Tag: agricultural pond

  • Davanagere | ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

    Davanagere | ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

    ದಾವಣಗೆರೆ: ಕೃಷಿ ಹೊಂಡಕ್ಕೆ (Agricultural Pond) ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿದ ಮನಕಲಕುವ ಘಟನೆ ಜಗಳೂರಿನ (Jagalur) ಅಸಗೋಡು ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕಿಯರನ್ನು ಗಂಗಮ್ಮ (12) ಹಾಗೂ ಕಾವ್ಯ (8) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಪೋಷಕರು ಮಕ್ಕಳ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಬಾಲಕಿಯರು ಮೃತಪಟ್ಟಿದ್ದಾರೆ. ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ದಾಸರಹಳ್ಳಿಯಲ್ಲಿ ತಲೆಯೆತ್ತಿದ್ದ ಗುಂಡಿ ಸಮಸ್ಯೆ – ಡೆಡ್‌ಲೈನ್ ಮುಗಿದರೂ ದುರಸ್ತಿಯಿಲ್ಲ

    ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

  • ಕೃಷಿ ಹೊಂಡದಲ್ಲಿ ಬಿದ್ದ ಕುರಿ ರಕ್ಷಣೆ ಮಾಡಿ ಮೇಲೆ ಬರಲಾಗದೆ ಪ್ರಾಣ ಬಿಟ್ಟ ಮಾಲೀಕ

    ಕೃಷಿ ಹೊಂಡದಲ್ಲಿ ಬಿದ್ದ ಕುರಿ ರಕ್ಷಣೆ ಮಾಡಿ ಮೇಲೆ ಬರಲಾಗದೆ ಪ್ರಾಣ ಬಿಟ್ಟ ಮಾಲೀಕ

    ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಬಿದ್ದ ಕುರಿಯನ್ನ ರಕ್ಷಣೆ ಮಾಡಿದ ಕುರಿಯ ಮಾಲೀಕರೊಬ್ಬರು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಿಳ್ಳವೆಂಕಟರೋಣಪ್ಪ ಮೃತ ವ್ಯಕ್ತಿ. ಕುರಿಗಳನ್ನ ಮೇಯಿಸುತ್ತಿದ್ದ ವೇಳೆ ಪಾಪಣ್ಣ ಎಂಬವರ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಕುರಿಯೊಂದು ಬಿದ್ದಿದೆ. ಈ ವೇಳೆ ಕೃಷಿ ಹೊಂಡಕ್ಕೆ ಜಿಗಿದು ಕುರಿಯನ್ನ ಮೇಲೆ ಎತ್ತಿ ಹಾಕಿದ ಮಾಲೀಕ ವೆಂಕಟರೋಣಪ್ಪ, ಕೃಷಿ ಹೊಂಡದಿಂದ ಕೊನೆಗೆ ತಾನು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಜೀವ ಬಿಟ್ಟಿದ್ದಾರೆ.

    ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಮೃತದೇಹವನ್ನ ಮೇಲೆತ್ತಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷಿ ಹೊಂಡಕ್ಕೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನೀರುಪಾಲು!

    ಕೃಷಿ ಹೊಂಡಕ್ಕೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನೀರುಪಾಲು!

    ಕೋಲಾರ: ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಮೃತಪಟ್ಟಿರೋ ಘಟನೆ ಕೋಲಾರ ತಾಲೂಕಿನ ಹರಟಿ ಗ್ರಾಮದಲ್ಲಿ ನಡೆದಿದೆ.

    ಶ್ರೀರಾಮಪ್ಪ(50) ಹಾಗೂ ಲಲಿತಮ್ಮ(45) ಮೃತ ದುರ್ದೈವಿ ದಂಪತಿಯಾಗಿದ್ದು, ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಕೆಲಸಕ್ಕೆಂದು ಹೊಲಕ್ಕೆ ಹೋದ ವೇಳೆ ಲಲಿತಮ್ಮ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಪತ್ನಿಯನ್ನು ರಕ್ಷಿಸಲೆಂದು ಹೋದ ಪತಿ ಶ್ರೀರಾಮಪ್ಪ ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಯಾದಗಿರಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

    ಯಾದಗಿರಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

    ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬಿರನಕಲ್ ಗ್ರಾಮದಲ್ಲಿ ನೀರು ಕುಡಿಯಲು ಹೋದ ಬಾಲಕಿಯರಿಬ್ಬರು ಸಾವನಪ್ಪಿದ ದಾರುಣ ಘಟನೆ ನಡೆದಿದೆ.

    ಶರಣಮ್ಮ (10) ಹಾಗೂ ನಾಗಮ್ಮ (11) ಮೃತ ದುರ್ದೈವಿ ಬಾಲಕಿಯರು. ಬಿರನಕಲ್ ಗ್ರಾಮದ ಹೊರ ಭಾಗದಲ್ಲಿ ಬಾಲಕಿಯರು ನೀರು ಕುಡಿಯಲು ಹೊಲದಲ್ಲಿನ ಕೃಷಿ ಹೊಂಡಕ್ಕಿಳಿದಾಗ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಬಾಗಲಕೋಟೆಯ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ಜೆಸಿಬಿ ಹರಿದು 1 ವರ್ಷ 4 ತಿಂಗಳ ಕೀರ್ತಿ ಎಂಬಾಕೆ ಸಾವನ್ನಪ್ಪಿದ್ದಾಳೆ. ಈಕೆ ನಗರದ ಪರಮಾನಂದ್ ಸೈದಾಪುರ ಅವರ ಪುತ್ರಿ. ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದು ಈ ಅವಘಡ ಸಂಭವಿಸಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.