Tag: agra

  • ಹೋಟೆಲ್‍ನಲ್ಲಿ ಹಸಿಬಿಸಿ ದಂಧೆ- ನಾಲ್ವರು ವಿವಾಹಿತೆಯರು ಸೇರಿದಂತೆ ಯುವತಿ ವಶಕ್ಕೆ!

    ಹೋಟೆಲ್‍ನಲ್ಲಿ ಹಸಿಬಿಸಿ ದಂಧೆ- ನಾಲ್ವರು ವಿವಾಹಿತೆಯರು ಸೇರಿದಂತೆ ಯುವತಿ ವಶಕ್ಕೆ!

    – ಗಂಡಂದಿರಿಗೆ ತಿಳಿಯದಂತೆ ವೇಶ್ಯಾವಾಟಿಕೆ
    – ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆಯರು

    ಲಕ್ನೋ: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ವಿವಾಹಿತೆಯರು, ಓರ್ವ ಯುವತಿ ಮತ್ತು ಗ್ರಾಹಕರಿಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದಂಧೆಯ ಕಿಂಗ್ ಪಿನ್ ಎಸ್ಕೇಪ್ ಆಗಿದ್ದಾನೆ. ಉತ್ತರ ಪ್ರದೇಶದ ಆಗ್ರಾ ರಕಾಬಂಗಾಜ್‍ನಲ್ಲಿರುವ ಆರ್.ಬಿ.ರೆಸಿಡೆನ್ಸಿ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.

    ಹೋಟೆಲ್ ಮೇಲೆ ದಾಳಿ ನಡೆಸಿದಾಗ ವಿವಿಧ ಕೋಣೆಗಳಲ್ಲಿದ್ದ ಒಟ್ಟು ಏಳು ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ದಾಳಿಯಾಗುತ್ತಲೇ ಭಯಗೊಂಡ ಯುವತಿ ಗೋಳು ಅಂತ ಕಣ್ಣೀರಿಟ್ಟಿದ್ದಾಳೆ. ಎಲ್ಲರನ್ನ ಠಾಣೆಗೆ ಕರೆ ತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಗಂಟೆಗಳ ಲೆಕ್ಕದಲ್ಲಿ ಹಣ: ಮಹಿಳೆಯರು ಫಿರೋಜಾಬಾದ್, ಧನೌಲಿ, ಮಲ್ಪುರಾ ನಿವಾಸಿಗಳೆಂದು ತಿಳಿದು ಬಂದಿದೆ. ಹೋಟೆಲ್ ಹೊರಗೆ ನಿಲ್ಲುತ್ತಿದ್ದ ವ್ಯಕ್ತಿ ಗಂಟೆಗೆ 600 ರೂ.ಯಂತೆ ಕೋಣೆಗಳನ್ನ ಬಾಡಿಗೆ ನೀಡುತ್ತಿದ್ದನು. ಇನ್ನು ಹೋಟೆಲ್ ನಲ್ಲಿದ್ದ ಮಹಿಳೆಯರು ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದರು.

    ವಿವಾಹಿತ ಮಹಿಳೆಯರು: ವೇಶ್ಯಾವಾಟಿಕೆ ಸಿಲುಕಿರುವ ಮಹಿಳೆಯರಿಗೆ ಗಂಡ, ಮಕ್ಕಳು ಇವೆ. ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೊರೊನಾ ವೇಳೆ ಕೆಲಸ ಕಳೆದುಕೊಂಡಿದ್ದರು. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಇವರು ದೇಹ ವ್ಯಾಪಾರಕ್ಕೆ ಮುಂದಾಗಿದ್ದರು. ಆದ್ರೆ ಇವರ ಈ ಕೆಲಸ ಕುಟುಂಬಸ್ಥರಿಗೆ ಹೇಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ.

    ಇದೇ ಪ್ರಕರಣದಲ್ಲಿ ಸಿಲುಕಿರುವ ಯುವತಿ ತನ್ನ ಹೆಸರು ಮತ್ತು ವಿಳಾಸ ಹೇಳಿಲ್ಲ. ಗೆಳೆಯನ ಜೊತೆ ಬಂದಿದ್ದೆ ಎಂದು ಕಣ್ಣೀರು ಹಾಕುತ್ತಿದ್ದಾಳೆ. ಆದ್ರೆ ರೂಮ್ ಬುಕ್ ಮಾಡಿದ್ಯಾಕೆ ಎಂಬ ಪ್ರಶ್ನೆಗೆ ಯುವತಿ ಉತ್ತರಿಸುತ್ತಿಲ್ಲ. ಬಂಧಿತ ಯುವಕರು ಮಲ್ಪುರಾದವರು ಎಂದು ವರದಿಯಾಗಿದೆ.

  • ಬಾಬಾ ಕಾ ಡಾಬಾ ಬಳಿಕ ಮತ್ತೊಂದು ವೀಡಿಯೋ ವೈರಲ್- 90ರ ವೃದ್ಧನ ಸಹಾಯಕ್ಕಾಗಿ ಮನವಿ

    ಬಾಬಾ ಕಾ ಡಾಬಾ ಬಳಿಕ ಮತ್ತೊಂದು ವೀಡಿಯೋ ವೈರಲ್- 90ರ ವೃದ್ಧನ ಸಹಾಯಕ್ಕಾಗಿ ಮನವಿ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಒಂದೇ ಒಂದು ವೀಡಿಯೋದಿಂದ ವೃದ್ಧ ದಂಪತಿಯ ಬದುಕು ಬದಲಾದ ಬೆನ್ನಲ್ಲೇ ಇದೀಗ ಮತ್ತೊಂದು ವೃದ್ಧನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಹೌದು. ಆಗ್ರಾದ 90 ವರ್ಷದ ವೃದ್ಧ ಬದುಕಿನ ಬಂಡಿ ಸಾಗಿಸಲು ರಸ್ತೆ ಬಂದಿ ಒಂದು ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆದರೆ ಕೊರೊನಾ ವೈರಸ್ ಎಂಬ ಮಹಾಮಾರಿ ಬಂದ ಬಳಿಕ ವೃದ್ಧ ತನ್ನ ಆದಾಯ ಕಳೆದುಕೊಂಡು ಕಣ್ಣೀರಾಕಿದ್ದಾರೆ.

    ವೃದ್ಧನ ಸ್ಟಾಲ್ ವೀಡಿಯೋವನ್ನು ಇನ್ ಸ್ಟಾಗ್ರಾಂ ಬಳಕೆದಾರ ಧನಿಷ್ಟ ಎಂಬವರು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಆಗ್ರಾ ಮೂಲದ 90 ವರ್ಷದ ವೃದ್ಧ ಕಳೆದ 40 ವರ್ಷಗಳಿಂದ ಕಾಂಜಿ ಬಡಾ(ಹೆಸರುಬೇಳೆ ವಡೆ)ವನ್ನು ಮಾರಾಟ ಮಾಡುತ್ತಿದ್ದರು. ಆದರೆ ಚೀನಿ ವೈರಸ್ ಕೋವಿಡ್ 19 ದೇಶಕ್ಕೆ ಕಾಲಿಟ್ಟ ಬಳಿಕ ವೃದ್ಧ ದಿನಕ್ಕೆ ಕೇವಲ 250-300 ರೂ. ಮಾತ್ರ ಸಂಪಾದನೆ ಮಾಡುತ್ತಿದ್ದಾರೆ. ಇದರಿಂದ ಬದುಕಿನ ಬಂಡಿ ಸಾಗಿಸಲು ವೃದ್ಧ ಪರದಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CGFfkQ5llGZ/?utm_source=ig_embed

    ವೃದ್ಧ ನಡೆಸುತ್ತಿರುವ ಸ್ಟಾಲ್ ವೀಡಿಯೋ ಹಂಚಿಕೊಂಡಿರುವ ಧನಿಷ್ಟ, ನಿಖರವಾದ ಸ್ಥಳ ಹಾಗೂ ವೃದ್ಧನ ಈ ಸ್ಟಾಲ್ ಗೆ ಭೇಟಿ ನೀಡುವ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಚಿಕ್ಕಪ್ಪ ಕಳೆದ 40 ವರ್ಷಗಳಿಂದ ಕಾಂಜಿ ಬಡಾವನ್ನು ಮಾರಾಟ ಮಾಡುತ್ತಿದ್ದಾರೆ. ಈಗ ಅವರಿಗೆ 90 ವರ್ಷ ವಯಸ್ಸು. ಸಾಂಕ್ರಾಮಿಕ ರೋಗದಿಂದಾಗಿ ಅವರು ದಿನಕ್ಕೆ ಕೇವಲ 250-300 ರೂ. ಅಷ್ಟೇ ಸಂಪಾದಿಸುತ್ತಿದ್ದಾರೆ. ಇದರಿಂದ ಅವರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ನೀವೇಲ್ಲರೂ ಅವರ ಸ್ಟಾಲ್ ಗೆ ಬಂದು, ಅವರ ಕೈ ರುಚಿ ಸವಿದು ಸಹಾಯ ಮಾಡುವಂತೆ ಧನಿಷ್ಟ ಕೇಳಿಕೊಂಡಿದ್ದಾರೆ.

    ಅಲ್ಲದೆ ವೃದ್ಧನ ಸ್ಟಾಲ್ ಇರುವ ಜಾಗದ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ. ಪ್ರೊಫೆಸರ್ ಕಾಲೋನಿ, ಕಮಲಾ ನಗರ್, ಆಗ್ರಾ, ಡಿಸೈರ್ ಬೇಕರಿ ಬಳಿ ಇರುವುದಾಗಿ ತಿಳಿಸಿದ್ದಾರೆ. ಸದ್ಯ ನಾನು ಇಲ್ಲಿದ್ದು, ನೀವು ಕೂಡ ಇಲ್ಲಿ ಬಂದು, ಆಹಾರ ಸವಿಯಿರಿ. ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡುವಿರಿ ಎಂದು ನಾನು ಭಾವಿಸುತ್ತೇನೆ. ಪ್ರತಿ ದಿನ ಸಂಜೆ 5.30ಕ್ಕೆ ಅವರು ಸ್ಟಾಲ್ ತೆರೆಯುತ್ತಾರೆ ಎಂದು ಧನಿಷ್ಟ ಮಾಹಿತಿ ನೀಡಿದ್ದಾರೆ.

    ಧನಿಷ್ಟ ಇಷ್ಟು ಹೇಳುತ್ತಿದ್ದಂತೆಯೇ ಸಾವಿರಾರು ಮಂದಿ ಕಮೆಂಟ್ ಮಾಡಿ, ವೃದ್ಧನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

    https://twitter.com/VasundharaTankh/status/1313881005179064320

  • ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    – ಉತ್ತರ ಪ್ರದೇಶದಲ್ಲಿ ಗುಲಾಮ ಮನಸ್ಥಿತಿಗೆ ಸ್ಥಾನವಿಲ್ಲ

    ಲಕ್ನೋ: ಆಗ್ರಾದ ಸುಪ್ರಸಿದ್ಧ ತಾಜ್ ಮಹಲ್ ಆವರಣದಲ್ಲಿರುವ ಮೊಘಲ್ ವಸ್ತು ಸಂಗ್ರಹಾಲಯಕ್ಕೆ ಮರು ನಾಮಕರಣ ಮಾಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಎಂದು ಹೆಸರಿಡಲಾಗಿದೆ. ಈ ಕುರಿತು ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

    ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ ಎಂದು ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಇಂತಹ ಗುಲಾಮ ಮನಸ್ಥಿತಿಯ ಯಾವುದೇ ವಿಷಯವನ್ನು ಬಿಜೆಪಿ ಸರ್ಕಾರ ತೆಗೆದು ಹಾಕುತ್ತದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ನಿರ್ಮಾಣ ಹಂತದಲ್ಲಿರುವ ಆಗ್ರಾದ ವಸ್ತುಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಎಂದು ನಾಮಕರಣ ಮಾಡಲಾಗಿದೆ. ಹೊಸ ಉತ್ತರ ಪ್ರದೇಶದಲ್ಲಿ ಗುಲಾಮಿ ಮನಸ್ಥಿತಿಗಳಿಗೆ ಯಾವುದೇ ರೀತಿಯ ಸ್ಥಾನವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೇವಲ ಆಗ್ರಾದ ವಸ್ತುಸಂಗ್ರಹಾಲಯ ಮಾತ್ರವಲ್ಲ ಅಲಹಬಾದ್‍ಗೆ ಪ್ರಯಾಗ್‍ರಾಜ್ ಸೇರಿ ಯೋಗಿ ಆದಿತ್ಯನಾಥ್ ಅವರು ತಮ್ಮ 3 ವರ್ಷಗಳ ಆಡಳಿತಾವಧಿಯಲ್ಲಿ ಹಲವು ಸ್ಥಳಗಳು, ರಸ್ತೆಗಳ ಹೆಸರನ್ನು ಬದಲಾಯಿಸಿದ್ದಾರೆ. ಅಲ್ಲದೆ ಗುಲಾಮಿ ಸಂಸ್ಕೃತಿಗೆ ಉತ್ತರ ಪ್ರದೇಶದಲ್ಲಿ ಸ್ಥಾನಮಾನವಿಲ್ಲ ಎಂದು ಹೇಳಿದ್ದಾರೆ.

    ಮೊಘಲ್ ಮ್ಯೂಸಿಮ್ ಯೋಜನೆಯನ್ನು ಕಳೆದ ಬಾರಿಯ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ 2015ರಲ್ಲಿ ಜಾರಿಗೆ ತರಲಾಗಿತ್ತು. ತಾಜ್ ಮಹಲ್ ಬಳಿಯ ಒಟ್ಟು 6 ಎಕರೆ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಮೊಘಲ್ ಸಂಸ್ಕೃತಿ, ಕಲಾಕೃತಿಗಳು, ವರ್ಣಚಿತ್ರಗಳು, ಪಾಕ ಪದ್ಧತಿ, ವೇಷ ಭೂಷಣ, ಮೊಘಲ್ ಯುಗ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಹಾಗೂ ಪ್ರದರ್ಶನ ಕಲೆಗಳನ್ನು ಒಳಗೊಂಡಿದೆ.

  • ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಕೊಲೆ

    ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಕೊಲೆ

    -ಕೊಲೆಗೈದು, ಶವಗಳಿಗೆ ಬೆಂಕಿ ಹಚ್ಚಿರೋ ಶಂಕೆ

    ಲಕ್ನೋ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ನಾಗ್ಲಾ ಕಿಶನ್‍ಲಾಲ್ ಇಲಾಖೆಯಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಮಗ ಮೂವರ ಶವಗಳು ಮನೆಯಲ್ಲಿ ದೊರೆತಿವೆ.

    ರಘುವೀರ್ (55), ಮೀರಾ ಮತ್ತು ಬಬ್ಲೂ (22) ಮೃತ ಕುಟುಂಬಸ್ಥರು. ರಘುವೀರ್ ದಿನಸಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಸಂಜೆ ರಘುವೀರ್ ಸಂಬಂಧಿಕರ ಊರಿನಿಂದ ಹಿಂದಿರುಗಿದ್ದರು. ಇಂದು ಬೆಳಗ್ಗೆ ಮನೆ ಬಾಗಿಲು ಹಾಕಿದ್ದರಿಂದ ನೆರೆಹೊರೆಯವರು ಕಿಟಕಿಯಲ್ಲಿ ಇಣುಕಿ ನೋಡಿದಾಗ ಮೂವರ ಶವಗಳ ಕಂಡಿವೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೊಂದು ಕೊಲೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

    ಬೆಳಗ್ಗೆ ಹಾಲಿನ ವ್ಯಕ್ತಿ ಬಂದ್ರೂ ಯಾರು ಬಾಗಿಲು ತೆರೆದಿಲ್ಲ. ಬಬ್ಲೂ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯ ಆಸುಪಾಸಿನಲ್ಲಿ ಅಂಗಡಿ ತೆರೆಯುತ್ತಿದ್ದ. ಆದ್ರೆ ಇಂದು ಅಂಗಡಿ ತೆರೆದಿರಲಿಲ್ಲ. ಕಿಟಕಿಯಲ್ಲಿ ನೋಡಿದಾಗ ರಘುವೀರ್ ಕುತ್ತಿಗೆಯಲ್ಲಿ ಹಗ್ಗವಿತ್ತು. ಇತ್ತ ಮೀರಾ ಮತ್ತು ಬಬ್ಲೂ ಕೈಗಳನ್ನು ಕಟ್ಟಲಾಗಿತ್ತು. ಒಂದು ವೇಳೆ ಬೆಂಕಿ ಹಚ್ಚಿಕೊಂಡಿದ್ದರೆ ಅವರ ಚೀರಾಟ ನಮಗೆ ಕೇಳಿಸಬೇಕಿತ್ತು. ಆದ್ರೆ ನಮಗೆ ಯಾವ ಧ್ವನಿಯೂ ಕೇಳಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

  • ನನ್ನದು ಒನ್ ಸೈಡ್ ಲವ್, ಒಪ್ಪದಕ್ಕೆ ಕೊಂದೆ-ತಪ್ಪೊಪ್ಪಿಕೊಂಡ ವೈದ್ಯ

    ನನ್ನದು ಒನ್ ಸೈಡ್ ಲವ್, ಒಪ್ಪದಕ್ಕೆ ಕೊಂದೆ-ತಪ್ಪೊಪ್ಪಿಕೊಂಡ ವೈದ್ಯ

    -ಮನೆಯ ಬಳಿ ಪಿಕ್ ಮಾಡಿದ್ದ

    ಲಕ್ನೋ: ಆಗ್ರಾದ ಮೆಡಿಕಲ್ ವಿದ್ಯಾರ್ಥಿನಿ ಡಾ.ಯೋಗಿತಾ ಗೌತಮ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

    ಡಾ. ವಿವೇಕ್ ತಿವಾರಿ ಬಂಧಿತ ಆರೋಪಿ. ಮೊರದಾಬಾದ್ ವಿಶ್ವವಿದ್ಯಾಲಯದಲ್ಲಿ ವಿವೇಕ್ ತಿವಾರಿ ಮತ್ತು ಯೋಗಿತಾ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನಲ್ಲಿ ಸೀನಿಯರ್ ಆಗಿದ್ದ ವಿವೇಕ್ ಎರಡು ವರ್ಷಗಳ ಹಿಂದೆ ಯೋಗಿತಾ ಮುಂದೆ ಮದುವೆ ಪ್ರಸ್ತಾಪ ಇರಿಸಿದ್ದ. ಆದ್ರೆ ಯೋಗಿತಾ ಪ್ರಪೋಸಲ್ ತಿರಸ್ಕರಿಸಿದ್ದು. ತದನಂತರ ಯೋಗಿತಾ ಆಗ್ರಾದ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಸ್ತ್ರೀರೋಗ ವಿಭಾಗದಲ್ಲಿ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದರು.

    ಆಗ್ರಾದ ಜಲೌನ್ ಗೆ ಮೆಡಿಕಲ್ ಆಫಿಸರ್ ಆಗಿ ವಿವೇಕ್ ವರ್ಗಾವಣೆಗೊಂಡಿದ್ದನು. ಆಗಸ್ಟ್ 18ರಂದು ಮಾತನಾಡುವ ನೆಪದಲ್ಲಿ ಯೋಗಿತಾರನ್ನ ಕರೆದಿದ್ದಾನೆ. ತನ್ನ ಕಾರಿನಲ್ಲಿಯೇ ಯೋಗಿತಾ ವಾಸವಾಗಿದ್ದ ಬಾಡಿಗೆ ಮನೆಯಿಂದ ಪಿಕ್ ಮಾಡಿದ್ದಾನೆ. ಈ ವೇಳೆ ಕಾರ್ ನಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ವಿವೇಕ್ ಬಲವಾಗಿ ಯೋಗಿತಾ ತಲೆಗೆ ಹೊಡೆದಿದ್ದಾನೆ. ಪರಿಣಾಮ ಯೋಗಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಯೋಗಿತಾ ಶವವನ್ನು ದೌಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಮ್ರೌಲಿ ಕತ್ರಾ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ.

    ಆಗಸ್ಟ್ 18 ಮಂಗಳವಾರ ರಾತ್ರಿ ಯೋಗಿತಾ ಪೋಷಕರು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಡಾ.ವಿವೇಕ್ ತಿವಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ವಿಚಾರಣೆ ವೇಳೆ ಆರೋಪಿ ವಿವೇಕ್, ತನ್ನದು ಒನ್ ಸೈಡ್ ಲವ್, ಪ್ರೀತಿ ಒಪ್ಪಿಕೊಳ್ಳದಕ್ಕೆ ಜಗಳ ನಡೆದಾಗ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದರಿಂದ ಸಾವನ್ನಪ್ಪಿದಳು ಎಂದು ವಿವೇಕ್ ಒಪ್ಪಿಕೊಂಡಿದ್ದಾನೆ.

  • ಕಾಲೇಜಿನ ಅನತಿ ದೂರದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆ

    ಕಾಲೇಜಿನ ಅನತಿ ದೂರದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆ

    -ವೈದ್ಯನಿಂದ ಕಿರುಕುಳ, ಬೆದರಿಕೆ ಆರೋಪ
    -ವಿದ್ಯಾರ್ಥಿನಿ ಪೋಷಕರಿಂದ ದೂರು ದಾಖಲು

    ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ಬೆಳಗ್ಗೆ 25 ವರ್ಷದ ಮೆಡಿಕಲ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಕಾಲೇಜಿನ ಅನತಿ ದೂರದಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

    ವಿದ್ಯಾರ್ಥಿನಿ ಯೋಗಿತಾ ಗೌತಮ್ ದೆಹಲಿಯ ಶಿವಪುರಿಯ ನಿವಾಸಿಯಾಗಿದ್ದು, ಆಗ್ರಾದಲ್ಲಿ ವಾಸವಾಗಿದ್ದರು. ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಮಂಗಳವಾರ ರಾತ್ರಿ ಯುವತಿ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಷಕರು ದೂರು ದಾಖಲಿಸಿದ ಕೆಲ ಗಂಟೆಯಲ್ಲಿ ಯುವತಿ ಶವ ಪತ್ತೆಯಾಗಿದೆ.

    ಕಾಲೇಜಿನ ಓರ್ವ ವೈದ್ಯ ಪುತ್ರಿಗೆ ಕಿರುಕುಳ ನೀಡುತ್ತಿದ್ದ. ಬೆದರಿಕೆ ಸಹ ಹಾಕಿದ್ದನು ಎಂದು ಯುವತಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರ ದೂರನಿನ್ವಯ ಪೊಲೀಸರು ವೈದ್ಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಬಬಲೂ ಕುಮಾರ್, ಪೋಷಕರ ಪ್ರಕಾರ ಜಾಲೌನ್ ನಗರದ ವೈದ್ಯನೋರ್ವ ಮಗಳಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಧಮ್ಕಿ ಸಹ ಹಾಕಿದ್ದನು. ಬುಧವಾರ ಬೆಳಗ್ಗೆ ದೊರೆತ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಯುವತಿಯ ಕತ್ತು ಮತ್ತು ತಲೆಯ ಭಾಗಗಳಲ್ಲಿ ಗಾಯಗಳು ಕಂಡು ಬಂದಿವೆ. ಘಟನೆಗೂ ಮುನ್ನ ಯುವತಿ ಜೊತೆ ಗಲಾಟೆ ನಡೆದಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳದ ವ್ಯಾಪ್ತಿಯ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  • ಸಿಡಿಲು ಬಡಿದು ಪ್ರೇಮ ಸೌಧ ತಾಜ್ ಮಹಲ್‍ಗೆ ಹಾನಿ

    ಸಿಡಿಲು ಬಡಿದು ಪ್ರೇಮ ಸೌಧ ತಾಜ್ ಮಹಲ್‍ಗೆ ಹಾನಿ

    ಆಗ್ರಾ: ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ವರುಣ ದೇವ ವಿಜೃಂಭಿಸಿದ ಕಾರಣ ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ.

    ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಹಿಂದೆಯೂ ಹಲವು ಬಾರಿ ಪ್ರಕೃತಿಯ ವೈಪರಿತ್ಯದ ಕಾರಣದಿಂದ ತಾಜ್‍ಮಹಲ್ ಹಾನಿಗೊಳಗಾಗಿತ್ತು. 2018ರ ಏಪ್ರಿಲ್‍ನಲ್ಲಿ ಸುರಿದ ಭಾರೀ ಮಳೆಗೆ ತಾಜ್‍ಮಹಲ್ ಪ್ರವೇಶ ದ್ವಾರದಲ್ಲಿದ್ದ ಪಿಲ್ಲರಿಗೆ ಹಾನಿಯಾಗಿತ್ತು. ಉಳಿದಂತೆ ಉತ್ತರ ಪ್ರದೇಶದಲ್ಲಿ ಸಿಡಿಲಿಗೆ ಬಲಿಯಾದ 13 ಮಂದಿ ಕುಟುಂಬಗಳಿಗೆ ಯುಪಿ ಸಿಎಂ ಸಂತ್ವಾನ ತಿಳಿಸಿದ್ದಾರೆ. ಅಲ್ಲದೇ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. ಇತ್ತ ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

  • ಗ್ಲೌಸ್ ಇಲ್ಲ, ನಾಳೆ ಬನ್ನಿ ಅಂತ ಕಳುಹಿಸಿದ್ರು- ಹೊಟ್ಟೆಯಲ್ಲೇ ಮಗು ಸಾವು

    ಗ್ಲೌಸ್ ಇಲ್ಲ, ನಾಳೆ ಬನ್ನಿ ಅಂತ ಕಳುಹಿಸಿದ್ರು- ಹೊಟ್ಟೆಯಲ್ಲೇ ಮಗು ಸಾವು

    – ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ದುರ್ಮರಣ

    ಲಕ್ನೋ: ಉತ್ತರಪ್ರದೇಶದ ಆಗ್ರಾದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ದೇಶದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆ ಹೇಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಶಸ್ತ್ರಚಿಕಿತ್ಸೆಗೆ ಬೇಕಾದ ಗ್ಲೌಸ್ ಗಳು ಇಲ್ಲ ಎಂದು ಹೇಳಿ ಸಿಬ್ಬಂದಿ ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

    ಉತ್ತರಪ್ರದೇಶ ಆಗ್ರಾದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿಯನ್ನು ಗುಡ್ಡಿ ದೇವಿ ಹಾಗೂ ಆಕೆಯ ಪತಿ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಈ ಸಮುದಾಯ ಆರೋಗ್ಯ ಕೇಂದ್ರದ ಆಸು-ಪಾಸಿನಲ್ಲಿಯೇ ವಾಸವಾಗಿದ್ದಾರೆ.

    ಮೇ 18ರಂದು ರಾತ್ರಿ 9.30ರ ಸುಮಾರಿಗೆ ಗುಡ್ಡಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಹತ್ತಿರವೇ ಇರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಗುಡ್ಡಿ ದೇವಿಯನ್ನು ಪರೀಕ್ಷಿಸಿದ ಮಹಿಳಾ ಸಿಬ್ಬಂದಿ ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ಅನಿಲ್ ಕುಮಾರ್ ಗೆ ತಿಳಿಸಿದ್ದಾರೆ. ಅಲ್ಲದೆ ನಾಳೆ ಬನ್ನಿ ಎಂದು ಹೇಳಿದ್ದಾರೆ.

    ಇತ್ತ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಅನಿಲ್, ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಸಿಬ್ಬಂದಿಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಅನಿಲ್ ಮಾತನ್ನು ಸಿಬ್ಬಂದಿ ಕೇಳಲು ತಯಾರಿರಲಿಲ್ಲ. ತನ್ನ ಮನವಿಯನ್ನು ಯಾರೂ ಆಲಿಸದಿದ್ದಾಗ ಅನಿಲ್ ಸಹಾಯಕ್ಕಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮೊರೆ ಹೋದರು. ಈ ವಿಚಾರ ತಿಳಿದ ಸಿಬ್ಬಂದಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಲ್ಲದೇ, ಅನಿಲ್ ಜೊತೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾರೆ.

    ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಚಿಕಿತ್ಸೆ ನೀಡಲು ಆರಂಭಿಸಿದ ವೈದ್ಯರು ಒಂದು ಜೊತೆ ಗ್ಲೌಸ್ ತರುವಂತೆ ಅನಿಲ್ ಗೆ ಹೇಳಿದ್ದಾರೆ. ಆದರೆ ದುರಾದೃಷ್ಟ ಅಂದರೆ ಲಾಕ್ ಡೌನ್ ಪರಿಣಾಮ 1 ಗಂಟೆ ಕಾಲ ಹುಡುಕಾಡಿದರೂ ಅನಿಲ್‍ಗೆ ಎಲ್ಲಿಯೂ ಗ್ಲೌಸ್ ಸಿಗಲಿಲ್ಲ. ಹೀಗಾಗಿ ವೈದ್ಯರು ಗಿಡ್ಡು ದೇವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಪರಿಣಾಮ ದಂಪತಿ ನಸುಕಿನ ಜಾವ 3 ಗಂಟೆ ಸುಮಾರಿಗೆ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.

    ಮರುದಿನ ಗುಡ್ಡಿ ದೇವಿ ಏಕಾಏಕಿ ಪ್ರಜ್ಞಾಹೀನಳಾಗಿ ಬಿದ್ದಳು. ಹೀಗಾಗಿ ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು, ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ ಎಂಬ ಆಘಾತಕಾರಿ ಸುದ್ದಿಯನ್ನು ನೀಡಿದರು. ಇದನ್ನು ಕೇಳಿದ ಪತಿ ಅನಿಲ್ ದಂಗಾಗಿ ಹೋದರು.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅನಿಲ್, ಮೊದಲು ಹೋದ ಆಸ್ಪತ್ರೆಯಲ್ಲೇ ಸರಿಯಾದ ಚಿಕಿತ್ಸೆ ಸಿಗುತ್ತಿದ್ದರೆ ನನ್ನ ಮಗು ಬದುಕುಳಿಯುತ್ತಿತ್ತು. ಆದರೆ ಸಿಬ್ಬಂದಿಯಿಂದಾಗಿ ಇಂದು ನನ್ನ ಮಗು ಬದುಕಲಿಲ್ಲ. ಹೀಗಾಗಿ ಅಧಿಕಾರಿಗಳು ಅಕಲ್ಲಿನ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

    ಘಟನೆಯ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ ಪರಿಣಾಮ ಎಟ್ಮಾಡ್ಪುರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಜ್ಯೋತಿ ರೈ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೋಟಿಸ್ ಕಳುಹಿಸಿದ್ದಾರೆ.

  • ವಿಡಿಯೋ: ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

    ವಿಡಿಯೋ: ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

    ಲಕ್ನೋ: ಕೊರೊನಾ ವೈರಸ್ ಹರಡದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವೊಂದು ಮನಕಲಕುವ ಘಟನೆಗಳು ನಡೆದಿದೆ. ಇದರಲ್ಲಿ ಆಗ್ರಾದಲ್ಲಿ ನಡೆದ ಘಟನೆ ಕೂಡ ಒಂದು. ರಸ್ತೆಯಲ್ಲಿ ಚೆಲ್ಲಿದ ಹಾಲಿಗಾಗಿ 4 ಶ್ವಾನಗಳು ಹಾಗೂ ವ್ಯಕ್ತಿ ಮುಗಿಬಿದ್ದ ಘಟನೆ ನೋಡಿದರೆ ಎಂಥವರ ಮನಸ್ಸು ಕರಗದೇ ಇರದು.

    ಹೌದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೂ ಆಹಾರ ಸಿಗುತ್ತಿಲ್ಲ. ಕೆಲವು ಮಾನವೀಯ ಹೃದಯವಿದ್ದವರು ಬಡವರಿಗೆ ಮೂರು ಹೊತ್ತು ಆಹಾರ ಹಂಚುತ್ತಿದ್ದಾರೆ. ಆದರೂ ಕೆಲವಡೆ ನೀರು, ಆಹಾರ ಇಲ್ಲದೆ ಪ್ರಾನಿಗಳು ಸಾವನ್ನಪುತ್ತಿವೆ. ಈ ಮಧ್ಯೆ ಹಸಿವಿನಿಂದ ಕಂಗೆಟ್ಟು ಒಂದು ಕಡೆ ಬಡ ವ್ಯಕ್ತಿ, ಇನ್ನೊಂದೆಡೆ 4 ಶ್ವಾನಗಳು ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ದೃಶ್ಯ ನೋಡಿದಾಗ ಕಣ್ಣಂಚಲ್ಲಿ ನೀರು ಬರುತ್ತದೆ.

    ಈ ಘಟನೆ ಸೋಮವಾರ ಬೆಳಗ್ಗೆ ತಾಜ್ ಮಹಲ್ ನಿಂದ 6 ಕಿ.ಮಿ ದೂರದಲ್ಲಿ ನಡೆದಿದೆ. ಹಾಲು ತುಂಬಿದ್ದ ಟ್ಯಾಂಕರ್ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮ ಹಾಲು ರಸ್ತೆಯಲ್ಲೆ ಚೆಲ್ಲಿದ್ದು, ಹೊಳೆಯಂತೆ ಹರಿದಿದೆ. ಕೂಡಲೇ ಅಲ್ಲೇ ಇದ್ದ ಶ್ವಾನಗಳು ಹಾಗೂ ಹಸಿವಿನಿಂದ ಬಳಲಿದ್ದ ವ್ಯಕ್ತಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಒಂದೆಡೆ ಶ್ವಾನಗಳು ಹಾಲನ್ನು ನೆಕ್ಕುತ್ತಿದ್ದರೆ ಇನ್ನೊಂದೆಡೆ ವ್ಯಕ್ತಿ ತಾನು ಒಂದು ಸಣ್ಣ ಮಣ್ಣಿನ ಪಾತ್ರೆಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಇದರ ಸಂಪೂರ್ಣ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಹಸಿವು ಜನರನ್ನು ಯಾವ ಮಟ್ಟಕ್ಕೆ ಎಳೆದೊಯ್ಯುತ್ತದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ.

  • ಯುಪಿ 15 ಜಿಲ್ಲೆಗಳು ಏ.30ರವರೆಗೂ ಲಾಕ್‍ಡೌನ್ – ಮನೆಯಿಂದ ಯಾರೂ ಹೊರಬರುವಂತಿಲ್ಲ

    ಯುಪಿ 15 ಜಿಲ್ಲೆಗಳು ಏ.30ರವರೆಗೂ ಲಾಕ್‍ಡೌನ್ – ಮನೆಯಿಂದ ಯಾರೂ ಹೊರಬರುವಂತಿಲ್ಲ

    – ಹೋಮ್ ಡಿಲೆವರಿ, ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಅನುಮತಿ
    – ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ರವಾನೆ

    ಲಕ್ನೋ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಕ್ನೋ, ನೋಯ್ಡಾ, ಆಗ್ರಾ, ವಾರಣಾಸಿ, ಗಾಜಿಯಾಬಾದ್, ಮೀರತ್ ಸೇರಿದಂತೆ 15 ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೂ ಲಾಕ್‍ಡೌನ್ ವಿಸ್ತರಿಸಲಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ, ರಾಜ್ಯದ ಲಕ್ನೋ, ಆಗ್ರಾ, ಗಾಜಿಯಾಬಾದ್, ಗೌತಂಬುದ್ ನಗರ, ಕಾನ್ಪುರ, ವಾರಣಾಸಿ, ಶಾಮ್ಲಿ, ಮೀರತ್, ಬರೇಲಿ, ಬುಲಂದ್‍ಶಹರ್, ಫಿರೋಜಾಬಾದ್, ಮಹಾರಾಜಗಂಜ್, ಸೀತಾಪುರ, ಸಹರಾನ್‍ಪುರ ಹಾಗೂ ಬಸ್ತಿ ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲದೆ ಕೇವಲ ವೈದ್ಯಕೀಯ ಹಾಗೂ ಹೋಮ್ ಡಿಲೆವರಿ ಸಿಬ್ಬಂದಿಗೆ ಮಾತ್ರ ಹೊರಗೆ ಬರಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

    ಎಲ್ಲಾ ಅಗತ್ಯ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಲಿದೆ. ಯಾರಿಗೂ ತಮ್ಮ ಮನೆಗಳಿಂದ ಹೊರಹೋಗಲು ಅನುಮತಿ ನೀಡುವುದಿಲ್ಲ ಎಂದು ಆರ್.ಕೆ.ತಿವಾರಿ ಖಡಕ್ ಸಂದೇಶ ರವಾನಿಸಿದ್ದಾರೆ.

    ಲಾಕ್‍ಡೌನ್ ವಿಸ್ತರಿಸಿದ 15 ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಸಮುದಾಯ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯವರೆಗೆ 21 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 326ಕ್ಕೆ ತಲುಪಿದೆ. ಇಲ್ಲಿವರೆಗೂ ಸೋಂಕಿಗೆ ಒಳಗಾದವರಲ್ಲಿ 21 ಜನರು ಚೇತರಿಸಿಕೊಂಡಿದ್ದು, 3 ಮಂದಿ ಮೃತಪಟ್ಟಿದ್ದಾರೆ.

    ಕೊರೊನಾ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಏಪ್ರಿಲ್ 14 ರವರೆಗೆ 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಮಂಗಳವಾರ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳು ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದವು. ಆದರೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.