Tag: agriculture laws

  • ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್

    ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರೈತರಲ್ಲಿ ಕ್ಷಮೆ ಕೇಳುವುದರಿಂದ ವಿದೇಶದಲ್ಲಿ ಅವರ ಪ್ರತಿಷ್ಠೆಗೆ ದಕ್ಕೆ ಉಂಟಾಗುತ್ತದೆ. ಇದನ್ನು ನಾವು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

    ಈ ಕುರಿತು ಟ್ವೀಟ್ ಮಾಡಿದ ಅವರು, ಪ್ರಧಾನಿ ಮೋದಿ ಕ್ಷಮೆ ಕೇಳುವುದು ನಮಗೆ ಇಷ್ಟವಿಲ್ಲ. ಜೊತೆಗೆ ವಿದೇಶದಲ್ಲಿ ಅವರ ಖ್ಯಾತಿಯನ್ನು ಕೆಡಿಸಲು ನಾವು ಬಯಸುವುದಿಲ್ಲ. ಪುನಃ ರೈತರ ಒಪ್ಪಿಗೆ ಇಲ್ಲದೆ ಕೃಷಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೈಗೊಂಡರೆ ಆ ಕಾನೂನನ್ನು ತರಲಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

    ಸುಮಾರು ಒಂದು ವರ್ಷದಿಂದ ಹಲವಾರು ರೈತ ಸಂಘಗಳು ಕೃಷಿ ಕಾಯ್ದೆ ರದ್ದುಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರವು ಮೂರು ಕೃಷಿ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸಿತ್ತು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

    ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ರದ್ದಾದ ಕೃಷಿ ಕಾನೂನುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ಪ್ರಧಾನಿ ಅವರನ್ನು ಅವಮಾನಿಸುತ್ತದೆ. ಒಂದು ವೇಳೆ ಕೃಷಿ ಕಾನೂನುಗಳನ್ನು ಕೇಂದ್ರವು ಪುನಃ ಪರಿಚಯಿಸಿದರೆ ಆಂದೋಲನವನ್ನು ಪುನಾರಂಭಿಸುವುದಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಮತ್ತೆ ತರುವುದಿಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಟನೆ

    ಈ ವಿಷಯದ ಕುರಿತು ಕೃಷಿ ಸಚಿವರು ಮಾತನಾಡಿ, ನಾಗ್ಪುರ ಕಾರ್ಯಕ್ರಮವೊಂದರಲ್ಲಿ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ ಎಂದು ನಂತರ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ

  • ಹೊಲಗಳು ಮರಳು ಆಗಲು ಬಿಡುವುದಿಲ್ಲ: ರಾಹುಲ್ ಗಾಂಧಿ

    ಹೊಲಗಳು ಮರಳು ಆಗಲು ಬಿಡುವುದಿಲ್ಲ: ರಾಹುಲ್ ಗಾಂಧಿ

    ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ಕೃಷಿ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಸರ್ಕಾರಕ್ಕೆ ಎಚ್ಚರಿಸುವ ಟ್ವೀಟ್ ಮಾಡಿದ್ದಾರೆ.

    ಹೊಲಗಳು ಮರಳು ಆಗಲು ಬಿಡುವುದಿಲ್ಲ. ಅದನ್ನು ಅವರ( ಬಿಜೆಪಿ) ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ಬಿಡುವುದಿಲ್ಲ. ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಾಯೋಕಿಂತ ಮುಂಚೆ ನನ್ನ ಅಪ್ಪನ ನೋಡ್ಬೇಕು: ವೈಷ್ಣವಿ

    ಕೇಂದ್ರ ಸರ್ಕಾರವು ಕೃಷಿ ಭೂಮಿಯನ್ನು ತಮ್ಮ ಸ್ನೇಹಿತರಿಗೆ ಹಸ್ತಾಂತರಿಸುವ ಹುನ್ನಾರವನ್ನು ಹೊಂದಿದೆ. ಕೃಷಿ ವ್ಯವಸ್ಥೆಯನ್ನು ನಾಶಗೊಳಿಸಲು ನೂತನ ಕಾನೂನು ರಚಿಸಲಾಗಿದೆ ಎಂದು ರಾಹುಲ್ ಗಾಂಧಿ ಈ ಹಿಂದೆ ವಾಗ್ದಾಳಿ ಮಾಡಿದ್ದರು.

    ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹಿಸಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಒಂಬತ್ತು ತಿಂಗಳು ಪೂರ್ಣಗೊಂಡಿದೆ. ಕಳೆದ ವರ್ಷ ನವೆಂಬರ್ 26ರಂದು ದೆಹಲಿ ಸಿಂಘು ಗಡಿಯಲ್ಲಿ ರೈತರು ಆರಂಭಿಸಿದ್ದರು. ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ರೈತರ ಪರ ಮತ್ತೊಮ್ಮೆ ಧ್ವನಿ ಎತ್ತಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರವು ಬಂಡವಾಳಶಾಹಿಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದಾರೆ.