Tag: Ahmedabad Plane Crash

  • ವಿಮಾನ ದುರಂತ: ವಿಮಾನಯಾನ ಸಚಿವರ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ

    ವಿಮಾನ ದುರಂತ: ವಿಮಾನಯಾನ ಸಚಿವರ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ

    ಕಲಬುರಗಿ: ಅಹಮದಾಬಾದ್ ವಿಮಾನ ದುರಂತ (Ahmedabad Plane Crash) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಚಿವ ಈಶ್ವರ ಖಂಡ್ರೆ (Eshwara Khandre) ಒತ್ತಾಯಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಮಾನ ದುರಂತಕ್ಕೆ ಕೇಂದ್ರ ಸರ್ಕಾರ ಹೊಣೆ ಹೊತ್ತು ಕೂಡಲೇ ಕೇಂದ್ರ ವಿಮಾನಯಾನ ಸಚಿವರು ರಾಜೀನಾಮೆ ನೀಡಬೇಕು. ಇದು ಒಂದು ಅತಿದೊಡ್ಡ ದುರಂತವಾಗಿದೆ. ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ದುರಂತ ನಡೆಯದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವಿಮಾನ ದುರಂತ ಬೆನ್ನಲ್ಲೇ ಥೈಲ್ಯಾಂಡಲ್ಲಿ ಏರ್‌ ಇಂಡಿಯಾ ತುರ್ತು ಭೂಸ್ಪರ್ಶ

    ಈ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ವರದಿ ಜನರ ಮುಂದೆ ಇಡಬೇಕು. ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೇಳುವವರು ಕುಂಭಮೇಳದ ಕಾಲ್ತುಳಿತಕ್ಕೂ ರಾಜೀನಾಮೆ ಕೇಳಬೇಕು. ಸಾವಿನಲ್ಲಿ ರಾಜಕೀಯ‌ ಮಾಡಬಾರದು ಬಿಜೆಪಿಗೆ ಟಾಂಗ್‌ ಕೊಟ್ಟರು.

    ದುರಂತದ ಬೆನ್ನಲ್ಲೇ ಟಾಟಾ ಸಮೂಹ ಪ್ರತಿ ಮೃತ ವ್ಯಕ್ತಿಯ ಸಂತ್ರಸ್ತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಹಾಗಂತ ಸಂತ್ರಸ್ತ ಕುಟುಂಬಗಳಿಗೆ ಇಂತಹ ದುರಂತದ ಬಳಿಕ ಎಷ್ಟೇ ಕೋಟಿ ಕೊಟ್ಟರೂ ಕಡಿಮೆ ಎಂದರು. ಇದನ್ನೂ ಓದಿ:

  • ವಿಮಾನ ದುರಂತ – ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು

    ವಿಮಾನ ದುರಂತ – ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು

    – ತಾಯಿಗೆ ತಿಂಡಿ ಕೊಡಲು ಹೋಗಿದ್ದ ಬಾಲಕ ಬೆಂಕಿಯ ತೀವ್ರತೆಗೆ ದುರ್ಮರಣ

    ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ (Air India Flight Crash) ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.

    ಆಕಾಶ್ (14) ಮೃತ ಬಾಲಕ. ಬಿಜೆ ಹಾಸ್ಟೆಲ್‌ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿಗೆ ತಿಂಡಿ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ (Akash) ಟೀ ಅಂಗಡಿಯ ಮುಂದೆ ನಿಂತಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದವ್ಳು ಬಾರದ ಲೋಕಕ್ಕೆ ಹೋದ್ಳು..!

    ಆಕಾಶ್‌ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿತು. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಬೆಂಕಿ ತೀವತ್ರೆಗೆ ಗಾಯಗೊಂಡಿದ್ದ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ನನ್ನ ತಮ್ಮ ಆಕಾಶ್ ಕೂಡ ಅಲ್ಲೇ ಇದ್ದ. ಆದರೆ ಅವನನ್ನು ಯಾರೂ ರಕ್ಷಣೆ ಮಾಡೋರಿಲ್ಲದೆ ಸಾವನ್ನಪ್ಪಿದ್ದಾನೆ. ನನ್ನ ತಮ್ಮ ಇಲ್ಲದೆ ನಾನು ಹೇಗೆ ಬದುಕಲಿ. ಒಮ್ಮೆ ನನ್ನ ಸಹೋದರನ ಮುಖ ನೋಡಲು ಬಿಡಿ. ದೇವರು ನನ್ನ ತಮ್ಮನ ಕಿತ್ಕೊಂಡ. ನನ್ನ ತಮ್ಮನನ್ನು ನಿನ್ನೆಯಿಂದ ನೋಡಿಲ್ಲ. ದಯಮಾಡಿ ನನ್ನ ಚಿಕ್ಕ ತಮ್ಮನನ್ನು ನೋಡಲು ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಇದನ್ನೂ ಓದಿ: Plane Crash | ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಮಗ ದುರಂತ ಸಾವು

    ನನ್ನ ತಾಯಿಗೆ ಇನ್ನೂ ವಿಷಯ ತಿಳಿದಿಲ್ಲ. ಆಕೆಗೆ ಕೂಡ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗ ಹೇಗಿದ್ದಾನೆ ಎಂದು ಕೇಳ್ತಿದ್ದಾರೆ. ಆಕಾಶ್‌ಗೆ ಏನೂ ಆಗಿಲ್ಲ, ಚೆನ್ನಾಗಿದ್ದಾನೆ ಎಂದು ಅವರನ್ನು ಸಮಾಧಾನಪಡಿಸಿದ್ದೇವೆ ಎಂದು ದುಃಖಿಸಿದರು.

  • ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ಗಾಂಧೀನಗರ: ಟೇಕಾಫ್‌ ಆದ ಕೆಲಹೊತ್ತಿನಲ್ಲೇ ಹಾಸ್ಟೆಲ್‌ಗೆ ಡಿಕ್ಕಿಯಾಗಿ ಪತನಗೊಂಡ ಏರ್‌ ಇಂಡಿಯಾದ ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ಪತನಗೊಂಡಿತು. ವಿಮಾನದ ಜೊತೆ 241 ಪ್ರಯಾಣಿಕರು ಸಹ ಸುಟ್ಟು ಕರಕಲಾದರು. ಆದರೆ, ವಿಮಾನದ ಅವಶೇಷಗಳಲ್ಲಿ ಸಿಕ್ಕ ಭಗವದ್ಗೀತೆ ಪುಸ್ತಕ ಏನೂ ಆಗದೇ ಸುರಕ್ಷಿತವಾಗಿ ಸಿಕ್ಕಿದೆ.

    ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯ ಒಂದು ಆವೃತ್ತಿಯು ಹಾನಿಗೊಳಗಾಗದೇ ಉಳಿದಿದೆ. ಅಹಮದಾಬಾದ್ ವಿಮಾನ ಅಪಘಾತದ ಅವಶೇಷಗಳ ನಡುವೆ ಪತ್ತೆಯಾದ ಭಗವದ್ಗೀತೆಯ ಹಾನಿಯಾಗದ ಪುಟಗಳನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಇದನ್ನೂ ಓದಿ:

    242 ಪ್ರಯಾಣಿಕರಿದ್ದ ವಿಮಾನವು ಟೇಕಾಫ್ ಆದ 40 ಸೆಕೆಂಡ್‌ಗಳಲ್ಲೇ ಪತನಗೊಂಡಿತು. ಇದರಿಂದಾಗಿ 241 ಜನರು ಸಾವನ್ನಪ್ಪಿದರು. ವಿಮಾನದ 11A ನಲ್ಲಿ ಕುಳಿತಿದ್ದ ವಿಶ್ವಶ್ ಕುಮಾರ್ ರಮೇಶ್ ಎಂಬ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದರು.

    ವಿಮಾನವು ವೈದ್ಯಕೀಯ ವಿಶ್ವವಿದ್ಯಾಲಯದ ಮೇಲೆ ಅಪ್ಪಳಿಸಿತು. ಇದರ ಪರಿಣಾಮವಾಗಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆಯನ್ನು ಪ್ರಾರಂಭಿಸಿದೆ. ಬೋಯಿಂಗ್ 787-8 ಬಗ್ಗೆ ಪ್ರಸ್ತುತ ಯಾವುದೇ ಸುರಕ್ಷತಾ ಕಾಳಜಿಗಳಿಲ್ಲ ಎಂದು ಯುಎಸ್ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.

    ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ವಿಮಾನ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಅವಘಡದಲ್ಲಿ ಬದುಕುಳಿತದ ಹಾಗೂ ಹಾಸ್ಟೆಲ್‌ ವಾಸಿಗಳಾಗಿದ್ದ ಗಾಯಾಳುಗಳ ಆರೋಗ್ಯವನ್ನು ಪ್ರಧಾನಿಗಳು ವಿಚಾರಿಸಿದರು.

  • ಏರ್‌ ಇಂಡಿಯಾ ವಿಮಾನ ಪತನ – ದುರಂತದಲ್ಲಿ ಮಾರ್ಬಲ್‌ ವ್ಯಾಪಾರಿ ಪಿಂಕು ಮೋದಿ ಮಕ್ಕಳು ಸಾವು

    ಏರ್‌ ಇಂಡಿಯಾ ವಿಮಾನ ಪತನ – ದುರಂತದಲ್ಲಿ ಮಾರ್ಬಲ್‌ ವ್ಯಾಪಾರಿ ಪಿಂಕು ಮೋದಿ ಮಕ್ಕಳು ಸಾವು

    – ಲಂಡನ್‌ ಪ್ರವಾಸಕ್ಕೆ ಹೊರಟಿದ್ದ ಅಣ್ಣ-ತಂಗಿ ದುರಂತ ಅಂತ್ಯ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ ಏರ್‌ ಇಂಡಿಯಾ (Air India) ವಿಮಾನ ಅಪಘಾತದ ಹಿಂದೆ ಹಲವು ಕರುಣಾಜನಕ ಕಥೆಗಳಿವೆ. ಪತನಗೊಂಡ ವಿಮಾನದಲ್ಲಿ ಲಂಡನ್‌ಗೆ ಪ್ರಯಾಣ ಬೆಳೆಸಿದ್ದ ಅಣ್ಣ-ತಂಗಿ ದುರಂತ ಅಂತ್ಯ ಕಂಡಿದ್ದಾರೆ.

    ಅಣ್ಣ ಶಗುನ್ ಮತ್ತು ತಂಗಿ ಶುಭಾ ಇಬ್ಬರೂ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಉದಯಪುರದವರಾಗಿ ಇವರು ಎಂಬಿಎ ಮುಗಿಸಿದ್ದರು. ಮಾರ್ಬಲ್‌ ವ್ಯಾಪಾರಿ ಪಿಂಕು ಮೋದಿ ಅವರ ಮಕ್ಕಳು. ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ

    ತಂದೆ ಜೊತೆ ಮಾರ್ಬಲ್‌ ಬ್ಯುಸಿನೆಸ್‌ಗೆ ಸೇರಿದ್ದರು. ಅಣ್ಣ-ತಂಗಿ ಇಬ್ಬರೂ ಲಂಡನ್‌ ಪ್ರವಾಸಕ್ಕೆ ಹೊರಟಿದ್ದರು. ಆದರೆ, ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    230 ಪ್ರಯಾಣಿಕರು, 12 ಸಿಬ್ಬಂದಿ ಹೊತ್ತು ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ಗುರುವಾರ ಪತನಗೊಂಡಿತು. ಪ್ರಯಾಣ ಆರಂಭಿಸಿದ ಕೆಲಹೊತ್ತಿನಲ್ಲೇ ಹಾಸ್ಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ವಿಮಾನ ಪತನವಾಯಿತು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ವಿಷಾದ

    ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದಾರೆ. ಪವಾಡ ಸದೃಶ ರೀತಿಯಲ್ಲಿ ಓರ್ವ ಮಾತ್ರ ದುರಂತದಿಂದ ಪಾರಾಗಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ

    ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ

    – ಒಂದು ಸಹಿ ಹಾಕೋಕೆ ಬಂದು ಪ್ರಾಣಾನೇ ಹೋಯಿತು!

    ಗಾಂಧೀನಗರ: ಲಂಡನ್‌ನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ರಂಜಿತಾ ಅವರು ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ.

    ರಂಜಿತಾ ಗೋಪಕುಮಾರನ್‌ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಯುನೈಟೆಡ್‌ ಕಿಂಗ್‌ಡಂನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆ ಮೇಲೆ ಕೇರಳಕ್ಕೆ ಬಂದಿದ್ದರು. ರಜೆ ಮುಗಿಸಿ ವಾಪಸ್‌ ಆಗುವಾಗ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕನಸಿನ ಮನೆಗೆ ಕಾಲಿಡುವ ಮೊದಲೇ ನರ್ಸ್‌ ರಂಜಿತಾ ಸಾವಿನ ಮನೆ ಸೇರಿದ್ದಾರೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಪ್ರೇಮ್ ಕೃಷ್ಣನ್ ಎಸ್. ಹಾಗೂ ರಂಜಿತಾ ಈ ವಿಮಾನದಲ್ಲಿದ್ದರು. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅವರ ಸಾವು ದೃಢಪಟ್ಟಿದೆ. ಇದನ್ನೂ ಓದಿ: ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿ – ಅಹಮದಾಬಾದ್‌ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮೋದಿ

    42 ವರ್ಷದ ರಂಜಿತಾ ಪತಿ ವಿನೀಶ್, ಇಬ್ಬರು ಶಾಲಾ ಮಕ್ಕಳಾದ ರಿತಿಕಾ ಮತ್ತು ಇಂದುಚೂಡನ್ ಹಾಗೂ ತಾಯಿ ತುಳಸಿ ಅವರನ್ನು ಅಗಲಿದ್ದಾರೆ. ಪಂಚಾಯತ್ ಸದಸ್ಯ ಜಾನ್ಸನ್ ಥಾಮಸ್, ರಂಜಿತಾ ಮೂರು ದಿನಗಳ ಹಿಂದೆ ಯುಕೆಯಿಂದ ಮನೆಗೆ ಬಂದಿದ್ದರು. ಅವರಿಗೆ ರಾಜ್ಯ ಆರೋಗ್ಯ ಸೇವೆಯಲ್ಲಿ ನರ್ಸ್ ಕೆಲಸ ಸಿಕ್ಕಿತ್ತು. ಆದರೆ ಅವರ ಹೊಸ ಮನೆಯ ನಿರ್ಮಾಣದ ಮೇಲ್ವಿಚಾರಣೆಗಾಗಿ ರಜೆಯ ಮೇಲೆ ಮನೆಗೆ ಬಂದಿದ್ದರು. ಅವರು ಸುಮಾರು ಒಂದು ವರ್ಷದ ಹಿಂದೆ ಯುಕೆಗೆ ತೆರಳಿದಾಗಿನಿಂದ, ಅಲ್ಲಿ ತಮ್ಮ ಕೆಲಸದ ಒಪ್ಪಂದವನ್ನು ಪೂರ್ಣಗೊಳಿಸಲು ಬಯಸುತ್ತಿದ್ದರು. ಕೇರಳಕ್ಕೆ ಮರಳಲು ಮತ್ತು ರಾಜ್ಯ ಆರೋಗ್ಯ ಸೇವೆಯೊಂದಿಗೆ ಕೆಲಸ ಮಾಡಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ.

    ಯುಕೆಗೆ ತೆರಳುವ ಮೊದಲು, ರಂಜಿತಾ ಎಂಟು ವರ್ಷಗಳ ಕಾಲ ಒಮಾನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು. ಅವರ ಪತಿ ಕೂಡ ಒಮಾನ್‌ನಲ್ಲಿದ್ದರು. ಆದರೆ ನಂತರ ಕೇರಳಕ್ಕೆ ಮರಳಿದರು. ಅದಾದ ಬಳಿಕ ರಂಜಿತಾ ಯುಕೆಗೆ ತೆರಳಿದ್ದರು. ಇದನ್ನೂ ಓದಿ: ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

    ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್‌ಗೆ ಕಳುಹಿಸಿ ಲಂಡನ್‌ಗೆ ಹೊರಟ್ಟಿದ್ದರು. ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಈಗಾಗಲೇ ಮನೆಯ ಬಹುತೇಕ ಕೆಲಸ ಪೂರ್ಣಗೊಂಡಿತ್ತು. ಜುಲೈನಲ್ಲಿ ಗೃಹಪ್ರವೇಶದ ಪ್ಲ್ಯಾನ್‌ ಮಾಡಿಕೊಂಡಿದ್ದರು. ಮನೆಗೆ ಆಸರೆಯಾಗಿದ್ದ ರಂಜಿತಾ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

  • ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

    ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

    – ವಿಮಾನದಲ್ಲಿ ಕೊನೆಯ ಸೆಲ್ಫಿ ತೆಗೆದು ಕುಟುಂಬಸ್ಥರಿಗೆ ಕಳುಹಿಸಿ ಖುಷಿಪಟ್ಟಿದ್ದ ಕುಟುಂಬ

    ಗಾಂಧೀನಗರ: ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದ ಸುಂದರ ಕುಟುಂಬವೊಂದು ಗುರುವಾರ ಅಹಮದಾಬಾದ್‌ನಲ್ಲಿ (Ahmedabad Plane Crash) ಸಂಭವಿಸಿದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯಕಂಡಿದೆ.

    ಗಂಡ-ಹೆಂಡತಿ ಹಾಗೂ ಮೂರು ಮುದ್ದಾದ ಮಕ್ಕಳ ಒಂದೇ ದಿನ ಮೃತಪಟ್ಟಿದ್ದಾರೆ. ಸಾಫ್ಟ್‌ವೇರ್‌ ವೃತ್ತಿಯಲ್ಲಿದ್ದ ಪ್ರತೀಕ್‌ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದರು. ಮೂರು ಮಕ್ಕಳು ಹಾಗೂ ಮಡದಿಯೊಂದಿಗೆ ಲಂಡನ್‌ನಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಇದನ್ನೂ ಓದಿ: Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

    ಮಕ್ಕಳು, ಮಡದಿಯನ್ನ ಲಂಡನ್‌ಗೆ ಕರೆಸಿಕೊಳ್ಳಲು ಹಲವು ವರ್ಷಗಳಿಂದ ಪ್ರತೀಕ್‌ ಕಾದಿದ್ದರು. ಕನಸು ಅಂತಿಮವಾಗಿ ನನಸಾಯಿತು. ಉದಯಪುರದಲ್ಲಿ ಪ್ರಸಿದ್ಧ ವೈದ್ಯೆಯಾಗಿದ್ದ ಡಾ. ಕೋಮಿ ವ್ಯಾಸ್‌ ಅವರು ಎರಡು ದಿನಗಳ ಹಿಂದಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಪ್ರತೀಕ್ ಜೊತೆ ಲಂಡನ್‌ಗೆ ಹೊರಡಲು ಸಜ್ಜಾಗಿದ್ದರು.

    ಗುರುವಾರ ಬೆಳಗ್ಗೆ ಭರವಸೆ ಮತ್ತು ಉತ್ಸಾಹದೊಂದಿಗೆ ಈ ಕುಟುಂಬ, ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಭಾರತದಲ್ಲಿ ತಮ್ಮ ಜೀವನದ ಕಡೆಯ ಸೆಲ್ಫಿಯನ್ನು ಕುಟುಂಬ ಕ್ಲಿಕ್ಕಿಸಿಕೊಂಡಿತ್ತು. ಆ ಸೆಲ್ಫಿಯನ್ನ ತನ್ನ ಸಂಬಂಧಿಕರಿಗೆ ಕಳಿಸಿ ಖುಷಿಪಟ್ಟಿತ್ತು.

    ಆದರೆ, ಕೆಲವೇ ಹೊತ್ತಿನಲ್ಲಿ ಅವರ ಕನಸು ನುಚ್ಚುನೂರಾಯಿತು. ಭೀಕರ ವಿಮಾನ ಅಪಘಾತದಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ 241 ಮಂದಿ ಮೃತಪಟ್ಟರು. ಅವರಲ್ಲಿ ಈ ಕುಟುಂಬದ ಐವರು ಸೇರಿದ್ದಾರೆ. ಹಾಸ್ಟೆಲ್‌ವೊಂದಕ್ಕೆ ಬಡಿದು ಪತನಗೊಂಡಿತು. ವಿಮಾನದಲ್ಲಿದ್ದ ಈ ಕುಟುಂಬ ದಾರುಣ ಅಂತ್ಯ ಕಂಡಿತು. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

  • Ahmedabad Plane Crash | ಮೊದಲ ಬಾರಿಗೆ ಪತಿ ನೋಡಲು ಹೊರಟಿದ್ದ ನವವಿವಾಹಿತೆ ಸಾವು

    Ahmedabad Plane Crash | ಮೊದಲ ಬಾರಿಗೆ ಪತಿ ನೋಡಲು ಹೊರಟಿದ್ದ ನವವಿವಾಹಿತೆ ಸಾವು

    – ಆಶೀರ್ವಾದ ಮಗಳೇ ಎಂದು ಸ್ಟೇಟಸ್ ಹಾಕಿದ್ದ ಖುಷ್ಬೂ ತಂದೆ

    ಗಾಂಧೀನಗರ: ವಿವಾಹದ ಬಳಿಕ ಗಂಡನ ಜೊತೆಗಿರಲು ಲಂಡನ್‌ಗೆ ಹೊರಟಿದ್ದ ನವವಿವಾಹಿತೆ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

    ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ಮೃತ ಮಹಿಳೆ.ಇದನ್ನೂ ಓದಿ: ಪತನಗೊಂಡ ವಿಮಾನದಲ್ಲಿ ಮಗಳು, ಮೊಮ್ಮಗ ಇದ್ರು; ಬೆಳಿಗ್ಗೆಯಷ್ಟೇ ಅವಳ ಜೊತೆ ಮಾತಾಡಿದ್ದೆ – ಕಣ್ಣೀರಿಟ್ಟ ತಂದೆ

    ಜನವರಿಯಲ್ಲಿ ಖುಷ್ಬೂ ಹಾಗೂ ಮನ್ಫೂಲ್ ಸಿಂಗ್ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಅವರ ಪತಿ ಲಂಡನ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಹೀಗಾಗಿ ಖುಷ್ಬೂ ಲಂಡನ್‌ನಲ್ಲಿದ್ದ ಗಂಡನನ್ನು ನೋಡಲು ಹೊರಟಿದ್ದರು.

    ಮಗಳನ್ನು ಏರ್‌ಪೋರ್ಟ್‌ಗೆ  ಬಿಟ್ಟು, ಆಕೆಯನ್ನು ಕಳುಹಿಸಿಕೊಟ್ಟಿದ್ದ ತಂದೆ ಮದನ್‌ ಸಿಂಗ್‌ ಅವರು, ಆಶೀರ್ವಾದ ಮಗಳೇ Going to London ಎಂದು ವಾಟ್ಸಪ್ ಸ್ಟೇಟಸ್ ಹಾಕಿ ಕಳುಹಿಸಿಕೊಟ್ಟಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮಗಳು ಸಾವನ್ನಪ್ಪಿದ್ದಾರೆ.

    ಏನಿದು ಘಟನೆ?
    ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿದ್ದ 242 ಪ್ರಯಾಣಿಕ ಪೈಕಿ 241 ಜನ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಮೃತ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ಪರಿಹಾರ: ಟಾಟಾ ಗ್ರೂಪ್‌ ಘೋಷಣೆ

  • ಪತನಗೊಂಡ ವಿಮಾನದಲ್ಲಿ ಮಗಳು, ಮೊಮ್ಮಗ ಇದ್ರು; ಬೆಳಿಗ್ಗೆಯಷ್ಟೇ ಅವಳ ಜೊತೆ ಮಾತಾಡಿದ್ದೆ – ಕಣ್ಣೀರಿಟ್ಟ ತಂದೆ

    ಪತನಗೊಂಡ ವಿಮಾನದಲ್ಲಿ ಮಗಳು, ಮೊಮ್ಮಗ ಇದ್ರು; ಬೆಳಿಗ್ಗೆಯಷ್ಟೇ ಅವಳ ಜೊತೆ ಮಾತಾಡಿದ್ದೆ – ಕಣ್ಣೀರಿಟ್ಟ ತಂದೆ

    ಮುಂಬೈ: ಅಹಮದಾಬಾದ್‌ನಲ್ಲಿ ಪತನಗೊಂಡ ವಿಮಾನದಲ್ಲಿ (Ahmedabad Plane Crash) ಮಗಳು, ಮೊಮ್ಮಗ ಹಾಗೂ ಆಕೆಯ ಅತ್ತೆ ಇದ್ದರೂ ಎಂದು ನಾಗ್ಪುರದ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

    ನಾಗ್ಪುರದ ಮನೀಶ್ ಕಮ್ದಾರ್ ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಮಗಳು, ಅವಳ ಒಂದೂವರೆ ವರ್ಷದ ಮಗ ಮತ್ತು ಅವಳ ಅತ್ತೆ ಅಪಘಾತಕ್ಕೀಡಾದ ವಿಮಾನದಲ್ಲಿದ್ದರು. ಅಹಮದಾಬಾದ್‌ನಲ್ಲಿ ವಾಸವಾಗಿದ್ದ ನನ್ನ ಮಗಳು ಯಶಾ ಮೋಧಾ ಅವಳೊಂದಿಗೆ ಬೆಳಿಗ್ಗೆಯಷ್ಟೇ ಮಾತನಾಡಿದ್ದೆ. ಆದರೆ ವಿಮಾನ ಅಪಘಾತದ ನಂತರ ಅವಳ ಬಗ್ಗೆ ಏನು ಮಾಹಿತಿ ಸಿಕ್ಕಿಲ್ಲ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಟೇಕಾಫ್‌ ಆದ 30 ಸೆಕೆಂಡ್‌ನಲ್ಲಿ ದೊಡ್ಡ ಶಬ್ಧ ಬಂತು – ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು

    ಏರ್ ಇಂಡಿಯಾ (Air India) ಸಂಸ್ಥೆಯಾಗಲಿ ಅಥವಾ ಅಧಿಕಾರಿಗಳಾಗಲಿ ಯಾರೂ ಇಲ್ಲಿಯವರೆಗೆ ನನ್ನನ್ನು ಸಂಪರ್ಕಿಸಿಲ್ಲ. ನಾನು ರಸ್ತೆಯ ಮೂಲಕ ಅಹಮದಾಬಾದ್‌ಗೆ ಹೋಗುತ್ತಿದ್ದೇನೆ. ನನ್ನ ಅಳಿಯ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದಾರೆ. ಅವರಿಗೂ ಯಾವುದೇ ವಿಚಾರ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಬ್ರಿಟನ್‌ ನಿವಾಸಿಯಾಗಿದ್ದ ಅವರ ಮಗಳ ಮಾವ ಒಂದು ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿ ನಿಧನರಾಗಿದ್ದರು. ಅವರ ಕುಟುಂಬವು ಜೂನ್ 22 ರಂದು ಅಲ್ಲಿ ನಿಗದಿಯಾಗಿದ್ದ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿತ್ತು ಎಂದು ತಿಳಿಸಿದ್ದಾರೆ.

    ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಮೂಲಗಳ ಪ್ರಕಾರ 200ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!