Tag: Ahmedabad Plane Crash

  • ವಿಮಾನ ದುರಂತ – ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿದ ಭವಿಕ್

    ವಿಮಾನ ದುರಂತ – ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿದ ಭವಿಕ್

    – ಏರ್‌ಪೋರ್ಟ್‌ಗೆ ಬಂದು ಪತಿಯನ್ನು ಬೀಳ್ಕೊಟ್ಟಿದ್ದ ಪತ್ನಿ

    ಗಾಂಧಿನಗರ: ಏರ್ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) ನವವರವೊಬ್ಬ ಮದುವೆಯಾದ ಎರಡೇ ದಿನಕ್ಕೆ ಮಸಣ ಸೇರಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಗುಜರಾತ್‌ನ (Gujarat) ವಡೋದರಾದ ಭವಿಕ್ ಮಹೇಶ್ವರಿ (26) ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಕೆಲ ವರ್ಷಗಳಿಂದ ಲಂಡನ್‌ನಲ್ಲಿಯೇ ವಾಸವಾಗಿದ್ದ ಭವಿಕ್ ಮಹೇಶ್ವರಿ (Bhavik Maheshwari) ಜೂನ್ 10ರಂದು ರಿಜಿಸ್ಟರ್ ಮದುವೆ ಆಗಿದ್ದರು. ಮುಂದಿನ ಬಾರಿ ಲಂಡನ್‌ನಿಂದ (London) ವಾಪಸ್ ಬಂದಾಗ ಸಂಭ್ರಮಾಚರಣೆಗೆ ನಿರ್ಧರಿಸಿದ್ದರು. ಭವಿಕ್, ಪ್ರತಿ ವರ್ಷ 15 ದಿನ ರಜೆ ಹಾಕಿ ಊರಿಗೆ ಬರುತ್ತಿದ್ದರು. ಈ ಬಾರಿಯೂ ಭವಿಕ್ ಊರಿಗೆ ಬಂದಿದ್ದರು. ಈ ವೇಳೆ ಮನೆಯವರು ಮದುವೆಯಾಗಿಯೇ ಹೋಗು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಮನೆಯವರ ಒತ್ತಾಯಕ್ಕೆ ಮಣಿದು ಭವಿಕ್, 2 ದಿನ ಮುನ್ನ ಸರಳವಾಗಿ ಮದುವೆಯಾಗಿದ್ದರು. ಭವಿಕ್, ಲಂಡನ್‌ಗೆ ತೆರಳಿದ ಮೇಲೆ ಪತ್ನಿಗೆ ವೀಸಾ ರೆಡಿ ಮಾಡಿ ಪತ್ನಿಯನ್ನು ಕರೆಸಿಕೊಳ್ಳಲು ಸಿದ್ಧರಾಗಿದ್ದರು. ಏರ್‌ಪೋರ್ಟ್ಗೆ ಬಂದು ಭವಿಕ್‌ರನ್ನು ಪತ್ನಿ ಬೀಳ್ಕೊಟ್ಟಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ಪತ್ನಿ ವಾಪಸ್ ಮನೆ ತಲುಪುವ ಮುನ್ನವೇ ಪತಿಯ ಸಾವಿನ ಸುದ್ದಿ ಕೇಳಿಬಂದಿದ್ದು, ಭವಿಕ್ ಪತ್ನಿ ಹಾಗೂ ಕುಟುಂಬಸ್ಥರ ಆಕಂದ್ರನ ಮುಗಿಲು ಮುಟ್ಟಿದೆ. ವಿಧಿಯ ಕ್ರೂರ ಆಟಕ್ಕೆ ಆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭವಿಕ್ ದುರಂತ ಅಂತ್ಯಕಂಡಿದ್ದಾರೆ.

  • Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    – ‘ವಿಮಾನ ಮೇಲಕ್ಕೆ ಏರುತ್ತಿಲ್ಲ..’; ಕೊನೆ 5 ಸೆಕೆಂಡ್‌ಗಳ ಆಡಿಯೋ

    ಗಾಂಧೀನಗರ: ಅಹಮದಾಬಾದ್‌ನಲ್ಲಿ ವಿಮಾನ ದುರಂತದ (Ahmedabad Plane Crash) ಕೊನೆ ಕ್ಷಣಗಳಲ್ಲಿ ಏರ್ ಇಂಡಿಯಾ ಪೈಲಟ್ ಸುಮಿತ್ ಸಭರ್ವಾಲ್ (Sumeet Sabharwal) ಅವರು ಎಟಿಸಿಗೆ (ATC) ನೀಡಿದ ಕೊನೆ ಸಂದೇಶದ ಆಡಿಯೋ ಲಭ್ಯವಾಗಿದೆ. ಕೇವಲ 5 ಸೆಕೆಂಡ್‌ಗಳ ಆಡಿಯೋ ಸಿಕ್ಕಿದೆ.

    ‘ಮೇಡೇ… ಒತ್ತಡವಿಲ್ಲ, ಶಕ್ತಿ ಕಳೆದುಕೊಳ್ಳುತ್ತಿದೆ, ಮೇಲೇರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಭರ್ವಾಲ್ ಅವರು ಎಟಿಸಿಗೆ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ, ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಯಿತು. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

    ವಿಮಾನವು 625 ಅಡಿ ಎತ್ತರವನ್ನು ತಲುಪಿದ ಸ್ವಲ್ಪ ಸಮಯದ ನಂತರ ನಿಮಿಷಕ್ಕೆ -475 ಅಡಿ ವೇಗದಲ್ಲಿ ಹಠಾತ್ ಇಳಿಯಲು ಪ್ರಾರಂಭಿಸಿತು. ತಕ್ಷಣವೇ ಪೈಲಟ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ‘ಮೇಡೇ’ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಎಟಿಸಿ ಮಾಡಿದ ಎಲ್ಲಾ ಕರೆಗಳಿಗೆ ಪೈಟಲ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

    ಮೇಡೇ ಎಂದರೆ ವಿಮಾನ ತುಂಬಾ ಡೇಂಜರ್‌ನಲ್ಲಿದೆ ಎಂದರ್ಥ. ಜೀವಕ್ಕೆ ಅಪಾಯವಿದೆ ಎಂದು ತುರ್ತು ಪರಿಸ್ಥಿತಿಯನ್ನು ಸೂಚಿಸಲು ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಬಳಸಲಾಗುವ ಅತ್ಯುನ್ನತ ಮಟ್ಟದ ರೇಡಿಯೋ ಸಂಕೇತವಾಗಿದೆ. ಇದು ತಕ್ಷಣದ ಸಹಾಯದ ಅಗತ್ಯವಿದೆ ಎಂದು ಸೂಚಿಸುತ್ತದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    ‘ಮೇಡೇ’ ಎಂಬ ಪದವು ಫ್ರೆಂಚ್ ಪದ ‘ಮೈಡರ್’ನಿಂದ ಬಂದಿದೆ. ‘ನನಗೆ ಸಹಾಯ ಮಾಡಿ’ ಎಂಬುದು ಇದರ ಅರ್ಥ. ತುರ್ತು ಸಂದರ್ಭಗಳಲ್ಲಿ ಸ್ಪಷ್ಟ ಸಂವಹನ ಖಚಿತಪಡಿಸಿಕೊಳ್ಳಲು ಲಂಡನ್‌ನ ಕ್ರಾಯ್ಡನ್ ವಿಮಾನ ನಿಲ್ದಾಣದಲ್ಲಿ ರೇಡಿಯೋ ಅಧಿಕಾರಿಯಾಗಿದ್ದ ಫ್ರೆಡೆರಿಕ್ ಸ್ಟಾನ್ಲಿ ಮಾಕ್‌ಫೋರ್ಡ್ 1920 ರ ದಶಕದ ಆರಂಭದಲ್ಲಿ ಇದನ್ನು ಪರಿಚಯಿಸಿದರು. ನಂತರ ಈ ಪದವು ಪೈಲಟ್‌ಗಳು ಮತ್ತು ನಾವಿಕರಿಗೆ ಅಂತರರಾಷ್ಟ್ರೀಯ ರೇಡಿಯೋ ಸಂವಹನದ ಪ್ರಮಾಣಿತ ಭಾಗವಾಯಿತು. 1927 ರಲ್ಲಿ ಮೋರ್ಸ್ ಕೋಡ್ ಸಿಗ್ನಲ್ “SOS” ಜೊತೆಗೆ ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು.

  • 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    – ಬೋಯಿಂಗ್ ಮಾರುಕಟ್ಟೆಗೆ ಬಹುದೊಡ್ಡ ಆರ್ಥಿಕ ಹೊಡೆತ ಸಾಧ್ಯತೆ!

    ಅಹಮದಾಬಾದ್: ಬೋಯಿಂಗ್‌ನ 787-ಡ್ರೀಮ್ ಲೈನರ್ (Dreamliner 787) ಮಾಡೆಲ್ ಅತ್ಯಂತ ವಿಶ್ವಾಸಾರ್ಹದ ಜೊತೆಗೆ ಇಂಧನ ದಕ್ಷತೆ, ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. 14 ವರ್ಷಗಳಲ್ಲಿ ಸುಮಾರು 1 ಸಾವಿರ ಡ್ರೀಮ್ ಲೈನರ್ ವಿಮಾನಗಳನ್ನ ಮಾರಾಟ ಮಾಡುವ ಮೂಲಕ ಬೋಯಿಂಗ್ ದಾಖಲೆ ಬರೆದಿದೆ.

    ಸಾರ್ವಕಾಲಿಕ ಅತ್ಯುತ್ತಮ ಮಾರಾಟ ಕಂಡ ವೈಡ್-ಬಾಡಿ ಪ್ಯಾಸೆಂಜರ್ ವಿಮಾನ ಡ್ರೀಮ್ ಲೈನರ್ 100 ಕೋಟಿಗೂ ಹೆಚ್ಚು ಪ್ರಯಾಣಿಕರನ್ನ ಸಾಗಿಸಿದ ವಿಮಾನ ಎಂಬ ಬ್ರ‍್ಯಾಂಡ್ ಅನ್ನು ಅಲ್ಪಾವಧಿಯಲ್ಲಿಯೇ ಪಡೆದಿತ್ತು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಈ ಹಿಂದೆ ಸುರಕ್ಷತೆಯ ಕುರಿತು ಬೋಯಿಂಗ್ (Boeing) ಕಂಪನಿಗೆ ಹಲವು ಸವಾಲುಗಳು ಎದುರಾಗಿದ್ದವು. ಹಲವು ಆರೋಪಗಳನ್ನ ಎದುರಿಸಿದ್ದ ಬೋಯಿಂಗ್‌ನ ಡ್ರೀಮ್ ಲೈನರ್ ಹಾರಾಟವನ್ನ 3 ತಿಂಗಳ ಕಾಲ ವಿಶ್ವದಾದ್ಯಂತ ನಿಷೇಧಿಸಲಾಗಿತ್ತು. ಆರೋಪ, ಸವಾಲುಗಳನ್ನ ಎದುರಿಸಿ ಮತ್ತೆ ವಿಶ್ವಾಸಾರ್ಹತೆ ಗಳಿಸಿದ್ದ ಬೋಯಿಂಗ್ ಪುನಃ ಆಕಾಶಕ್ಕೆ ಚಿಮ್ಮಿತ್ತು. ಆದ್ರೆ ಈಗ ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    ಡ್ರೀಮ್ ಲೈನರ್ ವಿಮಾನದ ಆಯಸ್ಸು 30 ರಿಂದ 50 ವರ್ಷ ಎನ್ನಲಾಗಿದೆ. 210-250 ಸೀಟ್‌ಗಳೊಂದಿಗೆ 9,800 ಮೈಲುಗಳು ಪ್ರಯಾಣಿಸಬಲ್ಲವು. ಆದ್ರೆ ಅಹಮದಾಬಾದ್‌ನಲ್ಲಿ ಉರುಳಿದ ವಿಮಾನ ಆಯಸ್ಸು ಕೇವಲ 11 ವರ್ಷ. ಈ ಹಿಂದೆ ಸುರಕ್ಷತೆ ವಿಚಾರದಲ್ಲಿ ಎದ್ದ ಆರೋಪ, ಸವಾಲುಗಳನ್ನ ಮೆಟ್ಟಿ ನಿಂತು ವ್ಯಾಪಾರವನ್ನ ವಿಸ್ತರಿಸಿಕೊಳ್ತಿದ್ದ ವೇಳೆಯೇ ಬೋಯಿಂಗ್ ಕಂಪನಿಗೆ ಈ ದುರಂತ ದೊಡ್ಡ ಆರ್ಥಿಕ ಹೊಡೆತ ಕೊಡುವ ಭೀತಿ ಶುರುವಾಗಿದೆ. ಅದೇನೇ ಇರಲಿ ಅತಿ ಸುರಕ್ಷತೆಯ ವಿಮಾನ ಎಂದು ಹೇಳಿಕೊಂಡಿದ್ದ ವಿಮಾನ ಪತನಕ್ಕೆ (Plane Crash) ಸಾಕ್ಷಿಯಾಗಿರೋದು ನಿಜಕ್ಕೂ ದುರಂತವೇ ಸರಿ.

  • Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ನಗುಮೊಗದ ಗಗನಸಖಿ ಮನೀಷಾ ಥಾಪಾ (27) ದುರಂತ ಅಂತ್ಯ ಕಂಡಿದ್ದಾರೆ.

    ಮನೀಷಾ ಥಾಪಾ (Manisha Thapa), ನೇಪಾಳ ಮೂಲದವರಾದರೂ, ಹುಟ್ಟಿ ಬೆಳೆದಿದ್ದೆಲ್ಲಾ ಪಾಟ್ನಾದಲ್ಲಿ. ಮೊದಲು ಇಂಡಿಗೋದಲ್ಲಿ ಗ್ರೌಂಡ್ ಸ್ಟಾಫ್ ಆಗಿ ವೃತ್ತಿಜೀವನ ಆರಂಭಿಸಿದ ಅವರು ಬಳಿಕ ಆಕಾಶ್ ಏರ್, ನಂತರ ಏರ್ ಇಂಡಿಯಾ ಸೇರಿದಲ್ಲಿ ಗಗನಸಖಿಯಾಗಿದ್ದರು. ಏರ್ ಇಂಡಿಯಾ ಸೇರಿದ ಬಳಿಕ ಹೆಚ್ಚಾಗಿ ಲಂಡನ್, ಆಸ್ಟ್ರೇಲಿಯಾ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಏರ್ ಇಂಡಿಯಾ ಗಗನಸಖಿಯಾಗಿದ್ದ (Air Hostess) ಮನೀಷಾ ಸದಾ ಹಸನ್ಮುಖಿಯಾಗಿದ್ದರು. ಮನೀಷಾ ಕೋಪ ಮಾಡ್ಕೊಂಡಿದ್ದನ್ನು ನೋಡೇ ಇಲ್ಲ. ಎಲ್ಲದಕ್ಕೂ ನಗುವಿನ ಮೂಲಕವೇ ಉತ್ತರಿಸುತ್ತಿದ್ದಳು. ಅಲ್ಲದೇ ಕಲಿಕೆಯಲ್ಲಿಯೂ ಸದಾ ಮುಂದಿದ್ದರು ಎಂದು ಅವರ ಸ್ನೇಹಿತರು ಆಕೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಇದೀಗ ಮನೀಷಾ ಸಾವಿನ ವಿಚಾರ ಕೇಳಿ, ಆಕೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ವೈದ್ಯರ ಆರೈಕೆಯಲ್ಲಿದ್ದಾರೆ. ಸದಾ ಆಗಸದಲ್ಲಿ ಹಾರಬೇಕೆಂದು ಕನಸುಕಂಡಿದ್ದ 10 ಗಗನಸಖಿರು ವಿಮಾನ ದುರಂತದಲ್ಲಿ ಬದುಕು ಅಂತ್ಯಗೊಳಿಸಿರುವುದು ಹೃದಯವಿದ್ರಾಕ ಸಂಗತಿಯಾಗಿದೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಏನಿದು ಘಟನೆ?
    ಅಹಮದಾಬಾದ್ (Ahmedabad) ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.

  • ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ ಏರ್‌ ಇಂಡಿಯಾ (Air India) ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.

    ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್‌ ಹಾಗೂ ಸಿಬ್ಬಂದಿ, ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಜನರು ಸೇರಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು.

    ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನದಲ್ಲಿದ್ದ ಎರಡು ಬ್ಲ್ಯಾಕ್‌ಬಾಕ್ಸ್‌ಗಳ ಪೈಕಿ ಒಂದು ಪತ್ತೆಯಾಗಿದೆ. ಅದನ್ನು ಅಧಿಕಾರಿಗಳ ತಂಡ ಕೊಂಡೊಯ್ದಿದೆ. ಮತ್ತೊಂದು ಬ್ಲ್ಯಾಕ್‌ಬಾಕ್ಸ್‌ಗಾಗಿ ಹುಡುಕಾಟ ನಡೆದಿದೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಅಪಘಾತ ಸಂಭವಿಸಿದ ಮಾರನೇ ದಿನ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

  • ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಅಹಮದಾಬಾದ್: ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಮಾನ ದುರಂತ (Ahmedabad Plane Crash) ನಡೆದೋಗಿದೆ. ಪ್ರಯಾಣಿಕರು, ಸ್ಥಳೀಯರು ಸೇರಿ 260ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಅಸಲಿ ಕಾರಣ ಏನು ಎಂಬುದು ಇಂದು ಅಥವಾ ನಾಳೆ ಗೊತ್ತಾಗುವ ಸಾಧ್ಯತೆಯಿದೆ.

    ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ವಿಮಾನ ಪತನ ದುರಂತದ ತನಿಖೆ ಚುರುಕುಗೊಂಡಿದೆ. ಟೇಕಾಫ್ ಆದ 25 ಸೆಕೆಂಡ್‌ಗಳಲ್ಲಿ ಪತನಗೊಂಡ ಜಾಗದಲ್ಲೀಗ ಬ್ಲ್ಯಾಕ್‌ಬಾಕ್ಸ್ (Black Box) ಹಾಗೂ ಡಿವಿಆರ್ ಪತ್ತೆಯಾಗಿದ್ದು, ದುರಂತಕ್ಕೆ ಅಸಲಿ ಕಾರಣ ಗೊತ್ತಾಗಲಿದೆ. ಬ್ಲ್ಯಾಕ್‌ಬಾಕ್ಸ್ ಸಿಕ್ಕ 48 ಘಂಟೆಗಳಲ್ಲಿಯೇ ರಿಪೋರ್ಟ್ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

    ಬ್ಲ್ಯಾಕ್‌ಬಾಕ್ಸ್‌ನಲ್ಲಿ ಎರಡು ವಿಧ ಇರುತ್ತದೆ. ಒಂದು ಕಾಕ್ ಪಿಟ್‌ನಲ್ಲಿರುವ ಬ್ಲ್ಯಾಕ್‌ಬಾಕ್ಸ್. ಇನ್ನೊಂದು ಡೆಟಾ ರೆಕಾರ್ಡ್ ಬಾಕ್ಸ್. ಒಂದು ಕಾಕ್ ಪಿಟ್‌ನಲ್ಲಿ ಎಟಿಸಿ, ಪೈಲಟ್‌ನೊಂದಿಗಿನ ಸಂಭಾಷಣೆಯ ಆಡಿಯೋ ರೆಕಾರ್ಡ್ ಆಗಿರುತ್ತದೆ. ಮತ್ತೊಂದು ಫ್ಲೈಟ್ ಡೆಟಾ ರೆಕಾರ್ಡರ್. ಇದರಲ್ಲಿ ಇಂಜಿನ್‌ನ ಕ್ಷಮತೆ, ವೇಗ, ಎತ್ತರ ಇತರೆ ತಾಂತ್ರಿಕ ಸಮಸ್ಯೆಗಳು ಏನೇ ಇದ್ದರೂ ಫ್ಲೈಟ್ ಡೆಟಾ ರೆಕಾರ್ಡರ್‌ನಲ್ಲಿ ಸೆರೆಯಾಗಿರುತ್ತದೆ. ಈ ಬ್ಲ್ಯಾಕ್ ಬಾಕ್ಸ್ 1 ಸಾವಿರ ಡಿಗ್ರಿ ಉಷ್ಣಾಂಶವಿದ್ದರೂ ಇದಕ್ಕೆ ಹಾನಿಯಾಗಲ್ಲ. ಸಮುದ್ರದ ಆಳಕ್ಕೆ ಬಿದ್ದರೂ 30 ದಿನಗಳವರೆಗೆ ಏನು ಹಾನಿಯಾಗಲಾರದ ಹಾಗೆ ವಿನ್ಯಾಸ ಮಾಡಿರಲಾಗುತ್ತದೆ. ಇದನ್ನೂ ಓದಿ: ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

    ಬ್ಲ್ಯಾಕ್ ಬಾಕ್ಸ್‌ಗೆ ಅತಿಯಾದ ಹೊಡೆತ, ಉಷ್ಣಾಂಶವಿದ್ದರೆ ಸೆನ್ಸಾರ್, ಚಿಪ್, ಕೇಬಲ್ ಇತರೆ ಎಲೆಕ್ಟ್ರಿಕ್ ಸಾಧನಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಹಾನಿಯಾದರೂ ಅವುಗಳನ್ನು ಮರು ಜೋಡಿಸಿ ಡೇಟಾವನ್ನ ಪಡೆಯಬಹುದು. ಡಿಜಿಸಿಎ ಕೂಡ ತನಿಖೆಯನ್ನು ಚುರುಕುಗೊಳಿಸಿದ್ದು, ಇನ್ನೆರೆಡು ದಿನದಲ್ಲಿ ಈ ಅತಿದೊಡ್ಡ ದುರಂತಕ್ಕೆ ಕಾರಣ ಸಿಗಲಿದೆ. ಇದನ್ನೂ ಓದಿ: ಬೆಳಗಾವಿ | ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ – ಚಾಲಕ ದುರ್ಮರಣ

  • Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ

    Plane Crash | ಟಾಟಾ ಗ್ರೂಪ್ ಇತಿಹಾಸದ ಕರಾಳ ದಿನಗಳಲ್ಲಿ ಇದೂ ಒಂದು – ಸಂಸ್ಥೆಯ ಅಧ್ಯಕ್ಷರಿಂದ ಭಾವುಕ ಪತ್ರ

    ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಘೋರ ವಿಮಾನ ದುರಂತ (Ahmedabad Plane Crash), ಟಾಟಾ ಗ್ರೂಪ್‌ (Tata Group) ಇತಿಹಾಸದ ಕರಾಳ ದಿನಗಳಲ್ಲಿ ಇದು ಸಹ ಒಂದು ಎಂದು ಸಂಸ್ಥೆಯ ಅಧ್ಯಕ್ಷ ಎನ್.ಚಂದ್ರಶೇಖರನ್ ತಮ್ಮ ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ವಿಮಾನ ದುರಂತ ಸಂಭವಿಸಿದೆ. ಈಗ ಮೃತಪಟ್ಟವರ ಕುಟುಂಬಸ್ಥರಿಗೆ ನಮ್ಮ ಮಾತುಗಳು ಸಮಾಧಾನ ನೀಡುವುದಿಲ್ಲ. ಆದರೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಜನರ ಜೊತೆ ಹಾಗೂ ಅವರ ಕುಟುಂಬದವರೊಂದಿಗೆ ನಾವು ಇರುತ್ತೇವೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

    ವಿಮಾನ ಅಪಘಾತದ ತನಿಖೆಗೆ ನಮ್ಮ ದೇಶದ ತನಿಖಾ ತಂಡಗಳು ಸೇರಿದಂತೆ, ಬ್ರಿಟನ್ ಮತ್ತು ಅಮೆರಿಕದ ತನಿಖಾ ತಂಡಗಳು ಅಹಮದಾಬಾದ್‌ಗೆ ಬಂದಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಂತೆ, ನಾವು ಸಹ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಕಾಯುತ್ತಿದ್ದೇವೆ. ತನಿಖಾ ತಂಡಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ನೊಂದ ಕುಟುಂಬಗಳು ಮತ್ತು ಪೈಲಟ್‌ ಮತ್ತು ಸಿಬ್ಬಂದಿಗೆ ನಮ್ಮ ಸಂಸ್ಥೆ ಋಣಿಯಾಗಿದೆ. ಟಾಟಾ ಗ್ರೂಪ್ ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ.

    ಅಪಘಾತಕ್ಕೆ ಕಾರಣ ಹುಡುಕುವುದು ಮಾನವನ ಪ್ರವೃತ್ತಿಯಾಗಿದೆ. ನಮ್ಮ ಸುತ್ತಲೂ ಸಾಕಷ್ಟು ಊಹಾಪೋಹಗಳಿವೆ. ಅದರಲ್ಲಿ ಕೆಲವು ಸರಿಯಾಗಿರಬಹುದು, ಕೆಲವು ತಪ್ಪಾಗಿರಲೂಬಹುದು. ತನಿಖೆಯ ಬಳಿಕ ನಿಜಾಂಶ ತಿಳಿಯಲಿದೆ.

    ಟಾಟಾ ಗ್ರೂಪ್ ಜನವರಿ 2022 ರಲ್ಲಿ 2.2 ಬಿಲಿಯನ್ ಡಾಲರ್‌ ಒಪ್ಪಂದದ ಮೂಲಕ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು (Air India) ಖರೀದಿಸಿತ್ತು. ಇದಾದ ಬಳಿಕ ಅದರಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ. ಅದರಲ್ಲಿ ಯಾವುದೇ ರಾಜಿ ಇಲ್ಲ. ನಾವು ನಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯುವುದಿಲ್ಲ. ಈ ನಷ್ಟವನ್ನು ನಾವು ಭರಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

    ಗುರುವಾರ ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ ವಿಮಾನದಲ್ಲಿ 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

  • ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

    ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

    ಅಹಮದಾಬಾದ್: ಲಂಡನ್‌ನಲ್ಲಿರುವ (London) ಮಗಳನ್ನು ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ ಸೇರಿರುವ ದುರಂತ ಕಥೆ ಅಹಮದಾಬಾದ್ ವಿಮಾನ ಅಪಘಾತದಲ್ಲಿ (Ahmedabad Plane Crash) ನಡೆದಿದೆ.

    ಗುಜರಾತ್‌ನ (Gujarat) ವಡೋದರಾದ ಅಂಜು ಶರ್ಮಾ (55) ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅಂಜು ಶರ್ಮಾ, ವಡೋದರಾದಲ್ಲಿರುವ ಮಗ ಮಿಲನ್ ಶರ್ಮಾ ಜೊತೆ ವಾಸವಿದ್ದರು. ಜೂ.12ರಂದು ಅಂಜು ಶರ್ಮಾ ಲಂಡನ್‌ನಲ್ಲಿ ನೆಲೆಸಿದ್ದ ಹಿರಿಯ ಪುತ್ರಿ ನಿಮ್ಮಿ ಶರ್ಮಾಳ ಭೇಟಿ ಹೊರಟ್ಟಿದ್ದರು. 6 ತಿಂಗಳು ಮಗಳೊಂದಿಗೆ ಕಾಲ ಕಳೆಯಲು ಅಂಜು ಶರ್ಮಾ ತುದಿಗಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

    ಮಗಳ ಸೇರುವ ತವಕದಲ್ಲಿದ್ದ ತಾಯಿ ಅಂಜು ಶರ್ಮಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಮ್ಮನ ಮುಖ ನೋಡುವ ತವಕದಲ್ಲಿದ್ದ ಮಗಳಿಗೆ ತಾಯಿಯ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ತಾಯಿಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಮಗಳು ನಿಮ್ಮಿ ಶರ್ಮಾ ಶಾಕ್‌ಗೆ ಒಳಗಾಗಿದ್ದಾರೆ. ಮಗಳ ಸಾವಿನ ವಿಚಾರ ತಿಳಿಯದ ವೃದ್ಧ ದಂಪತಿಯು ಅಂಜು ಶರ್ಮಾ ಅವರ ಬರುವಿಕೆಗೆ ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    ಏನಿದು ಘಟನೆ?
    ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.

  • Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    – ಒಂದೇ ವಾರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳು

    ಅಹಮದಾಬಾದ್: ಒಂದು ವಾರದ ಹಿಂದೆ ಲಂಡನ್‌ನಲ್ಲಿ (London) ಮೃತಪಟ್ಟಿದ್ದ ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಪತಿ ಹಿಂತಿರುಗುವಾಗ ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad Plane Crash) ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ 8 ಮತ್ತು 4 ವರ್ಷದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

    ಭಾರತ ಮೂಲದ ಲಂಡನ್ ಪ್ರಜೆ ಅರ್ಜುನ್ ಮನುಭಾಯಿ ಪಟೋಲಿಯಾ (Arjun Manubhai Patolia) ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಅರ್ಜುನ್ ಅವರ ಪತ್ನಿ ಭಾರತಿಬೆನ್ ಒಂದು ವಾರಗಳ ಹಿಂದೆ ಲಂಡನ್‌ನಲ್ಲಿ ಮೃತಪಟ್ಟಿದ್ದರು. ಭಾರತಿಬೆನ್ ಸಾವನ್ನಪ್ಪುವ ಮೊದಲು ತನ್ನ ಚಿತಾಭಸ್ಮವನ್ನು ತವರು ನೆಲೆದ ಅಮ್ರೇಲಿಯಲ್ಲಿನ ಪೌಲ್ ನದಿಯಲ್ಲಿ ಬಿಡಬೇಕು ಎಂದು ಕೊನೆ ಆಸೆಯನ್ನು ತಿಳಿಸಿದ್ದರು. ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

    ಪತ್ನಿಯ ಕೊನೆ ಆಸೆಯಂತೆ ವಾಡಿಯಾದ ಸಂಬಂಧಿಕರೊಂದಿಗೆ ಸೇರಿ ಅರ್ಜುನ್, ಭಾರತಿಬೆನ್ ಅವರ ಚಿತಾಭಸ್ಮವನ್ನು ಅಮ್ರೇಲಿಯಲ್ಲಿನ ಪೌಲ್ ನದಿಯಲ್ಲಿ ಬಿಟ್ಟು, ವಿಧಿವಿಧಾನಗಳನ್ನು ಮುಗಿಸಿದ್ದರು. ಬಳಿಕ ಲಂಡನ್‌ನಲ್ಲಿರುವ ಇಬ್ಬರು ಮಕ್ಕಳ ಬಳಿಗೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣುಮಕ್ಕಳು ದುಃಖಿಸಿದ್ದಾರೆ. ಇದನ್ನೂ ಓದಿ: Ahmedabad Plane Crash- ಆಕಾಶದಲ್ಲಿ ಹಾರಾಡುವ ಕನಸು ಕಂಡಿದ್ದ ಗಗನಸಖಿಯ ದುರಂತ ಅಂತ್ಯ

    ಏನಿದು ಪ್ರಕರಣ?
    ಜೂನ್ 12ರಂದು ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ ಎಐ171 ವಿಮಾನ ಮೆಘಾನಿಯ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ. ಈ ಅಪಘಾತದ ಪರಿಣಾಮ ವಿಮಾನದಲ್ಲಿದ್ದ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. 241 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಅದೃಷ್ಟವಶಾತ್ ಓರ್ವ ಪ್ರಯಾಣಿಕ ಬದುಕುಳಿದಿದ್ದಾರೆ.

  • Photo Gallery: ಅಹಮದಾಬಾದ್‌ನಲ್ಲಿ ವಿಮಾನ ದುರಂತ ನಡೆದ ಸ್ಥಳಕ್ಕೆ ಮೋದಿ ಭೇಟಿ

    Photo Gallery: ಅಹಮದಾಬಾದ್‌ನಲ್ಲಿ ವಿಮಾನ ದುರಂತ ನಡೆದ ಸ್ಥಳಕ್ಕೆ ಮೋದಿ ಭೇಟಿ

    ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನಗೊಂಡು 241 ಮಂದಿ ಮೃತಪಟ್ಟಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟರು. ನಂತರ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.