Tag: aindritha ray

  • ಏಳು ವರ್ಷಗಳ ನಂತರ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯನಿಗಾಗಿ ಬಂದ ಶುಭ್ರಾ ಅಯ್ಯಪ್ಪ

    ಏಳು ವರ್ಷಗಳ ನಂತರ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯನಿಗಾಗಿ ಬಂದ ಶುಭ್ರಾ ಅಯ್ಯಪ್ಪ

    ರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಶುಭ್ರ ಅಯ್ಯಪ್ಪ (Shubhra Ayyappa). ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ನಂತರ ಮತ್ತೆ ಇವರು ಯಾವ ಸಿನಿಮಾಗಳಲ್ಲೂ ನಟಿಸಿರಲಿಲ್ಲ. ಇದೀಗ ಏಳು ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಎರಡೆರಡೂ ಸಿನಿಮಾಗಳ ಮೂಲಕ ಎನ್ನುವುದು ಮತ್ತೊಂದು ವಿಶೇಷ.

    ಈ ಹಿಂದೆ ಶುಭ್ರ ಅಯ್ಯಪ್ಪ ಅವರು ರಾಮನ ಅವತಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ನಂತರ ಅದು ನಿಜವೂ ಆಯಿತು. ಇದೀಗ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ (Thimmaiah and Thimmaiah) ಸಿನಿಮಾದಲ್ಲಿ ನಟಿಸಲಿದ್ದಾರೆ. ಸಂಜಯ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ವಿಶೇಷ ಅಂದರೆ, ಅನಂತ್ ನಾಗ್‌ (Ananth Nag) ಮತ್ತು ದಿಗಂತ್ (Digant) ಕಾಂಬಿನೇಷನ್ ನ ಸಿನಿಮಾ ಇದಾಗಿದೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್

    ತಾತ ಮತ್ತು ಮೊಮ್ಮಗನ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿ ಬರುತ್ತಿದ್ದು, ಅನಂತ್ ನಾಗ್ ತಾತನಾಗಿ, ದಿಗಂತ್ ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಐಂದ್ರಿತಾ ರೇ (Aindritha Ray) ಮಾಡಿದರೆ, ಮತ್ತೊಂದು ಪಾತ್ರವನ್ನು ಶುಭ್ರಾ ಅಯ್ಯಪ್ಪ ನಿರ್ವಹಿಸುತ್ತಿದ್ದಾರೆ.

    ಇದೊಂದು ತಾತ ಮತ್ತು ಮೊಮ್ಮಗನ ನಡುವಿನ ಕಥೆಯಾಗಿದ್ದು, ಮೂವತ್ತು ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡುವುದಿಲ್ಲ. ಯಾವುದೇ ಒಂದು ಸನ್ನಿವೇಶದಲ್ಲಿ ಇಬ್ಬರೂ ಮೂರು ತಿಂಗಳ ಕಾಲ ಒಟ್ಟಿಗೆ ಇರುವಂತಹ ಸನ್ನಿವೇಶ ಎದುರಾಗುತ್ತದೆ. ಆ ಮೂರು ತಿಂಗಳು ಹೇಗೆ ಕಳೆಯುತ್ತಾರೆ ಎನ್ನುವುದೇ ಸಿನಿಮಾ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಮಿಮಿಕ್ರಿ ಗೋಪಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್‌ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ನಿನ್ನೆ ರಾತ್ರಿ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಿದ ಬೆನ್ನಲ್ಲೇ ನಟಿ ಐಂದ್ರಿತಾ ರೇ ಅಭಿಮಾನಿಗಳಿಗೆ, ಚಿತ್ರರಂಗದ ಸ್ನೇಹಿತರಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಕುಟುಂಬದ ಜತೆ ಗೋವಾ ಟ್ರಿಪ್‌ಗೆ ಹೋಗಿದ್ದ ನಟ ದಿಗಂತ್ ಸೊಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೀಗ ಆರೋಗ್ಯದಲ್ಲಿ ನಟ ದಿಗಂತ್ ಸ್ಥಿರವಿರುವ ಕಾರಣ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಇದೀಗ ದಿಗಂತ್ ಆರೋಗ್ಯದ ಅಪ್‌ಡೇಟ್ ಕೊಡುವುದರ ಜತೆಗೆ ಅಭಿಮಾನಿಗಳಿಗೆ, ಹಿತೈಷಿಗಳಿಗೆ ನಟಿ ಐಂದ್ರಿತಾ ರೇ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಆರೋಗ್ಯದಲ್ಲಿ ಚೇತರಿಕೆ, ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ನಿನ್ನೆಯಷ್ಟೇ ದಿಗಂತ್ ಶಸ್ತ್ರ ಚಿಕಿತ್ಸೆ ನಡೆದಿದೆ. ಆರೋಗ್ಯದಲ್ಲಿ ಚೇತರಿಕೆಯಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಮತ್ತಷ್ಟು ರಿಕವರಿ ಆಗುವ ಹಾದಿಯಲ್ಲಿದ್ದಾರೆ. ಈ ವೇಳೆ ನಮ್ಮ ಅಭಿಮಾನಿಗಳಿಗೆ, ಮಾಧ್ಯಮ ಸ್ನೇಹಿತರಿಗೆ ಮತ್ತು ಚಿತ್ರರಂಗದ ಹಿತೈಷಿಗಳಿಗೆ ನಿಮ್ಮ ಹಾರೈಕೆಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇನ್ನು ದಿಗಂತ್ ಕೂಡ ಆದಷ್ಟು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

    Live Tv