Tag: Agnisakshi

  • ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ

    ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ

    ‘ಸೀತಾರಾಮ’ ಸೀರಿಯಲ್ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆಯಾಗೋ ಭಾವಿ ಪತಿ ಬಗ್ಗೆ ಓಪನ್ ಆಗಿ ‘ಪಬ್ಲಿಕ್ ಟಿವಿ’ ಜೊತೆ ನಟಿ ಹಂಚಿಕೊಂಡಿದ್ದಾರೆ. ಈ ವೇಳೆ, ಈ ಹಿಂದೆ ಮುರಿದುಬಿದ್ದ ಸಂಬಂಧದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಜೀವನದಲ್ಲಿ ಆಗೋದೆಲ್ಲಾ ಒಳ್ಳೆಯದಕ್ಕೆ ಎಂದು ನಟಿ ವೈಷ್ಣವಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

    ನನ್ನ ಜೀವನದಲ್ಲಿ ಒಂದನ್ನೇ ನಂಬಿರೋದು. ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮ ಜೊತೆ ಇದ್ದಾನೆ. ಅವರು ಯಾವತ್ತೂ ನನ್ನ ಕೈಬಿಡೋದಿಲ್ಲ. ಅದನ್ನು ಅಷ್ಟೇ ನಂಬಿದ್ದೀನಿ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯದು ಆಗುತ್ತದೆ ಎಂದಿದ್ದಾರೆ. ಈ ಹಿಂದೆ ನಟ ವಿದ್ಯಾಭರಣ (Vidyabharan) ಜೊತೆ ಮುರಿದುಬಿದ್ದ ಮದುವೆ ವಿಚಾರಕ್ಕೆ ನಟಿ ಕ್ಲ್ಯಾರಿಟಿ ನೀಡಿದ್ದಾರೆ. ಕಹಿ ಘಟನೆ ಮರೆತು ಈಗ ಅನುಕೂಲ್ ಜೊತೆ ಹೊಸ ಅದ್ಯಾಯಕ್ಕೆ ಮುನ್ನುಡಿ ಬರೆಯಲು ವೈಷ್ಣವಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

    ಕಳೆದ ಸೋಮವಾರವಷ್ಟೇ ಏರ್‌ಫೋರ್ಸ್ ಲೆಫ್ಟಿನೆಂಟ್ ಆಗಿರುವ ಛತ್ತೀಸ್‌ಗಢ ಮೂಲದ ಅನುಕೂಲ್ (Anukool Mishra) ಜೊತೆ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಅನುಕೂಲ್ ಪರಿಚಯವಿದೆ. ಇದು ಲವ್ ಮ್ಯಾರೇಜ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಅರೇಂಜ್ ಮ್ಯಾರೇಜ್. ಇದು ಹಿರಿಯರು ನೋಡಿ ನಿಶ್ಚಯಿಸಿದ ಮದುವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮ್ಯಾಟ್ರಿಮೋನಿ ಮೂಲಕ ಜಾತಕ ಶೇರ್ ಆದ ಬಳಿಕ ಅಪ್ಪ ಅಮ್ಮ ಈ ಮದುವೆ ನಿಶ್ಚಯಿಸಿದ್ದಾರೆ. ನಾವಿಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು 1 ವರ್ಷ ಸಮಯ ತೆಗೆದುಕೊಂಡಿದ್ದೆವು. ಮದುವೆ ತಯಾರಿ ನಡೀತಿದೆ. ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದರು.

    ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ. ನನಗೆ ಯಾವ ಥರದ ಹುಡುಗ ಬೇಕಿತ್ತು ಎಂದು. ಅನುಕೂಲ್ ಅವರು ಏರ್‌ಫೋರ್ಸ್‌ನಲ್ಲಿ ಇರೋದ್ರಿಂದ ಎತ್ತರವಾಗಿದ್ದಾರೆ. ಹೈಟ್ ಮ್ಯಾಚ್ ಆಗದೇ ಇದ್ದರೂ ಹಾರ್ಟ್ ಮ್ಯಾಚ್ ಆಗಿದೆ ಎನ್ನುತ್ತಾ ಭಾವಿ ಪತಿ ನೆನೆದು ವೈಷ್ಣವಿ ನಾಚಿನೀರಾಗಿದ್ದಾರೆ.

  • ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shoba Shetty) ಇದೀಗ ಭಾವಿ ಪತಿ ಯಶ್‌ವಂತ್ ಹುಟ್ಟುಹಬ್ಬಕ್ಕೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಗೆಳೆಯನ ಬರ್ತ್‌ಡೇ ಅದ್ಧೂರಿಯಾಗಿ ನಟಿ ಸೆಲೆಬ್ರೇಟ್ ಮಾಡಿದ್ದಾರೆ.

    ಇದೀಗ ಭಾವಿ ಪತಿಗೆ ಬೀಸ್ಟ್ ಎಕ್ಸ್‌ಯುವಿ 700 ಕಾರ್ ಅನ್ನು ಈ ವರ್ಷ ಯಶ್‌ವಂತ್‌ಗೆ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಕೊಟ್ಟಿದ್ದಾರೆ. ಅಂದಹಾಗೆ, ಮಾರುಕಟ್ಟೆಯಲ್ಲಿ ಈ ಕಾರಿಗೆ 15ರಿಂದ 20 ಲಕ್ಷ ರೂ. ಇದೆ. ಸದ್ಯ ಶೋಭಾ ಕೊಟ್ಟಿರುವ ಲವ್ಲಿ ಗಿಫ್ಟ್ ನೋಡಿ ಯಶ್‌ವಂತ್ ಕೂಡ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಲಾಯರ್ ಆಗಿ ಶಿವಣ್ಣ ಖಡಕ್ ಎಂಟ್ರಿ- ಮೇಕಿಂಗ್ ವಿಡಿಯೋ ಚಿಂದಿ ಎಂದ ಫ್ಯಾನ್ಸ್

    ಇತ್ತೀಚೆಗೆ ನಟಿ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳ ಮುಂದೆ ‘ಗೌರಿ’ ಸಾಂಗ್ ಸಖತ್ ಟ್ರೆಂಡಿಂಗ್

    ಕಳೆದ ತಿಂಗಳು ಅದ್ಧೂರಿಯಾಗಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಸದ್ಯದಲ್ಲೇ ‘ಬಿಗ್‌ ಬಾಸ್‌’ (Bigg Boss) ಖ್ಯಾತಿಯ ಶೋಭಾ ಮತ್ತು ಯಶ್‌ವಂತ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  • ಬಹುಕಾಲದ ಗೆಳೆಯನ ಜೊತೆ ಶೋಭಾ ಶೆಟ್ಟಿ ನಿಶ್ಚಿತಾರ್ಥ- ಮದುವೆ ಡೇಟ್‌ ಫಿಕ್ಸ್

    ಬಹುಕಾಲದ ಗೆಳೆಯನ ಜೊತೆ ಶೋಭಾ ಶೆಟ್ಟಿ ನಿಶ್ಚಿತಾರ್ಥ- ಮದುವೆ ಡೇಟ್‌ ಫಿಕ್ಸ್

    ನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ (Yashwanth Reddy) ಜೊತೆ ಶೋಭಾ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಅವರು ‘ಬಿಗ್ ಬಾಸ್ ಸೀಸನ್ 7’ ತೆಲುಗಿನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ದೊಡ್ಮನೆ ವೇದಿಕೆಯಲ್ಲಿ ಶೋಭಾ ಅವರ ಬಾಯ್‌ಫ್ರೆಂಡ್ ಯಾರು ಎಂಬುದು ರಿವೀಲ್ ಆಗಿತ್ತು. ಯಶವಂತ್ ಎಂಗೇಜ್ ಆಗಿರುವ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದರು.

    ಜನವರಿ 20ರಂದು ಶೋಭಾ ಅವರ ಹುಟ್ಟುಹಬ್ಬದಂದು ಯಶವಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ತಾಂಬೂಲ ಬದಲಿಸಿದ್ದು, ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ. ಸದ್ಯದಲ್ಲೇ ಮದುವೆ ಎಂದು ಹೇಳಲಾಗುತ್ತಿದೆ.

    ಕನ್ನಡದ ಹುಡುಗಿಗೆ ಸದ್ಯ ತೆಲುಗಿನಲ್ಲಿ ಭಾರೀ ಬೇಡಿಕೆ ಇದೆ. ‘ಬಿಗ್ ಬಾಸ್’ ನಂತರ ತೆಲುಗು ಸಿನಿಮಾ ಮತ್ತು ಕನ್ನಡ ಸಿನಿಮಾರಂಗದಿಂದ ಕೂಡ ಆಫರ್‌ಗಳು ಅರಸಿ ಬರುತ್ತಿದೆ.

  • Bigg Boss ವೇದಿಕೆಯಲ್ಲಿ ಬಾಳ ಸಂಗಾತಿಯ ಬಗ್ಗೆ ರಿವೀಲ್‌ ಮಾಡಿದ ‘ಅಗ್ನಿಸಾಕ್ಷಿ’ ನಟಿ

    Bigg Boss ವೇದಿಕೆಯಲ್ಲಿ ಬಾಳ ಸಂಗಾತಿಯ ಬಗ್ಗೆ ರಿವೀಲ್‌ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ತೆಲುಗಿನ ಬಿಗ್ ಬಾಸ್ ಸೀಸನ್ 7ರಲ್ಲಿ ಸಮರ್ಥ ಸ್ಪರ್ಧಿಯಾಗಿ ಮಿಂಚ್ತಿದ್ದಾರೆ. ಇದೀಗ ‘ಬಿಗ್ ಬಾಸ್’ (Bigg Boss) ವೇದಿಕೆಯಲ್ಲಿ ಪ್ರೀತಿಸಿದ ಹುಡುಗನ ಬಗ್ಗೆ ಶೋಭಾ ಬಾಯ್ಬಿಟ್ಟಿದ್ದಾರೆ.

    ವಾರಾಂತ್ಯದ ನಾಗಾರ್ಜುನ ಅಕ್ಕಿನೇನಿ ಅವರ ಪಂಚಾಯತಿಯಲ್ಲಿ ಶೋಭಾ ಶೆಟ್ಟಿ ತಾವು ಎಂಗೇಜ್ ಆಗಿರುವ ಹುಡುಗನ ಬಗ್ಗೆ ರಿವೀಲ್ ಮಾಡಿದ್ದಾರೆ. ಯಶವಂತ್ ರೆಡ್ಡಿ ಜೊತೆ ಕಳೆದ ಮೂರುವರೆ ವರ್ಷಗಳಿಂದ ಪ್ರೀತಿಸುತ್ತಿರೋದಾಗ ನಾಗಾರ್ಜುನ ಬಳಿ ಹೇಳಿಕೊಂಡಿದ್ದಾರೆ.

    ಶೋಭಾ ತಂದೆ ಮತ್ತು ಬಾಯ್‌ಫ್ರೆಂಡ್ ಯಶವಂತ್ ಕೂಡ ಎಂಟ್ರಿ ಕೊಟ್ಟು ಶೋಭಾಗೆ ಅಚ್ಚರಿ ಮೂಡಿಸಿದ್ದಾರೆ. ಇಬ್ಬರನ್ನೂ ನೋಡ್ತಿದ್ದಂತೆ ನಟಿ ಭಾವುಕರಾಗಿದ್ದಾರೆ. ಬಳಿಕ ಯಶವಂತ್‌ಗೆ ಮೊದಲು ಪ್ರಪೋಸ್ ಮಾಡಿದ್ದೇ ನಾನು ಎಂದು ಶೋಭಾ ಹೇಳಿದ್ದಾರೆ. ನಿರೂಪಕ ನಾಗಾರ್ಜುನ ಕೂಡ ಹೊಸ ಜೋಡಿಗೆ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:‘ಟೈಗರ್ 3’ ಸಿನಿಮಾದ ಫಸ್ಟ್ ಡೇ ಕಲೆಕ್ಷನ್: ದಾಖಲೆ ಪುಡಿಪುಡಿ

    ಯಶವಂತ್ (Yashwanth) ಜೊತೆ ‘ಬುಜ್ಜಿ ಬಂಗಾರಮ್’ ಎಂಬ ಪ್ರಾಜೆಕ್ಟ್‌ನಲ್ಲಿ ಶೋಭಾ ಶೆಟ್ಟಿ ಜೊತೆಯಾಗಿ ನಟಿಸಿದ್ದರು. ಇದೀಗ ಮೂರುವರೆ ವರ್ಷದ ನಂತರ ಮೊದಲ ಬಾರಿಗೆ ಬಿಗ್ ಬಾಸ್ ಶೋನಲ್ಲಿ ಲವ್ ಬಗ್ಗೆ ರಿವೀಲ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಶುಭಹಾರೈಸಿದ್ದಾರೆ.

    ತೆಲುಗು ಬಿಗ್ ಬಾಸ್‌ನಲ್ಲಿ(Bigg Boss Telagu 7) ಖಡಕ್ ಸ್ಪರ್ಧಿಯಾಗಿರೋ ಶೋಭಾ ಆಟ ನೋಡಿ ನಮ್ಮ ಕನ್ನಡದ ಹುಡುಗಿ ಕನ್ನಡದ ‘ಬಿಗ್ ಬಾಸ್‌’ನಲ್ಲಿರಬೇಕಿತ್ತು ಎಂದು ಸಖತ್ ಟ್ರೋಲ್ ಕೂಡ ಮಾಡಿದ್ದಾರೆ.

  • Bigg Boss: ಕನ್ನಡದ ನಟಿ ಶೋಭಾ ಶೆಟ್ಟಿ ಆಟಕ್ಕೆ ದಂಗಾದ ದೊಡ್ಮನೆ ಸ್ಪರ್ಧಿಗಳು

    Bigg Boss: ಕನ್ನಡದ ನಟಿ ಶೋಭಾ ಶೆಟ್ಟಿ ಆಟಕ್ಕೆ ದಂಗಾದ ದೊಡ್ಮನೆ ಸ್ಪರ್ಧಿಗಳು

    ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದಾರೆ. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಬ್ಲೌಸ್ ಧರಿಸದೇ ಸೀರೆಯುಟ್ಟ ನಿಹಾರಿಕಾ

    ತೆಲುಗು ಬಿಗ್ ಬಾಸ್ ಸೀಸನ್-7 ಇದೀಗ 60 ದಿನಗಳನ್ನ ಪೂರೈಸಿದೆ. ಬೆಂಗಳೂರಿನ ಬೆಡಗಿ ಶೋಭಾ, ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡ್ತಿದ್ದಾರೆ. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದಾರೆ. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ ಬಿಗ್ ಬಾಸ್ ಶೋನಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಖತ್‌ ಟ್ರೋಲ್‌ (Troll) ಕೂಡ ಆಗ್ತಿದೆ.

    ಎದುರಾಳಿಯ ಮಾತಿಗೆ ಕೌಂಟರ್ ಕೊಡೋ ಶೋಭಾ ಆಟಕ್ಕೆ ನೋಡಿ‌, ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಕನ್ನಡದ ಶೋನಲ್ಲಿ ಶೋಭಾ ಇಲ್ಲ ಅಂತ ಬೇಸರ ಮಾಡಿಕೊಳ್ಳಬೇಡಿ. ಕನ್ನಡದಲ್ಲಿ ಸಂಗೀತಾ- ತನಿಷಾ ಮಾಸ್ ಆಗಿ ಆಟ ಆಡ್ತಿದ್ದಾರೆ. ಶೋಭಾರಂತಯೇ ಇಲ್ಲಿಯೂ ಕೂಡ ಠಕ್ಕರ್ ಕೊಡುವವರು ಇದ್ದಾರೆ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.

    ಒಟ್ನಲ್ಲಿ ಕನ್ನಡದ ‘ಬಿಗ್ ಬಾಸ್’ ಜೊತೆ ಪರಭಾಷೆಯ ಬಿಗ್ ಬಾಸ್ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಅಗ್ನಿಸಾಕ್ಷಿ’ ನಟಿಯ ಬೋಲ್ಡ್ ಫೋಟೋಗೆ ಫೈರ್ ಇಂಜಿನ್ ಎಂದ ನೆಟ್ಟಿಗರು

    ‘ಅಗ್ನಿಸಾಕ್ಷಿ’ ನಟಿಯ ಬೋಲ್ಡ್ ಫೋಟೋಗೆ ಫೈರ್ ಇಂಜಿನ್ ಎಂದ ನೆಟ್ಟಿಗರು

    ಕಿರುತೆರೆಯ ಜನಪ್ರಿಯ ಸೀರಿಯಲ್ ‘ಅಗ್ನಿಸಾಕ್ಷಿ’ (Agnisakshi) ಮೂಲಕ ಗಮನ ಸೆಳೆದ ಇಶಿತಾ ವರ್ಷ (Ishitha Varsha) ಇದೀಗ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

    ಅಗ್ನಿಸಾಕ್ಷಿ, ‘ರಾಜ ರಾಣಿ’ (Raja Rani) ಶೋ ಮೂಲಕ ಮೋಡಿ ಮಾಡಿರುವ ಚೆಲುವೆ ಇಶಿತಾ ವರ್ಷ, ಸಖತ್ ಗ್ಲ್ಯಾಮರಸ್‌ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮಾಡ್ರನ್ ಉಡುಗೆಯಲ್ಲಿ ಮಸ್ತ್ ಆಗಿ ನಟಿ ಪೋಸ್ ನೀಡಿದ್ದಾರೆ. ಇಶಿತಾ ಲುಕ್‌ಗೆ ಫೈರ್ ಇಂಜಿನ್‌ಗೆ ಫೋನ್ ಮಾಡಿ ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ. ಇದನ್ನೂ ಓದಿ:ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ- ಪೂಜಾ ಗಾಂಧಿ

    ಕೊರಿಯೋಗ್ರಾಫರ್ ಮುರುಗಾನಂದ ಜೊತೆ ಇಶಿತಾ ವರ್ಷ ಪ್ರೀತಿಸಿ ಮದುವೆಯಾದರು. ಇದೀಗ ಇಬ್ಬರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮತ್ತು ಸೌತ್‌ನಲ್ಲಿ ಸಾಕಷ್ಟು ದೊಡ್ಡ ಕಲಾವಿದರ ಚಿತ್ರಕ್ಕೆ ಮುರುಗಾನಂದ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಗ್ ಬಾಸ್ (Bigg Boss Kannada) ಮನೆ ಸ್ಪರ್ಧಿಗಳ ಸಾಲಿನಲ್ಲಿ ಇಶಿತಾ ವರ್ಷ ಕೂಡ ಹೋಗಲಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗು ಬಿಗ್ ಬಾಸ್‌ಗೆ ಕನ್ನಡದ ‘ಅಗ್ನಿಸಾಕ್ಷಿ’ ನಟಿ

    ತೆಲುಗು ಬಿಗ್ ಬಾಸ್‌ಗೆ ಕನ್ನಡದ ‘ಅಗ್ನಿಸಾಕ್ಷಿ’ ನಟಿ

    ನ್ನಡದ ಅಗ್ನಿಸಾಕ್ಷಿ, ರುಕ್ಕು ಸೀರಿಯಲ್‌ನಲ್ಲಿ ನಟಿಸಿದ ಶೋಭಾ ಶೆಟ್ಟಿ (Shobha Shetty) ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ (Bigg Boss House) ಕಾಲಿಟ್ಟಿದ್ದಾರೆ. ತೆಲುಗು ಸೀರಿಯಲ್‌ಗಳ ಮೂಲಕ ಗುರುತಿಸಿಕೊಂಡಿದ್ದ ನಟಿ, ಈಗ ನಾಗಾರ್ಜುನ (Nagarjuna) ನಿರೂಪಣೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಮಾರ್ಟಿನ್’ ಧ್ರುವ ಜೊತೆ ಸೊಂಟ ಬಳುಕಿಸಿದ ಜಾರ್ಜಿಯಾ ಆಂಡ್ರಿಯಾನಿ

    ತೆಲುಗಿನಲ್ಲಿ ದೊಡ್ಮನೆ ಆಟ ಆರಂಭವಾಗಿದೆ. ಬಿಗ್ ಬಾಸ್ ಸೀಸನ್ 7ಗೆ (Bigg Boss Telugu 7) ಭಾನುವಾರ (ಸೆ.3) ಚಾಲನೆ ಸಿಕ್ಕಿದೆ. ಶಕೀಲಾ, ಕಿರಣ್ ರಾಥೋಡ್ ಇರುವ ಈ ಸೀಸನ್‌ನಲ್ಲಿ ಕನ್ನಡದ ಯುವ ನಟಿ ಶೋಭಾ ಶೆಟ್ಟಿ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ದೊಡ್ಮನೆಗೆ ಗ್ಲ್ಯಾಮರ್ ತುಂಬಲು ಶೋಭಾ ಕೂಡ ಸಾಥ್ ನೀಡಿದ್ದಾರೆ.

    ಈ ಶೋ ಶುರುವಾಗುವ ಮುನ್ನವೇ ಶೋಭಾ ಶೆಟ್ಟಿ ಮನೆಗೆ ಹೋಗುತ್ತಾರೆ ಎಂಬ ಅಂತೆ ಕಂತೆ ಸುದ್ದಿಯಿತ್ತು. ಈಗ ಸ್ಪಷ್ಟನೆ ಸಿಕ್ಕಿದೆ. ತೆಲುಗು ಪ್ರೇಕ್ಷಕರನ್ನ ಕನ್ನಡದ ನಟಿ ಗೆದ್ದು ಬೀಗಲಿ ಎಂಬುದೇ ಕನ್ನಡ ಸಿನಿ ಪ್ರೇಮಿಗಳ ಆಶಯ.

    ಅಗ್ನಿಸಾಕ್ಷಿ (Agnisakshi) ಸೀರಿಯಲ್‌ನಲ್ಲಿ ನಾಯಕಿ ವೈಷ್ಣವಿ ಗೌಡ (Vaishnavi Gowda) ಅಲಿಯಾಸ್ ಸನ್ನಿಧಿ ಸಹೋದರಿ ತನು ಪಾತ್ರದಲ್ಲಿ ಶೋಭಾ ಶೆಟ್ಟಿ ನಟಿಸಿದ್ದರು. ತೆಲುಗು ಕಿರುತೆರೆಯಲ್ಲಿ ನಟಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೆಕೇಷನ್ ಮೂಡ್‌ನಲ್ಲಿ ಅಮೂಲ್ಯ ಫ್ಯಾಮಿಲಿ- ಗೋಲ್ಡನ್‌ ಕ್ವೀನ್‌ ಜೊತೆ ವೈಷ್ಣವಿ

    ವೆಕೇಷನ್ ಮೂಡ್‌ನಲ್ಲಿ ಅಮೂಲ್ಯ ಫ್ಯಾಮಿಲಿ- ಗೋಲ್ಡನ್‌ ಕ್ವೀನ್‌ ಜೊತೆ ವೈಷ್ಣವಿ

    ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಬ್ಯೂಟಿ ಅಮೂಲ್ಯ (Amulya) ಅವರು ವೆಕೇಷನ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಮಲೆನಾಡು ಚಿಕ್ಕಮಗಳೂರಿನಲ್ಲಿ ಅಮೂಲ್ಯ ಕುಟುಂಬ ತೆರಳಿದ್ದು, ಪತಿ ಮತ್ತು ಮಕ್ಕಳ ಜೊತೆಗಿನ ಸುಂದರ ಫೋಟೋವನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಎಲ್ಲವೂ ಗಾಸಿಪ್ : ಐಶ್ವರ್ಯ 2ನೇ ಮದುವೆ, ಅಪ್ಪನೊಂದಿಗೆ ಮುನಿಸು

    ‘ಚೆಲುವಿನ ಚಿತ್ತಾರ’ (Chevina Chittara) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ಅಮೂಲ್ಯ ಅವರು ಮಳೆ, ಗಜಕೇಸರಿ, ರಾಮ್ ಲೀಲಾ, ಕೃಷ್ಣ ರುಕ್ಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅಮೂಲ್ಯಗೆ ಡಿಮ್ಯಾಂಡ್ ಇರುವಾಗಲೇ ಜಗದೀಶ್ ಅವರನ್ನು ನಟಿ ಮದುವೆಯಾದರು. ಈಗ ಇಬ್ಬರು ಅವಳಿ ಮಕ್ಕಳ ಆರೈಕೆಯಲ್ಲಿ ನಟಿ ಬ್ಯುಸಿಯಿದ್ದಾರೆ.

    ಇತ್ತೀಚಿಗೆ ನಟಿ ಅಮೂಲ್ಯ ಫ್ಯಾಮಿಲಿ ಮತ್ತು ತನ್ನ ಬೆಸ್ಟ್ ಫ್ರೆಂಡ್ ಜೊತೆ ಚಿಕ್ಕಮಗಳೂರಿಗೆ ಹೋಗಿ ಬಂದಿದ್ದಾರೆ. ಸುಂದರ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ. ಚಿಕ್ಕಮಗಳೂರಿನ ಬ್ಯೂಟಿಫುಲ್ ಜಾಗವೊಂದರಲ್ಲಿ ಅಮ್ಮು ಫ್ಯಾಮಿಲಿ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಪತಿ ಜಗದೀಶ್ ಮತ್ತು ಮಕ್ಕಳು ಜೊತೆಗಿದ್ದು, ‘ಸೀತಾರಾಮ’ (Seetharama) ನಟಿ ವೈಷ್ಣವಿ ಗೌಡ (Vaishnavi Gowda) ಕೂಡ ಅಮೂಲ್ಯ ಜೊತೆ ಫೋಟೋ ಪೋಸ್ ಕೊಟ್ಟಿದ್ದಾರೆ.

    ಅಮೂಲ್ಯ ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ರೆ, ವೈಷ್ಣವಿ ಲೈಟ್ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ‘ಸೀತಾರಾಮ’ ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ. ಅಮೂಲ್ಯ ಕಮ್‌ಬ್ಯಾಕ್ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ತಂದೆ ಖುಷಿಯಲ್ಲಿ ‘ಅಗ್ನಿಸಾಕ್ಷಿ’ ವಿಜಯ್‌ ಸೂರ್ಯ

    ಮತ್ತೆ ತಂದೆ ಖುಷಿಯಲ್ಲಿ ‘ಅಗ್ನಿಸಾಕ್ಷಿ’ ವಿಜಯ್‌ ಸೂರ್ಯ

    ಕಿರುತೆರೆಯ ಚಾಕ್‌ಲೇಟ್ ಹೀರೋ ವಿಜಯ್ ಸೂರ್ಯ (Vijay Suriya) ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಗ್ನಿಸಾಕ್ಷಿ (Agnisakshi) , ನಮ್ಮ ಲಚ್ಚಿ ಸೀರಿಯಲ್ ಹೀರೋ ವಿಜಯ್ ಸೂರ್ಯ ಅವರು ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಪತ್ನಿ ಚೈತ್ರಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

    ಕ್ಷ್ಮಿ ಬಾರಮ್ಮ, ಅಗ್ನಿಸಾಕ್ಷಿ, ಖ್ಯಾತಿ ವಿಜಯ್ ಸೂರ್ಯ ಸದ್ಯ ‘ನಮ್ಮ ಲಚ್ಚಿ’ (Namma Lacchi) ಮತ್ತು ತೆಲುಗಿನ ‘ಕೃಷ್ಣಮ್ಮ ಕಲ್ಪಿಂಡಿ’ ಸೀರಿಯಲ್‌ನಲ್ಲಿ ಹೀರೋ ಆಗಿ ಮಿಂಚ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಅಂತಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.‌ ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು

    ವಿಜಯ್ ಸೂರ್ಯ- ಚೈತ್ರಾ ಶೀನಿವಾಸ್ (Chaithra Srinivas) ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮ್ಮನ ಆಸೆಯಂತೆ ಸಾಫ್ಟ್‌ವೇರ್ ಇಂಜಿನಿಯರ್ ಚೈತ್ರಾ ಅವರನ್ನ ವಿಜಯ್ ಮದುವೆಯಾದರು. 2020ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು. ಈಗ ಜೂನ್ 2ರಂದು ಎರಡನೇ ಗಂಡು ಮಗುವನ್ನ ಬರಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಜೂನ್‌ನಲ್ಲಿ ಎರಡನೇ ಮಗುವಿನ ಆಗಮನವಾಗಿದೆ.

    ಮೊದಲ ಮಗನಿಗೆ ಸೋಹೆನ್ (Sohan) ಎಂದು ಹೆಸರಿಟ್ಟಿದ್ದರೆ, ಎರಡನೇ ಪುತ್ರನಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದಾರೆ. ಒಟ್ನಲ್ಲಿ ಮುದ್ದು ಮಗನ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಎರಡನೇ ಮಗು ಹುಟ್ಟಿದ ಸಂದರ್ಭದಲ್ಲಿ ವಿಜಯ್, ಹೈದರಾಬಾದ್ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರು. ಈಗ ಬೆಂಗಳೂರಿಗೆ ವಾಪಾಸ್ ಆಗಿದ್ದು, ಮೊದಲ ಮಗನ ಜೊತೆಗಿದ್ದಾರೆ. ಪತ್ನಿ ಚೈತ್ರಾ ಎರಡನೇ ಕೂಸು ಕಾರ್ತಿಕೇಯ ಜೊತೆ ತವರು ಮನೆಯಲ್ಲಿದ್ದಾರೆ.

    ವಿಜಯ್ ಸೂರ್ಯ ಅವರು ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯ ಸೀರಿಯಲ್‌ನಲ್ಲೂ ಆಕ್ಟೀವ್ ಆಗಿದ್ದಾರೆ. ಈಗಾಗಲೇ ಕ್ರೇಜಿ ಲೋಕ, ಇಷ್ಟಕಾಮ್ಯ, ಸಾ, ಕದ್ದುಮುಚ್ಚಿ, ಗಾಳಿಪಟ 2 ಸಿನಿಮಾಗಳಲ್ಲಿ ಹೀರೋ ವಿಜಯ್ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ

    ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ

    ಗ್ನಿಸಾಕ್ಷಿ, ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ (Vaishnavi gOwda) ಅವರು ಇದೀಗ ಅರ್ಧಕ್ಕೆ ನಿಂತು ಹೋದ ಮದುವೆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

    ಕಿರುತೆರೆಯ ಹೆಸರಾಂತ ನಟಿ ವೈಷ್ಣವಿ ಸದ್ಯ ‘ಸೀತಾರಾಮ’ (Seetharama) ಸೀರಿಯಲ್‌ಗೆ ನಾಯಕಿಯಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮುರಿದ ಮದುವೆ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿದ್ಯಾಶಂಕರ್ (VidyaShankar) ಜೊತೆ ಕುಟುಂಬದ ಮುಂದೆ ನಟಿ ಹಾರ ಬದಲಿಸಿಕೊಂಡಿದ್ದರು. ಈ ಕುರಿತ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    ಈ ಘಟನೆ ನಡೆದು 8 ತಿಂಗಳ ಬಳಿಕ ನಟಿ ವೈಷ್ಣವಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಆದರೆ ಆ ಮೇಲೆ ನಡೆದಿದ್ದೆಲ್ಲ ನಾವು ನಿರೀಕ್ಷೆಯೇ ಮಾಡಿರಲಿಲ್ಲ. ಕೆಲ ದಿನಗಳ ಕಾಲ ಕ್ಯಾಮೆರಾಗಳು ನಮ್ಮ ಮನೆ ಮುಂದೆ ಇರುತ್ತಿದ್ದದ್ದು ಇಂದು ಕೂಡ ನನಗೆ ನೆನಪಿದೆ. ಅಂದಿನ ಆ ಸಮಯ ಕುಟುಂಬಕ್ಕೆ ತುಂಬ ಕಷ್ಟವಾಗಿತ್ತು ಎಂದು ನಟಿ ವೈಷ್ಣವಿ ಹೇಳಿದ್ದಾರೆ. ಇದನ್ನೂ ಓದಿ:ಕತಾರ್ ಕನ್ನಡಿಗರನ್ನು ರಂಜಿಸಿದ ‘ಚೌಕಬಾರ’ ಸಿನಿಮಾ

    ನಾನು ಸಾರ್ವಜನಿಕ ಜೀವನದಲ್ಲಿ ಬದುಕುತ್ತಿದ್ದೇನೆ. ಎಲ್ಲರ ಕಣ್ಣು ನನ್ನ ಮೇಲಿರುತ್ತದೆ. ಇದನ್ನು ನನ್ನ ಕುಟುಂಬ ಎದುರಿಸಬೇಕಿತ್ತು. ಆ ಸಮಯದಲ್ಲಿ ನಾನು ನಿಸ್ಸಹಾಯಕಳಾಗಿದ್ದೆ. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ ಎಂದು ಪಾಸಿಟಿವ್ ಆಗಿ ನಟಿ ವೈಷ್ಣವಿ ಮಾತನಾಡಿದ್ದಾರೆ.