Tag: AgustaWestland Case

  • ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣ – ಇಡಿ ವಿಚಾರಣೆಲ್ಲಿ ಸೋನಿಯಾ ಹೆಸರು ಬಾಯ್ಬಿಟ್ಟ ಕ್ರಿಶ್ಚಿಯನ್?

    ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣ – ಇಡಿ ವಿಚಾರಣೆಲ್ಲಿ ಸೋನಿಯಾ ಹೆಸರು ಬಾಯ್ಬಿಟ್ಟ ಕ್ರಿಶ್ಚಿಯನ್?

    ನವದೆಹಲಿ: ಅಗಸ್ತಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಸಂಬಂಧ ಇಡಿ ತನಿಖೆ ತೀವ್ರಗೊಂಡಿದ್ದು, ಇದೀಗ ತನಿಖೆಯ ಉರುಳು ಕಾಂಗ್ರೆಸ್ ಹೈಕಮಾಂಡ್ ಬುಡಕ್ಕೆ ಸುತ್ತಿಕೊಳ್ಳುತ್ತಿದೆ.

    ಕಾಂಗ್ರೆಸ್‍ನ ಪಕ್ಷದ ಶ್ರೀಮತಿ ಗಾಂಧಿ ಹಾಗೂ ಇಟಾಲಿಯನ್ ಮಹಿಳೆಯ ಪುತ್ರನ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದ್ದು. ಸೋನಿಯಾ ಗಾಂಧಿ ಹೆಸರನ್ನು ಹಗರಣದ ಪ್ರಮುಖ ದಲ್ಲಾಳಿ ಕ್ರಿಶ್ಚಿಯನ್ ಮೈಕಲ್ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದ್ದು, ಈ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

    ಸದ್ಯ ಈ ಸಂಗತಿ ಖಚಿತವಾಗ ಬೇಕಿದ್ದು, ಆದರೆ ಕಾಂಗ್ರೆಸ್‍ಗೆ ತೀವ್ರ ಮುಜುಗರ ತಂದಿದೆ. ಅಲ್ಲದೇ ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಶಸ್ತ್ರಾಸ್ತ್ರ ದಲ್ಲಾಳಿ ಕ್ರಿಶ್ಚಿಯನ್ ಮೈಕಲ್ ರನ್ನು ಮತ್ತೆ ವಶಕ್ಕೆ ಪಡೆದಿದೆ. ಶೀಘ್ರವೇ ಸೋನಿಯಾ-ರಾಹುಲ್ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಚಾರಣೆ ವೇಳೆ ಮೈಕಲ್ ನೀಡಿರುವ ಮಾಹಿತಿ ಅನ್ವಯ, ಹಗರಣದಲ್ಲಿ ಇಟಾಲಿಯನ್ ಮಹಿಳೆಯ ಪುತ್ರನ ಹೆಸರು ಹೇಳಿದ್ದಾನೆ. ಅಲ್ಲದೇ ಮುಂದೇ ಆತನೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ತಿಳಿಸಿದ್ದಾಗಿ ಡಿಲ್ಲಿ ಪಟಿಯಾಲಾ ಕೋರ್ಟ್ ಗೆ ಇಡಿ ಮಾಹಿತಿ ನೀಡಿದೆ. ಇತ್ತ ನ್ಯಾಯಾಲಯ ಮೈಕಲ್ ರನ್ನು 7 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಅಲ್ಲದೇ ಮೈಕಲ್ ನನ್ನು ನೋಡಲು ಬೆಳಗ್ಗೆ ಸಂಜೆ 15 ನಿಮಿಷ ಮಾತ್ರ ಸಮಯ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಮೈಕಲ್ ಪರ ವಾದ ಮಾಡಿದ ವಕೀಲ ಕಾಂಗ್ರೆಸ್‍ನಿಂದ ಔಟ್

    ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಮೈಕಲ್ ಪರ ವಾದ ಮಾಡಿದ ವಕೀಲ ಕಾಂಗ್ರೆಸ್‍ನಿಂದ ಔಟ್

    ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಆರೋಪಿ ಮೈಕಲ್‍ನನ್ನು ಬುಧವಾರ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮೈಕಲ್ ಪರ ವಾದ ಮಾಡಿದ್ದ ಭಾರತೀಯ ಯುವ ಕಾಂಗ್ರೆಸ್ ಮುಖಂಡ ಆಲ್ಜೊ ಕೆ.ಜೋಸೆಫ್ ಅವರನ್ನು ಪಕ್ಷದಿಂದ ಕೈಬಿಡಲಾಗಿದೆ.

    ವಕೀಲರಾಗಿರುವ ಆಲ್ಜೊ ಕೆ.ಜೋಸೆಫ್ ಭಾರತೀಯ ಯುವ ಕಾಂಗ್ರೆಸ್ಸಿನ ಯುವ ಇಲಾಖೆಯ ರಾಷ್ಟ್ರೀಯ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ನಿನ್ನೆ ಕೋರ್ಟ್ ನಲ್ಲಿ ಆರೋಪಿ ಮೈಕಲ್ ಪರ ವಾದ ಮಾಡಿದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

    ಬ್ರಿಟನ್ ಮೂಲದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ ಹೆಲಿಕಾಪ್ಟರ್ ಖರೀದಿಯ ಹಗರಣ ಕಾಂಗ್ರೆಸ್ ಸುತ್ತಿಕೊಂಡಿದೆ. ಹೀಗಿರುವಾಗ ಮೈಕಲ್ ಪರ ವಾದಕ್ಕೆ ಕಾಂಗ್ರೆಸ್ ಸದಸ್ಯನೇ ಇಳಿದಿರುವುದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಪ್ರಕರಣದ ಕುರಿತು ವಾದ ಮಂಡಿಸುವ ಕುರಿತಾಗಿಯೂ ಜೋಸೆಫ್ ಪಕ್ಷದ ಮುಖಂಡರಿಂದ ಒಪ್ಪಿಗೆ ಪಡೆದಿಲ್ಲವೆಂದು ವರದಿಯಾಗಿದೆ. ಇದನ್ನು ಓದಿ: ಯುಪಿಎ ಸರ್ಕಾರದ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬಂಧನ: ಏನಿದು ಹಗರಣ?

    ಜೋಸೆಫ್ ಅವರು ಪಕ್ಷ ಅಥವಾ ಕ್ರಿಶ್ಚಿಯನ್ ಪರವಾಗಿ ವಾದ ಮಾಡಿಲ್ಲ. ಪಕ್ಷಕ್ಕೆ ತಿಳಿಸದೇ ಪಡೆಯದೆ ವೈಯಕ್ತಿಕ ಸಾಮಥ್ರ್ಯದಿಂದ ವಾದ ಮಾಡಿದ್ದಾರೆ. ಇದನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಒಪ್ಪುವುದಿಲ್ಲ ಎಂದು ಐವೈಸಿ ವಕ್ತಾರ ಅಮ್ರಿಶ್ ರಾಜನ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

    ಮೈಕಲ್ ಪರ ವಾದ ಮಾಡಿದ ಜೋಸೆಫ್‍ನನ್ನು ಖಂಡಿಸಿ ಅನೇಕ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.

    ಇದು ನನ್ನ ವೃತ್ತಿ. ಪಕ್ಷದ ಕೆಲಸವಲ್ಲ. ಹೀಗಾಗಿ ಮೈಕಲ್ ಪರ ವಾದ ಮಾಡಲು ಮುಂದಾಗಿರುವೆ. ದುಬೈನ ಸ್ನೇಹಿತ ಸಲಹೆಯಂತೆ ಪ್ರಕರಣವನ್ನು ಎತ್ತಿಕೊಂಡು ವಾದ ಮಾಡುತ್ತಿರುವೆ. ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುವೆ. ಇದಕ್ಕೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಆಲ್ಜೊ ಕೆ.ಜೋಸೆಫ್ ತಿಳಿಸಿದ್ದಾರೆ.

    ಮೈಕಲ್ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಮೈಕಲ್‍ನನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ತನಿಖೆ ಹಾಗೂ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv