Tag: Agra-Lucknow Expressway

  • ಆಗ್ರಾ – ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಪಾರದ ಸಚಿವೆ

    ಆಗ್ರಾ – ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಪಾರದ ಸಚಿವೆ

    ಲಕ್ನೋ: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Agra-Lucknow Expressway) ನಡೆದ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ (Baby Rani Maurya) ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

    ಶುಕ್ರವಾರ ರಾತ್ರಿ ಲಕ್ನೋಗೆ (Lucknow) ತೆರಳುತ್ತಿದ್ದಾಗ ಸಚಿವೆಯ ಕಾರಿನ ಮುಂದೆ ಸಾಗುತ್ತಿದ್ದ ಟ್ರಕ್‌ನ ಒಂದು ಟೈರ್ ಇದ್ದಕ್ಕಿದ್ದಂತೆ ಸಿಡಿದಿದೆ. ಬಳಿಕ ನಿಯಂತ್ರಣ ತಪ್ಪಿ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಚಾಣಾಕ್ಷ್ಯತನದಿಂದ ಕಾರನ್ನು ಬದಿಗೆ ತಂದಿದ್ದು ಭಾರೀ ಅಪಘಾತ ತಪ್ಪಿದಂತಾಗಿದೆ. ಅಪಘಾತಲ್ಲಿ ಕಾರಿಗೆ ಭಾರೀ ಹಾನಿಯಾಗಿದ್ದು, ಸಚಿವೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

    ಹತ್ರಾಸ್ ಜಿಲ್ಲೆಯ ಹಲವೆಡೆ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಲಕ್ನೋಗೆ ವಾಪಸ್‌ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯ ನಂತರ ಪೊಲೀಸರು ಟ್ರಕ್‌ನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬೇಬಿ ರಾಣಿ ಮೌರ್ಯ ಅವರನ್ನು ಮತ್ತೊಂದು ವಾಹನದಲ್ಲಿ ಲಕ್ನೋಗೆ ಕಳುಹಿಸಿದ್ದಾರೆ.

    ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನೂ ಅಪಘಾತದಿಂದಾಗಿ ಅಧಿಕಾರಿಗಳು ಎಕ್ಸ್‌ಪ್ರೆಸ್‌ವೇ ಸುರಕ್ಷತಾ ಪ್ರೋಟೋಕಾಲ್ ಪರಿಶೀಲಿಸುವ ಸಾಧ್ಯತೆ ಇದೆ.

  • ದೀಪಾವಳಿ ಬೋನಸ್ ಕೊಟ್ಟಿಲ್ಲ ಅಂತ ಬೇಸರ; ಟೋಲ್ ಸಂಗ್ರಹಿಸದೇ ವಾಹನಗಳನ್ನ ಫ್ರೀ ಬಿಟ್ಟ ಸಿಬ್ಬಂದಿ

    ದೀಪಾವಳಿ ಬೋನಸ್ ಕೊಟ್ಟಿಲ್ಲ ಅಂತ ಬೇಸರ; ಟೋಲ್ ಸಂಗ್ರಹಿಸದೇ ವಾಹನಗಳನ್ನ ಫ್ರೀ ಬಿಟ್ಟ ಸಿಬ್ಬಂದಿ

    – ಸಂಸ್ಥೆಗೆ ಲಕ್ಷಾಂತರ ರೂ. ನಷ್ಟ; ಆಗ್ರಾ- ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಘಟನೆ

    ಲಕ್ನೋ: ದೀಪಾವಳಿ ಹಬ್ಬಕ್ಕೆ ಬೋನಸ್‌ (Diwali Bonus) ಕೊಟ್ಟಿಲ್ಲ ಅಂತ ಟೋಲ್‌ ಸಂಗ್ರಹಿಸದೇ ವಾಹನಗಳನ್ನು ಫ್ರೀ ಬಿಟ್ಟು ಟೋಲ್‌ ಸಿಬ್ಬಂದಿ ಮುಷ್ಕರ ನಡೆಸಿದ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದಿದೆ. ಇದರಿಂದ ಸಾವಿರಾರು ವಾಹನಗಳು ಟೋಲ್‌ (Toll) ಪಾವತಿಸದೇ ಹೋಗಿದ್ದು, ನಿರ್ವಹಿಸುವ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

    ದೀಪಾವಳಿ (Deepavali) ಪ್ರಯುಕ್ತ ಬೋನಸ್‌ ನಿರಾಕರಿಸಿದ ಹಿನ್ನೆಲೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇ (Agra Lucknow Expressway) ಟೋಲ್‌ ನಿರ್ವಾಹಕರು ಎಲ್ಲಾ ವಾಹನಗಳನ್ನ ಫ್ರೀ ಬಿಟ್ಟಿದ್ದಾರೆ. ಟೋಲ್‌ ಪಾವತಿಸದೇ ವಾಹನಗಳು ಹೊರಡುತ್ತಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲೂ ಹರಿದಾಡುತ್ತಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.

    ಈ ಎಕ್ಸ್‌ಪ್ರೆಸ್‌ ವೇ ಆಗ್ರಾ ಮತ್ತು ಲಕ್ನೋ ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುತ್ತದೆ.

    ʻಕಳೆದ ಒಂದು ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದ್ರೆ ಅವರು ಹಬ್ಬಕ್ಕೆ ಯಾವುದೇ ಬೋನಸ್‌ ಕೊಟ್ಟಿಲ್ಲ. ತುಂಬಾ ಕಷ್ಟಪಟ್ಟಿ ಕೆಲಸ ಮಾಡ್ತಿದ್ದೇವೆ. ಮೊದಲೇ ವೇತನವನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಈಗ ಬೋನಸ್‌ ಕೇಳಿದ್ರೆ ನಮ್ಮನ್ನೇ ಕೆಲಸರಿಂದ ತೆಗೆಯುವುದಾಗಿ ಹೆದರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಟೋಲ್‌ ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದಾರೆ.

    ಮತ್ತೊಬ್ಬ ಉದ್ಯೋಗಿ ಮಾತನಾಡಿ, ಶ್ರೀಸಾಯಿ ಮತ್ತು ದಾತಾರ್ ಸಂಸ್ಥೆಗಾಗಿ ಕೆಲಸ ಮಾಡ್ತಿದ್ದಾರೆ. ದೀಪಾವಳಿ ಹಬಕ್ಕೆ ಬೋನಸ್‌ ಕೊಡಲಾಗುವುದು. ಹಣವನ್ನ ನಿಮ್ಮ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸುವುದಾಗಿ ಹೇಳಿದ್ದರು. ಆದ್ರೂ ಕೂಡ ಬೋನಸ್‌ ಕೊಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಈವರೆಗೆ ಟೋಲ್‌ ನಿರ್ವಹಣೆ ಮಾಡುವ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿ – ಐವರು ಸಾವು

    ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿ – ಐವರು ಸಾವು

    ಲಕ್ನೋ: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Agra-lucknow Expressway) ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ 5 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಫಿರೋಜಾಬಾದ್ ಗ್ರಾಮಾಂತರ ಪೊಲೀಸ್ ಅಧಿಕಾರಿ ಅಖಿಲೇಶ್ ಭಡೋರಿಯಾ ಮಾತನಾಡಿ, ಬಸ್ ಮಥುರಾದಿಂದ ಲಕ್ನೋಗೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯ ಥಾನಾ ನಸಿರ್‌ಪುರ್ ಬಳಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೋವಿಡ್ ಹಗರಣ – ಬಿಎಸ್‍ವೈ, ರಾಮುಲು ವಿರುದ್ಧ ಸರ್ಕಾರದ ಪ್ರಾಸಿಕ್ಯೂಷನ್ ಅಸ್ತ್ರ

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಚಾಲಕ ನಿದ್ರೆಗೆ ಜಾರಿದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.

    ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ. ಅಪಘಾತದ ನಂತರ ಎಕ್ಸ್‌ಪ್ರೆಸ್‌ವೇಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಮುಡಾದ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ ಬಿಡುಗಡೆ – ಒಬ್ಬೊಬ್ಬರಿಗೆ 20ರಿಂದ 25 ಸೈಟ್ ಹಂಚಿಕೆ