Tag: aid

  • ಭೂಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡ; ಹೆಂಡತಿ-ಮಕ್ಕಳ ನೆನಪಿಗಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ

    ಭೂಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡ; ಹೆಂಡತಿ-ಮಕ್ಕಳ ನೆನಪಿಗಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ

    ಮಡಿಕೇರಿ: ಅದು 2019.. ಕೊಡಗು (Kodagu) ಜಿಲ್ಲೆಯಲ್ಲಿ ಮಹಾಮಳೆಯ ಸಮಯ. ಜುಲೈ-ಆಗಸ್ಟ್ ತಿಂಗಳಲ್ಲಿ ಸುರಿದ ಬಾರಿ ಮಳೆಗೆ ಅ ಊರಿನಲ್ಲಿ ಬೆಟ್ಟವೇ ಕುಸಿದು ಸಾವು-ನೋವುಗಳು ಸಂಭವಿಸಿದವು. ಅದರಲ್ಲೂ ವ್ಯಕ್ತಿಯೊಬ್ಬರ ಹೆಂಡತಿ-ಮಕ್ಕಳು ಭೂಕುಸಿತದಿಂದ ಮರಣ ಹೊಂದಿದರು. ಅ ಘಟನೆಯಿಂದ ಹೊರಗೆ ಬಾರದೇ ಇರುವ ಅ ಊರಿನ ಜನರು ಇಂದಿಗೂ ಸಣ್ಣಮಳೆ ಬಂದರೂ ಭಯಪಡುತ್ತಾರೆ. ಅದರೆ ಅ ವ್ಯಕ್ತಿ ಮಾತ್ರ ತನ್ನ ಹೆಂಡತಿ-ಮಕ್ಕಳ ಮೇಲಿನ ಆಪಾರವಾದ ಪ್ರೀತಿಗಾಗಿ ಅವರಿಗೆ ಬಂದ ಪರಿಹಾರದ ಹಣದಲ್ಲಿ ಬಡ ಜನರಿಗೆ ಒಂದು ಸೂರು ಕಲ್ಪಿಸುವ ಮ‌ೂಲಕ ಜಿಲ್ಲೆಯ ಜನರಿಗೆ ಮಾದರಿಯಾಗಿದ್ದಾರೆ.

    2019 ರಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಮಹಾಮಳೆಗೆ ದುರ್ಘಟನೆಯೊಂದು ನಡೆದುಹೋಗಿತ್ತು. ಭಾರೀ ಮಳೆ ಇರುವ ಹಿನ್ನೆಲೆಯಲ್ಲಿ ಮನೆಯ ಮುಂದೆ ಪ್ರವಾಹ ಬರುತ್ತದೆ ಎಂದು ಬೆಟ್ಟದ ಮೇಲೆ ಆಶ್ರಯ ಪಡೆಯಲು ಹೊರಟಿದ್ದ ಜನರಿಗೆ ಪ್ರಕೃತಿಯೇ ಮುನಿಸಿಕೊಂಡು ಆ ಬೆಟ್ಟ ಪ್ರದೇಶವೇ ಭೂಕುಸಿತವಾಗಿತ್ತು. ಸುಮಾರು 10 ಜನರು ಮಣ್ಣಿನ ಅವಶೇಷಗಳಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಶವಗಳ ಹುಡುಕಾಟವು ಸುಮಾರು ವಾರಗಟ್ಟಲೇ ನಡೆಯಿತು. ಇದನ್ನೂ ಓದಿ: ಭೂಕಂಪ, ಸುನಾಮಿ ಸಂಭವಿಸಿದರೂ ಜಪಾನ್‌ನಲ್ಲಿ ಜಾಸ್ತಿ ಹಾನಿಯಾಗಲ್ಲ ಯಾಕೆ? ದೇಶ ಹೇಗೆ ಎದುರಿಸುತ್ತೆ?

    ಅಂದು ಈ ಗ್ರಾಮದ ಪ್ರಭು ಕುಮಾರ್ ಎಂಬವರು ತನ್ನ ಹೆಂಡತಿ ಅನಸೂಯ ಹಾಗೂ ಮಕ್ಕಳಾದ ಅಮೃತ ಅದಿತಿಯನ್ನು ಕಳೆದುಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣವನ್ನು ಮೃತಪಟ್ಟವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಪರಿಹಾರದ ಹಣವನ್ನು ಪಡೆದ ಪ್ರಭುಕುಮಾರ್, ಹೆಂಡತಿ-ಮಕ್ಕಳ ಹೆಸರಿನಲ್ಲಿ ಏನನ್ನಾದರೂ ಮಾಡಬೇಕು ಎಂದು ಯೋಚಿಸಿ, ತೋಟದ ಕಾರ್ಮಿಕರಾಗಿ ಸಂಕಷ್ಟದ ಬದುಕು ನಡೆಸುತ್ತಿರುವ ಬೋಜು, ಬೊಳ್ಳಕ್ಕಿ ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ಹೆಂಡತಿ-ಮಕ್ಕಳ ಆಸೆಯಂತೆ ಬಡವರ್ಗದ ಜನರಿಗೆ ಸಹಾಯ ಮಾಡಬೇಕು ಎಂಬ ಹಂಬಲದಿಂದ ತನ್ನ ಆಸೆ ಈಡೇರಿಸುವ ಕೆಲಸ ಮಾಡಿದ್ದಾರೆ.

    ಈ ತೋರಾ ಗ್ರಾಮದಲ್ಲೇ ಚಿಕ್ಕ ತೋಟವನ್ನು ಹೊಂದಿರುವ ಬೋಜು, ಬೊಳ್ಳಚ್ಚಿ ಅವರ ಮಕ್ಕಳಾದ ಶರಣು, ಶಾಂತಿ ಕುಟುಂಬ ಚಿಕ್ಕ ಮತ್ತು ಹಳೆಯದಾದ ಹುಲ್ಲಿನ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿತ್ತು. ಇದನ್ನು ಗಮನಿಸಿದ ಪ್ರಭುಕುಮಾರ್ 80 ಸಾವಿರ ವೆಚ್ಚದಲ್ಲಿ ಸಿಮೆಂಟ್‌ ಕಾಂಪೌಂಡ್ ಗೋಡೆಗಳನ್ನು ಬಳಸಿ, ಸಿಮೆಂಟ್ ಶೀಟುಗಳನ್ನು ಹೊದಿಸಿ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಂತಾಗುತ್ತಿದ್ದ ನೆಲ, ಹುಲ್ಲಿನ ಸಂದಿಗಳಿಂದ ತೊಟ್ಟಿಕ್ಕುವ ನೀರ ಹನಿಗಳಲ್ಲಿ ನೆನೆಯುತ್ತಲೇ ಬದುಕು ದೂಡುತ್ತಿತ್ತು ಶರಣು, ಶಾಂತಿ ಕುಟುಂಬ. ಇವರನ್ನು ಕಂಡಾಗಲೆಲ್ಲಾ ಪ್ರಭುಕುಮಾರ್ ಪತ್ನಿ ಅನಸೂಯ ಮಮ್ಮಲ ಮರುಗುತಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೇ ತನ್ನ ಮೊದಲ ಮಡದಿಯ ಸವಿನೆನಪಿಗಾಗಿ ಸೂರೊಂದನ್ನು ನಿರ್ಮಿಸಿಕೊಟ್ಟು, ಹೆಂಡತಿ-ಮಕ್ಕಳ ಆಶಯ ಈಡೇರಿಸುವ ಕೆಲಸ ಮಾಡಿದ್ದಾರೆ. ಮನೆ ಕಲ್ಪಿಸಿಕೊಟ್ಟ ಪ್ರಭು ಅವರ ಕಾರ್ಯಕ್ಕೆ ಈ ಬಡ ಕುಟುಂಬ ಚಿರರುಣಿ ಎನ್ನುತ್ತಿದ್ದಾರೆ. ಇದನ್ನೂ ಓದಿ: ತುಳುನಾಡಿನ ಕಾರಣಿಕ ದೈವ ಕೊರಗಜ್ಜ ಗುಡಿಗೇ ಬೆಂಕಿಯಿಟ್ಟ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇಡೀ ದೇಶ ನಲುಗಿ ಹೋಗಿದೆ. ಸಾವಿನ ಸಂಖ್ಯೆಯೂ ವ್ಯಾಪಕವಾಗಿ ಏರಿಕೆ ಕಾಣುತ್ತಿರುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪಾಕಿಸ್ತಾನ ಸರ್ಕಾರಕ್ಕೆ 1.17 ಶತಕೋಟಿ ಡಾಲರ್ ನಿಧಿ ಬಿಡುಗಡೆಗೆ ಒಪ್ಪಿಕೊಂಡಿದೆ.

    ಈ ಹಣ ಮೂಲತಃ 2019ರಿಂದ ತಡೆಹಿಡಿಯಲಾದ ಬೇಲ್‌ಔಟ್ ಸಾಲದ ಭಾಗವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ಸಮಯ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದ ಐಎಂಎಫ್‌ನ ಬೇಡಿಕೆಯನ್ನು ಪೂರೈಸದ್ದಕ್ಕೆ ಈ ಪಾವತಿಯನ್ನು ತಡೆಹಿಡಿಯಲಾಗಿತ್ತು.

    ಇದೀಗ ಐಎಂಎಫ್ ತಡೆಹಿಡಿಯಲಾದ ಪಾವತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಕೊಂಡಿದೆ. ಅದರೊಂದಿಗೆ ಹೆಚ್ಚುವರಿ 1 ಶತಕೋಟಿ ಡಾಲರ್ ಅನ್ನು ನೀಡಲು ಐಎಂಎಫ್ ಮುಂದಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ

    ಭಾರೀ ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಸುಮಾರು 1,100 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ನೆರವಿಗೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೆ ನೆರವಾದ ಬಾಲಿವುಡ್ ನಟ ಸೋನು ಸೂದ್

    ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೆ ನೆರವಾದ ಬಾಲಿವುಡ್ ನಟ ಸೋನು ಸೂದ್

    ನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ಮಾನ್ವಿತಾ ಕಾಮತ್, ಬಾಲಿವುಡ್ ನಟ ಸೋನು ಸೂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ತಾಯಿಯ ಚಿಕಿತ್ಸೆಗಾಗಿ ಸೋನು ನೆರವಾಗಿದ್ದನ್ನು ಅವರು ನೆನದಿದ್ದಾರೆ. ನನ್ನ ಕುಟುಂಬದ ಪಾಲಿನ ರಿಯಲ್ ಹೀರೋ ನೀವು ಎಂದು ಸೋನು ಸೂದ್ ಅವರನ್ನು ಗುಣಗಾನ ಮಾಡಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ಮಾನ್ವಿತಾ ಅವರ ತಾಯಿಗೆ ಕಿಡ್ನಿ ಸಮಸ್ಯೆ ಆಗಿತ್ತು. ಚಿಕಿತ್ಸೆಗಾಗಿ ಒಳ್ಳೆಯ ವೈದ್ಯರನ್ನು ಸಲಹೆ ನೀಡಿ ಎಂದು ಅವರು ಪೋಸ್ಟ್ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ್ದ ಮಂಗಳೂರಿನ ಸೋನು ಸೂದ್ ಟ್ರಸ್ಟ್, ಮಾನ್ವಿತಾ ಅವರನ್ನು ಸಂಪರ್ಕಿಸಿತ್ತು. ತಾಯಿಯ ಚಿಕಿತ್ಸೆಗೆ ಅಗತ್ಯವಿರುವ ನೆರವನ್ನು ನೀಡುವುದಾಗಿ ಫೌಂಡೇಷನ್ ತಿಳಿಸಿತ್ತು. ತಾನು ಕೊಟ್ಟ ಮಾತಿನಂತೆ ನೆರವಾಗಿದೆ. ಹಾಗಾಗಿಯೇ ಮಾನ್ವಿತಾ ಅವರು ಸೋನು ಅವರನ್ನು ನೆನೆದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಮಾನ್ವಿತಾ ಅವರ ತಾಯಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಲ್ಲದೇ, ಅವರಿಗೆ ಕಿಡ್ನಿ ಕಸಿಯನ್ನೂ ಮಾಡಿಸಬೇಕಿದೆಯಂತೆ. ಈ ಚಿಕಿತ್ಸೆಗೆ ಅಗತ್ಯ ಇರುವ ನೆರವನ್ನೂ ಸೋನು ಸೂದ್ ನೀಡುವುದಾಗಿ ಆಸ್ಪತ್ರೆಗೆ ತಿಳಿಸಿದ್ದಾರಂತೆ. ಆದಷ್ಟು ಬೇಗ ಮಾನ್ವಿತಾ ತಾಯಿಯ ಆರೋಗ್ಯ ಸುಧಾರಿಸಲಿ ಎಂದು ಅವರೂ ಹಾರೈಸಿದ್ದಾರಂತೆ.

    ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಮಾನ್ವಿತಾ, ಆನಂತರ ಅನೇಕ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾದರು. ಈ ವಾರ ಮಾನ್ವಿತಾ ನಟನೆಯ ಶಿವ 143 ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರಂತೆ. ಅಲ್ಲದೇ, ಮತ್ತಷ್ಟು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಭೂಕಂಪದಿಂದ ತೊಂದರೆಗೆ ಸಿಲುಕಿರುವ ಆಫ್ಘನ್ನರಿಗೆ ನೆರವು – ಭಾರತಕ್ಕೆ ಧನ್ಯವಾದ ತಿಳಿಸಿದ ತಾಲಿಬಾನ್‌

    ಭೂಕಂಪದಿಂದ ತೊಂದರೆಗೆ ಸಿಲುಕಿರುವ ಆಫ್ಘನ್ನರಿಗೆ ನೆರವು – ಭಾರತಕ್ಕೆ ಧನ್ಯವಾದ ತಿಳಿಸಿದ ತಾಲಿಬಾನ್‌

    ಕಾಬೂಲ್‌: ಭೀಕರ ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಜನತೆಗೆ ಭಾರತ ನೆರವಿನ ಹಸ್ತ ಚಾಚಿದೆ. ಭಾರತವು ಶುಕ್ರವಾರ ಎರಡನೇ ಬಾರಿಗೆ ಅಗತ್ಯ ವಸ್ತುಗಳನ್ನು ಅಫ್ಘಾನ್‌ ಸಂತ್ರಸ್ತರಿಗಾಗಿ ರವಾನಿಸಿದೆ.

    ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸಿ 1,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಭೂಕಂಪದಿಂದಾಗಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವು ನೀಡಲು ಭಾರತ ಮುಂದಾಗಿದ್ದು, ಈಗಾಗಲೇ ತಂಡವೊಂದು ಕಾಬೂಲ್‌ ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಈ ಕುರಿತು ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪ – 280 ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ

    ರಿಡ್ಜ್ ಟೆಂಟ್‌ಗಳು, ಸ್ಲೀಪಿಂಗ್‌ ಬ್ಯಾಗ್ಸ್‌, ಹೊದಿಕೆಗಳು, ಸ್ಲೀಪಿಂಗ್‌ ಮ್ಯಾಟ್‌ ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅಪ್ಘಾನ್‌ ಜನತೆಗೆ ನೆರವಿಗಾಗಿ ರವಾನಿಸಲಾಗಿದೆ. ಪರಿಹಾರ ಸರಕನ್ನು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಮತ್ತು ಕಾಬೂಲ್‌ನಲ್ಲಿರುವ ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ (ARCS)ಗೆ ಹಸ್ತಾಂತರಿಸಲಾಗುವುದು.

    ಜೂನ್ 22, 2022 ರಂದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು, ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ಸಂತ್ರಸ್ತರಿಗಾಗಿ ಭಾರತ ಸರ್ಕಾರವು ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್‌

    ಅಫ್ಘಾನಿಸ್ತಾನಕ್ಕೆ ಮಾನವೀಯ ಸಹಾಯ ಒದಗಿಸಲು ತನ್ನ ತಾಂತ್ರಿಕ ತಂಡವನ್ನು ಕಳುಹಿಸಿದ ಭಾರತದ ನಿರ್ಧಾರವನ್ನು ತಾಲಿಬಾನ್ ಸ್ವಾಗತಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ಆಫ್ಘನ್ನರ ರಕ್ಷಣೆಗೆ ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿರುವ ರಾಯಭಾರಿ ಕಚೇರಿಗೆ ಕಳುಹಿಸಿರುವ ಭಾರತದ ನಿರ್ಧಾರ ಸ್ವಾಗತಾರ್ಹ ಎಂದು ತಾಲಿಬಾನ್‌ ವಕ್ತಾರ ಅಬ್ದುಲ್‌ ಕಹರ್‌ ಬಾಲ್ಚಿ ತಿಳಿಸಿದ್ದಾರೆ.

    Live Tv

  • ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‍ವೈ

    ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‍ವೈ

    ಚಾಮರಾಜನಗರ: ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿಯ ಕುಟುಂಬಕ್ಕೆ ಬಿಎಸ್‍ವೈ ಭೇಟಿ ನೀಡಿ 5 ಲಕ್ಷ ರೂ. ಪರಿಹಾರವನ್ನು ನೀಡಿದ್ದಾರೆ.

    ಚಾಮರಾಜಗರದ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮ ಅಭಿಮಾನಿ ರವಿ ಬಿಸ್‍ವೈ ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇಂದು ಮೃತ ಅಭಿಮಾನಿ ಮನೆಗೆ ಬಿಸ್‍ವೈ ಭೇಟಿಕೊಟ್ಟಿದ್ದಾರೆ.

    ರವಿ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಇದರಲ್ಲಿ 5 ಲಕ್ಷ ರೂಪಾಯಿ ಹಣವಿದೆ ಇಟ್ಟುಕೊಳ್ಳಿ. ನಾನು ಇನ್ನು 5 ಲಕ್ಷ ರೂಪಾಯಿ ಹಣವನ್ನು ಕಳುಹಿಸುತ್ತೇನೆ ಮನೆಯನ್ನು ಕಟ್ಟಿಸಿಕೊಳ್ಳಿ ಎಂದು ಹೇಳಿ ಅಭಿಮಾನಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.


    ಯಡಿಯೂರಪ್ಪ ರಾಜೀನಾಮೆ ನೀಡಿದ್ದಕ್ಕೆ ಬೊಮ್ಮಲಾಪುರದ ರವಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಇಡೀ ಕುಟುಂಬ ರವಿ ಆಗಲಿಕೆಯಿಂದ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.  ಇದನ್ನೂ ಓದಿ:  ಬಿಎಸ್‍ವೈ ರಾಜೀನಾಮೆ – ನೇಣಿಗೆ ಶರಣಾದ ಅಭಿಮಾನಿ

    ಯಡಿಯೂರಪ್ಪ ಪಕ್ಕಾ ಅಭಿಮಾನಿಯಾಗಿದ್ದ ರವಿ ಮನೆಯ ಮುಂದೆ ಬಿಎಸ್‍ವೈ ಫೋಟೋ ಅಳವಡಿಸಿ ಅಭಿಮಾನ ತೋರಿಸಿದ್ದರು. ಅಲ್ಲದೇ ಮನೆಗೆ ಆಧಾರ ಸ್ಥಂಭವಾಗಿದ್ದ ರವಿ ಆಗಲಿಕೆ ಕುಟುಂಬಸ್ಥರಿಗೆ ನೋವುಂಟು ಮಾಡಿದೆ. ಮುಂದೆ ಹೇಗೆ ಜೀವನ ನಡೆಸುವುದು ಅಂತಾ ತೋಚದಾಗಿದೆ.

    ಇದೀಗ ನಮ್ಮ ರವಿ ತೀರಿಕೊಂಡಿದ್ದಾನೆ. ಮುಂದೆ ಏನು ಮಾಡೋದು? ಜೀವನ ಹೇಗೆ ನಡೆಸೋದು ಅಂತಾ ಗೊತ್ತಾಗ್ತಿಲ್ಲ ಅಂತಾ ರವಿ ಅಮ್ಮ, ಅಕ್ಕ ನೋವು ತೋಡಿಕೊಂಡಿದ್ದಾರೆ. ಜು.26ರಂದು ರವಿ ಮನನೊಂದು ಟಿವಿ ನೋಡುತ್ತಾ ದುಃಖಿತನಾಗಿದ್ದರು. ಎಲ್ಲರೂ ಕೂಡ ಊರಿನಲ್ಲಿ ರವಿ ಅವರನ್ನು ರಾಜಾಹುಲಿ ಅಂತಾ ಕರೆಯುತ್ತಿದ್ದರು.

    ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದರು. ಬಿಎಸ್‍ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ ರವಿ ಹೋಟೆಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

  • ಕೊಡಗಿನಲ್ಲಿ ಕೊಂಚ ಕಡಿಮೆಯಾದ ವರುಣನ ಅರ್ಭಟ- ನಿಲ್ಲದ ಭೂಕುಸಿತ

    ಕೊಡಗಿನಲ್ಲಿ ಕೊಂಚ ಕಡಿಮೆಯಾದ ವರುಣನ ಅರ್ಭಟ- ನಿಲ್ಲದ ಭೂಕುಸಿತ

    – ನೆರವಿನ ನಿರೀಕ್ಷೆಯಲ್ಲಿ ಜನ

    ಕೊಡಗು: ಜಿಲ್ಲೆಯನಲ್ಲಿ ಮಳೆ ಕೊಂಚ ತಗ್ಗಿದ್ದರೂ ಮಳೆಯ ಅವಾಂತರ ಮಾತ್ರ ನಿಂತಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿದೆ. ಪರಿಣಾಮ ಜಿಲ್ಲೆಯ ಜನತೆ ಮಾತ್ರ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ.

    ನಿನ್ನೆಯವರೆಗೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ಬೆಳೆ, ಆಸ್ತಿ-ಪಾಸ್ತಿ ಹಾನಿಯಿಂದ ಕಂಗಾಲಾಗಿರುವ ಜನತೆ ಮುಂದೇನೂ ತಿಳಿಯದ ಸ್ಥಿತಿಗೆ ಬಂದು ತಲುಪಿಸಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಬಳಕೆ ವಸ್ತುಗಳೆಲ್ಲ ನೀರು ಪಾಲಾಗಿದೆ. ಮರುಬಳಕೆಗೂ ಉಪಯೋಗವಿಲ್ಲದ ಸ್ಥಿತಿಯಲ್ಲಿರುವ ಸಾಮಾಗ್ರಿಗಳು ನೀರಲ್ಲಿ ತೇಲಾಡುತ್ತಿದೆ. ಭೂಕುಸಿತ, ಪ್ರವಾಹದಿಂದ ತತ್ತರಿಸಿದ ಬೆಳೆಗಾರರು ನೆರವಿನ ನಿರೀಕ್ಷೆಯಲ್ಲಿದ್ದಾರೆ.

    ಕಳೆದ ಬಾರಿಯ ವಿಕೋಪದಿಂದಲೇ ಚೇತರಿಸಿಕೊಳ್ಳದ ಜಿಲ್ಲೆಯ ಜನತೆಗೆ ಈ ಬಾರಿ ವರುಣ ಗಾಯದ ಮೇಲೆ ಮತ್ತೆ ಬರೆ ಎಳೆದಿದ್ದಾನೆ. ನಾಟಿ ಕಾರ್ಯಕ್ಕೆ ತಯಾರಿಯಲ್ಲಿದ್ದವರಿಗೆ ಪ್ರವಾಹದ ಆಘಾತ ಉಂಟಾಗಿದ್ದು, ಗದ್ದೆಗಳಲ್ಲಿ ಸಂಗ್ರಹಗೊಂಡಿರುವ ಭೂಕುಸಿತದ ಮಣ್ಣು ಜನತೆಯನ್ನು ಕಂಗೆಡಿಸಿದೆ. ನದಿಪಾತ್ರದ ಸ್ಥಳಗಳಲ್ಲಿ ಭತ್ತದ ಗದ್ದೆ ಮೇಲೆ ನೀರು ನಿಂತು ಮೂರಕ್ಕೂ ಹೆಚ್ಚು ದಿನಗಳಾಗಿದೆ. ಇದರ ನಡುವೆ ಮೂಕ ಪ್ರಾಣಿಗಳು ರೋಧಿಸುವ ದೃಶ್ಯ ಮನಕಲಕುತ್ತಿದ್ದು, ಹಲವು ಜಾನುವಾರುಗಳು ಪ್ರವಾಹಕ್ಕೆ ಬಲಿಯಾಗಿದೆ.

    ಸದ್ಯ ಮೂರು ತಾಲೂಕಿನಲ್ಲಿಯೂ ಜಾನುವಾರು ರಕ್ಷಣೆಗೆ ಕ್ರಮ ವಹಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕಾಗಮಿಸಲು ಮನವಿ ಮಾಡುತ್ತಿರುವ ಸಂತ್ರಸ್ತರು, ಸರ್ಕಾರದ ಮೇಲೆ ಮಹಾ ನಿರೀಕ್ಷೆ ಇಟ್ಟು ಪರಿಹಾರಕ್ಕೆ ಕಾಯುತ್ತಿದ್ದಾರೆ. ಮುಂಜಾನೆಯಿಂದ ಕೊಂಚ ಬಿಡುವು ನೀಡುತ್ತಾ, ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಡಿಕೇರಿ ನಗರ ಸೇರಿದಂತೆ ಗಾಳಿಬೀಡು, ವಣಚಲು, ಭಾಗಮಂಡಲ, ನಾಪೋಕ್ಲು, ಚೇರಂಬಾಣೆ, ಜೋಡುಪಾಲ, ಸಂಪಾಜೆ, ಕಾಟಕೇರಿ, ತಾಳತ್ತ್‍ಮನೆ, ಮದೆನಾಡು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.

    ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಮೇಘಾತ್ತಾಳು ಗ್ರಾಮದ ರಸ್ತೆ ಪ್ರವಾಹ ಹಿನ್ನೆಲೆಯಲ್ಲಿ ಬರೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮರದ ನಾಟಗಳು ರಸ್ತೆಯಲ್ಲಿ ಆವರಿಸಿಕೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇತ್ತ ವಿರಾಜಪೇಟೆ ಗೋಣಿಕೊಪ್ಪ ಭಾಗದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮಳೆ ಕೊಂಚ ಕಡಿಯಾಗುತ್ತಿರುವುದರಿಂದ ಗೋಣಿಕೊಪ್ಪ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ.

  • ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

    ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

    ನವದೆಹಲಿ: ಕೇರಳ ಸಂತ್ರಸ್ತರಿಗೆ ಯುಎಇ ಸರ್ಕಾರ ಘೋಷಿಸಿದ್ದ 700 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಕೇಂದ್ರ ಸರ್ಕಾರದ ನೀತಿ ಅಡ್ಡಿಯಾಗಲಿದೆ ಎಂದು ವರದಿಯಾಗಿದೆ.

    ವಿದೇಶಗಳಿಂದ ಸಾಲ ರೂಪದಲ್ಲಿ ಮಾತ್ರವೇ ಭಾರತ ಹಣವನ್ನು ಪಡೆಯಲು ಸಾಧ್ಯ. ಹೊರತಾಗಿ ವಿದೇಶಗಳಿಂದ ಯಾವುದೇ ನೆರವು ಸ್ವೀಕರಿಸುವಂತಿಲ್ಲ ಎನ್ನುವ ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಂಡಿದೆ. ಹೀಗಾಗಿ ಈ ಆರ್ಥಿಕ ನೆರವು ಸಿಗುವುದಿಲ್ಲ ಎಂದು ಉನ್ನತ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಸುನಾಮಿಯ ನಂತರ ಭಾರತವು ವಿದೇಶದಿಂದ ನೆರವು ಸ್ವೀಕರಿಸುವುದನ್ನು ನಿಲ್ಲಿಸಿದೆ. ಉತ್ತರಾಖಂಡ್ ರಾಜ್ಯದಲ್ಲಿ ಜಲಪ್ರಳಯ ಉಂಟಾದಾಗ ವಿದೇಶಗಳಿಂದ ಪರಿಹಾರ ನಿಧಿ ಹರಿದುಬಂದಿತ್ತು. ಆದರೆ ಅಂದಿನ ವಿತ್ತ ಸಚಿವ ಪಿ.ಚಿದಂಬರಂ ವಿಶ್ವ ಬ್ಯಾಂಕಿನಿಂದ ಸಾಲ ಪಡೆದರೂ, ವಿದೇಶಗಳಿಂದ ಪರಿಹಾರ ನಿಧಿ ಪಡೆಯುವುದಿಲ್ಲ ಎಂದು ಹೇಳಿದ್ದರು. ಇದನ್ನು ಓದಿ: ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು

    ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿಶ್ವಸಂಸ್ಥೆ, ರಷ್ಯಾ, ಚೀನಾ ಸೇರಿದಂತೆ ಅನೇಕ ದೇಶಗಳಿಂದ ನೆರವು ಹರಿದು ಬಂದಿತ್ತು. ಆದರೆ ಇದ್ಯಾವುದನ್ನೂ ಅಂದಿನ ಸರ್ಕಾರ ಸ್ವೀಕರಿಸಿಲ್ಲ. ಇದು ಈಗ ಕೇರಳ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv