Tag: Ahmedabad

  • ಹಾರ್ದಿಕ್ ಪಾಂಡ್ಯ ಅಹಮದಾಬಾದ್ ತಂಡದ ನಾಯಕ!

    ಹಾರ್ದಿಕ್ ಪಾಂಡ್ಯ ಅಹಮದಾಬಾದ್ ತಂಡದ ನಾಯಕ!

    ನವದೆಹಲಿ: ಭಾರತ ತಂಡದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಈ ವರ್ಷದ ಐಪಿಎಲ್‍ನಲ್ಲಿ ನೂತನವಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡದ ನಾಯಕರಾಗುವುದು ಬಹುತೇಕ ಖಚಿತವಾಗಿದೆ.

    ಗುಜರಾತ್‍ನ ಬರೋಡಾದ ನಿವಾಸಿಯಾಗಿರುವ ಹಾರ್ದಿಕ್ ಪಾಂಡ್ಯ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದರು. ಇದೇ ಮೊದಲ ಬಾರಿಗೆ ತಮ್ಮ ರಾಜ್ಯವನ್ನು ಮುನ್ನಡೆಸುವ ಸಾಧ್ಯತೆಯಿದೆ.

    ಅಹಮದಾಬಾದ್ ತಂಡದಲ್ಲಿ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ನೇಮಕಗೊಳ್ಳುವ ಸಾಧ್ಯತೆಯಿದೆ. 2017ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾದ ನೆಹ್ರಾ, ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಹಾಯಕ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.

    ಈ ಬಾರಿ ನಡೆದ ಬಿಡಿಂಗ್‍ನಲ್ಲಿ 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಹಾಗೂ ಕಿರಣ್ ಪೊಲಾರ್ಡ್ ಅವರನ್ನು ಮೊದಲು ಉಳಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟಿತ್ತು.

    ಈ ವರ್ಷ ಹಳೆಯ ಐಪಿಲ್ ತಂಡಗಳ ಜೊತೆಗೆ ಅಹಮದಾಬಾದ್ ಹಾಗೂ ಲಕ್ನೋ ತಂಡಗಳೆರಡು ಹೊಸದಾಗಿ ಸೇರ್ಪಡೆಗೊಂಡಿದೆ. ಈ ಎರಡು ತಂಡಗಳು ಬಿಡ್‍ಗೂ ಮೊದಲೇ ಗರಿಷ್ಟ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಐಪಿಎಲ್ ಅನುಮತಿ ಮಾಡಿದೆ. ಹೀಗಾಗಿ ಶೀಘ್ರವೇ ಈ ತಂಡಗಳು ಮೂವರು ಆಟಗಾರರ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ – ಫೋಟೋ ವೈರಲ್

    ಹಾರ್ದಿಕ್ ಪಾಂಡ್ಯ ಐಪಿಎಲ್ ಪಂದ್ಯದಲ್ಲಿ ಒಟ್ಟಾರೆಯಾಗಿ 92 ಪಂದ್ಯಗಳನ್ನು ಆಡಿದ್ದು, 1,476 ರನ್ ಗಳಿಸಿದ್ದಾರೆ. ಹಾಗೂ 42 ವಿಕೆಟ್‍ಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಭಾರತ ಪರ ಆಡಿರಲಿಲ್ಲ. ಬೆನ್ನು ನೋವಿನ ಸಮಸ್ಯೆಗಳಿಂದ ಬಳಲುತ್ತಿರುವ ಇವರು ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಪಾಲ್ಗೊಂಡಿಲ್ಲ. ಇದನ್ನೂ ಓದಿ: ನಾನು ಫಿಟ್ ಆಗಿದ್ದೇನೆ, ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ: ಕೊಹ್ಲಿ

  • ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ

    ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ

    ಗಾಂಧಿನಗರ: ನಗರದಲ್ಲಿ ನೈಲಾನ್, ಸಿಂಥೆಟಿಕ್ ಗಾಜಿನ ಲೇಪಿತ ಹಾಗೂ ಜೈವಿಕ ವಿಘಟನೀಯವಲ್ಲದ ವಸ್ತುಗಳಿಂದ ತಯಾರಿಸಿದ ಗಾಳಿಪಟದ ತಂತಿಗಳ ಉತ್ಪಾದನೆ, ಸಂಗ್ರಹಣೆ ಮಾರಾಟ ಹಾಗೂ ಬಳಕೆಯನ್ನು ಅಹಮದಾಬಾದ್ ಪೊಲೀಸರು ನಿಷೇಧಿಸಿದ್ದಾರೆ.

    ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಗಾಳಿಪಟ ಹಾರಿಸುವ ಪರಿಕಲ್ಪನೆ ಹಲವು ವರ್ಷಗಳಿಂದಲೇ ಇದೆ. ಇವುಗಳಲ್ಲಿ ಬಳಕೆ ಮಾಡಲಾಗುವ ಕೆಲವು ವಸ್ತುಗಳು ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ಮಾರಣಾಂತಿಕವಾಗಿ ಗಾಯಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅಹಮದಾಬಾದ್‌ನಲ್ಲಿ ಗಾಳಿಪಟ ಹಾರಿಸುವಲ್ಲಿ ನಿರ್ಬಂಧ ಹೇರಿದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಗಾಳಿಪಟಗಳಲ್ಲಿ ಸಮುದಾಯಕ್ಕೆ ಧಕ್ಕೆ ತರುವಂತಹ ಘೋಷಣೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ, ಕಬ್ಬಿಣದ ಸರಳು ಹಾಗೂ ಮರದ ತುಂಡುಗಳಿಂದ ತಯಾರಿಸಲಾದ ಗಾಳಿಪಟಗಳನ್ನೂ ನಿಷೇಧಿಸಿದೆ. ಈ ನಿರ್ಬಂಧ ಜನವರಿ 8ರಿಂದ 18ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಳಿಪಟದ ದಾರ ಸಿಲುಕಿ ವ್ಯಕ್ತಿಗೆ ಗಂಭೀರ ಗಾಯ – ವಿಡಿಯೋ ವೈರಲ್

    ಅಹಮದಾಬಾದ್‌ನಲ್ಲಿ ಈ ನಿರ್ಬಂಧವನ್ನು ಉಲ್ಲಂಘಿಸಿದ ವ್ಯಕ್ತಿಯ ಮೇಲೆ ಐಪಿಸಿ ಸೆಕ್ಷನ್ 188(ಸರ್ಕಾರಿ ಆದೇಶ ಉಲ್ಲಂಘನೆ) ಅಡಿ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಮಾತನಾಡಲು ನಿರಾಕರಿಸಿದಕ್ಕೆ ಯುವತಿಗೆ ಆ್ಯಸಿಡ್ ದಾಳಿ ಬೆದರಿಕೆ ಹಾಕ್ದ

    ಗಾಂಧಿನಗರ: ಮಾತನಾಡಲು ನಿರಾಕರಿಸಿದ 25 ವರ್ಷದ ಯುವತಿಗೆ ಆ್ಯಸಿಡ್ ದಾಳಿ ನಡೆಸುವುದಾಗಿ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಇದೀಗ ಯುವತಿ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಆರೋಪಿ ವಿರುದ್ಧ ವೆಜಾಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಹಮದಾಬಾದ್‍ನ ಜುಹಾಪುರದ ನಿವಾಸಿಯಾಗಿರುವ ಸಂತ್ರಸ್ತೆ, ವೆಜಲ್‍ಪುರದಲ್ಲಿ ವಾಸಿಸುವ ಮನ್ಸೂರಿ ಇಬ್ಬರೂ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಆದರೆ ಇದೀಗ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ರೇಪ್ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!

    ಮನ್ಸೂರಿ ಶನಿವಾರ ಮಧ್ಯಾಹ್ನ ಸಂತ್ರಸ್ತೆ ಮನೆಗೆ ಆಗಮಿಸಿ ಮತನಾಡುವುದನ್ನು ನಿಲ್ಲಿಸಿರುವ ಕುರಿತಂತೆ ಪ್ರಶ್ನಿಸಿದ್ದಾನೆ. ಆಗ ಯುವತಿ ನಿನ್ನೊಂದಿಗೆ ಸ್ನೇಹ ಬೆಳೆಸಲು ಇಷ್ಟವಿಲ್ಲ ಎಂದು ಹೇಳಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಮನ್ಸೂರಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದ್ದರಿಂದ ಅವರ ನೆರೆಹೊರೆಯವರು ಧಾವಿಸಿದಾರೆ. ಆಗ ವ್ಯಕ್ತಿ ಸಂತ್ರಸ್ತೆಗೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಈ ಘಟನೆ ಕುರಿತಂತೆ ಯುವತಿ ತನ್ನ ತಂದೆಗೆ ವಿವರಿಸಿದಾಗ ಕೂಡಲೇ ಪೊಲೀಸರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಕ್ರಮಿನಲ್ ಬೆದರಿಕೆ ಮತ್ತು ಇತರ ದೂರುಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಹಿರಿಯರ ಕಿರುಕುಳ – ಚರ್ಚಿನಲ್ಲಿಯೇ ಪಾದ್ರಿ ಆತ್ಮಹತ್ಯೆಗೆ ಯತ್ನ

  • ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

    ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

    ಅಹಮದಾಬಾದ್: ಓಮಿಕ್ರಾನ್ ಸೋಂಕು ಹಿನ್ನಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆಯುವಂತೆ ಆರೋಗ್ಯ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಹೊಲ, ಗದ್ದೆ, ಗ್ರಾಮ, ಮನೆಗೆ ಹೋಗಿ ಲಸಿಕೆ ನೀಡುತ್ತಿರುವ ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಮನೆಯಲ್ಲಿ ಕೋವಿಡ್ ನೀಡುವ ಮೂಲಕವಗಿ ಸುದ್ದಿಯಾಗಿದೆ.

    ಕೋವಿಡ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯಬೇಕೆಂಬ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಅಹಮದಾಬಾದ್ ಮುನ್ಸಿಪಲ್  ಕಾರ್ಪೊರೇಷನ್​ (AMC) ಆರೋಗ್ಯ ಇಲಾಖೆಯ ತಂಡವು ಮದುವೆ ಮಂಟಪಗಳಿಗೆ ತೆರಳಿ ವ್ಯಾಕ್ಸಿನ್ ಪಡೆದವರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಲಸಿಕೆ ಪಡೆಯದೇ ಇರುವಂಥವರಿಗೆ ಸ್ಥಳದಲ್ಲಿಯೇ ಲಸಿಕೆ ನೀಡುವ ಕೆಲಸವನ್ನು ಮಾಡುತ್ತಿದೆ. ಇದನ್ನೂ ಓದಿ:  ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

    ಅರ್ಬನ್ ಹೆಲ್ತ್‍ಕೇರ್ ಸೆಂಟರ್ ವೈದ್ಯ ಡಾ.ಫಲ್ಗುನ್ ಈ ಕುರಿತು ಮಾತನಾಡಿ, ಎಲ್ಲರೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದ ಕುರಿತು ಪರೀಕ್ಷೆ ಮಾಡುತ್ತಿದ್ದೇವೆ. ನಗರದಲ್ಲಿ 70-80 ಹೆಲ್ತ್ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುವ ಮುದುವೆಗಳ ಬಗ್ಗೆ ವರದಿ ಪಡೆದು ಅಲ್ಲಿಗೆ ತೆರಳಿ ಪರೀಕ್ಷಿಸುತ್ತಿದ್ದೇವೆ ಎಂದರು.

    ಈ ತಂಡಗಳು ಗುರುವಾರ ವಿವಿಧ ವಿವಾಹ ಸ್ಥಳಗಳು ಮತ್ತು ಸಮುದಾಯ ಭವನಗಳಿಗೆ ತೆರಳಿ ಪರೀಕ್ಷೆ ಮಾಡುತ್ತಿವೆ. ಆರೋಗ್ಯ ಅಧಿಕಾರಿಗಳ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್‍ನಲ್ಲಿ ಗುರುವಾರ 70 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.

  • ವೀಡಿಯೋ: ಬೆಂಕಿ ಗೋಲ್ ಗಪ್ಪ ಸವಿದ ಮಹಿಳೆ

    ವೀಡಿಯೋ: ಬೆಂಕಿ ಗೋಲ್ ಗಪ್ಪ ಸವಿದ ಮಹಿಳೆ

    ಗುಜರಾತ್: ಅಹಮದಾಬಾದ್‍ನ ಬೀದಿಯೊಂದರಲ್ಲಿ ಮಹಿಳೆಯೊಬ್ಬರು ಗೋಲ್ ಗಪ್ಪ ಸವಿಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಬೆಂಕಿ ಬೀಡವನ್ನು ನೀವು ಕೇಳಿರಬಹುದು. ಆದರೆ ಬೆಂಕಿ ಜೊತೆಗೆ ಗೋಲ್ ಗಪ್ಪ ತಿಂದಿರುವುದನ್ನು ನೀವು ನೋಡಿದ್ದೀರಾ? ಹೌದು ಮಹಿಳೆಯೊಬ್ಬಳು ಗೋಲ್ ಗಪ್ಪದಲ್ಲಿ ಬೆಂಕಿ ಹೊತ್ತಿಸಿ ತಿಂದಿದ್ದಾರೆ. ಇದನ್ನೂ ಓದಿ: ನನಗೆ ತಿಳಿಯದೆ ಇರುವ ವಿಚಾರ ಹೇಳಿಕೊಡುವ ವ್ಯಕ್ತಿ ಆಕರ್ಷಕ – ಪತಿ ಬಗ್ಗೆ ದೀಪಿಕಾ ಮೆಚ್ಚುಗೆ

    ವೀಡಿಯೋದಲ್ಲಿ ಆಲೂಗಡ್ಡೆ, ಸೇವ್ ತುಂಬಿದ್ದ ಪೂರಿಯೊಳಗೆ ವ್ಯಕ್ತಿಯಬ್ಬರು ಕರ್ಪೂರ ತೊಂಡೊಂದನ್ನು ಇಟ್ಟು ಬೆಂಕಿಯನ್ನು ಹಚ್ಚುತ್ತಾರೆ. ಅದನ್ನು ತಕ್ಷಣವೇ ಮಹಿಳೆ ಬಾಯಿಯೊಳಗೆ ಹಾಕಿಕೊಂಡು ಸೇವಿಸುತ್ತಾರೆ.

    ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೂ ಸುಮಾರು 2ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 11 ಬಾರಿ ಮದುವೆಯಾದ್ರೂ 12ನೇಯ ಪತಿಗಾಗಿ ಹುಡುಕುತ್ತಿರುವ ಮಹಿಳೆ

  • ಹಣದಾಸೆಗೆ ವೃದ್ಧ ದಂಪತಿಯನ್ನು ಹತ್ಯೆಗೈದು ಮನೆಯೆಲ್ಲಾ ಹುಡುಕಿದ್ರು- ಆದ್ರೆ ಸಿಕ್ಕಿದ್ದು ಕೇವಲ 500 ರೂ!

    ಹಣದಾಸೆಗೆ ವೃದ್ಧ ದಂಪತಿಯನ್ನು ಹತ್ಯೆಗೈದು ಮನೆಯೆಲ್ಲಾ ಹುಡುಕಿದ್ರು- ಆದ್ರೆ ಸಿಕ್ಕಿದ್ದು ಕೇವಲ 500 ರೂ!

    ಅಹಮದಬಾದ್: ಹಣಕ್ಕಾಗಿ ಕಟ್ಟಡ ಕಾರ್ಮಿಕರು ಮನೆಯೊಂದಕ್ಕೆ ನುಗ್ಗಿ ಇಬ್ಬರು ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಘಾಟ್‌ಲೋದಿಯಾದಲ್ಲಿ ನಡೆದಿದೆ.

    ದಯಾನಂದ ಶಾನುಭೋಗ (90) ಮತ್ತು ವಿಜಯಲಕ್ಷ್ಮಿ ಶಾನುಭೋಗ (80) ಹತ್ಯೆಯಾದ ದಂಪತಿ. ಕೊಲೆ ಮಾಡಿದ ಏಮನ್‌ ಟೊಪ್ನೊ (26) ಮತ್ತು ಮುಕುತ್‌ ಹಪ್ಕಡದ (19) ಬಂಧಿತ ಆರೋಪಿಗಳು. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ

    ಕಟ್ಟಡ ಕಾರ್ಮಿಕರಾಗಿದ್ದ ಏಮನ್‌ ಮತ್ತು ಮುಕುತ್‌ ತಮ್ಮ ಮನೆಯವರಿಗೆ ಕೂಲಿ ಹಣವನ್ನು ಕಳುಹಿಸಿದ್ದರು. ತಮಗೆ ಹಣದ ಅವಶ್ಯಕತೆ ಹೆಚ್ಚಿತ್ತು. ಹೀಗಾಗಿ ಸಂಪಾದನೆಗೆ ಸುಲಭ ದಾರಿ ಹುಡುಕಲು ಪ್ರಯತ್ನಿಸಿದರು. ಆಗ ಮನೆ ದರೋಡೆಯ ಯೋಜನೆ ಅವರಿಗೆ ಹೊಳೆಯಿತು.

    POLICE JEEP

    ಈ ವೇಳೆ ಮನೆಯೊಂದಕ್ಕೆ ನುಗ್ಗಿದ ಆರೋಪಿಗಳು ವೃದ್ಧ ದಯಾನಂದ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆತನ ಪತ್ನಿಯ ಕುತ್ತಿಗೆಯನ್ನೂ ಕೊಯ್ದಿದ್ದಾರೆ. ವೃದ್ಧ ದಂಪತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಆರೋಪಿಗಳು ಮನೆಯನ್ನು ಹುಡುಕಾಡಿದ್ದಾರೆ. ಎಷ್ಟು ಹುಡುಕಿದರೂ ಕೊನೆಗೆ ಅವರಿಗೆ ಸಿಕ್ಕಿದ್ದು ಕೇವಲ 500 ರೂಪಾಯಿ. ಕೊನೆಗೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದೆಹಲಿ ವಿವಿ ಪ್ರೊಫೆಸರ್‌ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಕಾರು ಚಾಲಕ!

    ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

  • ಐಪಿಎಲ್‌ಗೆ ಅಹಮದಾಬಾದ್‌, ಲಕ್ನೋ ಎಂಟ್ರಿ

    ಐಪಿಎಲ್‌ಗೆ ಅಹಮದಾಬಾದ್‌, ಲಕ್ನೋ ಎಂಟ್ರಿ

    ದುಬೈ: ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ಗೆ 2 ಹೊಸ ತಂಡಗಳ ಎಂಟ್ರಿಯಾಗಿದೆ. 2022ರ ಐಪಿಎಲ್‍ಗೆ ಆರ್‌ಪಿ ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಸಮೂಹದ ಲಕ್ನೋ ತಂಡ ಮತ್ತು ಸಿವಿಸಿ  ಕ್ಯಾಪಿಟಲ್‌ ಪಾರ್ಟ್‌ನರ್ಸ್‌ ಒಡೆತನದ ಅಹಮದಾಬಾದ್ ತಂಡಗಳು ಕಣಕ್ಕೆ ಇಳಿಯಲಿದೆ.

    ದುಬೈನಲ್ಲಿ ನಡೆದ ಬಿಡ್‍ನಲ್ಲಿ ಅಹಮದಾಬಾದ್ ತಂಡವನ್ನು ಭಾರತದ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಿವಿಸಿ ಗ್ರೂಪ್‌ 5,600 ಕೋಟಿ ರೂ. ಬಿಡ್ ಮಾಡಿದ್ದರೆ, ಆರ್‌ಪಿಎಸ್‌ಜಿ  ಗ್ರೂಪ್ 7,090 ಕೋಟಿ ರೂ. ಲಕ್ನೋ ತಂಡವನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಐಪಿಎಲ್‍ನ ಮುಂದಿನ ಸೀಸನ್‍ನಲ್ಲಿ 8 ತಂಡಗಳ ಬದಲಾಗಿ 10 ತಂಡಗಳು ಕಣಕ್ಕಿಳಿಯಲಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಐಪಿಎಲ್‍ನ ಹೊಸ ತಂಡಗಳನ್ನು ಖರೀದಿಸಲು ಸಾಕಷ್ಟು ಹೆಸರಾಂತ ಉದ್ಯಮಿಗಳು ಮುಂದೆ ಬಂದಿದ್ದರೆ ಆದರೆ ಇದೀಗ ಅಧಿಕೃತವಾಗಿ ಸಿವಿಸಿ ಗ್ರೂಪ್‌ ಮತ್ತು ಆರ್‌ಪಿಎಸ್‌ಜಿ ಗ್ರೂಪ್ 2 ತಂಡಗಳನ್ನು ಖರೀದಿ ಮಾಡಿದೆ.  ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

    ಬಿಸಿಸಿಐ ಎರಡು ತಂಡಗಳ ಬಿಡ್‌ ಮೂಲಕ 10 ಸಾವಿರ ಕೋಟಿ ರೂ. ನಿರೀಕ್ಷಿಸಿತ್ತು. ಆದರೆ ಈಗ 2,690 ಕೋಟಿ ರೂ. ಹೆಚ್ಚುವರಿಯಾಗಿ ಗಳಿಸಿದೆ. ಅಹಮದಾಬಾದ್‌ ತಂಡ ಖರೀದಿಸಲು ಅದಾನಿ ಗ್ರೂಪ್‌ 5,000 ಕೋಟಿ ರೂ. ಬಿಡ್‌ ಮಾಡಿತ್ತು. ಇದನ್ನೂ ಓದಿ: ಆತ್ಮಿಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

    ಒಟ್ಟು 10 ತಂಡಗಳು ಇರುವ ಕಾರಣ ಐಪಿಎಲ್ ಟೂರ್ನಿಯ ಪಂದ್ಯಾಟಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಜೊತೆಗೆ ಎಲ್ಲಾ ಆಟಗಾರರ ಹರಾಜು ಪ್ರಕ್ರಿಯೆಯ ಮೂಲಕ ತಂಡಗಳ ರಚನೆಯಾಗಲಿದೆ.

  • ರಸ್ತೆಬದಿ ದಹಿ ಕಚೋರಿ ಮಾರುವ 14ರ ಬಾಲಕನ ಭಾವನಾತ್ಮಕ ಕಥೆ

    ರಸ್ತೆಬದಿ ದಹಿ ಕಚೋರಿ ಮಾರುವ 14ರ ಬಾಲಕನ ಭಾವನಾತ್ಮಕ ಕಥೆ

    ಅಹಮದಾಬಾದ್: ಅಹಮದಾಬಾದ್‍ನ ರಸ್ತೆಬದಿಯಲ್ಲಿ ದಹಿ ಕಚೋರಿ ವ್ಯಾಪಾರ ಮಾಡುವ 14 ವರ್ಷದ ಬಾಲಕನ ಭಾವನಾತ್ಮಕ ಕಥೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    boy kachori

    ಈ ವೀಡಿಯೋವನ್ನು ಫುಡ್ ಬ್ಲಾಗರ್ ಡೋಯಶ್ ಪತ್ರಾಬೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಬಾಲಕ ಮಣಿನಗರ ರೈಲ್ವೆ ನಿಲ್ದಾಣದ ಎದುರಿಗಿರುವ ಅಂಗಡಿಯೊಂದರಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

    boy kachori

    ಬಾಲಕ ತನ್ನ ಕುಟುಂಬಕ್ಕೆ ಸಹಾಯ ಮಾಡಲು ಕಚೋರಿ ವ್ಯಾಪಾರ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಬಾಲಕನ ಸಂಪೂರ್ಣ ಕಥೆ ಕೇಳಿ ಡೊಯಾಶ್ ಭಾವುಕಗೊಂಡು ವೀಡಿಯೋ ಹಂಚಿಕೊಳ್ಳುವುದರ ಜೊತೆಗೆ ಬಾಲಕನಿಗೆ ಸಹಾಯ ಮಾಡುವಂತೆ ಶೀರ್ಷಿಕೆಯಲ್ಲಿ ಬರೆದು ವಿನಂತಿಸಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ- ಡ್ರೈವರ್ ಗ್ರೇಟ್ ಎಸ್ಕೇಪ್

    ಅವನಿಗೆ ಸಹಾಯ ಮಾಡಿ. ಬಾಲಕ 14 ವರ್ಷ ವಯಸ್ಸಿನವನಾಗಿದ್ದು, ಗುಜರಾತ್‍ನ ಅಹಮದಾಬಾದ್‍ನ ಮಣಿನಗರ ರೈಲ್ವೆ ನಿಲ್ದಾಣದ ಎದುರು ಕೇವಲ 10ರೂ.ಗೆ ದಹಿ ಕಚೋರಿ ಮಾರುತ್ತಿದ್ದಾನೆ. ಅವನಿಗೆ ಸಹಾಯ ಮಾಡಬೇಕೆಂದು ವೀಡಿಯೋವನ್ನು ಹಂಚಿಕೊಂಡಿದ್ದೇನೆ. ಕೇವಲ 14 ವರ್ಷಕ್ಕೆ ಅವನ ಕುಟುಂಬಕ್ಕೆ ಸಹಾಯ ಮಾಡಲು ಬಾಲಕ ಶ್ರಮಿಸುತ್ತಿದ್ದಾನೆ. ಅವನ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಲಕನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಆತನಿಗೆ ಧೈರ್ಯ ತುಂಬುತ್ತಿದ್ದಾರೆ. ಜೊತೆಗೆ ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ

  • ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

    ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

    ಅಹಮದಾಬಾದ್: ಕಾರಿಗೆ ಮೂತ್ರ ಮಾಡಿದ ನಾಯಿಯನ್ನು ಕಟ್ಟಿ ಹಾಕಿ ಎಂದವನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.

    ಕರ್ನಲ್ ಕಟೋಚ್ ಕಾರನ್ನು ತೊಳೆದು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ಆ ವೇಳೆ ಪಕ್ಕದ ಮನೆಯ ನಾಯಿ ಬಂದು ಕಾರಿಗೆ ಮೂತ್ರ ಮಾಡಿದೆ. ಇದರಿಂದ ಕೋಪಗೊಂಡು ಕಟೋಚ್ ಪಕ್ಕದ ಮನೆಗೆ ಹೋಗಿ ನಾಯಿಯ ಮಾಲೀಕರಿಗೆ ಜೋರು ಮಾಡಿದ್ದಾರೆ. ನಿಮ್ಮ ಮನೆಯ ನಾಯಿಯನ್ನು ಮನೆಯೊಳಗೆ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಪಕ್ಕದ ಮನೆಯ ಚಿರಾಗ್ ಮಲ್ಹೋತ್ರ ಮತ್ತು ಸನ್ನಿ ಮಲ್ಹೋತ್ರ ನಮ್ಮ ನಾಯಿಗೆ ಹೊಡೆಯಲು ನೀನು ಯಾರು? ಎಂದು ಆತನಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲಿ ಕೆಡವಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ- ಪತ್ನಿಯ ಗುಪ್ತಾಂಗಕ್ಕೆ ಹೊಲಿಗೆ

    ಆ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿರುವ ಅನೇಕರು ಚಿರಾಗ್‍ನ ಮನೆಯ ನಾಯಿಯ ಬಗ್ಗೆ ಹಲವು ಬಾರಿ ದೂರಿದ್ದರೂ ಅವರು ನಾಯಿಯನ್ನು ಬೇಕಾಬಿಟ್ಟಿ ಹೊರಗೆ ಓಡಾಡಲು ಬಿಟ್ಟು ಬೇರೆಯವರಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ನಾಯಿ ಮೂತ್ರ ಮಾಡಿ ಕಾರನ್ನು ಗಲೀಜು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ತಂದೆ-ಮಗನ ವಿರುದ್ಧ ಚಾಂದ್‍ಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ

    ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ

    ಗಾಂಧಿನಗರ: ಚಿನ್ನದ ಮನುಷ್ಯ ಎಂದು ಹೆಸರು ಪಡೆದಿರುವ ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಪಿ ಪಟೇಲ್ ಗುಜರಾತಿನ ಅಹಮದಾಬಾದ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕುಟುಂಬದ ಜೊತೆ ನೆಡದ ಗಲಾಟೆ ಬಳಿಕ ತಾನೇ ಕುತ್ತಿಗೆ ಹಿಸುಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲಿಸ್ ಮೂಲಗಳಿಂದ ತಿಳಿದುಬಂದಿದೆ. ರಾಜಿಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕುಂಜಾಲ್ ಪಟೇಲ್, ದರಿಯಾಪುರ್ ಕ್ಷೇತ್ರದಿಂದ ಈ ಮುಂಚೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದನು. ಕೆಜಿಗಟ್ಟಲೇ ಚಿನ್ನಾಭರಣ ಧರಿಸಿದ್ದ ಕುಂಜಾಲ್ ಪಟೇಲ್ ಫೋಟೋ ವೈರಲ್ ಆಗಿ ಖ್ಯಾತಿಗಳಿಸಿದ್ದನು. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೊದಲು ಶಾಲೆ ಆರಂಭ ಬೇಡ: ಪ್ರತಾಪ್ ಸಿಂಹ

    ಆತ್ಮಹತ್ಯೆ ಸಂಬಂಧ ಅನುಮಾನವು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಮಧುಪುರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕುಂಜಾಲ್ ಮಧುಪುರದ ಯೋಗೇಶ್ ಸೋಸೈಟಿಯಲ್ಲಿ ವಾಸವಿದ್ದನು. ಇತನ ಸಾವಿನ ಕುರಿತಾಗಿ ಅನುಮಾನಗಳಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.