Tag: Ahimsa Chetan

  • ಸಂಜು ವೆಡ್ಸ್ ಗೀತಾ 2: ಅಹಿಂಸಾ ಚೇತನ್ ಪಾತ್ರವೇನು?

    ಸಂಜು ವೆಡ್ಸ್ ಗೀತಾ 2: ಅಹಿಂಸಾ ಚೇತನ್ ಪಾತ್ರವೇನು?

    ದಿನಗಳು ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿರುವ ಅಹಿಂಸಾ ಚೇತನ್ (Ahimsa Chetan), ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಮತ್ತೆ ಅವರನ್ನು ಚಿತ್ರರಂಗಕ್ಕೆ ಕರೆತರುವ ಕೆಲಸಕ್ಕೆ ಮುಂದಾಗಿದ್ದಾರೆ ನಿರ್ದೇಶಕ ನಾಗಶೇಖರ್. ಇವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಚೇತನ್ ನಟಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಂಜು ವೆಡ್ಸ್ ಗೀತಾ 2 ತ್ರಿಕೋನ ಪ್ರೇಮಕಥೆಯನ್ನು ಹೊಂದಿದ್ದು, ನಾಯಕನಾಗಿ ಶ್ರೀನಗರ ಕಿಟ್ಟಿ ಮತ್ತು ನಾಯಕಿಯಾಗಿ ರಚಿತಾ ರಾಮ್ ಈಗಾಗಲೇ ಆಯ್ಕೆಯಾಗಿದ್ದಾರೆ. ಈ ಜೋಡಿ ನಡುವೆ ಮತ್ತೊಂದು ಮಹತ್ವದ ಪಾತ್ರವಿದ್ದು, ಅದನ್ನು ಚೇತನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಚೇತನ್ ಅವರ ಜೊತೆ ನಾಗಶೇಖರ್ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರಂತೆ.

    ಹನ್ನೆರೆಡು ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ (Sanju Weds Geetha 2) ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-2 ಮೂಡಿಬರುತ್ತಿದೆ. ಬಹುತೇಕ ಮೊದಲ ಭಾಗದಲ್ಲಿದ್ದ  ಕಲಾವಿದರೇ ಈ ಚಿತ್ರದಲ್ಲೂ ಇರುತ್ತಾರೆ. ಫಾರ್ ಎ ಛೇಂಜ್  ರಮ್ಯಾ ಬದಲು ಇಲ್ಲಿ ರಕ್ಷಿತಾ ರಾಮ್  ನಾಯಕಿಯಾಗಿದ್ದಾರೆ. ಅದಕ್ಕೆ ನಾಗಶೇಖರ್ ಕಾರಣವನ್ನೂ ನೀಡಿದರು. ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ಸಂಜು ವೆಡ್ಸ್ ಗೀತಾ-2 ಚಿತ್ರದ ಮುಹೂರ್ತ (Muhurta) ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ಆರಂಭದಲ್ಲಿ ಹಿಂದಿನ ಚಿತ್ರದ  ಎವಿ ಪ್ರದರ್ಶನ ಹಾಗೂ ಆ ಚಿತ್ರದ ಟೈಟಲ್ ಟ್ರ್ಯಾಕ್ ಗೆ ನೃತ್ಯ ಮಾಡುವ ಮೂಲಕ ಮೆಲುಕು ಹಾಕಲಾಯಿತು.

    ನಾಗಶೇಖರ್ (Nagasekhar) ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ವರ್ಣರಂಜಿತವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗಶೇಖರ್, ನಾನು ಸೀರಿಯಲ್ ಗಳಲ್ಲಿ ಆಕ್ಟ್ ಮಾಡ್ತಿರುವಾಗ, ಕಪ್ಪಗಿರುವ ಈ ಹುಡುಗನನ್ನು ಕರೆದು ತಮ್ಮ ನಿರ್ದೇಶನದ ನಿನಗಾಗಿ ಚಿತ್ರದಲ್ಲಿ ಅವಕಾಶ ನೀಡಿದವರು  ಎಸ್ ಮಹೇಂದರ್,  ಅವರು ಇಂದು ನಮ್ಮ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು  ತುಂಬಾ ಖುಷಿಯಾಗಿದೆ.  ಈ ಸಿನಿಮಾವನ್ನು  5 ವರ್ಷಗಳ ಹಿಂದೆಯೇ  ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋಗಿದ್ದರಿಂದ ಆಗಲಿಲ್ಲ.  ರಮ್ಯ ಅವರು ಈ ಚಿತ್ರದಲ್ಲೂ ಆಕ್ಟ್ ಮಾಡಬೇಕಿತ್ತು. ಅದರೆ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್, ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅವರು ಹೆಸರು‌ ಮಾಡಿದವರು. ನನ್ನ ಚಿತ್ರದಲ್ಲಿ ಈ‌ ಪಾತ್ರಕ್ಕೆ ಜೀವ ತುಂಬುವುದೇ ಅಭಿನಯ. ಇನ್ನು ಹಿಂದಿನ ಚಿತ್ರದಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಚಿತ್ರದಲ್ಲಿ ಕಥೆಯ ಜೊತೆ ಹಾಡುಗಳಿಗೂ  ಜಾಸ್ತಿ ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಅವರಿಗೆ ರಾತ್ರಿ 12 ಗಂಟೆಗೆ ಕಾಲ್ ಮಾಡಿ ಹಾಡುಗಳ ಸನ್ನಿವೇಶ ವಿವರಿಸಿದ್ದೇನೆ. ಅವರು ಸೂಪರ್ ಸಾಂಗ್ಸ್ ಕೊಟ್ಟಿದ್ದಾರೆ. ಅದ್ಭುತವಾದ 5 ಹಾಡುಗಳು ಮೂಡಿಬಂದಿವೆ. ಇಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದರು.

     

    ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಿತಿ ಕವಿರಾಜ್   ಚಿತ್ರತಂಡದಲ್ಲಿ ಇರಲಿದ್ದಾರೆ.

  • ಜೈಲುವಾಸಕ್ಕೆ ಅಮೆರಿಕಾದಲ್ಲೇ ತಾಲೀಮು ಮಾಡಿದ್ದರಂತೆ ನಟ ಚೇತನ್

    ಜೈಲುವಾಸಕ್ಕೆ ಅಮೆರಿಕಾದಲ್ಲೇ ತಾಲೀಮು ಮಾಡಿದ್ದರಂತೆ ನಟ ಚೇತನ್

    ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದ ನಂತರ ನಟ, ಸಾಮಾಜಿಕ ಹೋರಾಟಗಾರ ನಟ ಚೇತನ್ ಮತ್ತೆ ವ್ಯವಸ್ಥೆಯ ವಿರುದ್ಧ ಗುಡುಗುತ್ತಿದ್ದಾರೆ. ಈ ನಡುವೆ ಅವರು ಜೈಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಜೈಲಿನಲ್ಲಿರುವಾಗ ಎದೆಗುಂದಲಿಲ್ಲ. ಕಾರಣ ಅಮೆರಿಕಾದಲ್ಲಿಯೇ ಅದನ್ನು ಅಭ್ಯಾಸ ಮಾಡಿದ್ದೆ ಎಂದು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, 2003ರಲ್ಲಿ ಬೇಸಿಗೆಯ ಸಮಯದಲ್ಲಿ ವಾಷಿಂಗ್ಟನ್, ಡಿಸಿ, ಯು.ಎಸ್.ಎ ನಲ್ಲಿ ಸಂಬಳವಿಲ್ಲದ ಕಾನೂನಿನ ತರಬೇತಿ ವಿದ್ಯಾರ್ಥಿಯಾಗಿದ್ದಾಗ 3 ತಿಂಗಳ ಕಾಲ ನೆಲದ ಮೇಲೆ ಮಲಗುತ್ತಿದ್ದೆ. ನನ್ನ ಕಾಲೇಜಿನ ಸಹಪಾಠಿಗಳು ಇದರ ಬಗ್ಗೆ ಕೇಳಿದಾಗ ‘ಶಿಕ್ಷಣ ಮುಗಿದ ನಂತರ ಕರ್ನಾಟಕದಲ್ಲಿ ನಾನು ಹೋರಾಟಗಾರನಾದಾಗ ಖಂಡಿತವಾಗಿಯೂ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಈಗಲೇ ಸಿದ್ಧವಾಗಿರುವುದು ಒಳ್ಳೆಯದು ಎಂದು ಹೇಳಿದ್ದೆ. ಎರಡು ದಶಕಗಳ ಹಿಂದಿನ ಅಭ್ಯಾಸ ನನ್ನ ಸೆರೆವಾಸದ ವಾರದಲ್ಲಿ ಉಪಯೋಗಕ್ಕೆ ಬಂತು’ ಎಂದು ಬರೆದಿದ್ದಾರೆ.

    ಅಲ್ಲದೇ ಚೇತನ್ ಗಡಿಪಾರು ಆಗುತ್ತಾರೆ ಎನ್ನುವ ವಿಷಯವೂ ಹರಿದಾಡುತ್ತಿತ್ತು. ಈ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಅದೆಲ್ಲವೂ ಸುಳ್ಳು ಸುದ್ದಿ. ಅಂಥದ್ದು ಏನೂ ಆಗಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದೂ ಅವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟವಂತೂ ನಿಲ್ಲುವುದಿಲ್ಲ. ನಿರಂತರವಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಲೇ ಇರುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಹೋರಾಟದ ಜತೆ ಜತೆಗೆ ಹಲವು ಸಿನಿಮಾಗಳಲ್ಲೂ ಚೇತನ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಇವರ ನಟನೆಯ ಹೊಸ ಸಿನಿಮಾ ಚಿತ್ರೀಕರಣವಾಗುತ್ತಿದೆ. ಅಲ್ಲದೇ, ಒಂದು ಸಿನಿಮಾ ಬಿಡುಗಡೆಗೆ ಸಿದ್ಧವಿದೆ.