ಗಾಂಧೀನಗರ: ‘ಹರ್ ಘರ್ ತಿರಂಗ’ ಯಾತ್ರೆಯ ರ‍್ಯಾಲಿ ವೇಳೆ ಗುಜರಾತ್‍ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ರಸ್ತೆಯಲ್ಲಿ ಬಿಡಾಡುತ್ತಿದ್ದ ಹಸುಗಳು ದಾಳಿ ನಡೆಸಿರುವ ಘಟನೆ ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ನಡೆದಿದೆ.
ಕಡಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವೇಳೆ ಈ ಘಟನೆ ನಡೆದಿದೆ. ಕಾರನ್‍ಪುರ ತರಕಾರಿ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಹಸು ನಿತಿನ್ ಪಟೇಲ್ ಅವರಿಗೆ ತಿವಿದಿದೆ. ಇದರಿಂದಾಗಿ ನಿತಿನ್ ಪಟೇಲ್ ಅವರ ಕಾಲಿಗೆ ಗಾಯವಾಗಿದ್ದು, ನಂತರ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್
ಚಿಕಿತ್ಸೆ ನಂತರ ನಿತಿನ್ ಪಟೇಲ್ ಅವರು ಅಹಮದಾಬಾದ್‍ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. ಇದೀಗ ನಿತಿನ್ ಪಟೇಲ್ ಅವರು ವೀಲ್ ಚೇರ್ ಮೇಲೆ ಕುಳಿತುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜೈಲಿನ ಕೈದಿಗೆ ಚಿಕನ್ ಪೀಸ್‍ನಲ್ಲಿ ಗಾಂಜಾ ಸಾಗಾಟ- ಪೊಲೀಸರಿಂದ ಜಪ್ತಿ
Live Tv
[brid partner=56869869 player=32851 video=960834 autoplay=true]
ಹೀಗಾಗಿ ಈ ಘಟನೆ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಂತರ ಈ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನನು ಪರಿಶೀಲಿಸಿ, ಅದರ ಆಧಾರದ ಮೇಲೆ ಅಹಮದಾಬಾದ್ ಕ್ರೈಂ ಬ್ರಾಂಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಫೈಜಾನ್ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಕುರಿತಂತೆ ವಿಚಾರಣೆ ವೇಳೆ ಆರೋಪಿ ರಸ್ತೆಯಲ್ಲಿ ಬಿದ್ದಿದ್ದ ಮಾಂಸವನ್ನು ನಾನು ಬೇರೆಡೆಗೆ ಸಾಗಿಸುತ್ತಿದ್ದೆ. ಆದರೆ ಈ ವೇಳೆ ಜನರು ಹಲ್ಲೆ ನಡೆಸಲು ಮುಂದಾದಾಗ ಹೆದರಿಕೊಂಡು ಕೆಳಗೆ ಬಿದ್ದಿದ್ದ ಮಾಂಸದ ತುಂಡುಗಳನ್ನು ಎತ್ತುವುದನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಅಹಮದಾಬಾದ್: ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಋತುವಿನಲ್ಲಿಯೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗ ರಾಜಸ್ಥಾನ ವಿರುದ್ಧ ಏಳು ವಿಕೆಟ್‍ಗಳ ಜಯ ಸಾಧಿಸಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.
ಈ ಅದ್ಭುತ ಗೆಲುವಿನ ನಂತರ ಗುಜರಾತ್ ಸಿಎಂ ಭೂಪೇಂದ್ರ್ ಪಟೇಲ್ ಗುಜರಾತ್ ಟೈಟಾನ್ಸ್ ಆಟಗಾರರನ್ನು ಭೇಟಿ ಮಾಡಿದರು. ಈ ವೇಳೆ ಸಿಎಂ ಪಟೇಲ್ ಇಡೀ ತಂಡವನ್ನು ಸನ್ಮಾನಿಸಿದರು. ಇದರೊಂದಿಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಿದರು. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?
ಗುಜರಾತ್ ಟೈಟಾನ್ಸ್ ತಂಡ ವಿಶೇಷ ರೀತಿಯಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ತಂಡದ ಆಟಗಾರರು ಅಹಮದಾಬಾದ್‍ನಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಈ ರೋಡ್ ಶೋ ಓಸ್ಮಾನ್‍ಪುರ ರಿವರ್‌ಫ್ರಂಟ್‌ನಿಂದ ಪ್ರಾರಂಭವಾಗಿ ವಿಶ್ವಕುಂಜ್ ರಿವರ್‌ಫ್ರಂಟ್‌ಗೆ ಕೊನೆಗೊಂಡಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್
ಬಿಸಿಸಿಐ, ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕೆಲಸ ಮಾಡಿದ ಪಿಚ್ ಕ್ಯುರೇಟರ್‌ಗಳು ಮತ್ತು ಗ್ರೌಂಡ್ ಸ್ಟಾಂಪ್‍ಗಳಿಗೆ 1.25 ಕೋಟಿ ರೂ. ಬಹುಮಾನ ಮೊತ್ತವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ.
I’m pleased to announce a prize money of INR 1.25 crores for the men who gave us the best games in #TATAIPL 2022. The unsung heroes – our curators and groundsmen across 6 IPL venues this season.
ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಕೇವಲ ಒಂಬತ್ತು ವಿಕೆಟ್‍ಗೆ 130 ರನ್ ಗಳಿಸಿತು. ರಾಜಸ್ಥಾನ ಪರ ಜೋಸ್ ಬಟ್ಲರ್ ಗರಿಷ್ಠ 39 ಮತ್ತು ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಹಾರ್ದಿಕ್ ಪಾಂಡ್ಯ 17 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.
ರಾಜಸ್ಥಾನ ನೀಡಿದ 131 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 11 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 133 ರನ್ ಹೊಡೆದು 7 ವಿಕೆಟ್‍ಗಳ ಜಯವನ್ನು ಸಾಧಿಸಿತು.
ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜೋಸ್ ಬಟ್ಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಐಪಿಎಲ್ ಫೈನಲ್‍ನಲ್ಲಿ ನಾಯಕರೊಬ್ಬರು ಈ ಪ್ರಶಸ್ತಿ ಗೆದ್ದಿರುವುದು ಇದು ಮೂರನೇ ಬಾರಿ. ಈ ಹಿಂದೆ ಅನಿಲ್ ಕುಂಬ್ಳೆ (2009) ಮತ್ತು ರೋಹಿತ್ ಶರ್ಮಾ (2015) ಮಾತ್ರ ಈ ಸಾಧನೆಗೈದಿದ್ದರು.
ಗಾಂಧಿನಗರ: 9ನೇ ತರಗತಿ ವಿದ್ಯಾರ್ಥಿಯೋರ್ವನಿಗೆ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ನಗರದ ಕೇಂದ್ರೀಯ ವಿದ್ಯಾಲಯ ಶಾಲೆಯೊಂದರಲ್ಲಿ ಮಂಗಳವಾರ ನಡೆದಿದೆ.
ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ, 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಏಪ್ರಿಲ್ 20 ರಂದು ಶಾಲಾ ಸಮಯದಲ್ಲಿ ತಮ್ಮ ಮಗ ಮತ್ತು ಇತರ ಕೆಲವರನ್ನು ಶೌಚಾಲಯಕ್ಕೆ ಕರೆದೊಯ್ದು ಮೂತ್ರ ಕುಡಿಸಲು ಪ್ರಯತ್ನಿಸಿದ್ದಾರೆ ಎಂದು ಏಪ್ರಿಲ್ 22 ರಂದು ವಸ್ತ್ರಾಪುರ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಬಾತ್‌ರೂಮ್ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!
ಶಾಲೆಯ ಪ್ರಾಂಶುಪಾಲರಾದ ಜೇಮಿ ಜೇಮ್ಸ್ ಅವರು ಈ ವಿಷಯವಾಗಿ ಎರಡು ವಿಚಾರಣೆಗಳನ್ನು ನಡೆಸಿದ್ದಾರೆ. ಆದರೆ ಗಂಭೀರವಾದ ಅಂಶ ಏನೂ ಕಂಡುಬಂದಿಲ್ಲ. ಘಟನೆ ಸಂಭವಿಸಿದ ಕೂಡಲೇ ನಾವು ಗುರುವಾರದಂದು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ವಿಚಾರಣೆ ಪೂರ್ಣಗೊಂಡಿದ್ದು, ಅದರಲ್ಲಿ ಏನೂ ಇಲ್ಲ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸಂದೀಪ್ ಖಂಬಳ್ ತಿಳಿಸಿದ್ದಾರೆ. ಇನ್ನೂ ಯಾವುದೇ ಪ್ರಥಮ ಮಾಹಿತಿ ವರದಿ (ಎಫ್‍ಐಆರ್) ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಗಾಂಧಿನಗರ: ಪತಿ ತನ್ನ ಹೆಂಡತಿ, ಇಬ್ಬರು ಹದಿಹರೆಯದ ಮಕ್ಕಳು ಮತ್ತು ಹೆಂಡತಿಯ ಅಜ್ಜಿಯನ್ನು ಕೊಂದಿರುವ ಅಮಾನುಷ ಘಟನೆಯೊಂದು ಅಹಮದಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.
ಸೋನಾಲ್‍ಬೆನ್ ಗಾಯಕ್ವಾಡ್(37), ಅವರ ಮಗ ಗಣೇಶ್ (17), ಮಗಳು ಪ್ರಗತಿ(15) ಮತ್ತು ಸೋನಾಲ್‍ಬೆನ್ ಅವರ ಅಜ್ಜಿ ಸುಭದ್ರಾಬೆನ್(70) ಅವರನ್ನು ವಿನೋದ್ ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಮೇಲೆ ವಿನೋದ್ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ
ಸೋನಾಲ್‍ಬೆನ್ ಅವರ ತಾಯಿ ಸಂಜುಬೆನ್ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ಮಗಳಿಗೆ ಫೋನ್ ರೀಚ್ ಆಗುತ್ತಿಲ್ಲ. ಮನೆಗೆ ಹೋಗಿ ನೋಡಿದರೆ ಬೀಗ ಹಾಕಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆ ಪೊಲೀಸರು ಅಹಮದಾಬಾದ್‍ನ ಓಧವ್ ಪ್ರದೇಶದ ಸೋನಾಲ್‍ಬೆನ್ ಅವರ ಮನೆ ಬೀಗ ಒಡೆದು ನೋಡಿದಾಗ ಅರೆ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ.
ಶವ ಪತ್ತೆಯಾದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿಯನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಆರೋಪಿ ವಿನೋದ್ ಮಧ್ಯಪ್ರದೇಶದ ಇಂದೋರ್‌ನಿಂದ ಗುಜರಾತ್‍ಗೆ ಮರಳುತ್ತಿದ್ದಾಗ ದಾಹೋದ್ ಜಿಲ್ಲೆಯ ಎಸ್‍ಟಿ(ರಾಜ್ಯ ಸಾರಿಗೆ ನಿಗಮ) ಬಸ್‍ನಲ್ಲಿ ಸಿಕ್ಕಿ ಬಿದ್ದಿದ್ದಾನೆ.
ವಿನೋದ್, ತನ್ನ ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಆಕೆಯನ್ನು ಕೊಂದಿದ್ದಾನೆ. ನಂತರ ಅಪರಾಧವನ್ನು ಮರೆಮಾಚಲು ಇಬ್ಬರು ಮಕ್ಕಳು ಮತ್ತು ಪತ್ನಿಯ ಅಜ್ಜಿಯನ್ನು ಕೊಂದಿದ್ದಾನೆ. ಕೊಲೆ ಮಾಡಿದ ನಂತರ, ಅವನು ಸೂರತ್‍ಗೆ ಹೋಗಿದ್ದನು. ಅಲ್ಲಿಂದ ಅಹಮದಾಬಾದ್‍ಗೆ ಹಿಂತಿರುಗಿದ್ದು, ಇಂದೋರ್‌ಗೆ ತಪ್ಪಿಸಿಕೊಂಡು ಹೋಗಲು ಸಿದ್ಧತೆ ಮಾಡುತ್ತಿದ್ದ ಎಂದು ಗಾಯಕ್ವಾಡ್ ಪೊಲೀಸರಿಗೆ ತಿಳಿಸಿದ್ದಾರೆ.
– ವಿಶೇಷ ನ್ಯಾಯಾಲಯದಿಂದ ತೀರ್ಪು ಪ್ರಕಟ – 38 ಮಂದಿಗೆ ಗಲ್ಲು ಶಿಕ್ಷೆ, 11 ಮಂದಿಗೆ ಜೀವಾವಧಿ ಶಿಕ್ಷೆ
ಅಹಮದಾಬಾದ್: ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲೆಂದೇ ಉಗ್ರರು ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ ಮಾಡಿದ್ದರು ಎಂಬ ವಿಚಾರ ಕೋರ್ಟ್ ತೀರ್ಪಿನಲ್ಲಿ ಪ್ರಸ್ತಾಪವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದರು. ಇತರೇ ಸ್ಥಳಗಳಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟವರನ್ನು ಮತ್ತು ಗಾಯಗೊಂಡವರನ್ನು ನೋಡಲು ಮೋದಿ ಆಸ್ಪತ್ರೆಗೆ ಭೇಟಿ ನೀಡಿಯೇ ನೀಡುತ್ತಾರೆ ಎನ್ನುವುದು ಉಗ್ರರಿಗೆ ಗೊತ್ತಿತ್ತು. ಈ ಕಾರಣಕ್ಕೆ ಮೋದಿ ಹತ್ಯೆಗೆ ಆಸ್ಪತ್ರೆಗಳೇ ಸೂಕ್ತ ಸ್ಥಾನ ಎಂಬ ನಿರ್ಧಾರಕ್ಕೆ ಬಂದಿದ್ದ ಉಗ್ರರು ಆಸ್ಪತ್ರೆಗಳನ್ನು ಗುರಿಯಾಗಿಸಿ ಕೃತ್ಯ ಎಸಗಿದ್ದರು ಎಂಬ ಅಂಶ ತೀರ್ಪಿನಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 164 ಮಂದಿ ಹೇಳಿಕೆ ನೀಡಿದ್ದು, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ನಿಷೇಧ ಮಾಡಿದ್ದಕ್ಕೆ ಸಾಮೂಹಿಕ ಹತ್ಯೆ ಎಸಗಲು ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ – IPS ಅಧಿಕಾರಿ ಅರೆಸ್ಟ್
38 ಉಗ್ರರಿಗೆ ಗಲ್ಲು ಶಿಕ್ಷೆ:
ಗುಜರಾತಿನ ಅಹಮದಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿ 56 ಮಂದಿಯನ್ನು ಬಲಿ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ 38 ಮಂದಿಗೆ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದರೆ 11 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ.
48 ಮಂದಿಗೆ ಒಟ್ಟು 2.85 ಲಕ್ಷ ರೂ. ಮತ್ತು ಓರ್ವ ದೋಷಿಗೆ 2.88 ಲಕ್ಷ ರೂ. ಘಟನೆಯಲ್ಲಿ ಮಡಿದವರಿಗೆ ತಲಾ 1 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಮತ್ತು ಸಾಮಾನ್ಯ ಗಾಯಕ್ಕೆ ತುತ್ತಾದವರಿಗೆ ತಲಾ 25 ಸಾವಿರ ರೂ. ಪರಿಹಾರವನ್ನು ನ್ಯಾಯಾಲಯ ಪ್ರಕಟಿಸಿದೆ.
ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಅಧಿಕಾರಿಗಳ ತಂಡ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು ತರದ ದಿನಗಳಲ್ಲಿ ಒಟ್ಟು 9 ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. ಈ ಪೈಕಿ 2017ರಲ್ಲಿ ವಿಚಾರಣೆ ಹೊಣೆ ವಹಿಸಿಕೊಂಡ ನ್ಯಾ.ಎ.ಆರ್.ಪಟೇಲ್ ಇದೀಗ ತೀರ್ಪು ಪ್ರಕಟಿಸಿದ್ದಾರೆ.
ಜುಲೈ 26, 2008 ರಂದು ಅಹಮದಾಬಾದ್‍ನಲ್ಲಿರುವ ಸಿವಿಲ್ ಆಸ್ಪತ್ರೆ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಎಲ್‍ಜಿ ಆಸ್ಪತ್ರೆ, ಬಸ್‍ಗಳು, ನಿಲ್ಲಿಸಿದ ಬೈಸಿಕಲ್‍ಗಳು, ಕಾರುಗಳು ಮತ್ತು ಇತರ ಸ್ಥಳಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ 22 ಬಾಂಬ್‍ಗಳನ್ನು ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ 56 ಜನರು ಸಾವನ್ನಪ್ಪಿದರು. ಸುಮಾರು 200 ಮಂದಿ ಗಾಯಗೊಂಡಿದ್ದರು. ಕೆಲವು ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಾದ ಇಮೇಲ್‍ಗಳಲ್ಲಿ, ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. 2002ರ ಗೋಧ್ರೋತ್ತರ ದಂಗೆಗೆ ಪ್ರತಿಯಾಗಿ ಈ ದಾಳಿಯನ್ನು ನಡೆಸಿದ್ದೇವೆ ಎಂದು ದೋಷಿಗಳು ವಿಚಾರಣೆ ವೇಳೆ ಹೇಳಿಕೊಂಡಿದ್ದರು.
ಅಹ್ಮದಾಬಾದ್ : ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಅಪರಾಧಿಗಳಲ್ಲಿ 38 ಮಂದಿಗೆ ಮರಣ ದಂಡನೆ ವಿಧಿಸಿ ನ್ಯಾಯಲಯ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ತ್ವರಿತ ವಿಚಾರಣೆಗೆ ಗೊತ್ತುಪಡಿಸಿದ ವಿಶೇಷ ನ್ಯಾಯಲಯ ಇಂದು ಈ ಆದೇಶ ನೀಡಿದೆ.
ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕಾಯಿದೆ ( UAPA ) ಮತ್ತು ಭಾರತೀಯ ದಂಡ ಸಂಹಿತೆ 302ರ ಅಡಿಯಲ್ಲಿ ತೀರ್ಪು ಪ್ರಕಟಿಸಿದ ನ್ಯಾ. ಎ.ಆರ್ ಪಟೇಲ್, ಉಳಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಇನ್ನು ಸ್ಫೋಟದಲ್ಲಿ ಮೃತಪಟ್ಟವರಿಗೆ 1 ಲಕ್ಷ ರೂ. ಗಂಭೀರ ಗಾಯಗೊಂಡವರಿಗೆ 50,000 ರೂಪಾಯಿ ಮತ್ತು ಅಪ್ರಾಪ್ತರಿಗೆ 25,000 ರೂಪಾಯಿ ಪರಿಹಾರವನ್ನು ನೀಡುವಂತೆ ಸೂಚಿಸಿದ್ದಾರೆ.
2008 Ahmedabad serial bomb blast case | A special court pronounces death sentence to 38 out of 49 convicts pic.twitter.com/CtcEWGze2z
ಐಪಿಸಿ, ಯುಎಪಿಎ, ಸ್ಫೋಟಕ ವಸ್ತುಗಳ ಕಾಯಿದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಪ್ರತಿ ಸೆಕ್ಷನ್ ಅಡಿಯಲ್ಲಿ 49 ಅಪರಾಧಿಗಳಲ್ಲಿ ಪ್ರತಿಯೊಬ್ಬರಿಗೂ ನೀಡಲಾದ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ, ನ್ಯಾಯಾಲಯವು 48 ಅಪರಾಧಿಗಳಿಗೆ ತಲಾ 2.85 ಲಕ್ಷ ರೂ. ಅಗರಬತ್ತಿವಾಲಾಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಹೆಚ್ಚುವರಿ ಶಿಕ್ಷೆಯೊಂದಿಗೆ 2.88 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
38 sentenced to death, 11 get life imprisonment in 2008 Ahmedabad serial bomb blast case
ಜುಲೈ 26, 2008 ರಂದು ಅಹಮದಾಬಾದ್‍ನಲ್ಲಿರುವ ಸಿವಿಲ್ ಆಸ್ಪತ್ರೆ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಎಲ್‍ಜಿ ಆಸ್ಪತ್ರೆ, ಬಸ್‍ಗಳು, ನಿಲ್ಲಿಸಿದ ಬೈಸಿಕಲ್‍ಗಳು, ಕಾರುಗಳು ಮತ್ತು ಇತರ ಸ್ಥಳಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ 22 ಬಾಂಬ್‍ಗಳನ್ನು ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ 56 ಜನರು ಸಾವನ್ನಪ್ಪಿದರು. ಸುಮಾರು 200 ಮಂದಿ ಗಾಯಗೊಂಡಿದ್ದರು. ಕೆಲವು ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಾದ ಇಮೇಲ್‍ಗಳಲ್ಲಿ, ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಇದನ್ನೂ ಓದಿ: ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ
ಗಾಂಧಿನಗರ: ಮಹಿಳೆಯೊಬ್ಬರು ಹಾಲು ನೀಡಲು ತಡ ಮಾಡಿದ್ದಕ್ಕೆ ಪತಿರಾಯ ತ್ರಿವಳಿ ತಲಾಖ್ ನೀಡಿರುವ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆ ತನ್ನ ಪತಿ ಹಾಗೂ ಅತ್ತೆ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ಅತ್ತೆ, ಮಾವ ಹಾಗೂ ಪತಿ ತನ್ನ ಪೋಷಕರಿಂದ 1 ಲಕ್ಷ ರೂ. ಪಡೆಯುವಂತೆ ಕೇಳಿದ್ದರು. ಇದಕ್ಕೆ ನಾನು ನಿರಾಕರಿಸಿದ್ದರಿಂದ ಜಗಳ ಪ್ರಾರಂಭವಾಗಿದೆ. ಅಂದಿನಿಂದ ತನಗೆ ದೌರ್ಜನ್ಯ ಮತ್ತು ಹಲ್ಲೆಗಳು ನಡೆದಿವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆ ಪ್ರಚಾರದ ವೇಳೆ DMK ಅಭ್ಯರ್ಥಿ ಹೃದಯಾಘಾತದಿಂದ ಸಾವು
ಮಂಗಳವಾರ ತನ್ನ 5 ವರ್ಷದ ಮಗಳು ಹಾಲು ಹಾಗೂ ತಿಂಡಿ ಕೇಳಿದ್ದಳು. ಅದೇ ಸಮಯದಲ್ಲಿ ಪತಿಯೂ ನನಗೆ ಹಾಲು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮೊದಲು ಮಗುವಿಗೆ ಹಾಲು ನೀಡಿ ಬಳಿಕ ಪತಿಗೆ ಹಾಲನ್ನು ನೀಡಿದ್ದಾರೆ. ಇದನ್ನೂ ಓದಿ: ನನ್ನನ್ನು ಹೊರತಳ್ಳುವವರೆಗೆ ಕಾಂಗ್ರೆಸ್ ತೊರೆಯಲ್ಲ: ಮನೀಶ್ ತಿವಾರಿ
ತಡವಾಗಿ ಹಾಲು ನೀಡಿದ್ದಕ್ಕೆ ಕೆರಳಿದ್ದ ಪತಿ ತನ್ನ ಸಂಬಂಧಿಕರು ಹಾಗೂ ಪೋಷಕರ ಸಮ್ಮುಖದಲ್ಲಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.
ಗಾಂಧಿನಗರ: ತನ್ನನ್ನು ಗುರಾಯಿಸಿಕೊಂಡು ನೋಡುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ 28 ವರ್ಷದ ಮಹಿಳೆ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಘಟನೆ ಶನಿವಾರ ರಾತ್ರಿ ಅಹಮದಾಬಾದ್‍ನ ಥಾಲ್ತೇಜ್ ಪ್ರದೇಶದಲ್ಲಿ ನಡೆದಿದೆ.
ಬೆಳಗ್ಗೆ 8.30ರ ಸುಮಾರಿಗೆ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ವೇಳೆ ಆರೋಪಿ ಸಾಹಿಲ್ ಠಾಕೋರ್ ತಿರುಗಾಡುತ್ತಿರುವುದನ್ನು ಸಂತ್ರಸ್ತೆ ಗಮನಿಸಿದ್ದಾರೆ. ನಂತರ ಆತ ತನ್ನತ್ತ ನೋಡಲು ಆರಂಭಿಸಿ, ಅಹಿತಕರ ಮತ್ತು ಅಶ್ಲೀಲ ಸನ್ನೆಗಳನ್ನು ತೋರಿಸಿದ್ದಾನೆ.
ನಂತರ ಸಿಟ್ಟಿಗೆದ್ದ ಮಹಿಳೆ ಆತನ್ನನ್ನು ತನ್ನತ್ತ ನೋಡುವುದನ್ನು ನಿಲ್ಲಿಸಿ ಹೋಗುವಂತ ಹೇಳಿ ನೆರೆಹೊರೆಯವರನ್ನು ಕರೆಯುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಆದರೆ ಇದಕ್ಕೂ ಹೆದರದ ವ್ಯಕ್ತಿ, ಬದಲಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಇದನ್ನೂ ಓದಿ:8 ತಿಂಗಳ ಮಗುವಿನ ಮೇಲೆ ಹಲ್ಲೆಗೈದ Caretaker – ಮೆದುಳಿನಲ್ಲಿ ರಕ್ತಸ್ರಾವ
ಸಂತ್ರೆಸ್ತೆಯ ಪತಿ ಮನೆಗೆ ಹಿಂದಿರುಗಿದ ಬಳಿಕ ಆರೋಪಿ ತನ್ನ ಸಹಚರರೊಂದಿಗೆ ಥಳಿಸಿ, ದಂಪತಿಗೆ ಬೆದರಿಕೆಯೊಡ್ಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಮತ್ತು ಇತರ ಮೂವರ ವಿರುದ್ಧ ಕಿರುಕುಳ, ನೋವುಂಟುಮಾಡುವುದು, ನಿಂದನೀಯ ಭಾಷೆ ಬಳಕೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಹಮದಾಬಾದ್: 8 ತಿಂಗಳ ಮಗುವನ್ನು ನಿರ್ದಾಕ್ಷಿಣ್ಯವಾಗಿ ಮಗುವಿನ ಪಾಲಕರೇ ಥಳಿಸಿರುವ ಭೀಕರ ಘಟನೆ ಗುಜರಾತ್‍ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆ ಪರಿಣಾಮ ಮೆದುಳು ರಕ್ತಸ್ರಾವದಿಂದ ಬಳಲುತ್ತಿರುವ ಮಗುವನ್ನು ಇದೀಗ ಸಮೀಪದ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಿಸಲಾಗಿದೆ. ಮಗುವಿನ ಪೋಷಕರು ಸೂರತ್‍ನ ರಾಂದರ್ ಪಾಲನ್‍ಪುರ್ ಪಾಟಿಯಾದ ನಿವಾಸಿಗಳಾಗಿದ್ದು, ಇಬ್ಬರೂ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಮಗುವನ್ನು ನೋಡಿಕೊಳ್ಳಲು ಆಗದ ಕಾರಣ ಕೇರ್‌ಟೇಕರ್ ನೇಮಿಸಿಕೊಂಡಿದ್ದರು. ಇದನ್ನೂ ಓದಿ: ‘ಬ್ಲಾಕ್‍ಚೈನ್’ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ!
ಪ್ರತಿನಿತ್ಯ ಮಗು ಜೋರಾಗಿ ಅಳುವ ಪರಿಯನ್ನು ಕೇಳಿ ನೆರೆಹೊರೆಯವರು ದಂಪತಿಗೆ ತಿಳಿಸಿದ್ದಾರೆ. ನಂತರ ದಂಪತಿ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಒಮ್ಮೆ ಈ ಕ್ಯಾಮೆರಾದ ದೃಶ್ಯವನ್ನು ಪರಿಶೀಲಿಸಿದಾಗ ಮಗುವನ್ನು ಕೇರ್‍ಟೇಕರ್ ಅಮಾನವಿಯವಾಗಿ ಥಳಿಸಿದ್ದಾಳೆ. ಅಲ್ಲದೇ ಮಗುವಿನ ತಲೆಯನ್ನು ಹಾಸಿಗೆಗೆ ಪದೇ, ಪದೇ ಹೊಡೆಯುವುದು, ಮಗುವಿನ ಕೂದಲನ್ನು ತಿರುಚುವುದು ಮತ್ತು ನಿರ್ದಯವಾಗಿ ಹೊಡೆಯುವ ದೃಶ್ಯ ಕಂಡು ಬಂದಿದೆ. ನಂತರ ಘಟನೆ ಕುರಿತಂತೆ ದಂಪತಿ ಕೇರ್‌ಟೇಕರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಶುವಿನ ಅಜ್ಜಿ ಕಲಾಬೆನ್ ಪಟೇಲ್, ಆರೋಪಿ ಕೋಮಲ್ ಚಾಂಡ್ಲೇಕರ್‍ನನ್ನು ಮೂರು ತಿಂಗಳ ಹಿಂದೆ ಮಗುವನ್ನು ನೋಡಿಕೊಳ್ಳಲು ನೇಮಿಸಲಾಗಿದೆ. ಕೋಮಲ್ ಆರಂಭದಲ್ಲಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಆಕೆಯ ಜೊತೆಗೆ ಇದ್ದಾಗ ಮಗು ಅಳುವುದನ್ನು ನೋಡಿ ಅನುಮಾನ ಮೂಡಿತು. ನಂತರ ಪೋಷಕರು ಸಿಸಿಟಿವಿ ಕ್ಯಾಮೆರಾ ಚೆಕ್ ಮಾಡಿದಾಗ ಭಯಾನಕ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ