Tag: Ahmedabad

  • ಫೋನ್ ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿ

    ಫೋನ್ ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿ

    ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ (Urvashi Rautela) ಮೊನ್ನೆಯಷ್ಟೇ ತಮ್ಮ ದುಬಾರಿ ಮೊಬೈಲ್ ಕಳೆದುಕೊಂಡಿದ್ದರು. ಈವರೆಗೂ ಆ ಫೋನ್ (Mobile) ಪತ್ತೆಯಾಗಿಲ್ಲ. ಅಲ್ಲದೇ, ಕೊನೆಯ ಬಾರಿಗೆ ಅದು ಯಾವ ಲೋಕೇಶನ್ ನಲ್ಲಿ ಇತ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದರಿಂದ ತನ್ನ ಮೊಬೈಲ್ ಸಿಕ್ಕವರು ಕೂಡಲೇ ನನ್ನನ್ನು ಸಂಪರ್ಕಿಸಿ ಎಂದು ಕೇಳಿಕೊಂಡಿದ್ದಾರೆ.

    ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿಲ್ಲ. ಮೊಬೈಲ್‍್‍ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದಾರೆ.

    ಕಳೆದದ್ದು ಹೇಗೆ?

    ಅಕ್ಟೋಬರ್ 14ರಂದು ನಡೆದ ಭಾರತ- ಪಾಕಿಸ್ತಾನ ಕ್ರಿಕೆಟ್ (Cricket) ಪಂದ್ಯಾವಳಿ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ, ಐರಾವತ ನಟಿ ಊರ್ವಶಿ ರೌಟೇಲಾ ಕೂಡ ಬಂದಿದ್ದರು. ಪಂದ್ಯ ನೋಡುವಾಗ ಅವರು ಅತ್ಯಂತ ದುಬಾರಿ ಚಿನ್ನದ ಐಫೋನ್ ಕಳೆದುಕೊಂಡಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದರು.

    ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್‌ನ (Ahmedabad) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದರು.

     

    ನಟಿ ಊರ್ವಶಿ ಇದೀಗ ಶೇರ್ ಮಾಡಿರುವ ಪೋಸ್ಟ್ ಕೂಡ ಸಖತ್ ಟ್ರೋಲ್ ಆಗುತ್ತಿದೆ. ಸುದ್ದಿಯಾಗಲು ಸದಾ ಒಂದಲ್ಲಾ ಒಂದು ಗಿಮಿಕ್ ಮಾಡುತ್ತಿರುತ್ತಾರೆ ಎಂದು ನೆಟ್ಟಿಗರು ನಟಿಯ ವಿರುದ್ಧ ಕಿಡಿಕಾರಿದ್ದರು. ಐಫೋನ್ ಕಳೆದುಕೊಂಡಿದ್ದಾರೆ ಎಂಬ ವಿಚಾರವೇ ಸುಳ್ಳು ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿಯ ಬಗ್ಗೆ ಪರ ವಿರೋಧದ ಚರ್ಚೆ ಕೂಡ ನಡೆದಿತ್ತು. ಆನಂತರ ನಟಿ ಕಂಪ್ಲೆಂಟ್ ಕೊಟ್ಟ ಮಾಹಿತಿ ಹೊರ ಬಿದ್ದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ, ಪಾಕ್ ಪಂದ್ಯದ ವೇಳೆ ವ್ಯಕ್ತಿಯೊಂದಿಗೆ ಮಹಿಳಾ ಪೊಲೀಸ್ ಗಲಾಟೆ – ಪೊಲೀಸ್‍ಗೆ ಕಪಾಳಮೋಕ್ಷಕ್ಕೆ ಯತ್ನ

    ಭಾರತ, ಪಾಕ್ ಪಂದ್ಯದ ವೇಳೆ ವ್ಯಕ್ತಿಯೊಂದಿಗೆ ಮಹಿಳಾ ಪೊಲೀಸ್ ಗಲಾಟೆ – ಪೊಲೀಸ್‍ಗೆ ಕಪಾಳಮೋಕ್ಷಕ್ಕೆ ಯತ್ನ

    ಅಹಮದಾಬಾದ್: ಭಾರತ (Team India) ಪಾಕ್ ಪಂದ್ಯದ ವೇಳೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ವ್ಯಕ್ತಿಯೊಬ್ಬನ ನಡುವೆ ನಡೆದ ಗಲಾಟೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ (Woman Cop) ಹಾಗೂ ವ್ಯಕ್ತಿಯ ನಡುವೆ ವಾಗ್ವಾದವಾಗಿದೆ. ಈ ವೇಳೆ ಪೊಲೀಸ್‍ಗೆ ವ್ಯಕ್ತಿ ಕಪಾಳಮೋಕ್ಷ ಮಾಡಲು ಮುಂದಾಗಿದ್ದ. ಆಗ ವ್ಯಕ್ತಿಗೆ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಇಬ್ಬರ ನಡುವೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಉಳಿದ ಪ್ರೇಕ್ಷಕರು ಅವರಿಬ್ಬರನ್ನೂ ಸಮಾಧಾನ ಪಡೆಸಿದ್ದಾರೆ. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

    ಈ ವೀಡಿಯೋ ಬಗ್ಗೆ ನೆಟ್ಟಿಗರು ಪರ ವಿರೋಧ ಚರ್ಚೆಗಳನ್ನು ನಡೆಸಿದ್ದಾರೆ. ಕೆಲವರು ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಬಾರದಿತ್ತು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅಲ್ಲಿ ಏನು ನಡೆಯಿತು ಎಂದು ಪ್ರಶ್ನಿಸಿದ್ದಾರೆ.

    ಇದರ ನಡುವೆ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಜಯಗಳಿಸಿತು. ಈ ಮೂಲಕ ಪಾಕ್ ವಿರುದ್ಧದ ಪಂದ್ಯದಲ್ಲಿ 8-0 ವಿಜಯಯಾತ್ರೆಯನ್ನು ಮುಂದುವರೆಸಿದೆ. ಇದನ್ನೂ ಓದಿ: ಭಾರತದ ಬೆಂಕಿ ಬೌಲಿಂಗ್‌, ರೋʼಹಿಟ್‌ʼ ಬ್ಯಾಟಿಂಗ್‌ಗೆ ಪಾಕ್‌ ಭಸ್ಮ – ಮೊದಲ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    – 500 ಕೋಟಿ ರೂ., ಲಾರೆನ್ಸ್ ಬಿಷ್ಣೋಯ್ ಬಿಡುಗಡೆಗೆ ಬೇಡಿಕೆ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹತ್ಯೆ ಮಾಡುವುದಾಗಿ ಹಾಗೂ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವನ್ನು (Narendra Modi Stadium) ಸ್ಫೋಟಿಸುವುದಾಗಿ ಭಯೋತ್ಪಾದಕರು ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ಹಾಕಿದ್ದು, ಭಾರತೀಯ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್ ಆಗಿವೆ.

    ರಾಷ್ಟ್ರೀಯ ತನಿಖಾ ದಳ (NIA) ಮತ್ತು ಮುಂಬೈ ಪೊಲೀಸರಿಗೆ (Mumbai Police) ಬೆದರಿಕೆ ಮೇಲ್ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಗುಜರಾತ್ ಪೊಲೀಸರು ಹಾಗೂ ಪ್ರಧಾನಿಯ ಭದ್ರತೆಗೆ ಸಬಂಧಿಸಿದ ವಿವಿಧ ಏಜೆನ್ಸಿಗಳೊಂದಿಗೂ ಮಾಹಿತಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    ಬೆದರಿಕೆ ಇಮೇಲ್‌ನಲ್ಲಿ, ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನ (Lawrence Bishnoi) ಬಿಡುಗಡೆ ಮಾಡಬೇಕು, ಜೊತೆಗೆ 500 ಕೋಟಿ ರೂ. ನೀಡಬೇಕು. ಇಲ್ಲವಾದರೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲಾಗುವುದು. ಅಷ್ಟೇ ಅಲ್ಲದೇ ಅಹಮದಾಬಾದ್‌ನ (Ahmedabad) ಮೋದಿ ಕ್ರೀಡಾಂಗಣವನ್ನು ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ಈ ಬಗ್ಗೆ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಎನ್‌ಐಎ ಕಚೇರಿಯಿಂದ ಎಚ್ಚರಿಕೆ ಸಂದೇಶ ಬಂದಿದ್ದು, ಇಮೇಲ್ ಮೂಲ ಪತ್ತೆ ಹಚ್ಚಲು ಭದ್ರತಾ ಏಜೆನ್ಸಿಗಳು ಮುಂದಾಗಿವೆ. ಈಗಾಗಲೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 5 ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನೂ ಆಯೋಜಿಸಿರುವುದರಿಂದ ಮುಂಬೈನಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲದೇ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆದಿದ್ದು, ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

    ಅ.14 ರಂದು ಭಾರತ ಮತ್ತು ಪಾಕಿಸ್ತಾನ, ನವೆಂಬರ್ 4 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ, ನವೆಂಬರ್ 10 ರಂದು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಹಾಗೂ ನವೆಂಬರ್ 19 ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದ್ದರಿಂದ ಮೋದಿ ಕ್ರೀಡಾಂಗಣಕ್ಕೂ ಹೆಚ್ಚಿನ ಭದ್ರತೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಬೆದರಿಕೆ ಮೇಲ್‌ನಲ್ಲಿ ಬಂದ ಸಂದೇಶವೇನು?
    ನಿಮ್ಮ ಸರ್ಕಾರ ನಮಗೆ 500 ಕೋಟಿ ರೂ. ನೀಡಬೇಕು. ಲಾರೆನ್ಸ್ ಬಿಷ್ಣೋಯ್‌ನನ್ನು ಬಿಡುಗೆ ಮಾಡಬೇಕು. ಇಲ್ಲವಾದರೆ ನಾವು ನರೇಂದ್ರ ಮೋದಿ ಹತ್ಯೆ ಮಾಡುತ್ತೇವೆ ಮತ್ತು ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸ್ಫೋಟಿಸುತ್ತೇವೆ. ಹಿಂದೂಸ್ತಾನದಲ್ಲಿ ಎಲ್ಲವೂ ಮಾರಾಟವಾಗುತ್ತದೆ. ಹಾಗಾಗಿ ನಾವೂ ಇದನ್ನು ಖರೀದಿಸಲು ನಿರ್ಧರಿಸಿದ್ದೇವೆ. ನೀವು ಎಷ್ಟೇ ಭದ್ರತೆ ಪಡೆದುಕೊಂಡರೂ ನಮ್ಮಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಇಮೇಲ್ ಸಂದೇಶ ಬಂದಿದೆ.

    ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ 2014ರಿಂದ ಜೈಲಿನಲ್ಲಿದ್ದಾನೆ. ಜೈಲಿನ ಒಳಗಿನಿಂದಲೇ ತನ್ನ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪಂಜಾಬಿನಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದ ಅಮಿತ್ ಶಾ

    ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದ ಅಮಿತ್ ಶಾ

    ಗಾಂಧಿನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ (Ahamedabad) ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ( ಕೂಡಾ ಉಪಸ್ಥಿತರಿದ್ದರು. ಈ ವರ್ಷ ಆಗಸ್ಟ್ 13ರಿಂದ 15ರವರೆಗೆ ‘ಹರ್ ಘರ್ ತಿರಂಗಾ’ ಆಂದೋಲನದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಮಿತ್ ಶಾ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ದೇಶಕ್ಕಾಗಿ ನಾವು ಸಾಯಲು ಸಾಧ್ಯವಿಲ್ಲ. ಆದರೆ ದೇಶಕ್ಕಾಗಿ ಬದುಕುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಅಸ್ಸಾಂನಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕಾರಕ್ಕೆ ಉಗ್ರಸಂಘಟನೆಗಳ ಕರೆ- ಪೊಲೀಸರಿಂದ ಬಿಗಿ ಭದ್ರತೆ

    2022ರ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ನೆನಪಿಸಿಕೊಂಡ ಅವರು, 2022ರ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸದ ಮನೆ ಇಲ್ಲ. ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಇಡೀ ರಾಷ್ಟ್ರವು ತಿರಂಗಮಯವಾಗುತ್ತದೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು (Narendra Modi) ಇಡೀ ರಾಷ್ಟ್ರದಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬಲು ಪ್ರಯತ್ನಿಸಿದರು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ವಿರುದ್ಧ 50% ಕಮಿಷನ್ ಆರೋಪ – ಪ್ರಿಯಾಂಕಾ ಗಾಂಧಿ ವಿರುದ್ಧ ಪ್ರಕರಣ ದಾಖಲು

    ಇದಲ್ಲದೆ ಗುಜರಾತ್‌ನ ಇನ್‌ಸ್ಟಿಟ್ಯೂಟ್ ಆಫ್ ಹೌಸಿಂಗ್ ಮತ್ತು ಎಸ್ಟೇಟ್ ಡೆವಲಪರ್ಸ್ ಆಯೋಜಿಸಿದ ಸಾಮೂಹಿಕ ಮರ ನೆಡುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದರು. ಇದನ್ನೂ ಓದಿ: ನನ್ನ 19 ವರ್ಷಗಳ ರಾಜಕೀಯ ಜೀವನದಲ್ಲಿ ಮಣಿಪುರದಂಥ ಘೋರ ಅನುಭವ ಎಂದೂ ಆಗಿಲ್ಲ: ರಾಹುಲ್‌ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಹಮದಾಬಾದ್‍ನಲ್ಲಿ ಭೀಕರ ಅಪಘಾತ – ಹತ್ತು ಮಂದಿ ಸಾವು

    ಅಹಮದಾಬಾದ್‍ನಲ್ಲಿ ಭೀಕರ ಅಪಘಾತ – ಹತ್ತು ಮಂದಿ ಸಾವು

    ಗಾಂಧಿನಗರ: ಟ್ರಕ್ ಹಾಗೂ ಮಿನಿ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 10 ಜನ ಸಾವಿಗೀಡಾದ ಘಟನೆ ಗುಜರಾತ್‍ನ (Gujarat) ಅಹಮದಾಬಾದ್ (Ahmedabad)-ಬಗೋದರ ಹೆದ್ದಾರಿಯಲ್ಲಿ ನಡೆದಿದೆ.

    ಮೃತರೆಲ್ಲ ಚೋಟಿಲಾ ಕ್ಷೇತ್ರದ ದರ್ಶನ ಪಡೆದು ಮಿನಿ ಟ್ರಕ್‍ನಲ್ಲಿ ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಐವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 3 ಜನರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರು ಸುಧಾಗಾಂನ ನಿವಾಸಿಗಳು ಎಂದು ತಿಳಿದು ಬಂದಿದೆ.

    ಕಳೆದ ಏಳು ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Hit and Run – ಕಾರು ಚಾಲಕನ ಹುಚ್ಚಾಟಕ್ಕೆ 9 ಬಲಿ, 13 ಮಂದಿಗೆ ಗಾಯ

    Hit and Run – ಕಾರು ಚಾಲಕನ ಹುಚ್ಚಾಟಕ್ಕೆ 9 ಬಲಿ, 13 ಮಂದಿಗೆ ಗಾಯ

    ಅಹಮದಾಬಾದ್: ಕಾರು ಚಾಲಕನ ಹುಚ್ಚಾಟಕ್ಕೆ 9 ಮಂದಿ ಮೃತಪಟ್ಟು 13 ಮಂದಿ ಗಾಯಗೊಂಡ ಘಟನೆ ಅಹಮದಾಬಾದ್‌ನಲ್ಲಿ (Ahmedabad) ನಡೆದಿದೆ.

    ಸರ್ಖೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ದೇವಸ್ಥಾನದ (ISKCON Temple) ಬಳಿಯ ಮೇಲ್ಸೇತುವೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1 ಗಂಟೆಗೆ ಈ ಘಟನೆ ನಡೆದಿದ್ದು, ಪೊಲೀಸರು ಹಿಟ್‌ ಅಂಡ್‌ ರನ್‌ (Hit and Run) ಅಡಿ ಪ್ರಕರಣ ದಾಖಲಿಸಿದ್ದಾರೆ.

    https://twitter.com/AbhishekAkhani/status/1681777151249641472?ref_src=twsrc%5Etfw%7Ctwcamp%5Etweetembed%7Ctwterm%5E1681777151249641472%7Ctwgr%5E388026e109217e4c40ad000c03f815b9f696c9c6%7Ctwcon%5Es1_&ref_url=https%3A%2F%2Fdeshgujarat.com%2F2023%2F07%2F20%2Fdouble-accident-on-sg-highway-9-including-a-police-constable-feared-dead%2F

    ಅಪಘಾತ ಹೇಗಾಯ್ತು?
    ಪೊಲೀಸರು ಹಂಚಿಕೊಂಡ ವಿವರಗಳ ಪ್ರಕಾರ, ತಡರಾತ್ರಿ ಇಸ್ಕಾನ್ ಫ್ಲೈಓವರ್‌ನಲ್ಲಿ ಮಹೀಂದ್ರ ಥಾರ್ ವಾಹನವು ಡಂಪರ್ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತುಕೊಂಡು ಅಪಘಾತಗೊಂಡಿದ್ದ ವಾಹನಗಳನ್ನು ವೀಕ್ಷಿಸುತ್ತಿದ್ದರು.  ಈ ವೇಳೆ ವೇಗವಾಗಿ ಬಂದ ಜಾಗ್ವಾರ್ ಕಾರು ನಿಂತಿದ್ದವರ ಮೇಲೆ ಹರಿದಿದೆ. ಪರಿಣಾಮ  ಇಬ್ಬರು ಪೊಲೀಸರು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.

    ಆಸ್ಪತ್ರೆಗೆ ಕರೆತರಲಾಗಿದ್ದ ಒಟ್ಟು 12 ಮಂದಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೋಲಾ ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಕೃಪಾ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಶಂಕಿತ ಉಗ್ರರಿಗೆ ಆಶ್ರಯ ಕೊಟ್ಟಿದ್ದವರಿಗೆ ಶುರುವಾಯ್ತು ಸಂಕಷ್ಟ – ಮಾಲೀಕರ ಮೇಲೆ ಕೇಸ್?

    ಅಪಘಾತ ನಡೆದಾಗ ಐಷಾರಾಮಿ ಜಾಗ್ವಾರ್ ಕಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಕಾರಿನ ಚಾಲಕ ಸತ್ಯ ಪಟೇಲ್ ಸೇರಿದ್ದಾನೆ. ಇಸ್ಕಾನ್ ದೇವಸ್ಥಾನದ ಬಳಿಯ ಮೇಲ್ಸೇತುವೆಯನ್ನು ಪೊಲೀಸರು ತಾತ್ಕಾಲಿಕವಾಗಿ ಬಂದ್‌ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ

    ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ

    – ಅಮೆರಿಕ ವೀಸಾಗಾಗಿ ಕನ್ನಡಿಗರು ಇನ್ನು ಚೆನ್ನೈಗೆ ಹೋಗಬೇಕಾಗಿಲ್ಲ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಮೆರಿಕ (America) ಭೇಟಿಯಿಂದ ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು (Bengaluru) ಹಾಗೂ ಅಹಮದಾಬಾದ್‌ನಲ್ಲಿ (Ahmedabad) ತನ್ನ ರಾಯಭಾರ ಕಚೇರಿ (Consulate) ತೆರೆಯಲು ಅಮೆರಿಕ ನಿರ್ಧರಿಸಿದೆ.

    ಅಮೆರಿಕವು ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲೂ 2 ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದು, ಈ ಮೂಲಕ ಭಾರತದ ಜನರೊಂದಿಗಿನ ಸಂಬಂಧವನ್ನು ಹೆಚ್ಚಿಸಲು ಮುಂದಾಗಿರುವುದಾಗಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

    ಕಳೆದ ವರ್ಷ ಅಮೆರಿಕ ಭಾರತೀಯ ವಿದ್ಯಾರ್ಥಿಗಳಿಗೆ ಸುಮಾರು 1,25,000 ದಾಖಲೆಯ ವೀಸಾಗಳನ್ನು ನೀಡಿದೆ. ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20% ರಷ್ಟು ಹೆಚ್ಚಳವಾಗಿದ್ದು, ಅಮೆರಿಕದಲ್ಲೇ ಅತಿ ದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ಅಮೆರಿಕದ ವಾಷಿಂಗ್ಟನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್ ಹಾಗೂ ಅಟ್ಲಾಂಟಾದಲ್ಲಿ ಭಾರತ ತನ್ನ ಒಟ್ಟು 5 ರಾಯಭಾರ ಕಚೇರಿಗಳನ್ನು ಹೊಂದಿದೆ. ಭಾರತದಲ್ಲಿ ಪ್ರಸ್ತುತ ನವದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹಾಗೂ ಹೈದರಾಬಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿಗಳಿವೆ.

    ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ವಿಶ್ವದ ಅತಿದೊಡ್ಡ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ಕರ್ನಾಟಕದ ಜನತೆ ಅಮೆರಿಕ ಪ್ರವಾಸ ಕೈಗೊಳ್ಳಲು ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್ ಅಲೆಯುವುದು ಅನಿವಾರ್ಯವಾಗಿತ್ತು. ಇದೀಗ ಬೆಂಗಳೂರಿನಲ್ಲೂ ಅಮೆರಿಕದ ರಾಯಭಾರ ಕಚೇರಿ ತೆರೆದರೆ ಪ್ರಯಾಣಿಕರು ಇತರ ರಾಜ್ಯಗಳಿಗೆ ಹೋಗುವ ಅನಿವಾರ್ಯತೆ ಇರುವುದಿಲ್ಲ. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

  • ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    – ಬಿಸಿಸಿಐ ಕರಡು ವೇಳಾಪಟ್ಟಿ ಪ್ರಕಟ

    ಮುಂಬೈ: ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ODI World Cup) ಟೂರ್ನಿಗೆ BCCI ಸಿದ್ಧಪಡಿಸಿದ ಕರಡು ವೇಳಾಪಟ್ಟಿಯನ್ನು ICCಯೊಂದಿಗೆ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಸೆಣಸಲಿವೆ.

    ಟಿ20 ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳ ಬಳಿಕ ಮತ್ತೊಮ್ಮೆ ಭಾರತ-ಪಾಕಿಸ್ತಾನದ (Ind vs Pak) ರಣರೋಚಕ ಪಂದ್ಯವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್

    ಬಿಸಿಸಿಐ ಕರಡು ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 15 ರಂದು ಪಾಕ್ ವಿರುದ್ಧ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಕಣಕ್ಕಿಳಿದು ಅಬ್ಬರಿಸಲಿದೆ. ಮುಂದಿನ ವಾರದಲ್ಲೇ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಭಾಗವಹಿಸುವ ದೇಶಗಳಿಗೆ ಪ್ರತಿಕ್ರಿಯೆಗಾಗಿ ಕಳುಹಿಸಲಾಗಿದೆ.

    ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಟೂರ್ನಿ (ODI World Cup 2023) ಆರಂಭವಾಗಲಿದ್ದು, ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಹಾಗೂ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ನ್ಯೂಜಿಲೆಂಡ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ನವೆಂಬರ್ 19ರಂದು ಫೈನಲ್ ಪಂದ್ಯಕ್ಕೂ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಆದರೆ ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಸ್ಥಳಗಳನ್ನೂ ಇನ್ನೂ ನಿರ್ಧರಿಸಲಾಗಿಲ್ಲ.

    ಕೊನೆಯದ್ದಾಗಿ 2011ರಲ್ಲಿ ಸ್ವದೇಶದಲ್ಲಿ ವಿಶ್ವಕಪ್ ಗೆದ್ದ ಅತಿಥೇಯ ಭಾರತ ಕೋಲ್ಕತ್ತಾ, ಮುಂಬೈ, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ 9 ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನ ಆಡಲಿದೆ. ಪಾಕಿಸ್ತಾನ ಭಾರತದ 5 ನಗರಗಳಲ್ಲಿ ಲೀಗ್ ಪಂದ್ಯಗಳನ್ನಾಡಲಿದೆ. ಈ ನಡುವೆ ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮೋದಿ ಅಂಗಳದಲ್ಲಿ ಮುಖಾಮುಖಿಯಾಗಲಿವೆ. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

    ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಈ ಪೈಕಿ 8 ತಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಲಿವೆ.

    ಯಾವ ಸ್ಥಳದಲ್ಲಿ ಆಯೋಜನೆ?
    ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಬಿಸಿಸಿಐ 12 ಕ್ರೀಡಾಂಗಣವನ್ನು ಅಂತಿಮಗೊಳಿಸಿದೆ. ಅದರಂತೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಪಂದ್ಯ ನಡೆಯಲಿದೆ.

    ಟೀಂ ಇಂಡಿಯಾದ ತಾತ್ಕಾಲಿಕ ವೇಳಾಪಟ್ಟಿ:
    ಅಕ್ಟೋಬರ್‌ 8: ಭಾರತ Vs ಆಸ್ಟ್ರೇಲಿಯಾ – ಸ್ಥಳ: ಚೆನ್ನೈ
    ಅಕ್ಟೋಬರ್‌ 11: ಭಾರತ Vs ಅಫ್ಘಾನಿಸ್ತಾನ – ಸ್ಥಳ: ನವದೆಹಲಿ
    ಅಕ್ಟೋಬರ್‌ 15: ಭಾರತ Vs ಪಾಕಿಸ್ತಾನ – ಸ್ಥಳ: ಅಹಮದಾಬಾದ್‌
    ಅಕ್ಟೋಬರ್‌ 19: ಭಾರತ Vs ಬಾಂಗ್ಲಾದೇಶ – ಸ್ಥಳ: ಪುಣೆ
    ಅಕ್ಟೋಬರ್‌ 22: ಭಾರತ Vs ನ್ಯೂಜಿಲೆಂಡ್‌ – ಸ್ಥಳ: ಧರ್ಮಶಾಲಾ
    ಅಕ್ಟೋಬರ್‌ 29: ಭಾರತ Vs ‌ಇಂಗ್ಲೆಂಡ್‌ – ಸ್ಥಳ: ಲಕ್ನೋ
    ನವೆಂಬರ್‌ 2: ಭಾರತ Vs ಕ್ವಾಲಿಫೈಯರ್ – ಸ್ಥಳ: ಮುಂಬೈ
    ನವೆಂಬರ್‌ 5: ಭಾರತ Vs ದಕ್ಷಿಣ ಆಫ್ರಿಕಾ – ಸ್ಥಳ: ಕೋಲ್ಕತ್ತಾ
    ನಂವೆಬರ್‌ 11: ಭಾರತ Vs ಕ್ವಾಲಿಫೈಯರ್‌ – ಸ್ಥಳ: ಬೆಂಗಳೂರು

  • 74th Republic Day: ಗಣರಾಜ್ಯೋತ್ಸವಕ್ಕೆ ಬಾಂಬ್‌ ಬೆದರಿಕೆ – ಅಹಮದಾಬಾದ್‌ನಲ್ಲಿ ನಾಲ್ವರು ಅರೆಸ್ಟ್‌

    74th Republic Day: ಗಣರಾಜ್ಯೋತ್ಸವಕ್ಕೆ ಬಾಂಬ್‌ ಬೆದರಿಕೆ – ಅಹಮದಾಬಾದ್‌ನಲ್ಲಿ ನಾಲ್ವರು ಅರೆಸ್ಟ್‌

    ಅಹಮದಾಬಾದ್: ಗಣರಾಜ್ಯೋತ್ಸವದಂದು (74th Republic Day) ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆಯ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಹಮದಾಬಾದ್ ಪೊಲೀಸರು (Ahmedabad Police) ಬಂಧಿಸಿದ್ದಾರೆ.

    ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಹಮದಾಬಾದ್‌ ಮತ್ತು ಮತ್ತಿಬ್ಬರು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಎಂಪಿ ಟಿಕೆಟ್ ಏಕೆ ನಿರೀಕ್ಷಿಸಬಾರದು- ಕಮಲ್ ಹಾಸನ್ ಪ್ರಶ್ನೆ

    ಗೀತಾ ಮಂದಿರ ಬಸ್ ನಿಲ್ದಾಣ ಮತ್ತು ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬೆದರಿಕೆ ಪತ್ರ ಬಂದ ತಕ್ಷಣ ಅಹಮದಾಬಾದ್ ಕ್ರೈಂ ಬ್ರಾಂಚ್ ಕಾರ್ಯಾಚರಣೆಗೆ ಇಳಿದಿತ್ತು.

    ಬೆದರಿಕೆ ಪತ್ರವನ್ನು ಅಹಮದಾಬಾದ್ ಪೊಲೀಸ್ ಕಮಿಷನರ್ ಕಚೇರಿಗೆ ತಲುಪಿಸಲಾಗಿತ್ತು. ಪತ್ರದಲ್ಲಿ ಕೆಲವು ಸಂಖ್ಯೆಗಳನ್ನು ಸಹ ಉಲ್ಲೇಖಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: 74ನೇ ಗಣರಾಜ್ಯೋತ್ಸವಕ್ಕೆ ಕರ್ತವ್ಯಪಥ ಸಜ್ಜು- ಪರೇಡ್‍ನಲ್ಲಿ ಮಿಂಚಲಿದೆ ಕರ್ನಾಟಕ ಟ್ಯಾಬ್ಲೋ

    ಅಹಮದಾಬಾದ್ ರೈಲು ನಿಲ್ದಾಣ ಮತ್ತು ಗೀತಾ ಮಂದಿರ ಬಸ್ ನಿಲ್ದಾಣ ಹೊರತುಪಡಿಸಿ ಇತರ ಎರಡು ಸ್ಥಳಗಳನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು

    ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‍ನ (Women’s Premier League) 5 ತಂಡಗಳು 4,699.99 ಕೋಟಿ ರೂ.ಗೆ ಹರಾಜಾಗಿ ದಾಖಲೆ ಬರೆದಿದೆ.

    ಐದು ಫ್ರಾಂಚೈಸಿಗಳು ತಮಗೆ ಬೇಕಾದ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ (IPL) ಟೂರ್ನಿಯಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ಡೆಲ್ಲಿ ಹಾಗೂ ಲಕ್ನೋ ತಂಡಗಳು ಕಣಕ್ಕಿಳಿಯಲಿವೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಅದಾನಿ ಗ್ರೂಪ್ (Adani Sportsline Pvt Ltd) ದಾಖಲೆಯ ಮೊತ್ತ ನೀಡಿ ಅಹಮದಾಬಾದ್ (Ahmedabad) ಮಹಿಳಾ ಐಪಿಎಲ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದಾನಿ ಗ್ರೂಪ್ 1,289 ಕೋಟಿ ರೂ. ನೀಡಿ ಅಹಮದಾಬಾದ್ ಫ್ರಾಂಚೈಸ್‍ನ್ನು ಖರೀದಿಸಿದೆ.

    ಉಳಿದ ಫ್ರಾಂಚೈಸಿಯು 1000 ಕೋಟಿಗಿಂತ ಅಧಿಕ ಬಿಡ್ ಮಾಡಲಿಲ್ಲ. ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 912.99 ಕೋಟಿ ರೂ. ನೀಡಿ ಮುಂಬೈ (Mumbai) ಫ್ರಾಂಚೈಸಿಯನ್ನು ಖರೀದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 901 ಕೋಟಿ ರೂ. ನೀಡಿ ಬೆಂಗಳೂರು (Bengaluru) ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಜೆಎಸ್‍ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 810 ಕೋಟಿ ರೂ. ನೀಡಿ ಡೆಲ್ಲಿ (Delhi) ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್

    ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 757 ಕೋಟಿ ರೂ. ನೀಡಿ ಲಕ್ನೋ (Lucknow) ಫ್ರಾಂಚೈಸಿಯನ್ನು ಖರೀದಿಸಲು ಯಶಸ್ವಿಯಾಗಿದೆ. ಈ ಮೂಲಕ ಒಟ್ಟು 4,669.99 ಕೋಟಿ ರೂ.ಗೆ 5 ಫ್ರಾಂಚೈಸ್‍ಗಳು ಹರಾಜಾಗಿವೆ.

    ಈ ಮೂಲಕ 2008ರಲ್ಲಿ ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‍ಗಿಂತಲೂ ಹೆಚ್ಚು ಮೊತ್ತಕ್ಕೆ ಮಹಿಳಾ ಐಪಿಎಲ್ ತಂಡಗಳು ಹರಾಜಾಗಿ ದಾಖಲೆ ಬರೆದುಕೊಂಡಿದೆ. ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‌ನಲ್ಲಿ 8 ಫ್ರಾಂಚೈಸ್‌ಗಳು 2,894 ರೂ. ನೀಡಿ 8 ತಂಡಗಳನ್ನು ಖರೀದಿತ್ತು. ಈ ಮೊದಲು ಮಹಿಳಾ ಐಪಿಎಲ್‌ನ  2023 ರಿಂದ 2027ರ ವರೆಗಿನ ಪ್ರಸಾರ ಹಕ್ಕನ್ನು (Media Rights) ಬರೋಬ್ಬರಿ 951 ಕೋಟಿ ರೂ. ನೀಡಿ ವಯಾಕಾಮ್18 (Viacom18)  ಖರೀದಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k