Tag: Agumbe

  • ಮಳೆ ಪ್ರಮಾಣದಲ್ಲಿ ಚಿರಾಪುಂಜಿ, ಆಗುಂಬೆಯನ್ನು ಹಿಂದಿಕ್ಕಿದ ಉಡುಪಿ

    ಮಳೆ ಪ್ರಮಾಣದಲ್ಲಿ ಚಿರಾಪುಂಜಿ, ಆಗುಂಬೆಯನ್ನು ಹಿಂದಿಕ್ಕಿದ ಉಡುಪಿ

    ಉಡುಪಿ: ಮಳೆಯ ಪ್ರಮಾಣದಲ್ಲಿ ಉಡುಪಿ (Udupi) ಜಿಲ್ಲೆಯು ಮೇಘಾಲಯದ ಚಿರಾಪುಂಜಿ (Cherrapunji) ಹಾಗೂ ಆಗುಂಬೆಯನ್ನು ಹಿಂದಿಕ್ಕಿದೆ. ಜೂನ್ ತಿಂಗಳಿನಲ್ಲಿ ಹೆಚ್ಚು ಮಳೆ ಉಡುಪಿಯಲ್ಲಿ ಬಿದ್ದಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

    ಜೂನ್ ತಿಂಗಳ ಮಳೆಯ ಲೆಕ್ಕಾಚಾರ ನೋಡಿದಾಗ ಉಡುಪಿ ಜಿಲ್ಲೆಯು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಈ ತಿಂಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ದಾಖಲೆಯ ಮಳೆ ಸುರಿದಿದೆ. ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ 4,300 ಮಿ.ಮೀ ಮಳೆಯಾಗುವ ವಾಡಿಕೆಯಿದ್ದು, ಈ ಬಾರಿ ದಾಖಲೆಯ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಸಿಎಂ ವಿರುದ್ಧ ದೂರು ನೀಡಿಲ್ಲವೇಕೆ?: ವಿಜಯೇಂದ್ರ

    ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಕಳೆದ ಒಂದುವರೆ ತಿಂಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಈ ವರ್ಷ ಸುರಿದ ಮಳೆ ಅತಿ ಹೆಚ್ಚು ಎಂಬುದು ಕೂಡಾ ಒಂದು ದಾಖಲಾಗಿದೆ. ಈ ನಡುವೆ ದೇಶದಲ್ಲೇ ಉಡುಪಿ ಜಿಲ್ಲೆ ಅತಿ ಹೆಚ್ಚು ಮಳೆ ಬಿದ್ದ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್‌

    ಮೇಘಾಲಯದ ಚಿರಾಪುಂಜಿ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಎಂಬ ದಾಖಲೆ ಹೊತ್ತಿದೆ. ಪ್ರತಿ ವರ್ಷ ಚಿರಾಪುಂಜಿಯಲ್ಲಿ ಭಾರೀ ಮಳೆ ಆಗುತ್ತದೆ. ಕರ್ನಾಟಕದಲ್ಲಿ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದು ಕರೆಯುತ್ತಾರೆ. ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಆದರೆ ಈ ಬಾರಿ ಉಡುಪಿಯಲ್ಲಿ ಸುರಿದ ಮಳೆಯು ಮೇಘಾಲಯದ ಚಿರಪುಂಜಿ ಮತ್ತು ಕರ್ನಾಟಕದ ಆಗುಂಬೆಯನ್ನು ಹಿಂದಿಕ್ಕಿದೆ.

    ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ದಾಖಲೆ ಪ್ರಕಾರ ಜೂನ್ ತಿಂಗಳ 27ರಂದು ಈ ದಾಖಲೆ ಸೃಷ್ಟಿಯಾಗಿದೆ. ಇದಾಗಿ ಮೂರು ದಿನ ಉಡುಪಿ ಜಿಲ್ಲೆಯಲ್ಲಿ 150 ಮಿ.ಮೀ.ಗೂ ಹೆಚ್ಚು ಮಳೆಯಾಗಿರುವುದು ಬಹುದೊಡ್ಡ ದಾಖಲೆಯಾಗಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್‌

    ಮೂರು ತಾಲೂಕಿನಲ್ಲಿ ಪಶ್ಚಿಮ ಘಟ್ಟದ ತಪ್ಪಲು, ಐದು ತಾಲೂಕಿನಲ್ಲಿ ಸಮುದ್ರವನ್ನು ಆವರಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 4,300 ಮೀ.ಮೀ ಸರಾಸರಿ ಮಳೆಯಾಗುತ್ತದೆ. ಈ ವರ್ಷ ಮೇ 15ರ ನಂತರ ಪೂರ್ವ ಮುಂಗಾರು ಮಳೆ ಅಬ್ಬರದಿಂದ ಸುರಿದಿದೆ. ಅಲ್ಲದೇ ಚಂಡಮಾರುತದಿಂದ ಭಾರೀ ಮಳೆಯಾಗಿತ್ತು. ಇದಾದ ಬೆನ್ನಲ್ಲೇ ಮುಂಗಾರು ಮಳೆ ಆರಂಭವಾಗಿತ್ತು.

    ಎಲ್ಲಿ ಎಷ್ಟು ಮಳೆ?
    ಜೂನ್ ತಿಂಗಳಿನಲ್ಲಿ ಉಡುಪಿಯಲ್ಲಿ ಅತಿ ಹೆಚ್ಚು ಮಳೆಯಾದರೆ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ದ.ಕದಲ್ಲಿ ಒಂದು ತಿಂಗಳಲ್ಲಿ 980 ಮಿ.ಮೀ ದಾಖಲೆಯ ಮಳೆ ಸುರಿದಿದೆ. ಇದನ್ನೂ ಓದಿ: ಬೋಲ್ಡ್ ಫೋಟೋಗೆ ಬ್ಯಾಡ್ ಕಾಮೆಂಟ್, ಗೌರಮ್ಮನಾದ ಸಪ್ತಮಿ!

    ಇನ್ನು ಕೇರಳದ ಕಣ್ಣೂರು (Kannur) ಜಿಲ್ಲೆಯಲ್ಲಿ 902 ಮಿ.ಮೀ ಮಳೆಯಾಗಿದ್ದು, ಇದು ಮೂರನೇ ಸ್ಥಾನದಲ್ಲಿದೆ. ಮೇಘಾಲಯದ ಸೌತ್ ವೆಸ್ಟ್ ಕಾಶಿ ಹಿಲ್‌ನಲ್ಲಿ 880 ಮಿ.ಮೀ ಮಳೆಯಾಗಿದೆ. ದಾದರ್ ಮತ್ತು ನಗರ ಹವೇಲಿಯಲ್ಲಿ 858 ಮಿ.ಮೀ ಮಳೆಯಾಗಿದೆ. ಈ ಮೂಲಕ ಈ ವರ್ಷದ ಜೂನ್ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: 46 ರೂ. ಆಗಿದ್ರೂ 50 ರೂ. ಟಿಕೆಟ್‌ – ಭಾರೀ ಟೀಕೆ ಬೆನ್ನಲ್ಲೇ KSRTC ಆದೇಶ ರದ್ದು

    ಕಳೆದ ಒಂದುವರೆ ತಿಂಗಳಿಂದ ಉಡುಪಿ ಜಿಲ್ಲೆಯಲ್ಲಿ 15 ದಿನಕ್ಕೂ ಹೆಚ್ಚು ದಿನ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಸುಮಾರು 15 ದಿನಕ್ಕೂ ಹೆಚ್ಚು ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಕೂಡಾ ಘೋಷಣೆ ಆಗಿತ್ತು. ಸಹಜವಾಗಿ ಅಲರ್ಟ್ ಇದ್ದಾಗ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ದಾಖಲಾಗಿದೆ. ಈ ಸಂದರ್ಭ ನದಿ, ಸಮುದ್ರ ಪಾತ್ರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿಷೇಧ ವಿಧಿಸಲಾಗಿತ್ತು. ಅಲ್ಲದೇ ಒಂದು ತಿಂಗಳಿಂದ ಮೀನುಗಾರಿಕೆಗೂ ನಿರ್ಬಂಧ ಹೇರಲಾಗಿತ್ತು.

  • ಆಗುಂಬೆ, ಸೋಮೇಶ್ವರದಲ್ಲಿ ಪ್ರಾಣಿಗಳಿಗೆ ತಿಂಡಿ ಕೊಟ್ರೆ ಕೇಸ್

    ಆಗುಂಬೆ, ಸೋಮೇಶ್ವರದಲ್ಲಿ ಪ್ರಾಣಿಗಳಿಗೆ ತಿಂಡಿ ಕೊಟ್ರೆ ಕೇಸ್

    – ವಾಹನ ವಾಶ್ ಮಾಡಿದ್ರೂ ಫೈನ್

    ಉಡುಪಿ: ಆಗುಂಬೆ ಘಾಟಿ ಸೋಮೇಶ್ವರದಲ್ಲಿ ಕೋತಿ, ಲಂಗೂರ್ ಗಳು ಸಿಕ್ಕಿತು ಅಂತ ಇನ್ನು ಮುಂದೆ ನೀವೇನಾದರೂ ತಿಂಡಿ ಪ್ಯಾಕೆಟ್ಟುಗಳನ್ನು ಎಸೆದರೆ, ಚಿಪ್ಸ್, ಜಂಕ್ ಫುಡ್ ಕೊಟ್ಟರೆ ಅರಣ್ಯಾಧಿಕಾರಿಗಳಿಗೂ ನೀವು ದಂಡ ಬೇಕಾಗುತ್ತದೆ.

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನ್ನಿಸುವವರು ಮತ್ತು ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ವಾರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದಿದೆ.

    ಸೋಮೇಶ್ವರದಿಂದ ಆಗುಂಬೆವರೆಗಿನ 10ಕಿ.ಮೀ. ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ಧಾಪುರ ವನ್ಯಜೀವಿ ವಿಭಾಗದ ಸುಮಾರು 40 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ತಿನಿಸುವ ಮತ್ತು ರಸ್ತೆ ಬದಿ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರಿಂದ ದಂಡ ವಸೂಲಿ ಮಾಡಲಾಗ್ತಿದೆ. ರಸ್ತೆ ಬದಿ ಆಹಾರ ಎಸೆದ ಮೂವರಿಂದ ಅರಣ್ಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದರು.

    ಅದೇ ರೀತಿ ಸೋಮೇಶ್ವರದಲ್ಲಿ ಘಾಟಿ ಆರಂಭದ ಸೋಮೇಶ್ವರದಲ್ಲಿ ಮತ್ತು ಆಗುಂಬೆ ಕೊನೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಿದರು. ಜಾಗೃತಿ ಫಲಕಗಳನ್ನು ನೆಟ್ಟು ಜನಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಭಗವಸ್‍ದಾಸ್ ಕುಡ್ತಲ್‍ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

    ಹೆಬ್ರಿ ವಲಯ ವನ್ಯಜೀವಿ ಅರಣ್ಯಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ನಿಗದಿ ಪಡಿಸಿದ ದಂಡ ರಸ್ತೆಬದಿ ತ್ಯಾಜ್ಯ, ಪ್ಲಾಸ್ಟಿಕ್ ಕಸ ಇತ್ಯಾದಿ ಎಸೆಯುವುದಕ್ಕೆ 100 ರೂ., ರಸ್ತೆ ಬದಿ ಪೂರ್ವಾನುಮತಿ ಇಲ್ಲದೆ ಅರಣ್ಯಕ್ಕೆ ಪ್ರವೇಶ ಮಾಡುವುದು, ರಸ್ತೆಯ ಬದಿಯ ಜಲಪಾತಗಳಲ್ಲಿ ಸ್ನಾನ ಮಾಡುವುದು, ರಸ್ತೆ ವಾಹನ ತೊಳೆಯುವುದು, ಅಡುಗೆ ತಯಾರಿಸುವುದು, ರಾಷ್ಟ್ರೀಯ ಉದ್ಯಾನವನದ ಒಳಗೆ ಸಕಾರಣವಿಲ್ಲದೆ ನಿಗದಿಪಡಿಸಿದ ಅವಧಿಗಿಂತ ಹೆಚ್ಚು ಸಮಯ ಉಳಿಯುವುದಕ್ಕೆ ತಲಾ 200 ರೂ. ಮತ್ತು ವನ್ಯಪ್ರಾಣಿಗಳಿಗೆ ತಿಂಡಿ ತಿನಿಸು ನೀಡುವುದಕ್ಕೆ 50 ರೂ. ದಂಡವನ್ನು ನಿಗದಿಪಡಿಸಲಾಗಿದೆ ಎಂದರು.

    ಈ ಕಾರ್ಯಾಚರಣೆಯನ್ನು ಆಗುಂಬೆ ಘಾಟಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾದು ಹೋಗುವ ಶನಿವಾರ ಮತ್ತು ರವಿವಾರ ನಡೆಸಲಾಗುತ್ತಿದೆ. ಮನುಷ್ಯ ಸೇವಿಸುವ ಆಹಾರ, ಜಂಕ್ ಫುಡ್‍ಗಳನ್ನು ಪ್ರಾಣಿಗಳಿಗೆ ನೀಡುವುದರಿಂದ ಅದರ ಆಹಾರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಅದರ ಆಹಾರ ಕ್ರಮಗಳನ್ನು ಬದಲಾಗಿ, ಇದೇ ಆಹಾರಕ್ಕೆ ಹೊಂದಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಸಿಗದೆ ಇದ್ದಾಗ ಮಕ್ಕಳು, ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯ ಇರುತ್ತದೆ. ಅಲ್ಲದೆ ರೋಗ ಹರಡುವಿಕೆಗೂ ಕಾರಣವಾಗುತ್ತದೆ. ಅಧಿಕ ಹೋರಾಟಗಾರರಿಂದ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಾರ್ಯಾಚರಣೆಗೆ ಇಳಿದಿದೆ.

  • ಭಾರೀ ಮಳೆ: ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿ ಬಂದ್

    ಭಾರೀ ಮಳೆ: ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿ ಬಂದ್

    ಶಿವಮೊಗ್ಗ: ರಾಜ್ಯದ ಬಹುತೇಕ ಕಡೆ ವರುಣ ಅಬ್ಬರಿಸಿದ್ದು, ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತ ಆಗುಂಬೆ ಬಳಿ ಸಹ ಮಳೆ ವಿಪರೀತವಾಗಿ ಸುರಿಯುತ್ತಿದ್ದು, ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

    ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮಾಲತಿ ಮತ್ತು ಸೀತಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ನೀರು ಆಗುಂಬೆಯ ಭಾಗಗಳ ತೋಟ, ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಶಿವಮೊಗ್ಗ-ಆಗುಂಬೆ-ಮಂಗಳೂರು ಎನ್.ಹೆಚ್ 169-ಎ ರಸ್ತೆಯನ್ನು ಆಗುಂಬೆಯ ಸೋಮೇಶ್ವರದ ಬಳಿ ಬಂದ್ ಮಾಡಲಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

    ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಸಹ ಇದೇ ಪರಿಸ್ಥಿತಿ ಇದ್ದು, ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ ಭದ್ರಾವತಿಯ ಸೇತುವೆ ಮೇಲೆ ನೀರು ಹರಿಯಲು ಆರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ಸಂಚಾರ ಮಾಡುವುದನ್ನು ಪೊಲೀಸರು ಬಂದ್ ಮಾಡಿದ್ದಾರೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಅತಿಯಾದ ಮಳೆ ಹಿನ್ನೆಲೆ ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಜಲಾಶಯಕ್ಕೆ 55 ಸಾವಿರ ಕ್ಯೂಸೆಕ್ ಒಳ ಹರಿವು ಇದೆ.

    ಜಲಾಶಯದಿಂದ 47,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಇಂಜಿನಿಯರ್ ಸೂಚನೆ ನೀಡಿದ್ದಾರೆ. ಅಲ್ಲದೆ ಈಗಾಗಲೇ ಭದ್ರಾವತಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

    ಉಡುಪಿ ಜಿಲ್ಲೆಯಲ್ಲಿ ಸಹ ವಿಪರೀತ ಮಳೆಯಾಗುತ್ತಿದ್ದು, ಬ್ರಹ್ಮಾವರ ತಾಲೂಕಿನ ಸೀತಾನದಿ ಅಪಾಯ ಮಟ್ಟ ತಲುಪಿದ್ದು, ಕಿಂಡಿ ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ. ಸುತ್ತಮುತ್ತಲಿನ ಮನೆ ಕೃಷಿ ಭೂಮಿ ಭತ್ತದ ಬೇಸಾಯದ ಗದ್ದೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಮುಳುಗಡೆಯಾದ ಪ್ರದೇಶಗಳ ಜನರ ರಕ್ಷಣೆ ಮಾಡಲಾಗಿದೆ. ಸ್ಥಳೀಯ ನಾಡದೋಣಿ ಮೀನುಗಾರಿಕೆ, ಮರಳುಗಾರಿಕೆ ನಡೆಸುವವರ ದೋಣಿ ಬಳಸಿ ಜನರನ್ನು ಎತ್ತರ ಪ್ರದೇಶಗಳಿಗೆ ಕರೆದುಕೊಂಡು ಬರಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಶಾಲೆ, ದೇವಸ್ಥಾನಗಳಲ್ಲಿ ಉಳಿದುಕೊಳ್ಳಲು ಜನರಿಗೆ ವ್ಯವಸ್ಥೆ ಮಾಡಿದ್ದಾರೆ.

  • ಆಗುಂಬೆಯಲ್ಲಿ ಅಕಾಲಿಕ ಮಳೆ

    ಆಗುಂಬೆಯಲ್ಲಿ ಅಕಾಲಿಕ ಮಳೆ

    ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಅಕಾಲಿಕ ಮಳೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆಗುಂಬೆಯಲ್ಲಿ ಶನಿವಾರ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

    ಶನಿವಾರ ಸುರಿದ ಮಳೆ ರೈತರನ್ನು ಕಂಗೆಡಿಸಿದೆ. ಆಗುಂಬೆ ಭಾಗದಲ್ಲಿ ಈಗಾಗಲೇ ಭತ್ತದ ಕೊಯ್ಲು ಆರಂಭಗೊಂಡಿದ್ದು, ಮಳೆಯಿಂದಾಗಿ ಭತ್ತದ ಕೊಯ್ಲುಗೆ ಅಡಚಣೆ ಎದುರಾಗಲಿದೆ. ಅಷ್ಟೇ ಅಲ್ಲದೆ ಅಡಿಕೆ ಬೆಳೆಗೂ ಈ ಮಳೆಯಿಂದ ರೋಗ ತಗುಲಲಿದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.

    ಈಗಾಗಿ ಅಕಾಲಿಕ ಮಳೆಗೆ ರೈತಾಪಿ ವರ್ಗ ಹಿಡಿಶಾಪ ಹಾಕುತ್ತಿದೆ. ಚಳಿಗಾಲದಲ್ಲಿಯೂ ಮಳೆ ಸುರಿಯುತ್ತಿರುವುದಕ್ಕೆ ಮಲೆನಾಡಿನ ಮಂದಿ ಆಶ್ಚರ್ಯ ವ್ಯಕ್ತಪಡಿಸಿದರೆ, ರೈತರು ಆತಂಕಕ್ಕೊಳಗಾಗಿದ್ದಾರೆ.

  • `ಆನೆ ಬೇಡ- ನ್ಯಾಯ ಬೇಕು’- ಆಗುಂಬೆಯಲ್ಲಿ ಪ್ರತಿಭಟನೆ

    `ಆನೆ ಬೇಡ- ನ್ಯಾಯ ಬೇಕು’- ಆಗುಂಬೆಯಲ್ಲಿ ಪ್ರತಿಭಟನೆ

    ಶಿವಮೊಗ್ಗ: ಕಾಡಾನೆ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಇಂದು ಸಂಪೂರ್ಣ ಬಂದ್ ಆಚರಿಸಲಾಗಿದ್ದು, ಸದ್ಯ ವಾಹನ ಸಂಚಾರ ಆರಂಭವಾಗಿದೆ.

    `ಆನೆ ಬೇಡ- ನ್ಯಾಯ ಬೇಕು’ ಎಂದು ಆಗುಂಬೆ ವೃತ್ತದಲ್ಲಿ ಟೈಯರಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಆಗುಂಬೆಯ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಸಕರು ಸ್ಥಳಕ್ಕೆ ಬಂದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.

    ಆನೆ ಹಾವಳಿಯಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಹಲವರು ಗಾಯಾಗೊಂಡಿದ್ದಾರೆ. ಅಷ್ಟೇ ಅಲ್ಲದೇ ಆನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಕ್ರಮ ತೆಗೆದುಕೊಳ್ಳವಂತೆ ಮನವಿ ಮಾಡಿದ್ದರು. ಇದುವರೆಗೂ ಯಾವುದೇ ರೀತಿಯ ಪರಿಹಾರವನ್ನು ನೀಡುತ್ತಿಲ್ಲ ಎಂದು ಪ್ರತಿಭಟನಾ ನಿರತರು ದೂರಿದ್ದರು.

    ಪ್ರತಿಭಟನೆಯಲ್ಲಿ ಆಗುಂಬೆ ಹಾಗೂ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಪಾಲ್ಗೊಂಡಿದ್ದರು. ಇದರಿಂದ ಸೊಲ್ಲಾಪುರ-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾರಣ ನೂರಾರು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಶಾಸಕರು ಬಂದು ಭರವಸೆ ನಿಡಿದ ಬಳಿಕ ಬಂದ್ ಕೈ ಬಿಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಆಗುಂಬೆ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ!

    ಆಗುಂಬೆ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ!

    ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯಲ್ಲಿ ಒಂಟಿ ಕಾಡಾನೆ ಹಾವಳಿ ದಿನೇದಿನೇ ಹೆಚ್ಚುತ್ತಿದೆ.

    ಇದೂವರೆಗೂ ರಾತ್ರಿ ವೇಳೆಯಲ್ಲಿ ಮಾತ್ರ ತೋಟ-ಹಿತ್ತಲಿಗೆ ನುಗ್ಗಿ ದ್ವಂಸ ಮಾಡುತ್ತಿದ್ದ ಕಾಡಾನೆ ಈಗ ಹಗಲು ವೇಳೆಯಲ್ಲೇ ಕಾಣಿಸಿಕೊಂಡಿಸಿದೆ. ಆಗುಂಬೆಯಿಂದ ಶೃಂಗೇರಿಗೆ ಹೋಗುವ ರಸ್ತೆಯಲ್ಲಿರುವ ವಾಟೆಹಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿ ಆರಾಮವಾಗಿ ನಡೆದುಕೊಂಡು ಹೋಗಿದೆ. ರಾತ್ರಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಇದೀಗ ಹಗಲು ಕಾಣಿಸಿಕೊಂಡಿದ್ದು, ಅಲ್ಲಿನ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಎದುರಾಗಿದೆ.  ಇದನ್ನೂ ಓದಿ: ರೈತರ ತೋಟಗಳಿಗೆ ಆನೆ ದಾಳಿ ತಡೆಯಲು ಹೊಸ ತಂತ್ರಕ್ಕೆ ಮುಂದಾದ ಅರಣ್ಯ ಇಲಾಖೆ

    ಈ ಆನೆಯನ್ನು ಹಿಡಿದು ಸ್ಥಳಾಂತರ ಮಾಡಿ ಎಂದು ಈ ಭಾಗದ ಜನತೆ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ, ಇದೂವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಅಲ್ಲಿನ ಜನ ಮಾತ್ರ ಆತಂಕದಲ್ಲಿ ಬದುಕೋದು ತಪ್ಪಿಲ್ಲ.

  • ಹಚ್ಚ ಹಸಿರಿನಿಂದ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ ಆಗುಂಬೆ

    ಹಚ್ಚ ಹಸಿರಿನಿಂದ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ ಆಗುಂಬೆ

    ಉಡುಪಿ: ಆಗುಂಬೆಯಾ ಪ್ರೇಮ ಸಂಜೆಯಾ ಬಿಡಲಾರೆ ನಾನು ಎಂದಿಗೂ.., ಓ ಗೆಳೆತಿಯೆ ಓ ಗೆಳತಿಯೇ ಓ.,ಗೆಳತಿಯೇ. ಗೆಳತಿಯೇ ಗೆಳತಿಯೇ. ಗೆಳತಿ ಜೊತೆಯಲ್ಲಿ ಇಲ್ಲದಿದ್ದರೂ ಆಗುಂಬೆಗೆ ಹೋದವರು ಈ ಹಾಡನ್ನೊಂದು ಸಾರಿ ಗುನುಗಿಯೇ ಗುನುಗುತ್ತಾರೆ. ಅದು ಆಗುಂಬೆಯ ಮೋಡಿ.

    ಆಗುಂಬೆ ಈ ಹೆಸರೇ ಒಂತರ ರೋಮಾಂಚಕ. ಶಿವಮೊಗ್ಗ- ಉಡುಪಿ ಜಿಲ್ಲೆಯ ನಡುವೆ ಸಿಗುವ ಆಗುಂಬೆ ಘಾಟ್ ಪ್ರವಾಸಿಗರಿಗೆ ಹಾಟ್ ಸ್ಪಾಟ್. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಆಗುಂಬೆ, ಬೇಸಿಗೆಯಲ್ಲಿ ನೀಲಿ ಆಗಸದಿಂದ ಕಣ್ಮನ ಸೆಳೆಯುತ್ತದೆ. ಆಗುಂಬೆಯ ಚೆಲುವು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಚಂದ. ಆಗಸದೆತ್ತರದಲ್ಲಿ ನಿಂತು ಮೋಡಗಳನ್ನು ಕಾಲ ಬುಡದಲ್ಲಿ ಕಾಣುವ ಅವಕಾಶವಿರೋದು ಮಳೆಗಾಲದಲ್ಲಿ ಮಾತ್ರ. ಘಾಟ್‍ನ ತಿರುವು ಮುರುವು ರಸ್ತೆ ಸಂಪೂರ್ಣ ಮೋಡದಿಂದ ಮುಸುಕಿರುತ್ತದೆ. ಕಾಣದ ರಸ್ತೆಯಲ್ಲಿ ವಾಹನ ಸಂಚಾರವೇ ಚಾಲಕರಿಗೆ ಒಂದು ಸವಾಲಾಗಿರುತ್ತದೆ.

    ಹೋಗೋದು ಹೇಗೆ?: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಮೊದಲು ಹೆಬ್ರಿಗೆ ಹೋಗಬೇಕು. ಅಲ್ಲಿಂದ ಸೋಮೇಶ್ವರದ ಮೂಲಕ ಆಗುಂಬೆ ಪ್ರವೇಶ. ಪಶ್ಚಿಮ ಘಟ್ಟದ ತಪ್ಪಲು ಊರೇ ಸೋಮೇಶ್ವರ. ಸೋಮೇಶ್ವರದ ಬಡಕಿಲ್ಲಾಯ ಹೋಟೆಲ್‍ನಲ್ಲಿ ಬಿಸಿ ಬಿಸಿ ಇಡ್ಲಿ, ತೋವೆ, ಗರಂ ಚಾಯ್ ಕುಡಿದು ಆಗುಂಬೆ ನೋಡಲು ಹೊರಟ್ರೆ ಅದ್ರ ಮಜಾನೇ ಬೇರೆ. ಆಗುಂಬೆ ರಸ್ತೆಯ ತಿರುವು ಮುರುವು ಇಕ್ಕೆಲಗಳಲ್ಲಿ ಮಿನಿ ಜಲಪಾತಗಳು ನಮ್ಮನ್ನು ಸ್ವಾಗತ ಮಾಡುತ್ತವೆ. ರಸ್ತೆಯ ಮೇಲೆಯೇ ಮಳೆನೀರು ಹರಿದು ಜಲರಾಶಿಗಳು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತವೆ.

    ಸನ್ಸೆಟ್ ಪಾಯಿಂಟಲ್ಲಿ ನಿಂತರೆ ಆಗುಂಬೆಯ ಚೆಲುವು ಆಸ್ವಾದಿಸಬಹುದು. ಮಳೆಗಾಲದಲ್ಲಂತೂ ಹಾಲಿನ ಸಾಗರದಂತೆ ಬೆಟ್ಟದ ಕೆಳಭಾಗ ಕಾಣಿಸುತ್ತದೆ. ಮೋಡ ಮರೆಯಾದಾಗ ಅಲ್ಲಲ್ಲಿ ಜಲಪಾತಗಳು ಇಣುಕುತ್ತದೆ, ಮತ್ತೆ ಮರೆಯಾಗುತ್ತದೆ. ಇದು ನೋಡುಗರಿಗೆ ಹಿತವಾದ ಮುದವನ್ನು ನೀಡುತ್ತದೆ.

    ಮೈಗೆ ಸೋಕಿಕೊಂಡೇ ಮೋಡಗಳು ತೇಲಿ ಹೋಗುವ ಅನುಭವವಾಗಬೇಕಂದ್ರೆ ಆಗುಂಬೆಗೆ ಬರಬೇಕು. ದಕ್ಷಿಣ ಭಾರತದ ಚಿರಾಪುಂಜಿ ಅಂತಲೇ ಆಗುಂಬೆಯನ್ನು ಕರೆಯಲಾಗುತ್ತದೆ. ಮಳೆಗಾಲದ ಆರು ತಿಂಗಳು ಯಾವಾಗ ಹೋದರೂ ಆಗುಂಬೆಯಲ್ಲಿ ಸದಾ ಮಳೆಯಿರುತ್ತದೆ. ಲ್ಯಾಟರೈಟ್ ಅನ್ನೋ ಶಿಲೆಯಿಂದಲೇ ಈ ಆಗುಂಬೆಯ ಗುಡ್ಡ ಪ್ರದೇಶ ನಿರ್ಮಾಣವಾಗಿದೆ.

    ಆಗುಂಬೆ ಘಾಟ್ ಹತ್ತಿ ಹೋದರೆ ಆಗುಂಬೆ ಪೇಟೆ ಸಿಗುತ್ತದೆ. ಮಾಲ್ಗುಡಿ ಡೇಸ್ ಚಿತ್ರೀಕರಣವಾದ ಊರದು. ಆಗುಂಬೆ ಪೇಟೆ ಇಂದಿಗೂ ಅದೇ ಹಳೆಯ ಮನೆಗಳ ಶೈಲಿಯನ್ನು, ಬೀದಿಯನ್ನು ಉಳಿಸಿಕೊಂಡಿದೆ.

    ಮಂಗಗಳ ಕಾಟ: ಆಗುಂಬೆ ಘಾಟ್‍ನ ಯಾವ ತಿರುವಿನಲ್ಲಿ ನಿಲ್ಲಿಸಿದರೂ ಕೋತಿಗಳಿಂದ ರಕ್ಷಣೆ ಪಡೆಯಬೇಕಂದ್ರೆ ಕಷ್ಟಪಡಲೇಬೇಕು. ಕೈಯ್ಯಲ್ಲೇನಾದ್ರು ತಿಂಡಿ ಪೊಟ್ಟಣ ಹಿಡ್ಕೊಂಡಿದ್ರೆ ನಮ್ಮ ಕಥೆ ಮುಗಿಯಿತು. ಮಂಗಗಳು ಮುಗಿಬೀಳೋ ಮೊದಲು ತಿಂಡಿ ಹಂಚಿಬಿಡದಿದ್ದರೆ ನಮ್ಮನ್ನು ಅವುಗಳು ಬಿಡೋದೆ ಇಲ್ಲ.

    ಬೈಕ್ ರೈಡ್‍ನಲ್ಲೇ ಆಗುಂಬೆ ಹತ್ತಿ: ಆಗುಂಬೆ ಘಾಟ್‍ನ ನಿಜವಾದ ಸೊಬಗು ಅನುಭವಿಸಬೇಕಾದ್ರೆ ಆಗುಂಬೆಯನ್ನು ಬೈಕಿನಲ್ಲೇ ಹತ್ತಬೇಕು. ಜೋರು ಮಳೆ ಸುರಿಯುತ್ತಿರಬೇಕು, ಒದ್ದೆಯಾಗಬೇಕು ಆಗಷ್ಟೇ ನಿಜವಾದ ಆಗುಂಬೆಯನ್ನು ಅನುಭವಿಸಬಹುದು.

    ಆಗುಂಬೆಯ ಸನ್ಸೆಟ್ ಪಾಯಿಂಟಲ್ಲಿ ಮುಳ್ಳುಸೌತೆ ಮತ್ತು ಅನಾನಾಸು ಸ್ಲೈಸ್‍ಗೆ ಖಾರ ಪುಡಿ, ಉಪ್ಪು, ಪೆಪ್ಪರ್ ಸೇರಿಸಿ ಹತ್ತಾರು ಜನ ವ್ಯಾಪಾರ ಮಾಡ್ತಾರೆ. ಮಳೆಯ ನಡುವೆ ಖಡಕ್ ಸ್ಲೈಸ್‍ಗಳನ್ನು ತಿನ್ನೋ ಖುಷಿಯೇ ಬೇರೆ. ಒಂದು ದಿನದ ಮಟ್ಟಿಗೆ ಎಂಜಾಯ್ ಮಾಡಬೇಕಂದ್ರೆ ಆಗುಂಬೆ ಪರ್ಫೆಕ್ಟ್ ಪ್ಲೇಸ್. ಬೋಟಿಂಗ್, ಸ್ಮಿಮ್ಮಿಂಗ್, ವ್ಯವಸ್ಥೆಯೂ ಆಗುಂಬೆಯಲ್ಲಿದ್ದು ಸಿಕ್ಕಾಪಟ್ಟೆ ಎಂಜಾಯ್ ಮಾಡೋ ಅವಕಾಶವಿದೆ.

    ಬೇಸಿಗೆ ಆಗುಂಬೆ: ಬೇಸಿಗೆ ಆಗುಂಬೆಯಲ್ಲಿ ಬರೀ ಹೆಸರಿಗಷ್ಟೇ ಬೇಸಿಗೆ. ಆದ್ರೆ ಆಗುಂಬೆ ವರ್ಷಪೂರ್ತಿ ತಂಪಾಗಿಯೇ ಇರುತ್ತೆ. ಸಮುದ್ರದಿಂದ ಜೋರಾಗಿ ಬೀಸೋ ಗಾಳಿ ಪಶ್ಚಿಮ ಘಟ್ಟಕ್ಕೆ ಅಪ್ಪಳಿಸುತ್ತದೆ. ಹೀಗಾಗಿ ಸದಾ ತಂಗಾಳಿ ಬೀಸ್ತಾ ತಂಪಾದ ವಾತಾವರಣ ಇರುತ್ತದೆ.

    ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವುದಕ್ಕೂ, ಆಗುಂಬೆ ಸನ್ಸೆಟ್ ಪಾಯಿಂಟಲ್ಲಿ ಸೂರ್ಯಾಸ್ತ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ಆಗಸದಲ್ಲಿ ನಿಂತು ಸಮುದ್ರ ನೋಡೋ ಅವಕಾಶ ಮತ್ತೆಲ್ಲೂ ಸಿಗಲ್ಲ. ಸೂರ್ಯಾಸ್ತದ ವೇಳೆ ಬಾನೆಲ್ಲಾ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಅವಕಾಶ ಸಿಕ್ರೆ, ಸಮಯ ಮಾಡ್ಕೊಂಡು ಒಂದ್ಸಾರಿ ಆಗುಂಬೆ ಸೊಬಗು ನೋಡೋದನ್ನು ಮಿಸ್ ಮಾಡ್ಕೋಬೇಡಿ.