Tag: Air Bag

  • ಭೀಕರ ಅಪಘಾತವಾದರೂ ಆಡಿ ಕಾರಿನ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ?

    ಭೀಕರ ಅಪಘಾತವಾದರೂ ಆಡಿ ಕಾರಿನ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ?

    ಬೆಂಗಳೂರು: ಕೋರಮಂಗಲದಲ್ಲಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿಯ ಸಾವನ್ನಪ್ಪಿದ್ದು ಆಡಿ ಕಾರಿನ ಏರ್ ಬ್ಯಾಗ್ ಯಾಕೆ ತರೆಯಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ರಭಸಕ್ಕೆ ಆಡಿ ಕ್ಯೂ 3 ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗುದ್ದಿದ ರಭಸಕ್ಕೆ ಏರ್ ಬ್ಯಾಗ್ ಓಪನ್ ಆಗಬೇಕಿತ್ತು. ಆದರೆ ಈ ಅಪಘಾತದ ವೇಳೆ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದನ್ನೂ ಓದಿ : ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಬಲಿ 

    ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರತಿಕ್ರಿಯಿಸಿ, ಆಡಿ ಕಾರು ನೇರವಾಗಿ ಫುಟ್ ಪಾತ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾರು ಕೂಡ ಸೀಟ್ ಬೆಲ್ಟ್ ಹಾಕದ ಹಿನ್ನೆಲೆಯಲ್ಲಿ ಏರ್ ಬ್ಯಾಗ್ ಓಪನ್ ಆಗದ ಕಾರಣ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ನಿರ್ಲಕ್ಷ್ಯದ ಚಾಲನೆ ಘಟನೆ ಕಾರಣವಾಗಿದೆ. ನಿರ್ಲಕ್ಷ್ಯದ ಚಾಲನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂಚಾರಿ ನಿಯಮ ಸಂಪೂರ್ಣವಾಗಿ ಮೇಲ್ನೋಟಕ್ಕೆ ಉಲ್ಲಂಘನೆ ಆಗಿದೆ ಎಂದು ಹೇಳಿದರು.

    ಕೆಎ 03 ಎಂವೈ 6666 ನೋಂದಣಿ ಸಂಖ್ಯೆ ಕಾರು ಡೀಸೆಲ್ ಮಾಡೆಲ್ ಆಗಿದ್ದು  2015ರಲ್ಲಿ ಇಂದಿರಾನಗರದಲ್ಲಿ ನೋಂದಣಿ ಆಗಿತ್ತು. ಸಂಜಿವಿನಿ ಬ್ಲೂ ಮೆಟಲ್ಸ್ ಕಂಪನಿಗೆ ಸೇರಿದ ಕಾರು ಇದಾಗಿದೆ.  ಇದನ್ನೂ ಓದಿ : ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    ಜರ್ಮನಿ ಮೂಲದ ಆಡಿ ಕಂಪನಿ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತದೆ. ಸಂಚಾರದ ಸಮಯದಲ್ಲಿ ಸೀಟ್ ಬೆಲ್ಟ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಸೀಟ್ ಬೆಲ್ಟ್ ಹಾಕದೇ ಸಂಚರಿಸಿದರೆ ದಂಡ ವಿಧಿಸಲಾಗುತ್ತದೆ.

  • 566 ಸ್ವಿಫ್ಟ್, 713 ಡಿಸೈರ್ ಹಿಂಪಡೆದ ಮಾರುತಿ ಕಂಪೆನಿ

    566 ಸ್ವಿಫ್ಟ್, 713 ಡಿಸೈರ್ ಹಿಂಪಡೆದ ಮಾರುತಿ ಕಂಪೆನಿ

    ನವದೆಹಲಿ: ದೇಶದ ನಂಬರ್ ಒನ್ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ತನ್ನ ನೂತನ ಮಾದರಿಯ ಸ್ವಿಫ್ಟ್ ಹಾಗೂ ಡಿಸೈರ್ ನ ಒಟ್ಟು 1,279 ಕಾರುಗಳನ್ನು ಹಿಂಪಡೆದುಕೊಂಡಿದೆ.

    ನೂತನ ಸ್ವಿಫ್ಟ್ ಹಾಗೂ ಡಿಸೈರ್ ಕಾರುಗಳಲ್ಲಿ ಏರ್ ಬ್ಯಾಗ್ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ಕಂಪೆನಿ ತನ್ನ ವೆಬ್‍ಸೈಟ್ ನಲ್ಲಿ ತಿಳಿಸಿದೆ.

    ನೂತನ ಮಾದರಿಯ ಸ್ವಿಫ್ಟ್ ಮಾದರಿಯ 566 ಹಾಗೂ ಡಿಸೈರ್ ಮಾದರಿಯ 713 ವಾಹನಗಳನ್ನು ಹಿಂಪಡೆದುಕೊಂಡಿದೆ. ಅಲ್ಲದೇ ಇದೇ ವರ್ಷ ಮೇ ತಿಂಗಳ 7 ರಿಂದ ಜುಲೈ ತಿಂಗಳ 5 ನೇ ತಾರೀಖಿನವರೆಗೂ ಮಾರಾಟವಾದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ವಾಹನಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನೂ ಓದಿ: ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?

    ಇಂದಿನಿಂದ ನೂತನ ಸ್ವಿಫ್ಟ್ ಹಾಗೂ ಡಿಸೈರ್ ಮಾದರಿಯ ಗ್ರಾಹಕರು ಮಾರುತಿ ಸುಜುಕಿಯ ಎಲ್ಲಾ ಡೀಲರ್ ಗಳ ಬಳಿ ತಮ್ಮ ವಾಹನಗಳನ್ನು ನೀಡಿ ತಾಂತ್ರಿಕ ದೋಷಗಳನ್ನು ಉಚಿತವಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

    ಈ ಹಿಂದೆ ಮಾರುತಿ ಕಂಪೆನಿ ತನ್ನ ನೂತನ ಸ್ವಿಫ್ಟ್ ಹಾಗೂ ಬಲೆನೊ ಮಾದರಿಗಳಲ್ಲಿ ಬ್ರೇಕ್ ಗೆ ಸಂಬಂಧಿತ ತಾಂತ್ರಿಕ ದೋಷದಿಂದಾಗಿ ಸುಮಾರು 52,686 ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿ ಕೊಟ್ಟಿತ್ತು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಕಂಪೆನಿಯು ಉತ್ಪಾದನಾ ವೇಳೆ ಉಂಟಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಯೋಜನೆಯನ್ನು 2012ರ ಜುಲೈ ತಿಂಗಳಿನಿಂದ ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಕಂಪೆನಿಯು ವಾಹನಗಳನ್ನು ಹಿಂಪಡೆದು ಉಚಿತವಾಗಿ ಸರಿಪಡಿಸಿಕೊಡುತ್ತಾ ಬಂದಿದೆ.