Tag: Ahmedabad

  • ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

    ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

    – ಜೂ.2 ರಂದು ಟಿಕೆಟ್ ಕ್ಯಾನ್ಸಲ್ ಮಾಡಿ ಜೂ.12ರಂದು ಬುಕ್ ಮಾಡಿದ್ದ ಪತಿ

    ಗಾಂಧೀನಗರ: ಆ ದಿನ ಪತನವಾಗಬೇಕಿದ್ದ ಏರ್ ಇಂಡಿಯಾ (Air India) ಫ್ಲೈಟ್‌ನಲ್ಲಿ ನಾನೂ ಪ್ರಯಾಣಿಸಬೇಕಿತ್ತು. ಆದ್ರೆ ಜ್ವರ ಬಂದಿದ್ದಕ್ಕೆ ನನ್ನ ಹೆಂಡ್ತಿ ಲಂಡನ್‌ಗೆ ಹೋಗೋದು ಬೇಡ ಅಂತ ಹೇಳಿದಳು, ಅದಕ್ಕೆ ಹೋಗ್ಲಿಲ್ಲ. ಹೆಂಡ್ತಿ ಮಾತು ಕೇಳಿದ್ದಕ್ಕೆ ಜೀವ ಉಳಿದಿದೆ. ನನ್ನ ಹೆಂಡ್ತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು… ಇದು ಅಹಮದಾಬಾದ್ ಏರ್ ಇಂಡಿಯಾ (Ahmedabad Plane Crash) ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ವೈದ್ಯ ಡಾ.ಉಮಾಂಗ್ ಪಟೇಲ್ ಅವರ ಮಾತು.

    ಹೆಂಡತಿಗೆ ಧನ್ಯವಾದ ತಿಳಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಆ ದಿನ ನನ್ನ ಹೆಂಡತಿ ಬೇಡ ಎಂದಿರಲಿಲ್ಲವೆಂದರೆ ಇಂದು ನಾನು ಇಲ್ಲಿ ಇರುತ್ತಿರಲಿಲ್ಲ. ನಿಜಕ್ಕೂ ಆಕೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕಳೆದ ಐದು ವರ್ಷಗಳಿಂದ ನಾವು ಬ್ರಿಟನ್ ನಾರ್ಥಾಂಪ್ಟನ್‌ನಲ್ಲಿ ವಾಸಿಸುತ್ತಿದ್ದೇವೆ. ಮೇ 24ರಂದು ನಾನು, ನನ್ನ ಪತ್ನಿ, ಮಕ್ಕಳು ಹಾಗೂ ಅಜ್ಜಿ ಸೇರಿಕೊಂಡು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿಳಿದೆವು. ಅವತ್ತು ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಎಸಿ ಹಾಗೂ ಮಲ್ಟಿಮೀಡಿಯಾ ಪ್ಲೇಯರ್‌ನ ಬಟನ್‌ಗಳು ವರ್ಕ್ ಆಗುತ್ತಿರಲಿಲ್ಲ ಎಂದರು.ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

    ಅಂದು ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಕೊಯ್ಡಮ್ ಗ್ರಾಮಕ್ಕೆ ಹೋದೆವು. ಜೂ.2ರಂದು ಬ್ರಿಟನ್‌ಗೆ ಮರಳಬೇಕಿತ್ತು. ಆದರೆ ನನ್ನ ತಂದೆಗೆ ಪಾರ್ಶ್ವವಾಯು ಆದ ಕಾರಣ ಆ ಟಿಕೆಟ್‌ನ್ನು ಕ್ಯಾನ್ಸಲ್ ಮಾಡಿ. ಜೂ.12ಕ್ಕೆ ಒಬ್ಬನೇ ತೆರಳುವ ಪ್ಲ್ಯಾನ್‌ ಮಾಡಿಕೊಂಡಿದ್ದೆ. ಹೀಗಾಗಿ ಜೂ.09 ರಂದು ನನ್ನ ಹೆಂಡತಿಯನ್ನು ಆಕೆಯ ಅಮ್ಮನ ಮನೆಗೆ ಬಿಟ್ಟು ಬರಲು ಹೋಗಿದ್ದೆ. ಆದರೆ ಆ ದಿನ ಮನೆಗೆ ಮರಳುವಷ್ಟರಲ್ಲಿ ನನಗೆ ತುಂಬಾ ಜ್ವರ ಬಂದಿತ್ತು. ಮಾರನೇ ದಿನ ಬೆಳಿಗ್ಗೆ ನನಗೆ ಎದ್ದು ನಿಲ್ಲೋಕೂ ಆಗುತ್ತಿರಲಿಲ್ಲ. ಹೀಗಾಗಿ ನನ್ನ ಹೆಂಡತಿ ಜ್ವರ ಜಾಸ್ತಿಯಿದೆ. ಹೋಗಬೇಡಿ, ಸ್ವಲ್ಪ ದಿನ ಇಲ್ಲೇ ಇರಿ. ಜ್ವರ ಕಡಿಮೆಯಾದ ಬಳಿಕ ಹೋಗಿ ಎಂದಳು. ನನಗೂ ಆಕೆಯ ಮಾತು ಸರಿಯೆನಿಸಿತು. ಹೀಗಾಗಿ ಟಿಕೆಟ್ ಕ್ಯಾನ್ಸಲ್ ಮಾಡಿ, ಜೂ.15ಕ್ಕೆ ಮತ್ತೆ ಬುಕ್ ಮಾಡಿದೆ ಎಂದು ಹೇಳಿದರು.

    ಜೂ.12ರಂದು ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಕೇಳಿ ನಿಜಕ್ಕೂ ಗಾಬರಿಯಾಯಿತು. ಒಂದು ವೇಳೆ ನಾನು ಅವತ್ತೇ ಹೋಗಿದ್ದರೆ ಇವತ್ತು ಇಲ್ಲಿರುತ್ತಿರಲಿಲ್ಲ. ನನ್ನ ಹೆಂಡತಿಗೆ ಎಷ್ಟೇ ಥ್ಯಾಂಕ್ಸ್ ಹೇಳಿದರೂ ಕಡಿಮೆ ಎನಿಸುತ್ತಿದೆ. ದೇವರು ನಿಜಕ್ಕೂ ನನ್ನನ್ನು ಕಾಪಾಡಿದ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪಾರ್ಥಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಏನಿದು ಘಟನೆ?
    ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಪರಿಣಾಮ ವಿಮಾನ ನಿಲ್ದಾಣದ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು 12 ಸಿಬ್ಬಂದಿ ಇದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ.ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

  • ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

    ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

    ಅಹಮದಾಬಾದ್: ತಾಂತ್ರಿಕ ದೋಷದಿಂದ ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ (Air India) ವಿಮಾನ ಪತನ ಘಟನೆಯಲ್ಲಿ ಮೃತಪಟ್ಟವರ ಡಿಎನ್‌ಎ ಟೆಸ್ಟ್ (DNA Test) ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ 80 ಜನರ ಡಿಎನ್‌ಎ ಮ್ಯಾಚ್ ಆಗಿದೆ. ಒಟ್ಟು 33 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

    ಅಹಮದಾಬಾದ್ ಮೂಲದ 12 ಮಂದಿ, ಬರೋಡಾದ ಐದು ಮಂದಿ, ಮೆಹ್ಸಾನಾದಿಂದ ನಾಲ್ಕು ಮಂದಿ, ಆನಂದ್‌ನಿಂದ ನಾಲ್ಕು ಮಂದಿ, ಖೇಡಾ, ಭರೂಚ್‌ನಿಂದ ತಲಾ ಇಬ್ಬರು, ಉದಯಪುರ, ಜೋಧ್‌ಪುರ ಬೋಟಾಡ್‌ನಿಂದ ತಲಾ ಒಬ್ಬರ ಮೃತದೇಹ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಿರುವುದಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ವಿಮಾನ ದುರಂತ ಸಂಭವಿಸಿದ ಮೂರು ದಿನಗಳ ನಂತರ ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಪತ್ತೆಯಾಗಿದೆ. ಈ ಕುರಿತು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ರೂಪಾನಿ ಅವರ ಡಿಎನ್‌ಎಗೆ ಮ್ಯಾಚ್ ಆಗಿದೆ ಎಂದು ತಿಳಿಸಿದ್ದಾರೆ. ರೂಪಾನಿ ಅವರ ಸಹೋದರಿಯಿಂದ ಸ್ಯಾಂಪಲ್ ಪಡೆದು ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಡಿಎನ್‌ಎ ಮಾಚ್ ಆಗಿದ್ದು ಮೂರು ದಿನಗಳ ಬಳಿಕ ಮೃತದೇಹದ ಗುರುತು ಪತ್ತೆಯಾಗಿದೆ. ಇಂದು ರಾಜ್‌ಕೋಟ್‌ನಲ್ಲಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಮುಂದುವರಿದ ಮಳೆ ಆರ್ಭಟ – ಇಂದು ರಾಜ್ಯದ ಹಲವು ಜಿಲ್ಲೆಗಳಿಗೆ ಅಲರ್ಟ್

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

  • ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

    ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

    ಅಹಮದಾಬಾದ್‌: ಇಲ್ಲಿನ ಮೇಘನಿನಗರದ ಬಿ.ಜೆ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತನಗೊಂಡಿದ್ದ ಏ‌ರ್ ಇಂಡಿಯಾ (Air India) ಬೋಯಿಂಗ್ 787-8 ವಿಮಾನದ 2ನೇ ಬ್ಲ್ಯಾಕ್ ಬಾಕ್ಸ್ (Black Box) ಭಾನುವಾರ ಪತ್ತೆಯಾಗಿದೆ.

    ವಿಮಾನದಲ್ಲಿ 2 ಬ್ಲ್ಯಾಕ್ ಬಾಕ್ಸ್‌ಗಳಿದ್ದವು. ವಿಮಾನದ ಫ್ಲೈಟ್‌ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಭಾನುವಾರ ಪತ್ತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

    2ನೇ ಬ್ಲ್ಯಾಕ್‌ ಬಾಕ್ಟ್‌ ಪ್ರಕರಣದ ಪ್ರತಿ ಸೆಕೆಂಡ್‌ನಲ್ಲಿ ಏನಾಯ್ತು ಎಂಬುದನ್ನ ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ. ಇದು ಕಾಕ್‌ಪಿಟ್‌ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‌ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

    ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಆಗಿದ್ದೇನು?
    ಜೂನ್ 12ರಂದು (ಗುರುವಾರ) ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಯಿತು. ಅಂದು ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು. ಇದನ್ನೂ ಓದಿ: 8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್‌ ವರೆಗಿನ ಹಾರಾಟದ ಮೇಲೆ ತನಿಖೆ

    ಇದರಿಂದ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ ಎಂದು ಏರ್ ಇಂಡಿಯಾ ಖಚಿತಪಡಿಸಿತು. ಈ ಕುರಿತು ಇದೀಗ ವಿವಿಧ ತನಿಖಾ ಸಂಸ್ಥೆಗಳು ಹಾಗೂ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿವೆ.

    ಮೇ ಡೇ – ಪೈಲಟ್‌ನ ಕೊನೇ ಸಂದೇಶ
    ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ `ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು.

  • ವಿಮಾನ ಪತನದ ವೀಡಿಯೋ ಶೂಟ್ ಮಾಡಿದ ಹುಡುಗ ಇವನೇ ನೋಡಿ

    ವಿಮಾನ ಪತನದ ವೀಡಿಯೋ ಶೂಟ್ ಮಾಡಿದ ಹುಡುಗ ಇವನೇ ನೋಡಿ

    – ಸ್ನೇಹಿತರಿಗೆ ತೋರಿಸುವ ಸಲುವಾಗಿ ಮಾಡಿದ್ದ ವೀಡಿಯೋ ವೈರಲ್

    ಗಾಂಧಿನಗರ: ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ ವಿಮಾನ ಪತನಗೊಂಡ (Air India Plane Crash) ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೈರಲ್ ದೃಶ್ಯವನ್ನು ಸೆರೆಹಿಡಿದಿದ್ದು 17 ವರ್ಷದ ಹುಡುಗ.

    ಹೌದು, ಆರ್ಯನ್ ಅಸಾರಿ (Aryan Asari) ಎಂಬ ಬಾಲಕ ವಿಮಾನ ಪತನದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ವಿಮಾನ ಹತ್ತಿರದಿಂದ ಹೋಗುತ್ತಿರುವುದನ್ನು ಸ್ನೇಹಿತರಿಗೆ ತೋರಿಸುವ ಸಲುವಾಗಿ ಈ ವೀಡಿಯೋ ಮಾಡಿದ್ದೆ, ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು ಎಂದು ಬಾಲಕ ಹೇಳಿದ್ದಾನೆ. ಇದನ್ನೂ ಓದಿ: ದೈವಕ್ಕೆ ಅಪಚಾರ ಮಾಡಿದ ಕಡೆಯೆಲ್ಲ ದುರಂತಗಳಾಗಿವೆ: ಸಂಶೋಧಕಿ ಡಾ. ಲಕ್ಷ್ಮಿ ಪ್ರಸಾದ್

    ಈ ಕುರಿತು ಮಾಧ್ಯಮವೊಂದರೊಂದಿಗೆ ಮಾತನಾಡಿದ ಆರ್ಯನ್, ನಾನು ಜೂನ್ 12ರಂದು ಅಹಮದಾಬಾದ್‌ಗೆ ಬಂದೆ. ವಿಮಾನ ತುಂಬಾ ಹತ್ತಿರದಿಂದ ಹಾದು ಹೋಗುತ್ತಿತ್ತು. ಆದ್ದರಿಂದ ನನ್ನ ಸ್ನೇಹಿತರಿಗೆ ಅದನ್ನು ತೋರಿಸಲು ನಾನು ವೀಡಿಯೋ ಮಾಡಲು ಯೋಚಿಸಿದೆ. ನೋಡುತ್ತಿದ್ದಂತೆಯೇ ವಿಮಾನ ಕೆಳಗೆ ಹೋಯಿತು. ವಿಮಾನ ನಿಲ್ದಾಣ ಹತ್ತಿರದಲ್ಲಿರುವುದರಿಂದ ಲ್ಯಾಂಡ್ ಆಗಬಹುದು ಎಂದು ನಾನು ಭಾವಿಸಿದೆ. ಆದರೆ ಅದು ಕೆಳಗೆ ಹೋದಂತೆ ಬೆಂಕಿಯ ಜ್ವಾಲೆಗಳು ಮೇಲಕ್ಕೆ ಬರಲು ಪ್ರಾರಂಭಿಸಿದವು. ಬಳಿಕ ಅದು ಸ್ಫೋಟಗೊಂಡಿದ್ದನ್ನು ನಾವು ನೋಡಿದ್ದೇವೆ. ಈ ವೇಳೆ ನನಗೆ ಭಯವಾಯಿತು. ನಾನು ವೀಡಿಯೋವನ್ನು ನನ್ನ ಸಹೋದರಿಗೆ ತೋರಿಸಿದೆ. ಅಲ್ಲದೇ ಅದರ ಬಗ್ಗೆ ನನ್ನ ತಂದೆಗೂ ಹೇಳಿದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: Bengaluru | ಪಾರ್ಟಿ ಮಾಡಲು ಪಬ್‌ಗೆ ಕರೆಸಿ, ಸುಪಾರಿ ನೀಡಿ ಗೆಳೆಯನ ಸುಲಿಗೆ

  • ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

    ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

    ಗಾಂಧಿನಗರ: ವಿಜಯ್ ರೂಪಾನಿ (Vijay Rupani) ಡಿಎನ್‌ಎ ಮ್ಯಾಚ್ ಇನ್ನು ಸಿಕ್ಕಿಲ್ಲ. ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ಸಿವಿಲ್ ಆಸ್ಪತ್ರೆ ಹೆಚ್ಚುವರಿ ಸೂಪರ್ ಇಂಟೆಂಡೆಂಟ್ ಡಾ. ರಜನೀಶ್ ಪಟೇಲ್ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 31 ಡಿಎನ್‌ಎ ಮ್ಯಾಚ್ ಆಗಿದೆ. 12 ಮೃತದೇಹಗಳ ಹಸ್ತಾಂತರ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆ ಮೂಲಕ 31 ಶವದ ಗುರುತು ಪತ್ತೆ ಹಚ್ಚಲಾಗಿದೆ. ಜನರಿಂದ ಯಾವುದೇ ಹಣ ಪಡೆಯುತ್ತಿಲ್ಲ ಎಂದರು. ಇದನ್ನೂ ಓದಿ: ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

    ಡಿಎನ್‌ಎ ಪರೀಕ್ಷೆಯ ಮೂಲಕ ಸ್ಯಾಂಪಲ್ ಮ್ಯಾಚ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಚಾಲೆಂಜಿಂಗ್ ಕೆಲಸ. ಉದಯಪುರ, ಖೇಡಾ, ಅಹಮದಾಬಾದ್ ಜಿಲ್ಲೆಯ ಜನರಿಗೆ ಮೃತ ದೇಹ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ – ಕೆನಡಾ ಸೇರಿ ಮೂರು ರಾಷ್ಟ್ರಗಳಿಗೆ ಭೇಟಿ

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಈವರೆಗೂ 31 ಮೃತ ದೇಹಗಳ ಡಿಎನ್‌ಎ ಮ್ಯಾಚ್ ಆಗಿದ್ದು, 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಾಕಿ ಮೃತದೇಹಗಳ ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನಲೆ ಆಸ್ಪತ್ರೆ ಹೊರಗೆ ಕುಟುಂಬಸ್ಥರು ಕಾಯುತ್ತಿದ್ದಾರೆ. ಇದನ್ನೂ ಓದಿ: ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

  • ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

    ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

    ಗಾಂಧಿನಗರ: ವಿಮಾನ ದುರಂತದಿಂದ (Plane Crash) 270 ಮಂದಿ ಸುಟ್ಟು ಕರಕಲು ಆಗಿದ್ದು, ವಿಮಾನ ಭಸ್ಮವಾಗಿದೆ. ಆದರೆ ಜನರು ತಂದಿದ್ದ ದುಡ್ಡು ಮಾತ್ರ ಸುಟ್ಟಿಲ್ಲ.

    ಅಹಮದಾಬಾದ್ (Ahmedabad) ವಿಮಾನ ದುರಂತದಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಜಗತ್ತು ಕಂಡ ದೊಡ್ಡ ದುರಂತ ಇದಾಗಿದೆ. 270 ಮಂದಿ ಜನ ಸಾವನ್ನಪ್ಪಿದ್ದಾರೆ. ಏರ್ ಇಂಡಿಯಾದಲ್ಲಿ (Air India) ಪ್ರಯಾಣ ಮಾಡುತ್ತಿದ್ದ 242 ಜನರಲ್ಲಿ 241 ಜನ ಬೆಂಕಿಗಾಹುತಿ ಆಗಿ ಸುಟ್ಟು ಕರಕಲು ಆಗಿದ್ದಾರೆ. ಅದರಲ್ಲಿ ರಮೇಶ್ ವಿಶ್ವಾಸ್ ಕುಮಾರ್ ಎಂಬ ವ್ಯಕ್ತಿ ಮಾತ್ರ ಬದುಕಿ ಉಳಿದಿದ್ದಾರೆ. 241 ಮಂದಿ ಸುಟ್ಟು ಕರಕಲು ಆಗಿದ್ದರೂ ಸಹ ಅವರು ತಂದಿದ್ದ ದುಡ್ಡು ಮಾತ್ರ ಏನೂ ಆಗಿಲ್ಲ. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ಮನುಷ್ಯ ಏನೇ ಸಂಪಾದನೆ ಮಾಡಿದರೂ ಏನನ್ನು ಹೊತ್ತು ಕೊಂಡು ಹೋಗಲ್ಲ ಅಂತಾರೆ, ಅದು ನಿಜ. ತನ್ನ ಇಡೀ ಜೀವನ ಹೊಟ್ಟೆಪಾಡಿಗಾಗಿ, ದುಡ್ಡಿಗಾಗಿ ದುಡಿಯೋದು. ಆದರೆ ವಿಮಾನ ದುರಂತದಲ್ಲಿ ಜನ ಸುಟ್ಟು ಕರಕಲು ಆಗಿದ್ದಾರೆ. ಆದರೆ ಜನ ತಂದಿದ್ದ ದುಡ್ಡು ಸುಟ್ಟಿಲ್ಲ. ಅವಶೇಷಗಳ ಪತ್ತೆ ವೇಳೆ ಭಗವದ್ಗೀತೆ ಪುಸ್ತಕ, ಕೃಷ್ಣನ ವಿಗ್ರಹದ ಜೊತೆಗೆ ಸೂಟ್‌ಕೇಸ್‌ನಲ್ಲಿದ್ದ ದುಡ್ಡು ಕೂಡ ಪತ್ತೆಯಾಗಿದೆ. ಸುಡದೇ ಇರುವ ದುಡ್ಡನ್ನು ಕ್ರೋಢೀಕರಿಸಲಾಗಿದೆ. ಇದನ್ನೂ ಓದಿ: ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

  • ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?

    ಸದ್ಯ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಒಂದು ವಿಷಯವೆಂದರೆ ಅದು ಅಹಮದಾಬಾದ್‌ (Ahmedabad) ಏರ್‌ ಇಂಡಿಯಾ ವಿಮಾನ ಪತನ (Air India Plane Crash). ಭಾರತದ (India) ಇತಿಹಾಸದಲ್ಲೇ ಎರಡನೇ ಅತೀ ದೊಡ್ಡ ದುರಂತವಾಗಿರುವ ಈ ಅವಘಡದಲ್ಲಿ ಅಲ್ಲಿನ ಸ್ಥಳೀಯರು ಸೇರಿದಂತೆ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ವಿಮಾನ ಅಪಘಾತ ಸಂಭವಿಸಲು ಹಲವು ಕಾರಣಗಳಿವೆ ಎಂದು ಕೇಳೀಬರುತ್ತಿದೆ. ಆ ಪೈಕಿ ಹಕ್ಕಿ ಡಿಕ್ಕಿ ಹೊಡೆದಿರಬಹುದಾ ಎಂಬ ಸಂಶಯವೂ ಹುಟ್ಟಿಕೊಂಡಿದೆ.

    ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಎಂಜಿನ್‌ಗೆ ಪಕ್ಷಿ ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಬರಬಹುದು ಎನ್ನಲಾಗುತ್ತಿದೆ. ಈ ಕುರಿತು ತಜ್ಞರ ಮಾಹಿತಿ ಪ್ರಕಾರ, ಟೇಕಾಫ್‌ ಆಗುವಾಗ ಎಂಜಿನ್‌ಗೆ ಪಕ್ಷಿ ಬಡಿದಾಗ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ಅಟೋಮ್ಯಾಟಿಕ್‌ ಆಗಿ ತಗ್ಗುತ್ತದೆ ಹೀಗಾಗಿ ಸಂಭವಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿ ವಿಮಾನದ ಒಂದು ಎಂಜಿನ್‌ಗೆ ಪಕ್ಷಿ ಬಡಿದರೆ ಇನ್ನೊಂದು ಎಂಜಿನ್‌ ಮೂಲಕ ಚಾಲನೆ ಮಾಡಿ ಸಮೀಪದ ನಿಲ್ದಾಣದಲ್ಲಿ ಪೈಲಟ್‌ ತುರ್ತು ಲ್ಯಾಂಡ್‌ ಮಾಡುತ್ತಾರೆ. ಆದರೆ ಇಲ್ಲಿ ಎರಡು ಎಂಜಿನಿಗೆ ಪಕ್ಷಿ ಬಡಿದ ಕಾರಣ ವಿಮಾನ ವೇಗವನ್ನು ಕಳೆದುಕೊಂಡು ಪತನ ಹೊಂದಿರಬಹುದು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಎಂಜಿನಿಗೆ ಪಕ್ಷಿ ಬಡಿಯುವುದು ಅಪರೂಪದಲ್ಲಿ ಅಪರೂಪ. ಆದರೆ ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ 462 ಹಕ್ಕಿ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ. ಈ ಪೈಕಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿಯೇ (Ahmedabad Airport) ಅತಿ ಹೆಚ್ಚು ಘಟನೆಗಳು ನಡೆದಿವೆ.

    ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ (Patna) ರಾಂಚಿಗೆ ಹೊರಟಿದ್ದ ಏರ್‌ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಪ್ರಕಾರ, ವಿಮಾನಗಳು ಟೇಕ್‌ ಆಫ್‌ ಅಥವಾ ಲ್ಯಾಂಡಿಂಗ್‌ ಆಗುವಾಗ ಹಕ್ಕಿ ಡಿಕ್ಕಿಯಾಗುವ ಸಾಧ್ಯತೆಗಳಿರುತ್ತವೆ. ಈ ವೇಳೆ 92%ರಷ್ಟು ಹಾನಿಯಾಗುವ ಸಾಧ್ಯತೆಗಳಿರುವುದಿಲ್ಲ. ಆದರೆ 8%ರಷ್ಟು ತುಂಬಾ ಪರಿಣಾಮಕಾರಿಯಾಗಿ ಹಾನಿಯಾಗುವ ಸಾಧ್ಯತೆಯಿರುತ್ತದೆ. ಡಿಕ್ಕಿ ಹೊಡೆದಾಗ ಎಂಜಿನ್‌ನಲ್ಲಿರುವ ಬ್ಲೇಡ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಈ ಬ್ಲೇಡ್‌ಗಳು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಬೇಗನೇ ಮುರಿದು ಹೋಗುವ ಸಾಧ್ಯತೆಯೂ ಇರುತ್ತದೆ.

    ಏನಿದು ಹಕ್ಕಿ ಡಿಕ್ಕಿ?
    ಹಕ್ಕಿ ಮತ್ತು ವಿಮಾನದ ನಡುವಿನ ಡಿಕ್ಕಿಯೇ ಹಕ್ಕಿ ಡಿಕ್ಕಿ. ಇದು ಸಾಮಾನ್ಯವಾಗಿ ಟೇಕ್ ಆಫ್, ಲ್ಯಾಂಡಿಂಗ್ ಅಥವಾ ಕಡಿಮೆ ಎತ್ತರದ ಹಾರಾಟದ ಸಮಯದಲ್ಲಿ ಹಕ್ಕಿಗಳು ವಿಮಾನಕ್ಕೆ ಅಥವಾ ವಿಮಾನ ಹಕ್ಕಿಗೆ ಡಿಕ್ಕಿ ಹೊಡೆಯುತ್ತದೆ.

    ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದರೆ ಏನಾಗುತ್ತದೆ?
    ವಾಯುಯಾನದ ವೇಳೆ ಸಂಭವಿಸುವ ಸಾಮಾನ್ಯವಾದ ಅಪಾಯಗಳಲ್ಲಿ ಒಂದಾಗಿದೆ. ಜೆಟ್‌ ವಿಮಾನಕ್ಕೆ ಡಿಕ್ಕೆ ಹೊಡೆದರೆ ಫ್ಯಾನ್‌ನ ಬ್ಲೇಡ್‌ಗಳನ್ನು ಹಾನಿಗೊಳಿಸುತ್ತದೆ. ಕೆಲವೊಮ್ಮೆ ಅಪಘಾತಕ್ಕೆ ಕಾರಣವಾಗಬಹುದು. ಹಕ್ಕಿ ಡಿಕ್ಕಿ ಹೊಡೆದರೆ ಎಂಜಿನ್‌, ರೆಕ್ಕೆಗಳು, ವಿಂಡ್‌ಶೀಲ್ಡ್‌ಗಳಿಗೆ ಹಾನಿಯಾಗಬಹುದು. ಒಂದು ವೇಳೆ ವಿಂಡ್‌ಶೀಲ್ಡ್‌ಗೆ ಅತಿ ವೇಗವಾಗಿ ಹಕ್ಕಿ ಡಿಕ್ಕಿ ಹೊಡೆದರೆ ವಿಂಡ್‌ಶೀಲ್ಡ್ ಬಿರುಕು ಬಿಡಬಹುದು. ಇದರಿಂದ ಗೋಚರತೆಯನ್ನು ಕಡಿಮೆಗೊಳಿಸಬಹುದು. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ವಿಮಾನಗಳು 0–3,000 ಅಡಿ ಎತ್ತರದಲ್ಲಿರುತ್ತವೆ. ಈ ಸಮಯದಲ್ಲಿ ಹಕ್ಕಿಡಿಕ್ಕಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಮರ ನೆಡುವುದನ್ನು ಕಡಿಮೆಗೊಳಿಸುತ್ತಾರೆ. ಇದರಿಂದ ಹಕ್ಕಿಗಳು ಗೂಡು ಕಟ್ಟುವುದು ಕಡಿಮೆಯಾಗುತ್ತದೆ ಮತ್ತು ರನ್‌ವೇ ದೊಡ್ಡದಾಗಿರುವ ವಿಮಾನ ನಿಲ್ದಾಣಗಳಲ್ಲಿ ಈ ಸಮಸ್ಯೆಗಳನ್ನು ತಪ್ಪಿಸಬಹುದು.

    ಹಕ್ಕಿಡಿಕ್ಕಿ ಹೊಡೆದಾಗ ಪೈಲೆಟ್‌ ಏನು ಮಾಡುತ್ತಾರೆ?
    ಹಕ್ಕಿ ಡಿಕ್ಕಿ ಹೊಡೆದಾಗ, ಪೈಲಟ್‌ಗಳು ಮೇಡೇ (Mayday) ಅಥವಾ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಲ್ಯಾಂಡಿಂಗ್‌ಗಾಗಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ಎಂಜಿನ್‌ಗೆ ಸಮಸ್ಯೆಯಾಗಿದ್ದರೆ ಅದರ ಬಳಕೆಯನ್ನು ನಿಲ್ಲಿಸಬಹುದು. ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ ರಾಂಚಿಗೆ ಹೊರಟಿದ್ದ ಏರ್‌ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದಾಗ ಪೈಲಟ್ ಮೇಡೇ ಕರೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನಗಳನ್ನು ಅಪಾಯಕಾರಿ ಸಂದರ್ಭದಲ್ಲಿ ಮೇಡೇ ಘೋಷಿಸುತ್ತಾರೆ. ಇನ್ನೂ ಜೂನ್‌ 12ರಂದು ಸಂಭವಿಸಿದ್ದ ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ಅಪಘಾತದ ವೇಳೆ ಪೈಲಟ್‌ ಮೇಡೇ ಘೋಷಿಸಿದ್ದರು. ಆದರೆ ಹಕ್ಕಿಡಿಕ್ಕಿಯಾಗಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.

    ಈ ಕುರಿತು ಭೌತಶಾಸ್ತ್ರ ಏನು ಹೇಳುತ್ತದೆ?
    ಸಾಮಾನ್ಯವಾಗಿ ಒಂದು ವಸ್ತು ಚಲಿಸುವಾಗ ಆವೇಗವನ್ನು ಹೊಂದಿರುತ್ತದೆ. (ಒಂದು ವಸ್ತುವಿನ ಚಲನೆಯ ಪ್ರಮಾಣವೇ ಆವೇಗವಾಗಿರುತ್ತದೆ). ಉದಾಹರಣೆಗೆ ವಿಮಾನ ಹಾಗೂ ಹಕ್ಕಿಗೆ ಹೋಲಿಸಿದಾಗ ವಿಮಾನ ಭಾರವಾಗಿರುತ್ತದೆ. ಆದರೆ ಅವೆರಡು ಸಮಾನ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿರುತ್ತವೆ. ಹೀಗಾಗಿ ವಿಮಾನ ಹೆಚ್ಚಿನ ಆವೇಗವನ್ನು ಹೊಂದಿರುತ್ತದೆ. ವಿಮಾನ ಸಾಮಾನ್ಯವಾಗಿ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುವಾಗ ಕಡಿಮೆ ವೇಗದಲ್ಲಿ ಚಲಿಸುತ್ತಿರುತ್ತದೆ. ಈ ವೇಳೆ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಾಗ ಅದರ ಆವೇಗವು ವಿಮಾನಕ್ಕೆ ವರ್ಗಾಯಿಸಲ್ಪಡುತ್ತದೆ. ಇದರಿಂದಾಗಿ ವಿಮಾನಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.

    ಈ ಮೊದಲು ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದ್ದ ಕೆಲವು ಘಟನೆಗಳು;
    US ಏರ್‌ವೇಸ್ ಫ್ಲೈಟ್ 1549 – “ಮಿರಾಕಲ್ ಆನ್ ದಿ ಹಡ್ಸನ್” (2009)
    ನ್ಯೂಯಾರ್ಕ್‌ನ (Newyork) ಲಾಗಾರ್ಡಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಏರ್‌ಬಸ್ A320ಗೆ ಕೆನಡಾ ಹೆಬ್ಬಾತುಗಳ ಹಿಂಡು ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡೂ ಎಂಜಿನ್‌ಗಳಿಗೆ ಹಾನಿಯಾಗಿತ್ತು, ಆದರೆ ಪೈಲಟ್‌ ವಿಮಾನವನ್ನು ಹಡ್ಸನ್ ನದಿಯಲ್ಲಿ ಸುರಕ್ಷಿತವಾಗಿ ಇಳಿಸಿದರು. ವಿಮಾನದಲ್ಲಿದ್ದ 155 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಕೂಡ ಪ್ರಾಣಾಪಾಯದಿಂದ ಪಾರಾದರು. ಆಸ್ಟ್ರೇಲಿಯನ್ ಸಾರಿಗೆ ಸುರಕ್ಷತಾ ಮಂಡಳಿಯ ಮಾಹಿತಿ ಪ್ರಕಾರ, 2008 ಮತ್ತು 2017ರ ನಡುವೆ 16,626 ಹಕ್ಕಿ ಡಿಕ್ಕಿ ಹೊಡೆದಿರುವುದು ದಾಖಲಾಗಿದೆ. ಅಮೆರಿಕಾದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ವರದಿಯ ಪ್ರಕಾರ, 2022ರಲ್ಲಿ ಮಾತ್ರ 17,200 ಹಕ್ಕಿ ಡಿಕ್ಕಿಯಾಗಿರುವುದು ವರದಿಯಾಗಿವೆ.

    ಈಸ್ಟರ್ನ್ ಏರ್ ಲೈನ್ಸ್ ಫ್ಲೈಟ್ 375 (1972)
    ಲಾಕ್‌ಹೀಡ್ L-188 ಎಲೆಕ್ಟ್ರಾ ಬೋಸ್ಟನ್ ಲೋಗನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಈಸ್ಟರ್ನ್ ಏರ್ ಲೈನ್ಸ್ ವಿಮಾನಕ್ಕೆ ಸ್ಟಾರ್ಲಿಂಗ್‌ ಹಕ್ಕಿಗಳ ಹಿಂಡು ಡಿಕ್ಕಿ ಹೊಡೆಯಿತು. ಈ ವೇಳೆ ಹಲವು ಪಕ್ಷಿಗಳು ಎಂಜಿನ್‌ ಒಳಗೆ ನುಸುಳಿದವು. ಪರಿಣಾಮ ವಿಮಾನದಲ್ಲಿದ್ದ 72 ಜನರ ಪೈಕಿ 62 ಜನರು ಸಾವನ್ನಪ್ಪಿದರು.

    ರಾಂಚಿಯಲ್ಲಿ ಇಂಡಿಗೋ ವಿಮಾನ (ಮೇ 2025)
    ಇತ್ತೀಚೆಗೆ ಮೇ 19ರಂದು ಪಾಟ್ನಾದಿಂದ ರಾಂಚಿಗೆ ಹೊರಟಿದ್ದ ಏರ್‌ಬಸ್ A320ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದ ಮುಂಭಾಗಕ್ಕೆ ಹಾನಿಯುಂಟಾಯಿತು. ಆದರೆ ವಿಮಾನದಲ್ಲಿದ್ದ 175 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರು

  • ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

    ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

    ನವದೆಹಲಿ: ಅಹಮದಾಬಾದ್ (Ahmedabad) ವಿಮಾನ ದುರಂತದಲ್ಲಿ ಬದುಕುಳಿದ ವಿಶ್ವಾಸ್ 11A ಸೀಟಿನಲ್ಲಿ ಕುಳಿತಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಲೇ ಇದೀಗ ಲಕ್ಕಿ ಸೀಟು 11A ಬೇಡಿಕೆ ಹೆಚ್ಚಾಗುತ್ತಿದೆ.

    ಹೌದು, ಜೂನ್ 12ರಂದು ಸಂಭವಿಸಿದ್ದ ಅಹಮದಾಬಾದ್ ಏರ್ ಇಂಡಿಯಾ ದುರಂತದಲ್ಲಿ (Air India Plane Crash) ವಿಮಾನದಲ್ಲಿದ್ದ 242 ಜನರ ಪೈಕಿ 241 ಜನರು ಸಾವನ್ನಪ್ಪಿದ್ದರು. ಈ ಪೈಕಿ ಓರ್ವ ಪ್ರಯಾಣಿಕ ಪವಾಡ ಸದೃಶ್ಯವೆಂಬಂತೆ ಪಾರಾಗಿದ್ದಾರೆ. ಅವರು ಕುಳಿತಿದ್ದದ್ದು 11ಎ ಸೀಟಿನಲ್ಲಿ, ಆ ಸೀಟು ಎಮರ್ಜೆನ್ಸಿ ಎಕ್ಸಿಟ್ ಪಕ್ಕದಲ್ಲಿದೆ. ಹೀಗಾಗಿ ಸದ್ಯ ವಿಮಾನದ ಟಿಕೆಟ್ ಬುಕ್ ಮಾಡುತ್ತಿರುವವರು ಅದೇ ಸೀಟನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ:ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

    ಹಣ ಹೆಚ್ಚಾದರೂ ಪರವಾಗಿಲ್ಲ, ಅದೇ ಸೀಟನ್ನೇ ಬುಕ್ ಮಾಡಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು 11ಎ ಸೀಟ್ ಬುಕ್ ಮಾಡುವ ಕುರಿತು ವಿಚಾರಿಸುತ್ತಿದ್ದಾರೆ. ಅದರಲ್ಲಿ ಕುಳಿತರೆ ಬದುಕುತ್ತೇವೆ ಎನ್ನುವ ಸೈಕಾಲಜಿ ಎಫೆಕ್ಟ್ ಪ್ರಯಾಣಿಕರ ಮೇಲೆ ಉಂಟಾಗಿದ್ದು, ಆ ಸೀಟ್‌ನಲ್ಲಿ ಕುಳಿತು ವಿಶ್ವಾಸ್ ಬದುಕಿದ್ದಾರೆ ಎಂದ ಮೇಲೆ ನಮಗೆ ಅದೇ ಸೀಟ್ ಬೇಕು ಎನ್ನುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇನ್ನೂ 1998ರಲ್ಲಿ ಬ್ಯಾಂಕಾಕ್‌ನಿಂದ ಹೊರಟ ಥಾಯ್ ಏರ್ವೇಸ್ ವಿಮಾನ ದಕ್ಷಿಣ ಥೈಲ್ಯಾಂಡ್‌ನ ನಗರವಾದ ಸೂರತ್ ಥಾನಿಯಲ್ಲಿ ಲ್ಯಾಂಡಿಂಗ್ ಆಗುವಾಗ ಅಪಘಾತಕ್ಕೀಡಾಗಿತ್ತು. ಈ ವೇಳೆ 146 ಜನರ ಪೈಕಿ 101 ಜನರು ಸಾವನ್ನಪ್ಪಿದ್ದರು. ಈ ಪೈಕಿ 11ಎ ಸೀಟಿನಲ್ಲಿ ಕುಳಿತಿದ್ದ ಥೈಲ್ಯಾಂಡ್‌ನ ಸಿಂಗರ್ ಹಾಗೂ ನಟ ರುವಾಂಗ್ಸಾಕ್ ಲೊಯ್ಚುಸಾಕ್ ಬದುಕುಳಿದಿದ್ದರು. ಹೀಗಾಗಿ ಎರಡು ದುರಂತಗಳಲ್ಲಿಯೂ 11ಎ ಸೀಟಿಗೆ ಕುಳಿತಿದ್ದವರು ಬದುಕುಳಿದಿದ್ದಾರೆ ಎಂದು ಬೇಡಿಕೆ ಹೆಚ್ಚಾಗಿದೆ.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

  • ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

    ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

    – ಗೃಹ ಸಚಿವರು ಅಪಘಾತಗಳು ನಡೆಯುತ್ತಿರುತ್ತವೆ ಎಂಬರ್ಥದಲ್ಲಿ ಮಾತನಾಡಿದ್ದಾರೆ: ಖರ್ಗೆ ಬೇಸರ

    ಅಹಮದಾಬಾದ್‌: ಜೂನ್‌ 12ರಂದು ಏರ್‌ ಇಂಡಿಯಾ ವಿಮಾನ ದುರಂತ (Air India Plane Crash) ನಡೆದ ಅಹಮದಾಬಾದ್‌ನ ಮೇಘನಿ ನಗರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಕರ್ನಾಟಕ ಡಿಸಿಎಂ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ ನಾಯಕರೊಂದಿಗೆ ಭೇಟಿ ನೀಡಿದ್ದರು. ಇಲ್ಲಿನ ಸಿವಿಲ್‌ ಆಸ್ಪತ್ರೆಗೆ ಭೇಟಿ ನೀಡಿದ ಖರ್ಗೆ ಅವರು ದುರಂತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಶೀಘ್ರ ಗುಣಮುಖರಾಗುವುದಾಗಿ ಗಾಯಾಳುಗಳಿಗೆ ಧೈರ್ಯತುಂಬಿದರು.

    ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಅಹಮದಾಬಾದ್ ಇತಿಹಾಸದಲ್ಲಿ ಮರೆಯಲಾಗದ ದುರ್ಘಟನೆ. ಹಲವಾರು ಜನ ಸಾವನ್ನಪ್ಪಿದ್ದಾರೆ. ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಆಸ್ಪತ್ರೆ ವೈದ್ಯ ಡಾ. ವಿಠ್ಠಲ್ ಜೊತೆ ಚರ್ಚಿಸಿ ಗಾಯಾಳುಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅವರ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದೇನೆ. ಈ ದುರಂತದಲ್ಲಿ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಇದನ್ನೂ ಓದಿ: Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

    ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು
    ಮೃತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ. ದುರ್ಘಟನೆಯನ್ನ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಇಂತಹದೆಲ್ಲ ನಡೆಯತ್ತವೆ ಎನ್ನುವಂತೆ ಹಗುವರಾಗಿ ಪರಿಗಣಿಸಬಾರದು. ನಮ್ಮ ಹಿರಿಯ ಮುಖಂಡರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

    ಕೇಂದ್ರ ಸರ್ಕಾರ ಯಾವುದನ್ನೂ ಲಘುವಾಗಿ ಪರಿಗಣಿಸಬಾರದು. ಗೃಹ ಸಚಿವರು ಅಪಘಾತಗಳು ನಡೆಯುತ್ತಿರುತ್ತವೆ, ತಪ್ಪಿಸಲಾಗಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ನಾವು ಈಗಲೇ ಏನು ಹೇಳಲು ಸಾಧ್ಯವಿಲ್ಲ. ಸುಮ್ಮನೆ ಆರೋಪ ಮಾಡೋದಕ್ಕೂ ಸಾಧ್ಯವಿಲ್ಲ. ಬ್ಲ್ಯಾಕ್‌ಬಾಕ್ಸ್‌ನಲ್ಲಿ ಏನಿದೆ ಅಂತ ಗೊತ್ತಾಗಬೇಕು. ಸೂಕ್ತ ತನಿಖೆ ನಂತರ ಯಾರು ಹೊಣೆಗಾರರು ಗೊತ್ತಾಗುತ್ತೆ ಎಂದು ವಿವರಿಸಿದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಆರೋಪ ಮಾಡುವ ಸಮಯವಲ್ಲ
    ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಮಾತನಾಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇವೆ. ಘಟನೆಯಿಂದ ಬಹಳ ದುಃಖ ಆಗ್ತಿದೆ. ಯಾವುದೇ ದುರಂತ ಆಗಬಾರದು. ಟೆಕ್ನಿಕಲ್ ಸಮಸ್ಯೆಯೋ.. ಏನು ಅಂತಾ ಹೇಳಕ್ಕಾಗಲ್ಲ. ಬೇರೆ ಅವರ ಮೇಲೆ ಆರೋಪ ಮಾಡುವ ಸಮಯವೂ ಇದಲ್ಲ ಎಂದು ನುಡಿದರು. ಇದನ್ನೂ ಓದಿ: Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

  • 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

    11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

    – 11A ಯಮನನ್ನೇ ಯಾಮಾರಿಸೋ ಸೀಟು!

    ಗಾಂಧೀನಗರ: 27 ವರ್ಷಗಳ ಹಿಂದೆ ನಡೆದಿದ್ದ ವಿಮಾನದ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿ ಹಾಗೂ ಅಹಮದಾಬಾದ್ (Ahmedabad) ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿ ಇಬ್ಬರು 11A ಸೀಟಿನಲ್ಲೇ ಕುಳಿತಿದ್ದರು. ಈಗ ಈ ಸೀಟನ್ನು ಯಮನನ್ನೇ ಯಾಮಾರಿಸುವ ಸೀಟು ಎನ್ನಲಾಗುತ್ತಿದೆ. ಇದೀಗ, ಮೊದಲ ದುರಂತದಲ್ಲಿ ಬದುಕಿದ ವ್ಯಕ್ತಿ ತಾವು ಪಾರಾದ ರೀತಿಯನ್ನು ನೆನಪಿಸಿಕೊಂಡಿದ್ದಾರೆ.

    ಹೌದು, ಎರಡು ದುರಂತಗಳ ಪೈಕಿ ಒಂದು 1998ರಲ್ಲಿ ಥೈಲ್ಯಾಂಡ್‌ನಲ್ಲಿ (Thailand) ನಡೆದರೆ, ಇನ್ನೊಂದು ಇದೇ ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದಿತ್ತು. ಮೊದಲ ದುರಂತದಲ್ಲಿ ಥೈಲ್ಯಾಂಡ್‌ನ ಸಿಂಗರ್ ಹಾಗೂ ನಟ ರುವಾಂಗ್ಸಾಕ್ ಲೊಯ್ಚುಸಾಕ್  (Ruangsak Loychusak) ಬದುಕುಳಿದಿದ್ದರು. ಮೊನ್ನೆಯ ದುರಂತದಲ್ಲಿ ರಮೇಶ್ ವಿಶ್ವಾಸ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಚ್ಚರಿ ಎಂದರೆ ಇಬ್ಬರು ಕುಳಿತಿದ್ದದ್ದು ಒಂದೇ ಸೀಟಿನಲ್ಲಿ ಅದು 11A.ಇದನ್ನೂ ಓದಿ: ಇಸ್ರೇಲ್ – ಇರಾನ್ ಸಂಘರ್ಷ | 24×7 ಸಹಾಯವಾಣಿ ಆರಂಭಿಸಿದ ಭಾರತ

    ಥೈಲ್ಯಾಂಡ್ ವಿಮಾನ ದುರಂತದಲ್ಲಿ ಸಿಲುಕಿದಾಗ ರುವಾಂಗ್ಸಾಕ್ ಅವರಿಗೆ 20 ವರ್ಷ. ಇದೀಗ 47 ವರ್ಷ. 27 ವರ್ಷಗಳ ಬಳಿಕ ತಾವು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ವಿಮಾನ ದುರಂತದಲ್ಲಿ ನಾನು ನಿಜಕ್ಕೂ ಸತ್ತೆ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ ಬದುಕಿದೆ. ಇದೀಗ ಭಾರತದಲ್ಲಿ ನಡೆದ ವಿಮಾನ ದುರಂತದಲ್ಲಿಯೂ ಈ ಮಿರಾಕಲ್ ನಡೆದಾಗ ಈ ಸುದ್ದಿಯನ್ನು ಕೇಳಿ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಘಟನೆಯ ಪರಿಯನ್ನು ಬಿಚ್ಚಿಟ್ಟಿದ್ದಾರೆ.

    1998ರಲ್ಲಿ ಬ್ಯಾಂಕಾಕ್‌ನಿಂದ ಹೊರಟ ಥಾಯ್ ಏರ್ವೇಸ್ ವಿಮಾನ ದಕ್ಷಿಣ ಥೈಲ್ಯಾಂಡ್‌ನ ನಗರವಾದ ಸೂರತ್ ಥಾನಿಯಲ್ಲಿ ಲ್ಯಾಂಡಿಂಗ್ ಆಗುವಾಗ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದಲ್ಲಿದ್ದ 146 ಜನರ ಪೈಕಿ 101 ಜನರು ಸಾವನ್ನಪ್ಪಿದ್ದರು. ಬದುಕುಳಿದವರ ಪೈಕಿ ಇವರು ಒಬ್ಬರು.

    ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ್ 242 ಜನರ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ.ಇದನ್ನೂ ಓದಿ: Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ