Tag: Ahmedabad team

  • ಅಹಮದಾಬಾದ್ ತಂಡ 15ನೇ ಆವೃತ್ತಿ ಐಪಿಎಲ್ ಆಡುವುದು ಡೌಟ್?

    ಅಹಮದಾಬಾದ್ ತಂಡ 15ನೇ ಆವೃತ್ತಿ ಐಪಿಎಲ್ ಆಡುವುದು ಡೌಟ್?

    ಮುಂಬೈ: 15ನೇ ಆವೃತ್ತಿ ಐಪಿಎಲ್‍ಗೆ ಈಗಾಗಲೇ ಎರಡು ತಂಡಗಳು ಸೇರ್ಪಡೆಗೊಂಡು ತಂಡಗಳ ಸಂಖ್ಯೆ 10ಕ್ಕೆ ಏರಿಕೆ ಕಂಡಿದೆ. ಆದರೆ ಇದೀಗ ಹೊಸದಾಗಿ ಸೇರ್ಪಡೆಗೊಂಡ ಅಹಮದಾಬಾದ್ ತಂಡ 2022ರ ಐಪಿಎಲ್‍ನಿಂದ ಹೊರಬೀಳುವ ಆತಂಕ ಎದುರಾಗಿದೆ.

    ಮುಂದಿನ ಆವೃತ್ತಿ ಐಪಿಎಲ್‍ಗಾಗಿ ಈಗಾಗಲೇ ರಿಟೈನ್ ಪಟ್ಟಿ ಮತ್ತು ಆಟಗಾರರ ಮೆಗಾ ಹರಾಜಿಗೆ ಎಲ್ಲಾ ತಂಡಗಳು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬಿಸಿಸಿಐ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿ ಇದೀಗ 10ಕ್ಕೆ ಏರಿಕೆ ಕಂಡಿದೆ. ಹೊಸದಾಗಿ ಲಕ್ನೋ ಮತ್ತು ಅಹಮದಾಬಾದ್ ತಂಡ ಸೇರ್ಪಡೆಗೊಂಡಿದೆ. ಆದರೆ ಇದೀಗ ಸಿವಿಸಿ ಕ್ಯಾಪಿಟಲ್‌ ಕ್ಯಾಪಿಟಲ್ಸ್ ಒಡೆತನದ ಅಹಮದಾಬಾದ್ ತಂಡಕ್ಕೆ ಕಂಟಕವೊಂದು ಎದುರಾಗಿದ್ದು, ಸಿವಿಸಿ ಕ್ಯಾಪಿಟಲ್ಸ್ ಕ್ರೀಡಾ ಬೆಟ್ಟಿಂಗ್ ಸಂಸ್ಥೆಗಳಲ್ಲಿ ಪಾಲು ಹೊಂದಿದ್ದು, ಇದು ಅಹಮದಾಬಾದ್ ತಂಡಕ್ಕೆ ಮುಳ್ಳಾಗಿದೆ. ಇದನ್ನೂ ಓದಿ: ಐಪಿಎಲ್‌ಗೆ ಅಹಮದಾಬಾದ್‌, ಲಕ್ನೋ ಎಂಟ್ರಿ

    ಬೆಟ್ಟಿಂಗ್ ಸಂಸ್ಥೆಯೊಂದಿಗೆ ನೇರ ಸಂಪರ್ಕವಿರುವ ಸಿವಿಸಿ ಸಂಸ್ಥೆ ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ಕೇಳಿಬರುತ್ತಿದೆ. ಈ ನಡುವೆ ಬಿಸಿಸಿಐ ಸಿವಿಸಿ ಮಾಲೀಕತ್ವದ ತಂಡವನ್ನು ಐಪಿಎಲ್‍ನಲ್ಲಿ ಆಡಿಸಲು ಒಪ್ಪಿಕೊಳ್ಳಲಿದೆಯೇ ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ನ್ಯೂಜಿಲೆಂಡ್‍ಗೆ 284 ರನ್ ಟಾರ್ಗೆಟ್ ನೀಡಿದ ಭಾರತ – ರೋಚಕ ಘಟ್ಟ ತಲುಪಿದ ಮೊದಲ ಟೆಸ್ಟ್

  • IPL ನೂತನ ತಂಡ ಅಹಮದಾಬಾದ್‍ ಕೋಚ್ ಆಗ್ತಾರಂತೆ ರವಿಶಾಸ್ತ್ರಿ?

    IPL ನೂತನ ತಂಡ ಅಹಮದಾಬಾದ್‍ ಕೋಚ್ ಆಗ್ತಾರಂತೆ ರವಿಶಾಸ್ತ್ರಿ?

    ಮುಂಬೈ: ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯುವ ರವಿಶಾಸ್ತ್ರಿ 2022ರ 15ನೇ ಆವೃತ್ತಿಯ ಐಪಿಎಲ್‍ನಲ್ಲಿ ನೂತನ ತಂಡವಾಗಿರುವ ಅಹಮದಾಬಾದ್ ತಂಡಕ್ಕೆ ಮುಖ್ಯ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ.

    2017ರ ಬಳಿಕ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ಭಾರತ ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ಕೂಡಲೇ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಆ ಬಳಿಕ ಅವರು 2022ರ ಐಪಿಎಲ್‍ಗೆ ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡದ ಪರ ಕೋಚ್ ಆಗಿ ಕಾರ್ಯನಿರ್ವಹಿಸಲು ತಂಡದ ಮಾಲೀಕರಾಗಿರುವ ಸಿವಿಸಿ ಕ್ಯಾಪಿಟಲ್ಸ್, ಶಾಸ್ತ್ರಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

    ರವಿಶಾಸ್ತ್ರಿ ಜೊತೆಗೆ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರಿಗೂ ಕೂಡ ಅಹಮದಾಬಾದ್ ಫ್ರಾಂಚೈಸಿ ಆಫರ್ ನೀಡಿದ್ದು, ಈ ಮೂವರು ಕೂಡ ಹೊಸ ತಂಡದೊಂದಿಗೆ ಕೈಜೋಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿ ಇದೆ. ಈ ನಡುವೆ ಆರ್​ಸಿಬಿ ತಂಡ ಕೂಡ ರವಿ ಶಾಸ್ತ್ರಿ ಅವರನ್ನು ಸಂಪರ್ಕಿಸಿ ಕೋಚ್ ಸ್ಥಾನಕ್ಕೆ ಆಫರ್ ನೀಡಿದೆ ಎಂದು ವರದಿಯಾಗಿದ್ದು, ಸದ್ಯ ರವಿಶಾಸ್ತ್ರಿ ನಡೆ ಯಾವ ಕಡೆ ಎಂಬುದು ಕೆಲದಿನಗಳಲ್ಲಿ ಹೊರಬೀಳಲಿದೆ.

    ಇದೀಗ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ನೇಮಿಸಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ತಮ್ಮ ಕಾರ್ಯ ಆರಂಭಿಸಲಿದ್ದಾರೆ. ಇದನ್ನೂ ಓದಿ: ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್‌ ಕ್ಯೂರೇಟರ್‌ ನಿಗೂಢ ಸಾವು