Tag: AIFF

  • ಭುಟಿಯಾಗೆ ಸೋಲು –  ಮಾಜಿ ಗೋಲ್‌ಕೀಪರ್‌ ಕಲ್ಯಾಣ್ ಚೌಬೆ ಈಗ AIFF ಅಧ್ಯಕ್ಷ

    ಭುಟಿಯಾಗೆ ಸೋಲು – ಮಾಜಿ ಗೋಲ್‌ಕೀಪರ್‌ ಕಲ್ಯಾಣ್ ಚೌಬೆ ಈಗ AIFF ಅಧ್ಯಕ್ಷ

    ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಶನ್‍ನ (ಎಐಎಫ್‍ಎಫ್) ಅಧ್ಯಕ್ಷರಾಗಿ ಮೋಹನ್ ಬಗಾನ್ ತಂಡದ ಮಾಜಿ ಗೋಲ್‍ಕೀಪರ್ ಕಲ್ಯಾಣ್ ಚೌಬೆ ಆಯ್ಕೆಯಾಗಿದ್ದಾರೆ.

    ನೂತನ ಅಧ್ಯಕ್ಷ ಪಟ್ಟಕ್ಕೆ ನಡೆದ ಚುನಾವಣೆಯಲ್ಲಿ ಭಾರತ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅವರನ್ನು ಸೋಲಿಸಿ ಕಲ್ಯಾಣ್ ಚೌಬೆ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಚೌಬೆ ಚುನಾವಣೆಯಲ್ಲಿ 33-1 ಅಂತರದಿಂದ ಗೆಲುವು ದಾಖಲಿಸಿದರು. ಈ ಮೂಲಕ 85 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಆಟಗಾರರೊಬ್ಬರು ಫುಟ್ಬಾಲ್ ಫೆಡರೇಶನ್‍ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚೌಬೆ ಬಿಜೆಪಿ ನಾಯಕರೂ ಆಗಿದ್ದು, ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದನ್ನೂ ಓದಿ: ಭಾರತದ ಮೇಲೆ ಫಿಫಾ ಹೇರಿದ ಅಮಾನತು ತೆರವು

    ಚುನಾವಣೆಯಲ್ಲಿ ಒಟ್ಟು 34 ರಾಜ್ಯಗಳು ಭಾಗವಹಿಸಿದ್ದವು, ಅದರಲ್ಲಿ ಬೈಚುಂಗ್ ಭುಟಿಯಾ ಕೇವಲ ಒಂದು ರಾಜ್ಯದ ಮತವನ್ನು ಪಡೆಯುವಲ್ಲಿ ಯಶಸ್ವಿಯಾದರು. ಫಿಫಾ ಇತ್ತೀಚೆಗೆ AIFF ಅನ್ನು ನಿಷೇಧಿಸಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‍ನಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿದೆ ಎಂದು ಫಿಫಾ ಆರೋಪ ಹೊರಿಸಿತ್ತು. ಎಐಎಫ್‍ಎಫ್‍ನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಸರ್ವೋಚ್ಚ ನ್ಯಾಯಾಲಯವು ಆಡಳಿತಗಾರರ ಸಮಿತಿಯನ್ನು ರಚಿಸಿತ್ತು. ಇದನ್ನು FIFA ಮೂರನೇ ವ್ಯಕ್ತಿಯ ಹಸ್ತಕ್ಷೇಪ ಎಂದು ಪರಿಗಣಿಸಿ AIFF ಅನ್ನು ನಿಷೇಧಿಸಿತ್ತು. ಆಗ ಭಾರತ ಸರ್ಕಾರವು ಫಿಫಾದಿಂದ ನಿಷೇಧವನ್ನು ತೆರವುಗೊಳಿಸುವಂತೆ ಒತ್ತಾಯಿಸಿತ್ತು. ಜೊತೆಗೆ ಸಿಒಎ ತೆಗೆದುಹಾಕಿ, ಅವಧಿಗೆ ಮುಂಚಿತವಾಗಿ ಚುನಾವಣೆ ನಡೆಸಲು ಮುಂದಾಗಿತ್ತು. ಇದನ್ನೂ ಓದಿ: 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕೊಹ್ಲಿ – 1 ಓವರ್ 6 ರನ್

    ಪ್ರಫುಲ್ ಪಟೇಲ್ ಅಧಿಕಾರವಧಿ ಅಂತ್ಯ
    ಈ ಹಿಂದೆ ಪ್ರಫುಲ್ ಪಟೇಲ್ ಎಐಎಫ್‍ಎಫ್ ಅಧ್ಯಕ್ಷರಾಗಿದ್ದರು. ಅವರು 2008 ರಿಂದ ಈ ಹುದ್ದೆಯಲ್ಲಿದ್ದರು. ಆ ಬಳಿಕ 2022ರಲ್ಲಿ ಸುಪ್ರೀಂಕೋರ್ಟ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಆದೇಶಿಸಿತ್ತು. ಇದಾದ ನಂತರ AIFFನ ಸಮಸ್ಯೆಗಳು ಹೆಚ್ಚಾಗತೊಡಗಿದವು. ಫಿಫಾ ನಿಷೇಧದ ನಂತರ ಭಾರತವೂ ಅಂಡರ್-17 ಮಹಿಳಾ ವಿಶ್ವಕಪ್‍ಗೆ ಆತಿಥ್ಯ ವಹಿಸುವ ಬಗ್ಗೆ ಗೊಂದಲ ಏರ್ಪಟಿತ್ತು. ಆದರೆ ಈಗ ನಿಷೇಧವನ್ನು ತೆಗೆದುಹಾಕಲಾಗಿದ್ದು, ಮಹಿಳಾ ವಿಶ್ವಕಪ್ ಯಾವುದೇ ಆತಂಕವಿಲ್ಲದೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಮೇಲೆ ಫಿಫಾ ಹೇರಿದ ಅಮಾನತು ತೆರವು

    ಭಾರತದ ಮೇಲೆ ಫಿಫಾ ಹೇರಿದ ಅಮಾನತು ತೆರವು

    ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ಮೇಲಿನ ಅಮಾನತನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಶುಕ್ರವಾರ ತೆರವುಗೊಳಿಸಿದೆ. ಈ ಕ್ರಮದಿಂದ 17 ವರ್ಷದೊಳಗಿನ ಮಹಿಳಾ ವಿಶ್ವಕಪ್ 2022ರ ಪಂದ್ಯದಲ್ಲಿ ಭಾರತ ಭಾಗವಹಿಸಲು ಸಾಧ್ಯವಾಗಲಿದೆ.

    ಫಿಫಾ ಕೌನ್ಸಿಲ್‌ನ ಬ್ಯೂರೋ ಅನಗತ್ಯ ಮೂರನೇ ವ್ಯಕ್ತಿಯ ಪ್ರಭಾವದಿಂದಾಗಿ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿತ್ತು. ಇದೀಗ ಎಐಎಫ್‌ಎಫ್ ಮೇಲೆ ವಿಧಿಸಲಾಗಿದ್ದ ಅಮಾನತನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಫಿಫಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? ಇಲ್ಲಿ ಪೂರ್ಣ ಮಾಹಿತಿ

    ತಾನು ಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ್‌  ರದ್ದುಗೊಳಿಸಿತ್ತು. ಐಎಫ್‌ಎಫ್‌ನ ದೈನಂದಿನ ವ್ಯವಹಾರಗಳು ಸದ್ಯಕ್ಕೆ 36 ರಾಜ್ಯ ಸಂಘಗಳು ಈಗಾಗಲೇ ಆಯ್ಕೆ ಮಾಡಿರುವ ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ನಿರ್ವಹಣೆಯಾಗಬೇಕು ಎಂದು ಎಂದು ಸುಪ್ರೀಂ ಸೂಚಿಸಿತ್ತು. ಸುಪ್ರೀಂ ಆದೇಶ ಪ್ರಕಟವಾದ ಬೆನ್ನಲ್ಲೇ  ಎಐಎಫ್‌ಎಫ್ ತನ್ನ ಮೇಲೆ ವಿಧಿಸಲಾಗಿರುವ ಅಮಾನತನ್ನು ತೆರವುಗೊಳಿಸಬೇಕೆಂದು ಫಿಫಾ ಬಳಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಫಿಫಾ ಈಗ ಅಮಾನತನ್ನು ತೆರವುಗೊಳಿಸಿದೆ. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

    Live Tv
    [brid partner=56869869 player=32851 video=960834 autoplay=true]

  • ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

    ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

    ನವದೆಹಲಿ: ಫಿಫಾ ಎಐಎಫ್‌ಎಫ್‌ ಮೇಲೆ ಹೇರಿರುವ ಅಮಾನತು ನಿರ್ಧಾರವನ್ನು ತೆಗೆದು ಭಾರತದಲ್ಲೇ 17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್‌ ಆಯೋಜಿಸುವಂತೆ ಕ್ರಮ ವಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

    ವಿಶ್ವ ಫುಟ್‌ಬಾಲ್‌ ಆಡಳಿತ ಮಂಡಳಿ (ಫಿಫಾ) ಭಾರತೀಯ ಫುಟ್ಬಾಲ್ ಫೆಡರೇಶನ್ ಸಂಸ್ಥೆಯನ್ನು(ಎಐಎಫ್‌ಎಫ್‌) ಅಮಾನುತು ಮಾಡಿದ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.

    ಫಿಫಾ ಅಮಾನತು ಮಾಡಿದ ನಿರ್ಧಾರವನ್ನು ಮಂಗಳವಾರ  ಕೋರ್ಟ್‌ ಗಮನಕ್ಕೆ ಸಾಲಿಸಿಟರ್‌ ಜನರಲ್‌ ತಂದಿದ್ದರು. ಇಂದು ನ್ಯಾ. ಡಿವೈ ಚಂದ್ರಚೂಡ್‌, ಎಎಸ್‌ ಬೋಪಣ್ಣ ಮತ್ತು ಜೆಬಿ ಪಾರ್ದಿವಾಲಾ ನೇತೃತ್ವದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

    ಈ ಸಂದರ್ಭದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೇಂದ್ರ ಸರ್ಕಾರ ಅಮಾನತು ನಿರ್ಧಾರ ತೆಗೆಯುವ ಸಂಬಂಧ ಫಿಫಾ ಜೊತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ 2 ಬಾರಿ ಸಭೆ ನಡೆಸಿದೆ. ಮಾತುಕತೆ ಫಲಪ್ರದವಾಗುವ ಸಾಧ್ಯತೆಯಿದೆ. ಸಭೆಯ ಫಲಿತಾಂಶ ಬರುವವರೆಗೂ ಮುಂದಿನ ಸೋಮವಾರದವರೆಗೆ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಅಷ್ಟೇ ಅಲ್ಲದೇ ಸುಪ್ರೀಂ ನೇಮಿಸಿದ ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ(CoA) ಸಮಸ್ಯೆ ಬಗೆಹರಿಸಲು ಫಿಫಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸಾಲಿಸಿಟರ್‌ ಜನರಲ್‌ ಕೋರ್ಟ್‌ ಗಮನಕ್ಕೆ ತಂದರು.

    ಎಐಎಫ್‌ಎಫ್‌ನಲ್ಲಿ ಚುನಾವಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ತಾ, ಮಾಜಿ ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರಿಂದಲೇ ಈ ಎಲ್ಲ ಘಟನೆಗಳು ಆಗುತ್ತಿದೆ ಎಂದು ವಾದಿಸಿದರು.

    ಈ ಪ್ರಕರಣ ಬಗೆ ಹರಿಸುವ ಸಂಬಂಧ ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ ಇದೆ ಎಂದ ಕೋರ್ಟ್‌ ಫಿಫಾ ಜೊತೆ ಮಾತುಕತೆ ನಡೆಸಿ ಅಮಾನತು ನಿರ್ಧಾರ ತೆಗೆಯಬೇಕು ಮತ್ತು ಭಾರತದಲ್ಲೇ ವಿಶ್ವಕಪ್‌ ಫುಟ್‌ಬಾಲ್‌ ಆಯೋಜನೆಯಾಗಬೇಕು ಎಂದು ಸೂಚಿಸಿತು.

    ಸಾಲಿಸಿಟರ್‌ ಜನರಲ್‌ ಮನವಿಯ ಮೇರೆಗೆ ಕೋರ್ಟ್‌ ಮುಂದಿನ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

    Live Tv
    [brid partner=56869869 player=32851 video=960834 autoplay=true]

  • ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ

    ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಮಾನತುಗೊಳಿಸಿದ ಫಿಫಾ

    ಪ್ಯಾರಿಸ್: ಜಾಗತಿಕ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ಅನ್ನು ಸೋಮವಾರ ಅಮಾನತುಗೊಳಿಸಿದೆ. ಫೆಡರೇಶನ್ ಹಿಂದೆ ಮೂರನೇ ವ್ಯಕ್ತಿಗಳ ಪ್ರಭಾವ ಇದೆ ಎನ್ನಲಾಗಿದ್ದು, ಇದು ಕಾನೂನುಗಳ ಗಂಭೀರ ಉಲ್ಲಂಘನೆ ಎಂದು ಫಿಫಾ ಆರೋಪಿಸಿದೆ.

    ಎಐಎಫ್‌ಎಫ್‌ನ ಅಮಾನತಿನಿಂದಾಗಿ ಈ ಬಾರಿ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಮೊದಲೇ ನಿರ್ಧರಿಸಿದಂತೆ  ನಡೆಸಲು ಸಾಧ್ಯವಿಲ್ಲ ಎಂದು ಫಿಫಾ ಹೇಳಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದೇ ಶ್ರೀನಗರದಲ್ಲಿ 2 ಬಾರಿ ಗ್ರೆನೇಡ್ ದಾಳಿ

    ಎಐಎಫ್‌ಎಫ್‌ನ ಮಾಜಿ ಮುಖ್ಯಸ್ಥ, ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್ ತಮ್ಮ ಅಧಿಕಾರಾವಧಿಯನ್ನು ಮೀರಿ ಅಧಿಕಾರದಲ್ಲಿಯೇ ಉಳಿದುಕೊಂಡಿದ್ದರು. ಬಳಿಕ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಆಡಳಿತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ

    2020ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಕೋವಿಡ್ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಈ ಬಾರಿ ಅಕ್ಟೋಬರ್ 11 ರಿಂದ 30ರ ವರೆಗೆ ಭಾರತದಲ್ಲಿ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫಿಫಾ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿದೆ.

    ಎಐಎಫ್‌ಎಫ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಲು ಫಿಫಾ ಮತ್ತು ಎಎಫ್‌ಸಿ ಜೂನ್‌ನಲ್ಲಿ ಗಡುವು ನೀಡಿತ್ತು. ‘ಎಐಎಫ್‌ಎಫ್‌ಗೆ ಹೊಸದಾಗಿ ನಿಯಮಾವಳಿ ರೂಪಿಸಿ, ಜುಲೈ 31ರ ಒಳಗೆ ಅನುಮೋದನೆ ನೀಡಬೇಕು. ಸೆ.15ರ ಒಳಗಾಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ಫಿಫಾ ಸೂಚಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಕೋಲ್ಕತ್ತಾ: ಭಾರತ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ನರೇಂದ್ರ ತಾಪಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ (AIFF) ತಿಳಿಸಿದೆ.

    ಥಾಪಾ 1984 ರಲ್ಲಿ ಸಿಂಗಾಪುರದಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆದ ಭಾರತೀಯ ತಂಡದ ಭಾಗವಾಗಿದ್ದರು. ಕೊಚ್ಚಿನ್‌ನಲ್ಲಿ ನಡೆದ 1983ರ ನೆಹರೂ ಕಪ್‌ನಲ್ಲಿ ಚೀನಾ ವಿರುದ್ಧ ಮುರು ಗೋಲ್‌ಗಳನ್ನು ಸಿಡಿಸಿ ಮಿಂಚಿದ್ದರು. 29 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೇಟ್‍ನಿಂದ ಹೊಡೆದು ಕೊಲೆಗೈದ್ರು

    ಅಷ್ಟೇ ಅಲ್ಲದೇ 1984 ರಲ್ಲಿ ಬೀಜಿಂಗ್‌ನಲ್ಲಿ ನಡೆದ ಗ್ರೇಟ್ ವಾಲ್ ಕಪ್‌ನಲ್ಲಿ ಭಾರತವು ಅಲ್ಜೀರಿಯಾ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿತು, ಈ ಟೂರ್ನಿಯಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಸಾಧನೆಯನ್ನು ಅವರು ಮಾಡಿದ್ದಾರೆ ಎಂದು ಎಐಎಫ್‌ಎಫ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF

    ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF

    ನವದೆಹಲಿ: ಆಲ್ ಇಂಡಿಯಾ ಫುಟ್‍ಬಾಲ್ ಫೆಡರೇಷನ್ (AIFF) ಎಎಸ್‍ಸಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಫುಟ್‍ಬಾಲ್ ತಂಡ ಉತ್ತಮ ಪ್ರದರ್ಶನ ನೀಡಬೇಕೆಂಬ ಕಾರಣಕ್ಕೆ ತಂಡಕ್ಕೆ ಸ್ಫೂರ್ತಿ ತುಂಬಲು ಓರ್ವ ಜ್ಯೋತಿಷಿಯನ್ನು ನೇಮಕ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

    ಭಾರತ ಫುಟ್‍ಬಾಲ್ ತಂಡ ಎಎಫ್‍ಸಿ ಏಷ್ಯಾ ಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಲು ಅರ್ಹರಾದ 24 ತಂಡಗಳ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಯಶಸ್ಸಿನ ಹಿಂದೆ ಜ್ಯೋತಿಷಿಯ ಚಮತ್ಕಾರವಿದೆ ಎಂಬ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ

    ಈ ಬಗ್ಗೆ ತಂಡದೊಂದಿಗಿದ್ದ ಆಪ್ತರೊಬ್ಬರು ಮಾಹಿತಿ ಹಂಚಿಕೊಂಡಿದ್ದು, ತಂಡದೊಂದಿಗಿದ್ದ ಜ್ಯೋತಿಷಿಗೆ ಫುಟ್‍ಬಾಲ್ ಫೆಡರೇಷನ್ 16 ಲಕ್ಷ ರೂ. ಸಂಭಾವನೆ ನೀಡಿದೆ. ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ತಂಡಕ್ಕೆ ಮಾರ್ಗದರ್ಶನ ನೀಡಲು ಕರೆಸಿಕೊಳ್ಳಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

    ಈ ಮಾಹಿತಿ ಹೊರಬರುತ್ತಿದ್ದಂತೆ ಫುಟ್‍ಬಾಲ್ ಪ್ರಿಯರು ಎಐಎಫ್‍ಎಫ್ ವಿರುದ್ಧ ಕೆಂಡಾಮಂಡಲವಾಗಿದ್ದು, ಫುಟ್‍ಬಾಲ್ ಭಾರತದಲ್ಲಿ ಜನಮನ್ನಣೆ ಪಡೆದುಕೊಳ್ಳುತ್ತಿರುವಾಗ ಈ ರೀತಿಯ ಕೆಲಸದಿಂದ ಕೆಟ್ಟ ಅಭಿಪ್ರಾಯ ಮೂಡಿಸಬೇಡಿ. ಫುಟ್‍ಬಾಲ್ ಪಂದ್ಯಗಳಲ್ಲಿ ಗೆಲುವು ಎಂಬುದು ಆಟಗಾರರ ಪರಿಶ್ರಮದಿಂದಲೇ ಹೊರತು ಯಾವುದೇ ಜ್ಯೋತಿಷಿಯ ಮಾರ್ಗದರ್ಶನದಿಂದಲ್ಲ ಇಂತಹ ಹುಚ್ಚು ಸಾಹಸ ಬಿಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕೊರೊನಾ ಪಾಸಿಟಿವ್?

    Live Tv