Tag: Ahmedabad

  • 20 ವರ್ಷದ ಹಿಂದೆ ಪತ್ನಿ ಜೊತೆ ಸಂಬಂಧ ಹೊಂದಿದ್ದವನನ್ನು ಹುಡುಕಿ ಕೊಂದ ಪತಿ

    20 ವರ್ಷದ ಹಿಂದೆ ಪತ್ನಿ ಜೊತೆ ಸಂಬಂಧ ಹೊಂದಿದ್ದವನನ್ನು ಹುಡುಕಿ ಕೊಂದ ಪತಿ

    – ಜ್ಯೋತಿಷಿಯಿಂದ ಬಯಲಾಗಿತ್ತು, ಪತ್ನಿಯ ಹಳೆ ಅಕ್ರಮ ಸಂಬಂಧ

    ಅಹಮದಾಬಾದ್: 20 ವರ್ಷದ ಹಿಂದೆ ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಈಗ ಹುಡುಕಿ ಕೊಲೆ ಮಾಡಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು 40 ವರ್ಷದ ರಾಜು ಹುಡಾ ಎಂದು ಗುರುತಿಸಲಾಗಿದೆ. ಚೇಲಾ ಭರದ್ ತನ್ನ ಸೋದರ ಮಾವ ದೌಲಾ ಭರ್ವಾಡ್, ಆನಂದ್‍ನಗರದ ನಿವಾಸಿ ಮಹೇಶ್ ಭರದ್ ಮತ್ತು ಸೂರತ್ ನಿವಾಸಿಗಳಾದ ರಮೇಶ್ ಮಾರ್ವಾಡಿ ಮತ್ತು ಪ್ರತೀಕ್ ಶೆಟ್ಟಿ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ. ಈಗ ಈ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು?
    20 ವರ್ಷದ ಹಿಂದೆ ಮದುವೆಯಾಗಿದ್ದ ಚೇಲಾ ಭರದ್‍ನಿಗೆ ಈಗ ಜ್ಯೋತಿಷಿಯೊಬ್ಬ ನಿನ್ನ ಪತ್ನಿ ಮದುವೆಗೂ ಮುಂಚೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಿದ್ದ. ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಚೇಲಾ ಮನೆಗೆ ಬಂದು ಹೆಂಡತಿಯನ್ನು ಹೊಡೆದು ಯಾರು ಹೇಳು ಎಂದು ಹೆದರಿಸಿದ್ದ. ಪತಿಯ ಕೋಪಕ್ಕೆ ಭಯಪಟ್ಟ ಹೆಂಡತಿ ಮದುವೆಗೂ ಮುಂಚೆ ನನಗೆ ನಮ್ಮ ಊರಿನ ರಾಜು ಹುಡಾ ಜೊತೆ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಳು. ಆಗ ಚೇಲಾ ಆತನನ್ನು ಕೊಲೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದ.

    ಹೀಗಿರುವಾಗ ರಾಜು ತನ್ನ ಸೋದರ ಅತ್ತೆಗೆ ಹುಷಾರಿಲ್ಲವೆಂದು ನೋಡಿಕೊಂಡು ಬರಲು ಚೇಲಾ ಅವರ ಊರಿಗೆ ಬಂದಿದ್ದ. ಇದನ್ನೆ ಉಪಯೋಗಿಸಿಕೊಂಡ ಚೇಲಾ, ರಾಜು ಹುಡಾನನ್ನು ಫೋನ್ ಮಾಡಿ ಕರೆಸಿಕೊಂಡು ತನ್ನ ಸಚಹರರೊಂದಿಗೆ ಸೇರಿ ಕೊಲೆ ಮಾಡಿ ಮೃತದೇಹವನ್ನು ಕಾಲುವೆಗೆ ತೇಲಿ ಬಿಟ್ಟಿರುತ್ತಾನೆ. ರಾಜುವಿನ ಮೃತದೇಹ ಕಾಲುವೆಯಲ್ಲಿ ಪತ್ತೆಯಾದ ನಂತರ ಪೊಲೀಸರು ತನಿಖೆ ಮಾಡಿ ಐದು ಜನರನ್ನು ಬಂಧಿಸಿದ್ದಾರೆ.

    ಫೋನ್ ಕರೆಗಳ ಆಧಾರದ ಮೇಲೆ ಚೇಲಾನನ್ನು ಮೊದಲು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ನಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ. ಜೊತೆಗೆ ತನ್ನ ಹೆಂಡತಿಯ ಜೊತೆ ಆತ ಮದುವೆಗೂ ಮುಂಚೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.

  • ಮೋದಿ ಲಸಿಕೆ ಪ್ರವಾಸ – ಗುಜರಾತಿನ ಅಹಮದಾಬಾದ್‍ಗೆ ಬಂದಿಳಿದ ಪ್ರಧಾನಿ

    ಮೋದಿ ಲಸಿಕೆ ಪ್ರವಾಸ – ಗುಜರಾತಿನ ಅಹಮದಾಬಾದ್‍ಗೆ ಬಂದಿಳಿದ ಪ್ರಧಾನಿ

    ಅಹಮದಾಬಾದ್: ಕೊರೊನಾ ಲಸಿಕೆ ಅಭಿವೃದ್ಧಿ ಪರಿಶೀಲನೆಗೆ ಇಂದು ಪ್ರಧಾನಿ ಮೋದಿಯವರು ಪ್ರವಾಸಗೈಗೊಂಡಿದ್ದು, ಸದ್ಯ ಗುಜರಾತಿನ ಅಹಮದಾಬಾದ್‍ಗೆ ಬಂದಿದ್ದಾರೆ.

    ಕೋವಿಡ್ ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಮೋದಿ ಇಂದು ಅಹಮದಾಬಾದ್‍, ಪುಣೆ ಮತ್ತು ಹೈದರಾಬಾದಿಗೆ ಪ್ರವಾಸಗೈಗೊಂಡಿದ್ದಾರೆ. ಈ ಪ್ರವಾಸದ ಅಂಗವಾಗಿ ಈಗ ಗುಜರಾತಿನ ಅಹಮದಾಬಾದ್‍ಗೆ ಬಂದಿರುವ ಮೋದಿಯವರು ಝೈಡಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಲಿದ್ದಾರೆ.

    ಝೈಡಸ್ ಬಯೋಟೆಕ್ ಪಾರ್ಕ್ ಭೇಟಿಯ ನಂತರ ಇಂದು ಪ್ರಧಾನಿ ಹೈದರಾಬಾದ್‍ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆಯವರಿಗೂ ಲಸಿಕೆ ಪ್ರವಾಸದಲ್ಲಿ ಭಾಗಿಯಾಗಲಿರುವ ಮೋದಿ, ಇಂದು ಮಧ್ಯಾಹ್ನ ಹೈದರಾಬಾದ್‍ನ ಭಾರತ್ ಬಯೋಟೆಕ್ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಸಂಜೆ ವೇಳೆಗೆ ಪುಣೆಯ ಸೆರಮ್ ಸಂಸ್ಥೆಗೆ ತೆರಳಲಿದ್ದಾರೆ.

    ಇಂದು ಮೋದಿ ಭೇಟಿ ನೀಡಲಿರುವ ಕಂಪನಿಗಳ ಕೊರೊನಾ ಲಸಿಕೆ ಸಂಶೋಧನೆ ಮತ್ತು ಯಾವ ಹಂತಕ್ಕೆ ಬಂದಿವೆ ಎಂಬ ಮಾಹಿತಿ ನೀಡುವುದಾದರೆ, ಅಹಮದಾಬಾದ್‍ ಝೈಡಸ್ ಬಯೋಟೆಕ್ ಸಂಸ್ಥೆಯು ಝೈಕೋವಿ-ಡಿ ಎಂಬ ಕೋವಿಡ್ ಲಸಿಕೆಯನ್ನು ತಯಾರು ಮಾಡುತ್ತಿದೆ. ಸದ್ಯ ಈ ಕಾರ್ಯ 2ನೇ ಹಂತದಲ್ಲಿ ಇದ್ದು, ಜೂನ್ ಬಳಿಕವೇ ಲಸಿಕೆ ಸಿಗುವ ನಿರೀಕ್ಷೆ ಇದೆ.

    ಇದರ ಜೊತೆಗೆ ಹೈದರಾಬಾದ್‍ನ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಕಂಪನಿ ಸೇರಿ ಜಂಟಿಯಾಗಿ ಉತ್ಪಾದನೆ ಮಾಡುತ್ತಿರುವ ಕೊವ್ಯಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗ ನಡೆಸುತ್ತಿದೆ. ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಕ್ಸ್ ಫರ್ಡ್ ವಿವಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನಿಕಾ ಎಂಬ ಕೊರೊನಾ ಲಸಿಕೆಯನ್ನು ತಯಾರು ಮಾಡುತ್ತಿದ್ದು, 3ನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ.

  • ಯಾವ ಹೋಟೆಲ್‍ಗೆ ಹೋಗಿದ್ದೆ ಎಂದ ಪತಿಯ ಮೇಲೆ ಹಲ್ಲೆ

    ಯಾವ ಹೋಟೆಲ್‍ಗೆ ಹೋಗಿದ್ದೆ ಎಂದ ಪತಿಯ ಮೇಲೆ ಹಲ್ಲೆ

    – ಬೆರಳು ಕಚ್ಚಿ, ಇಕ್ಕಳದಿಂದ ತಲೆಗೆ ಹೊಡೆದ ಮಡದಿ

    ಅಹಮದಾಬಾದ್: ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಕ್ಕಳ ಹಾಗೂ ಅಡುಗೆ ಸಾಮಾಗ್ರಿಯಿಂದ ಹಲ್ಲೆ ನಡೆಸಿದ ಪತ್ನಿ ವಿರುದ್ಧ ನೊಂದ ಪತಿ ದೂರು ದಾಖಲಿಸಿದ್ದಾರೆ.

    ಅಹಮದಾಬಾದ್‍ನ ನರೋಡಾದಲ್ಲಿ ಘಟನೆ ನಡೆದಿದ್ದು, ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿರುವ 34 ವರ್ಷದ ಅಭಯ್‍ಗೆ 26 ವರ್ಷದ ಪತ್ನಿ ಹಿಗ್ಗಾಮುಗ್ಗಾ ಥಳಿಸಿ, ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಇಕ್ಕಳಿನಿಂದ ತಲೆಗೆ ಬಲವಾಗಿ ಹೊಡೆದಿದ್ದಲ್ಲದೆ, ಕೋಪದಿಂದ ಪತಿಯ ಹೆಬ್ಬೆರಳನ್ನೇ ಕಚ್ಚಿದ್ದಾಳೆ.

    ಘಟನೆಗೆ ಕಾರಣವೇನು?
    ವ್ಯಕ್ತಿ ಪತ್ನಿ ಹಾಗೂ ಮೂರು ವರ್ಷದ ಮಗಳೊಂದಿಗೆ ವಾಸವಿದ್ದು, ಬುಧವಾರ ರಾತ್ರಿ 11ರ ಸುಮಾರಿಗೆ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ. ಊಟಕ್ಕೆ ಕುಳಿತಾಗ ಪತಿ ಸಂಜೆ ಸ್ನ್ಯಾಕ್ಸ್ ತಿನ್ನಲು ಯಾವ ಹೋಟೆಲ್‍ಗೆ ಹೋಗಿದ್ದೆ ಎಂದು ಪತ್ನಿಯನ್ನು ಪ್ರಶ್ನಿಸಿದ್ದಾನೆ. ಇದರಿಂದ ಕೋಪಕೊಂಡ ಪತ್ನಿ ಪ್ರಿಯಾಂಕಾ ಪತಿ ಅಭಯ್ ಮೇಲೆ ರೇಗಾಡಿ, ರಾದ್ಧಾಂತ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು ಹಲ್ಲೆ ಮಾಡಿದ್ದಾಳೆ ಎಂದು ಅಭಯ್ ಆರೋಪಿಸಿದ್ದಾರೆ.

    ಕೇವಲ ಹಲ್ಲೆ ಮಾಡಿದ್ದು ಮಾತ್ರವಲ್ಲ, ವಾಗ್ವಾದ ನಡೆಯುವ ವೇಳೆ ಪ್ರಿಯಾಂಕಾ ನನ್ನ ಎಡಗೈ ಹಿಡಿದುಕೊಂಡಿದ್ದು, ಸಿಟ್ಟಿಗೆದ್ದು ಬೆರಳನ್ನೇ ಕಡಿದಿದ್ದಾಳೆ. ಕಚ್ಚುತ್ತಿದ್ದಂತೆ ತೀವ್ರ ನೋವುಂಟಾಗಿದ್ದು, ತಕ್ಷಣ ಅವಳನ್ನು ಹಿಂದಕ್ಕೆ ತಳ್ಳಿದೆ. ಇದರಿಂದ ಪ್ರಿಯಾಂಕಾ ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಇಕ್ಕಳ ತಂದು ತೆಲೆಗೆ ಜೋರಾಗಿ ಹೊಡೆದಳು. ಇದರಿಂದ ತೀವ್ರ ರಕ್ತಸ್ರಾವವಾಯಿತು ಎಂದು ಅಭಯ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

    ರಕ್ತಸ್ರಾವದಿಂದ ತೀವ್ರ ಗಾಯಗೊಂಡಿದ್ದ ಅಭಯ್‍ನನ್ನು ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದ ನಂತರ ಅಭಯ್ ನರೋಡಾ ಪೆÇಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾರೆ. ಅಭಯ್ ಗುಜರಾತ್ ಮೂಲದವನಾಗಿದ್ದು ಪ್ರಿಯಾಂಕಾ ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ.

  • ಅತ್ಯಾಚಾರಿ ಆರೋಪಿ ಬಳಿ 35 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ದ ಲೇಡಿ ಪಿಎಸ್‍ಐ

    ಅತ್ಯಾಚಾರಿ ಆರೋಪಿ ಬಳಿ 35 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ದ ಲೇಡಿ ಪಿಎಸ್‍ಐ

    ಅಹಮದಾಬಾದ್: ಅತ್ಯಾಚಾರಿ ಆರೋಪಿಯ ಬಳಿ ಲಂಚ ಕೇಳಿ ಮಹಿಳಾ ಪಿಎಸ್‍ಐ ಸಿಕ್ಕಿ ಬಿದ್ದಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಪಶ್ಚಿಮ ಅಹಮದಾಬಾದ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಜಡೇಜಾ ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ. ಆರೋಪಿಯ ವಿರುದ್ಧ ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆ (ಪಿಎಎಸ್‍ಎ) ಕಾಯ್ದೆ ಆಡಿ ಪ್ರಕರಣ ದಾಖಲು ಮಾಡದೇ ಇರಲು ಶ್ವೇತಾ 35 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಆರೋಪಿ ಕೆನಾಲ್ ಶಾ 2019ರಲ್ಲಿ ಅತ್ಯಾಚಾರ ಮಾಡಿದ್ದ, ಈ ಪ್ರಕರಣವನ್ನು ಶ್ವೇತಾ ಜಡೇಜಾ ಅವರು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಿಎಎಸ್‍ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸದೇ ಇರಲು ಆರೋಪಿ ಕೆನಾಲ್ ಶಾನ ಸಹೋದರನ ಬಳಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಿಎಎಸ್‍ಎ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಆರೋಪಿಯನ್ನು ಪೊಲೀಸರು ಜಿಲ್ಲಾ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರಿಸುವುದನ್ನು ತಡೆಯಲು ಶ್ವೇತಾ ಮುಂದಾಗಿದ್ದರು ಎನ್ನಲಾಗಿದೆ.

    ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ, ಪೊಲೀಸ್ ಅಧಿಕಾರಿ ಶ್ವೇತಾ ಜಡೇಜಾ ಅವರು, ಆರೋಪಿ ಕಡೆಯ ಮಧ್ಯವರ್ತಿಯ ಬಳಿ ಈಗಾಗಲೇ 20 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಇದಾದ ನಂತರ ಹೆಚ್ಚುವರಿಯಾಗಿ ಇನ್ನೂ 15 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 20 ಲಕ್ಷ ಪಡೆದು ಮತ್ತೆ 15 ಲಕ್ಷಕ್ಕೆ ಪೀಡಿಸುತ್ತಿದ್ದ ಕಾರಣ, ಆರೋಪಿ ಮಹಿಳಾ ಅಧಿಕಾರಿ ವಿರುದ್ಧ ದೂರು ನೀಡಿದ್ದಾನೆ.

    ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಶ್ವೇತಾ ಜಡೇಜಾರನ್ನು ಪೊಲೀಸರು ಬಂಧಿಸಿದ್ದು, ಸೆಷನ್ಸ್ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಈ ವೇಳೆ ವಿಚಾರಣೆ ಮಾಡಿದ ನ್ಯಾಯಾಲಯ ಪೊಲೀಸ್ ಅಧಿಕಾರಿನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ತಬ್ಲಿಘಿಗಳ ನಂತರ ಮಲೆನಾಡಿಗೆ ಮುಂಬೈ ನಂಟಿನ ಕಂಟಕ

    ತಬ್ಲಿಘಿಗಳ ನಂತರ ಮಲೆನಾಡಿಗೆ ಮುಂಬೈ ನಂಟಿನ ಕಂಟಕ

    – ಶಿವಮೊಗ್ಗ ಜಿಲ್ಲೆಯಲ್ಲಿ 12ಕ್ಕೇರಿದ ಸೋಂಕಿತರ ಸಂಖ್ಯೆ
    – ಇಂದು ಮೂವರಿಗೆ ಸೋಂಕು

    ಶಿವಮೊಗ್ಗ: ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ದಿನದಿಂದಲೂ ಮಲೆನಾಡಿನ ಶಿವಮೊಗ್ಗ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಒಂದೆಡೆ ಅಹಮದಾಬಾದ್‍ನ ತಬ್ಲಿಘಿಗಳು, ಮತ್ತೊಂದೆಡೆ ಮುಂಬೈನಿಂದ ಬಂದ ವಲಸೆ ಕಾರ್ಮಿಕರು ಮಲೆನಾಡಿನ ಮಂದಿಗೆ ಕಂಟಕವಾಗಿ ಕಾಡುತ್ತಿದ್ದಾರೆ. ಹೀಗಾಗಿ ಇಂದು ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೇರಿದೆ.

    ಕೊರೊನಾ ಕಾಣಿಸಿಕೊಂಡ ಆರಂಭದಿಂದಲೂ ಜಿಲ್ಲೆ ಹಸಿರು ವಲಯದಲ್ಲಿತ್ತು. ಸರ್ಕಾರ ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಹೊರ ರಾಜ್ಯಗಳಲ್ಲಿದ್ದ ಜಿಲ್ಲೆಯ ಜನ ಶಿವಮೊಗ್ಗಕ್ಕೆ ಬರಲಾರಂಭಿಸಿದರು. ಹೀಗಾಗಿ ಗುಜರಾತ್‍ನ ಅಹಮದಾಬಾದ್ ನಿಂದ ಬಂದ 8 ಮಂದಿ ತಬ್ಲಿಘಿಗಳಿಗೆ ಮೊದಲು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತು. ಒಂದೇ ದಿನ 8 ಪಾಸಿಟಿವ್ ಪತ್ತೆಯಾಗಿದ್ದು, ಜಿಲ್ಲೆಯ ಜನತೆಗೆ ಆತಂಕ ಸೃಷ್ಟಿಯಾಗುವಂತೆ ಮಾಡಿತು. ಆದರೆ ಜಿಲ್ಲಾಡಳಿತ ತಬ್ಲಿಘಿಗಳು ಎಲ್ಲೂ ಹೋಗದಂತೆ ಕ್ವಾರಂಟೈನ್ ಮಾಡುವ ಮೂಲಕ ಅನಾಹುತ ತಪ್ಪಿಸಿತು.

    ತಬ್ಲಿಘಿಗಳಾಯ್ತು ಇದೀಗ ಮುಂಬೈ ನಂಟು ಮಲೆನಾಡಿಗರಿಗೆ ಕಂಟಕವಾಗಿದೆ. ಮುಂಬೈನಿಂದ ತೀರ್ಥಹಳ್ಳಿ ತಾಲೂಕಿನ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಮೂರು ದಿನಗಳ ಹಿಂದೆ ಮುಂಬೈನಿಂದ ಆಗಮಿಸಿದ್ದ, ರಿಪ್ಪನ್ ಪೇಟೆ ಸಮೀಪ ಕ್ವಾರಂಟೈನ್ ಗೆ ಒಳಗಾಗಿದ್ದ ಮೂವರಿಗೆ ಕೊರೊನಾ ಸಂಕು ಇರುವುದು ಪತ್ತೆಯಾಗಿದೆ. ಇದರಲ್ಲಿ ಹೊಸನಗರ ತಾಲೂಕಿನ 42 ವರ್ಷದ ರೋಗಿ ನಂ.1089 ಹಾಗೂ 4 ವರ್ಷದ ರೋಗಿ ನಂ.1090 ಹೆಣ್ಣು ಮಗುವಿಗೂ ಸೋಂಕು ತಗುಲಿದೆ. ಅಲ್ಲದೆ ಸಾಗರದ 38 ವರ್ಷದ ಮಹಿಳೆ ರೋಗಿ ನಂ.1088 ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇಂದು ಪತ್ತೆಯಾದ ಮೂವರ ಜೊತೆ 12 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಯ ಐಸೋಲೇಷನ್ ನಲ್ಲಿ ಇಡಲಾಗಿದೆ.

    ಮಲೆನಾಡಿನ ಮಂದಿಗೆ ಹೊರಗಿನವರೇ ಕಂಟಕವಾಗಿ ಕಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಯಾವೊಬ್ಬ ಸ್ಥಳೀಯರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿಲ್ಲ. ಬದಲಿಗೆ ಹೊರಗಿನಿಂದ ಬಂದವರಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಜನತೆ ಮೈಮರೆಯದೇ ಜಾಗೃತರಾಗಿರಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

  • ನಾಳೆ ಮುಂಬೈನಿಂದ ಧಾರವಾಡಕ್ಕೆ 1,600 ವಲಸೆ ಕಾರ್ಮಿಕರು- ಜಿಲ್ಲಾಡಳಿತಕ್ಕೆ ಹೊಸ ಸವಾಲು

    ನಾಳೆ ಮುಂಬೈನಿಂದ ಧಾರವಾಡಕ್ಕೆ 1,600 ವಲಸೆ ಕಾರ್ಮಿಕರು- ಜಿಲ್ಲಾಡಳಿತಕ್ಕೆ ಹೊಸ ಸವಾಲು

    ಧಾರವಾಡ: ಜಿಲ್ಲೆಗೆ ಅಹಮದಾಬಾದ್‍ನಿಂದ ಆಗಮಿಸಿರುವ 9 ಜನರಿಗೆ ಏಕಕಾಲಕ್ಕೆ ಕೊರೊನಾ ಪಾಸಿಟಿವ್ ವರದಿ ಬಂದ ಬೆನ್ನಲ್ಲಿಯೇ ಅನ್ಯ ರಾಜ್ಯದಿಂದ 1,600 ಕಾರ್ಮಿಕರು ಏಕಕಾಲಕ್ಕೆ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ಈಗ ಹೊಸ ಸವಾಲಾಗಿದೆ.

    ಈಗಾಗಲೇ ವಿವಿಧ ಬಸ್‍ಗಳ ಮೂಲಕ ಒಟ್ಟು 768 ಜನ ಬೇರೆ ಬೇರೆ ದಿನಗಳಲ್ಲಿ ಧಾರವಾಡಕ್ಕೆ ಆಗಮಿಸಿದ್ದಾರೆ. ಆದರೆ ಈಗ ಒಂದೇ ಸಮಯಕ್ಕೆ 1,600 ಜನ ಮುಂಬೈದಿಂದ ಆಗಮಿಸುತ್ತಿರುವ ಹಿನ್ನೆಲೆ ಇವರನ್ನೆಲ್ಲ ತಪಾಸಣೆ ಮಾಡುವುದೇ ಈಗ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಮುಂಬೈನಿಂದ ಬರಲಿರುವ ಶ್ರಮಿಕ ಎಕ್ಸ್ ಪ್ರೆಸ್ ರೈಲಿನಲ್ಲಿ ಇವರೆಲ್ಲ ನಾಳೆ ಸಂಜೆಗೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರೈಲಿನಲ್ಲಿ ಬರುವವರೆಲ್ಲಾ ಧಾರವಾಡ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯವರೂ ಸಹ ಇದ್ದಾರೆ. ಬೇರೆ ಜಿಲ್ಲೆಯವರನ್ನು ಇಲ್ಲಿಯೇ ತಪಾಸಣೆ ಮಾಡಬೇಕಾ ಅಥವಾ ನೇರವಾಗಿ ಆಯಾ ಜಿಲ್ಲೆಗೆ ಕಳುಹಿಸಿ ಕೊಡಬೇಕಾ? ಎನ್ನುವ ಬಗ್ಗೆ ಗೊಂದಲಗಳಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಸ್ಪಷ್ಟತೆ ದೊರೆಯಲಿದೆ.

  • ಅಹಮದಾಬಾದ್‍ನಿಂದ ಆಗಮಿಸಿರುವ 09 ಮಂದಿ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಅಹಮದಾಬಾದ್‍ನಿಂದ ಆಗಮಿಸಿರುವ 09 ಮಂದಿ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಧಾರವಾಡ: ಗುಜರಾತಿನ ಅಹಮದಾಬಾದಿನಿಂದ ಜಿಲ್ಲೆಗೆ ಆಗಮಿಸಿ ಕೊರೊನಾ ಪಾಸಿಟಿವ್ ದೃಢಪಟ್ಟಿರುವ 09 ಮಂದಿಯ ಪ್ರಯಾಣ ಮಾಹಿತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಸಾರ್ವಜನಿಕ ತಿಳುವಳಿಕೆಗಾಗಿ ಪ್ರಕಟಿಸಿದ್ದಾರೆ.

    ಪಿ- 879, ಪಿ-880, ಪಿ-881, ಪಿ-882, ಪಿ-883, ಪಿ-884, ಪಿ-885, ಪಿ-886, ಪಿ-887 ರವರು ಕೊರೊನಾ ಸೋಂಕಿತರಾಗಿದ್ದಾರೆ. ಹುಬ್ಬಳ್ಳಿ ನಗರದ 06, ಕುಂದಗೋಳದ ಇಬ್ಬರು ಮತ್ತು ಕಲಘಟಗಿಯ ಒಬ್ಬರು ಸೇರಿ ಧಾರವಾಡ ಜಿಲ್ಲೆಯ ಒಟ್ಟು 9 ಜನ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ 2 ಜನ ಸೇರಿಕೊಂಡು ಅಹಮದಾಬಾದ್‍ನ ಸರಕೆಜ್ ಹಾಲಿ ಮಹಮದ್ ಮಸೀದಿಯಿಂದ ಮೇ 5ರ ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯವರು ವ್ಯವಸ್ಥೆ ಮಾಡಿದ ಜಿಜೆ 01 – ಬಿಯು 9986 ಸಂಖ್ಯೆಯ ವಾಹನದ ಮೂಲಕ ಹೊರಟು ಮುಂಬೈ ಮೂಲಕ ಮೇ.5 ರಂದು ಸಾಯಂಕಾಲ 07 ಗಂಟೆಗೆ ನಿಪ್ಪಾಣಿಗೆ ತಲುಪಿದ್ದರು.

    ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಲು ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿವಸಗಳ ಕಾಲ ಚೆಕ್‍ಪೋಸ್ಟಿನಲ್ಲಿ ವಾಸ್ತವ್ಯ ಮಾಡಿದ್ದರು. ನಂತರ ಮೇ.8 ರಂದು ಸಾಯಂಕಾಲ 5 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ಕೆಎ 09 – ಸಿ 2579 ಸಂಖ್ಯೆಯ ಟಾಟಾ 407 ಮ್ಯಾಕ್ಸಿ ಕ್ಯಾಬ್ ವಾಹನದ ಮುಖಾಂತರ ನಿಪ್ಪಾಣಿಯಿಂದ ಧಾರವಾಡ ಕೃಷಿ ವಿ.ವಿ.ಆವರಣಕ್ಕೆ ರಾತ್ರಿ 8.30 ಗಂಟೆಗೆ ಆಗಮಿಸಿದ್ದರು.

    ಅಂದು ಅವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಮೇ.12 ರಂದು 9 ಜನರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಹಾಸ್ಪಿಟಲ್‍ಗೆ ಸ್ಥಳಾಂತರಿಸಲಾಗಿದೆ.

  • ಗುಜರಾತ್‍ನಿಂದ ಬರುವಾಗ ನೆಗೆಟಿವ್ – ಶಿವಮೊಗ್ಗಕ್ಕೆ ಬಂದಾಗ ತಬ್ಲಿಘಿಗಳಿಗೆ ಕೊರೊನಾ ಪಾಸಿಟಿವ್

    ಗುಜರಾತ್‍ನಿಂದ ಬರುವಾಗ ನೆಗೆಟಿವ್ – ಶಿವಮೊಗ್ಗಕ್ಕೆ ಬಂದಾಗ ತಬ್ಲಿಘಿಗಳಿಗೆ ಕೊರೊನಾ ಪಾಸಿಟಿವ್

    – ಮುಂಬೈ, ಬೆಳಗಾವಿ ಗಡಿ ಮೂಲಕ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಎಂಟ್ರಿ

    ಶಿವಮೊಗ್ಗ: ಗುಜರಾತ್‍ನ ಅಹಮದಾಬಾದ್‍ನಿಂದ ಶುಕ್ರವಾರ ರಾತ್ರಿ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ತಬ್ಲಿಘಿಗಳಿಂದ ಈಗ ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆ ರೆಡ್ ಝೋನ್ ಪಟ್ಟಿಗೆ ಸೇರಿದೆ.

    ಅಹಮದಾಬಾದ್‍ನಿಂದ ಬಂದ 9 ತಬ್ಲಿಘಿಗಳ ಪೈಕಿ 8 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 5ರಂದು ಗುಜರಾತ್‍ನ ಅಹಮದಾಬಾದ್‍ಗೆ ದಾವಣಗೆರೆಯಿಂದ ರೈಲಿನ ಮೂಲಕ ಜಿಲ್ಲೆಯ ಈ 9 ಜನರು ತೆರಳಿದ್ದರು. ಜಮಾತ್‍ನ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅಲ್ಲದೇ ಲಾಕ್‍ಡೌನ್ ವೇಳೆ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಕೂಡ ಇರಿಸಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶುಕ್ರವಾರ ರಾತ್ರಿ ಈ ತಬ್ಲಿಘಿಗಳು ಮುಂಬೈ, ಬೆಳಗಾವಿ ಮೂಲಕ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದರು. ಗುಜರಾತ್‍ನಿಂದ ಬಸ್ಸಿನಲ್ಲಿ ಬಂದಿದ್ದ ತಬ್ಲಿಘಿಗಳು ಮೊದಲು ನಗರದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣಕ್ಕೆ ತಲುಪಿದ್ದರು. ಇವರನ್ನು ಬಿಟ್ಟು ಬಸ್ ಗುಜರಾತ್‍ಗೆ ವಾಪಸ್ ತೆರೆಳಿದೆ. ಇದನ್ನೂ ಓದಿ: ತಬ್ಲಿಘಿಗಳಿಂದ ಶಿವಮೊಗ್ಗಕ್ಕೂ ವಕ್ಕರಿಸಿದ ಕೊರೊನಾ – 8 ಸೋಂಕಿತ ಪ್ರಕರಣ ಪತ್ತೆ

    ಇವರೆಲ್ಲರನ್ನೂ ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಾಗೆಯೇ ಶಿವಮೊಗ್ಗದ ಬಾಪೂಜಿನಗರದ ಹಾಸ್ಟೆಲ್‍ವೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿ ನಿಗಾವಹಿಸಲಾಗಿತ್ತು. ಆದರೆ ಇಂದು ಈ 9 ಮಂದಿಯಲ್ಲಿ 8 ಮಂದಿಗೆ ಸೊಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ದೃಢಪಟ್ಟ 8 ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸೋಂಕಿತರ ವಿವರ:
    ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
    ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
    ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
    ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.

  • ಕಾಂಗ್ರೆಸ್ ಶಾಸಕನಿಗೂ ಕೊರೊನಾ- ಸೋಂಕು ದೃಢ ಪಡುವ ಮುನ್ನ ಸಿಎಂ ಭೇಟಿ

    ಕಾಂಗ್ರೆಸ್ ಶಾಸಕನಿಗೂ ಕೊರೊನಾ- ಸೋಂಕು ದೃಢ ಪಡುವ ಮುನ್ನ ಸಿಎಂ ಭೇಟಿ

    ಅಹ್ಮದಾಬಾದ್: ಗುಜರಾತ್‍ನ ಜಮಾಲ್‍ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿದೆ ಸೋಂಕಿತ ಶಾಸಕನನ್ನು ಎಸ್‍ವಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸೋಂಕು ದೃಢ ಪಡುವ ಮುನ್ನ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಬಾಯ್ ಪಟೇಲ್ ಮತ್ತು ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಸೇರಿ ಹಲವು ಗಣ್ಯರನ್ನು ಮಂಗಳವಾರ ಬೆಳಗ್ಗೆ ಗಾಂಧಿನಗರದ ಸಚಿವಾಲಯದಲ್ಲಿ ಸೋಂಕಿತ ಶಾಸಕ ಭೇಟಿಯಾಗಿದ್ದರು. ಈ ಹಿನ್ನೆಲೆ ಸಿಎಂ ಪ್ರಮುಖ ಸಚಿವರು ಹೋಮ್ ಕ್ವಾರಂಟೈನ್ ಆಗುವ ಸಾಧ್ಯತೆಗಳಿವೆ.

    ಅಹ್ಮದಾಬಾದ್‍ನ ಜಮಾಲ್‍ಪುರ ಪ್ರದೇಶವೂ ಕೊರೊನಾ ಪೀಡಿತವಾಗಿದ್ದು, ಸೋಂಕಿತ ಶಾಸಕ ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದರು. ಈ ವೇಳೆಯೂ ಅವರು ನೂರಾರು ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಸಿಎಂ ವಿಜಯ್ ರೂಪಾನಿ ಶಾಸಕರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸೋಂಕಿತ ಶಾಸಕ ಕೂಡಾ ಭಾಗಿಯಾಗಿದ್ದರು.

  • ಒಎಲ್‌ಎಕ್ಸ್‌ನಲ್ಲಿ 30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ

    ಒಎಲ್‌ಎಕ್ಸ್‌ನಲ್ಲಿ 30 ಸಾವಿರ ಕೋಟಿಗೆ ಏಕತಾ ಪ್ರತಿಮೆ ಮಾರಾಟಕ್ಕೆ

    ಅಹಮದಾಬಾದ್: ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಏಕತಾ ಪ್ರತಿಮೆಯನ್ನು ಕಿಡಿಗೇಡಿಗಳು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

    ಅನಾಮಧೇಯ ವ್ಯಕ್ತಿಯೊಬ್ಬ ಏಕತಾ ಪ್ರತಿಮೆಯ ಫೋಟೋವನ್ನು ಒಎಲ್‌ಎಕ್ಸ್‌ನಲ್ಲಿ ಅಪ್ಲೋಡ್ ಮಾಡಿ ಪ್ರತಿಮೆ 30 ಸಾವಿರ ಕೋಟಿ ರೂಪಾಯಿಗೆ ಮಾರಾಟಕ್ಕಿದೆ ಎಂದು ಹಾಕಿದ್ದನು. ಈ ಜಾಹಿರಾತನ್ನು ಯಾವುದೇ ರೀತಿಯ ಪೂರ್ವಾಪರ ವಿಚಾರಸಿದೆ ಸಾರ್ವಜನಿಕವಾಗಿ ಜಾಹಿರಾತು ಪ್ರಸಾರ ಮಾಡಿದ್ದಾಕ್ಕಾಗಿ ಕೆವಾಡಿಯಾ ಸ್ಥಳೀಯ ಆಡಳಿತ ಒಎಲ್‍ಎಕ್ಸ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕೆವಾಡಿಯಾದ ಉಪ ಆಯುಕ್ತ ನಿಲೇಶ್ ದುಬೆ ಅವರು, ಏಕತಾ ಪ್ರತಿಮೆ ದೇಶದ ಆಸ್ತಿ. ಇದನ್ನು ಯಾರೋ ಒಬ್ಬ ಕಿಡಿಗೇಡಿ ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹಿರಾತು ನೀಡಿದ್ದಾನೆ. ಈ ಬಗ್ಗೆ ಪೂರ್ವಾಪರ ವಿಚಾರಿಸದೇ ಒಎಲ್‍ಎಕ್ಸ್ ಕೂಡ ಜಾಹಿರಾತು ಪ್ರಸಾರ ಮಾಡಿದೆ. ಆದ್ದರಿಂದ ಸಂಸ್ಥೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಕಿಡಿಕಾರಿದ್ದಾರೆ.

    ಏಕತಾ ಪ್ರತಿಮೆಯು ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. 2018ರ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಅನಾವರಣ ಮಾಡಿದಾಗಿನಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಕೂಡ ಪಡೆದಿದೆ.