Tag: ahemadabad

  • ಬುಲೆಟ್ ರೈಲು | ನಿರ್ಮಾಣ ಹಂತದ ಸಬರಮತಿ ನಿಲ್ದಾಣದಲ್ಲಿ ಬೆಂಕಿ ಅವಘಡ

    ಬುಲೆಟ್ ರೈಲು | ನಿರ್ಮಾಣ ಹಂತದ ಸಬರಮತಿ ನಿಲ್ದಾಣದಲ್ಲಿ ಬೆಂಕಿ ಅವಘಡ

    ಗಾಂಧೀನಗರ: ಗುಜರಾತ್‌ನ (Gujarat) ಅಹಮದಾಬಾದ್ (Ahamadabad) ಜಿಲ್ಲೆಯ ನಿರ್ಮಾಣ ಹಂತದ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

    508 ಕಿ.ಮೀ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಭಾಗವಾಗಿರುವ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ 6:30ರ ಸುಮಾರಿಗೆ ಈ ಅವಘಡ ಉಂಟಾಗಿದೆ. ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಒಟ್ಟು 13 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ಈ ಕುರಿತು ನ್ಯಾಷನಲ್ ಹೈ-ಸ್ಪೀಡ್ ಟ್ರೈನ್‌ ಕಾರ್ಪೊರೇಷನ್ ಲಿಮಿಟೆಡ್ ಹೇಳಿಕೆ ಬಿಡುಗಡೆ ಮಾಡಿದ್ದು, ರೈಲು ನಿಲ್ದಾಣದ ಛಾವಣಿಯೊಂದರಲ್ಲಿ ಶಟರಿಂಗ್ ಕೆಲಸದಿಂದ ಬಂದ ವೆಲ್ಡಿಂಗ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಉಲ್ಲೇಖಿಸಿದೆ.

    ಸದ್ಯ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

    ಈ ಬುಲೆಟ್ ರೈಲು ಯೋಜನೆಯಲ್ಲಿ ಗುಜರಾತ್ (352 ಕಿ.ಮೀ) ಮತ್ತು ಮಹಾರಾಷ್ಟ್ರ (156 ಕಿ.ಮೀ) ರಾಜ್ಯಗಳ ಜೊತೆಗೆ ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್/ನಾಡಿಯಾಡ್, ಅಹಮದಾಬಾದ್ ಮತ್ತು ಸಬರಮತಿಯಲ್ಲಿ ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್- ಮೆಟ್ರೋ ದರ 46% ಏರಿಕೆ, ನಾಳೆಯಿಂದಲೇ ಜಾರಿ ಸಾಧ್ಯತೆ

  • ಮೂರನೇ ಮಗು ಜನಿಸಿದ್ದಕ್ಕೆ ಇಬ್ಬರು ಬಿಜೆಪಿ ಕೌನ್ಸಿಲರ್‌ಗಳು ಅನರ್ಹ!

    ಮೂರನೇ ಮಗು ಜನಿಸಿದ್ದಕ್ಕೆ ಇಬ್ಬರು ಬಿಜೆಪಿ ಕೌನ್ಸಿಲರ್‌ಗಳು ಅನರ್ಹ!

    ಗಾಂಧಿನಗರ:‌ ಮೂರನೇ ಮಗು ಜನಿಸಿದ್ದಕ್ಕೆ ಗುಜರಾತ್‌ನ (Gujrat) ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಲಾಗಿದೆ.

    ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅವರೇ ಅನರ್ಹಗೊಂಡ ಬಿಜೆಪಿ ಸದಸ್ಯರು. ಗುಜರಾತ್ ಮುನ್ಸಿಪಾಲಿಟಿ ಆಕ್ಟ್ 1963 (Gujarat Municipalities Act, 1963) ಅನ್ನು ಉಲ್ಲಂಘಿಸಿ ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ಅಮ್ರೇಲಿ ಜಿಲ್ಲಾಧಿಕಾರಿ ಅಜಯ್ ದಹಿಯಾ ಅವರ ಕಚೇರಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಆದರೆ ಕೌನ್ಸಿಲರ್‌ಗಳ ಅನರ್ಹತೆ, ನಗರಪಾಲಿಕೆ ಮೇಲಿನ ಬಿಜೆಪಿ ಹಿಡಿತದ ಮೇಲೆ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಬಿಜೆಪಿಗೆ (BJP) ಅಲ್ಲಿ ಸ್ಪಷ್ಟ ಬಹುಮತ ಇದೆ.

    ಇತ್ತೀಚೆಗೆ ವಜ್ರ ವ್ಯಾಪಾರಿಯೊಬ್ಬರು ಈ ಇಬ್ಬರೂ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು. ಸದ್ಯ ಅಮೇಲಿ ಜಿಲ್ಲಾಧಿಕಾರಿಗೆ ಈ ಇಬ್ಬರ 3ನೇ ಮಗು ಜನಿಸಿದ ಮಾಹಿತಿ ದೊರಕಿದೆ. ಹೀಗಾಗಿ ಇಬ್ಬರನ್ನೂ ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ನಡುವೆ ತಾವು ಸ್ಪರ್ಧಿಸುವಾಗ ತಮಗೆ ಇಬ್ಬರು ಮಕ್ಕಳಿದ್ದರಷ್ಟೇ. ನಾವು ಆಯ್ಕೆಯಾದ ಬಳಿಕ ಮೂರನೇ ಮಗು ಹುಟ್ಟಿದೆ ಎಂದು ಈ ಇಬ್ಬರು ಸಮಜಾಯಿಸಿ ನೀಡಿದ್ದಾರೆ. ಆದರೆ ಅವರ ವಾದ ತಳ್ಳಿ ಹಾಕಿದ ಜಿಲ್ಲಾಧಿಕಾರಿ, ನಿಯಮದಂತೆ ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗುತ್ತಾರೆ ಎಂದು ಹೇಳಿ ಇಬ್ಬರ ಸದಸ್ಯತ್ವವನ್ನೂ ರದ್ದು ಮಾಡಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

    2005-06 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು (Narendra Modi) 1963ರ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ ಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗಲಿದ್ದಾರೆ ಎಂಬ ನಿಯಮ ಸೇರಿಸಿದ್ದರು.

  • ದೆಹಲಿ ಬಳಿಕ ಅಹಮದಾಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ

    ದೆಹಲಿ ಬಳಿಕ ಅಹಮದಾಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ

    ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) ಮೂರನೇ ಹಂತದ ಮತದಾನದ ಮುನ್ನಾದಿನ ಗುಜರಾತ್‌ ಅಹಮದಾಬಾದ್ ನಲ್ಲಿರುವ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮಾಡಲಾಗಿದೆ. ಇತ್ತಿಚೇಗೆ ದೆಹಲಿಯಲ್ಲಿ ಬಂದ ಬೆದರಿಕೆ ರೀತಿಯಲ್ಲಿ ಹಲವಾರು ಶಾಲೆಗಳಿಗೆ ಏಕಕಾಲದಲ್ಲಿ ಬೆದರಿಕೆ ಹಾಕಲಾಗಿದೆ.

    ಅಹಮದಾಬಾದ್ ನ ಭೋಪಾಲ್ ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಆನಂದ್ ನಿಕೇತನ್ ವಸ್ತ್ರಾಪುರದಲ್ಲಿರುವ ಏಷ್ಯಾ ಇಂಗ್ಲಿಷ್ ಸ್ಕೂಲ್, ಘಟ್ಲೋಡಿಯಾದಲ್ಲಿರುವ ಕ್ಯಾಲೋರೆಕ್ಸ್ ಶಾಲೆ, ಅಮೃತ ವಿದ್ಯಾಲಯ ಮತ್ತು ಚಂದಖೇಡದಲ್ಲಿರುವ ನ್ಯೂ ನೋಬಲ್ ಸ್ಕೂಲ್ ಮತ್ತು ಒಎನ್‌ಜಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ‌.

    ಇಮೇಲ್ ಸ್ವೀಕರಿಸಿದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿವೆ. ಬೇಸಿಗೆ ರಜೆ ಹಿನ್ನೆಲೆ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಮಾಹಿತಿ ಪಡೆದ ಪೊಲೀಸ್ ತಂಡಗಳು ಬಾಂಬ್ ಸ್ಕ್ವಾಡ್‌ಗಳೊಂದಿಗೆ ಶಾಲೆಗಳಿಗೆ ಬಂದು ಪರಿಶೀಲನೆ ನಡೆಸಿದವು. ಪ್ರಾಥಮಿಕ ಮಾಹಿತಿ ಪ್ರಕಾರ, ಬೆದರಿಕೆ ಇ-ಮೇಲ್‌ಗಳು ಭಾರತದ ಹೊರಗಿನ ಡೊಮೇನ್‌ನಿಂದ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

    ಬೆದರಿಕೆ ಬಂದ ಶಾಲೆಗಳನ್ನು ಪರಿಶೀಲಿಸಿದೆ, ಎಲ್ಲವೂ ಸುರಕ್ಷಿತ ಮತ್ತು ಸುಭದ್ರವಾಗಿದೆ. ನಮ್ಮ ಪೊಲೀಸರು, ಆಡಳಿತ ಮತ್ತು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಗಾಬರಿಯಾಗುವಂತದ್ದು ಏನೂ ಇಲ್ಲ ಎಂದು ಬಾಂಬ್ ಸ್ಕ್ವಾಡ್ ಅಧಿಕಾರಿ ಬಿ. ಯಾದವ್ ಹೇಳಿದ್ದಾರೆ. ಕಳೆದ ವಾರ ದೆಹಲಿ-ಎನ್‌ಸಿಆರ್‌ನಾದ್ಯಂತ 150 ಕ್ಕೂ ಹೆಚ್ಚು ಶಾಲೆಗಳು ಮತ್ತು ಲಕ್ನೋದ ಒಂದು ಶಾಲೆಗಳಿಗೆ ರಷ್ಯಾದಿಂದ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು.

  • Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

    Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

    ಅಹಮದಾಬಾದ್‌:‌ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರದ (Ram Mandir in Uttar Pradesh’s Ayodhya) ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ಭಾಗಗಳ ಜನರು ಅಯೋಧ್ಯೆಗೆ ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಅಹಮದಾಬಾದ್‌ನ ಸಂಸ್ಥೆಯೊಂದು ದೇಗುಲಕ್ಕೆ ಉಡುಗೊರೆಯಾಗಿ ನೀಡಲೆಂದು ಮೆಗಾ ಡ್ರಮ್ (ದೊಡ್ಡ ನಗಾರಿ) ಅನ್ನು ಸಿದ್ಧಪಡಿಸಿದೆ.

    ಅಖಿಲ ಭಾರತ ದಗ್ಬರ್ ಸಮಾಜ ತಯಾರಿಸಿದ ಈ ವಿಶೇಷ ಡ್ರಮ್ (Mega Drum) ಬರೋಬ್ಬರಿ 450 ಕೆ.ಜಿ ತೂಗುತ್ತದೆ. ಇದನ್ನು 2024 ರ ಜನವರಿ 22 ರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಗೆ ತಲುಪಿಸುವ ಪ್ಲ್ಯಾನ್‌ ಕೂಡ ನಡೆಯುತ್ತಿದೆ. ಈ ಡ್ರಮ್‌ ಅಥವಾ ನಗಾರಿಯನ್ನು ಕೊಂಡೊಯ್ಯಲು ಸಂಸ್ಥೆಯು ಈಗಾಗಲೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದು, ಅದಕ್ಕಾಗಿಯೇ 700 ಕೆ.ಜಿ ತೂಕದ ವಿಶೇಷವಾದ ರಥವೊಂದನ್ನು (Power Steering Chariot) ಕೂಡ ರೆಡಿ ಮಾಡುತ್ತಿದೆ.

    ಈ ಕುರಿತು ದಗ್ಬರ್ ಸಮಾಜದ (Dagbar Samaj) ಪ್ರತಿನಿಧಿ ಅಂಬಾಲಾಲ್ ದಗ್ಬರ್ ಪ್ರತಿಕ್ರಿಯಿಸಿ, ರಾಮ ಮಂದಿರಕ್ಕಾಗಿ ನಿರ್ಮಿಸಲಾಗುತ್ತಿರುವ ಈ ಡ್ರಮ್‌ನಲ್ಲಿ ಕಬ್ಬಿಣದ ತಟ್ಟೆಗಳನ್ನು ಬಳಸಲಾಗಿದೆ. ಹೀಗಾಗಿ ಇದು ಸಾವಿರಾರು ವರ್ಷಗಳ ಕಾಲ ಬಾಳಿಕೆ ಬರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಇದೇ ಸಂಸ್ಥೆಯ ಮತ್ತೋರ್ವ ಸದಸ್ಯ ದೀಪಕ್ ದಗ್ಬರ್ ಮಾತನಾಡಿ, ಈ ಡ್ರಮ್‌ ತಯಾರಿಕೆಯ ಬಹುತೇಕ ಕೆಲಸ ಮುಗಿದಿದ್ದು, ಇನ್ನು ಇದರ ಹೊರ ಭಾಗದಲ್ಲಿ ತಾಮ್ರದ ಫಲಕಗಳನ್ನು ಕೆತ್ತುವ ಪ್ರಕ್ರಿಯೆ ಬಾಕಿ ಉಳಿದಿದ್ದು, ಕೆಲವೇ ದಿನಗಳಲ್ಲಿ ಈ ಕೆಲಸವೂ ಮುಗಿಯುತ್ತದೆ. ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಲೇಪನ ಬಳಕೆ ಮಾಡಲಾಗುತ್ತದೆ. ಒಟ್ಟಾರೆಯಾಗಿ ಈ ಮೆಗಾ ಡ್ರಮ್ ಪೂರ್ಣಗೊಳಿಸಲು ಎರಡೂವರೆ ತಿಂಗಳು ತೆಗೆದುಕೊಂಡಿದ್ದು, ಮುಂದಿನ ವಾರದ ವೇಳೆಗೆ ಡ್ರಮ್‌ ಒಯ್ಯಲು ರಥ ಕೂಡ ಸಿದ್ಧವಾಗಲಿದೆ ಎಂದು ಅವರು ವಿವರಿಸಿದರು.

    ಸದ್ಯ ಅಹಮದಾಬಾದ್‌ನ ದ್ರ್ಯಾಪುರ್‌ನಲ್ಲಿ ಡ್ರಮ್ ಈಗಾಗಲೇ ಆಕರ್ಷಣೆಯ ಬಿಂದುವಾಗಿದೆ. ಜನವರಿ 8 ರಂದು ಅಯೋಧ್ಯೆಗೆ ಕಳುಹಿಸುವ ಮೊದಲು ಡ್ರಮ್ ನೋಡಲು ಸಾವಿರಾರು ಜನ ಮುಗಿಬೀಳುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ದಗ್ಬರ್ ಸಮಾಜವು ಅಯೋಧ್ಯೆಗೆ‌ ತೆಗೆದುಕೊಂಡು ಹೋಗುವಾಗ ವಿವಿಧ ಸ್ಥಳಗಳಲ್ಲಿ ಡ್ರಮ್ ಅನ್ನು ಸ್ವಾಗತಿಸಲು ವಿಶೇಷ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡಲು ಯೋಚಿಸುತ್ತಿದೆ. ಸದ್ಯ ಯೋಜನೆಯಂತೆ ಜನವರಿ 15ರಂದು ಡ್ರಮ್ ಅನ್ನು ರಾಮಮಂದಿರಕ್ಕೆ ಹಸ್ತಾಂತರಿಸಲಾಗುವುದು.

  • ಕಣ್ಣೀರಿಟ್ಟ ಕೊಹ್ಲಿಯನ್ನು ಅಪ್ಪಿ ಸಂತೈಸಿದ ಮ್ಯಾಕ್ಸ್‌ವೆಲ್‌

    ಕಣ್ಣೀರಿಟ್ಟ ಕೊಹ್ಲಿಯನ್ನು ಅಪ್ಪಿ ಸಂತೈಸಿದ ಮ್ಯಾಕ್ಸ್‌ವೆಲ್‌

    ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ವಿಶ್ವಕಪ್ 2023ರ ಫೈನಲ್ (World Cup 2023) ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಆಟಗಾರರು ಕಣ್ಣೀರಾಕಿದ್ದಾರೆ. ಈ ವೇಳೆ ಕಣ್ಣೀರು ಹಾಕುತ್ತಿದ್ದ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್‌ವೆಲ್‌ (Maxwell) ಅಪ್ಪಿ ಸಂತೈಸಿದರು.

    ಬೇಸರದಲ್ಲಿದ್ದ ವಿರಾಟ್ ಕೊಹ್ಲಿಯನ್ನು (Virat Kohli) ಮ್ಯಾಕ್ಸ್‌ವೆಲ್‌ ಬಿಗಿದಪ್ಪಿ ಸಾಂತ್ವ ಹೇಳಿದರಲ್ಲದೇ ಜೆರ್ಸಿಗೆ (Jeresey) ಕೊಹ್ಲಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸದ್ಯ ಕೊಹ್ಲಿಯನ್ನು ಅಪ್ಪಿ ಹಿಡಿದ ಮ್ಯಾಕ್ಸ್ ವೆಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಕೊಹ್ಲಿ, ಮ್ಯಾಕ್ಸ್ ವೆಲ್ ಫೋಟೋವನ್ನು ಐಸಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಜೊತೆಗೆ ಗೌರವ ಮತ್ತು ಅಭಿಮಾನದ ಸಂಕೇತ ಎಂದು ಕ್ಯಾಪ್ಷನ್ ನೀಡಿದೆ. ಸದ್ಯ ಫೋಟೋ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಇತ್ತ ಅನುಷ್ಕಾ ಶರ್ಮಾ (Anushka Sharma) ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತ ಕೆಲವೇ ಕ್ಷಣಗಳಲ್ಲಿ ನಟಿ ಅನುಷ್ಕಾ ಶರ್ಮಾ ಅವರು ಪತಿ ವಿರಾಟ್ ಕೊಹ್ಲಿಗೆ ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಪಂದ್ಯ ಸೋತು ಕಣ್ಣಲ್ಲಿ ನೀರು ತುಂಬಿಕೊಂಡು ಬೇಸರದಲ್ಲಿದ್ದ ಕೊಹ್ಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಸಹ ಪ್ರೀತಿಯ ಅಪ್ಪುಗೆ ನೀಡಿ ಸಮಾಧಾನ ಪಡಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿದೆ.

  • ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಅಹಮ್ಮದಾಬಾದ್: ವಿಶ್ವಕಪ್ 2023 ರಲ್ಲಿ (World Cup 2023) ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ಹೌದು. ಮಿಚೆಲ್ ಟ್ರೋಫಿ (World Cup Trophy) ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಜನ ಖಂಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೇಡ್‌ ಮಾತು

    ಫೋಟೋದಲ್ಲಿ ಮಿಚೆಲ್ ಅವರು ತಮ್ಮ ಎರಡೂ ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲೆ ಇಟ್ಟು ಗೆದ್ದು ಬೀಗಿದ್ದೇವೆ ಎಂಬ ಸಿಂಬಲ್ ತೋರಿಸಿದ್ದಾರೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಯಿತು. ಮಿಚೆಲ್ ವಿಶ್ವಕಪ್‍ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ.

    ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವೆಂಬರ್ 19 ರ ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ (IND Vs AUS) ಆಟವಾಡಿದೆ. ಪಂದ್ಯ ಗೆದ್ದ ಬಳಿ ಆಸ್ಟ್ರೇಲಿಯಾ ತಂಡವು ಹೋಟೆಲ್‍ನಲ್ಲಿ ಆರಾಮವಾಗಿ ಕುಳಿತುಕೊಂಡು ಮಾತನಾಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

    ವಿಶ್ವಕಪ್ ಗೆಲುವಿನ ಹಂಬಲದಲ್ಲಿದ್ದ ಭಾರತ ಕ್ರಿಕೆಟ್ ತಂಡ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.

  • ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

    ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

    ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2023 (World Cup 2023) ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಿದೆ ಎಂದು ಮುಖ್ಯ ಕೋಚ್ ರಾಹುಲ್ ಡ್ರಾವಿಡ್ (Rahul Dravid) ಹೇಳಿದರು.

    ದ್ರಾವಿಡ್ ಅವರ 2 ವರ್ಷಗಳ ಒಪ್ಪಂದವು ಭಾನುವಾರಕ್ಕೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನಿನ್ನೂ ಯಾವುದೇ ರೀತಿಯ ಯೋಚನೆಗಳನ್ನು ಮಾಡಿಲ್ಲ. ಯಾಕಂದರೆ ನನ್ನ ಸಂಪೂರ್ಣ ಗಮನ ಈ ಬಾರಿಯ ಸರಣಿ ಮತ್ತು ಪಂದ್ಯದ ಮೇಲಿತ್ತು. ಭವಿಷ್ಯದ ಬಗ್ಗೆ ಯೋಚನೆ ಮಾಡಲು ಕೂಡ ಸಮಯವಿರಲಿಲ್ಲ. ಹೀಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಒಂದಿಷ್ಟು ಸಮಯ ಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌’

    ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ (Cricket) ಆಟಗಾರರ ಜೊತೆ ಕೆಲಸ ಮಾಡಿದ್ದೇನೆ. ಇದೊಂದು ನನಗೆ ಸಿಕ್ಕಿದ ಉತ್ತಮ ಅವಕಾಶ ಎಂದು ಅವರು ಹೇಳಿದರು. ಮುಂದಿನ ವಿಶ್ವಕಪ್ 4 ವರ್ಷಗಳ ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. 2027ರ ವಿಶ್ವಕಪ್ ಬಗ್ಗೆ ನಾನು ಯೋಚಿಸಿಲ್ಲ. ಅಲ್ಲಿ ಯಾರು ಇರುತ್ತಾರೊ..? ಯಾರು ಅಲ್ಲಿಗೆ ಹೋಗುತ್ತಾರೊ.. ಅದಕ್ಕೆ ಸಾಕಷ್ಟು ಸಮಯವಿದೆ ಎಂದರು. ಇದನ್ನೂ ಓದಿ: World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?

    ಅಸಾಧಾರಣ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ (Rohit Sharma) ಈ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಅವರು ಡ್ರೆಸ್ಸಿಂಗ್ ರೂಮಿನಲ್ಲಿ ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದ್ದಾರೆ. ನಮ್ಮ ಯಾವುದೇ ಸಂಭಾಷಣೆ, ಸಭೆಗೆ ಅವರು ಯಾವಾಗಲೂ ಲಭ್ಯವಿರುತ್ತಿದ್ದರು. ಸಾಕಷ್ಟು ಯೋಜನೆಗಳು, ಸಾಕಷ್ಟು ಕಾರ್ಯ ತಂತ್ರಗಳನ್ನು ರೂಪಿಸಿದ್ದೆವು ಎಂದು ದ್ರಾವಿಡ್ ಹೇಳಿದರು.

    ಒಟ್ಟಿನಲ್ಲಿ ನೂರು ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಮೂರನೇ ಬಾರಿ ವಿಶ್ವಕಪ್‌  ಗೆಲ್ಲುವ ಭಾರತದ (Team India) ಕನಸು ಭಗ್ನಗೊಂಡಿದೆ. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್‌ ಗೆದ್ದು ಸಂಭ್ರಮಿಸಿದೆ. ಈ ಮೂಲಕ 6 ಬಾರಿ ವಿಶ್ವಕಪ್‌ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ (Australia)  ಹೊರಹೊಮ್ಮಿದೆ.

  • World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?

    World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?

    ಅಹಮದಾಬಾದ್: ಭಾರತದ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಅಹಮದಬಾದ್‍ನ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟೀಂ ಆಸ್ಟ್ರೇಲಿಯಾ (IND Vs AUS) ವಿರುದ್ಧ 6 ವಿಕೆಟ್‍ಗಳ ಸೋಲನ್ನು ಕಂಡಿದೆ. 20 ವರ್ಷಗಳ ಸೇಡನ್ನ ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ಆಸ್ಟ್ರೇಲಿಯಾ ತಿವಿದಿದ್ದು ಮತ್ತೆ ಭಾರತ ಫೈನಲ್‍ನಲ್ಲಿ ಮುಗ್ಗರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಎಡವಿದ್ದೆಲ್ಲಿ; ಇಲ್ಲಿದೆ 5 ಕಾರಣ..

    ಗೆಲುವಿಗೆ ಕಾರಣಗಳೇನು..?
    ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆಯಾಗಿದೆ. ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾವನ್ನು ವಿಕೆಟ್‍ನಲ್ಲೇ (Wicket) ಕಟ್ಟಿ ಹಾಕಿದೆ. ಅಲ್ಲದೆ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡೋದು ಕಷ್ಟಕರವಾಗಿದ್ದು, ಸ್ಲೋ ಬ್ಯಾಟಿಂಗ್ ಪಿಚ್ ಆಗಿರೋ ಕಾರಣ ಸ್ಫೋಟಕ ಬ್ಯಾಟಿಂಗ್ ಸಾಧ್ಯವಾಗಲಿಲ್ಲ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    ಎರಡನೇ ಬ್ಯಾಟಿಂಗ್‍ಗೆ (Batting) ಮೊದಲ ಬ್ಯಾಟಿಂಗ್‍ಗಿಂತ ಪಿಚ್ ಉತ್ತಮವಾಗಿತ್ತು. ಡ್ಯೂಪ್ಯಕ್ಟರ್ ಕೂಡ ಟೀಂ ಆಸ್ಟ್ರೇಲಿಯಾಗೆ (Australia) ಸಾಥ್ ನೀಡಿದ್ದು, ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳ ವೈಫಲ್ಯವಾಗಿರುವುದು. ಮಿಡಲ್ ಓವರ್‍ನಲ್ಲಿ ಭಾರತಕ್ಕೆ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ ಇದ್ದದ್ದು, ಆಸ್ಟ್ರೇಲಿಯಾದ ಪ್ರಮುಖ ಮೂರು ವಿಕೆಟ್ ಬೇಗ ಕಳೆದುಕೊಂಡರೂ ದೃತಿಗೇಡದೆ ಇದ್ದದ್ದು ಹಾಗೂ ಭಾರತದ ಬೌಲಿಂಗ್ ಸ್ಟ್ರಾಂಗ್ ಇದ್ರೂ ಪಿಚ್ ಸಪೋರ್ಟ್ ಸಿಗದೇ ಇದ್ದಿದ್ದು ಆಸ್ಟ್ರೇಲಿಯಾ ಗೆಲುವಿಗೆ ಕಾರಣವಾಯಿತು.

    ಒಟ್ಟಿನಲ್ಲಿ ಭಾರತ (Team India) ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.

  • ಬ್ಯಾಟಿಂಗ್ ಮಾಡ್ತಿರೋ ರಾಹುಲ್‌,  ಕೊಹ್ಲಿಯನ್ನು ಹುರಿದುಂಬಿಸ್ತಿರೋ ಅಥಿಯಾ, ಅನುಷ್ಕಾ

    ಬ್ಯಾಟಿಂಗ್ ಮಾಡ್ತಿರೋ ರಾಹುಲ್‌, ಕೊಹ್ಲಿಯನ್ನು ಹುರಿದುಂಬಿಸ್ತಿರೋ ಅಥಿಯಾ, ಅನುಷ್ಕಾ

    ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯುತ್ತಿರುವ ಭಾರತ- ಆಸ್ಟ್ರೇಲಿಯಾ (India- Australia) ನಡುವೆ ಹಣಾಹಣಿ ನಡೆಯುತ್ತಿದೆ. ಪಂದ್ಯ ವೀಕ್ಷಿಸಲು ಸಾವಿರಾರು ಮಂದಿ ಜಮಾಯಿಸಿದ್ದಾರೆ. ಅಂತೆಯೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಕೆ.ಎಲ್ ರಾಹುಲ್ (KL Rahul) ಪತ್ನಿ ಅಥಿಯಾ ಶೆಟ್ಟಿ ಕೂಡ ಆಗಮಿಸಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಸೋತಿದೆ. ಆಸ್ಟ್ರೇಲಿಯಾ (Australia) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಗೆ ಅನುಷ್ಕಾ, ಅಥಿಯಾ ಹುರಿದುಂಬಿಸುತ್ತಿದ್ದಾರೆ. ಅನುಷ್ಕಾ ಹಾಗೂ ಅಥಿಯಾ (Athiya Shetty) ಫೋಟೋಗಳು ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

    ಅನುಷ್ಕಾ ಶರ್ಮಾ ತನ್ನ ತಾಯಿಯೊಂದಿಗೆ ಮೂಲೆಯ ಸೀಟಿನಲ್ಲಿ ಕುಳಿತಿದ್ದಾರೆ. ಬಿಳಿ ಹೂವಿನ ಉಡುಪನ್ನು ಧರಿಸಿರುವ ಅನುಷ್ಕಾ ಸುಂದರವಾಗಿ ಕಾಣಿಸುತ್ತಿದ್ದಾರೆ. ತನ್ನ ತಾಯಿಯೊಂದಿಗೆ ಅನುಷ್ಕಾ ಕುಳಿತಿರುವುದು ಸೋಶಿಯಲ್ ಮೀಡಿಯಾದಲ್ಲಿರುವ ವೀಡಿಯೋದಲ್ಲಿ ಕಂಡುಬಂದಿದೆ. ಅನುಷ್ಕಾ ಜೊತೆ ಅಥಿಯಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.

    1,32,000 ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ಪ್ರಸಿದ್ಧ ಕ್ರೀಡಾಂಗಣದಲ್ಲಿ ಅನುಷ್ಕಾ ಜೊತೆಗೆ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಕೂಡ ಪಂದ್ಯ ವೀಕ್ಷಿಸಲು ಅಹಮದಾಬಾದ್‍ಗೆ ಬಂದಿದ್ದಾರೆ. ಬಾಲಿವುಡ್‍ನ ಹೊರತಾಗಿ, ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದಾರೆ.

  • World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್

    World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್

    ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahemadabad) ನಡೆದ ಒಂದು ಘಟನೆ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದೆ.

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (sachin Tendulakr) ಅವರು ತಮ್ಮ ಸಹಿ ಇರುವ ಜೆರ್ಸಿಯನ್ನು ವಿರಾಟ್ ಕೊಹ್ಲಿಗೆ (Virat Kohli) ಉಡುಗೊರೆಯಾಗಿ ನೀಡಿದ ಪ್ರಸಂಗ ನಡೆಯಿತು. ಜೆರ್ಸಿಯಲ್ಲಿ (Jersey) ಸಹಿ ಜೊತೆಗೆ ವಿರಾಟ್, ನೀವು ನಮ್ಮನ್ನು ಹೆಮ್ಮೆ ಪಡಿಸಿದ್ದೀರಿ ಎಂಬ ಹೃತ್ಪೂರ್ವಕ ಸಂದೇಶ ಕೂಡ ಬರೆಯಲಾಗಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮುನ್ನವೇ ಮಾಸ್ಟರ್ ಬ್ಲಾಸ್ಟರ್ ನ ಈ ಭಾವನಾತ್ಮಕ ನಡೆಗೆ ಕ್ರೀಡಾಭಿಮಾನಿಗಳು ಸಾಕ್ಷಿಯಾದರು.

     

    View this post on Instagram

     

    A post shared by ICC (@icc)

     

    ಈ ಜೆರ್ಸಿಯು ಬಹಲ ಪ್ರಾಮುಖ್ಯತೆ ಪಡೆದಿದೆ. ಇದು 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್ ಮನ್ ತೆಂಡೂಲ್ಕರ್‌ರಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದಾಖಲೆಗಳನ್ನು ಮುರಿದು ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿರುವ ಕೊಹ್ಲಿಯವರೆಗೆ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನೆಯಾದ ಜ್ಯೋತಿಯನ್ನು ಪ್ರತಿನಿಧಿಸುತ್ತದೆ.

    ಸಹಿ ಹಾಕಿದ ಜೆರ್ಸಿ ಕೇವಲ ಸ್ಮರಣಿಕೆಗಳಲ್ಲ; ಇದು ತೆಂಡೂಲ್ಕರ್ ಅವರ ಮನ್ನಣೆಯ ಸಂಕೇತವಾಗಿದೆ. ಭಾರತ ಕ್ರಿಕೆಟ್‍ಗೆ ಕೊಹ್ಲಿಯ ಕೊಡುಗೆಗಳನ್ನು ಮತ್ತು ರಾಷ್ಟ್ರವನ್ನು ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ಗುರುತಿಸುತ್ತದೆ. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

    ಈ ಹಿಂದೆ ಭಾರತ ಹಾಗೂ ಪಾಕಿಸ್ತಾನ (India- Pakistan) ನಡುವಿನ ಪಂದ್ಯ ಮುಗಿದ ನಂತರ ಪಾಕಿಸ್ತಾನ ನಾಯಕ ಬಾಬರ್ ಆಜಮ್ ಅವರನ್ನು ವಿರಾಟ್ ಕೊಹ್ಲಿ  ಮೈದಾನದಲ್ಲೇ ಭೇಟಿ ಮಾಡಿ ಧೈರ್ಯ ತುಂಬಿದ್ದಲ್ಲದೆ ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ 2 ಜೆರ್ಸಿಗಳನ್ನು ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಈ ಫೋಟೋ ‘ಎಕ್ಸ್’ ಖಾತೆ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.