Tag: AIMIM

  • ಬಿಜೆಪಿಗೆ ತಾಕತ್ತಿದ್ದರೆ ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಿ – ಓವೈಸಿ ಸವಾಲು

    ಬಿಜೆಪಿಗೆ ತಾಕತ್ತಿದ್ದರೆ ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಿ – ಓವೈಸಿ ಸವಾಲು

    ಹೈದರಾಬಾದ್: ಬಿಜೆಪಿಗೆ (BJP) ತಾಕತ್ತಿದ್ದರೆ ಚೀನಾದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವಂತೆ ಎಐಎಂಐಎಂ (AIMIM) ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಸವಾಲು ಹಾಕಿದ್ದಾರೆ. ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ಅವರ ಸರ್ಜಿಕಲ್ ಸ್ಟ್ರೈಕ್ (Surgical Strike) ಹೇಳಿಕೆಗೆ ಓವೈಸಿ ಟಾಂಗ್ ಕೊಟ್ಟಿದ್ದಾರೆ.

    ಸಂಗಾರೆಡ್ಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡನ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮದೇ ದೇಶದ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಅವರು ಹೇಳುತ್ತಾರೆ. ಧೈರ್ಯವಿದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಂ ಖಾಲಿ ಮಾಡಿಸಿದ್ದ ಅಧಿಕಾರಿಗೆ ಬಿತ್ತು 53 ಸಾವಿರ ದಂಡ!

    2020ರ ಹೈದರಾಬಾದ್ (Hyderabad) ಮುನ್ಸಿಪಲ್ ಚುನಾವಣೆಯ (Municipal Election) ವೇಳೆ ಬಂಡಿ ಸಂಜಯ್ ಕುಮಾರ್ ಅವರು, ಚುನಾವಣೆಯಲ್ಲಿ ಪಾಕಿಸ್ತಾನ (Pakistan), ಅಫ್ಘಾನಿಸ್ತಾನ ಅಥವಾ ರೋಹಿಂಗ್ಯಾ (Rohingya) ಸಮುದಾಯದ ಮತದಾರರನ್ನು ಒಳಗೊಂಡಿರಬಾರದು. ಒಮ್ಮೆ ನಾವು ಗೆದ್ದರೆ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ ಎಂದಿದ್ದರು. ಇದಕ್ಕೆ ಓವೈಸಿ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, ರಾಜ್ಯದ ದೇವಸ್ಥಾನಗಳಿಗೆ ಕೋಟ್ಯಂತರ ರೂ. ಮಂಜೂರಾಗಿದೆ. ಅದರ ಸ್ಟೇರಿಂಗ್ ನನ್ನ ಕೈಯಲ್ಲಿದೆ ಎಂದು ಅಮಿತ್ ಶಾ ಹೇಳುತ್ತಾರೆ. ಮತ್ಯಾಕೆ ಈ ಬಗ್ಗೆ ಅವರು ಚಿಂತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

  • ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

    ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ RJD ವಿರುದ್ಧ ಓವೈಸಿ ವಾಗ್ದಾಳಿ

    ನವದೆಹಲಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ರಾಷ್ಟ್ರೀಯ ಜನತಾ ದಳ (RJD) ವಿರುದ್ಧ ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ವಾಗ್ದಾಳಿ ನಡೆಸಿದ್ದಾರೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿಯವರಿಗೆ ಯಾವುದೇ ಸ್ಪಷ್ಟ ನಿಲುವು ಇಲ್ಲ. ಯಾಕೆ ಅವರು ಸಂಸತ್ ಭವನ (New Parliament) ವನ್ನು ಶವಪೆಟ್ಟಿಗೆಗೆ ಹೋಲಿಸಬೇಕಿತ್ತು..?. ಬೇರೆ ಯಾವುದಾದರೂ ಉದಾಹರಣೆಯನ್ನು ನೀಡಬಹುದಿತ್ತು. ಇದರಲ್ಲೂ ಕೆಲವು ಕೋನವನ್ನು ತರಲಾಗಿದೆ. ಕೆಲವೊಮ್ಮೆ ಅವರು ಜಾತ್ಯತೀತವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

    ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರೆ ಉತ್ತಮವಾಗಿತ್ತು. ಹಳೆಯ ಸಂಸತ್ ಕಟ್ಟಡಕ್ಕೆ ದೆಹಲಿ ಅಗ್ನಿಶಾಮಕ ದಳದ ಅನುಮತಿಯೂ ಇರಲಿಲ್ಲ. ಆರ್ ಜೆಡಿಯವರು ಸಂಸತ್ತನ್ನು ಶವಪೆಟ್ಟಿಗೆ ಎಂದು ಏಕೆ ಕರೆಯುತ್ತಿದ್ದಾರೆ? ಅವರು ಇನ್ನೇನಾದರೂ ಹೇಳಬಹುದಿತ್ತು, ಈ ಕೋನವನ್ನು ಏಕೆ ತರಬೇಕು ಎಂದು ಓವೈಸಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

    ಇದೇ ವೇಳೆ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲೋಕಸಭೆಯ ಉಸ್ತುವಾರಿ ಸ್ಪೀಕರ್ ಅವರೇ ಹೊರತು ಪ್ರಧಾನಿ ಅಲ್ಲ. ಲೋಕಸಭೆಯು ಜನರಿಗೆ ಉತ್ತರದಾಯಿಯಾಗಿದೆ. ಹೀಗಾಗಿ ಇದನ್ನು ಸ್ಪೀಕರ್ ಅವರು ಉದ್ಘಾಟಿಸಿದ್ದರೆ ಚೆನ್ನಾಗಿತ್ತು. ಆದರೆ ಪ್ರಧಾನಿ ಅವರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ಮೂಲಕ ತನ್ನಿಂದಲ್ಲದೇ ಬೇರೆ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ತೋರಿಸಲು ಬಯಸುತ್ತಾರೆ. 2014 ಕ್ಕಿಂತ ಮೊದಲು ಭಾರತದಲ್ಲಿ ಏನೂ ಆಗಿಲ್ಲ, ಈಗ ಎಲ್ಲವೂ ನಡೆಯುತ್ತಿದೆ. ಇದು ಪ್ರಧಾನಿಯ ವೈಯಕ್ತಿಕ ಪ್ರಚಾರದ ಹೊಸ ಮಾರ್ಗವಾಗಿದೆ ಎಂದು ಕುಟುಕಿದರು.

    ಸದ್ಯ ನೂತನ ಸಂಸತ್ ಭವನವನ್ನು ಶವವಪೆಟ್ಟಿಗೆಗೆ ಹೋಲಿಸಿರುವ ಆರ್‍ಜೆಡಿ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅನೇಕರು ಇದನ್ನು ಅಸಹ್ಯಕರ ಬೆಳವಣಿಗೆ ಎಂದಿದ್ದಾರೆ.

  • ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

    ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

    ಮುಂಬೈ: ಇಬ್ಬರ ನಡುವೆ ಗಲಾಟೆ ನಡೆದು, ನೆರೆದಿದ್ದ ಜನ ಕಲ್ಲು ತೂರಾಟ ನಡೆಸಿ ಖಾಸಗಿ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಛತ್ರಪತಿ ಸಂಭಾಜಿನಗರದ (Chhatrapati Sambhajinagar) ಕಿರದಪುರದ (Kiradpura) ರಾಮಮಂದಿರದ ಹೊರಗೆ ಬುಧವಾರ ರಾತ್ರಿ ನಡೆದಿದೆ.

    ಪೊಲೀಸರು ಅಶ್ರವಾಯು ಸಿಡಿಸಿ ಉದ್ರಿಕ್ತ ಗುಂಪನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನಗಳಿಗೆ ತಗುಲಿದ್ದ ಬೆಂಕಿಯನ್ನು ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿ ಆರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರಗೆ ಅನರ್ಹತೆಯ ಭೀತಿ

     

    ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ನಿಖಿಲ್ ಗುಪ್ತಾ ತಿಳಿಸಿದ್ದಾರೆ.

    ಔರಂಗಾಬಾದ್ (Aurangabad) ಸಂಸದ ಇಮ್ತಿಯಾಜ್ ಜಲೀಲ್ ರಾಮ ಮಂದಿರಕ್ಕೆ (Ram temple) ತೆರಳಿದ್ದ ವೀಡಿಯೋ ಒಂದನ್ನು ಎಐಎಂಐಎಂನ (AIMIM) ರಾಷ್ಟ್ರೀಯ ಕಾರ್ಪೋರೇಟರ್ ಮೊಹಮ್ಮದ್ ನಾಸಿರುದ್ದೀನ್ ಹಂಚಿಕೊಂಡಿದ್ದರು. ಇದನ್ನು ಕೆಲವು ಕಿಡಿಗೇಡಿಗಳು ದೇವಾಲಯದ ಮೇಲೆ ದಾಳಿ ಎಂದು ಬಿಂಬಿಸಿ ಹಂಚಿಕೊಂಡಿದ್ದರು.

    ಸುಳ್ಳು ಸುದ್ದಿಗಳನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಿಂದ ತೆಗೆಸಿದ್ದು. ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

  • ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ನವದೆಹಲಿ: ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ದೆಹಲಿಯಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

    ಘಟನೆ ನಡೆದಾಗ ಓವೈಸಿ ದೆಹಲಿಯ (Delhi) ನಿವಾಸದಲ್ಲಿರಲಿಲ್ಲ. ಬದಲಿಗೆ ಜೈಪುರಕ್ಕೆ ಕಾರ್ಯನಿಮಿತ್ತ ತೆರಳಿದ್ದರು. ಈ ಬಗ್ಗೆ ಅಸಾದುದ್ದೀನ್ ಓವೈಸಿ ಸರಣಿ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014ರಿಂದ ಇದು ನಾಲ್ಕನೇ ಘಟನೆ ಎಂದು ಕಿಡಿಕಾರಿದರು.

    ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿಗಳು ಮುರಿದು ಬಿದ್ದಿವೆ. ಈ ಬಗ್ಗೆ ಮನೆಯಲ್ಲಿದ್ದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಿಬ್ಬಂದಿ ಘಟನೆಗೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಹೆಚ್ಚುವರಿ ಡಿಸಿಪಿ ನೇತೃತ್ವದ ದೆಹಲಿ ಪೊಲೀಸರ ತಂಡ ಓವೈಸಿ ನಿವಾಸಕ್ಕೆ ಭೇಟಿ ನೀಡಿದ್ದು, ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು ಮತ್ತೊಮ್ಮೆ ಮಹಾಮೈತ್ರಿಗೆ ಮುಂದಾದ ಕಾಂಗ್ರೆಸ್‌

    ಹೈಸೆಕ್ಯುರಿಟಿ ವಲಯದಲ್ಲಿ ಕಲ್ಲು ತೂರಾಟ ನಡೆದಿರುವುದು ಕಳವಳಕಾರಿ ಎಂದಿರುವ ಓವೈಸಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಓವೈಸಿ ಪಕ್ಷದ ನಾಯಕನ ಕಚೇರಿಯಲ್ಲೇ ವಿದ್ಯಾರ್ಥಿ ಕೊಲೆ

    ಓವೈಸಿ ಪಕ್ಷದ ನಾಯಕನ ಕಚೇರಿಯಲ್ಲೇ ವಿದ್ಯಾರ್ಥಿ ಕೊಲೆ

    ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಸ್ಥಳೀಯ ಕಾರ್ಪೋರೇಟರ್ ಕಚೇರಿಯಲ್ಲಿ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ (Murder).

    ಹೈದರಾಬಾದ್‌ನ ಲಲಿತಾಬಾಗ್ ಪ್ರದೇಶದಲ್ಲಿರುವ ಕಚೇರಿಯಲ್ಲಿ ಕೊಲೆ ನಡೆದಿದೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕಾರ್ಪೊರೇಟರ್ ಸಂಬಂಧಿ 22 ವರ್ಷದ ವಿದ್ಯಾರ್ಥಿ (Student) ಮುರ್ತಾಜಾ ಅನಸ್ ಎಂದು ಗುರುತಿಸಿದ್ದಾರೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

    CRIME 2

    ಇತ್ತೀಚೆಗೆ ಅಸಾದುದ್ದೀನ್ ಓವೈಸಿ (Asaduddin Owaisi), 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ತಮ್ಮ ಪಕ್ಷ ಪ್ರತಿನಿಧಿಸುವುದಾಗಿ ಹೇಳಿದ್ದರು. ಕರ್ನಾಟದ 13 ಕ್ಷೇತ್ರಗಳಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಘೋಷಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ

    ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ

    ಗಾಂಧಿನಗರ: ದೇಶದಲ್ಲೇ ನೀವು ಅಪಖ್ಯಾತಿ ಹೊಂದಿದ್ದೀರಿ. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿದೆ. ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ  (Amit Shah) ಕಾಂಗ್ರೆಸ್ (Congress) ವಿರುದ್ಧ ಸತತವಾಗಿ ಹರಿಹಾಯುತ್ತಿದ್ದಾರೆ. ಶುಕ್ರವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ `2002ರಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಶಕ್ತಿಗಳಿಗೆ ಬಿಜೆಪಿ (BJP) ತಕ್ಕ ಪಾಠ ಕಲಿಸಿತು’ ಎಂದಿದ್ದ ಶಾ ಹೇಳಿಕೆ ವಿರುದ್ಧ ಓವೈಸಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್‌ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ

    ಗುಜರಾತಿನ ಜುಹಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಅಮಿತ್ ಶಾ ಅವರೇ ನಮಗೆ ಏನು ಪಾಠ ಕಲಿಸಿದ್ದೀರಿ? ಬಿಲ್ಕಿಸ್‌ನ ಅತ್ಯಾಚಾರಿಗಳನ್ನು ಬಿಡುಗಡೆ ಮಾಡೋದು ಪಾಠವೇ? ಬಿಲ್ಕಿಸ್‌ನ 3 ವರ್ಷದ ಮಗಳನ್ನು ಕಣ್ಣೆದುರೇ ಹೊಡೆದು ಕೊಂದವರನ್ನು ಬಿಡುಗಡೆ ಮಾಡುವುದು ಪಾಠವೇ? ಎಹ್ಸಾನ್ ಜಾಫ್ರಿ ಕೊಲ್ಲುವಂತಹ ಪಾಠ ಕಲಿಸಿದ್ದೀರಿ, ಇವೆಲ್ಲವೂ ಪಾಠವೇ? ಇಡೀ ದೇಶದಲ್ಲಿ ನೀವು ಅಪಖ್ಯಾತಿ ಹೊಂದಿದ್ದೀರಿ. ದೆಹಲಿಯಲ್ಲಿ ಕೋಮುಗಲಭೆಗಳು ನಡೆಯುತ್ತಿವೆ. ನೀವು ಯಾವ ಪಾಠ ಕಲಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್‌ ಸಿಂಗ್

    2022ರ ಕೋಮು ದ್ವೇಷದಿಂದ ಬೆಸ್ಟ್ ಬೇಕರಿಯನ್ನು ಸುಟ್ಟುಹಾಕಲಾಯಿತು. ಅದು ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು. `ಮಿಸ್ಟರ್ ಅಮಿತ್ ಶಾ ಅವರೇ, ನಿಮ್ಮ ಇಂತಹ ಎಷ್ಟು ಪಾಠಗಳನ್ನು ನಾವು ನೆನಪಿನಲ್ಲಿಟ್ಟುಕೊಂಡಿದ್ದೇವೆ. ನಿಮ್ಮಿಂದ ಪಾಠ ಕಲಿಯೋದು ಏನೂ ಇಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಿದಾಗ ಮಾತ್ರ ನಿಜವಾದ ಶಾಂತಿ ಬಲಗೊಳ್ಳುತ್ತದೆ ಎಂದು ಸಲಹೆ ನೀಡಿದ್ದಾರೆ.

    ಅಧಿಕಾರದ ಅಮಲಿನಲ್ಲಿ ಇಂದು ಗೃಹ ಸಚಿವರು ನಾವು ತಕ್ಕ ಪಾಠ ಕಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕಾರ ಯಾವತ್ತೋ ಒಬ್ಬರ ಬಳಿಯೇ ಇರಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: BJP ಸರ್ಕಾರ ಕರ್ನಾಟಕಕ್ಕೆ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ – ಡಿಕೆಶಿ

    ಗುಜರಾತ್ ವಿಧಾನಸಭಾ ಚುನಾವಣೆಯು ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ತನ್ನ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 93 ವಿಧಾನಸಭಾ ಸ್ಥಾನಗಳಿಗೆ 2ನೇ ಹಂತದ ಮತದಾನ ನಡೆಯಲಿದೆ.

    ಅಮಿತ್ ಶಾ ಹೇಳಿದ್ದೇನು?
    ಗುಜರಾತ್ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿದ್ದ ಅಮಿತ್ ಶಾ, 2002ರ ಹಿಂಸಾಚಾರದ ಕುರಿತು ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದಾಗ ಆಗಾಗ ಕೋಮುಗಲಭೆಗಳು ನಡೆಯುತ್ತಿದ್ದವು. ಆಗಾಗ ಕರ್ಫ್ಯೂ ಹೇರಲಾಗುತ್ತಿತ್ತು, ಕಾನೂನು ಸುವ್ಯವಸ್ಥೆ ಸರಿ ಇರಲಿಲ್ಲ. ಕಾಂಗ್ರೆಸ್ ಆಳ್ವಿಕೆ ಇದ್ದಾಗ ಕೋಮು ಹಿಂಸೆ ನಡೆಯುತ್ತಿತ್ತೆ ಇಲ್ಲವೇ ಹೇಳಿ? 2002ರಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂಸಾಚಾರದ ಪ್ರಯತ್ನ ನಡೆಯಿತು. ಆಗ ಅವರಿಗೆ ಸರಿಯಾದ ಪಾಠ ಕಲಿಸಲಾಯಿತು. ಅದಾದ ಬಳಿಕ ಒಂದೇ ಒಂದು ಕೋಮು ಹಿಂಸಾಚಾರ ನಡೆದಿಲ್ಲ. ಹಿಂಸೆಯಲ್ಲಿ ತೊಡಗಿದ್ದವರನ್ನು ಉಚ್ಚಾಟಿಸಲಾಯಿತು. ಕರ್ಫ್ಯೂರಹಿತ ಗುಜರಾತ್ ಅನ್ನು ಬಿಜೆಪಿ ಸ್ಥಾಪಿಸಿದೆ ಎಂದು ಶಾ ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಓವೈಸಿ ಪಕ್ಷ ಸೇರಿ, ಬಿರಿಯಾನಿ ತಗೊಳ್ಳಿ: ಪೀರ್ಜಾದಾ ತೌಕೀರ್ ನಿಜಾಮಿ

    ಓವೈಸಿ ಪಕ್ಷ ಸೇರಿ, ಬಿರಿಯಾನಿ ತಗೊಳ್ಳಿ: ಪೀರ್ಜಾದಾ ತೌಕೀರ್ ನಿಜಾಮಿ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಭೋಪಾಲ್‍ನ (Bhopal) ನರೇಲಾ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ನೆಲೆಯೂರಿಸುವ ಸಲುವಾಗಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ನಾಯಕರೊಬ್ಬರು ಜನರಿಗೆ ಬಿರಿಯಾನಿ (Biriyani) ಮತ್ತು ಉಪಹಾರವನ್ನು ನೀಡುತ್ತಿದ್ದಾರೆ.

    ಇತ್ತೀಚೆಗಷ್ಟೇ ನಡೆದ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಅಸಾದುದ್ದೀನ್ ಓವೈಸಿ (Asaduddin Owaisi) ನೇತೃತ್ವದ ಪಕ್ಷವು ರಾಜ್ಯದಲ್ಲಿ ಪಕ್ಷದಿಂದ 7 ಕಾರ್ಪೊರೇಟರ್‌ಗಳು ಜಯಗಳಿಸಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಆರೋಪ – ನಿರಂತರ ಅಪಘಾತದಿಂದ ರೊಚ್ಚಿಗೆದ್ದ ಗ್ರಾಮಸ್ಥರು

    ಬಿಜೆಪಿಯಾಗಲಿ (BJP) ಅಥವಾ ಕಾಂಗ್ರೆಸ್ (Congress) ಆಗಲಿ ಅವರ ಪಕ್ಷದಲ್ಲಿ ಗೌರವ ಸಿಗದಿದ್ದರೆ, ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಮ್ಮ ಪಕ್ಷಕ್ಕೆ ಸೇರಲು ಕಚೇರಿಗೆ ಬಂದಾಗ ಅವರಿಗೆ ಗೌರವದ ಸಂಕೇತವಾಗಿ ಬಿರಿಯಾನಿ ಅಥವಾ ಸಮೋಸಾ (Samosa) ಮತ್ತು ಚಹಾದಂತಹ ಉಪಹಾರವನ್ನು ನೀಡುತ್ತೇವೆ. ನಮ್ಮ ಮನೆಯಲ್ಲೂ ನಾವು ಅತಿಥಿಗಳಿಗೆ ಇದನ್ನೇ ನೀಡುತ್ತೇವೆ ಎಂದು ಎಐಎಂಐಎಂ ನಾಯಕ ಪೀರ್ಜಾದಾ ತೌಕೀರ್ ನಿಜಾಮಿ (Peerzada Tauqeer Nizami) ಹೇಳಿದ್ದಾರೆ.

    ಹೊಸದಾಗಿ ಪಕ್ಷ ಸೇರಿಕೊಳ್ಳುವವರಿಗೆ ಹಾರ ಹಾಕಿ ಸಂಪ್ರದಾಯಿಕವಾಗಿ ಬರಮಾಡಿಕೊಂಡು, ಉಪಹಾರವನ್ನು ನೀಡುತ್ತೇವೆ. ಅವರು ಸರಿಯಾದ ಜಾಗಕ್ಕೆ ಬಂದಿದ್ದೇವೆ ಅಂತ ಅಂದುಕೊಂಡರೆ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೌನವೇಕೆ? – BJPಯಿಂದ ಸೇ-ಸಿದ್ದು ಪೋಸ್ಟರ್ ರಿಲೀಸ್

    ಇಲ್ಲಿಯವರೆಗೆ ಸುಮಾರು 20,000ಕ್ಕೂ ಹೆಚ್ಚು ಮಂದಿ ಪಕ್ಷ ಸೇರಿದ್ದಾರೆ. ಇದೇ ಕ್ರಮವನ್ನು ದೀಪಾವಳಿ ನಂತರ ಭೋಪಾಲ್‍ನ ಇತರ ಅಸೆಂಬ್ಲಿ ಕ್ಷೇತ್ರಗಳಲ್ಲಿಯೂ ಅನುಸರಿಸಲಾಗುತ್ತದೆ ಎಂದು ತಿಳಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ಲಕ್ನೋ: ಉತ್ತರಪ್ರದೇಶದ (UttarPradesh) ಸಂಭಾಲ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಹಿಂದೂಗಳ (Hindu Community) ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಎಐಎಂಐಎಂ (AIMIM) ಅಧ್ಯಕ್ಷ ಶೌಕತ್ ಅಲಿ (Shaukat Ali) ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ಶೌಕತ್ ಅಲಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 295-A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    ಶೌಕತ್ ಅಲಿ ಹೇಳಿದ್ದೇನು?: ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶೌಕತ್ ಅಲಿ (Shaukat Ali), 832 ವರ್ಷಗಳ ಕಾಲ ಮುಸ್ಲಿಮರು (Muslims) ಹಿಂದೂಗಳ ಮೇಲೆ ಆಳ್ವಿಕೆ ನಡೆಸಿದರು. ಆಗ ಹಿಂದೂಗಳು ಮುಸ್ಲಿಂ ದೊರೆಗಳ ಮುಂದೆ ಕೈ ಜೋಡಿಸಿ `ಜಿ, ಹುಜೂರ್’ ಎಂದು ತಲೆಬಾಗುತ್ತಿದ್ದರು. ಮುಸ್ಲಿಮರು ಎರಡು ಬಾರಿ ಮದುವೆಯಾಗುತ್ತಾರೆ (Marriage). ಇಬ್ಬರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನ ಇಟ್ಟುಕೊಳ್ಳುತ್ತಾರೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!

    ಮುಂದುವರಿದು ಮಾತನಾಡಿದ ಅಲಿ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದು ಹಿಂದೂಗಳು ಆರೋಪಿಸುತ್ತಾರೆ. ನಾವು ಎರಡು ಬಾರಿ ಮದುವೆಯಾಗುತ್ತೇವೆ ನಿಜ. ಆದರೆ ಇಬ್ಬರು ಹೆಂಡತಿಯರಿಗೂ ಗೌರವ ನೀಡುತ್ತೇವೆ. ಆದರೆ ನೀವು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುವುದು ಯಾರಿಗೂ ತಿಳಿದಿಲ್ಲ. ಅವರಲ್ಲಿ ಯಾರಿಗೂ ನೀವು ಗೌರವ ಕೊಡುವುದಿಲ್ಲ ಎಂದು ಕಿಡಿಕಾರಿದರು. ಮುಂದೆ ಬಿಜೆಪಿ ದುರ್ಬಲವಾದಾಗ ಹಿಂದೂಗಳು ಮುಸ್ಲಿಮರ ಹಿಂದೆ ಬರುತ್ತಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವು ಮೂರು ಮದುವೆ ಮಾಡಿಕೊಂಡ್ರೂ ಪತ್ನಿಯನ್ನು ಗೌರವಿಸುತ್ತೇವೆ, ಆದ್ರೆ ಹಿಂದೂಗಳು…: AIMIM ಮುಖಂಡ

    ನಾವು ಮೂರು ಮದುವೆ ಮಾಡಿಕೊಂಡ್ರೂ ಪತ್ನಿಯನ್ನು ಗೌರವಿಸುತ್ತೇವೆ, ಆದ್ರೆ ಹಿಂದೂಗಳು…: AIMIM ಮುಖಂಡ

    ಲಕ್ನೋ: ನಾವು ಎರಡರಿಂದ ಮೂರು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಮೂವರು ಪತ್ನಿಯಂದಿರಿಗೂ (Wives) ಗೌರವ ನೀಡುತ್ತೇವೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿರುತ್ತಾರೆ ಎಂದು ಉತ್ತರಪ್ರದೇಶದ ಎಐಎಂಐಎಂ (AIMIM) ರಾಜ್ಯಾಧ್ಯಕ್ಷ ಶೌಕತ್ ಅಲಿ (Shaukat Ali) ವಿವಾದಾತ್ಮಕ ಹೇಳಿಕೆ ನೀಡಿದರು.

    ಸಭೆಯಲ್ಲಿ ಮಾತನಾಡಿದ ಅವರು, ನಾವು ಎರಡು ಮದುವೆಗಳನ್ನು (Marriage) ಮಾಡಿಕೊಂಡಿದ್ದರೆ, ಅವರನ್ನು ನಾವು ಪರಸ್ಪರ ಅರ್ಥ ಮಾಡಿಕೊಂಡು, ಗೌರವದಿಂದ ಇಡುತ್ತೇವೆ. ಜೊತೆಗೆ ನಮ್ಮ ಮಕ್ಕಳ ಹೆಸರು ಪಡಿತರ ಚೀಟಿಯಲ್ಲಿರುತ್ತದೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯನ್ನು ಹೊಂದಿರುತ್ತಾರೆ. ಪತ್ನಿಯನ್ನು ಅಥವಾ ಪ್ರೇಯಸಿಯನ್ನು ಅವರು ಗೌರವಿಸುವುದಿಲ್ಲ ಎಂದು ತಿಳಿಸಿದರು.

    ಹಿಜಬ್‍ನ (Hijab) ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಹಿಂದುತ್ವ ನಿರ್ಧರಿಸುವುದಿಲ್ಲ. ಬದಲಿಗೆ ಸಂವಿಧಾನ ನಿರ್ಧರಿಸುತ್ತದೆ. ಬಿಜೆಪಿ (BJP) ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯುವ ಕೆಲಸ ಮಾಡುತ್ತದೆ. ಮದರಸಾ, ಲಿಂಚಿಂಗ್, ವಕ್ಫ್ ಮತ್ತು ಹಿಜಾಬ್‍ನಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಬಿಜೆಪಿ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ. ಏಕೆಂದರೆ ಬಿಜೆಪಿ ದುರ್ಬಲವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ಆಕ್ಷೇಪ – ಕರ್ನಾಟಕದ ಹೆಸರು ಕಿತ್ತು ಹಾಕುವ ಎಚ್ಚರಿಕೆ

    ಶಾಲೆ-ಕಾಲೇಜುಗಳ ತರಗತಿ ಒಳಗಡೆ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಸೆ. 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್‍ನಿಂದ ಭಿನ್ನ ತೀರ್ಪು ಪ್ರಕಟವಾಗಿದ್ದು ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಾಧೀಶರು ಇರುವ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ

    Live Tv
    [brid partner=56869869 player=32851 video=960834 autoplay=true]

  • ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ

    ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ

    ನವದೆಹಲಿ: ಬಿಜೆಪಿ (MP) ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ (Parvesh Sahib Singh Verma) ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿದ್ದು, ಸಮುದಾಯದ ಹೆಸರು ಉಲ್ಲೇಖಿಸದೇ `ಪೂರ್ಣ ಬಹಿಷ್ಕಾರ’ಕ್ಕೆ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಸಾರ್ವಜನಿಕ ಕಾರ್ಯಮವೊಂದರಲ್ಲಿ ಮಾತನಾಡಿದ ವರ್ಮಾ, ಅವರು ಕೈಗಾಡಿಗಳನ್ನು ತೆರೆಯುತ್ತಾರೆ, ಅಂತಹವರಿಂದ ನೀವು ತರಕಾರಿ ಖರೀದಿಸುವ ಅಗತ್ಯವಿಲ್ಲ. ಮೀನು (Fish), ಮಾಂಸದ (Meat Shops) ಅಂಗಡಿಗಳನ್ನು ತೆರೆಯುತ್ತಾರೆ. ಪರವಾನಗಿ ಹೊಂದಿಲ್ಲದಿದ್ದರೆ ಪುರಸಭೆ ಅವುಗಳನ್ನ ಬಂದ್ ಮಾಡಿಸಬೇಕು. ನೀವು ಅಂತಹವರನ್ನು ಸರಿಪಡಿಸಬೇಕು ಅಂದುಕೊಂಡಿದ್ದರೆ ಅದು ಪೂರ್ಣ ಬಹಿಷ್ಕಾರದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ನಾವು ಅವರನ್ನು ಬಹಿಷ್ಕರಿಸುತ್ತೇವೆ, ಅವರ ಬಳಿ ನಾವು ಏನನ್ನೂ ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಮುಸ್ಲಿಂ ಸಮುದಾಯದ (Muslim Community) ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ್ದಾರೆ.

    ಈ ನಡುವೆ ಕೆಲ ಬಿಜೆಪಿ ಶಾಸಕರು ನಮ್ಮ ಸುಂದರ ದೆಹಲಿ ಹಂದಿಗಳ ನಗರವಾಗಿ ಮಾರ್ಪಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ವರ್ಮಾ, ಯಾವುದೇ ಧರ್ಮದ ಸಮುದಾಯವನ್ನು ಉಲ್ಲೇಖಿಸಿಲ್ಲ ಎಂಬುದಾಗಿ ಹೇಳಿದ್ದಾರೆ. ‌ಇದನ್ನೂ ಓದಿ: ಫಿಲ್ಮ್ ಫೇರ್: ಆ್ಯಕ್ಟ್ 1978 ಚಿತ್ರಕ್ಕೆ ನಾಲ್ಕು ಪ್ರಶಸ್ತಿ, ಅತ್ಯುತ್ತಮ ನಟ ಧನಂಜಯ್, ನಟಿ ಯಜ್ಞಾ

    ಈ ವೀಡಿಯೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi), ಬಿಜೆಪಿ ಮುಸ್ಲಿಮರ ವಿರುದ್ಧ ಯುದ್ಧ ಸಾರಿದೆ. ಆಡಳಿತ ಪಕ್ಷದ ಸಂಸದರೊಬ್ಬರು ರಾಜಧಾನಿಯಲ್ಲಿ ರಾಜಾರೋಷವಾಗಿ ಹೀಗೆ ಮಾತನಾಡಿದ್ದಾರೆ. ಆದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (AmitShah) ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮೌನ ವಹಿಸಿದ್ದಾರೆ. ಹೀಗಾದರೆ ಸಂವಿಧಾನದ ಮೌಲ್ಯ ಏನಿದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ಈ ಬೆನ್ನಲ್ಲೇ ವರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವಕ್ತಾರ ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾವುದೇ ದೂರುಗಳು ಬಂದಿಲ್ಲ. ಆದಾಗ್ಯೂ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಪರಿಶೀಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]