Tag: Ahoratra

  • ದೂರು ನೀಡಿದರೂ ಕಿಚ್ಚ ಸುದೀಪ್ ಕುರಿತಾದ ಅವಹೇಳನ ನಿಲ್ಲಿಸಿಲ್ಲ ‘ಅಹೋರಾತ್ರ’  ಶಿಷ್ಯ ಚರಣ್

    ದೂರು ನೀಡಿದರೂ ಕಿಚ್ಚ ಸುದೀಪ್ ಕುರಿತಾದ ಅವಹೇಳನ ನಿಲ್ಲಿಸಿಲ್ಲ ‘ಅಹೋರಾತ್ರ’ ಶಿಷ್ಯ ಚರಣ್

    ಕಿಚ್ಚ ಸುದೀಪ್ ಅವರನ್ನು ಸಮಾಜಿಕ ಜಾಲತಾಣದಲ್ಲಿ ಸತತವಾಗಿ ನಿಂದಿಸುತ್ತಿರುವ ಲೇಖಕ, ಧಾರ್ಮಿಕ ಚಿಂತಕ ಅಹೋರಾತ್ರ ಮತ್ತು ಈತನ ಶಿಷ್ಯ ಚರಣ್ ಸೇವಕ ಎನ್ನುವವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸುದೀಪ್ ಪರವಾಗಿ ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿದರೂ, ಸುದೀಪ್ ಅವರನ್ನು ನಿಂದಿಸುವುದನ್ನು ಮಾತ್ರ ಚರಣ್ ನಿಲ್ಲಿಸಿಲ್ಲ. ನಿನ್ನೆ ಮತ್ತೆ ಫೇಸ್ ಬುಕ್ ಲೈವ್ ಗೆ ಬಂದಿರುವ ಚರಣ್, ಮತ್ತೆ ಸುದೀಪ್ ಮತ್ತು ಅಭಿಮಾನಿಗಳನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಹೀಗಾಗಿ ಕಠಿಣ ಕ್ರಮಕ್ಕಾಗಿ ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ಆನ್ ಲೈನ್ ಆಟಕ್ಕೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ನಟ ಕಿಚ್ಚ ಸುದೀಪ್ ಅವರನ್ನು ನಿಂದಿಸುತ್ತಾ ಬಂದಿದ್ದಾರೆ ಅಹೋರಾತ್ರ. ಇತ್ತೀಚೆಗಷ್ಟೇ ತಾವು ಅಹೋರಾತ್ರನ ಶಿಷ್ಯ ಎಂದು ಹೇಳಿಕೊಂಡಿರುವ ಚರಣ್ ಕೂಡ ಅದೇ ಹಾದಿಯನ್ನು ತುಳಿದಿದ್ದಾರೆ. ಹಾಗಾಗಿ ಇವರ  ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್‌ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್

    ಭಾರತೀಯ ಚಲನಚಿತ್ರ ರಂಗದಲ್ಲಿ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತರಾಗಿರುವ ಶ್ರೀ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳ್ಲಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರ ಸಂಗತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿ ಚ್ಯುತಿ ಬರದಂತೆ ಸಹಕರಿಸಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಇಂದು ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಹೋರಾತ್ರ ಮತ್ತು ಶಿಷ್ಯ ಚರಣ್ ವಿರುದ್ಧ ಕ್ರಮಕ್ಕಾಗಿ ಸುದೀಪ್ ಪರ ದೂರು ದಾಖಲಿಸಿದ ಫಿಲ್ಮ್ ಚೇಂಬರ್

    ಅಹೋರಾತ್ರ ಮತ್ತು ಶಿಷ್ಯ ಚರಣ್ ವಿರುದ್ಧ ಕ್ರಮಕ್ಕಾಗಿ ಸುದೀಪ್ ಪರ ದೂರು ದಾಖಲಿಸಿದ ಫಿಲ್ಮ್ ಚೇಂಬರ್

    ನ್ ಲೈನ್ ಆಟಕ್ಕೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ನಟ ಕಿಚ್ಚ ಸುದೀಪ್ ಅವರನ್ನು ನಿಂದಿಸುತ್ತಾ ಬಂದಿರುವ ಲೇಖಕ, ಧಾರ್ಮಿಕ ಚಿಂತಕ ಅಹೋರಾತ್ರ ಮತ್ತು ಈತನ ಶಿಷ್ಯ ಚರಣ್ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಸುದೀಪ್ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಹಾಯಕ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಇವರಿಗೆ ದೂರು ನೀಡಿದ್ದಾರೆ.

    ಭಾರತೀಯ ಚಲನಚಿತ್ರ ರಂಗದಲ್ಲಿ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತರಾಗಿರುವ ಶ್ರೀ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳ್ಲಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರ ಸಂಗತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಮಿಂಚಿದ ಉರ್ಫಿ ಜಾವೇದ್: ಹೀಗೂ ಸೀರೆ ಉಡಬಹುದಾ ಎಂದ ಫ್ಯಾನ್ಸ್

    ಅಲ್ಲದೇ, ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿ ಚ್ಯುತಿ ಬರದಂತೆ ಸಹಕರಿಸಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಇಂದು ದೂರು ನೀಡಿದ್ದಾರೆ.  ಸುದೀಪ್ ಫ್ಯಾನ್ಸ್ ಮತ್ತು ಅಹೋರಾತ್ರ ನಡುವೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವಂತಹ ಅನೇಕ ಪೋಸ್ಟ್ ಗಳು ಸಿಗುತ್ತವೆ. ಆದರೆ, ಸುದೀಪ್ ಈ ಕುರಿತು ಒಂದೇ ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]