Tag: Agni Sridhar

  • ‘ಹೆಡ್‌ ಬುಷ್’ ವಿವಾದ : ವಿವಾದಿತ ದೃಶ್ಯದ ಕತ್ತರಿಗೆ ಪಂಚವಾದ್ಯದ ಬಿಸಿ

    ‘ಹೆಡ್‌ ಬುಷ್’ ವಿವಾದ : ವಿವಾದಿತ ದೃಶ್ಯದ ಕತ್ತರಿಗೆ ಪಂಚವಾದ್ಯದ ಬಿಸಿ

    ತುಮಕೂರು : ನಟ ಡಾಲಿ‌ ಧನಂಜಯ (Dolly Dhananjay) ನಟನೆಯ ಹೆಡ್‌ ಬುಷ್ (Head Bush) ಚಿತ್ರದಲ್ಲಿನ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವಂತೆ ಆಗ್ರಹಿಸಿ ಪಂಚವಾದ್ಯದ ವಿನೂತನ ಪ್ರತಿಭಟನೆ (Protest) ತುಮಕೂರಿನಲ್ಲಿ ನಡೆಸಲಾಯಿತು. ತುಮಕೂರು ನಗರದ ಮಾರುತಿ ಚಿತ್ರ ಮಂದಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಲ್ಲದೆ ನಿರ್ದೇಶಕ, ಕತೆ, ಸಂಭಾಷಣೆಗಾರ ಅಗ್ನಿ ಶ್ರೀಧರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

    ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ವತಿಯಿಂದ ನಡೆಸಲಾದ ಪ್ರತಿಭಟನೆಯ ನೇತೃತ್ವವನ್ನು ಶ್ರೀ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸರಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚವಾದ್ಯವನ್ನು ನುಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನ ಸೆಳೆಯಲಾಯಿತು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಬಿತ್ತರಿಸುವಂತಹ ಕಲೆಗೆ ಬಹಳಷ್ಟು ನೋವುಂಟು ಮಾಡಿದೆ. ಚಲನಚಿತ್ರದಲ್ಲಿನ ವಿವಾದಿತ ದೃಶ್ಯವನ್ನು ಕಟ್ ಮಾಡಿ ಜನರಿಗೆ ಒಳ್ಳೆಯ ಸಂದೇಶ ಸಾರುವಂತಾಗಬೇಕು ಎಂದು ಮನವಿ ಮಾಡಿದರು. ಭಾರತೀಯ ಸಂಸ್ಕೃತಿಯ ಕಲೆಗಳನ್ನು ಉಳಿಸುವಂತಹ ಬಹಳಷ್ಟು ಕಲೆಗಳಿವೆ. ಅಂತಹ ಕಲೆಗಳನ್ನು ಹೆಡ್‌ಬುಷ್ ಮಾತ್ರವಲ್ಲ ಯಾವುದೇ ಚಲನಚಿತ್ರಗಳು ನಮ್ಮ ಸಂಸ್ಕೃತಿಗಳನ್ನು ತುಳಿಯುವಂತಹ, ಅವಮಾನ ಮಾಡುವಂತಹ ಕೆಲಸ ಮಾಡಬಾರದು ಎಂದರು.

    ನಮ್ಮ ಸಂಸ್ಕೃತಿನ ನಾವೇ ಉಳಿಸಲಿಲ್ಲ ಅಂದರೆ ಇನ್ಯಾರು ಉಳಿಸಿಯಾರು. ಮುಂದಿನ ದಿನಗಳಲ್ಲಿ ಆ ರೀತಿ ಆಗದಂತೆ ಕಾಪಾಡಬೇಕು ಎಂದು ಸ್ವಾಮೀಜಿ ಎಲ್ಲರಲ್ಲಿ ಪ್ರಾರ್ಥನೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

    ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

    ಕೋಟಿ ಕೋಟಿ ಬಂಡವಾಳ ಸುರಿದು ‘ಹೆಡ್ ಬುಷ್’ ಸಿನಿಮಾ ಮಾಡಿದ್ದಾರೆ ಡಾಲಿ ಧನಂಜಯ್. ಅವರೇ ಮುಖ್ಯ ಪಾತ್ರದಲ್ಲಿ ನಟಿಸಿ, ಹೆಸರಾಂತ ತಾರಾ ಬಳಗವನ್ನೇ ಹಾಕಿಕೊಂಡು ಹೊಸ ರೀತಿಯ ಚಿತ್ರ ಮಾಡಲಾಗಿದೆ. ಆದರೆ, ಏಕಾಏಕಿ ಸಿನಿಮಾದ ಕುರಿತು ಅಪಸ್ವರ ಎದ್ದಿದ್ದು, ಸಿನಿಮಾದ ಶೂಟಿಂಗ್ ಮುಗಿದ ಹೊತ್ತಿನಲ್ಲಿ ಈ ವಿವಾದ ಶುರುವಾಗಿದ್ದರಿಂದ ಧನಂಜಯ್ ಅವರಿಗೆ ಇದೊಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೇ ಆಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅಗ್ನಿ ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ಧನಂಜಯ್ ಬೆಂಗಳೂರು ಭೂಗತ ಜಗತ್ತಿನ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ತಂಡವೇ ಈ ಹಿಂದೆ ಹೇಳಿಕೊಂಡಿದೆ. ಹಾಗಾಗಿ ಜಯರಾಜ್ ಪುತ್ರ ಅಜಿತ್ ಈ ಸಿನಿಮಾದ ಬಗ್ಗೆ ಅಪಸ್ವರ ತಗೆದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ನನ್ನ ತಂದೆಯ ಕುರಿತು ಸಿನಿಮಾ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಸಿನಿಮಾ ತಂಡವನ್ನು ಸಂಪರ್ಕಿಸಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ನನ್ನ ತಂದೆಯ ಕುರಿತಾಗಿ ಯಾರೂ ಸಿನಿಮಾ ಮಾಡಬಾರದು. ಮಾಡಿರುವ ಸಿನಿಮಾವನ್ನು ರಿಲೀಸ್ ಮಾಡಕೂಡದು ಎಂದು ಅಜಿತ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ನೀಡಿದ್ದಾರೆ. ಅಲ್ಲದೇ, ಈ ಕುರಿತಾಗಿ ಕಾನೂನು ಹೋರಾಟವನ್ನೂ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

    ಅಸಲಿ ವಿಷಯ ಹೇಳುವುದಾದರೆ, ಧನಂಜಯ್ ಮತ್ತು ಅಜಿತ್ ಇಬ್ಬರೂ ಆತ್ಮೀಯರು. ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅವರು ಸ್ವತಃ ಅಜಿತ್ ಮದುವೆಗೂ ಹೋಗಿದ್ದರು. ಹೆಡ್ ಬುಷ್ ಸಿನಿಮಾ ಆಗುವ ಸಂದರ್ಭದಲ್ಲಿ ಅಜಿತ್ ಚಿತ್ರಕ್ಕೆ ಶುಭ ಹಾರೈಸಿದ್ದರು. ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ್ದೇವೆ. ರಿಲೀಸ್ ಹೊತ್ತಿನಲ್ಲಿ ತೊಂದರೆ ಮಾಡುವುದು ಸರಿಯಲ್ಲ. ಅವರ ತಂದೆಯವರನ್ನು ನಾನು ಕೆಟ್ಟದಾಗಿ ಬಿಂಬಿಸಿಲ್ಲ. ಸಿನಿಮಾ ನೋಡಿದ ನಂತರ ಅವರು ಮಾತನಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಅಗ್ನಿ ಶ್ರೀಧರ್ ಅವರು ಬರೆದ ಪುಸ್ತಕದ ಹಕ್ಕನ್ನು ಪಡೆದು ಸಿನಿಮಾ ಮಾಡಲಾಗಿದೆ’ ಎನ್ನುತ್ತಾರೆ. ಹೆಡ್ ಬುಷ್ ಸಿನಿಮಾ ಮಾಡುವಾಗಲೇ ಕಥೆ, ಪಾತ್ರದ ಬಗ್ಗೆ ಸಿನಿಮಾ ತಂಡ ಹೇಳಿಕೊಂಡಿದೆ. ಪಾತ್ರಗಳ ಪರಿಚಯದ ಪೋಸ್ಟರ್ ರಿಲೀಸ್ ಮಾಡುವಾಗಲೇ ಪಾತ್ರದ ಬಗ್ಗೆ ಪರಿಚಯಿಸಿದೆ. ಇದೀಗ ಸಿನಿಮಾ ಮುಗಿದ ಮೇಲೆ ಏಕಾಏಕಿ ಸಿನಿಮಾ ನಿಲ್ಲಿಸಬೇಕು ಎನ್ನುವುದು ಎಷ್ಟು ಸರಿ ಎನ್ನುತ್ತಿದೆ ಹೆಡ್ ಬುಷ್ ತಂಡ.