Tag: agra

  • 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ಲಕ್ನೋ: ಆಶ್ರಮದಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ (Swami Chaitanyananda Saraswati) ಅವರನ್ನು ಪೊಲೀಸರು ಉತ್ತರಪ್ರದೇಶದ ಆಗ್ರಾದಲ್ಲಿ (Agra) ಬಂಧಿಸಿದ್ದಾರೆ. ಅವರ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ, ಬಲವಂತದ ದೈಹಿಕ ಸಂಪರ್ಕ ನಡೆಸಿದ ಆರೋಪಗಳಿವೆ.

    ದೆಹಲಿಯ (Delhi) ಶಾರದಾ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಆರೋಪಿಯು ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ 2009 ಮತ್ತು 2016 ರಲ್ಲಿ ಸಹ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದವು. ಸ್ವಾಮೀಜಿ, ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆಸಿಕೊಂಡು ಉಚಿತ ವಿದೇಶ ಪ್ರವಾಸಗಳ ಆಮಿಷ ಒಡ್ಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆರೋಪಗಳು ಹೊರಬಿದ್ದ ನಂತರ, ಆಶ್ರಮದ ಆಡಳಿತ ಮಂಡಳಿ ಚೈತನ್ಯಾನಂದರನ್ನು ಅವರ ಹುದ್ದೆಯಿಂದ ಹೊರಹಾಕಿತ್ತು. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ವಿತ್‌ಡ್ರಾ ಮಾಡಿದ ಸ್ವಾಮಿ ಚೈತನ್ಯಾನಂದ

    ವಿದ್ಯಾರ್ಥಿನಿಯರ ದೂರು ಏನು?
    ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಕೋರ್ಸ್‌ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು, ಮತ್ತು ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ಮಹಿಳಾ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದರು.

    ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ 17 ಮಂದಿ ತಮ್ಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿಕೊಂಡಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದರು. ಇದನ್ನೂ ಓದಿ: ಸ್ವಾಮಿ ಚೈತನ್ಯಾನಂದ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

  • 8ರ ಬಾಲಕನ ಕಿಡ್ನ್ಯಾಪ್‌ ಮಾಡಿ 80 ಲಕ್ಷಕ್ಕೆ ಬೇಡಿಕೆ – ಯುಪಿ ಉದ್ಯಮಿಯ ಮಗ ರಾಜಸ್ಥಾನದಲ್ಲಿ ಶವವಾಗಿ ಪತ್ತೆ

    8ರ ಬಾಲಕನ ಕಿಡ್ನ್ಯಾಪ್‌ ಮಾಡಿ 80 ಲಕ್ಷಕ್ಕೆ ಬೇಡಿಕೆ – ಯುಪಿ ಉದ್ಯಮಿಯ ಮಗ ರಾಜಸ್ಥಾನದಲ್ಲಿ ಶವವಾಗಿ ಪತ್ತೆ

    ಜೈಪುರ್‌: ಉತ್ತರ ಪ್ರದೇಶದ (Uttar Pradesh) ಉದ್ಯಮಿಯೊಬ್ಬರ 8 ವರ್ಷದ ಮಗನನ್ನು ಅಪಹರಿಸಿ 80 ಲಕ್ಷಕ್ಕೆ ಬೇಡಿಕೆ ಇಟ್ಟು, ಬಳಿಕ ಕೊಲೆ ಮಾಡಿ ರಾಜಸ್ಥಾನದ (Rajasthan) ಮಾನಿಯಾ ಗ್ರಾಮದಲ್ಲಿ ಹೂತು ಹಾಕಲಾಗಿದೆ.

    ಸಾವಿಗೀಡಾದ ಬಾಲಕ, ಅಭಯ್ ಸಾರಿಗೆ ಸಂಸ್ಥೆಯ ಮಾಲೀಕ ವಿಜಯ್ ಪ್ರತಾಪ್ ಅವರ ಮಗನಾಗಿದ್ದು, 1ನೇ ತರಗತಿಯಲ್ಲಿ ಓದುತ್ತಿದ್ದ. ಆತ ಏಪ್ರಿಲ್‌ನಲ್ಲಿ ಆಗ್ರಾದ (Agra) ಶಾಲೆಯಲ್ಲಿ ಆಟ ಆಡುವಾಗ ನಾಪತ್ತೆಯಾಗಿದ್ದ. ಇದಾದ ಒಂದೆರಡು ದಿನದಲ್ಲಿ ಮನೆಗೆ ಒಂದು ಪತ್ರ ಬಂದಿತ್ತು. ಅದರಲ್ಲಿ ನಿಮ್ಮ ಮಗನನ್ನು ಅಪಹರಿಸಿದ್ದೇವೆ ಎಂದು 80 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು. ಇದನ್ನೂ ಓದಿ: ಅಹಮದಾಬಾದ್ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

    ಈಗ ಅಪಹರಣಕ್ಕೊಳಗಾದ ಬಾಲಕನ ಶವ ಪತ್ತೆಯಾಗಿದ್ದು, ರಾಜಸ್ಥಾನ ಪೊಲೀಸರು ಈ ಬಗ್ಗೆ ಆಗ್ರಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಹಿಂದಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಮರದೀಪ್ ಲಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಆಂಟಿಗೆ ಪ್ರೀತಿಸುವಂತೆ ಟಾರ್ಚರ್ – ಬುದ್ಧಿ ಹೇಳೋಕೆ ಬಂದವನ ಕತ್ತು ಕೊಯ್ದ ಪಾಗಲ್ ಪ್ರೇಮಿ!

    ಉತ್ತರ ಪ್ರದೇಶದ ಪೊಲೀಸರು ಬಾಲಕನ ಮನೆಯ ಬಳಿಯ ದಿನಸಿ ಅಂಗಡಿಯ ಮಾಲೀಕನ ಮೇಲೆ ಅನುಮಾನ ವ್ಯಕ್ತಪಡಿಸಿ ವಶಕ್ಕೆ ಪಡೆದಿದ್ದರು. ಆತ ಮಗುವನ್ನು ಹತ್ಯೆ ಮಾಡಿ, ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

  • ಟೆಕ್ಕಿ ಆತ್ಮಹತ್ಯೆ ಕೇಸ್ | ಕಂಠಪೂರ್ತಿ ಕುಡಿದು ನನ್ನನ್ನೇ ಹೊಡೆಯುತ್ತಿದ್ದ – ಟೆಕ್ಕಿ ವಿರುದ್ಧ ಪತ್ನಿ ಆರೋಪ

    ಟೆಕ್ಕಿ ಆತ್ಮಹತ್ಯೆ ಕೇಸ್ | ಕಂಠಪೂರ್ತಿ ಕುಡಿದು ನನ್ನನ್ನೇ ಹೊಡೆಯುತ್ತಿದ್ದ – ಟೆಕ್ಕಿ ವಿರುದ್ಧ ಪತ್ನಿ ಆರೋಪ

    ಲಕ್ನೋ: ಟಿಸಿಎಸ್ ಟೆಕ್ಕಿ (Techie) ಆತ್ಮಹತ್ಯೆ ಪ್ರಕರಣಕ್ಕೆ ಟಿಸ್ಟ್ ಸಿಕ್ಕಿದೆ. ಮಾನವ್ ಶರ್ಮಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪತ್ನಿ ಈಗ ವಿಡಿಯೋ ಮಾಡಿ ಪತಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

    ಪತ್ನಿ ನಿಕಿತಾ ಈಗ ಮಾನವ್ ಶರ್ಮಾನೇ ನನ್ನನ್ನು ಹೊಡೆಯುತ್ತಿದ್ದ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ

    ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ದಿನ ನನ್ನನ್ನು ನನ್ನ ತಾಯಿಯ ಮನೆಗೆ ಬಿಟ್ಟಿದ್ದರು. ಅವರು ನನ್ನ ಬಗ್ಗೆ ಆರೋಪ ಮಾಡಿರುವುದೆಲ್ಲಾ ನನ್ನ ಹಿಂದಿನ ವಿಷಯಗಳು. ಈ ಹೇಳಿಕೆಗಳು ಮದುವೆಯ ನಂತರದ ಜೀವನಕ್ಕೆ ಸಂಬಂಧಿಸಿಲ್ಲ. ಅವರು ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಾನು ಮೂರು ಬಾರಿ ಅವರನ್ನು ತಡೆದಿದ್ದೇನೆ. ಅವರು ಮದ್ಯಪಾನ ಮಾಡಿ ನನ್ನನ್ನು ಹೊಡೆಯುತ್ತಿದ್ದರು. ಈ ಬಗ್ಗೆ ಮಾನವ್ ಅಪ್ಪ ಅಮ್ಮನಿಗೂ ತಿಳಿಸಿದ್ದೇನೆ ಎಂದು ನಿಕಿತಾ ವಿಡಿಯೋ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕಾಪು ಶ್ರೀಹೊಸ ಮಾರಿಗುಡಿ ಕಂಡು ನಿಬ್ಬೆರಗಾದ ನಟಿ ಶಿಲ್ಪಾ ಶೆಟ್ಟಿ

    ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)ನಲ್ಲಿ ಉದ್ಯೋಗಿಯಾಗಿದ್ದ ಮಾನವ್ ಶರ್ಮಾ ಫೆ.24ರಂದು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಾನವ್ ಶರ್ಮಾ ಪತ್ನಿ ನಿಕಿತಾ ವಿರುದ್ಧ ವಿಡಿಯೋ ಮೂಲಕ ಆರೋಪ ಮಾಡಿದ್ದರು. ಇದನ್ನೂ ಓದಿ: ಸಿಎಂ, ಕಾಂಗ್ರೆಸ್ ಹೆದರಿಸಲು ಡಿಕೆಶಿ ಹಿಂದುತ್ವದ ವೇಷ ಹಾಕಿದ್ದಾರೆ: ಮುನಿರತ್ನ

    ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ

    ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ

    – ಅತುಲ್‌ ಸುಭಾಷ್‌ ಕೇಸ್‌ ಬಳಿಕ ಆಗ್ರಾದಲ್ಲಿ ಮತ್ತೊಂದು ಪ್ರಕರಣ

    ಲಕ್ನೋ: ಟೆಕ್ಕಿ ಅತುಲ್‌ ಸುಭಾಷ್‌ ಬಳಿಕ ಆಗ್ರಾದಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿ ಟಿಸಿಎಸ್‌ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ನಲ್ಲಿ ಉದ್ಯೋಗಿಯಾಗಿದ್ದ ಮಾನವ್ ಶರ್ಮಾ ಫೆ.24 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿಟ್ಟು ಪತ್ನಿ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ

    ಕುತ್ತಿಗೆಗೆ ಕುಣಿಕೆ ಬಿಗಿದಿದ್ದ ಶರ್ಮಾ ಸುಮಾರು ಏಳು ನಿಮಿಷಗಳ ಕಾಲದ ಒಂದು ಭಯಾನಕ ವೀಡಿಯೊವನ್ನು ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಪತ್ನಿ ಇನ್ನೊಬ್ಬ ಪುರುಷನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿದ್ದಾರೆ.

    ಕಾನೂನು ಪುರುಷರನ್ನು ರಕ್ಷಿಸಬೇಕು. ಇಲ್ಲದಿದ್ದರೆ ದೂಷಿಸಲು ಪುರುಷರೇ ಇಲ್ಲದ ಸಮಯ ಬರುತ್ತದೆ. ನನ್ನ ಹೆಂಡತಿ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು. ಹೀಗಿದ್ದಾಗ, ನಾನು ಏನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 50 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ

    ನನಗೆ ಸಾಯುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು ಹೋಗಬೇಕು. ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ. ಕ್ಷಮಿಸಿ, ಎಲ್ಲರೂ. ದಯವಿಟ್ಟು ಯಾರಾದರೂ ಪುರುಷರ ಬಗ್ಗೆ ಮಾತನಾಡಬೇಕು. ಅವರು ಒಂಟಿಯಾಗುತ್ತಾರೆ. ನಾನು ಹೋದ ನಂತರ ಎಲ್ಲವೂ ಸರಿಯಾಗುತ್ತದೆ. ನಾನು ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  • ಆಗ್ರಾ ಬಳಿ MiG-29 ಫೈಟರ್ ಜೆಟ್ ಪತನ – ಪೈಲಟ್‌ ಸೇಫ್‌

    ಆಗ್ರಾ ಬಳಿ MiG-29 ಫೈಟರ್ ಜೆಟ್ ಪತನ – ಪೈಲಟ್‌ ಸೇಫ್‌

    ಲಕ್ನೋ: ಭಾರತೀಯ ವಾಯುಪಡೆಯ (Indian Air Force) MiG-29 ಫೈಟರ್ ಜೆಟ್ (MiG-29 fighter jet) ಪತನಗೊಂಡು ಹೊತ್ತಿ ಉರಿದ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದ (Agra) ಸಾಂಗಾ ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಪೈಲಟ್‌ ಸುರಕ್ಷಿತವಾಗಿ ಎಜೆಕ್ಟ್‌ ಆಗಿದ್ದಾರೆ.

    ಮಿಗ್ -29 ವಿಮಾನವು ತರಬೇತಿಯ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದೆ. ಬಳಿಕ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ಇಂತಹ ಸಮಯದಲ್ಲೂ ಪೈಲಟ್ ನೆಲದಲ್ಲಿ ಯಾವುದೇ ಜೀವ ಅಥವಾ ಆಸ್ತಿಗೆ ಹಾನಿಯಾಗದಂತೆ ನೋಡಿಕೊಂಡಿದ್ದಾರೆ. ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

    ಸದ್ಯ ʼಹಾರುವ ಶವಪೆಟ್ಟಿಗೆʼ ಎಂದೇ ಮಿಗ್‌ ವಿಮಾನಗಳು ಕುಖ್ಯಾತವಾಗಿದ್ದು,  ಮಿಗ್‌ 29 ವಿಮಾನಗಳನ್ನು  1987 ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿತ್ತು.

    ಎರಡು ತಿಂಗಳ ಅವಧಿಯಲ್ಲಿ ಇದು ಎರಡನೇ MiG-29 ಅಪಘಾತವಾಗಿದೆ. ಸೆಪ್ಟೆಂಬರ್‌ನಲ್ಲಿ, ಮಿಗ್ -29 ರಾಜಸ್ಥಾನದ ಬಾರ್ಮರ್‌ನಲ್ಲಿ ತಾಂತ್ರಿಕ ಅಡಚಣೆಯನ್ನು ಎದುರಿಸಿ ಪತನಗೊಂಡಿತ್ತು. ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದರು.

  • ಮಗಳ ಸೆಕ್ಸ್ ವೀಡಿಯೋ ವೈರಲ್‌ ಮಾಡೋದಾಗಿ ಪಾಕ್‌ ವಂಚಕರ ಕರೆ – ಹೃದಯಾಘಾತದಿಂದ ಶಿಕ್ಷಕಿ ಸಾವು

    ಮಗಳ ಸೆಕ್ಸ್ ವೀಡಿಯೋ ವೈರಲ್‌ ಮಾಡೋದಾಗಿ ಪಾಕ್‌ ವಂಚಕರ ಕರೆ – ಹೃದಯಾಘಾತದಿಂದ ಶಿಕ್ಷಕಿ ಸಾವು

    ಲಕ್ನೋ: ಮಗಳ ಸೆಕ್ಸ್ ವೀಡಿಯೋ ವೈರಲ್‌ ಮಾಡೋದಾಗಿ ಆನ್‌ಲೈನ್‌ ವಂಚಕರು ಕರೆ (Scam Call) ಮಾಡಿ ಬೆದರಿಕೆ ಹಾಕಿದ ಪರಿಣಾಮ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದಿದೆ.

    ಶಿಕ್ಷಕಿಗೆ ವಂಚಕರು ಕರೆ ಮಾಡಿ ನಿಮ್ಮ ಮಗಳ ಅಶ್ಲೀಲ ವೀಡಿಯೋ ನಮ್ಮ ಬಳಿ ಇದೆ. 1 ಲಕ್ಷ ರೂ. ಹಣ ವರ್ಗಾಯಿಸದೇ ಇದ್ದರೆ ವೀಡಿಯೋವನ್ನು ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಮಹಿಳೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಮಹಿಳೆಯನ್ನು ಮಾಲ್ತಿ ವರ್ಮಾ ಎಂದು ಗುರುತಿಸಲಾಗಿದೆ. ಅವರಿಗೆ ಸೆಪ್ಟೆಂಬರ್ 30 ರಂದು ಪೊಲೀಸ್ ಅಧಿಕಾರಿಯಂತೆ ವ್ಯಕ್ತಿಯಿಂದ ವಾಟ್ಸಾಪ್ ಕರೆ ಬಂದಿದೆ. ಈ ವೇಳೆ ನಿಮ್ಮ ಮಗಳನ್ನು ಲೈಂಗಿಕ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ನಿಮ್ಮ ಮಗಳನ್ನು ಒಳಗೊಂಡ ಅಶ್ಲೀಲ ವೀಡಿಯೋ ಸಿಕ್ಕಿದೆ. ಅದನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಬಳಿಕ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಘಟನೆಯ ಬಗ್ಗೆ ಮಹಿಳೆ ತನ್ನ ಮಗನಿಗೆ ತಿಳಿಸಿದ್ದು, ಪ್ರಕರಣದಲ್ಲಿ ತನ್ನ ಮಗಳನ್ನು ಸಿಲುಕಿಸದಂತೆ ರಕ್ಷಿಸಲು ಹಣ ವಗಾಯಿಸುವಂತೆ ತಿಳಿಸಿದ್ದಾರೆ. ಮಗ ಆ ಮೊಬೈಲ್‌ ಸಂಖ್ಯೆ ಪರಿಶೀಲಿಸಿದಾಗ ಅದು ಪಾಕಿಸ್ತಾನದ್ದು ಎಂದು ತಿಳಿದು ಬಂದಿದೆ.

    ಮಗ ಕರೆ ಮಾಡಿ ತಾಯಿಯನ್ನು ಸಮಾಧಾನಪಡಿಸಿ, ಕಾಲೇಜಿನಲ್ಲಿದ್ದ ಸಹೋದರಿಯೊಂದಿಗೆ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಅಷ್ಟಾದರೂ ತಾಯಿಗೆ ಆತಂಕದಿಂದ ಹೃದಯಾಘಾತವಾಗಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಮಹಿಳೆಯ ಮಗ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಪೊಲೀಸರು ಮಹಿಳೆಯ ಮೊಬೈಲ್‌ ಪರಿಶೀಲಿಸಿದ್ದು, ಮೊಬೈಲ್‌ ಸಂಖ್ಯೆಯ ಆಧಾರದ ಮೇಲೆ ವಂಚಕರನ್ನು ಪತ್ತೆ ಮಾಡಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಭಾರೀ ಮಳೆಯಿಂದ ಬಿರುಕುಬಿಟ್ಟ ತಾಜ್‌ಮಹಲ್ – ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ವೈರಲ್

    ಭಾರೀ ಮಳೆಯಿಂದ ಬಿರುಕುಬಿಟ್ಟ ತಾಜ್‌ಮಹಲ್ – ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ವೈರಲ್

    – ಗುಮ್ಮಟದ ಉತ್ತರ ಭಾಗದಲ್ಲಿ ಅಮೃತಶಿಲೆಯ ಮಧ್ಯೆ ಬಿರುಕು

    ನವದೆಹಲಿ: ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ನ (TajMahal) ಕೇಂದ್ರ ಗುಮ್ಮಟದ ಅಮೃತಶಿಲೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಈ ಕುರಿತು ಪ್ರವಾಸಿಗರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.

    ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ತೀವ್ರ ಮಳೆಯಾದ ಕಾರಣ ತಾಜ್‌ಮಹಲ್‌ನ ಕೇಂದ್ರ ಗುಮ್ಮಟದ ಅಮೃತಶಿಲೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜೊತೆಗೆ ಆ ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ಕೂಡ ವೈರಲ್ ಆಗಿದೆ.ಇದನ್ನೂ ಓದಿ: ನಿಮ್ಮ ಮಗಳಿಗೆ ಮದುವೆ ಆಗಲ್ಲ- ಸಂಬಂಧಿಕರ ಕೊಂಕು ಮಾತಿನ ಬಗ್ಗೆ ಮಾತನಾಡಿದ ತೃಪ್ತಿ

    ಗುಮ್ಮಟದ ಉತ್ತರ ಭಾಗದಲ್ಲಿರುವ ಅಮೃತಶಿಲೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಆ ಬಿರುಕಿನ ಮೂಲಕ ಮಳೆ ನೀರು ಸೋರಿಕೆಯಾಗಿ ಕೆಳಗಿರುವ ಸಮಾಧಿಯನ್ನು ತಲುಪುತ್ತಿವೆ.

    ಡ್ರೋನ್ ಬಳಸಿ ಗುಮ್ಮಟ ಪರೀಕ್ಷೆ ಮಾಡಿದಾಗ ಅಮೃತಶಿಲೆಯ ತಳದಲ್ಲಿ ತುಕ್ಕು ಹಿಡಿದಿರುವುದು ಕಂಡುಬಂದಿದೆ. ತುಕ್ಕು ಹಿಡಿದಿರುವುದರಿಂದ ಬಿರುಕು ಉಂಟಾಗಿದ್ದು, ನೀರು ಸೋರಿಕೆಗೆ ಕಾರಣವಾಗಿದೆ.

    ಭವಿಷ್ಯದ ದೃಷ್ಟಿಯಿಂದ ನೀರಿನ ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಗುಮ್ಮಟದ ಮೇಲ್ಮೈ ಒಣಗಿದಂತೆ, ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಸ್ವಲ್ಪ ಕಾಲವಕಾಶ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    ಟೂರಿಸ್ಟ್ ಗೈಡ್ ಫೆಡರೇಶನ್ ಆಫ್ ಇಂಡಿಯಾದ (Tourist Guide Federation Of India) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಕೀಲ್ ಚೌಹಾಣ್ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಾಜ್‌ಮಹಲ್ ಸಂರಕ್ಷಣೆಗೆ ವಾರ್ಷಿಕವಾಗಿ 4 ಕೋಟಿ ರೂ. ವ್ಯಯಿಸುತ್ತದೆ. ಇಂತಹ ಚಿತ್ರಗಳು ಸ್ಮಾರಕದ ಖ್ಯಾತಿಗೆ ಮಸಿ ಬಳಿಯುತ್ತವೆ. ಮಳೆಗಾಲದ ನಂತರ ಸಂರಕ್ಷಣಾ ಕಾರ್ಯಕ್ಕೆ ಕರೆ ನೀಡಲಾಗುವುದು ಮತ್ತು ಈಗ ಕಾಣಿಸಿಕೊಂಡಿರುವ ಸಸ್ಯ ಕಳೆದ 15 ದಿನಗಳಲ್ಲಿ ಬೆಳೆದಿದ್ದು, ತಕ್ಷಣವೇ ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ.

  • ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್‌

    ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್‌

    ಲಕ್ನೋ: ಭಾರೀ ಮಳೆ ಹಿನ್ನೆಲೆಯಲ್ಲಿ ತಾಜ್‌ಮಹಲ್‌ನ (Taj Mahal) ಮುಖ್ಯ ಗುಂಬಜ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಉತ್ತರ ಪ್ರದೇಶದ ಆಗ್ರಾದ (Agra) ತಾಜ್‌ಮಹಲ್‌ನ ಮುಖ್ಯ ಗುಮ್ಮಟವು ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಸೋರಿಕೆಗೆ ಸಾಕ್ಷಿಯಾಗಿದೆ. ಇದು ಆವರಣದಲ್ಲಿರುವ ಉದ್ಯಾನವನ್ನು ಮುಳುಗಿಸಿದೆ. ಇದನ್ನೂ ಓದಿ: ಪ್ರಧಾನಿ ಮನೆಗೆ ಹೊಸ ಅತಿಥಿ ಆಗಮನ – ಕರುವನ್ನು ಎತ್ತಿ ಮುದ್ದಾಡಿದ ಮೋದಿ

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಯೊಬ್ಬರು, ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯಾಗಿದೆ. ಆದರೆ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ.

    ನಾವು ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯನ್ನು ಗಮನಿಸಿದ್ದೇವೆ. ಪರಿಶೀಲನೆ ನಡೆಸಿದಾಗ ಸೋರಿಕೆಯಿಂದ ಉಂಟಾಗಿರುವುದು ಕಂಡುಬಂದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ನಾವು ಡ್ರೋನ್ ಕ್ಯಾಮೆರಾವನ್ನು ಬಳಸಿಕೊಂಡು ಗುಮ್ಮಟದ ಸ್ಥಿತಿಯನ್ನು ಪರಿಶೀಲಿಸಿದ್ದೇವೆ ಎಂದು ಎಎಸ್‌ಐನ ರಾಜ್‌ಕುಮಾರ್‌ ಪಾಟೀಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನು ಕಾಂಗ್ರೆಸ್‌ ಸರ್ಕಾರ ಪೊಲೀಸ್‌ ವ್ಯಾನ್ ಕಂಬಿ ಹಿಂದೆ ಹಾಕಿದೆ:‌ ಮೋದಿ ವಾಗ್ದಾಳಿ

    ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರದಾದ್ಯಂತ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿಯೊಂದು ಜಲಾವೃತಗೊಂಡಿದೆ. ಬೆಳೆಗಳು ಮುಳುಗಿವೆ.

  • ಆಗ್ರಾ ನಗರಕ್ಕೆ ವಿಶ್ವ ಪರಂಪರೆಯ ತಾಣ ನೀಡುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    ಆಗ್ರಾ ನಗರಕ್ಕೆ ವಿಶ್ವ ಪರಂಪರೆಯ ತಾಣ ನೀಡುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಆಗ್ರಾ (Agra) ನಗರವನ್ನು ʻವಿಶ್ವ ಪರಂಪರೆಯ ತಾಣʼ (World Heritage site) ಎಂದು ಘೋಷಿಸಲು ನಿರ್ದೆಶನ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ (Agra) ವಜಾಗೊಳಿಸಿದೆ.

    ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಯಾವುದೇ ಸ್ಥಳವನ್ನು ಪಾರಂಪರಿಕ ತಾಣವೆಂದು ಘೋಷಿಸಲು ನ್ಯಾಯಾಲಯ ಯಾವುದೇ ನಿರ್ದೇಶನವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

    ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಆಗ್ರಾವನ್ನು ಯುನೆಸ್ಕೋಗೆ ʻವಿಶ್ವ ಪರಂಪರೆಯ ತಾಣʼ ಸ್ಥಾನಮಾನಕ್ಕಾಗಿ ನಾಮನಿರ್ದೇಶನವನ್ನು ಮಾಡಬೇಕಾಗಿದೆ. ಇಂತಹ ಘೋಷಣೆಯು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ವಾದಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ನ್ಯಾಯಾಲಯ ಇಂತಹ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆಗ್ರಾವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸುವುದರಿಂದ ನಗರಕ್ಕೆ ಯಾವುದೇ ವಿಶೇಷ ಪ್ರಯೋಜನವಿದೆ ಎಂದು ತೋರಿಸಲು ಯಾವ ದಾಖಲೆಯನ್ನೂ ಇರಿಸಲಾಗಿಲ್ಲ ಎಂದು ಹೇಳಿತು. ಬಳಿಕ ಅರ್ಜಿಯನ್ನು ವಜಾಗೊಳಿಸಿತು.

  • ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಲಕ್ನೋ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 40 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.

    ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌ ಅವರ ಮನೆ ಮೇಲೆ ದಾಳಿ (Tax Raid) ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 500 ರೂ. ನೋಟುಗಳ ಹಲವು ಬಂಡಲ್‌ಗಳನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

    ಸದ್ಯ 40 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಿದ ಹಣವನ್ನು ಇನ್ನೂ ಏಣಿಕೆ ಮಾಡಲಾಗುತ್ತಿದ್ದು, ಹಣದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

    ಇತ್ತೀಚೆಗೆ ದೇಶದಲ್ಲಿ ನಡೆದ 2ನೇ ಅತಿದೊಡ್ಡ ದಾಳಿಯೂ ಇದಾಗಿದೆ. ಇದೇ ತಿಂಗಳ ಮೇ 6 ರಂದು ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆ ಕೆಲಸಗಾರ ಜಹಾಂಗೀರ್ ಆಲಂ ಮನೆಯಲ್ಲಿ ಸಿಕ್ಕ 35 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು.