ಗಾಂಧಿನಗರ: ಗುಜರಾತ್‍ನ (Gujarat) ದ್ವಾರಕಾ ಬಳಿ ರಸ್ತೆ ವಿಭಜಕಕ್ಕೆ ಬಸ್ ಡಿಕ್ಕಿಯಾಗಿ ಬಳಿಕ ಮೂರು ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಹೆತಲ್‍ಬೆನ್ ಠಾಕೋರ್ (25), ತಾನ್ಯಾ (2), ರಿಯಾನ್ಸ್ (3), ವಿಷನ್ (7), ಪ್ರಿಯಾಂಶಿ (13), ಭಾವನಾಬೆನ್ ಠಾಕೋರ್ (35) ಮತ್ತು ಚಿರಾಗ್ ರಾಣಾಭಾಯ್ (25) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 51 ರಲ್ಲಿ ಶನಿವಾರ ರಾತ್ರಿ 7:45ರ ಸುಮಾರಿಗೆ ಬಸ್ ದ್ವಾರಕಾದಿಂದ ಅಹಮದಾಬಾದ್‍ಗೆ (Ahmedabad) ತೆರಳುತ್ತಿದ್ದಾಗ ಅಪಘಾತ (Accident) ಸಂಭವಿಸಿದೆ. ಅದರ ಚಾಲಕ ರಸ್ತೆಯಲ್ಲಿ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಡಿವೈಡರ್‌ಗೆ ಡಿಕ್ಕಿಯಾಗಿದೆ. ಬಳಿಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವ್ಯಾನ್, ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಆರು ಮಂದಿ ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದವರು. ಮತ್ತೋರ್ವ ಬಸ್‍ನಲ್ಲಿದ್ದವರು ಎಂದು ತಿಳಿದು ಬಂದಿದೆ. ಆರು ಮಂದಿ ಗಾಂಧಿನಗರದ ಕಲೋಲ್‍ನವರು ಮತ್ತು ಒಬ್ಬರು ದ್ವಾರಕಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 10 ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಆಕೆಯ ಪೋಷಕರ ಮಾಹಿತಿಯ ಪ್ರಕಾರ ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಟ್ ಜೊತೆ ಶಾಲೆಗೆ ಹೋಗುತ್ತಿದ್ದಳು ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯಾದ ದಿನ ಪ್ರಾಂಶುಪಾಲ ಬಾಲಕಿಯನ್ನು ಶಾಲೆಗೆ ಬಿಟ್ಟು ಯಾವುದೋ ಕೆಲಸಕ್ಕೆ ತೆರಳಿರುವುದಾಗಿ ತಿಳಿಸಿದ್ದಾನೆ. ಆದರೆ ಆ ದಿನ ಅವಳು ಶಾಲೆಗೆ ಬಾರದಿರುವುದನ್ನು ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಖಚಿತಪಡಿಸಿದ್ದಾರೆ. ಬಳಿಕ ಪ್ರಾಂಶುಪಾಲರ ಫೋನ್ ಲೊಕೇಶನ್ ಮಾಹಿತಿಯನ್ನು ಪಡೆದುಕೊಂಡಾಗ ಆತನ ಮೇಲೆ ಅನುಮಾನ ಉಂಟಾಗಿದೆ. ಆತನನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಬೆಳಿಗ್ಗೆ 10:20ರ ಸುಮಾರಿಗೆ ಬಾಲಕಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದನು. ಆಕೆಯ ತಾಯಿ ಆಕೆಯನ್ನು ಪ್ರಿನ್ಸಿಪಾಲ್ ಕಾರಿನಲ್ಲಿ ಕೂರಿಸಿ ಕಳುಹಿಸಿದ್ದಾರೆ. ಶಾಲೆಗೆ ಹೋಗುವ ದಾರಿಯಲ್ಲಿ, ಪ್ರಾಂಶುಪಾಲರು ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ಆಗ ಆಕೆ ಕೂಗಲು ಪ್ರಾರಂಭಿಸಿದಳು. ಅದನ್ನು ತಡೆಗಟ್ಟಲು ನಾನು ಆಕೆಯ ಮುಖಕ್ಕೆ ಕೈಹಿಡಿದಾಗ ಅವಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪ್ರಾಂಶುಪಾಲ ತಿಳಿಸಿದ್ದಾನೆ.
ಶಾಲೆ ತಲುಪಿದ ಮೇಲೆ ಆಕೆಯ ಶವವನ್ನು ಕಾರಿನಲ್ಲಿಯೇ ಬಿಟ್ಟು ಬೀಗ ಹಾಕಿ ನಾನು ಶಾಲೆಗೆ ಹೋದೆ. ಸಂಜೆ 5 ಗಂಟೆ ಸುಮಾರಿಗೆ ಆಕೆಯ ಶವವನ್ನು ಶಾಲೆಯ ಕಟ್ಟಡದ ಹಿಂದೆ ಬಿಸಾಕಿದೆ ಹಾಗೂ ಆಕೆಯ ಬ್ಯಾಗ್ ಮತ್ತು ಬೂಟುಗಳನ್ನು ಅವಳ ತರಗತಿಯ ಹೊರಗೆ ಬಿಸಾಕಿರುವುದಾಗಿ ಪ್ರಾಂಶುಪಾಲ ಒಪ್ಪಿಕೊಂಡಿದ್ದಾನೆ.ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ತನಿಖೆ ಪಕ್ಷಾಪಾತವಾಗಿ ನಡೆಯಲು ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ
ಸದ್ಯ ಪೊಲೀಸರು ಆರೋಪಿ ಗೋವಿಂದ್ ನಟ್‌ನನ್ನು ಪೋಕ್ಸೊ (POCSO) ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.
ಅಹಮದಾಬಾದ್: ವಂದೇ ಮೆಟ್ರೋಗೆ (Vande Metro) ‘ನಮೋ ಭಾರತ್ ರಾಪಿಡ್ ರೈಲ್’ (Namo Bharat Rapid Rail) ಎಂದು ಮರುನಾಮಕರಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಂದು (ಸೆಪ್ಟೆಂಬರ್ 16) ಮೊದಲ ರೈಲಿಗೆ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಹಿಂದಿನ ದಿನವಾದ ಇಂದು (ಸೆಪ್ಟೆಂಬರ್ 16) ಗುಜರಾತ್‌ನಲ್ಲಿ (Gujarat) ದೇಶದ ಮೊಟ್ಟ ಮೊದಲ ‘ನಮೋ ಭಾರತ್ ರ‍್ಯಾಪಿಡ್ ರೈಲು’ ಸೇವೆಗೆ ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್‌ನಿಂದ ಅಹಮದಾಬಾದ್ (Ahmedabad) ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಒಂದೇ ದಿನ ಸುಮಾರು 660 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶ ಸಂಪರ್ಕಿಸುವ 6 ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ
ನಮೋ ಭಾರತ್ ರ‍್ಯಾಪಿಡ್ ರೈಲು ಪ್ರಮುಖ ನಿಲ್ದಾಣಗಳಾದ ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರ, ವಿರಾಮಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಅಂತಿಮವಾಗಿ ಅಹಮದಾಬಾದ್‌ನ ಕಲುಪುರ್ ಸೇರಿದಂತೆ 9 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಸಾರ್ವಜನಿಕರಿಗೆ ಅಹ್ಮದಾಬಾದ್‌ನಿಂದ ಸೆಪ್ಟೆಂಬರ್ 17 ರಂದು ನಿಯಮಿತ ಸೇವೆ ಪ್ರಾರಂಭವಾಗಲಿದೆ.
ನಮೋ ಭಾರತ್ ರ‍್ಯಾಪಿಡ್ ರೈಲಿನ ವಿಶೇಷತೆಗಳೇನು?
* ಅಹಮದಾಬಾದ್ -ಭುಜ್ ಸಂಚರಿಸುವ ಈ ರೈಲು ಒಟ್ಟು 9 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
*ಗಂಟೆಗೆ ಗರಿಷ್ಠ 110 ಕಿಲೋ ಮೀಟರ್ ವೇಗದಲ್ಲಿ 360 ಕಿಲೋ ಮೀಟರ್ ದೂರವನ್ನು 5 ಗಂಟೆ 45 ನಿಮಿಷದಲ್ಲಿ ಕ್ರಮಿಸುತ್ತದೆ.
* 1,150 ಆಸನಗಳನ್ನು ಹೊಂದಿರುವುದಲ್ಲದೇ 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನ ಅಳವಡಿಸಲಾಗಿದೆ.
* ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)
* ಇದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನೇ ಹೋಲುತ್ತದೆಯಾದರೂ, ಉಪನಗರದ ಮೆಟ್ರೋ ವ್ಯವಸ್ಥೆಗಳ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
* ಎರಡೂ ತುದಿಗಳಲ್ಲಿ ಎಂಜಿನ್ ಮತ್ತು ಎರಡೂ ಬದಿಗಳಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಒಳಗೊಂಡಿದೆ
* ಸಂಪೂರ್ಣ ಬುಕ್ಕಿಂಗ್ ಇಲ್ಲ, ಟಿಕೆಟ್ ಖರೀದಿಸಲು ಅವಕಾಶವಿದೆ. ಇದನ್ನೂ ಓದಿ: ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿ ನಟಿಯರ ರಕ್ಷಣೆಗೆ ಬರುತ್ತಿದೆ ಪಾಶ್ ಸಮಿತಿ
ನಮೋ ಭಾರತ್ ರ‍್ಯಾಪಿಡ್ ರೈಲಿನ ಸಮಯ ಹೇಗಿದೆ?
* ಭುಜ್‌ನಿಂದ ನಿರ್ಗಮನ: ಬೆಳಗ್ಗೆ 5:05 ಗಂಟೆ, ಅಹಮದಾಬಾದ್‌ಗೆ ಆಗಮನ: ಬೆಳಗ್ಗೆ 10:50 ಗಂಟೆ
* ಅಹಮದಾಬಾದ್‌ನಿಂದ ನಿರ್ಗಮನ: ಸಂಜೆ 5:30, ಭುಜ್‌ಗೆ ಆಗಮನ: ರಾತ್ರಿ 11:20 ಗಂಟೆ
ರೈಲಿನ ಟಿಕೆಟ್ ದರ ಹೇಗೆ?
* ಕನಿಷ್ಠ ಟಿಕೆಟ್ ದರವು 30 ರೂ. ನಿಂದ ಪ್ರಾರಂಭವಾಗುತ್ತದೆ, ಜಿಎಸ್‌ಟಿ ಸೇರಿದಂತೆ, ನಿಖರವಾದ ದರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
* ಭುಜ್‌ನಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣಕ್ಕೆ ಜಿಎಸ್‌ಟಿ ಹೊರತುಪಡಿಸಿ 430 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ
ರೈಲ್ವೇ ಸಚಿವಾಲಯದ ಪ್ರಕಾರ, ರೈಲು 1,150 ಪ್ರಯಾಣಿಕರಿಗೆ ಆಸನಗಳೊಂದಿಗೆ 12 ಕೋಚ್‌ಗಳನ್ನು ಹೊಂದಿದೆ. ಹಲವಾರು ನವೀನ ವೈಶಿಷ್ಟ್ಯಗಳನ್ನು ನೀಡುತ್ತದೆ. ಸಂಪೂರ್ಣ ಹವಾನಿಯಂತ್ರಿತ ಕ್ಯಾಬಿನ್‌ಗಳು ಮತ್ತು ಐಶಾರಾಮಿ ಆಸನಗಳನ್ನು ಹೊಂದಿದೆ. ಇದು ಇತರ ಮೆಟ್ರೋಗಳಿಗಿಂತ ಉತ್ತಮವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ
ರಾಜಸ್ಥಾನ: ಕಾನ್ಪುರದ ಬಳಿಕ ರಾಜಸ್ಥಾನದ (Rajasthan) ಅಜ್ಮೇರ್‌ನಲ್ಲಿ (Ajmer) ಹಳಿ ಮೇಲೆ ವಸ್ತುಗಳನ್ನು ಇರಿಸಿ ರೈಲು ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಘಟನೆ ಬೆಳಕಿಗೆ ಬಂದಿದೆ.
ಅಜ್ಮೀರ್‌ನಿಂದ ಅಹಮದಾಬಾದ್‌ಗೆ (Ahmedabad) ಹೋಗುವ ಮಾರ್ಗ ಮಧ್ಯೆ ಹಳಿಯ ಎರಡು ಬದಿಗಳಲ್ಲಿ ಸಿಮೆಂಟ್ ಇಟ್ಟಿಗೆ ಇರಿಸಲಾಗಿತ್ತು. ಸಿಮೆಂಟ್ ಇಟ್ಟಿಗೆಗೆ ಡಿಕ್ಕಿ ಹೊಡೆದರೂ ಗೂಡ್ಸ್ ರೈಲಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಬಳಿಕ ರೈಲ್ವೆ ಚಾಲಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!
ತಪಾಸಣೆ ನಡೆಸಿದಾಗ, ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ 100 ಕಿಲೋಗ್ರಾಂಗಳಷ್ಟು ತೂಕದ ದೊಡ್ಡ ಕಾಂಕ್ರೀಟ್ ಇಟ್ಟಿಗೆ ಇಡಲಾಗಿತ್ತು. ಈ ಸಂಬಂಧ ಮಾಂಗಲ್ಯವಾಸ್ ಠಾಣೆಯಲ್ಲಿ ಆರ್‌ಪಿಎಫ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಭಾನುವಾರವಷ್ಟೇ ಕಾನ್ಪುರದಲ್ಲಿ (Kanpur) ಕಾಳಿಂದಿ ಎಕ್ಸ್ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್ ಇರಿಸಿದ್ದು, ರೈಲು ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು, ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತ ತಪ್ಪಿದೆ. ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆಗೆ (ಆರ್‌ಪಿಎಫ್) ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ರೈಲು ಅಪಘಾತವನ್ನು ತಪ್ಪಿಸಲಾಯಿತು. ಇದನ್ನೂ ಓದಿ: ಕಾರ್ಕಳ ರೇಪ್ ಕೇಸ್ ತನಿಖೆ ಚುರುಕು – ಮಾದಕ ವಸ್ತುಗಳ ಜಾಲದ ಬೆನ್ನು ಬಿದ್ದ ಖಾಕಿ
ಅಹಮದಾಬಾದ್: ಗುಜರಾತ್‌ನಲ್ಲಿ (Gujarat) ಭಾರೀ ಮಳೆಯಿಂದಾಗಿ ಪ್ರವಾಹ (Flood) ಉಂಟಾಗಿದ್ದು, ಸುಮಾರು 15 ಜನ ಸಾವನ್ನಪ್ಪಿದ್ದಾರೆ. 23 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸೋಮವಾರದಿಂದ ಗುಜರಾತ್ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಸುಮಾರು 15 ಜನ ಮೃತಪಟ್ಟಿದ್ದಾರೆ. 23,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ 300ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ಕಾರು ಓಡಿಸೋ ಪೈಪೋಟಿಗಿಳಿದ ಸಾಹಸಗಳ ಬಗ್ಗೆ ವಿವರಿಸಿದ ಕಂಗನಾ
ಗುಜರಾತ್ ಸರ್ಕಾರದ ಮಾಹಿತಿ ಪ್ರಕಾರ ಆನಂದ್ ಜಿಲ್ಲೆಯಲ್ಲಿ 6 ಜನ, ಗಾಂಧೀನಗರ ಮತ್ತು ಮಾಹಿಸಾಗರ್ ಜಿಲ್ಲೆಯಲ್ಲಿ 2 ಮತ್ತು ಮೋರ್ಬಿ, ವಡೋದರಾ, ಖೇಡಾ, ಭರುಚ್ ಮತ್ತು ಅಹಮದಾಬಾದ್ (Ahmedabad) ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದೆ ಎಂದು ತಿಳಿಸಿದೆ. ವಡೋದರಾ ಜಿಲ್ಲೆಯಿಂದ 45 ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಯಿಂದ 30 ಗರ್ಭೀಣಿಯರಿಗೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ ದ್ವಾರಕಾ, ಆನಂದ್, ವಡೋದರಾ, ಖೇಡಾ, ಮೋರ್ಬಿ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಪ್ರವಾಹ ಹೆಚ್ಚಾಗುವ ಲಕ್ಷಣಗಳಿದ್ದು ಜನರನ್ನು ರಕ್ಷಣೆ ಮಾಡಲು ಗುಜರಾತ್ ಸರ್ಕಾರ 6 ಭಾರತೀಯ ಸೇನಾ ತುಕಡಿಗಳನ್ನು ಕೋರಿದೆ. ಸದ್ಯಕ್ಕೆ 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು 22 ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉನ್ನತ ಮಟ್ಟದ ಸಭೆ ನಡೆಸಿ ಪ್ರವಾಹ ಮತ್ತು ಜನರ ರಕ್ಷಣೆ ಬಗ್ಗೆ ಚರ್ಚಿಸಿದ್ದಾರೆ. ಭಾರತೀಯ ಸೇನೆ, ವಾಯುಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಧಿಖಾರಿಗಳಿಂದ ಮಾಹಿತಿ ಪಡೆದಿದ್ದಾರೆ.ಇದನ್ನೂ ಓದಿ: ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ: ಛಲವಾದಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ (CM Bhupendrabhai Patel) ಅವರಿಗೆ ಕರೆ ಮಾಡಿ ಪ್ರವಾಹ ಮತ್ತು ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ನರೇಂದ್ರ ಮೋದಿಯವರು ಕರೆ ಮಾಡಿ ಮಳೆ ಪ್ರವಾಹ ಮತ್ತು ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜನರ ರಕ್ಷಣೆಯ ಬಗ್ಗೆ ಕೆಲವೊಂದು ಸಲಹೆ ನೀಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಿಂದ ರಕ್ಷಣೆಗೆ ಬೇಕಾಗುವ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಪ್ರಧಾನಿಯವರು ಗುಜರಾತ್ ಜನತೆಯನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಗುಜರಾತ್ ಜನರು ಪ್ರಕೃತಿ ವಿಕೋಪ ಅಥವಾ ಯಾವುದೆ ತೊಂದರೆಗೆ ಒಳಗಾದಾಗ ಅವರು ಯಾವಾಲೂ ಬೆಂಬಲ ನೀಡುತ್ತಾರೆ ಎಂದು ಸಿಎಂ ಭೂಪೇಂದ್ರ ಪಟೇಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗುಜರಾತ್‌ನ ಕೆಲವೊಂದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮೀನುಗಾರರಿಗೆ ಕೆರೆ ಮತ್ತು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.ಇದನ್ನೂ ಓದಿ: ಘಟಪ್ರಭಾ ನದಿ ಪ್ರವಾಹ ಪರಿಹಾರ ಕುರಿತು ಶೀಘ್ರ ಕ್ರಮ: ಸಿಎಂ ಸಿದ್ದರಾಮಯ್ಯ
ಅಹಮ್ಮದಾಬಾದ್: ಅಹ್ಮದಾಬಾದ್- ಜೋಧ್‌ಪುರಗೆ (Ahmedabad-Jodhpur) ಹೋಗುವ ವಂದೇ ಭಾರತ್ ರೈಲು ಹಳಿಗಳ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿರುವ ಘಟನೆ ರಾಜಸ್ತಾನದ ಪಾಲಿ ಎಂಬಲ್ಲಿ ಆಗಸ್ಟ್ 23ಕ್ಕೆ ನಡೆದಿದೆ.
ಫಲ್ನಾ ಪ್ರದೇಶದ ಹಿರಿಯ ಎಂಜಿನಿಯರ್ (ಎಸ್‌ಎಸ್‌ಇ) ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಫುಟ್‌ಪಾತ್ ನಿರ್ಮಿಸಲು ಬಳಸುವ ಸಿಮೆಂಟ್ ಸ್ಲ್ಯಾಬ್ ರೈಲು ಹಳಿಯ ಮೇಲೆ ಇಟ್ಟಿರುವುದು ಕಂಡುಬಂದಿದೆ ಎಂದು ಶಶಿಕಿರಣ್ ಹೇಳಿದರು. ಇದನ್ನೂ ಓದಿ: ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್
ಕಳೆದ ಬಾರಿ ಅಕ್ಟೋಬರ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಆಗ ರೈಲ್ವೆ ಅಧಿಕಾರಿಗಳು ತುರ್ತು ನಿರ್ಗಮನ ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದಾರೆ. ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕಲ್ಲು ಹಾಗು ಕಬ್ಬಿಣದ ಅದಿರುಗಳನ್ನು ಹಾಕಿದ್ದರಿಂದ ಈ ಘಟನೆ ನಡೆದಿದೆ ಎಂದು ರಾಜಸ್ತಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಮದ್ಯದ ದರ ಇಳಿಕೆ
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ 17ನೇ ಆವೃತ್ತಿ ಐಪಿಎಲ್ ಎಲಿಮಿನೇಟರ್ ಪಂದ್ಯವೇ ಡಿಕೆ ಪಾಲಿಗೆ ಕೊನೆಯದ್ದಾಗಿದೆ. ಆರ್‌ಸಿಬಿ ಹೃದಯವಿದ್ರಾವಕ ಸೋಲಿನೊಂದಿಗೆ ದಿನೇಶ್ ಕಾರ್ತಿಕ್ ಭಾವುಕ ವಿದಾಯ ಹೇಳಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ತೆಗೆದು ಪ್ರೇಕ್ಷಕರತ್ತ ಕೈಬೀಸಿ ಧನ್ಯವಾದ ಅರ್ಪಿಸಿದ ದಿನೇಶ್ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಆಟಗಾರರಿಂದ ಭಾವನಾತ್ಮಕ ಗೌರವ ಪಡೆದುಕೊಂಡಿದ್ದಾರೆ. ಎದುರಾಳಿ ಆಟಗಾರರು ಹಸ್ತಲಾಘವ ಮಾಡುವ ಸಂದರ್ಭದಲ್ಲೂ ಡಿಕೆ ತೀವ್ರ ಭಾವುಕರಾಗಿದ್ದು ಕಂಡುಬಂದಿತ್ತು. ಮೈದಾನ ತೊರೆಯುವವರೆಗೂ ದಿನೇಶ್ ಕಾರ್ತಿಕ್ ಅವರ ಕಣ್ಣಲ್ಲಿ ನೀರು ತುಂಬಿತ್ತು. ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಬೀಳ್ಕೊಡುಗೆ ನೀಡಿದರು. ಆದ್ರೆ ದಿನೇಶ್ ಕಾರ್ತಿಕ್ ಅಧಿಕೃತವಾಗಿ ಘೋಷಣೆ ಹೊರಡಿಸುವುದೊಂದೇ ಬಾಕಿಯಿದೆ.
Dinesh Karthik getting guard of honour from RCB and the crowd chanting ‘DK, DK’.
ದಿನೇಶ್ ಕಾರ್ತಿಕ್ ಟೂರ್ನಿ ಆರಂಭದಲ್ಲೇ ಇದು ತಮ್ಮ ಕೊನೆಯ ಐಪಿಎಲ್ (IPL 2024) ಎಂಬ ಸುಳಿವು ನೀಡಿದ್ದರು. ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋತ ನಂತರ ಮಾತನಾಡಿದ್ದ ಡಿಕೆ, ಆರ್‌ಸಿಬಿ ಪ್ಲೇಆಫ್ ತಲುಪಿದರೆ ಆಗ ಕೊನೆಯ ಪಂದ್ಯವಾಗುತ್ತದೆ ಎಂದು ಹೇಳಿದ್ದರು. 38 ವರ್ಷದ ಡಿಕೆ ಈಗ ಕೊನೆಗೂ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ
Streets will never forget this knock of Dinesh Karthik.
ಡಿಕೆ ಐಪಿಎಲ್ ವೃತ್ತಿ ಜೀವನ ಹೇಗಿದೆ?
17 ವರ್ಷಗಳ ಐಪಿಎಲ್ನಲ್ಲಿ ಹಲವು ತಂಡಗಳ ಪರ ಆಡಿರುವ ದಿನೇಶ್ ಕಾರ್ತಿಕ್, ತಮ್ಮ ಐಪಿಎಲ್ ವೃತ್ತಿಜೀವನ ಪೂರ್ಣಗೊಳಿಸಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿದ್ದ ದಿನೇಶ್ ಕಾರ್ತಿಕ್, 2011ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪಾಲಾದರು. 2012 ಮತ್ತು 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಡಿಕೆ, 2014ರಲ್ಲಿ ಮತ್ತೆ ಡೆಲ್ಲಿ ತಂಡ ಪ್ರತಿನಿಧಿಸಿದ್ದರು. 2015ರಲ್ಲಿ ಆರ್‌ಸಿಬಿ ಪರ ಆಡಿದ್ದ ದಿನೇಶ್ ಕಾರ್ತಿಕ್ 2016, 2017ರಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿದ್ದರು. ಬಳಿಕ 2021ರ ವರೆಗೆ ಕೆಕೆಆರ್ ತಂಡದಲ್ಲಿದ್ದ ದಿನೇಶ್ ಕಾರ್ತಿಕ್ 2022ರಲ್ಲಿ ಮತ್ತೆ ಆರ್‌ಸಿಬಿ ತಂಡಕ್ಕೆ ಎಂಟ್ರಿಕೊಟ್ಟರು. ಈವರೆಗೆ ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ 973 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!
ಐಪಿಎಲ್ ವೃತ್ತಿ ಬದುಕಿನಲ್ಲಿ ದಿನೇಶ್ ಕಾರ್ತಿಕ್ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿವಿಧ ಟೀಂಗಳಲ್ಲಿ ಆಡಿದ ಅನುಭವ ಹೊಂದಿರುವ ದಿನೇಶ್ ಕಾರ್ತಿ 257 ಪಂದ್ಯಗಳು ಹಾಗೂ 234 ಇನ್ನಿಂಗ್ಸ್‌ಗಳನ್ನಾಡಿ 4,842 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕ, 466 ಬೌಂಡರಿಗಳು ಹಾಗೂ 161 ಸಿಕ್ಸರ್‌ಗಳೂ ಸೇರಿವೆ. ವೈಯಕ್ತಿಕ ಗರಿಷ್ಠ ಸ್ಕೋರ್ 97 ರನ್ ಆಗಿದೆ. ಆರ್‌ಸಿಬಿ ಪರ ಆಡಿ ಫಿನಿಶರ್ ಖ್ಯಾತಿಯನ್ನೂ ದಿನೇಶ್ ಕಾರ್ತಿಕ್ ಪಡೆದಿದ್ದರು, ಆದರೂ ಆರ್‌ಸಿಬಿ ಕಪ್ ಗೆಲ್ಲಲಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಖಾಸಗಿ ಸಂಭಾಷಣೆ ಪ್ರಸಾರ ಮಾಡಿದ್ದಕ್ಕೆ ಐಪಿಎಲ್ ಪ್ರಸಾರಕರಿಗೆ ರೋಹಿತ್ ಶರ್ಮಾ ತರಾಟೆ
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಯುಎಇ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed Al Nahyan) ಅವರು ಜನವರಿ 9 ರಂದು ಅಹಮದಾಬಾದ್‌ನಲ್ಲಿ (Ahmedabad) ರೋಡ್ ಶೋ (Road Show) ನಡೆಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಯುಎಇ ಅಧ್ಯಕ್ಷ ಜನವರಿ 9 ರಂದು ನಗರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ. ನಂತರ ಉಭಯ ನಾಯಕರು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ (SVPI) ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ 20 ನಿಮಿಷಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಲಕ್ಷದ್ವೀಪದ ಬೀಚ್‌ನಲ್ಲಿ ಮೋದಿ ಕೂಲ್; ಇಲ್ಲಿದೆ ನೋಡಿ PHOTOS
ಜನವರಿ 10ರಿಂದ 12ರವರೆಗೆ ಗಾಂಧಿನಗರದಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ (Vibrant Gujarat Global Summit) ಪಾಲ್ಗೊಳ್ಳುವ ಮುಖ್ಯಸ್ಥರಲ್ಲಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಕೂಡ ಭಾಗವಹಿಸಲಿದ್ದಾರೆ. ಜನವರಿ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!
ಲಕ್ನೋ (ಅಯೋಧ್ಯೆ): ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Maryada Purushottam Shri Ram International Airport) ಡಿಸೆಂಬರ್ 30 ರಂದು ಉದ್ಘಾಟನೆಯಾಗಲಿದ್ದು, ಜನವರಿ 6ರಿಂದ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸಂಪರ್ಕ ಕಲ್ಪಿಸಲಾಗಿದೆ.
ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಂದು ದೆಹಲಿಗೆ ಏರ್ ಇಂಡಿಯಾದ (Air India) ಮೊದಲ ವಿಮಾನ ಹಾರಾಟ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಯೋಧ್ಯೆ ಏರ್ಪೋರ್ಟ್‌ನಲ್ಲಿ ಡಿಸೆಂಬರ್ 22ರಂದು ಭಾರತೀಯ ವಾಯುಪಡೆಯ ಏರ್‌ಬಸ್ A320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಾಗಿತ್ತು.
ಜನವರಿ 6 ರಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಆ ನಂತರ ಇಂಡಿಗೋ ಏರ್‌ಲೈನ್ಸ್ ಕಂಪನಿ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ವಿಮಾನ ಒದಗಿಸಲಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆಹ್ವಾನ- ಧನ್ಯವಾದವೆಂದ ಕಾಂಗ್ರೆಸ್
ಈ ಕುರಿತು ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು. ದೇಶ-ವಿದೇಶಿ ಗಣ್ಯರು ಅಥವಾ ಪ್ರವಾಸಿಗರು ಭೇಟಿ ನೀಡಿದ್ರೆ, ಅವರಿಗೆ ನಗರದ ಐತಿಹಾಸಿಕ ಮಹತ್ವ ಕಣ್ಣಿಗೆ ರಾಚಬೇಕು. ಆದ್ದರಿಂದ ಅಯೋಧ್ಯೆ ಸಂಸ್ಕೃತಿಯನ್ನು ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಕಣ್ಣಿಗೆ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
6,500 ಚದರ ಅಡಿ ವಿಸ್ತೀರ್ಣ ಹೊಂದಿರುವ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೆ 2 ರಿಂದ 3 ವಿಮಾನಗಳನ್ನ ಲ್ಯಾಂಡಿಂಗ್ ಮಾಡಬಹುದು. ಸದ್ಯ ಇರುವ 2,200 ಮೀಟರ್ ಉದ್ದದ ರನ್‌ವೇಯನ್ನು 3,700 ಮೀಟರ್‌ಗೆ ವಿಸ್ತರಿಸಲಾಗುತ್ತದೆ. ಇದರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಅಯೋಧ್ಯೆಯಲ್ಲಿ ಲ್ಯಾಂಡಿಂಗ್ ಮಾಡಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ
ಅಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರವು 250 ಕೋಟಿ ರೂಪಾಯಿ ಮಂಜೂರು ಮಾಡಿತ್ತು, ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ ಭೂಮಿಯನ್ನು ಖರೀದಿಸಲು 321 ಕೋಟಿ ರೂಪಾಯಿಗೆ ಅನುಮೋದನೆ ನೀಡಿತ್ತು. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 555.66 ಎಕರೆ ಹೆಚ್ಚುವರಿ ಭೂಮಿಯನ್ನು ಖರೀದಿಸಲು ಒಟ್ಟು 1,001.77 ಕೋಟಿ ರೂ. ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಬಜೆಟ್‍ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿತ್ತು. ನವೆಂಬರ್ 2018 ರಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎ320 ಮತ್ತು ಬಿ737 ನಂತಹ ದೊಡ್ಡ ವಿಮಾನಗಳಿಗಾಗಿ ಅಯೋಧ್ಯೆಯಲ್ಲಿ ಏರ್‌ಸ್ಟ್ರಿಪ್‌ನ ಅಭಿವೃದ್ಧಿ ಮತ್ತು ಸೂಕ್ತವಾದ ರನ್‍ವೇ ಮತ್ತು ಟರ್ಮಿನಲ್ ಕಟ್ಟಡದ ನಿರ್ಮಾಣವನ್ನು ಘೋಷಿಸಿದ್ದರು.
ನವದೆಹಲಿ: ಸ್ತ್ರೀಯರ ಮೇಲೆ ಆ್ಯಸಿಡ್ ದಾಳಿಯಲ್ಲಿ (Acid Attack) ಮಹಾನಗರಗಳ ಪೈಕಿ ಬೆಂಗಳೂರು (Bengaluru) ಮೊದಲನೇ ಸ್ಥಾನವನ್ನು ಪಡೆದಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಈ ಪೈಕಿ ನವದೆಹಲಿ (New Delhi) ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಹಮದಾಬಾದ್ (Ahmedabad) ಮೂರನೇ ಸ್ಥಾನವನ್ನು ಪಡೆದಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು 8 ಆ್ಯಸಿಡ್ ದಾಳಿ ನಡೆದಿತ್ತು. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ (NCRB) ವರದಿಯಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ. ಇದನ್ನೂ ಓದಿ: ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಇಳಿಯಲು ಮುಂದಾದ ಯುವತಿ – ಯುವತಿ, ಕಂಡಕ್ಟರ್ ನಡುವೆ ಗಲಾಟೆ
7 ಆ್ಯಸಿಡ್ ದಾಳಿ ಪ್ರಕರಣಗಳನ್ನು ದಾಖಲಿಸಿರುವ ದೆಹಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 5 ಪ್ರಕರಣಗಳೊಂದಿಗೆ ಗುಜರಾತ್‌ನ ಅಹಮದಾಬಾದ್ 3ನೇ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ 2 ಆ್ಯಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಬೆಂಗಳೂರಿನಲ್ಲಿ ಯುವತಿಯ ಮೇಲಿನ ಆ್ಯಸಿಡ್ ದಾಳಿ ಭಾರೀ ಸುದ್ದಿಯಾಗಿತ್ತು. ಇದನ್ನೂ ಓದಿ: ಕ್ಯಾಂಡಲ್ ಬೆಳಕಲ್ಲಿ ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿ ಬೆಂಕಿಗೆ ಬಲಿ