Tag: Ahmedabad

  • ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

    ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

    ನವದೆಹಲಿ: ಹಕ್ಕಿ ಡಿಕ್ಕಿಯಾಗಿ (Bird Hit) ಅಹಮಾದಬಾದ್‌ನಲ್ಲಿ (Ahmedabad) ಏರ್‌ ಇಂಡಿಯಾ (Air India) ವಿಮಾನ ಪತನಗೊಂಡಿತಾ (Plane Crash) ಎಂಬ ಶಂಕೆ ವ್ಯಕ್ತವಾಗಿದೆ.

    ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಎಂಜಿನ್‌ಗೆ ಪಕ್ಷಿ ಬಡಿದ ಕಾರಣ ಈ ದುರಂತ ಸಂಭವಿಸಬರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಟೇಕಾಫ್‌ ಆಗುವಾಗ ಎಂಜಿನ್‌ಗೆ ಪಕ್ಷಿ ಬಡಿದಾಗ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ಅಟೋಮ್ಯಾಟಿಕ್‌ ಆಗಿ ತಗ್ಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ಸಾಧಾರಣವಾಗಿ ವಿಮಾನದ ಒಂದು ಎಂಜಿನ್‌ಗೆ ಪಕ್ಷಿ ಬಡಿದರೆ ಇನ್ನೊಂದು ಎಂಜಿನ್‌ ಮೂಲಕ ಚಾಲನೆ ಮಾಡಿ ಸಮೀಪದ ನಿಲ್ದಾಣದಲ್ಲಿ ಪೈಲಟ್‌ ತುರ್ತು ಲ್ಯಾಂಡ್‌ ಮಾಡುತ್ತಾರೆ. ಆದರೆ ಇಲ್ಲಿ ಎರಡು ಎಂಜಿನಿಗೆ ಪಕ್ಷಿ ಬಡಿದ ಕಾರಣ ವಿಮಾನ ವೇಗವನ್ನು ಕಳೆದುಕೊಂಡು ಪತನ ಹೊಂದಿರಬಹುದು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಎಂಜಿನಿಗೆ ಪಕ್ಷಿ ಬಡಿಯುವುದು ಅಪರೂಪದಲ್ಲಿ ಅಪರೂಪ.

    ವಿಮಾನ ಟೇಕಾಫ್‌ ಆಗಿತ್ತು. ಅದರ ಲ್ಯಾಂಡಿಂಗ್ ಗೇರ್ ಮೇಲಕ್ಕೆತ್ತುವ ಮೊದಲೇ ವಿಮಾನವನ್ನು ಕೆಳಗಿಳಿಯಲು ಪ್ರಾರಂಭಿಸಲಾಗಿತ್ತು. ವಿಮಾನದ ಇಂಜಿನ್ ಶಕ್ತಿಯನ್ನು ಕಳೆದುಕೊಂಡರೆ ಮಾತ್ರ ಹೀಗಾಗುತ್ತದೆ. ತನಿಖೆಯಿಂದ ನಿಖರವಾದ ಕಾರಣ ತಿಳಿಯುವ ಸಾಧ್ಯತೆಯಿದೆ.

    ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಮೊದಲಿಂದಲೂ ಹಕ್ಕಿಗಳ ಸಮಸ್ಯೆ ಇದೆ ಎಂದು ವರದಿಯಾಗುತ್ತಿದೆ.

    ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1:39 ಸುಮಾರಿಗೆ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ 10 ಸಿಬ್ಬಂದಿ ಸೇರಿ, 242 ಜನರಿದ್ದರು. ಅದರಲ್ಲಿದ್ದ 110 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನದ ಬ್ಲಾಕ್‌ ಬಾಕ್ಸ್‌ ಪರಿಶೀಲನೆ ಬಳಿಕ ಈ ಅವಘಡಕ್ಕೆ ನಿಖರ ಕಾರಣ ತಿಳಿಯಲಿದೆ. ಅಧಿಕಾರಿಗಳು ವಿಮಾನ ದುರಂತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

  • ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

    ಅಹಮದಾಬಾದ್ ವಿಮಾನ ಪತನ ದುರಾದೃಷ್ಟಕರ ಘಟನೆ: ಡಿ.ಕೆ ಶಿವಕುಮಾರ್

    ಬೆಂಗಳೂರು: ಅಹಮದಾಬಾದ್ ವಿಮಾನ ಪತನ (Air India Flight Crash) ದುರಾದೃಷ್ಟಕರ ಘಟನೆಯಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈ ಬಗ್ಗೆ ಮಾತನಾಡಿದ ಅವರು, ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ ವಿಮಾನ ಪತನ ಆಗಿದೆ. ಈ ಘಟನೆ ನಡೆದಿರುವುದು ನನಗೆ ಆಶ್ಚರ್ಯ ತರಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಿಮಾನಗಳು ಉತ್ತಮವಾಗಿ ಸಂಚಾರ ಆಗ್ತಿತ್ತು. ನಾನು ಕೆಲ ದೃಶ್ಯಗಳನ್ನ ನೋಡಿದ್ದೇನೆ. ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

    ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ದೇಶದಲ್ಲಿ ಹೆಚ್ಚು ಸಾವು ಆಗಬಾರದು. ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

    ವಿಮಾನ ಪತನ ಯಾಕೆ ಆಗಿದೆ ಅನ್ನೋದನ್ನ ಸಿವಿಲ್ ಏವಿಯೇಷನ್ ಅವರು ಕಂಡುಹಿಡಿಯುತ್ತಾರೆ. ಇದು ಬಹಳ ದುರಾದೃಷ್ಟಕರ ಘಟನೆ. ನಮ್ಮೆಲ್ಲಾ ಕರ್ನಾಟಕ ಸರ್ಕಾರದ ಹಾಗೂ ನಮ್ಮ ಪಕ್ಷದ ಪ್ರಾರ್ಥನೆ ಅವರ ಮೇಲೆ ಇದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

  • ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ಅಹಮದಾಬಾದ್‌: ʻಮೇ ಡೇ..ʼ ಇದು ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾದ (Air India) B787 ವಿಮಾನ ಅಹಮದಾಬಾದ್‌ನಲ್ಲಿ ಪತನಗೊಳ್ಳುವ ಕೆಲವೇ ಕ್ಷಣಕ್ಕೂ ಮುನ್ನ ಪೈಲಟ್‌ ಏರ್‌ ಟ್ರಾಫಿಕ್‌ ಕಂಟ್ರೋಲ್‌ (ATC)ಗೆ ಕಳುಹಿಸಿದ ಕೊನೆಯ ಸಂದೇಶ ಇದಾಗಿತ್ತು.

    ಹೌದು. ರನ್‌ ವೇ 23ರಿಂದ‌ ವಿಮಾನ ಟೇಕಾಫ್‌ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್‌ ʻಮೇ ಡೇ.. ಮೇ ಡೇ..ʼ (MAYDAY) ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. MAYDAY ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್‌ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್‌ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು ಎಂದು ವರದಿಗಳು ತಿಳಿಸಿವೆ.

    ಅಹಮಾದಾಬಾದ್‌ನ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್‌ ಆದ ಏರ್‌ ಇಂಡಿಯಾ ವಿಮಾನ ಲಂಡನ್‌ಗೆ (London) ತೆರಳಬೇಕಿತ್ತು. ಈ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದು, ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕೂಡ ಇದೇ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. 169 ಭಾರತೀಯರು, 53 ಯುಕೆ ಪ್ರಯಾಣಿಕರು, ಪೋರ್ಚುಗೀಸ್‌ ದೇಶದ 7, ಓರ್ವ ಕೆನಡಿಯನ್‌ ವಿಮಾನದಲ್ಲಿದ್ದರು. ಆದ್ರೆ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

    ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಭಾರೀ ಸ್ಪೋಟ ಸಂಭವಿಸಿದ್ದು, ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿಮಾನದ ಅವಶೇಷಗಳು ವಿಮಾನ ನಿಲ್ದಾಣದ ಸುತ್ತಲೂ ಬಿದ್ದಿದ್ದು, ರಕ್ಷಣಾ ಕಾರ್ಯಚರಣೆ ಆರಂಭಗೊಂಡಿದೆ.

    ಇನ್ನೂ ಪತನಗೊಂಡಿರುವ ಏರ್‌ ಇಂಡಿಯಾ ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್, ಬರೋಬ್ಬರಿ 8,200 ಗಂಟೆಗಳ ಹಾರಾಟ ಅನುಭವ ಹೊಂದಿದ್ದರು. ಅದೇ ರೀತಿ ಸಹ-ಪೈಲಟ್‌ಗೆ 1,100 ಗಂಟೆಗಳ ಹಾರಾಟದ ಅನುಭವವಿತ್ತು. ಎಟಿಸಿ ಪ್ರಕಾರ, ವಿಮಾನವು ಅಹಮದಾಬಾದ್‌ನ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 23ರಿಂದ ಟೇಕಾಫ್‌ ಆಗಿತ್ತು.

  • ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಯಾವುದೇ ವಿಮಾನ/ ಹೆಲಿಕಾಪ್ಟರ್‌ ಪತನವಾದರೂ ಪತನದ ತನಿಖೆಯಲ್ಲಿ ಬ್ಲ್ಯಾಕ್‌ ಬಾಕ್ಸ್‌ (Black Box) ಪ್ರಮುಖ ಪಾತ್ರ ವಹಿಸುತ್ತದೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲಾ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಹೀಗಾಗಿ ಇಲ್ಲಿ ಏನಿದು ವಿಮಾನ ಬ್ಲ್ಯಾಕ್‌ ಬಾಕ್ಸ್‌? ಹೇಗೆ ಕಾರ್ಯನಿರ್ವಹಿಸುತ್ತದೆ ಇತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.

     

    ಹಿಂಭಾಗದಲ್ಲಿ ಯಾಕೆ?
    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

    ಬಳಕೆ ಆಗಿದ್ದು ಯಾವಾಗ?
    1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್‌ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್‌ ಬಾಕ್ಸ್‌ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.

  • ಏರ್‌ ಇಂಡಿಯಾ ವಿಮಾನ ದುರಂತ – ಸಂತಾಪ ಸೂಚಿಸಿದ ಸಿದ್ದರಾಮಯ್ಯ

    ಏರ್‌ ಇಂಡಿಯಾ ವಿಮಾನ ದುರಂತ – ಸಂತಾಪ ಸೂಚಿಸಿದ ಸಿದ್ದರಾಮಯ್ಯ

    ಬೆಂಗಳೂರು: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ ದುರಂತಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮೇಘಾನಿ ಪ್ರದೇಶ ಮೆಡಿಕಲ್ ಕಾಲೇಜ್‌ವೊಂದರ (Medical College) ಮೇಲೆ ಸುಮಾರು 200ಕ್ಕೂ ಅಧಿಕ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಈ ಸುದ್ದಿ ತಿಳಿದು ತುಂಬಾ ಆಘಾತವಾಗಿದೆ. ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಳಿಗೆ, ಈ ಅಪಘಾತದಿಂದ ಹೆಚ್ಚಿನ ಹಾನಿಯಾಗದಿರಲಿ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸೋಣ ಎಂದು ಬೇಸರ ವ್ಯಕ್ತಪಡಿಸಿದರು.ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

    ಘಟನೆ ಏನು?
    ಟೇಕಾಫ್ ನಂತರ ಎಂಜಿನ್‌ನಲ್ಲಿ ತಾಂತ್ರಿಕದೋಷ ಉಂಟಾದ ಪರಿಣಾಮ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನ ವಿಮಾನ ನಿಲ್ದಾಣದ ಬಳಿಯ ಮೆಡಿಕಲ್ ಕಾಲೇಜಿನ ಮೇಲೆ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದ ಮೇಘಾನಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ.

    ಅಲ್ಲದೇ ಮೆಡಿಕಲ್ ಕಾಲೇಜಿಗೆ ವಿಮಾನ ಬಡಿದ್ದಿದ್ದು, ಭಾರೀ ಸಾವು-ನೋವಿನ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ 7 ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

  • ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

    ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

    – ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಅಹಮದಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡ (Air India Plane) ಘಟನೆಗೆ ಸಂಬಂಧಿಸಿದಂತೆ 110 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

    ವಿಮಾನದಲ್ಲಿ 230 ವಯಸ್ಕರು ಹಾಗು 2 ಮಕ್ಕಳನ್ನು ಒಳಗೊಂಡಂತೆ ಒಟ್ಟು 232 ಪ್ರಯಾಣಿಕರು ಇದ್ದರು. ಈ ಪೈಕಿ 169 ಮಂದಿ ಭಾರತೀಯರು ಇದ್ದರು. ಟೇಕಾಫ್ ಆದ ಒಂದೇ ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡ ವಿಮಾನ ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಮೇಘಾನಿ ಪ್ರದೇಶದಲ್ಲಿ (Meghani Residential Area) ಪತನಗೊಂಡಿದೆ. ಹತ್ತಾರು ಅಂಬುಲೆನ್ಸ್‌ಗಳಲ್ಲಿ ಸುಟ್ಟು ಕರಕಲಾದ ದೇಹಗಳನ್ನು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

    ಮೇಘಾನಿ ಪ್ರದೇಶದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ವಿಮಾನ ಬಡಿದ್ದಿದ್ದು, ಹಾಸ್ಟೆಲ್‌ನಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಹಾಗೂ 10 ಮಂದಿ ಸಿಬ್ಬಂದಿ ಇದ್ದರು. 300ರಿಂದ 600 ಅಡಿ ಎತ್ತರದಿಂದ ವಿಮಾನ ನೆಲಕ್ಕಪ್ಪಳಿಸಿದೆ.

    ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಘಟನಾ ಸ್ಥಳಕ್ಕೆ ಆಗಮಿಸಲಿದ್ದಾರೆ.

  • ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

    ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

    ಅಹಮದಾಬಾದ್‌: ಏರ್ ಇಂಡಿಯಾ (Air India) ವಿಮಾನ ಪತನಗೊಂಡ (Air India Flight Crash) ಘಟನೆ ಬಗ್ಗೆ ಕೇಳಿ ನನಗೆ ಆಘಾತವಾಯಿತು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಜೊತೆ ನಾವಿದ್ದೇವೆ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Ram Mohan Naidu) ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

    ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ. ಸ್ಥಳದಲ್ಲಿ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ವೈದ್ಯಕೀಯ ನೆರವು ನೀಡುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯ ಬಗ್ಗೆ ಮಾಹತಿ ಪಡೆಯುತ್ತಿದ್ದೇನೆ. ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಅವರ ಕುಟುಂಬಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‌ನ ವಸತಿ ಪ್ರದೇಶದಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ

    ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪರಿಣಾಮ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ ಇಂಡಿಯಾ ವಿಮಾನ (Air India Plane Crash) ಅಹಮದಾಬಾದ್‌ನ (Ahmedabad) ವಿಮಾನ ನಿಲ್ದಾಣ ಸಮೀಪದ ಜನವಸತಿ ಪ್ರದೇಶದಲ್ಲಿ ಪತನಗೊಂಡಿದೆ.

    ಸುಮಾರು 232 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ. ಮಧ್ಯಾಹ್ನ 1:50ರ ಸುಮಾರಿಗೆ ಅಹಮದಾಬಾದ್‌ನ ಮೇಘಾನಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ವಿಮಾನ ಪ್ರಯಾಣಿಕರನ್ನು ಹೊತ್ತು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ. ಟೇಕಾಫ್‌ ಆದ 2 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದೆ.

    ಈ ಅವಘಡದಲ್ಲಿ 110 ಮಂದಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಆತಂಕವಿದೆ. ಇದನ್ನೂ ಓದಿ: ಧಾರವಾಡದಲ್ಲಿ ವರುಣನ ಆರ್ಭಟ – ಬೆಣ್ಣಿ ಹಳ್ಳದಲ್ಲಿ ಸಿಲುಕಿ ಕುಟುಂಬ ಪರದಾಟ

  • ಏರ್‌ ಇಂಡಿಯಾ ವಿಮಾನ ಪತನ – ಪೈಲಟ್‌ಗೆ ಇತ್ತು 8,200 ಗಂಟೆಗಳ ಹಾರಾಟದ ಅನುಭವ

    ಏರ್‌ ಇಂಡಿಯಾ ವಿಮಾನ ಪತನ – ಪೈಲಟ್‌ಗೆ ಇತ್ತು 8,200 ಗಂಟೆಗಳ ಹಾರಾಟದ ಅನುಭವ

    ನವದೆಹಲಿ: ಪತನಗೊಂಡ ಏರ್‌ ಇಂಡಿಯಾ (Air India) ವಿಮಾನದ ಪೈಲಟ್‌ 8,200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಿಳಿಸಿದೆ.

    ಅಹಮದಾಬಾದ್‌ನಲ್ಲಿ ಲಂಡನ್‌ಗೆ ಹೊರಟ್ಟಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ಸಮಸ್ಯೆಯಿಂದ ಪತನಗೊಂಡ ಬೆನ್ನಲ್ಲೇ ಡಿಜಿಸಿಎ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

    ಹೇಳಿಕೆಯಲ್ಲಿ ಏನಿದೆ?
    ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.39ಕ್ಕೆ ಟೇಕಾಫ್‌ ಆಗಿದೆ. ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 242 ಜನ ಪ್ರಯಾಣಿಸುತ್ತಿದ್ದರು.

    ಪೈಲಟ್‌ ಕ್ಯಾಪ್ಟನ್ ಸುಮೀತ್ ಸಭರ್ವಾಲ್ 8,200 ಗಂಟೆಗಳ ಅನುಭವ ಹೊಂದಿದ್ದರೆ ಸಹ-ಪೈಲಟ್ 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಟೇಕಾಫ್‌ ಆದ ಕೆಲವೇ ಕ್ಷಣಗಳಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಕರೆ ಬಂದಿದೆ. ನಂತರ ಎಟಿಸಿ ಮಾಡಿದ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

    RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

    – ಸ್ಟೇಡಿಯಂನಿಂದ ವೀಡಿಯೋ ಹಂಚಿಕೊಂಡ ನಟ ಸಾಯಿಕುಮಾರ್‌

    ಅಹಮದಾಬಾದ್: ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಜೂ.3 ಪ್ರಮುಖವಾದ ದಿನ. ಎಲ್ಲರ ಚಿತ್ತ ಐಪಿಎಲ್‌ 2025ರ ಫೈನಲ್‌ ಪಂದ್ಯದ ಕಡೆಗೆ ನೆಟ್ಟಿದೆ. ಆರ್‌ಸಿಬಿ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಪಂಜಾಬ್‌ ವಿರುದ್ಧ ಫೈನಲ್‌ ಪಂದ್ಯ ನಡೆಯುತ್ತಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಫ್ಯಾನ್ಸ್‌ ಹವಾ ಜೋರಾಗಿದೆ.

    ಗುಜರಾತ್‌ನ ಅಹಮದಾಬಾದ್‌ನ ಮೈದಾನದಲ್ಲಿರುವ ಆರ್‌ಸಿಬಿ ಅಭಿಮಾನಿಗಳು ವೀಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಆರ್‌ಸಿಬಿ ಅಭಿಮಾನಿಗಳೇ ಹೆಚ್ಚಿದ್ದಾರೆ. ಪಂಜಾಬ್‌ ಫ್ಯಾನ್ಸ್‌ ತುಂಬಾ ಕಡಿಮೆ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

    ಕನ್ನಡದ ಹಿರಿಯ ನಟ ಸಾಯಿಕುಮಾರ್‌ ಕೂಡ ಮೈದಾನದಲ್ಲಿ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅಲ್ಲಿನ ಆರ್‌ಸಿಬಿ ಕ್ರೇಜ್‌ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಸ್ಟೇಡಿಯಂ ತುಂಬಾ ಜನ ಆರ್‌ಸಿಬಿ.. ಆರ್‌ಸಿಬಿ ಎಂದು ಘೋಷಣೆ ಕೂಗುತ್ತಿದ್ದಾರೆ. ಬಹುಪಾಲು ಬೆಂಗಳೂರು ಫ್ಯಾನ್ಸ್‌ ಇಲ್ಲಿದ್ದಾರೆಂದು ತಿಳಿಸಿದ್ದಾರೆ.

    ಸ್ಟೇಡಿಯಂನ ಒಳಗೂ ಮತ್ತು ಹೊರಗೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ. ಕರ್ನಾಟಕದಲ್ಲಂತೂ ಐಪಿಎಲ್‌ ಫೀವರ್‌ ಜೋರಾಗಿದೆ. ಆರ್‌ಸಿಬಿ ಗೆಲುವಿಗಾಗಿ ಜನರು ಪ್ರಾರ್ಥಿಸುತ್ತಿದ್ದಾರೆ.

  • ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಅಹಮದಾಬಾದ್: ಐಪಿಎಲ್ ಫೈನಲ್‌ಗೆ (IPL  Final) ಕೆಲವೇ ಗಂಟೆಗಳು ಬಾಕಿಯಿರುವಾಗಲೇ ಆರ್‌ಸಿಬಿ (RCB) ಅಭಿಮಾನಿಗಳಿಗೆ ಫಿಲ್ ಸಾಲ್ಟ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ.  ಇಂದು ಆರ್‌ಸಿಬಿ ಮತ್ತು ಪಂಜಾಬ್‌ ಮಧ್ಯೆ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಫಿಲ್‌ ಸಾಲ್ಟ್‌ (Phil Salt) ಆಡಲಿದ್ದಾರೆ.

    ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ಅಭ್ಯಾಸ ವೇಳೆ ಸಾಲ್ಟ್ ಕಾಣಿಸಿಲ್ಲ ಎಂದು ವರದಿಯಾಗಿತ್ತು. ಇಂಗ್ಲೆಂಡಿನ ಫಿಲ್ ಸಾಲ್ಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ ಅವರು ತವರಿಗೆ ತೆರಳಿರಬಹುದು. ಇಂದಿನ ಪಂದ್ಯದಲ್ಲಿ ಅವರು ಆಡುವುದಿಲ್ಲ ಎಂದೆಲ್ಲಾ ಹೇಳಲಾಗುತ್ತಿತ್ತು. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ.  ಇದೀಗ ಇಂದಿನ ಫೈನಲ್ ಪಂದ್ಯದಲ್ಲಿ ಆಡುವ ಸಲುವಾಗಿ ಫಿಲ್ ಸಾಲ್ಟ್ ಮರಳಿ ಅಹಮದಾಬಾದ್‌ಗೆ ಬಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ

    ಪತ್ನಿಗೆ ಹೆರಿಗೆಯಾದ ಹಿನ್ನೆಲೆ ಮಗುವನ್ನು ನೋಡಲು ಸಾಲ್ಟ್ ತವರಿಗೆ ತೆರಳಿದ್ದರು. ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಮತ್ತೆ ಅಹಮದಾಬಾದ್‌ಗೆ ಫಿಲ್ ಸಾಲ್ಟ್ ಬಂದಿಳಿದಿದ್ದಾರೆ. ಇದರಿಂದ ಐಪಿಎಲ್ ಫೈನಲ್ ಆಡಲು ಆರ್‌ಸಿಬಿ ತಂಡಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಇದನ್ನೂ ಓದಿ: ಆರ್‌ಸಿಬಿಗೆ ಡಬಲ್‌ ಶಾಕ್‌ – ಟಿಮ್‌ ಡೇವಿಡ್‌ ಆಡೋದು ಡೌಟ್‌!

    ಆರ್‌ಸಿಬಿ ಪರ 12 ಪಂದ್ಯ ಆಡಿರುವ ಸಾಲ್ಟ್ ಒಟ್ಟು 387 ರನ್ ಹೊಡೆದು ಟಾಪ್ 20 ಬ್ಯಾಟರ್ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್