Tag: Air

  • ರಾಸಾಯನಿಕ ಮಿಶ್ರಿತ ಗಾಳಿ ಸೇವಿಸಿ 6 ವಿದ್ಯಾರ್ಥಿಗಳು ಅಸ್ವಸ್ಥ

    ರಾಸಾಯನಿಕ ಮಿಶ್ರಿತ ಗಾಳಿ ಸೇವಿಸಿ 6 ವಿದ್ಯಾರ್ಥಿಗಳು ಅಸ್ವಸ್ಥ

    ಮಡಿಕೇರಿ: ಇಂದು ಬೆಳ್ಳಂಬೆಳಗ್ಗೆ ಅರ್ಧ ಕೊಡಗು ಆತಂಕದ ಕೂಪಕ್ಕೆ ತಳ್ಳಲ್ಪಟ್ಟಿತ್ತು. ರಸ್ತೆಗಿಳಿಯುವುಕ್ಕೆ ಹೆದರಿ ಜನ ಮನೆಯೊಳಗೆ ಕುಳಿತುಬಿಟ್ಟಿದ್ದರು. ರಸ್ತೆಗಿಳಿದವರು ಉಸಿರಾಡಲು ಪರದಾಡಿದರು. ಆ ಒಂದು ಲಾರಿ ಹೋದ ದಾರಿಯೆಲ್ಲಾ ವಿಷಯುಕ್ತವಾಗಿತ್ತು. 60 ಕಿಲೋ ಮೀಟರ್ ರಾಜ್ಯ ಹೆದ್ದಾರಿ ಉದ್ದಕ್ಕೂ ಸೋರಿಕೆಯಾದ ಆ ದ್ರವ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ.

    ಹೌದು ನೆಮ್ಮದಿಯಾಗಿ ಉಸಿರಾಡುತ್ತಿದ್ದ ಕೊಡಗಿನ ಮಂದಿ ಇಂದು ಬೆಳಗ್ಗೆ ಶಾಕ್‍ಗೆ ಒಳಗಾಗಿದ್ದರು. ಆ ಮಾರ್ಗದಲ್ಲಿ ಹಾದು ಹೋದ ಒಂದು ಲಾರಿಯಿಂದ 60 ಕಿಲೋ ಮೀಟರ್ ಉದ್ದಕ್ಕೂ ಕೆಂಪುಬಣ್ಣದ ದ್ರವ ಸೋರಿಕೆಯಾಗಿತ್ತು. ಆ ರಸ್ತೆಗೆ ಇಳಿದವರಿಗೆ ಉಸಿರಾಡಲು ಆಗಲಿಲ್ಲ. ಉಸಿರು ಎಳೆದುಕೊಂಡರೆ ಕೆಮ್ಮು, ಎದೆ ಉರಿ, ತಲೆನೋವು ಕಾಡಿತ್ತು. ಕಣ್ಣು ಬಿಟ್ಟರೆ ಉರಿ ಉರಿಯ ಅನುಭವವಾಗುತ್ತಿತ್ತು. ಏನಾಗುತ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಶಾಲೆಗೆ ಹೋಗುವ 6 ಮಕ್ಕಳು ಅಸ್ವಸ್ಥರಾಗಿದ್ದರು. ಇದು ಅರ್ಧ ಕೊಡಗಿನಲ್ಲಿ ಆತಂಕ ಸೃಷ್ಟಿಸಿತ್ತು. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥ

    ಕೊಡಗಿನ ಕುಶಾಲನಗರದಿಂದ ಸಿದ್ದಾಪುರ ಮಾರ್ಗವಾಗಿ ಕೇರಳ ಗಡಿಯ ಮಾಕುಟ್ಟ ಚೆಕ್‍ಪೋಸ್ಟ್ ಮೂಲಕ ಕೇರಳಕ್ಕೆ ಹೋಗುತ್ತಿದ್ದ ಲಾರಿಯಿಂದ ಸೋರಿಕೆಯಾದ ದ್ರವವೇ ಇಷ್ಟೊಂದು ಅನಾಹುತ ಸೃಷ್ಟಿಸಿದ್ದು. ಮೇಲ್ನೋಟಕ್ಕೆ ಮೆಣಸಿನಕಾಯಿ ಸಾಸ್ ಸೋರಿಕೆ ಅಂತ ಹೇಳಲಾಗುತ್ತಿದೆ. ಆದರೆ ಸಾಸ್ ಸೋರಿಕೆಯಿಂದ ಹೀಗಾಗುತ್ತಾ ಎಂಬ ಅನುಮಾನ ಮೂಡಿದ್ದು, ಈಗಾಗಲೇ ಲಾರಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಲಾರಿಯಲ್ಲಿ ಇದ್ದ ದ್ರವವನ್ನು ಲ್ಯಾಬ್‍ಗೆ ಕಳುಹಿಸಿದ್ದಾರೆ.

    ಸದ್ಯ ಅಸ್ವಸ್ಥಗೊಂಡಿರುವ ಸಿದ್ದಾಪುರ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖುದ್ದು ಡಿಹೆಚ್‍ಓ ವೆಂಕಟೇಶ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯದ ತಪಾಸಣೆಯನ್ನು ಸ್ವತಃ ಅವರೇ ವಿಚಾರಿಸಿದ್ದಾರೆ. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

    ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ದ್ರವ ಸೋರಿಕೆಯಾದ ಮಾರ್ಗದುದ್ದಕ್ಕೂ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡುತ್ತಿದ್ದು, ಆರೋಗ್ಯದಲ್ಲಿ ಏರುಪೇರಾದವರ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಯಾವ ಕೆಮಿಕಲ್ ಅಂತ ಹೇಳಬಹುದು ಎಂದು ತಿಳಿಸಿದ್ದಾರೆ.

    ಸದ್ಯ ಮಾಕುಟ್ಟ ಚೆಕ್‍ಪೋಸ್ಟ್‌ನಲ್ಲಿ ದ್ರವ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ಗಾಳಿ ತುಂಬುವಾಗ ಬುಲ್ಡೋಜರ್ ಟೈರ್ ಬ್ಲಾಸ್ಟ್ – ಮೇಲಕ್ಕೆ ಹಾರಿದ ಇಬ್ಬರು ಸಾವು

    ಗಾಳಿ ತುಂಬುವಾಗ ಬುಲ್ಡೋಜರ್ ಟೈರ್ ಬ್ಲಾಸ್ಟ್ – ಮೇಲಕ್ಕೆ ಹಾರಿದ ಇಬ್ಬರು ಸಾವು

    ರಾಯ್ಪುರ: ಬುಲ್ಡೋಜರ್ ವಾಹನದ ಟೈರ್‌ಗೆ ಪಂಪ್‍ನಿಂದ ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢದ ರಾಯ್ಪುರ ಜಿಲ್ಲೆಯ ವರ್ಕ್‍ಶಾಪ್‍ವೊಂದರಲ್ಲಿ ನಡೆದಿದೆ.

    ಮೇ 3ರಂದು ರಾಯ್‍ಪುರ ಸಿಲ್ತಾರಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೊಡ್ಡ ಟೈರ್‌ವೊಂದಕ್ಕೆ ಕಾರ್ಮಿಕನೋರ್ವ ಗಾಳಿ ತುಂಬುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ನಂತರ ಮತ್ತೋರ್ವ ವ್ಯಕ್ತಿ ಬಂದು ಗಾಳಿಯ ಒತ್ತಡವನ್ನು ಪರೀಕ್ಷಿಸಲು ಟೈರ್ ಅನ್ನು ಒಂದೆರಡು ಬಾರಿ ಒತ್ತಿದಾಗ ಟೈರ್ ಸ್ಫೋಟಗೊಂಡಿದೆ. ಇದನ್ನೂ ಓದಿ: ಅಶ್ವಥ್ ನಾರಾಯಣಗೂ PSI ಅಕ್ರಮಕ್ಕೂ ಸಂಬಂಧವಿಲ್ಲ: ಮುನಿರತ್ನ

    ಘಟನೆಯಲ್ಲಿ ಟೈರ್ ಸ್ಫೋಟಗೊಂಡಾಗ ಇಬ್ಬರು ಕಾರ್ಮಿಕರು ಗಾಳಿಯಿಂದಾಗಿ ಮೇಲಕ್ಕೆ ಹಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಮತ್ತು ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

  • ದೆಹಲಿಯಲ್ಲಿ ಮುಂದುವರಿದ ವಾಯುಮಾಲಿನ್ಯ – ವಾಯು ಸೂಚ್ಯಂಕ 362 ಏರಿಕೆ

    ದೆಹಲಿಯಲ್ಲಿ ಮುಂದುವರಿದ ವಾಯುಮಾಲಿನ್ಯ – ವಾಯು ಸೂಚ್ಯಂಕ 362 ಏರಿಕೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೆಲದಿನಗಳಿಂದ ವಾಯು ಮಾಲಿನ್ಯ ಹೆಚ್ಚಳವಾಗುತ್ತಿದೆ. ಇಂದು ಬೆಳಗ್ಗೆ ದೆಹಲಿಯ ವಾಯು ಸೂಚ್ಯಂಕ ಪರೀಕ್ಷಿಸಿದಾಗ 362 ಕಂಡುಬಂದಿದೆ.

    ದೆಹಲಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಈ ಗಾಳಿ ಉಸಿರಾಟಕ್ಕೆ ಅನರ್ಹವಾಗಿದೆ. ಇಂದು ಬೆಳಿಗ್ಗೆ ದೆಹಲಿ ವಾಯು ಸೂಚ್ಯಂಕ 362 ಕಂಡು ಬಂದಿದೆ. ವಾಯು ಸೂಚ್ಯಂಕ 200ಕ್ಕಿಂತ ಹೆಚ್ಚು ಇದ್ದರೆ ಉಸಿರಾಡಲು ಅನರ್ಹವಾಗಿರುತ್ತದೆ. ಹಾಗಾಗಿ ಇದೀಗ ದೆಹಲಿ ಜನ ವಾಯು ಮಾಲಿನ್ಯದಿಂದಾಗಿ ಮನೆಯಿಂದ ಹೊರ ಬರದಿರುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮಾಲಿನ್ಯ ತಡೆಗೆ ಕಠಿಣ ಕ್ರಮ ಕೈಗೊಂಡ ದೆಹಲಿ

    ವಾಯು ಮಾಲಿನ್ಯ ತಡೆಗಾಗಿ ನಿನ್ನೆ ಕೇಂದ್ರ ಸರ್ಕಾರ ನೇತೃತ್ವದಲ್ಲಿ ದೆಹಲಿ ಸುತ್ತಮುತ್ತಲಿನ 4 ರಾಜ್ಯಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ವಾಯು ಗುಣಮಟ್ಟ ಆಯೋಗದ ಸೂಚನೆಯಂತೆ ದೆಹಲಿ ಹಾಗೂ ಸುತ್ತಮುತ್ತಲಿನ ವಲಯದಲ್ಲಿ ಮಾಲಿನ್ಯಕಾರಕ ಇಂಧನ ಬಳಕೆ ಉದ್ದಿಮೆಗಳು ಕಾರ್ಯ ನಿರ್ವಹಿಸಕೂಡದು ಎನ್ನಲಾಗಿದೆ. 11 ಉಷ್ಣವಿದ್ಯುತ್ ಸ್ಥಾವರಗಳ ಪೈಕಿ 5 ಮಾತ್ರ ನವೆಂಬರ್ 30 ರವರೆಗೆ ಕೆಲಸ ಮಾಡಬೇಕು. ನವೆಂಬರ್ 31 ರವರೆಗೆ ಅಗತ್ಯವಸ್ತು ಸಾಗಾಣೆ ಟ್ರಕ್ ಹೊರತುಪಡಿಸಿ ಉಳಿದ ಟ್ರಕ್‍ಗಳ ಪ್ರವೇಶ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಇದರೊಂದಿಗೆ 10 ವರ್ಷಕ್ಕಿಂತ ಹಳೆಯ ಪೆಟ್ರೋಲ್ 15 ವರ್ಷಕ್ಕಿಂತ ಹಳೆ ಡೀಸೆಲ್ ವಾಹನ ನವೆಂಬರ್ 21 ರವರೆಗೆ ಸಂಚಾರ ಮಾಡಬಾರದು. ನವೆಂಬರ್ 21 ರವರೆಗೆ ವರ್ಕ್ ಫ್ರಂ ಹೋಮ್‍ಗೆ ಆದ್ಯತೆ ಕೊಡಿ ಎಂದು ಸೂಚಿಸಿದ್ದು, ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ನೀಡಲಾಗಿದೆ.

  • ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ

    ಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ

    ಡೆಹರೂಡಾನ್: ಬೈರಗಿ ಕ್ಯಾಂಪ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಭಾನುವಾರ ಹರಿದ್ವಾರದ ಕುಂಭ ಮೇಳದಲ್ಲಿ ಹಲವಾರು ಗುಡಿಸಲುಗಳು ಸುಟ್ಟು ಕರಕಲಾಗಿವೆ.

    ಜೋರಾಗಿ ಗಾಳಿ ಬೀಸಿದ್ದರಿಂದ ಬೆಂಕಿಯು ವೇಗವಾಗಿ ಹರಡಿ ಹಲವಾರು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಬೆಂಕಿ ನಂದಿಸಲು ಕೂಡಲೇ ಅಗ್ನಿ ಶಾಮಕ ದಳ ವಾಹನವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ವೃತ್ತ ಅಧಿಕಾರಿ ಅಭಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಸದ್ಯ ಘಟನೆ ವೇಳೆ ಅದೃಷ್ಟವಶತ್ ಪ್ರಾಣ ಹಾನಿಯಾಗಿಲ್ಲ. ಅಲ್ಲದೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 10 ದಿನಗಳ ಹಿಂದೆ ಕೂಡ ಬೈರಗಿ ಕ್ಯಾಂಪ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಹಲವಾರು ಗುಡಿಸಲುಗಳು ಸುಟ್ಟು ಹೋಗಿದ್ದವು. ಇದೀಗ ಮತ್ತೆ ಘಟನೆ ಮರುಕಳಿಸಿದೆ.

  • ಗುದನಾಳದಿಂದ ಗಾಳಿ ಪಂಪ್ ಮಾಡಿದ ಸಹೋದ್ಯೋಗಿಗಳು – ವ್ಯಕ್ತಿ ದಾರುಣ ಸಾವು

    ಗುದನಾಳದಿಂದ ಗಾಳಿ ಪಂಪ್ ಮಾಡಿದ ಸಹೋದ್ಯೋಗಿಗಳು – ವ್ಯಕ್ತಿ ದಾರುಣ ಸಾವು

    ಭೋಪಾಲ್: ವಿವಾದವೊಂದಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳು ವ್ಯಕ್ತಿಯ ಗುದನಾಳದಿಂದ ಗಾಳಿ ಪಂಪ್ ಮಾಡಿದ ಪರಿಣಾಮ ಆತ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

    ಈ ಘಟನೆ 45 ದಿನಗಳ ಹಿಂದೆ ನಡೆದಿದ್ದು, ಶನಿವಾರ ವ್ಯಕ್ತಿ ಮೃತಪಟ್ಟ ಬಳಿಕ ಸಾವಿನ ರಹಸ್ಯ ಬಯಲಾಗಿದೆ ಎಂದು ಶಿವಪುರಿ ಎಸ್‍ಪಿ ರಾಜೇಂದ್ರ ಸಿಂಗ್ ಚಂಡೆಲ್ ತಿಳಿಸಿದ್ದಾರೆ.

    ಘಟನೆಯ ಕುರಿತು ನಮಗೆ ತಿಳಿದಾಗ ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪ್ರಕರಣ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಎಸ್‍ಪಿ ಹೇಳಿದ್ದಾರೆ. ಈ ದುರ್ಘಟನೆ ನವೆಂಬರ್ 8ರಂದು ನಡೆದಿರುವುದಾಗಿ ಮೃತ ವ್ಯಕ್ತಿಯ ಸಹೋದರ ಧನಿರಾಮ್ ಧಕಾಡ್ ತಿಳಿಸಿದ್ದಾರೆ.

    ಘಟನೆ ನಡೆದ ದಿನ ಸಹೋದರ ಎಂದಿನಂತೆ ಬೆಳಗ್ಗೆ ಆಫೀಸಿಗೆ ತೆರಳಿದ್ದನು. ಆದರೆ ಮಧ್ಯಾಹ್ನದ ಬಳಿಕ ಸಹೋದರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು. ಕೂಡಲೇ ನಾನು ಸಹೋದರನ ಬಳಿ ತೆರಳಿದೆ. ಆಗ ಆತ, ನನಗೆ ಗ್ಯಾಸ್ಟ್ರಿಕ್ ನೋವು ಅಲ್ಲ, ಸಹೋದ್ಯೋಗಿಗಳು ನನ್ನ ಗುದನಾಳದಿಂದ ಕಂಪ್ರೆಸ್ಸರ್ ಮೂಲಕ ಗಾಳಿ ಪಂಪ್ ಮಾಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ಘಟನೆಯ ತೀವ್ರತೆ ಅರಿತ ಕೂಡಲೇ ಆತನನ್ನು ಅನೇಕ ಆಸ್ಪತ್ರೆಗೆ ಕರೆದೊಯ್ದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದನು ಎಂದು ಧಕಾಡ್ ವಿವರಿಸಿದರು.

  • 11 ದಿನ ಗಾಳಿ ನೀರು ಇಲ್ಲದೇ ಅನುಷ್ಠಾನಕ್ಕೆ ಕುಳಿತಿದ್ದ ಸ್ವಾಮೀಜಿ ಇಂದು ಹೊರಕ್ಕೆ

    11 ದಿನ ಗಾಳಿ ನೀರು ಇಲ್ಲದೇ ಅನುಷ್ಠಾನಕ್ಕೆ ಕುಳಿತಿದ್ದ ಸ್ವಾಮೀಜಿ ಇಂದು ಹೊರಕ್ಕೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಕಳೆದ 11 ದಿನಗಳಿಂದ ಗಾಳಿ, ನೀರು ಇಲ್ಲದೆ ಅನುಷ್ಠಾನಕ್ಕೆ ಕುಳಿತಿದ್ದರು. ಇಂದಿಗೆ 11 ದಿನಗಳು ಮುಗಿದಿದ್ದು, ಇಂದು ಹೊರ ಬಂದಿದ್ದಾರೆ.

    ಗದಗ ಜಿಲ್ಲೆಯ ಅಂತುರು ಬಂತೂರಿನ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ 21 ದಿನಗಳ ಹಿಂದೆ ಅಮರೇಶ್ವರಕ್ಕೆ ಬಂದು ಗಡಿಗೆ ಬಾವಿ ಪ್ರದೇಶದ ಸಮಾಧಿಯೊಂದರಲ್ಲಿ ಮೌನ ಅನುಷ್ಠಾನ ನಡೆಸುತ್ತಿದ್ದರು. ಗಾಳಿ, ಬೆಳಕು ಮತ್ತು ಆಹಾರವಿಲ್ಲದೆ 11 ದಿನಗಳ ಕಾಲ ಅನುಷ್ಠಾನ ಕುಳಿತಿದ್ದರು. ಇಂದು ಸಮಾಧಿಯಿಂದ ಮೇಲೆ ಬರುವುದಾಗಿ ತಿಳಿಸಿದ್ದರಿಂದ ಸಮಾಧಿಯ ಮುಂದೆ, ಪೂಜೆ, ಯಜ್ಞ ಕಾರ್ಯಗಳು ನಡೆಸಲಾಗಿತ್ತು.

    ಅಮರೇಶ್ವರ ಮಠದ ಗಜದಂಡ ಸ್ವಾಮೀಜಿ ಸ್ಥಳದಲ್ಲಿದ್ದು, ಧಾರ್ಮಿಕ ವಿಧಿ ವಿಧಾನಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅನುಷ್ಠಾನಕ್ಕೆ ಕುಳಿತ ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಮೇಲೆ ಬರುವುದನ್ನು ಕಣ್ತುಂಬಿಕೊಳ್ಳಲು ಜನ ತಂಡೋಪತಂಡವಾಗಿ ಅಮರೇಶ್ವರಕ್ಕೆ ಆಗಮಿಸಿದ್ದರು. ದೇವಸ್ಥಾನ ಈಗ ಕುತೂಹಲದ ಕೇಂದ್ರವಾಗಿದೆ. ಅಲ್ಲದೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದಲ್ಲಿ ಈ ರೀತಿಯ ತಪೋನುಷ್ಠಾನಕ್ಕೆ ಅವಕಾಶ ನೀಡಿದ್ದು ಸಹ ಚರ್ಚೆಗೆ ಕಾರಣವಾಗಿದೆ.

    ಈಗ ಹೊರ ಬಂದಿರುವ ಸ್ವಾಮೀಜಿ ಮಾತನಾಡಿ, ನಾನು ಇದೇ ಮೊದಲೇನಲ್ಲ ಈ ರೀತಿ ಅನುಷ್ಠಾನಕ್ಕೆ ಕುಳಿತಿರುವುದು ಇದಕ್ಕೂ ಮುನ್ನ 6 ಬಾರಿ ಈ ರೀತಿ ಅನುಷ್ಠಾನಕ್ಕೆ ಕುಳಿತಿದ್ದೇನೆ. ಆದರೆ ನಾನು ಮಾಡಿದ ಅನುಷ್ಠಾನಗಳಲ್ಲಿ ಇದು ಅತ್ಯಂತ ಕಠಿಣವಾಗಿತ್ತು. ಇಲ್ಲಿ ಆಧಿಶೇಷನ ಅನುಗ್ರಹವಿದೆ. ಆತನ ಅನುಗ್ರಹದಿಂದಲೇ ನಾನು ಇಂದು ಅನುಷ್ಠಾನ ಮುಗಿಸಿ ಹೊರಗೆ ಬಂದೆ ಎಂದು ಹೇಳಿದ್ದಾರೆ.

  • ಐಪಿಎಲ್ ಫೈನಲ್ ಹೈದರಾಬಾದ್‍ಗೆ ಶಿಫ್ಟ್ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಹಾನಿ

    ಐಪಿಎಲ್ ಫೈನಲ್ ಹೈದರಾಬಾದ್‍ಗೆ ಶಿಫ್ಟ್ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಹಾನಿ

    ಹೈದರಾಬಾದ್: ಐಪಿಎಲ್ 2019ನೇ ಆವೃತ್ತಿಯ ಫೈನಲ್ ಪಂದ್ಯವನ್ನು ಆಯೋಜಿಸಲು ಅವಕಾಶ ಪಡೆದ ಬೆನ್ನಲ್ಲೇ ಆಂಧ್ರಪ್ರದೇಶ್ ಕ್ರಿಕೆಟ್ ಸಂಸ್ಥೆಗೆ ಕಹಿ ಅನುಭವ ಆಗಿದ್ದು, ರಭಸದಿಂದ ಬೀಸಿದ ಗಾಳಿಯಿಂದಾಗಿ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಹಾನಿಯಾಗಿದೆ.

    ಹೈದರಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಸಂಜೆ ಬೀಸಿದ ಗಾಳಿಯಿಂದ ಕ್ರೀಡಾಂಗಣದಲ್ಲಿ ನೆರಳಿನ ವ್ಯವಸ್ಥೆಗೆ ಹಾಕಿದ್ದ ಶೀಟ್‍ಗಳು ಹಾರಿ ಹೋಗಿದೆ. ಸದ್ಯ ಕ್ರೀಡಾಂಗಣದ ಅಧಿಕಾರಿಗಳಿಗೆ 2 ಸಮಸ್ಯೆಗಳು ಎದುರಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆ ಮುಂದುವರಿಯುವ ಸೂಚನೆ ಸಿಕ್ಕಿದ್ದರಿಂದ ಕ್ರೀಡಾಂಗಣದಲ್ಲಿ ಮತ್ತೆ ಹಾನಿಯಾಗದಂತೆ ತಡೆಯುವುದು ಹಾಗೂ ಹಾನಿಯಾಗಿರುವುದನ್ನು ನಿಗದಿತ ಅವಧಿಯ ಒಳಗಡೆ ಸರಿಪಡಿಸುವ ಕಾರ್ಯ ನಡೆಸಬೇಕಿದೆ.

    ಇತ್ತ ಏಪ್ರಿಲ್ 29 ರಂದು ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯ ನಡೆಯಲಿದ್ದು, ಮೇ 12 ರಂದು ಫೈನಲ್ ಪಂದ್ಯ ನಡೆಯಲಿದೆ. ಪರಿಣಾಮ ಕ್ರೀಡಾಂಗಣದ ಅಧಿಕಾರಿಗಳಿಗೆ ಪುನರ್ ವ್ಯವಸ್ತೆ ಕಲ್ಪಿಸಲು ಕಡಿಮೆ ಅವಧಿ ಸಿಕ್ಕಿದೆ.

    ಸೋಮವಾರ ಬಿಸಿಸಿಐ ಫೈನಲ್ ಪಂದ್ಯವನ್ನು ಚೆನ್ನೈ ಬದಲಾಗಿ ಹೈದರಾಬಾದ್‍ಗೆ ಶಿಫ್ಟ್ ಮಾಡಿತ್ತು. ಚಿದಂಬರಂ ಸ್ಟೇಡಿಯಂನಲ್ಲಿರುವ ಮೂರು ಕಡೆ ಪ್ರೇಕ್ಷಕರ ಸ್ಟ್ಯಾಂಡ್ ಗಳಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಪರಿಣಾಮ ಬಿಸಿಸಿಐ ಅನಿವಾರ್ಯವಾಗಿ ಈ ಬಾರಿ ಫೈನಲ್ ಪಂದ್ಯವನ್ನು ಹೈದರಾಬಾದಿಗೆ ಶಿಫ್ಟ್ ಮಾಡಿತ್ತು.