ನ ಕೈ ಮತ್ತು ಸೊಂಟಕ್ಕೆ ಹಾನಿಯಾಗಿದ್ದರಿಂದ ಕೂಡಲೇ ಸ್ಟ್ರೆಚರ್ ಮೂಲಕ ಲಾಹೋರ್‍ನ ಸೇನಾ ಆಸ್ಪತ್ರೆಗೆ ಕರೆದೊಯ್ದರು. 3 ವಾರಗಳ ಚಿಕಿತ್ಸೆ ಬಳಿಕ ಯುದ್ಧ ಕೈದಿಗಳ ಶಿಬಿರಕ್ಕೆ ವರ್ಗಾಯಿಸಿದರು. ಪ್ರತಿದಿನ ಸಸ್ಯಾಹಾರ ನೀಡುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಪೂರಿ, ಚಹಾ, 11.30ಕ್ಕೆ ಚಪಾತಿ ಊಟ, ಸಂಜೆ 6 ಗಂಟೆಗೆ ರಾತ್ರಿಯ ಊಟ ವಿತರಣೆಯಾಗುತ್ತಿತ್ತು ಎಂದು ತಿಳಿಸಿದರು.

    ಅಂದು ಪಾಕಿಸ್ತಾನದ ಸೇನಾಧಿಕಾರಿ ಅಯೂಬ್ ಖಾನ್ ಎಂಬವರು ಕೆ.ಸಿ. ಕಾರ್ಯಪ್ಪನವರನ್ನು ಗುರುತಿಸಿ, ರೇಡಿಯೋದ ಮೂಲಕ ‘ಜೂನಿಯರ್ ಕಾರ್ಯಪ್ಪ’ನವರನ್ನು ಬಂಧಿಸಿರುವುದಾಗಿ ಸುದ್ದಿ ಬಿತ್ತರಿಸಿದರು. ವಾಸ್ತವವಾಗಿ ಕೆ.ಎಂ.ಕಾರ್ಯಪ್ಪನವರು ಆಗಿನ ಪಾಕಿಸ್ತಾನದ ಸೇನಾಧಿಕಾರಿ ಅಯೂಬ್ ಖಾನ್ ಜೊತೆ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆ.ಎಂ. ಕಾರ್ಯಪ್ಪನವರನ್ನು ಸಂಪರ್ಕಿಸಿದ ಅಯೂಬ್‍ಖಾನ್, ನಿಮ್ಮ ಮಗನನ್ನು ಸೆರೆ ಹಿಡಿದಿದ್ದೇನೆ. ಸುರಕ್ಷಿತವಾಗಿದ್ದಾರೆ. ಬೇಕಾದ್ರೆ ಬಿಡುಗಡೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದರಂತೆ.

    ಅಂದು ನನ್ನ ತಂದೆ, ನನ್ನ ಮಗನೆಂದು ವಿಶೇಷ ಆದರಾತಿಥ್ಯಗಳನ್ನು ಕೊಡಬೇಕಿಲ್ಲ, ಎಲ್ಲರಂತೆ ನಡೆಸಿಕೊಳ್ಳಿ. ಕರೆ ಮಾಡಿ ತೋರಿದ ಕಾಳಜಿಗೆ ಧನ್ಯವಾದ ಎಂದಿದ್ದರು. ಜೊತೆಗೆ ಎಲ್ಲರನ್ನೂ ಬಿಡುವುದಾದರೆ ಬಿಡಿ. ನನ್ನ ಮಗನೊಬ್ಬನೇ ಅಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ತಂದೆಯನ್ನು ನೆನೆಯುತ್ತಾರೆ.

    ಅಭಿನಂದನ್ ವರ್ಧಮಾನ್ ಅವರು ಸೆರೆ ಸಿಕ್ಕಿದ ಸಂದರ್ಭ ಸ್ವಲ್ಪ ಭಿನ್ನ. ಬಿಡುಗಡೆಯ ಪ್ರಕ್ರಿಯೆ ಬಹಳ ಭಿನ್ನವಾಗಿರುವುದಿಲ್ಲ. ಕೊನೆಗೆ ಎರಡು ಸರ್ಕಾರಗಳು ಮಾತುಕತೆ ನಡೆಸಿದವು. ಅದರಂತೆ ನಂದ ಕಾರ್ಯಪ್ಪನವರ ಬಿಡುಗಡೆಗೆ ವೇದಿಕೆ ಸಿದ್ಧವಾಯಿತು. ವಿಶೇಷ ವಿಮಾನದಲ್ಲಿ ಸೇನಾಧಿಕಾರಿ ಮೂಸಾ ಜತೆಗೆ ಇನ್ನೂ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದಿಳಿದರು. ಬಳಿಕೆ ತಮಗೂ ವೈದ್ಯಕೀಯ ತಪಾಸಣೆ ಮಾಡಿದರು ನಂತರ ಒಂದು ತಿಂಗಳು ರಜೆ ನೀಡಿ ಕಳುಹಿಸಲಾಗಿತ್ತು ಎಂದು ತಮ್ಮ ಅನುಭವಗಳನ್ನು ವಿವರಿಸಿದರು.

    ಅಭಿನಂದನ್ ವರ್ಧಮಾನ್ ಅವರಿಗೂ ಸಣ್ಣಪುಟ್ಟ ವೈದ್ಯಕೀಯ ತಪಾಸಣೆಗಳು ಇರುತ್ತದೆ. ನಂತರ ಒಂದು ಅಷ್ಟು ದಿನ ರಜೆಯ ಮೇಲೆ ಕಳುಹಿಸಿ ನಂತರ ಅವರು ಮಾನಸಿಕ ಹಾಗೂ ದೈಹಿಕವಾಗಿ ರೆಡಿ ಇದ್ದಾರೆ ಅವರನ್ನು ಮತ್ತೆ ಕೆಲಸದಲ್ಲಿ ಮುಂದುವರೆಸಬಹುದು ಅಥಾವ ಇಲ್ಲದೇ ಇರಬಹುದು ಎಂದು ತಿಳಿಸಿದರು.

    https://youtu.be/MzgcKiat50M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಕುಟಿಲೋಪಾಯವನ್ನು ಇಂಚಿಂಚು ಬಿಚ್ಚಿಟ್ಟ ಏರ್ ಫೋರ್ಸ್

    ಪಾಕ್ ಕುಟಿಲೋಪಾಯವನ್ನು ಇಂಚಿಂಚು ಬಿಚ್ಚಿಟ್ಟ ಏರ್ ಫೋರ್ಸ್

    -ಜಾಗತಿಕ ಮಟ್ಟದಲ್ಲಿ ಪಾಕ್ ಮಾನ ಹರಾಜು

    ನವದೆಹಲಿ: ಫೆಬ್ರವರಿ 27ರಂದು ನಮ್ಮ ಮಿಗ್ 21 ಬೈಸನ್ ಪಾಕಿಸ್ತಾನದ ಎಫ್-16 ಜೆಟ್ ಹೊಡೆದುರುಳಿಸಿತ್ತು. ಆದರೆ ಪಾಕಿಸ್ತಾನ ಮಾತ್ರ ಇದನ್ನು ಒಪ್ಪಿಕೊಳ್ಳದೆ ನಮ್ಮ ವಿಮಾನವಲ್ಲ ಎಂದು ವಾದ ಮಾಡುತ್ತಿತ್ತು. ಆದರೆ ಈಗ ಈ ಘಟನೆಯ ಮಾಹಿತಿಯನ್ನು ಸಾರ್ವಜನಿಕವಾಗಿ ನಮ್ಮ ಸೇನೆ ಹಂಚಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕ್ ಮಾನ ಹರಾಜಾಗುವುದು ಖಚಿತವಾಗಿದೆ.

    ಹೌದು. ಪಾಕಿಸ್ತಾನ ನೌಟಂಕಿ, ಕಪಟಿಯ ಕುಟಿಲೋಪಾಯವನ್ನು ಏರ್ ಫೋರ್ಸ್ ಇಂಚಿಂಚು ಬಿಚ್ಚಿಟ್ಟಿದೆ. ಎಫ್-16 ಫೈಟರ್ ಜೆಟ್‍ನ ಫೋಟೋ ಸಮೇತ ಪಾಕಿಸ್ತಾನದ ಮಾನವನ್ನು ಇಂಡಿಯನ್ ಏರ್ ಫೋರ್ಸ್ ಹರಾಜಾಕಿದೆ. ಇದನ್ನೂ ಓದಿ: ಈಗ ಅಧಿಕೃತ, ಭಾರತದ ಹೊಡೆತಕ್ಕೆ ಬಿತ್ತು ಎಫ್ 16 ವಿಮಾನ

    ಅಂದು ಏನಾಯ್ತು?
    ಫೆಬ್ರವರಿ 27ರ ಮುಂಜಾನೆ ಭಾರತದ ಗಡಿಯತ್ತ ಪಾಕ್ ಜೆಟ್ ನುಗ್ಗುತ್ತಿತ್ತು. ಆಗ ಪಾಕ್ ಜೆಟ್ ಎಫ್-16 ಅನ್ನು ರೇಡಾರ್ ಪತ್ತೆ ಹಚ್ಚಿದೆ. ಆ ಪಾಕ್ ಜೆಟ್ ರಜೌರಿಯ ಸುಂದರಬನಿ ಪ್ರದೇಶದಲ್ಲಿ ಗಡಿ ಉಲ್ಲಂಘಿಸಿದೆ. ಎಫ್-16 ಹಿಮ್ಮೆಟ್ಟಲು ಮಿಗ್-21 ಬೈಸನ್, ಸುಖೋಯ್-30 ಎಂಕೆಐ ಹಾಗೂ ಮಿರಾಜ್-2000 ಫೈಟರ್ ಜೆಟ್‍ಗಳನ್ನು ನೇಮಕ ಮಾಡಲಾಗಿತ್ತು.

    ಪಾಕ್ ಜೆಟ್ ಭಾರತದ ಸೇನಾ ಶಿಬಿರಗಳನ್ನು ಟಾರ್ಗೆಟ್ ಮಾಡಿತ್ತು. ಈ ವೇಳೆ ನಮ್ಮ ಏರ್ ಫೋರ್ಸ್ ತಂಡ ಪಾಕ್ ಜೆಟ್ ಎಫ್-16 ಅನ್ನು ಬೆನ್ನಟ್ಟಿದೆ. ಈ ವೇಳೆ ಭೀತಿಯಿಂದ ಪಾಕ್ ಜೆಟ್ ಗಡಿಯಲ್ಲಿ ಬಾಂಬ್ ಡ್ರಾಪ್ ಮಾಡಿ ಹೋಗಲು ಯತ್ನಿಸಿದೆ. ಆದ್ರೆ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನದ ಜೆಟ್ ಎಫ್-16 ಅನ್ನು ಮಿಗ್-21 ಬೈಸನ್ ಹೊಡೆದುರುಳಿಸಿದೆ.

    ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ದಲ್ಲಿ ಪಾಕಿಸ್ತಾನದ ಜೆಟ್ ಎಫ್-16 ಅವಶೇಷಗಳು ಬಿದ್ದಿದೆ. ಈ ವೈಮಾನಿಕ ಕಾದಾಟದಲ್ಲಿ ಮಿಗ್-21 ವಿಮಾನವನ್ನು ಕಳೆದುಕೊಳ್ಳಬೇಕಾಯಿತು. ಮಿಗ್-21 ಬೈಸನ್ ಜೆಟ್‍ನಲ್ಲಿದ್ದ ಅಭಿನಂದನ್ ಇಜೆಕ್ಟ್ ಆದರು. ಆದರೆ ಪ್ಯಾರಾಚೂಟ್‍ನಲ್ಲಿ ಹೋದ ಪೈಲಟ್ ಅಭಿನಂದನ್ ಪಾಕ್ ಗಡಿಯಲ್ಲಿ ಇಳಿದರು. ಅವರನ್ನು ಸುಳ್ಳು ಹೇಳಿ ಪಾಕಿಸ್ತಾನ ಸೇನೆ ಸೆರೆಹಿಡಿದುಕೊಂಡಿತು ಇದು ನಡೆದ ಘಟನೆಯಾಗಿದೆ. ಇದನ್ನು ನಮ್ಮ ವಾಯುಸೇನೆ ಸಾಕ್ಷಿ ಸಮೇತ ಸಾಬೀತು ಮಾಡಿದೆ.

    ವೈಮಾನಿಕ ದಾಳಿ ಬಳಿಕ ಪಾಕ್ ಗೊಂದಲಕಾರಿ ಹೇಳಿಕೆ ಕೊಟ್ಟಿತ್ತು. ನಮ್ಮ ಬಳಿ ಭಾರತದ ಒಬ್ಬರೇ ಪೈಲಟ್ ಇರುವುದಾಗಿ ಹೇಳಿತ್ತು. ಅಲ್ಲದೆ ಉದ್ದೇಶ ಪೂರ್ವಕವಾಗಿಯೇ ಖಾಲಿ ಪ್ರದೇಶದಲ್ಲಿ ಬಾಂಬ್ ಹಾಕಿದ್ದಾಗಿ ಒಪ್ಪಿಕೊಂಡಿತ್ತು. ಜೊತೆಗೆ ಎಫ್-16 ಯುದ್ದ ವಿಮಾನವನ್ನು ಬಳಸಿರಲಿಲ್ಲ ಅಂತ ಹೇಳಿತ್ತು. ಆದರೆ ಎಫ್-16ನಲ್ಲಿ ಬಳಸಲಾದ ಆಮರಾಮ್‍ನ ಅವಶೇಷಗಳು ಪೂರ್ವ ರಜೌರಿಯಲ್ಲಿ ಪತ್ತೆಯಾಗಿವೆ.

    ಪಾಕ್‍ನ ಎಫ್-16 ಅನ್ನು ನಮ್ಮ ಮಿಗ್ 21 ಬೈಸನ್ ಹೊಡೆದುರುಳಿಸಿತ್ತು. ಈಗ ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ಸುರಕ್ಷಿತವಾಗಿ ಹಿಂಪಡೆದಿದ್ದೇವೆ.

    https://www.youtube.com/watch?v=ArvRnqPs81s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ದಾಳಿಗೆ ಸಾಕ್ಷಿ ಬಿಡುಗಡೆ, ಯಾವುದೇ ದಾಳಿ ಎದುರಿಸಲು ಭಾರತ ಸಿದ್ಧ

    ಪಾಕ್ ದಾಳಿಗೆ ಸಾಕ್ಷಿ ಬಿಡುಗಡೆ, ಯಾವುದೇ ದಾಳಿ ಎದುರಿಸಲು ಭಾರತ ಸಿದ್ಧ

    ನವದೆಹಲಿ: ಪಾಕಿಸ್ತಾನ ದಾಳಿ ನಡೆಸಿದ ವೇಳೆ ಭಾರತ ವಾಯುಪಡೆ ಹೊಡೆದುರುಳಿಸಿದ್ದ ಪಾಕ್ ಎಫ್-16 ವಿಮಾನದ ಆಮ್ರಾಮ್ ಕ್ಷಿಪಣಿಯ ಅವಶೇಷಗಳನ್ನು ಸೇನೆ ಸಾಕ್ಷಿಯಾಗಿ ನೀಡಿದೆ.

    ವಾಯುಪಡೆ, ಭೂ ಸೇನೆ, ನೌಕಾಪಡೆ ಸೇನಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನ ದಾಳಿಯ ಬಗ್ಗೆ ಮಾಹಿತಿ ನೀಡಿದರ. ಏರ್ ವೈಸ್ ಮಾರ್ಷಲ್ ಆ.ಜಿ.ಕೆ ಕಪೂರ್ ಮಾತನಾಡಿ, ಫೆ.27 ರ ಬೆಳಗ್ಗೆ ಪಾಕಿಸ್ತಾನದ ಜೆಟ್‍ಗಳು ಭಾರತದ ಗಡಿಯನ್ನು ಪ್ರವೇಶ ಮಾಡಿತ್ತು. ಮಿಲಿಟರಿ ನೆಲೆ ಮೇಲೆ ದಾಳಿ ನಡೆಸಲು ಬರುತ್ತಿದೆ ಎನ್ನುವ ಬಗ್ಗೆ ರೇಡಾರ್ ಗಳಿಂದ ಸೂಚನೆ ಬಂದಿತ್ತು. ಪ್ರತಿಯಾಗಿ ವಿಮಾನ ಗಡಿ ದಾಟಿ ಬಂದ ವೇಳೆ ನಮ್ಮ ನೆಲದಲ್ಲಿ ಆಮ್ರಾಮ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದರು.

    ದಾಳಿಯ ವೇಳೆ ನಾವು ಕೂಡ ಪ್ರತಿ ದಾಳಿ ನಡೆಸಿದ್ದು, ಪರಿಣಾಮ ಪಾಕಿಸ್ತಾನದ ಎಫ್-16 ಜೆಟ್ ಪಾಕ್ ಆಕ್ರಮಿತ ಗಡಿಯಲ್ಲಿ ಉರುಳಿ ಬಿದ್ದಿದೆ. ಈ ವೇಳೆ ಭಾರತ ಮಿಗ್ ಜೆಟ್ ಪೈಲಟ್ ಅಭಿನಂದನ್ ಪಾಕಿಸ್ತಾನದ ಗಡಿಯಾಚೆ ಬಿದ್ದ ಪರಿಣಾಮ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿದೆ. ಪೈಲಟ್ ಪಾಕಿಸ್ತಾನದ ಬಂಧನದಲ್ಲಿದ್ದಾರೆ. ಜಿನೀವಾ ಒಪ್ಪಂದದ ಪ್ರಕಾರ ಅವರನ್ನು ಹಿಂದಿರುಗಿಸುತ್ತಿರುವುದು ನಮಗೆ ಸಂತಸ ತಂದಿದೆ. ಇದನ್ನು ನಾವು ಜಿನೀವಾ ಒಪ್ಪಂದ ಅನ್ವಯದಂತೆ ಮಾತ್ರ ನೋಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪಾಕಿಸ್ತಾನದಿಂದ ಇಂತಹ ಯಾವುದೇ ದಾಳಿ ನಡೆಸಿದರೂ ಕೂಡ ನಾವು ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ನೌಕದಳದ ಆಡ್ಮಿರಲ್ ಟಿಎಸ್ ಗುಜ್ರಾಲ್ ಎಚ್ಚರಿಕೆ ರವಾನಿಸಿದರು.

    ಪಾಕಿಸ್ತಾನ ಭಾರತ ಮೇಲೆ ದಾಳಿ ನಡೆಸಿದೆ ಎಂಬುವುದಕ್ಕೆ ಹಾಗೂ ನಾವು ಪಾಕ್ ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬುವುದಕ್ಕೆ ಸಾಕ್ಷಿ ಇದೆ. ಅದನ್ನು ಮಾಧ್ಯಮಗಳ ಮುಂದೇ ಪ್ರದರ್ಶಿಸುತ್ತಿದ್ದೇವೆ ಎಂದು ಏರ್ ವೈಸ್ ಮಾರ್ಷಲ್ ಆ.ಜಿ.ಕೆ ಕಪೂರ್ ವಿವರಿಸಿದರು. ಅಲ್ಲದೇ ಪಾಕಿಸ್ತಾನ ಜೈಶ್ ಎ ಮೊಹಮದ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಉಂಟಾದ ಹಾನಿಯ ಕುರಿತ ಪ್ರಶ್ನೆಗೆ ಉತ್ತರಿಸಿ, ಕ್ಯಾಪ್ ಮೇಲೆ ದಾಳಿ ನಡೆಸಿದ ಪರಿಣಾಮ ಅಲ್ಲಿ ಎಷ್ಟು ಹಾನಿಯಾಗಿದೆ ಎಂದು ಈಗಲೇ ನಿರ್ಧಾರ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಆದರೆ ನಾವು ಗುರಿ ಇಟ್ಟು ದಾಳಿ ನಡೆಸಿದ ಕ್ಯಾಪ್‍ಗಳು ಧ್ವಂಸ ಆಗಿರುವುದು ಖಚಿತ ಎಂದು ಸ್ಪಷ್ಟಪಡಿಸಿದರು.

    ಭೂ ಸೇನೆಯ ಜನರಲ್ ಸುರೇಂದ್ರ ಸಿಂಗ್ ಮಹಾಲ್ ಮಾತನಾಡಿ ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸುವವರೆಗೂ ನಾವು ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಧ್ವಂಸ ಮಾಡುತ್ತಲೇ ಇರುತ್ತೇವೆ. ಅಷ್ಟೇ ಅಲ್ಲದೇ ಯಾವುದೇ ದಾಳಿಗೆ ಪ್ರತಿ ದಾಳಿ ನಡೆಸಲು ನಮ್ಮ ಸೇನೆ ಸನ್ನದ್ದವಾಗಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ನೌಕಾ ದಳದ ರೀರ್ ಅಡ್ಮಿರಲ್ ಡಿಎಸ್ ಗುಜ್ರಾಲ್, ಏರ್ ವೈಸ್ ಮಾರ್ಷಲ್ ಆ.ಜಿ.ಕೆ ಕಪೂರ್, ಭೂ ಸೇನೆಯ ಸುರೇಂದರ್ ಸಿಂಗ್ ಮಹಾಲ್ ಹಾಜರಿದ್ದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮ್ಮು-ಕಾಶ್ಮೀರಕ್ಕೆ ನುಸುಳಲು 4 ದಾರಿ ಬಳಸಿದ್ರು ಜೈಶ್ ಉಗ್ರರು

    ಜಮ್ಮು-ಕಾಶ್ಮೀರಕ್ಕೆ ನುಸುಳಲು 4 ದಾರಿ ಬಳಸಿದ್ರು ಜೈಶ್ ಉಗ್ರರು

    ನವದೆಹಲಿ: ಬಾಲಕೋಟ್ ನಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರು ಭಾರತದ ಒಳಗೆ ನುಸುಳಲು ಪಾಕ್ ಆಕ್ರಮಿತ ಕಾಶ್ಮೀರದಿಂದ ನಾಲ್ಕು ಮಾರ್ಗಗಳನ್ನು ಬಳಸುತ್ತಿದ್ದರು ಎಂಬುದನ್ನು ಸೇನೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಬಾಲಕೋಟ್-ಕೆಲ್-ದುಢ್‍ನಿಯಾಲ್, ಬಾಲಕೋಟ್-ಕೆಲ್-ಕೈಂತಾವಾಲಿ, ಬಾಲಕೋಟ್-ಕೆಲ್-ಲೋಲಾಬ್ ಮತ್ತು ಬಾಲಕೋಟ್-ಕೆಲ್-ಕಚಾಮಾ-ಕ್ರಾಲ್‍ಪೋರಾ ಎಂಬ ನಾಲ್ಕು ಮಾರ್ಗಗಳನ್ನು ಭಾರತದೊಳಗೆ ಬರಲು ಉಗ್ರರು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

    ಬಾಲ್‍ಕೋಟ್- ಕೆಲ್ ಪಿಓಕೆಯಲ್ಲಿದ್ದರೆ, ದುಢ್‍ನಿಯಾಲ್ ಕಾಶ್ಮೀರದ ಕುಪ್ವಾರದಲ್ಲಿದೆ. ಕೈಂತಾವಾಲಿ, ಕಚಾಮಾ, ಕ್ರಾಲ್‍ಪೋರಾ ಮತ್ತು ಲೋಲಾಬ್ ಕುಪ್ವಾರದ ಮಗಂ ಅರಣ್ಯದಲ್ಲಿದೆ. ಬಾಲಕೋಟ್ ನಲ್ಲಿ ಮೂರು ತಿಂಗಳು ತರಬೇತಿ ಪಡೆದುಕೊಂಡ ಉಗ್ರರು ಈ ಮಾರ್ಗಗಳ ಮೂಲಕ ಭಾರತ ಪ್ರವೇಶಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.

    ಗನ್ ಹಿಡಿಯೋದು ಸೇರಿದಂತೆ ಪ್ರಾಥಮಿಕ ತರಬೇತಿ ಪಡೆದ ಉಗ್ರರನ್ನು ಬಾಲಕೋಟ್ ಗೆ ರವಾನಿಸಲಾಗುತ್ತಿತ್ತು ಬಾಲಕೋಟ್ ನಲ್ಲಿ ಉಗ್ರರಿಗೆ ಎಕೆ-47, ಪಿಕಾ, ಎಲ್‍ಎಂಜಿ, ರಾಕೆಟ್ ಉಡಾವಣೆ, ಯುಬಿಜಿಎಲ್ ಮತ್ತು ಗ್ರೆನೆಡ್ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಇದೇ ವೇಳೆ ಸ್ವಿಮಿಂಗ್, ಕುದುರೆ ಸವಾರಿ ಮತ್ತು ಕತ್ತಿ ವರಸೆಯನ್ನು ಕಲಿಸಲಾಗುತ್ತಿತ್ತು. ಈ ಉಗ್ರರ ತರಬೇತಿ ಶಿಬಿರವನ್ನು ‘ಮದ್ರಸಾ ಆಯೇಷಾ ಸಾದಿಕ್’ ಹೆಸರಿನಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.

    ಬಾಲಕೋಟ್ ಶಿಬಿರದಲ್ಲಿ 25ರಿಂದ 27 ಜನರ ಮೇಲ್ವಿಚಾರಣೆಯಲ್ಲಿ ಸುಮಾರು 325 ಉಗ್ರರು ತರಬೇತಿ ಪಡೆದುಕೊಳ್ಳುತ್ತಿದ್ದರು. ಫೆಬ್ರವರಿ 14ರದಂದು ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಗಡಿರೇಖೆಯನ್ನು ದಾಟಿ ಮೂರು ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿ ಯಶಸ್ವಿಯಾಗಿ ಹಿಂದಿರುಗಿತ್ತು.

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರ ದಾಳಿಯನ್ನ ರಾಜಕೀಯ ಮಾಡಿಕೊಂಡ ರಾಜಕಾರಣಿಗಳು

    ಉಗ್ರರ ದಾಳಿಯನ್ನ ರಾಜಕೀಯ ಮಾಡಿಕೊಂಡ ರಾಜಕಾರಣಿಗಳು

    ಬೆಂಗಳೂರು: ಒಂದು ಕಡೆ ಉಗ್ರರು, ಮತ್ತೊಂದು ಕಡೆ ಪಾಕಿಸ್ತಾನದ ಉಪಟಳ. ಮಗದೊಂದು ಕಡೆ ನಮ್ಮ ವಿಂಗ್ ಕಮಾಂಡ್ ಅಭಿನಂದನ್ ಬಿಡುಗಡೆಯ ಟೆನ್ಷನ್. ಇಷ್ಟೆಲ್ಲ ಇದ್ದರೂ ನಮ್ಮ ರಾಜಕಾರಣಿಗಳು ಮಾತ್ರ ರಾಜಕೀಯವನ್ನು ನಿಲ್ಲಿಸುತ್ತಿಲ್ಲ.

    ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸುರಕ್ಷಿತವಾಗಿ ಮರಳುವಂತೆ ದೇಶಕ್ಕೆ ದೇಶವೇ ಪ್ರಾರ್ಥಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜಕಾರಣಿಗಳ ರಾಜಕೀಯ ಮುಂದುವರಿದಿದೆ. ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಖೇಲೋ ಇಂಡಿಯಾ ಆಪ್‍ಗೆ ಚಾಲನೆ ನೀಡಿದರು.

    ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚತ್ತೀಸ್‍ಗಢದ ಬಿಲಾಸ್‍ಪುರದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣದಲ್ಲಿ ತೊಡಗಿದ್ರು. ಉತ್ತರ ಪ್ರದೇಶದ ಗಾಜಿಪುರದಲ್ಲಿ ಅಮಿತ್ ಶಾ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿ, ಮಹಾಘಟ ಬಂಧನ್ ಅನ್ನು ಟೀಕಿಸಿದ್ರು. ಒಡಿಶಾದಲ್ಲಿ ಮಾತನಾಡಿದ ಕೇಂದ್ರ ಸಚಿವ ಮನ್ಸೂಕ್ ಲಕ್ಷ್ಮಣ್‍ಬಾಯ್ ಮಾಂಡವ್ಯ, ಏರ್ ಸ್ಟ್ರೈಕ್ ಮೂಲಕ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ 56 ಇಂಚಿನ ಎದೆಗಾರಿಕೆ ತೋರಿಸಿದ್ದಾರೆ ಎಂದು ಕೊಚ್ಚಿಕೊಂಡರು.

    ಏರ್ ಸ್ಟ್ರೈಕ್‍ಗೆ ಮೊದಲು ಮೋದಿ ಸರ್ಕಾರವನ್ನು ಬೆಂಬಲಿಸಿದ್ದ ವಿಪಕ್ಷಗಳು ಮತ್ತೆ ರಾಜಕೀಯ ಹೈಡ್ರಾಮಾದ ಡೈಲಾಗ್ ಮುಂದುವರಿಸಿವೆ. ಸಂಸತ್‍ನಲ್ಲಿ ಸಭೆ ನಡೆಸಿದ 21 ವಿಪಕ್ಷಗಳು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಏರ್ ಸ್ಟ್ರೈಕ್ ಬಳಿಕವಾದರೂ ಪ್ರಧಾನಿ ಮೋದಿ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಆದರೆ ಇದನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲಾಗ್ತಿದೆ ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.

    ವಿಪಕ್ಷಗಳ ಇಂಥ ಜಂಟಿ ಹೇಳಿಕೆಗಳು ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಅನುಕೂಲಕಾರಿ ಅಂತ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಕಿಡಿಕಾರಿದ್ದಾರೆ. ಈ ಮಧ್ಯೆ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲ ಅವರಂತು, ಅಭಿನಂದನ್ ಅವರನ್ನು ವಾಪಸ್ ಕರೆತರುವವರೆಗೂ ಪ್ರಧಾನಿ ಮೋದಿ ತಮ್ಮೆಲ್ಲಾ ರಾಜಕೀಯ ಚಟುವಟಿಕೆಯನ್ನು ರದ್ದುಗೊಳಿಸಬೇಕು ಅಂತ ಟ್ವೀಟ್ ಮಾಡಿದ್ದಾರೆ.

    https://www.youtube.com/watch?v=jaId4oGKmkM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ V/S ಪಾಕಿಸ್ತಾನ: ಭೂ, ವಾಯು, ನೌಕಾ ಸೇನೆಯ ಸಾಮರ್ಥ್ಯ ಏನು?

    ಭಾರತ V/S ಪಾಕಿಸ್ತಾನ: ಭೂ, ವಾಯು, ನೌಕಾ ಸೇನೆಯ ಸಾಮರ್ಥ್ಯ ಏನು?

    ನವದೆಹಲಿ: ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ವಾಯು ದಾಳಿ ನಡೆಸಿದ ಬಳಿಕ ಎರಡು ದೇಶಗಳ ನಡುವಿನ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಯುದ್ಧ ನಡೆಯಬಹುದೇ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಒಂದೊಮ್ಮೆ ಎರಡು ದೇಶಗಳ ನಡುವೆ ನೇರ ಯುದ್ಧ ಪರಿಸ್ಥಿತಿ ನಿರ್ಮಾಣವಾದರೆ ಪಾಕಿಸ್ತಾನ ಶಕ್ತಿ ಎಷ್ಟಿದೆ ಹಾಗೂ ಭಾರತ ಬಲ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಬಜೆಟ್
    ಭಾರತ – 2018 ರ ಬಜೆಟ್‍ನಲ್ಲಿ ಭಾರತ ರಕ್ಷಣಾ ಕ್ಷೇತ್ರಕ್ಕೆ 58 ಬಿಲಿಯನ್ ಡಾಲರ್ ಅನುದಾನ ನೀಡಿದೆ. ಇದು ಭಾರತದ ಜಿಡಿಪಿಯ ಶೇ.2.1 ರಷ್ಟು ಹೊಂದಿದೆ. ಬಜೆಟ್ ನ ಶೇ.9.1 ರಷ್ಟು ಹಣ ಮಿಲಿಟರಿಗೆ ವಿನಿಯೋಗಿಸಿದೆ.

    ಪಾಕಿಸ್ತಾನ – 2018ರ ಬಜೆಟ್ ನಲ್ಲಿ 11 ಬಿಲಿಯನ್ ಡಾಲರ್ ನೀಡಿದೆ. ಇದರಲ್ಲಿ 100 ಮಿಲಿಯನ್ ಡಾಲರ್ ವಿದೇಶಿ ನೆರವಿನಿಂದ ಪಡೆದಿದೆ. ಇದು ಪಾಕ್‍ನ ಜಿಡಿಪಿಯ ಶೇ.3.6 ರಷ್ಟಿದ್ದು, ಒಟ್ಟಾರೆ ಶೇ.16 ರಷ್ಟು ಹಣ ಮಿಲಿಟರಿಗೆ ವಿನಿಯೋಗಿಸಿದೆ.

    ಕ್ಷಿಪಣಿಗಳ ಸಾಮರ್ಥ್ಯ
    ಭಾರತ – 5 ಸಾವಿರ ಕಿಲೋ ಮೀಟರ್ ದೂರ ಸಾಗಬಲ್ಲ ಅಗ್ನಿ 5 ನಮ್ಮ ಬಳಿಯಿದೆ. ಭಾರತ 140 ರಿಂದ 150 ಅಣ್ವಸ್ತ್ರ ಗಳನ್ನು ಅಭಿವೃದ್ಧಿ ಪಡಿಸಿದೆ.

    ಪಾಕಿಸ್ತಾನ – ಷಹೀನ್-2 ಮಿಸೈಲ್ 2 ಸಾವಿರ ಕಿಲೋ ಮೀಟರ್ ದೂರ ಸಾಗುತ್ತದೆ. ಅಲ್ಲದೇ 130 ರಿಂದ 140 ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸಿದೆ.

    ಭೂಸೇನೆ
    ಭಾರತ – 12 ಲಕ್ಷ ಯೋಧರು, 336 ಶಸ್ತ್ರ ಸಜ್ಜಿತ ಸಿಬ್ಬಂದಿ ವಾಹಕಗಳು, 3,565 ಯುದ್ಧ ಟ್ಯಾಂಕರ್ ಹಾಗೂ 9,472 ಅರ್ಟಿಲ್ಲರಿ ಗನ್ ಹೊಂದಿದೆ.

    ಪಾಕಿಸ್ತಾನ – 5.6 ಲಕ್ಷ ಸೇನಾ ಪಡೆ, 1,605 ಶಸ್ತ್ರ ಸಜ್ಜಿತ ಸಿಬ್ಬಂದಿ ವಾಹಕಗಳು, 2,496 ಯುದ್ಧ ಟ್ಯಾಂಕರ್ ಹಾಗು 4,472 ಆರ್ಟಿಲ್ಲರಿ ಗನ್ ಗಳಿದೆ.

    ವಾಯುಸೇನೆ
    ಭಾರತ – 1.27 ಲಕ್ಷ ಯೋಧರು ಸೇರಿ 720 ಹೆಲಿಕಾಪ್ಟರ್ ಗಳನ್ನು ಹೊಂದಿದೆ. ಇದರಲ್ಲಿ 590 ಫೈಟರ್ ಜೆಟ್, 708 ಸಾಗಣೆ ವಿಮಾನಗಳು, 15 ದಾಳಿ ಹೆಲಿಕಾಪ್ಟರ್ ಗಳಿವೆ. ರಷ್ಯಾ ತಂತ್ರಜ್ಞಾನದ ಮಿಗ್ 21 ಮತ್ತು ಫ್ರಾನ್ಸ್‍ನ ಮಿರಾಜ್-2000 ಭಾರತ ಪ್ರಮುಖ ವಿಮಾನವಾಗಿದೆ.

    ಪಾಕಿಸ್ತಾನ – 320 ಫೈಟರ್ ಜೆಟ್, 296 ಸಾಗಣೆ ವಿಮಾನಗಳು, 49 ದಾಳಿ ಹೆಲಿಕಾಪ್ಟರ್ ಸೇರಿ ಒಟ್ಟು 328 ಹೆಲಿಕಾಪ್ಟರ್ ಗಳಿದೆ. ಚೀನಾ ಅಭಿವೃದ್ಧಿ ಪಡಿಸಿದ ಎಫ್-7ಪಿಜಿ, ಮತ್ತು ಅಮೆರಿಕದಿಂದ ಖರೀದಿಸಿರುವ ಫಾಲ್ಕನ್-16 ಫೈಟಿಂಗ್ ಜೆಟ್‍ಗಳನ್ನು ವಾಯುಪಡೆ ಹೊಂದಿದೆ.

    ನೌಕಾಪಡೆ:
    ಭಾರತ 7 ಸಾವಿರ ಕಿಲೋ ಮೀಟರ್ ಕರಾವಳಿ ತೀರ ಪ್ರದೇಶ ಹೊಂದಿದ್ದರೆ, ಪಾಕಿಸ್ತಾನ ಕೇವಲ 1 ಸಾವಿರ 46 ಕಿಮೀ ಕರಾವಳಿ ತೀರ ಪ್ರದೇಶ ಹೊಂದಿದೆ. ಭಾರತದ ಬಳಿ ಒಂದು ಯುದ್ಧ ವಿಮಾನಗಳನ್ನು ಹೊತ್ಯೊಯಬಲ್ಲ ನೌಕೆ ಹೊಂದಿದ್ದರೆ, 14 ವಿಮಾನನೌಕೆ (ಡೆಸ್ಟ್ರಾಯರ್) ಗಳನ್ನು ಹೊಡೆದುರುಳಿಸಬಲ್ಲ ನೌಕೆಗಳಿವೆ. ಅಲ್ಲದೇ 16 ಜಲಾಂತರ್ಗಾಮಿ ನೌಕೆಗಳು ಹಾಗೂ 13 ಯುದ್ಧ ನೌಕೆ ಮತ್ತು 106 ಕರಾವಳಿ ಯುದ್ಧ ಹಡಗುಗಳು ಇದೆ.

    ಪಾಕಿಸ್ತಾನ 8 ಜಲಾತರ್ಗಾಮಿ ನೌಕೆ ಹಾಗೂ 9 ಯುದ್ಧ ನೌಕೆಗಳಿವೆ. ಕಡಿಮೆ ಕರಾವಳಿ ಪ್ರದೇಶವನ್ನು ಹೊಂದಿರುವ ಕಾರಣ ಪಾಕಿಸ್ತಾನ ನೌಕಾಬಲ ಭಾರತಕ್ಕೆ ಹೋಲಿಸಿದರೆ ಕಡಿಮೆಯಿದೆ.

    ಭಾರತ ನೌಕಾಸೇನೆಯಲ್ಲಿ ವಿಮಾನ ವಾಹಕ ನೌಕೆ ವಿಕ್ರಮಾದಿತ್ಯ ಭಾರತದ ಪ್ರಮುಖ ಶಕ್ತಿ. ಈ ವಿಮಾನ ವಾಹಕ ನೌಕೆ ಯುದ್ಧ ವಿಮಾನಗಳ ಹಾರಾಟವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಈ ವಿಮಾನಗಳಿಗೆ ಇಂಧನವನ್ನು ಇದರಲ್ಲಿ ತುಂಬಿಸಬಹುದು.

    https://www.youtube.com/watch?v=UmBWPjV5k7g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದ ದಾಳಿಗೆ ಪಾಕಿಸ್ತಾನದ ಎಫ್ -16 ವಿಮಾನ ಉಡೀಸ್

    ಭಾರತದ ದಾಳಿಗೆ ಪಾಕಿಸ್ತಾನದ ಎಫ್ -16 ವಿಮಾನ ಉಡೀಸ್

    ಶ್ರೀನಗರ: ಭಾರತದ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರತಿದಾಳಿ ನಡೆಸಲು ನುಗ್ಗಿದ್ದ ಪಾಕಿಸ್ತಾನದ ವಿಮಾನವನ್ನು ಭಾರತ ಹೊಡೆದುರುಳಿಸಿದೆ.

    ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಎಫ್ -16 ವಿಮಾನ ಭಾರತವನ್ನು ಪ್ರವೇಶಿಸಿತ್ತು. ಗಡಿಯನ್ನು ದಾಟಿ 3 ಕಿ.ಮೀ ಪ್ರವೇಶಿಸಿದ ವಿಮಾನವನ್ನು ಭಾರತದ ವಾಯುಸೇನೆ ಹೊಡೆದು ಉರುಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಭಾರತದ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಶ್ರೀನಗರ ಮತ್ತು ಅಮೃತಸರ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ವಿಮಾನಗಳ ಹಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವ ಧರ್ಮಶಾಲಾ, ಡೆಹ್ರಡೂನ್‍ನಲ್ಲಿ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ.

    ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್, ಸಿಯಾಲ್‍ಕೋಟ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಸೈನಿಕರಿಗೆ ಹ್ಯಾಟ್ಸ್ ಆಫ್, ಅವರು ಇಷ್ಟು ಮಾಡಿದ್ರೆ ನಮ್ಮವರು ಅಷ್ಟು ಮಾಡಿದ್ದಾರೆ: ದರ್ಶನ್

    ಸೈನಿಕರಿಗೆ ಹ್ಯಾಟ್ಸ್ ಆಫ್, ಅವರು ಇಷ್ಟು ಮಾಡಿದ್ರೆ ನಮ್ಮವರು ಅಷ್ಟು ಮಾಡಿದ್ದಾರೆ: ದರ್ಶನ್

    ಬೆಂಗಳೂರು: ಪಾಕ್ ಉಗ್ರರ ವಿರುದ್ಧ ಭಾರತ ನಡೆಸಿರುವ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದರ್ಶನ್, “ಸರ್ಜಿಕಲ್ ಸ್ಟ್ರೈಕ್ ಒಂದು ಅಮೆಜಿಂಗ್ ಕೆಲಸ. ನಾನು ಸೈನಿಕರಿಗೆ ಹ್ಯಾಟ್ಸ್ ಆಫ್ ಹೇಳುತ್ತೇನೆ. ಅವರು ಇಷ್ಟು ಮಾಡಿದರು ನಮ್ಮವರು ಅಷ್ಟು ಮಾಡಿದ್ದಾರೆ. ಇನ್ನುಂದೆ ಉಗ್ರಗಾಮಿಗಳು ಮುಂದೆ ಏನು ಮಾಡಬೇಕಾದರೂ ಒಂದು ಸಾರಿ ಯೋಚನೆ ಮಾಡಬೇಕು. ಟಿಟ್ ಫಾರ್ ಟ್ಯಾಟ್ (ದಾಳಿಗೆ ಪ್ರತಿದಾಳಿ), ಎಲ್ಲೇ ಆಗಲಿ ಯಾವುದೇ ಫೀಲ್ಡ್ ಇರಲಿ ಅವರು ಇಷ್ಟು ಮಾಡಿದರೆ, ನಾವು ಅಷ್ಟು ಮಾಡೋದು ಸರಿ” ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.

    ಭಾರತೀಯ ಯೋಧರನ್ನು ಬಲಿಪಡೆದಿದ್ದ ಪಾಕಿಸ್ತಾನದ ವಿರುದ್ಧ ಭಾರತ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಸಿನಿಮಾ ಸ್ಟಾರ್ಸ್ ಸೇರಿದಂತೆ ದೇಶಾದ್ಯಂತ ಭಾರತೀಯ ವಾಯುಸೇನೆಯ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಹೌದು. ಸ್ಯಾಂಡಲ್‍ವುಡ್ ನಟರು ಮಾತ್ರವಲ್ಲದೇ ಬಾಲಿವುಡ್ ನಟರು ಕೂಡ ಸೇನೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ ಧ್ರವಾ ಸರ್ಜಾ ಅವರು, “ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ.. ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ” ಎಂದು ಟ್ವೀಟ್ ಮಾಡಿ ಪಾಕಿಸ್ತಾನದವರಿಗೆ ಭಾರತೀಯರ ಪೊಗರಿನ ಬಗ್ಗೆ ತಿಳಿಸಿಕೊಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರ್ ಐತೆ ಅಂತ ಚೆಕ್ ಮಾಡಾಕ್  ಬರ್ಬೇಡಾ: ಧ್ರುವ ಸರ್ಜಾ

    ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರ್ ಐತೆ ಅಂತ ಚೆಕ್ ಮಾಡಾಕ್ ಬರ್ಬೇಡಾ: ಧ್ರುವ ಸರ್ಜಾ

    ಬೆಂಗಳೂರು: ಭಾರತೀಯ ಯೋಧರನ್ನು ಬಲಿಪಡೆದಿದ್ದ ಪಾಕಿಸ್ತಾನದ ವಿರುದ್ಧ ಭಾರತ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಸಿನಿಮಾ ಸ್ಟಾರ್ಸ್ ಸೇರಿದಂತೆ ದೇಶಾದ್ಯಂತ ಭಾರತೀಯ ವಾಯುಸೇನೆಯ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಹೌದು..ಸ್ಯಾಂಡಲ್‍ವುಡ್ ನಟರು ಮಾತ್ರವಲ್ಲದೇ ಬಾಲಿವುಡ್ ನಟರು ಕೂಡ ಸೇನೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ ಧ್ರವಾ ಸರ್ಜಾ ಅವರು, “ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ..ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ” ಎಂದು ಟ್ವೀಟ್ ಮಾಡಿ ಪಾಕಿಸ್ತಾನದವರಿಗೆ ಭಾರತೀಯರ ಪೊಗರಿನ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

    ನಟ ಗಣೇಶ್ ಅವರು, “ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರ ಕ್ಯಾಂಪಸ್‍ಗಳನ್ನು ನಾಶ ಮಾಡಿದೆ. ನಮ್ಮ ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ನಟಿ ಕಾಜಲ್, “ಪಾಕಿಸ್ತಾನಕ್ಕೆ ಭಾರತ ಹಿಂತಿರುಗಿಸಿ ಉತ್ತರ ಕೊಟ್ಟಿದೆ. ನಮ್ಮ ಧೈರ್ಯವಂತ ಹೀರೋಗಳಾದ ಭಾರತೀಯ ವಾಯುಪಡೆಗೆ ದೊಡ್ಡ ಸೆಲ್ಯೂಟ್” ಎಂದು ಹೇಳಿದ್ದಾರೆ. “ನಮ್ಮ ದೇಶ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟಿದೆ. ಭಾರತೀಯ ವಾಯುಪಡೆಗೆ ಸೆಲ್ಯೂಟ್” ಎಂದು ಜೂ.ಎನ್.ಟಿ.ಆರ್ ಹೇಳಿದ್ದಾರೆ.

    ಭಾರತೀಯ ವಾಯುಪಡೆಯ ಕಾರ್ಯಕ್ಕೆ ಮೆಚ್ಚಿ ನಟ ಅಕ್ಷಯ್ ಕುಮಾರ್, ನಟಿ ಕಾಜಲ್ ಅಗರ್ವಾಲ್, ಮಹೇಶ್ ಬಾಬು, ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv