Tag: Agnisakshi serial

  • ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ನಪ್ರಿಯ ‘ಅಮೃತಧಾರೆ’ (Amruthadaare) ಸೀರಿಯಲ್ ನಟಿ ಇಶಿತಾ ವರ್ಷ (Ishita Varsha) ದುಬೈ ಮರಳುಗಾಡಿನಲ್ಲಿ ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾಲಿವುಡ್ ಬ್ಯೂಟಿಯಂತೆ ಕಂಗೊಳಿಸಿದ ನಟಿಯ ಕಂಡು ಫ್ಯಾನ್ಸ್ ಬೆರಗಾಗಿದ್ದಾರೆ. ಇದನ್ನೂ ಓದಿ:ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ಸದಾ ಒಂದಲ್ಲಾ ಒಂದು ಶೈಲಿಯಲ್ಲಿ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸೋ ಇಶಿತಾ ಇದೀಗ ದುಬೈಗೆ (Dubai) ಹಾರಿದ್ದಾರೆ. ಅಲ್ಲಿ ಮರುಳುಗಾಡಿನಲ್ಲಿ ನಿಂತು ವಿವಿಧ ಭಂಗಿಯಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ರೆಡ್ ಕಲರ್ ಡ್ರೆಸ್ ಧರಿಸಿ ಬಾಲಿವುಡ್ ಬ್ಯೂಟಿಯಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    ಸ್ಟಾರ್ ನಟಿಯರನ್ನೇ ಸೆಡ್ಡು ಹೊಡೆಯುವಂತೆ ಇಶಿತಾ ನಯಾ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಬಳುವ ಬಳ್ಳಿಯಂತೆ ಮಿಂಚಿರೋ ಇಶಿತಾರನ್ನು ಕಂಡು ಪಡ್ಡೆಹುಡುಗರು ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಮಾಯಾ ಪಾತ್ರಧಾರಿಯಾಗಿ ಸತತ 7 ವರ್ಷಗಳ ಕಾಲ ರಂಜಿಸಿದರು. ಇಂದಿಗೂ ಅವರ ಪಾತ್ರವನ್ನು ಜನರು ಸ್ಮರಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಸೀರಿಯಲ್ ಸೂಪರ್ ಹಿಟ್ ಆಗಿತ್ತು.

    ಪ್ರಸ್ತುತ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ತಂಗಿಯಾಗಿ ಇಶಿತಾ ನಟಿಸುತ್ತಿದ್ದಾರೆ. ರೀಪ್ಲೇಸ್‌ಮೆಂಟ್ ಪಾತ್ರಕ್ಕೆ ಅವರು ಎಂಟ್ರಿ ಕೊಟ್ಟಿದ್ರೂ ಕೂಡ ಅದ್ಭುತವಾಗಿ ನಟಿಸುತ್ತಿದ್ದಾರೆ. ಅವರ ನಟನೆ ಮತ್ತೆ ಪ್ರೇಕ್ಷಕರ ಮನಗೆದ್ದಿದೆ.

    ನೃತ್ಯ ಸಂಯೋಜಕ ಮುರುಗಾನಂದ ಜೊತೆ ಇಶಿತಾ ಮದುವೆ ಆಗಿದ್ದಾರೆ. ಅವರ ಕೂಡ ಬಣ್ಣದ ಲೋಕದಲ್ಲಿ ಸ್ಟಾರ್ ನಟರ ಸಿನಿಮಾಗಳಿಗೆ ಕೆಲಸ ಮಾಡ್ತಿರೋದ್ರಿಂದ ಪತ್ನಿಯ ಕೆರಿಯರ್‌ಗೆ ಪ್ರೋತ್ಸಾಹಿಸುತ್ತಿದ್ದಾರೆ.

  • ಪ್ರೇಮಿಗಳ ದಿನದಂದು 2ನೇ ಮಗುವಿನ ಫೋಟೋ ರಿವೀಲ್ ಮಾಡಿದ ‘ಅಗ್ನಿಸಾಕ್ಷಿ’ ನಟ

    ಪ್ರೇಮಿಗಳ ದಿನದಂದು 2ನೇ ಮಗುವಿನ ಫೋಟೋ ರಿವೀಲ್ ಮಾಡಿದ ‘ಅಗ್ನಿಸಾಕ್ಷಿ’ ನಟ

    ಸ್ಯಾಂಡಲ್‌ವುಡ್ ನಟ ವಿಜಯ್ ಸೂರ್ಯ (Vijay Suriya) ಅವರು ಇದೀಗ 2ನೇ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಪ್ರೇಮಿಗಳ ದಿನದಂದು (Valentine’s Day) ಕುಟುಂಬದ ಮುದ್ದಾದ ಫೋಟೋವನ್ನ ‘ಅಗ್ನಿಸಾಕ್ಷಿ’ ನಟ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತಿ ಜೊತೆ ಅರ್ಜುನ್ ಸರ್ಜಾ ಪುತ್ರಿಯ ಬರ್ತ್‌ಡೇ ಸಂಭ್ರಮ

    ಫೆ.14 ವಿಜಯ್ ಸೂರ್ಯ ಪಾಲಿಗೆ ವಿಶೇಷ ದಿನ. ವ್ಯಾಲೆಂಟೈನ್ ಡೇ ಜೊತೆಗೆ ವಿಜಯ್ ಸೂರ್ಯ ದಾಂಪತ್ಯ ಬದುಕಿಗೆ ಕಾಲಿಟ್ಟ ದಿನವಾಗಿದೆ. ಗುಳಿ ಕೆನ್ನೆ ಹುಡುಗಿ ಚೈತ್ರಾ ಶ್ರೀನಿವಾಸ್ ಜೊತೆ ವಿಜಯ್ ಸೂರ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟು 5 ವರ್ಷಗಳಾಗಿವೆ. ಈ ಶುಭ ಸಂದರ್ಭದಲ್ಲಿ 2ನೇ ಮಗುವಿನ ಮುಖವನ್ನು ನಟ ರಿವೀಲ್ ಮಾಡಿದ್ದಾರೆ.

    ಮೊದಲ ಮಗುವಿನ ಹೆಸರು ಸೋಹನ್ ಸೂರ್ಯ, 2ನೇ ಮಗುವಿನ ಹೆಸರು ಕಾರ್ತಿಕೇಯ ಸೂರ್ಯ ಎಂದು ಹೆಸರಿಟ್ಟಿದ್ದಾರೆ. ಇದೀಗ ಕುಟುಂಬದ ಫೋಟೋ ಶೇರ್ ಮಾಡಿ ಹ್ಯಾಪಿ ಆ್ಯನಿವರ್ಸರಿ ಬಾಬಾ ಎಂದು ಪತ್ನಿಗೆ ವಿಜಯ್ ವಿಶ್ ಮಾಡಿದ್ದಾರೆ. 2ನೇ ಮಗುವಿನ ಕ್ಯೂಟ್ ಲುಕ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅಬುದಾಬಿಯಲ್ಲಿ ಮೊಳಗಿತು ‘ಕರಟಕ ದಮನಕ’ ಸಾಂಗ್

    ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಮೂಲಕ ವಿಜಯ್ ಸೂರ್ಯ ಕಿರುತೆರೆಗೆ ಪ್ರವೇಶಿಸಿದ್ದರು. ಇದೀಗ ತೆಲುಗು ಸೀರಿಯಲ್ ಜೊತೆಗೆ ಸಿನಿಮಾ ಮಾಡುತ್ತಾ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ‘ನಮ್ಮ ಲಚ್ಚಿ’ (Namma Lacchi) ಎಂಬ ಸೀರಿಯಲ್‌ನಲ್ಲಿ ವಿಜಯ್ ನಟಿಸುತ್ತಿದ್ದಾರೆ.

    ‘ಡಿಟೆಕ್ಟಿವ್ ತೀಕ್ಷ್ಣ’ ಎಂಬ ಸಿನಿಮಾದಲ್ಲಿ ವಿಜಯ್ ನಟಿಸಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ವಿಜಯ್ ಬಣ್ಣ ಹಚ್ಚಿದ್ದಾರೆ.

  • Bigg Boss Kannada: ದೊಡ್ಮನೆ ಆಟಕ್ಕೆ ಕಾಲಿಡುತ್ತಾರಾ ರಾಜೇಶ್‌ ಧ್ರುವ- ನಟ ಪ್ರತಿಕ್ರಿಯೆ

    Bigg Boss Kannada: ದೊಡ್ಮನೆ ಆಟಕ್ಕೆ ಕಾಲಿಡುತ್ತಾರಾ ರಾಜೇಶ್‌ ಧ್ರುವ- ನಟ ಪ್ರತಿಕ್ರಿಯೆ

    ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಯಾರೆಲ್ಲಾ ಸೆಲೆಬ್ರಿಟಿಗಳು ಈ ಬಾರಿ ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮನೆ ಮಾಡಿದೆ. ಹೀಗಿರುವಾಗ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ದೊಡ್ಮನೆಗೆ ಕಾಲಿಡುವ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ರಾಜೇಶ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಹೋಗುತ್ತಿಲ್ಲ: ನಟಿ ರಂಜನಿ ರಾಘವನ್ ಸ್ಪಷ್ಟನೆ

    ಬಿಗ್ ಬಾಸ್‌ಗೆ ಬರಲಿರುವ ಅಂದಾಜಿಸಲ್ಪಟ್ಟ ಸ್ಪರ್ಧಿಗಳ ಪಟ್ಟಿಯಲ್ಲಿ ನನ್ನ ಹೆಸರು ಚಾಲ್ತಿಯಲ್ಲಿದೆ ಅಂತಾ ತುಂಬಾ ಜನ ವಿಶ್ ತಿಳಿಸುತ್ತಾ ಇದ್ದೀರಿ, ಆದರೆ ನಾನು ಬಿಗ್ ಬಾಸ್‌ ಶೋಗೆ ಹೋಗುತ್ತಿಲ್ಲ. ಅದಕ್ಕೆ ಕಾರಣ ಕಿರುತೆರೆಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಸಕ್ರಿಯ ಆಗಿದ್ದೀನಿ, ಉಳಿದೆಲ್ಲ ಮಾಹಿತಿ ಶೀಘ್ರದಲ್ಲಿ ತಿಳಿಸುವೆ. ನಿಮ್ಮ ಹಾರೈಕೆ- ಪ್ರೀತಿ ಸದಾ ನನ್ನ ಜೊತೆಯಿರಲಿ, ಧನ್ಯೋಸ್ಮಿ ಎಂದು ರಾಜೇಶ್ ಧ್ರುವ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಹೋಗುವ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ.

    ಜನಪ್ರಿಯ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ರಾಜೇಶ್ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು. ಅವರ ಪಾತ್ರ ಪ್ರೇಕ್ಷರ ಗಮನ ಸೆಳೆದಿತ್ತು. ನಾಯಕ ನಟ ಸಿದ್ಧಾರ್ಥ್ ಪಾತ್ರದಷ್ಟೇ ಇವರ ಪಾತ್ರ ಕೂಡ ಹೈಲೆಟ್ ಆಗಿತ್ತು.

    ಸರಯೂ, ಅರಮನೆ ಗಿಳಿ, ಸೇರಿದಂತೆ ಹಲವು ಸೀರಿಯಲ್ ಮತ್ತು ರಿಯಾಲಿಟಿ ಶೋನಲ್ಲಿ ರಾಜೇಶ್ ಕಾಣಿಸಿಕೊಂಡಿದ್ದಾರೆ. ‘ಶ್ರೀ ಬಾಲಾಜಿ ಸ್ಟುಡಿಯೋ’ ಚಿತ್ರದ ಮೂಲಕ ನಟ ಗಮನ ಸೆಳೆದಿದ್ದರು. ಈ ಚಿತ್ರ ಮಲಯಾಳಂ ಭಾಷೆಯಲ್ಲೂ ಡಬ್ ಆಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಗೆ ‘ಅಗ್ನಿಸಾಕ್ಷಿ’ ನಟಿ ಎಂಟ್ರಿ?

    ಬಿಗ್ ಬಾಸ್ ಮನೆಗೆ ‘ಅಗ್ನಿಸಾಕ್ಷಿ’ ನಟಿ ಎಂಟ್ರಿ?

    ನ್ನಡದ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ (Shobha Shetty) ಅವರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ. ಕನ್ನಡತಿ ಶೋಭಾ ಅವರು ತೆಲುಗಿನ ಬಿಗ್ ಬಾಸ್‌ಗೆ (Bigg Boss) ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಸೀರಿಯಲ್‌ನಲ್ಲಿ ಬದುಕು ಆರಂಭಿಸಿದ ನಟಿ, ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

    ಕಿರುತೆರೆಯ ಜನಪ್ರಿಯ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ನಾಯಕಿ ಸನ್ನಿಧಿ ಅಲಿಯಾಸ್‌ ವೈಷ್ಣವಿ ಗೌಡ (Vaishnavi Gowda) ಅವರ ತಂಗಿ ತನು ಪಾತ್ರದಲ್ಲಿ ಶೋಭಾ ಶೆಟ್ಟಿ ಗಮನ ಸೆಳೆದರು. ಕಾರಣಾಂತಗಳಿಂದ ಆ ಸೀರಿಯಲ್ ಅರ್ಧಕ್ಕೆ ಹೊರಬಂದಿದ್ದರು. ಬಳಿಕ ತೆಲುಗಿನಿಂದ ಉತ್ತಮ ಅವಕಾಶ ಸಿಕ್ಕ ಕಾರಣ, ಅಲ್ಲಿಯೇ ಬ್ಯುಸಿಯಾದರು. ಇದನ್ನೂಓದಿ:ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ‘ಜಿಂಕೆ ಮರಿ’ ನಂದಿತಾ ಶ್ವೇತಾ

    ಕನ್ನಡದ ಬಿಗ್ ಬಾಸ್ ಶುರುವಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ನಟ ನಾಗಾರ್ಜುನ (Nagarjuna) ಅವರ ನಿರೂಪಣೆಯ ತೆಲುಗಿನ ಬಿಗ್ ಬಾಸ್‌ಗೆ (Bigg Boss telagu) ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ. ತೆಲುಗಿನ ಬಿಗ್ ಬಾಸ್ ಸೀಸನ್ 7ರಲ್ಲಿ  ಕನ್ನಡದ ನಟಿ ಶೋಭಾ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸೆಪ್ಟೆಂಬರ್ 3ರಿಂದ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಲಿದ್ದು, ಶೋಭಾ ಶೆಟ್ಟಿ (Shobha Shetty)  ಜೊತೆ ಹಲವರ ಹೆಸರು ಕೇಳಿ ಬರುತ್ತಿದೆ. ಈ ಬಾರಿ ಸಿಂಗರ್ಸ್, ಟಿಕ್ ಟಾಕ್ ಸ್ಟಾರ್ಸ್, ಹಿರಿತೆರೆ-ಕಿರುತೆರೆ ನಟ ನಟಿಯರು ಕಾಣಿಸಿಕೊಳ್ಳಲಿದ್ದಾರಂತೆ. ಎಲ್ಲದ್ದಕ್ಕೂ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ತೆಲುಗಿನಲ್ಲಿ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳನ್ನು ಮಾಡುತ್ತಿರುವ ಶೋಭಾ ಶೆಟ್ಟಿ ವರ್ಷಗಳ ಹಿಂದೆ ವಾಹಿನಿವೊಂದರಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು'(Rukku)  ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಕಿರುತೆರೆಯ ಜನಪ್ರಿಯ ಸೀರಿಯಲ್ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ನಟ ಸಂಪತ್ ಜಯರಾಮ್ (Sampath Jayram) ಇತ್ತೀಚಿಗೆ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.  ರಾಜೇಶ್ ಧ್ರುವ (Rajesh Druva) ಅವರು ಸಂಪತ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದರು. ಈ ಬೆನ್ನಲ್ಲೇ ನಟಿ ವೈಷ್ಣವಿ ಗೌಡ (Vaishnavi Gowda) ಕೂಡ ಸಹನಟನ ಬಗ್ಗೆ ಮಾತನಾಡಿದ್ದಾರೆ.

    ‘ಅಗ್ನಿಸಾಕ್ಷಿ’ ಆರು ವರ್ಷಗಳ ಕಾಲ ಟಿವಿ ಪ್ರೇಕ್ಷಕರಿಗೆ ರಂಜಿಸಿತ್ತು. ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಣ್ಣನ (Brother) ಪಾತ್ರದಲ್ಲಿ ಸಂಪತ್ ಜಯರಾಮ್ ನಟಿಸಿದ್ದರು. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸಂಪತ್ ಜಯರಾಮ್ ಸಾವಿನ ಬಗ್ಗೆ ನಟಿ ವೈಷ್ಣವಿ ಮಾತನಾಡಿದ್ದಾರೆ.

    ಸಂಪತ್ ಸೆಟ್‌ನಲ್ಲಿ ಯಾವಾಗಲೂ ನಗುತ್ತಿದ್ದರು ಮತ್ತು ಇತರರನ್ನು ನಗಿಸುತ್ತಿದ್ದರು. ಅವರು ಧಾರಾವಾಹಿಯಲ್ಲಿ ನನ್ನ ಸಹೋದರನ ಪಾತ್ರ ನಿರ್ವಹಿಸಿದ್ದರು. ನಮ್ಮಿಬ್ಬರ ಕಾಂಬಿನೇಷನ್ ದಿನಾಲೂ ಇರುತ್ತಿರಲಿಲ್ಲ. ಆದರೆ, ಇದ್ದಾಗೆಲ್ಲ ಅವರು ಖುಷಿಯಿಂದ ಮಾತನಾಡುತ್ತಿದ್ದರು. ಜೀವನದ ಬಗ್ಗೆ ಅವರು ಎಂದಿಗೂ ದೂರಿಲ್ಲ. ಸೆಟ್‌ನಲ್ಲಿ ಅವರು ಯಾವಾಗಲೂ ಬೇಸರದಲ್ಲಿ ಇದ್ದಿದ್ದನ್ನು ನೋಡಿಲ್ಲ ಎಂದು ವೈಷ್ಣವಿ ಗೌಡ ಹೇಳಿದ್ದಾರೆ. ಇದನ್ನೂ ಓದಿ:ಅಗತ್ಯವಿತ್ತು, ಲಿಪ್ ಲಾಕ್ ಮಾಡಿದೆ : ಅಮಲಾ ಪೌಲ್ ಬೋಲ್ಡ್ ಮಾತು

     

    View this post on Instagram

     

    A post shared by Sampath J Ram (@sampath.jram)

    ‘ಅಗ್ನಿಸಾಕ್ಷಿ’ ಕೊನೆಗೊಂಡಾಗಿನಿಂದ ಸಂಪತ್‌ನ ಭೇಟಿ ಆಗಿರಲಿಲ್ಲ. ಅವರು ನನ್ನನ್ನು ಪಾರ್ಟಿ ಮತ್ತು ಮದುವೆಗೆ ಕರೆದಿದ್ದರು. ಆದರೆ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ಕಾರಣ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಕಾಲ್‌ನಲ್ಲಿ ಮಾತನಾಡಿ ಅವರಿಗೆ ಶುಭಾಶಯ ತಿಳಿಸಿದ್ದೆ. ಸಂಪತ್‌ಗೆ ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ನನಗೆ ತಿಳಿದಿರುವ ಪ್ರಕಾರ ಅವರ ಪತ್ನಿ ಐದು ತಿಂಗಳ ಗರ್ಭಿಣಿ. ಹೀಗಿರುವಾಗ ಅವರಿಗೆ ಯಾವ ವಿಚಾರ ಆತ್ಮಹತ್ಯೆಗೆ ಪ್ರೇರೇಪಿಸಿತೋ ಗೊತ್ತಿಲ್ಲ ಎಂದು ಸಹನಟ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಬಿಗ್‌ ಬಾಸ್‌ ಬಳಿಕ ನಟಿ ವೈಷ್ಣವಿ ಗೌಡ ಅವರು ʻಸೀತಾರಾಮʼ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ನಾಯಕಿಯಾಗಿ ಹೊಸ ಬಗೆಯ ಕಥೆ ಜೊತೆ ಬರುತ್ತಿದ್ದಾರೆ.

  • ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ

    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ

    ಸುಂದರಿ’ (Sundari) ಸೀರಿಯಲ್ ‌ಮೂಲಕ‌ ಕಿರುತೆರೆಗೆ ಲಗ್ಗೆಯಿಟ್ಟ ಚೆಲುವೆ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ‘ಕುರುಡು ಕಾಂಚಣ’ (Kurudu Kanchana) ಸಿನಿಮಾ‌ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    2016 ‘ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಅಮೂಲ್ಯ ಅವರು ಅಪರಂಜಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ ಸೀರಿಯಲ್ ಗಳ ಮೂಲಕ ನಟಿ ಗಮನ ಸೆಳೆದರು. 2016ರ `Princess Karnataka’ ವಿನ್ನರ್ ಕೂಡ ಆಗಿದ್ದಾರೆ. 2020ರಲ್ಲಿ ಶಮಂತ್ ಗೌಡ (Shamanth Gowda) ಜೊತೆ ‘ಮರೆಯಲಾರೆ’ (Mareyalaare) ಎಂಬ ಬ್ರೇಕಪ್ ಸಾಂಗ್ ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ.

    ‘ಒನ್ ವೇ’ ಚಿತ್ರದ‌ ನಟ ಕಿರಣ್‌ ರಾಜ್‌ಗೆ ‘ಕುರುಡು ಕಾಂಚಾಣ’ (Kurudu Kanchana) ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಮೂಲ್ಯ ನಟಿಸಿದ್ದಾರೆ. ಜೆನ್ನಿ ಎನ್ನುವ ಪಾತ್ರಕ್ಕೆ ಅಮೂಲ್ಯ (Amoolya Gowda) ಜೀವತುಂಬಿದ್ದಾರೆ. ನಟನೆಗೆ ಒತ್ತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಪ್ರದೀಪ್ ವರ್ಮಾ ಈ‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ‌ಬರಲಿದೆ. ಇದನ್ನೂ ಓದಿ: Exclusive: ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?

    ‘ಕುರುಡು ಕಾಂಚಾಣ’ ಎಂಬ ಭಿನ್ನ ಕಥೆಯಲ್ಲಿ ನಟಿಸಿರುವ ಅಮೂಲ್ಯ, ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಸದ್ಯದಲ್ಲಿಯೇ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನ ಬರೆದಿಟ್ಟುಕೊಂಡಿರುವ ಅಮೂಲ್ಯ, ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗಿ ಕೂಡ ಬರಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ತಯಾರಿಯನ್ನ ನಡೆಸುತ್ತಿದ್ದಾರೆ.

    ಕಿರುತೆರೆಯಲ್ಲಿ ಅಭಿಮಾನಿಗಳ ಗಮನ‌ ಸೆಳೆದಿರುವ ನಟಿ ಅಮೂಲ್ಯ, ಬೆಳ್ಳಿತೆರೆಯಲ್ಲಿ ಕೂಡ ಬೆಳಗಲಿ ಎಂಬುದೇ ಅಭಿಮಾನಿಗಳ ‌ಆಶಯ.

  • ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ವೃತ್ತಿ ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದವರು ಹೆಚ್ಚು. ಆದರೆ, ಸಿನಿಮಾ ಮತ್ತು ಕಿರುತೆರೆಯಲ್ಲಿ ಪಾಪ್ಯುಲರ್ ಆದವರು ಮತ್ತೆ ವೃತ್ತಿ ರಂಗಭೂಮಿಯತ್ತ ಮುಖವೆತ್ತಿ ಕೂಡ ನೋಡುವುದಿಲ್ಲ. ಆದರೆ, ಅಗ್ನಿಸಾಕ್ಷಿ, ಸತ್ಯ ಸೇರಿದಂತೆ ಹಲವು ಪಾಪ್ಯುಲರ್ ಧಾರಾವಾಹಿಯಲ್ಲಿ ನಟಿಸಿದ ಚಂದ್ರಿಕಾ ಇದೀಗ ವೃತ್ತಿ ರಂಗಭೂಮಿಯತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

    ರಾಣೇಬೆನ್ನೂರು ಮಂಜುನಾಥ ನಾಟ್ಯ ಸಂಘವು ರೋಣ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿರುವ ‘ಖಾನಾವಳಿ ಚೆನ್ನಿ’ ನಾಟಕವು ಜೂನ್ 11 ಮತ್ತು 12 ರಂದು ಎರಡೆರಡು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಇದು ಈ ನಾಟಕದ ಹಾಸ್ಯ ಪಾತ್ರಧಾರಿ ಶ್ರೀದೇವಿ ಅವರ ಮದುವೆ ಸಹಾರ್ಥವಾಗಿ ನಡೆಯಲಿದೆ. ಹಾಗಾಗಿ ಚಂದ್ರಿಕಾ ಪ್ರಮುಖ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ನಾಟಕದ ಕುರಿತು ಮಾತನಾಡಿರುವ ಸಂಘದ ಮಾಲೀಕರಾದ ನಾಗರತ್ನ ಚಿಕ್ಕಮಠ ಮಾತನಾಡಿ, “ಕವಿ ಬಿ.ಆರ್. ಅರಶಿನಗೋಡೆ ಅವರು ಬರೆದಿರುವ ಖಾನಾವಳಿ ಚೆನ್ನಿ ಹೆಸರಾಂತ ಹಾಸ್ಯ ನಾಟಕ. ಈ ನಾಟಕವನ್ನು ರೋಣದಲ್ಲಿ ಆಯೋಜನೆ ಮಾಡಲಾಗಿದೆ. ಖ್ಯಾತ ಧಾರಾವಾಹಿ ಕಲಾವಿದೆ ಚಂದ್ರಿಕಾ ಅವರು ಪ್ರಧಾನ ಪಾತ್ರ ಮಾಡುತ್ತಿದ್ದರೆ, ಜ್ಯೂನಿಯರ್ ಯಶ್ ಕೂಡ ಈ ನಾಟಕದಲ್ಲಿ ಮತ್ತೊಂದು ಪಾತ್ರ ಮಾಡುತ್ತಿದ್ದಾರೆ. ಸಂಘದ ಕಲಾವಿದೆ ಶ್ರೀದೇವಿ ಅವರ ಮದುವೆಗಾಗಿ ಇದನ್ನು ಆಯೋಜನೆ ಮಾಡಲಾಗಿದೆ’ ಎಂದರು.

    ಖಾನಾವಳಿ ಚೆನ್ನಿ ನಾಟಕದಲ್ಲಿ ಹಾಸ್ಯದ ಜೊತೆ ಡಬಲ್ ಮೀನಿಂಗ್ ಡೈಲಾಗ್ ಕೂಡ ಇವೆ. ಚೆನ್ನಿಯ ಪಾತ್ರದ ಸುತ್ತ ಇಡೀ ನಾಟಕ ಕಟ್ಟಲಾಗಿದೆ. ಈಗಾಗಲೇ ಈ ನಾಟಕ ಉತ್ತರ ಕರ್ನಾಟಕದಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ಹೆಸರಾಂತ ಕಲಾವಿದೆಯರು ಈಗಾಗಲೇ ಚೆನ್ನಿ ಪಾತ್ರವನ್ನು ಮಾಡಿದ್ದಾರೆ. ಪ್ರತಿ ಪ್ರಯೋಗವೂ ಯಶಸ್ಸು ಕಂಡಿರುವುದು ನಾಟಕದ ಹೆಗ್ಗಳಿಕೆ ಕೂಡ.

  • ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಬೆಂಗಳೂರು: ನಮ್ಮದು ಸಂಪ್ರದಾಯ ಕುಟುಂಬವಾಗಿದ್ದು, ಶ್ರುತಿ ಹೊರಗಡೆ ಮಾಂಸ ತಿಂದು ಮಾನಸಿಕವಾಗಿ ನನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನಾನು ಯಾವುದೇ ಕಿರುಕುಳ ನೀಡಿಲ್ಲ. ನಾನು ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ನೀಡಲಿ ಎಂದು ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರಧಾರಿಯಾಗಿರುವ ನಟ ರಾಜೇಶ್ ಧ್ರುವ ಅವರು ಶ್ರುತಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಕೊಟ್ಟಿರುವ ದೂರನ್ನು ನಾನು ನಿಮಗೆ ಕಳುಹಿಸುತ್ತೇನೆ. ಅದರಲ್ಲಿ ಯಾರು ಯಾರಿಗೆ ಕಿರುಕುಳ ನೀಡುತ್ತಿದ್ದರು ಅಂತ ಉಲ್ಲೇಖವಾಗಿದೆ. ನಮ್ಮ ತಾಯಿಗೆ ಯಾರಿಂದ ಕಿರುಕುಳ ಆಗುತ್ತಿದೆ ಅಂತ ದೂರಿನಲ್ಲಿದೆ. ಒಟ್ಟು ಮೂರು ದೂರು ದಾಖಲಾಗಿದೆ. ಕಳೆದ ಜುಲೈನಲ್ಲಿ ವಿಚ್ಛೇದನ ಕೋರಿ ಶ್ರುತಿ ಅರ್ಜಿ ಹಾಕಿದ್ದಾರೆ. ಆಗ ಯಾಕೆ ಶ್ರುತಿ ವರದಕ್ಷಿಣೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ವರದಕ್ಷಿಣೆ ಆರೋಪ ಮಾಡುತ್ತಿರೋದು ಅವರು. ಅದಕ್ಕೆ ಸಾಕ್ಷಿ ನೀಡಲು ಹೇಳಿ. ನಿರೀಕ್ಷಣಾ ಜಾಮೀನಿಗಾಗಿ ನಾನು ಓಡಾಡುತ್ತಿದ್ದೆ. ಈಗ ನಿರೀಕ್ಷಣಾ ಜಾಮೀನು ಸಿಕ್ಕಿದೆ. 28ಕ್ಕೆ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಿ ಬರಬೇಕು. ಆಗ ನಾನು ಠಾಣೆಗೆ ಹೋಗ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

    ನಾನು ನಟನಾಗಿರುವುದೇ ಅವರಿಗೆ ಸಮಸ್ಯೆಯಾಗಿದೆ. ಏನೇ ಮಾಡಿದರೂ ನ್ಯೂಸ್ ಚಾನೆಲ್‍ಗೆ ಕೊಡ್ತೀನಿ ಅಂತ ಹೆದರಿಸುತ್ತಿದ್ದರು. ಆದರೆ ಈಗ ಮಾಧ್ಯಮಗಳಿಗೆ ಸುಳ್ಳು ಸುದ್ದಿ ನೀಡಿದ್ದಾರೆ. ನನ್ನ ಪತ್ನಿ ಶ್ರುತಿ ಮಾನಸಿಕವಾಗಿ ತನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನನ್ನ ತಾಯಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ಯುತ್ತಿದ್ದರು. ಅಲ್ಲದೆ ಅವರ ನಡತೆ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೇ ನನ್ನ ಮೇಲೆಯೇ ಶ್ರುತಿ ಅನುಮಾನ ಪಡುತ್ತಿದ್ದರು. ಶೃತಿ ಅವರು ಹೊರಗಡೆ ಮಾಂಸ ತಿಂದು ಬಂದು ಮನೆಯನ್ನೆಲ್ಲಾ ಗಬ್ಬು ವಾಸನೆ ಎಬ್ಬಿಸುತ್ತಿದ್ದರು. ನಮ್ಮ ತಾಯಿ ಮಡಿವಂತಿಕೆಯನ್ನು ನಂಬಿದವರು. ಹೀಗೆಲ್ಲಾ ಮಾಡಿ ಮಾನಸಿಕವಾಗಿ ತಾಯಿಗೆ ಶೃತಿ ಹಿಂಸೆ ನೀಡುತ್ತಿದ್ದರು. ಹೊರಗೆ ತಿಂದು ಸುಮ್ಮನ್ನಿರುತ್ತಿರಲಿಲ್ಲ. ಮನೆಯಲ್ಲಿದ್ದ ಪಾತ್ರೆಗಳನ್ನು ಮುಟ್ಟಿ ಅಶುದ್ಧ ಮಾಡುತ್ತಿದ್ದರು ಎಂದು ರಾಜೇಶ್ ಧ್ರುವ ಆರೋಪಿಸಿದ್ದಾರೆ.

    ರಾಜೇಶ್ ಧ್ರುವ ವಿರುದ್ಧ ಪತ್ನಿಯೇ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾದ ಬಳಿಕ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೇ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ.

    https://www.youtube.com/watch?v=z83AFF9LPEY

    https://www.youtube.com/watch?v=fczBXKZKrN4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv